ಬೆಂಗಳೂರು: ಎಸ್‌ಡಿಪಿಐ ಹುಟ್ಟುಹಾಕಿದ್ದು ಮುಸ್ಲಿಮರೇ ಇರಬಹುದು. ಆದರೆ ಎಸ್‌ಡಿಪಿಐಯಲ್ಲಿ (SDPI) ಹಿಂದೂಗಳು ಅನೇಕರಿದ್ದಾರೆ. ನಾನು ಒಬ್ಬ ಹಿಂದೂ ಆಗಿದ್ದು, ಎಸ್‌ಡಿಪಿಐ ಅನ್ನು ಮುಸ್ಲಿಂ ಪಕ್ಷವೆಂದು ಯಾಕೆ ಕರೆಯುತ್ತಿರಿ ಎಂದು ಎಸ್‌ಡಿಪಿಐ ಮುಖಂಡ ದೇವನೂರು ಪುಟ್ಟನಂಜಯ್ಯ ಪ್ರಶ್ನಿಸಿದರು.
ಪಿಎಫ್‌ಐ ಕಾರ್ಯಕರ್ತರನ್ನ ಬಂಧಿಸಿರೋದನ್ನ ಖಂಡಿಸಿ ಬೆಂಗಳೂರಿನ (Bengaluru) ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್‌ಡಿಪಿಐ ಹುಟ್ಟುಹಾಕಿದ್ದು ಮುಸ್ಲಿಮರೇ ಇರಬಹುದು. ಆದರೆ ನಾವೆಲ್ಲ ಹಿಂದೂಗಳೇ, ನಾನು ನಿವೃತ್ತ ಡಿಡಿಪಿಐ. ಎಸ್‌ಡಿಪಿಐನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಾನು ಬೇಕಾದರೆ ರಾಜ್ಯಾಧ್ಯಕ್ಷ ಆಗಬಹುದು ಎಂದರು.
ಇಂದು ಬ್ರಾಹ್ಮಣವಾದಿಗಳು, ಮನುವಾದಿಗಳು ಸಂವಿಧಾನ ಕಟ್ಟಿ ಹಾಕಿದ್ದಾರೆ. ಎಸ್‌ಡಿಪಿಐ, ಪಿಎಫ್‌ಐ ಧರ್ಮದ ಬಗ್ಗೆ ಎಲ್ಲೂ ಮಾತನಾಡಿಲ್ಲ. ರಾಷ್ಟ್ರದ ಬಗ್ಗೆ ಎಸ್‌ಡಿಪಿಐ ಧ್ವನಿ ಎತ್ತುತ್ತಿದೆ. ದೇಶ ಇವತ್ತು ಗಂಡಾಂತರದಲ್ಲಿದೆ. ಕೊರೊನಾ ಬಂದಾಗ ಹೆಣಗಳನ್ನು ಯಾರು ಮುಟ್ಟಲಿಲ್ಲ. ಆದರೆ ಎಸ್‌ಡಿಪಿಐ ಹೆಣ ಎತ್ತುವ ಕೆಲಸ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ದೇಶದ ಬಹುದೊಡ್ಡ ಭಯೋತ್ಪಾದಕ ಸಂಘಟನೆ RSS : ಭಾಸ್ಕರ್ ಪ್ರಸಾದ್
ದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದಾವೆ. ಆದರೆ ಮೋದಿ (Narendra Modi) ಈ ಬಗ್ಗೆ ಒಂದೇ ಒಂದು ಪ್ರೆಸ್‌ಮೀಟ್ ಮಾಡಿಲ್ಲ. ಬಿಜೆಪಿಯವರು (BJP) ಹಿಂದೂ ರಾಷ್ಟ್ರ ಮಾಡುತ್ತಿಲ್ಲ. ಬದಲಿಗೆ ಬ್ರಾಹ್ಮಣ್ಯ ರಾಷ್ಟ್ರ ಮಾಡುತ್ತಿದ್ದಾರೆ. ಹಿಂದೂ ಅಂತ ಯುವಕರನ್ನು ಎತ್ತುಕಟ್ಟುತ್ತಾರೆ. ಆಯುಧ ಕೊಟ್ಟು ಕಳುಹಿಸುತ್ತಿದ್ದಾರೆ. ಅಡ್ವಾಣಿ ರಥ ಯಾತ್ರೆ ಮಾಡಿ, ಸಾವಿರಾರು ಜನ ಕೊಂದರು ಎಂದು ಕಿಡಿಕಾರಿದ ಅವರು, ಮನೆಯಲ್ಲಿ ಅವರ ಧರ್ಮ ಆಚರಿಸೋಣ. ಎಲ್ಲರ ಮನಸ್ಸು ಒಂದಾಗುವಂತೆ ಮಾಡೋಣ ಎಂದು ಮನವಿ ಮಾಡಿದರು. ಇದನ್ನೂ ಓದಿ: ಪಾಕ್ ಸೇನಾ ಹೆಲಿಕಾಪ್ಟರ್ ಪತನ – 6 ಸೈನಿಕರು ದುರ್ಮರಣ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ದೇಶದ ಬಹುದೊಡ್ಡ ಭಯೋತ್ಪಾದಕ ಸಂಘಟನೆ ಆರ್‌ಎಸ್‌ಎಸ್ (RSS) ಆಗಿದೆ. ಆದರೆ ಎಸ್‌ಡಿಪಿಐ (SDPI) ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಎಸ್‌ಡಿಪಿಐಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪಿಎಫ್‌ಐ (PFI) ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರಿನ (Bengaluru) ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಆರ್‌ಎಸ್‌ಎಸ್ ಒಂದು ಭಯೋತ್ಪಾದಕ ಸಂಘಟನೆಯಾಗಿದೆ. ಆರ್‌ಎಸ್‌ಎಸ್ ಇನ್ನೂ ಅಧಿಕೃತ ಸಂಘಟನೆ ಆಗಿಲ್ಲ. ಅದರ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಇಟ್ಟಿದ್ದಾರೆ. ಆರ್‌ಎಸ್‌ಎಸ್ ನಾಯಕರು ಹಲವಾರು ಆಯುಧ ಇಟ್ಟಿದ್ದಾರೆ. ಬಡವರ ಮಕ್ಕಳ ಕೈಗೆ ಆಯುಧ ಕೊಟ್ಟಿದ್ದಾರೆ. ಎಸ್‌ಡಿಪಿಐ ಒಂದೇ ಒಂದು ದೇಶ ವಿರೋಧಿ ಕೆಲಸ ಮಾಡಿಲ್ಲ. ಆದರೂ ಎನ್‌ಐಎ ಅಧಿಕಾರಿಗಳು ಕಚೇರಿ ಬೀಗ ಒಡೆದು ದಾಳಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಾಕ್ ಸೇನಾ ಹೆಲಿಕಾಪ್ಟರ್ ಪತನ – 6 ಸೈನಿಕರು ದುರ್ಮರಣ
ಎಸ್‌ಡಿಪಿಐ 98% ಪ್ರಕರಣಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. ಆರ್‌ಎಸ್‌ಎಸ್ ಬಾಂಬ್ ಸ್ಫೋಟದ ಕೆಲಸ ಮಾಡಿದೆ. ಹಲವು ಪ್ರಕರಣಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಇದ್ದರು. ಆರ್‌ಎಸ್‌ಎಸ್ ಮಲೆಗಾಂವ್ ಸ್ಫೋಟ ಸೇರಿದಂತೆ ಹಲವು ಸ್ಫೋಟ ಮಾಡಿದೆ ಎಂದ ಅವರು, ಎಸ್‌ಡಿಪಿಐ ರಿಜಿಸ್ಟರ್ ಸಂಸ್ಥೆಯಾಗಿದ್ದು, ಆರ್‌ಎಸ್‌ಎಸ್ ಇನ್ನೂ ರಿಜಿಸ್ಟರ್ ಸಂಸ್ಥೆ ಆಗಿಲ್ಲ. ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ವಿರೋಧಿಗಳನ್ನು ಹಣಿಯುತ್ತಿದೆ. ಬಿಜೆಪಿಗೆ ಕಾಂಗ್ರೆಸ್ ಕೂಡ ಸಪೋರ್ಟ್ ಮಾಡುತ್ತಿದೆ. ಎಸ್‌ಡಿಪಿಐ ಬ್ಯಾನ್ ಮಾಡುವಂತೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಆದರೆ ಎಸ್‌ಡಿಪಿಐ ಮನುವಾದಿ ಭಾರತ ತಡೆಯುವ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ:ಮೋದಿ ಹೋದ ಕಡೆಯಲ್ಲಿ ಬಿಜೆಪಿ ಸೋತಿದೆ: ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಶಂಕಿತ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರ (Bengaluru Police) ತನಿಖೆ ವೇಳೆ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದ್ದು, ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬಂಧಿತ ಎಲ್ಲರ ಮೊಬೈಲ್‌ನಲ್ಲೂ (Mobile) ತಾವೇ ಸಿದ್ಧಪಡಿಸಿದ ಐ-ರೀಡರ್ ಆಪ್ (Eye Reader App) ಪತ್ತೆಯಾಗಿದೆ.
ಹೌದು, ಎನ್‌ಐಎ (NIA) ಮತ್ತು ಬೆಂಗಳೂರು ಪೊಲೀಸರು (Bengaluru Police) ವಿವಿಧ ಅಯಾಮಗಳಲ್ಲಿ ತನಿಖೆ (Investigation) ಮುಂದುವರಿಸಿದ್ದಾರೆ. ಇದರಲ್ಲಿ ಬೆಂಗಳೂರು ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಲಭ್ಯವಾಗಿದೆ. ದಾಳಿ ವೇಳೆ ಬಂಧಿತ ಹದಿನೈದು ಜನರ ಮೊಬೈಲ್ ನಲ್ಲಿ ಐ-ರೀಡರ್ ಆಪ್ ಇರುವುದು ಪತ್ತೆಯಾಗಿದೆ. ಇದ್ಯಾವುದು ಹೊಸ ಆಪ್ ಅಂತಾ ಚೆಕ್ ಮಾಡಿದ ಪೊಲೀಸರಿಗೆ ಆಶ್ವರ್ಯ ಕಾದಿತ್ತು. ಅದೇನಂತರೆ ಈ ಅಪ್ ಪ್ಲೇ-ಸ್ಟೋರ್ ನಲ್ಲಿ ಸಿಗಲ್ಲ. ಬದಲಾಗಿ ವಿದ್ವಂಸಕ ಕೃತ್ಯವೆಸಗಲು ಶಂಕಿತ ವ್ಯಕ್ತಿಗಳೇ ಇಂಥದ್ದೊAದು ಹೊಸ ಆಪ್ ಸೃಷ್ಟಿ ಮಾಡಿಕೊಂಡಿದ್ದಾರೆ. ಅದನ್ನು ಎಲ್ಲರೂ ತಮ್ಮ ತಮ್ಮ ಮೊಬೈಲ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆ ಮೂಲಕ ಪೊಲೀಸರಿಗೆ ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ.
ಹೇಗೆ ಕೆಲಸ ಮಾಡುತ್ತೆ EYE ರೀಡರ್ (Eye Reader): ಉಗ್ರಚಟುವಟಿಗಳ ಬಳಕೆಗಾಗಿ ಆಗಂತುಕರು ಈ ಐ ರೀಡರ್ ಅಂತಾ ಆಪ್‌ಗಳನ್ನು ತಾವೇ ತಯಾರು ಮಾಡಿಕೊಂಡಿದ್ದಾರೆ. ಈ ಆಪ್‌ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಾಗಲೇ ಮೊಬೈಲ್‌ನ (Moblie) ಇತರೆ ಆಪ್‌ಗಳಿಗೆ ಆಕ್ಸೆಸ್ ಕೇಳುತ್ತೆ. ಗ್ಯಾಲರಿ, ಕಂಟ್ಯಾಕ್ಟ್ ಲಿಸ್ಟ್, ಮೆಸೇಜ್‌ಗಳು, ದಾಖಲೆಗಳು, ಕಾಲ್ ಲಿಸ್ಟ್ ಸೇರಿದಂತೆ ಬಹುತೇಕ ಎಲ್ಲದನ್ನು ಈ ಆಪ್ ಆಕ್ಸೆಸ್ ಕೇಳುತ್ತೆ. ಒಂದು ಸಾರಿ ಎಲ್ಲಕ್ಕೂ ಆಕ್ಸೆಸ್ ಕೊಟ್ಟು ಇನ್ಸ್ಟಾಲ್ ಮಾಡಿಕೊಂಡಿದ್ರೆ ಮುಗೀತು. ಪೊಲೀಸರು ದಾಳಿ ಸೂಚನೆ ಸಿಕ್ಕ ತಕ್ಷಣ ಈ ಆಪ್‌ಗೆ ಹೋಗಿ ಸ್ಟಾರ್ಟ್ ಅನ್ನೋ ಬಟನ್ ಒತ್ತಿದ್ರೆ ಸಾಕು, ಇಡೀ ಮೊಬೈಲ್ ನಲ್ಲಿ ಸಣ್ಣ ಸಾಕ್ಷ್ಯವೂ ಸಿಗದಂತೆ ಸಂಪೂರ್ಣವಾಗಿ ಡಿಲೀಟ್ ಮಾಡಿಬಿಡುತ್ತೆ. ಪೊಲೀಸರು ಎಷ್ಟೇ ಪ್ರಯತ್ನಿಸಿದ್ರು ಡಿಲೀಟ್ ಆಗಿರೋ ಮಾಹಿತಿ ರಿಟ್ರಿವ್ ಮಾಡಲು ಸಾಧ್ಯವಾಗೋದಿಲ್ವಂತೆ.
ಸದ್ಯ ಮೊಬೈಲ್‌ಗಳು, ಲ್ಯಾಪ್ ಟಾಪ್‌ಗಳು (Mobile, Laptop) ಸೇರಿದಂತೆ ಎಲ್ಲವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದ ಗಮನಕ್ಕೆ ತಂದು ರಿಟ್ರೀವ್ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಾಯಚೂರು: ಪಿಎಫ್‌ಐ (PFI), ಎಸ್‌ಡಿಪಿಐ (SDPI) ಹಾಗೂ ಭಜರಂಗದಳ (Bajrang Dal) ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಯುವ (Youth Congress) ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ಒತ್ತಾಯಿಸಿದ್ದಾರೆ.
ಭಾರತ್ ಜೋಡೊ (Bharat Jodo) ಯಾತ್ರೆ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ರಾಯಚೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ನಾವು ಮೊದಲಿನಿಂದಲೂ ಈ ಸಂಘಟನೆಗಳನ್ನ ಬ್ಯಾನ್ ಮಾಡಿ ಅಂತಲೇ ಹೇಳುತ್ತಿದ್ದೇವೆ. ಅಷ್ಟೇ ಅಲ್ಲ ಕೋಮು ಸೌಹಾರ್ದ ಕೆಡಿಸುವ ಯಾವುದೇ ಸಂಘಟನೆಯನ್ನಾಗಲಿ ಬ್ಯಾನ್ ಮಾಡಲೇಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಭಯೋತ್ಪಾದನೆಗೆ (Terrorism) ನಿರುದ್ಯೋಗವೇ (Unemployment) ಕಾರಣ ಅಂತ ನಾನು ಹೇಳಿಲ್ಲ, ಆದರೆ ನನ್ನ ಹೇಳಿಕೆಯನ್ನ ತಿರುಚಲಾಗಿದೆ. ನಾನು ಹೇಳಿದ್ದರ ಉದ್ದೇಶ ಬೇರೆಯಿತ್ತು, ಕೆಲಸ ಇಲ್ಲದಿರೋದಕ್ಕೆ ಯುವಕರು ದಾರಿ ತಪ್ಪುತ್ತಿದ್ದಾರೆ. ಕೆಲವರ ಬೌದ್ಧಿಕ ಮಟ್ಟ ಹಾಗೇ ಇರುತ್ತದೆ. ಅಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ಕೊಡಿ, ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಪರ್ಸೆಂಟೇಜ್ ವಿಚಾರ ನಾವು ಹೇಳಿರೋದಲ್ಲ:
ಗುತ್ತಿಗೆದಾರ ಸಂತೋಷ್ ಪಾಟೀಲ್ ಜೀವ ಕಳೆದುಕೊಂಡಿದ್ದಾನೆ. ಪಿಎಸ್‌ಐ (PSI) ಹಗರಣ ಮಾಡಿದ್ದು ನಾವಾ? `ಪೇ-ಸಿಎಂ’ (Pay CM) ಪೋಸ್ಟರ್ ಹಾಕಿದ್ದಕ್ಕೆ ನಮ್ಮನ್ನ ಅರೆಸ್ಟ್ ಮಾಡ್ತಾರೆ. ರಾತ್ರಿ 1 ಗಂಟೆ ಸಮಯದಲ್ಲಿ ಕಚೇರಿ ಮೇಲೆ ರೇಡ್ ಮಾಡ್ತಾರೆ. ಆರೋಪ ಸುಳ್ಳು ಅನ್ನೋದಾದ್ರೆ ನೀವೆಕೆ ಟೆನ್ಷನ್ ತೆಗೆದುಕೊಳ್ತೀರಿ? ಜನರೇ ಸರಿ ತಪ್ಪು ತೀರ್ಮಾನ ಮಾಡುತ್ತಾರೆ. ಆರೋಪ ಸತ್ಯ ಆಗಿರೋದಕ್ಕೆ ನೀವು ಹೀಗೆ ಮಾಡುತ್ತಿದ್ದೀರಿ ಎಂದು ಕುಟುಕಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕರ್ನಾಟಕ (Karnataka) ಸೇರಿದಂತೆ ದೇಶಾದ್ಯಂತ 15 ರಾಜ್ಯಗಳಲ್ಲಿ ಬೆಳ್ಳಂಬೆಳಿಗ್ಗೆಯಿಂದಲೇ 93 ಕಡೆ ಎನ್‌ಐಎ (NIA), ಇಡಿ ದಾಳಿ ನಡೆಸಿದ್ದು, ರಾಜ್ಯದ ಪೊಲೀಸರ (Karnataka Police) ನೆರವಿನೊಂದಿಗೆ ಪಿಎಫ್‌ಐ (PFI) ಹಾಗೂ ಎಸ್‌ಡಿಪಿಐ (SDPI) ಸಂಘಟನೆಯ 110ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದೆ.
ಹೇಗಿತ್ತು ಆಪರೇಷನ್?
ಬರೋಬ್ಬರಿ 200ಕ್ಕೂ ಹೆಚ್ಚು ಪೊಲೀಸ್ (Police) ಅಧಿಕಾರಿಗಳ ಪಡೆ ಆರ್.ಟಿ.ನಗರದ ಭೀಮಣ್ಣ ಗಾರ್ಡನ್ 4ನೇ ಕ್ರಾಸ್‌ನಲ್ಲಿ ಸುತ್ತುವರಿದಿತ್ತು. ಶಂಕಿತ ಉಗ್ರ ಯಾಸಿರ್ ಗಾಢ ನಿದ್ರೆಯಲ್ಲಿದ್ದಾಗ ಮನೆಗೆ ನುಗ್ಗಿದ ಎನ್‌ಐಎ ಟೀಂ ಸತತ 2 ಗಂಟೆ ಕಾರ್ಯಚರಣೆ ನಡೆಸಿ ಮುಂಜಾನೆ 3 ಗಂಟೆ ವೇಳೆಗೆ ಶಂಕಿತ ಯಾಸಿರ್‌ನನ್ನು ಬಂಧಿಸಿದೆ. ಇದನ್ನೂ ಓದಿ: ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ
ಬೆಂಗಳೂರಿನಲ್ಲಿ ಅಡಗಿದ್ದ ಶಂಕಿತ ಉಗ್ರ 5 ವರ್ಷಗಳಿಂದ ಕೋಟಿ ಕೋಟಿ ಅವ್ಯವಹಾರ ನಡೆಸುತ್ತಿದ್ದ. ಹಣ (Money) ಪಡೆದು ಐಸಿಸ್‌ಗೆ ಯುವಕರನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ರವಾನೆ ಮಾಡ್ತಿದ್ದ. ಕಳೆದ 5 ವರ್ಷಗಳಿಂದ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ವಿದೇಶದಿಂದ ಸಾಕಷ್ಟು ಹಣ ಈತನ ಖಾತೆಗೆ ಜಮೆಯಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಯಾಸಿರ್ ಮೇಲಿನ ಆರೋಪಗಳೇನು?
ವಿದೇಶಗಳಿಂದ ಪಿಎಫ್‌ಐ ಸಂಘಟನೆಗೆ ಹಣ,
ಈ ಹಣ ಬಳಸಿಕೊಂಡು ಯುವಕರನ್ನು ಪಿಎಫ್‌ಐಗೆ ಆಕರ್ಷಣೆ
ಕರ್ನಾಟಕ, ಕೇರಳ, ತಮಿಳುನಾಡು, ದೆಹಲಿಯಲ್ಲಿ ಉಗ್ರ ದಾಳಿಗೆ ಸಂಚು
ಐಸಿಸ್ ರೀತಿಯಲ್ಲಿ ಯುವಕರಿಗೆ ಟ್ರೈನಿಂಗ್
ಟ್ರೈನಿಂಗ್ ಪಡೆದ ಬಳಿಕ ಯುವಕರನ್ನು ದಾಳಿಗೆ ಬಿಡೋ ಉದ್ದೇಶ
ಆಯುಧಗಳ ಮೂಲಕ ಸಾರ್ವಜನಿಕರ ಮೇಲೆ ದಾಳಿ ಟಾರ್ಗೆಟ್
ಗುಂಪು ಮಾಡಿಕೊಂಡು ಕೋಮುದಳ್ಳುರಿಗೆ ಪ್ಲ್ಯಾನ್
ಸಾಮಾಜಿಕ ಜಾಲತಾಣದ ಮೂಲಕ ಕೋಮು ದ್ವೇಷಕ್ಕೆ ಕುಮ್ಮಕ್ಕು
Live Tv
[brid partner=56869869 player=32851 video=960834 autoplay=true]
ಧಾರವಾಡ: ಕಳೆದ ಹಲವಾರು ವರ್ಷದಿಂದ ಎಸ್‌ಡಿಪಿಐ (SDPI) ಹಾಗೂ ಪಿಎಫ್‌ಐ (PFI) ಬ್ಯಾನ್ ಮಾಡಬೇಕು ಎಂದು ಆಗ್ರಹ ಮಾಡುತ್ತಿದ್ದೇವೆ. ಸಾಕಷ್ಟು ಗಲಭೆ ಹಾಗೂ ಕೊಲೆಗಳಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಎರಡೂ ಸಂಸ್ಥೆಗಳು ಭಾಗಿಯಾಗಿರುವ ಸಾಕ್ಷಿ ಸಿಕ್ಕಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದರು.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈಗಲೂ ಇವರನ್ನು ಬ್ಯಾನ್ ಮಾಡಲು ಮೀನಾಮೇಷ ಎಣಿಸುತ್ತಿವೆ. ಈಗ ಪಿಎಫ್‌ಐ ಪ್ರಮುಖರ ಮೇಲೆ ದಾಳಿ ನಡೆದಿವೆ. 8 ಜಿಲ್ಲೆಯ ಕಚೇರಿ ಮೇಲೆ ದಾಳಿ ನಡೆದಿವೆ. ಕೆಲವು ದಾಖಲೆ ಹಣ ಸಿಕ್ಕಿದೆ ಎಂದು ಸುದ್ದಿಯಾಗಿದೆ. ಇವರದು ಹಿಜಬ್‌ನಲ್ಲಿಯೂ ಕೈವಾಡ ಇದೆ ಎಂದು ಹೇಳಿದರು.
ಪ್ರವೀಣ್ ನೆಟ್ಟಾರು ಹಾಗೂ ಹರ್ಷನ ಕೊಲೆಯಲ್ಲಿ ಇವರು ಭಾಗಿಯಾಗಿದ್ದಾರೆ. ಇವರ ಸಂಘಟನೆ ಉಲ್ಲೇಖ ಎಫ್‌ಐಆರ್‌ನಲ್ಲಿದೆ. ಇವರನ್ನು ಯಾಕೆ ಬ್ಯಾನ್ ಮಾಡಿಲ್ಲ? ಈ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.
ಬಿಹಾರದಲ್ಲಿ ಸಿಕ್ಕಿಕೊಂಡವರು ಮುಸ್ಲಿಂ ರಾಷ್ಟ್ರ ಮಾಡಲು ಹೊರಟವರು. ಶಾಹಿನ್ ಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಟಿಗಟ್ಟಲೆ ಹಣ ಕೊಟ್ಟವರು ಇವರೇ! ಸಮಾಜ ಕಂಟಕ ನಡೆಸಿದವರ ಬ್ಯಾನ್ ಯಾಕೆ ಮಾಡ್ತಿಲ್ಲ? ನಾವು ಮುಂದಿನ ತಿಂಗಳು ಇವರ ಬಗ್ಗೆ ದಾಖಲೆ ಸಹಿತ ಬಹಿರಂಗ ಗೊಳಿಸಿ ಆಂದೋಲನ ಮಾಡುತ್ತೇವೆ. ಪಿಎಫ್‌ಐ, ಎಸ್‌ಡಿಪಿಐ ದೇಶದ್ರೋಹ ಚಟುವಟಿಕೆಗಳನ್ನು ಮಾಡಿದ್ದು ನಿಶ್ಚಿತ ಎಂದರು.
ಇವರು ಹುಬ್ಬಳ್ಳಿಯಲ್ಲಿ ರಾಜ್ಯಾಧ್ಯಕ್ಷರ ಜೊತೆ ಸಭೆ ಮಾಡಿದ್ದಾರೆ. ಎಲ್ಲಾ ಕಡೆ ಚಟುವಟಿಕೆ ನಡೆದಿವೆ. ಅವರಿಗೆ ಯಾವುದೇ ಭಯ ಇಲ್ಲ, ಸೊಕ್ಕಿನವರು, ಇವತ್ತು ಜೈಲಿಗೆ ಹೋಗ್ತಾರೆ. ನಾಳೆ ಮತ್ತೆ ಬೇಲ್ ಸಿಗುತ್ತೆ. ಇವರು ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಮಾಡಿದ್ದಾರೆ. ಇವರಿಗೆ ಸಂವಿಧಾನ ಬದ್ಧತೆ ಇಲ್ಲ. ಷರಿಯಾ ಆಧಾರದ ಮೇಲೆ ಇವರು ಹೊರಟವರು. ಇವರಿಗೆ ಮಟ್ಟ ಹಾಕಬೇಕು. ಈಗ ನಮ್ಮ ಆಂದೋಲನ ಆರಂಭ ಮಾಡ್ತೆವೆ ಎಂದರು. ಇದನ್ನೂ ಓದಿ: NIA ದಾಳಿಗೆ ಹೆದರಿ ಪರಾರಿ – ಹೊರ ಜಿಲ್ಲೆಯ PFI ನಾಯಕನಿಗೆ ಉಡುಪಿಯಲ್ಲಿ ಹುಡುಕಾಟ
ಪ್ಯಾರಾ ಮಿಲಿಟರಿ ತರಹ ಇವರದು ಸಮಾಂತರ ಪಡೆ ತಯಾರು ಮಾಡುತ್ತಿದ್ದಾರೆ. ಕೇರಳ ಮೂಲಕ ಆರಂಭವಾದ ಈ ದೇಶ ದ್ರೋಹ ಕ್ಯಾನ್ಸರ್ ಇಡಿ ದೇಶದಲ್ಲಿ ಹರಡಿದೆ. 23 ರಾಜ್ಯಗಳಲ್ಲಿ 2 ಸಂಘಟನೆ ಕೆಲಸ ಮಾಡುತ್ತಿವೆ. ಸಿಎಎ ಯಿಂದ ಹಿಡಿದು ಅಜಾನ್ ವರೆಗೆ ಇವರು ಪ್ರಚೋದನೆ ಕೊಟ್ಟಿದ್ದಾರೆ. ಎಲ್ಲರೂ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ. ಮುಸ್ಲಿಂ ಲೀಗ್ ಹಾಗೂ ಮುಸ್ಲಿಂ ಸಮಾಜದವರು ಬ್ಯಾನ್ ಮಾಡಿ ಎಂದಿದ್ದಾರೆ ಎಂದು ತಿಳಿಸಿದರು.
ಕೇರಳ ಸಿಎಂ, ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ಬ್ಯಾನ್ ಮಾಡಲು ಹೇಳಿದೆ, ಸರ್ಕಾರದಲ್ಲಿ ಇಲ್ಲದ ಸಮಯದಲ್ಲಿ ಬಿಜೆಪಿ ಕೂಡಾ ಬ್ಯಾನ್ ಮಾಡಲು ಹೇಳಿತ್ತು. ಈಗ ನಿಮ್ಮ ಸರ್ಕಾರ ಇರುವ ಸಮಯದಲ್ಲಿ ಬ್ಯಾನ್ ಮಾಡದೇ ರೇಡ್ ಮಾಡುವುದು, ಸೀಜ್ ಮಾಡುವುದು ನಡೆದಿದೆ. ಇದು ಸಂಶಯ ತರುವಂತೆ ಮಾಡಿದೆ ಎಂದು ಕಿಡಿಕಾರಿದರು.
ಸರ್ಕಾರ ಇವರನ್ನು ಬ್ಯಾನ್ ಮಾಡಲು ಮೀನಾಮೇಷ ಎಣಿಸುತ್ತಿದೆ. ಯಾಕೆ ತಡ ಮಾಡುತ್ತಿದೆ ಎನ್ನುವುದು ಯಕ್ಷ ಪ್ರಶ್ನೆ. ಎಸ್‌ಡಿಪಿಐ ಮೂಲಕ ಕಾಂಗ್ರೆಸ್ ಒಟ್ ಬ್ಯಾಂಕ್ ಒಡೆದು ಬಿಜೆಪಿ ಲಾಭಕ್ಕಾಗಿ ಸಾಕುತ್ತಿದೆ. ಇದು ಬಹಿರಂಗ ಸತ್ಯ. ಎಲ್ಲರೂ ಇದನ್ನೇ ಮಾತನಾಡುತ್ತಿದ್ದಾರೆ. ಬಿಜೆಪಿಯ ಬಿ ಟೀಮ್ ಇದು ಎಂದು ಹೇಳಿದ್ರೂ ಬಿಜೆಪಿಗೆ ಅರ್ಥ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಪರೆಡ್ಡಿ ಪಾಳ್ಯದಲ್ಲಿ 5 ಅಂತಸ್ತಿನ ಮನೆ ಉಡೀಸ್
ನೂರಕ್ಕೆ ನೂರು ಇದರ ಲಾಭ ಬಿಜೆಪಿಗೆ ಸಿಕ್ಕಿದೆ, ಎಸ್‌ಡಿಪಿಐ ಎಲ್ಲೆಲ್ಲಿ ಸ್ಪರ್ಧೆ ಮಾಡಿದೆ, ಅದರ ಲಾಭ ಬಿಜೆಪಿಗೆ ಆಗಿದೆ. ಎಸ್‌ಡಿಪಿಐ ಕೂಡಾ ಸಾಕಷ್ಟು ಕಡೆ ಗೆದ್ದಿದೆ. ಬಿಜೆಪಿಯ ಲಾಭಕ್ಕೆ ಸಮಾಜವನ್ನು ಬಲಿ ಕೊಡಬೇಡಿ, ಹಿಂದೂಗಳಿಗೆ ಬಲಿ ಕೊಡಬೇಡಿ, ಇವರನ್ನು ಪೋಷಿಸಬೇಡಿ ಎಂದು ಮನವಿ ಮಾಡಿದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಕಳೆದ ಮೂರು ದಿನಗಳಿಂದ ಗೃಹ ಸಚಿವಾಲಯದ (MHA) ಅಧಿಕಾರಿಗಳು ಸಭೆ ನಡೆಸಿ ಪ್ರತ್ಯೇಕ ಕಂಟ್ರೋಲ್ ರೂಮ್ (Control Room) ತೆರೆದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಪಿಎಫ್‌ಐ ಮೇಲೆ ದಾಳಿ ನಡೆಸಿದೆ. ಇಲ್ಲಿಯವರೆಗೆ ಕೆಲ ಜಾಗಗಳಲ್ಲಿ ಎನ್‌ಐಎ (NIA) ದಾಳಿ ನಡೆಸಿದ್ದರೆ, ಮೊದಲ ಬಾರಿ ದೊಡ್ಡ ಮಟ್ಟದಲ್ಲಿ ಇಡಿ ಜೊತೆ ಸೇರಿ ದೇಶದ 11 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.
ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಿಎಫ್‌ಐ (PFI) ಭಾಗಿಯಾಗಿದೆ ಎಂಬ ಆರೋಪ ಈ ಕೇಳಿ ಬಂದಿತ್ತು. ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಪಕ್ಷಗಳು ಎಸ್‌ಡಿಪಿಐ (SDPI), ಪಿಎಫ್‌ಐ ನಿಷೇಧಿಸುವಂತೆ ಆಗ್ರಹಿಸಿದ್ದವು. ಇಲ್ಲಿಯವರೆಗೆ ಕೇಂದ್ರ ಸರ್ಕಾರ (Central Government) ಯಾವುದೇ ಕಠಿಣ ಕ್ರಮವನ್ನು ಕೈಗೊಂಡಿರಲಿಲ್ಲ. ಹತ್ಯೆಯಾದ ಸಂದರ್ಭದಲ್ಲಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸರಿಯಾದ ಪ್ಲ್ಯಾನ್ ಮಾಡಿಕೊಂಡೇ ದೇಶಾದ್ಯಂತ ಪಿಎಫ್‌ಐ ನಾಯಕರ ಮೇಲೆ ದಾಳಿ ನಡೆಸಿ ಶಾಕ್ ಕೊಟ್ಟಿದೆ. ಇದನ್ನೂ ಓದಿ: SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್
ಏನಿದು ಸಭೆಯ ರಹಸ್ಯ?
ಮೂರು ದಿನಗಳ ಹಿಂದೆಯಷ್ಟೇ ಇಡಿ, ಎನ್‌ಐಎ ಹಾಗೂ ಗುಪ್ತಚರ ಇಲಾಖೆ (Intelligence Bureau) ಅಧಿಕಾರಿಗಳೊಂದಿಗೆ ಗೃಹ ಸಚಿವಾಲಯವು ಸಭೆ ನಡೆಸಿದೆ. ಇಲ್ಲಿಯವರೆಗೆ ಯಾವೆಲ್ಲ ಪ್ರಕರಣ ದಾಖಲಾಗಿದೆ? ಈ ಸಂಘಟನೆಗೆ ಹಣ ಎಲ್ಲಿಂದ ಬರುತ್ತಿದೆ ಈ ಎಲ್ಲಾ ವಿಚಾರಗಳನ್ನು ಮಾಹಿತಿ ಕಲೆ ಹಾಕಿ ಚರ್ಚೆ ನಡೆಸಲಾಗಿತ್ತು. ಅದಕ್ಕಾಗಿ 6 ಕಂಟ್ರೋಲ್ ರೂಂಗಳನ್ನು ತೆರಲಾಗಿತ್ತು. ಪ್ರತಿ ರಾಜ್ಯದಲ್ಲಿರುವ ನಾಯಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಸಭೆ ನಡೆದ ತಡರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿತ್ತು. ಪಿಎಫ್‌ಐ ಕಾರ್ಯಕರ್ತರು (PFI Workers) ಗಲಾಟೆ ಮಾಡಬಹುದು ಎಂಬ ಕಾರಣಕ್ಕೆ ಬಹುತೇಕ ಕಡೆ ರಾತ್ರಿಯೇ ಕಾರ್ಯಚರಣೆ ನಡೆಸಿ ನಾಯಕರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ
ಆರೋಪ ಏನು?
ಪಶ್ಚಿಮ ಏಷ್ಯಾದ ದೇಶಗಳಾದ ಕತಾರ್, ಕುವೈತ್, ಸೌದಿ ಅರೇಬಿಯಾ, ಟರ್ಕಿಯಿಂದ ಈ ಸಂಘಟನೆಗಳಿಗೆ ಅಕ್ರಮವಾಗಿ ಹಣ ಬರುತ್ತಿದೆ ಎನ್ನವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಭಾರತದಲ್ಲಿ ಯುವಕರ ತಲೆ ಕೆಡಿಸಿ ಭಯೋತ್ಪಾದಕ ಕೃತ್ಯ ಎಸಗಲು ಈ ಸಂಘಟನೆಗಳು ಪ್ರೋತ್ಸಾಹ ನೀಡುತ್ತಿವೆ. ವಿದೇಶದಿಂದ ಬಂದ ನಿಧಿಯನ್ನು ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳಿಗೆ ಮಾತ್ರವಲ್ಲದೆ ಯುವಕರಲ್ಲಿ ಮತಾಂಧತೆಯನ್ನು ಬೆಳೆಸಲು ಬಳಸಲಾಗುತ್ತಿದೆ. ಈ ಸಂಘಟನೆಯು ಮುಸ್ಲಿಂ ಸಹೋದರತ್ವ ಹೊಂದಿರುವಂತಹ ಪ್ಯಾನ್-ಇಸ್ಲಾಮಿಸ್ಟ್ ಸಂಘಟನೆಯೊಂದಿಗೆ ಸಂಪರ್ಕವನ್ನು ಹೊಂದಿದೆ.
ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಮಾಜಿ ಡಿಜಿಪಿ (DGP) ಬ್ರಿಜ್‌ಲಾಲ್, ಪಿಎಫ್‌ಐ ಅಪಾಯಕಾರಿ ಸಂಘಟನೆಯಾಗಿದ್ದು, ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಜೊತೆಗೆ ನೇರವಾಗಿ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದೆ. ಈ ಸಂಘಟನೆಯ ಸದಸ್ಯರು ಭಾರತೀಯ ಮುಜಾಹಿದ್ದೀನ್‌ನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ದೇಶದಲ್ಲಿ ಅನೇಕ ದೊಡ್ಡ ಸ್ಫೋಟಗಳನ್ನು ನಡೆಸಲು ಇವರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ
ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(SIMI) ನಾಯಕರೇ ಪಿಎಫ್‌ಐ- ಎಸ್‌ಡಿಪಿಐ ಸಂಘಟನೆಯ ಪ್ರಮುಖ ನಾಯಕರಾಗಿದ್ದಾರೆ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದೇ ಇವರ ಮುಖ್ಯ ಉದ್ದೇಶ.
ಸದ್ಯ ಭಾರತದಲ್ಲಿರುವ ಶಿಯಾ, ಸುನ್ನಿ, ಸೂಫಿ, ದಿಯೋಬಂದ್ ಪಂಗಡದ ನಾಯಕರು ಪಿಎಫ್‌ಐ ಹಾಗೂ ಎಸ್‌ಡಿಪಿಐನಲ್ಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಉಗ್ರ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಮತ್ತು ಸೋಷಿಯಲ್ ಡೆಮೆಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿವೆ.
ಕರ್ನಾಟಕದಿಂದ(Karnataka) 20 ಮಂದಿ ಮತ್ತು ದೇಶಾದ್ಯಂತ ಒಟ್ಟು 106 ಮಂದಿಯನ್ನು ಬಂಧಿಸಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕೊಪ್ಪಳ, ಕಾರವಾರ, ಕಲಬುರಗಿಯಲ್ಲಿ ದಾಳಿ ನಡೆದಿದ್ದು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.
ಯಾವ ರಾಜ್ಯದಿಂದ ಎಷ್ಟು?
ಆಂಧ್ರಪ್ರದೇಶ 5, ಅಸ್ಸಾಂ 9, ದೆಹಲಿ, 3, ಕರ್ನಾಟಕ 20, ಕೇರಳ 22, ಮಧ್ಯಪ್ರದೇಶ 4, ಮಹಾರಾಷ್ಟ್ರ 20, ಪುದುಚ್ಚೇರಿ 3, ರಾಜಸ್ಥಾನ 2, ತಮಿಳುನಾಡು 10, ಉತ್ತರ ಪ್ರದೇಶದ 8 ಸೇರಿ ಒಟ್ಟು 106 ಮಂದಿಯನ್ನು ಬಂಧಿಸಲಾಗಿದೆ.
ದಾಳಿ ಯಾಕೆ?
ಭಯೋತ್ಪಾದನೆಗೆ ಧನಸಹಾಯ, ನಿಷೇಧಿತ ಸಂಸ್ಥೆಗಳ ಜೊತೆ ಸಂಪರ್ಕ, ದೇಶದಲ್ಲಿ ಗಲಭೆ ನಡೆಸಲು ಪ್ರಚೋದನೆ, ಮೂಲಭೂತವಾದಿ ವ್ಯಕ್ತಿಗಳಿಗೆ ತಮ್ಮ ಸಂಸ್ಥೆಯಲ್ಲಿ ಆಶ್ರಯ ಇತ್ಯಾದಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎನ್‌ಐಎ ದೇಶಾದ್ಯಂತ ದಾಳಿ ನಡೆಸಿದೆ.
Live Tv
[brid partner=56869869 player=32851 video=960834 autoplay=true]
ಕಾರವಾರ: ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಉಗ್ರರ (Terrorist) ಕಾರ್ಯ ಬಯಲಾಗುತಿದ್ದಂತೆ ಇದರ ಬೇರು ಶಿರಸಿಗೂ ತಾಕಿದೆ. ಇಂದು ಮುಂಜಾನೆ ಶಿರಸಿಯ ಟಿಪ್ಪು ನಗರದಲ್ಲಿರುವ ಎಸ್‌ಡಿಪಿಐ (SDPI) ಮುಖಂಡನ ಮನೆಯ ಮೇಲೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್‌ಡಿಪಿಐ ಮುಖಂಡ ಅಜೂಜ್ ಅಬ್ದುಲ್ ಶುಕುರ್ ಹೊನ್ನಾವರ್‌ನನ್ನು(45) ವಶಕ್ಕೆ ಪಡೆದಿದ್ದಾರೆ.
ಈತನ ಸಹೋದರ ಪಿಎಫ್‌ಐ (PFI) ನಲ್ಲಿ ಪ್ರಾಂತೀಯ ಅಧ್ಯಕ್ಷನಾಗಿದ್ದು ಮೌಸಿನ್ ಅಬ್ದುಲ್ ಶಕೂರ್ ಎಂಬಾತನ ಮನೆಯ ಮೇಲೂ ದಾಳಿ ನಡೆದಿದೆ. ಆದರೆ ಈತ ಮನೆಯಲ್ಲಿ ಇರದ ಕಾರಣ ಅಧಿಕಾರಿಗಳು ಮರಳಿದ್ದಾರೆ. ಬಂಧಿತ ಅಜೂಜ್ ಅಬ್ದುಲ್ ಶುಕುರ್ ನಿಂದ ಒಂದು ಲ್ಯಾಪ್ ಟಾಪ್ (Laptop), ಎರಡು ಮೊಬೈಲ್ (Mobile), ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಿಕೊಳ್ಳಲಾಗಿದ್ದು ಬಿಗಿ ಪೊಲೀಸ್ (Police) ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಬಂಧಿತ ಪಿಐಫ್‌ಐ (PFI) ಸದಸ್ಯರು ಹಾಗೂ ಉಗ್ರನ ಬಂಧಿಸಿದ ವೇಳೆ ಶಿರಸಿಯ ಪಿಎಫ್‌ಐ ಮುಖಂಡರ ಹೆಸರು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಥಳೀಯ ಪೊಲೀಸರ ಸಹಾಯದಿಂದ ಕೇಂದ್ರ ಗುಪ್ತದಳ ವಿಭಾಗದ ಅಧಿಕಾರಿಗಳು, ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
Live Tv
[brid partner=56869869 player=32851 video=960834 autoplay=true]