Tag: SDPI

  • ವರುಣಾದಲ್ಲಿ ಅಪ್ಪ-ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ: ಪ್ರತಾಪ್ ಸಿಂಹ

    ವರುಣಾದಲ್ಲಿ ಅಪ್ಪ-ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ: ಪ್ರತಾಪ್ ಸಿಂಹ

    ಮೈಸೂರು: ವರುಣಾದಲ್ಲಿ (Varuna) 15 ವರ್ಷಗಳ ಅಪ್ಪ ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ. ಬಿಜೆಪಿ (BJP) ಅಭ್ಯರ್ಥಿ ಸೋಮಣ್ಣನವರಿಗೆ (V.Somanna) ಒಳ್ಳೆಯ ಅಭಿಪ್ರಾಯವಿದೆ. ಹಳೆ ಮೈಸೂರು ಭಾಗದಲ್ಲಿ 8ರಿಂದ 10 ಸ್ಥಾನ ಬಿಜೆಪಿಗೆ ಬರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ (Prathap Simha) ವಿಶ್ವಾಸ ವ್ಯಕ್ತಪಡಿಸಿದರು.

    ಮೈಸೂರಿನಲ್ಲಿ (Mysuru) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರಲು ದೇಶದ್ರೋಹಿಗಳ ಜೊತೆ ಕಾಂಗ್ರೆಸ್ ಕೈಜೋಡಿಸುತ್ತಿದೆ. ಪಿಎಫ್‌ಐ (PFI), ಕೆಎಫ್‌ಡಿ (KFD) ಹಾಗೂ ಎಸ್‌ಡಿಪಿಐ (SDPI) ಸಂಘಟನೆಯ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ದತ್ತು ಮಕ್ಕಳಿದ್ದಂತೆ. ಪಿಎಫ್‌ಐ ಮತ್ತು ಕೆಎಫ್‌ಡಿಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (D.K.Shivakumar) ಅವರು ಕರ್ನಾಟಕದಲ್ಲಿ ತಾಲಿಬಾನ್ (Taliban) ಸರ್ಕಾರ ತರಲು ಹೊರಟಿದ್ದಾರೆ. ಸಮಾಜಘಾತುಕ ಸಂಘಟನೆಯ ಬೆಂಬಲದೊಂದಿಗೆ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದರು. ಇದನ್ನೂ ಓದಿ: ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್ 

    ಎಸ್‌ಡಿಪಿಐನವರು ಕಾಂಗ್ರೆಸ್‌ಗೆ ಬೆಂಬಲ ಕೊಡಬೇಕು ಎಂದು ಜಿ.ಪರಮೇಶ್ವರ್ (G.Parameshwar) ಕರೆ ಕೊಟ್ಟಿದ್ದಾರೆ. ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳು ಎಸ್‌ಡಿಪಿಐನ ಮಾತೃ ಸಂಸ್ಥೆಗಳು. ಅಧಿಕಾರಕ್ಕೆ ಬರುವ ಸಲುವಾಗಿ ನಿಷೇಧಿತ ಸಂಘಟನೆಯ ಬೆಂಬಲ ಕೇಳುತ್ತಿದ್ದೀರಾ? ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಜಾಮೀನು 

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಕೀಯ ಹತ್ಯೆಗಳು ಹೆಚ್ಚಾಗುತ್ತವೆ. ಸಿದ್ದರಾಮಯ್ಯನವರ ಸಾಕು ಮಕ್ಕಳಿಂದ ರಾಜ್ಯದಲ್ಲಿ ಸಾಲು ಸಾಲು ಹತ್ಯೆ ನಡೆದಿವೆ. ಕರ್ನಾಟಕವನ್ನು ಇನ್ನೊಂದು ಕೇರಳವನ್ನಾಗಿ (Kerala) ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಏನು ಬೇಕಾದರು ಮಾಡುತ್ತದೆ. ನಾಳೆ ರಾಜ್ಯ ಎಸ್‌ಡಿಪಿಐ ಕೈಗೆ ಹೋದರೂ ಪರವಾಗಿಲ್ಲ ನಾವು ಅಧಿಕಾರಕ್ಕೆ ಬರಬೇಕು ಎನ್ನುವುದು ಕಾಂಗ್ರೆಸ್ ಮನಸ್ಥಿತಿ ಎಂದು ಹರಿಹಾಯ್ದರು. ಇದನ್ನೂ ಓದಿ: ಶೆಟ್ಟರ್‌ಗೆ ಟಿಕೆಟ್ ತಪ್ಪಲು ನಾನೇ ಕಾರಣ ಅನ್ನೋದು ಸುಳ್ಳು: ಬೊಮ್ಮಾಯಿ

  • ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ 47ರ ಕಾಲವಲ್ಲ- SDPI ಮುಖಂಡನಿಗೆ ಸಿ.ಟಿ ರವಿ ವಾರ್ನಿಂಗ್

    ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ 47ರ ಕಾಲವಲ್ಲ- SDPI ಮುಖಂಡನಿಗೆ ಸಿ.ಟಿ ರವಿ ವಾರ್ನಿಂಗ್

    ಚಿಕ್ಕಮಗಳೂರು: ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತವಲ್ಲ. ಈಗ ಇರುವ ಸರ್ಕಾರ ಬಾಲ ಉದ್ದ ಮಾಡಿದ್ರೆ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ ಎಂದು ಚಿತ್ರದುರ್ಗದ ಎಸ್.ಡಿ.ಪಿ.ಐ (SDPI) ಮುಖಂಡ ಜಾಕೀರ್ ಹುಸೇನ್ (Zakir Hussain) ವಿರುದ್ಧ ಶಾಸಕ ಸಿ.ಟಿ.ರವಿ (CT Ravi) ಕಿಡಿಕಾರಿದ್ದಾರೆ.

    ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಹಕ್ಕನ್ನು ವಾಪಸ್ ಕೊಡದಿದ್ರೆ ಸಿಎಂ ಬೊಮ್ಮಾಯಿಗೆ ಚಡ್ಡಿ ಬಿಚ್ಚುಸ್ತೀವಿ ಎಂದು ಹೇಳಿಕೆ ನೀಡಿದ್ದ ಎಸ್.ಡಿ.ಪಿ.ಐ. ಮುಖಂಡನ ಹೇಳಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಅದೇನು ಹೋಗುತ್ತೋ, ತಲೆ ತೆಗೀತಿಯೋ, ನಿನ್ನ ತಾಕತ್ತು ತೋರ್ಸು, ನಿಮ್ಮ ತಾಕತ್ ತೋರಿಸಿ ಆಮೇಲೆ ನಾವು ಅದಕ್ಕೆ ಏನು ಉತ್ತರ ಕೋಡಬೇಕು ಕೊಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಬ್ಬಾಳಿಕೆಯಿಂದ ದೇಶ ಉಳಿಸಲು ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆ – ರಾಗಾ ಬೆಂಬಲಿಸಿದ ಪ್ರಕಾಶ್‌ ರಾಜ್‌

    ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲವನ್ನೂ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತವೂ ಅಲ್ಲ. ನಿಮ್ಮ ಮೇಲಿನ ಕೇಸ್‍ಗಳನ್ನ ಹಿಂಪಡೆದು ಮೆರೆಯಲು ಅವಕಾಶ ನೀಡುವ ಸರ್ಕಾರವೂ ಈಗಿಲ್ಲ. ಈಗ ಇರುವ ಸರ್ಕಾರ ಬಾಲ ಉದ್ದ ಮಾಡಿದರೆ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ ಎಂದು ಎಚ್ಚರಿಕೆ ನೀಡಿದ್ದಾರೆ. ಬಾಂಬ್ ಹಾಕುವವರ ತಲೆ ಮೇಲೆಯೇ ಬಾಂಬ್ ಹಾಕಲು ತಾಕತ್ತಿರುವ ಸರ್ಕಾರ. ಭಯೋತ್ಪಾದನೆ ಮಾಡುವವರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ತಲೆ ಎತ್ತದಂತೆ ಮಾಡುವ ತಾಕತ್ತಿನ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.

    ನಿಮ್ಮ ಎಸ್‍ಡಿಪಿಐ ಹುಟ್ಟಿದ್ದೇ ಕೇರಳ (Kerala) ದಲ್ಲಿ. ಅಲ್ಲಿಯೇ ಮೀಸಲಾತಿ ಇಲ್ಲ. ಕೋಮು ಆಧಾರಿತ, ಮತ ಆಧಾರಿತ ಮೀಸಲಾತಿ ಕೇರಳದಲ್ಲೇ ಇಲ್ಲ, ಆಂಧ್ರದಲ್ಲಿ ಕೊಟ್ಟಿದ್ದರು. ಆದರೆ ಸಂವಿಧಾನ ಬಾಹಿರ ಎಂದು 7 ಜನರ ಲಾರ್ಜರ್ ಬೆಂಚ್ ಕ್ಯಾನ್ಸಲ್ ಮಾಡಿತ್ತು. ಕರ್ನಾಟಕದಲ್ಲಿ ಸಂವಿಧಾನ ಬಾಹಿರ ಮೀಸಲಾತಿ ಯಾರಿಗೂ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಸಂವಿಧಾನ ಬಾಹಿರವಾಗಿರುವುದಕ್ಕೆ ಸಮರ್ಥನೆಗೆ ಯಾರು ನಿಲ್ಲುತ್ತಾರೋ ಅವರು ನಿಲ್ಲಲಿ, ಧಮ್ಕಿ ಹಾಕುವ ತಾಲಿಬಾನ್ ಮಾದರಿ ಇಲ್ಲಿ ನಡೆಯಲ್ಲ. ಆ ಸರ್ಕಾರ ಈಗಿಲ್ಲ. ತಾಲಿಬಾನ್ ಆಡಳಿತವಿರುವ ರಾಜ್ಯ ಎಂದು ಭಾವಿಸಿದ್ರೆ ಇದು ತಾಲಿಬಾನ್ ಆಡಳಿತದ ರಾಜ್ಯ ಅಲ್ಲ ಎಂದು ಎಚ್ಚರಿಕೆ ನೀಡಿದರು.

  • ದೇಶದಲ್ಲಿ SDPIನವರೇ ಅಲ್ಪಸಂಖ್ಯಾತರ ವಿರೋಧಿಗಳು, ಅದೊಂದು ದೇಶದ್ರೋಹಿ ಸಂಘಟನೆ: ಸಿಎಂ

    ದೇಶದಲ್ಲಿ SDPIನವರೇ ಅಲ್ಪಸಂಖ್ಯಾತರ ವಿರೋಧಿಗಳು, ಅದೊಂದು ದೇಶದ್ರೋಹಿ ಸಂಘಟನೆ: ಸಿಎಂ

    ಬೆಳಗಾವಿ: ಭಾರತ ದೇಶದಲ್ಲಿ ಎಸ್‌ಡಿಪಿಐ (SDPI) ನವರೇ ಅಲ್ಪಸಂಖ್ಯಾತರ ವಿರೋಧಿಗಳು. ಅವರಿಂದ ನಾನೇನು ಹೊಗಳಿಕೆ ಬಯಸಲ್ಲ. ಅವರ ಹೇಳಿಕೆಗೆ ಸೊಪ್ಪು ಹಾಕೋದಿಲ್ಲ. ಖಂಡಿತವಾಗಿಯೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ನಗರದಲ್ಲಿ ಮುಸ್ಲಿಂ ಮೀಸಲಾತಿ (Reservetion) ವಿಚಾರದಲ್ಲಿ ಚಿತ್ರದುರ್ಗದ ಎಸ್‌ಡಿಪಿಐ ಮುಖಂಡ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಸ್‌ಡಿಪಿಐನವರು ನನ್ನನ್ನು ಹೊಗಳಲು ಸಾಧ್ಯನಾ? ಅದೊಂದು ದೇಶದ್ರೋಹಿ ಸಂಘಟನೆ. ಅವರು ದೇಶ ವಿರೋಧಿ ಚಟುವಟಿಕೆ ಮಾಡುವವರು. ಭಾರತ ದೇಶದ ಅಲ್ಪಸಂಖ್ಯಾತರ ವಿರೋಧಿಗಳೇ ಎಸ್‌ಡಿಪಿಐನವರು. ಅವರಿಂದ ನಾನೇನು ಹೊಗಳಿಕೆ ಬಯಸಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: ಮೀಸಲಾತಿ ವಿಚಾರಕ್ಕೆ ಜೈಲಿಗೋದರೂ ಚಿಂತೆಯಿಲ್ಲ ; SDPI ಎಚ್ಚರಿಕೆ

    ಅಥಣಿ ಟಿಕೆಟ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಏಪ್ರಿಲ್ ಮೊದಲ ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಗೆಲ್ಲುವಂತಹ ಪಕ್ಷಕ್ಕೆ ಎಲ್ಲ ಕಡೆ ಫೈಟ್ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಕಳೆದ 2-3 ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡುತ್ತಿದ್ದಾರೆ. ಟಿಕೆಟ್ ಘೋಷಿಸದ 124 ಕ್ಷೇತ್ರಗಳಲ್ಲಿ ನಮ್ಮ ಶಾಸಕರಿಗೆ ಕರೆ ಮಾಡುತ್ತಿದ್ದಾರೆ. ಟಿಕೆಟ್ ಭರವಸೆ ನೀಡುತ್ತಿದ್ದಾರೆ. ಹತಾಶೆಯಿಂದ ‌ನಮ್ಮ ಪಕ್ಷದವರನ್ನು ಸಂಪರ್ಕಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದಿವಾಳಿ ಆಗಿದೆ ಎನ್ನುವುದಕ್ಕೆ ಇದೆ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.‌ ಇದನ್ನೂ ಓದಿ: ನನ್ನ ತಂದೆ ಯಾವತ್ತೂ ರಾಜಕೀಯ ಪಾಠ ಹೇಳಿಕೊಡಲಿಲ್ಲ – ಸಾರ್ವಜನಿಕ ವೇದಿಕೆಯಲ್ಲಿ ದರ್ಶನ್ ಧ್ರುವನಾರಾಯಣ ಮೊದಲ ಭಾಷಣ

  • ಮೀಸಲಾತಿ ವಿಚಾರಕ್ಕೆ ಜೈಲಿಗೋದರೂ ಚಿಂತೆಯಿಲ್ಲ ; SDPI ಎಚ್ಚರಿಕೆ

    ಮೀಸಲಾತಿ ವಿಚಾರಕ್ಕೆ ಜೈಲಿಗೋದರೂ ಚಿಂತೆಯಿಲ್ಲ ; SDPI ಎಚ್ಚರಿಕೆ

    ಚಿತ್ರದುರ್ಗ: ನಮ್ಮ ಹೆಣ್ಮಕ್ಕಳು ಧರಿಸುವ ಹಿಜಬ್ (Hijab) ಹಾಗೂ ಅಜಾನ್ (Azan) ವಿಚಾರದಲ್ಲಿ ‌ಸರ್ಕಾರಕ್ಕೆ ನಮ್ಮ ತಲೆ ಕೊಟ್ಟೆವು. ಆದರೆ ಮೀಸಲಾತಿ (Reservation) ವಿಚಾರದಲ್ಲಿ ಜೈಲಿಗೆ ಹೋದರೂ ಚಿಂತೆಯಿಲ್ಲವೆಂದು ಎಸ್‌ಡಿಪಿಐ (SDPI) ಕಾರ್ಯದರ್ಶಿ ಜಾಕೀರ್ ಹುಸೇನ್ ಎಚ್ಚರಿಕೆ ನೀಡಿದರು.

    ಚಿತ್ರದುರ್ಗ (Chitradurga) ನಗರದ ಒನಕೆ ಓಬವ್ವ ವೃತ್ತದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‌ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿ‌ ರದ್ದುಗೊಳಿಸಿದ್ದಕ್ಕೆ ಬಿಜೆಪಿ (BJP) ಸರ್ಕಾರದ ವಿರುದ್ಧ ಕಿಡಿಕಾರಿದರು. ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸಿದರು. ಬೊಮ್ಮಯಿ ನೇತೃತ್ವದ ಈ ಬಿಜೆಪಿ ಸರ್ಕಾರ ನಮ್ಮ ಹಕ್ಕನ್ನು ಹೀನಾಯವಾಗಿ ಕಸಿದುಕೊಂಡಿದೆ. ನಮ್ಮ ಹಕ್ಕು ನಮಗೆ ವಾಪಸ್ ಕೊಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಿವುದಾಗಿ ಕಿಡಿಕಾರಿದರು. ಇದನ್ನೂ ಓದಿ: ಬಂಜಾರ ಸಮುದಾಯದ ಅಭಿವೃದ್ಧಿಗೆ ಬಿಎಸ್‌ವೈ ಸಾಕಷ್ಟು ಕೊಡುಗೆ ನೀಡಿದ್ದಾರೆ- ಆರಗ

    ನಾವು ಹಿಜಬ್ ಸೇರಿದಂತೆ ಅಜಾನ್‌ಗೆ ನಾವು ತಲೆ‌‌ ಕೊಟ್ಟೆವು. ಆದರೆ ಮೀಸಲಾತಿ ವಿಚಾರದಲ್ಲಿ ತಲೆ‌ ಹೋದರೂ ಚಿಂತೆಯಿಲ್ಲ, ಜೈಲಿಗೆ ಹೋದರು ಚಿಂತೆಯಿಲ್ಲ. ನಾವೆಲ್ಲ ಉಗ್ರ ಹೋರಾಟ ಮಾಡುತ್ತೇವೆಂದು ಜಾಕೀರ್ ಹುಸೇನ್ ಸರ್ಕಾರಕ್ಕೆ ಎಚ್ಚರಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ‌ ಬಾಳೇಕಾಯಿ ಶ್ರೀನಿವಾಸ್ ಸೇರಿದಂತೆ ಎಸ್‌ಡಿಪಿಐ ಕಾರ್ಯಕರ್ತರು ಇದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಕ್ಷಮೆ ಕೇಳದಿದ್ರೆ ಮತ್ತೊಂದು FIR ದಾಖಲಿಸುತ್ತೇನೆ: ರಂಜಿತ್ ಸಾವರ್ಕರ್

  • ಕೊನೆ ಉಸಿರೆಳೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಟಿಪ್ಪು, ಭಯೋತ್ಪಾದನೆ, ಎಸ್‍ಡಿಪಿಐ ಆಕ್ಸಿಜನ್ ಆಗ್ತಿದೆ: ಯುಟಿ ಖಾದರ್

    ಕೊನೆ ಉಸಿರೆಳೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಟಿಪ್ಪು, ಭಯೋತ್ಪಾದನೆ, ಎಸ್‍ಡಿಪಿಐ ಆಕ್ಸಿಜನ್ ಆಗ್ತಿದೆ: ಯುಟಿ ಖಾದರ್

    ಮಂಗಳೂರು: ಬಿಜೆಪಿ (BJP) ಸರ್ಕಾರ ಕೊನೆಯುಸಿರೆಳೆಯುತ್ತಿದೆ. ಆಕ್ಸಿಜನ್ ಆಗಿ ಟಿಪ್ಪು (Tippu), ಭಯೋತ್ಪಾದನೆ ಮತ್ತು ಎಸ್‍ಡಿಪಿಐ (SDPI) ವಿಚಾರಗಳನ್ನು ಬಳಕೆ ಮಾಡುತ್ತಿದೆ ಎಂದು ಮಂಗಳೂರಿನಲ್ಲಿ ಶಾಸಕ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

    ನಮ್ಮ ತೆರಿಗೆ ಹಣದಲ್ಲಿ ತಾಲಿಬಾನಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಿದೆ. ಕಾಂಗ್ರೆಸ್ (Congress) ಆಡಳಿತದಲ್ಲಿ ಭಾರತ ಪಾಕಿಸ್ತಾನದ ಕ್ರಿಕೆಟ್ (Cricket) ಬೇಡ ಎಂದಿದ್ದೆವು. ಈಗಿನ ಸರ್ಕಾರ ಎರಡು ತಂಡಗಳನ್ನು ದುಬೈಗೆ ಕರೆದೊಯ್ದು ಪಂದ್ಯಗಳನ್ನಾಡಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಬುದ್ಧ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸೈಲೆಂಟ್ ಸುನಿ – ರಾರಾಜಿಸುತ್ತಿವೆ ಕಟೌಟ್

    ಸಂಸದರ ಮೌನ, ರಾಜ್ಯ ಸರ್ಕಾರದ ಅಸಹಾಯಕತೆಯಿಂದ ಕೇಂದ್ರದ ಬಜೆಟ್‍ನಲ್ಲಿ ಮಲತಾಯಿ ಧೋರಣೆ ನಡೆದಿದೆ. ಇದರಿಂದ ರಾಜ್ಯ ಸಾಲದಿಂದ ಮುಳುಗಿದೆ ಎಂದಿದ್ದಾರೆ.

    ರಾಜ್ಯ ಬಜೆಟ್ ಜನರನ್ನು ಸುಲಿಗೆ ಮಾಡುವ ಸಾಲದ ಬಜೆಟ್ ಆಗಿದೆ. ಕೊನೆಯುಸಿರೆಳೆಯುವ ಸರ್ಕಾರ ಯಾವುದೇ ಮಹತ್ವ ಇಲ್ಲದ ಬಜೆಟ್ ಮಂಡನೆ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

    1947 ರಿಂದ 2018ರ ತನಕ ರಾಜ್ಯದ ಸಾಲ 2,42,000 ಕೋಟಿ ರೂ.ಗಳಾಗಿತ್ತು. ಆದರೆ 2018-2023ರ ಅವಧಿಯಲ್ಲಿ 5,64,814 ಕೋಟಿ ರೂ. ಆಗಿದೆ. ಇದರಿಂದ ಜನ ಸಾಲದ ಭಾರವನ್ನು ಹೋರುವಂತಾಗಿದೆ. ಬಿಜೆಪಿ ನಾಲ್ಕು ವರ್ಷದಲ್ಲಿ 2,80,000 ಕೋಟಿ ರೂ.ಗಳನ್ನು ಸಾಲ ಪಡೆದುಕೊಂಡಿದೆ. ಮತ್ತು 78,000 ಕೋಟಿ ಸಾಲ ಮಾಡುವುದಾಗಿ ಹೇಳಿಕೊಂಡಿದೆ ಎಂದಿದ್ದಾರೆ.

    3 ಲಕ್ಷ ಸಾವಿರ ಕೋಟಿಯ ಬಜೆಟ್‍ನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕ ಅಂಶಗಳು ಇಲ್ಲ. ಪ್ರತಿ ತಿಂಗಳು 14 ಸಾವಿರ ಕೋಟಿ ಅಸಲು ಮತ್ತು 34 ಸಾವಿರ ಕೋಟಿ ಬಡ್ಡಿಯನ್ನು ರಾಜ್ಯ ಕಟ್ಟ ಬೇಕಿದೆ. ಜಾತ್ರೆಯಲ್ಲಿ ಬ್ಯಾಂಡ್ ಬಾರಿಸುವಂತೆ ಸರ್ಕಾರ ಬಜೆಟ್ ಮಂಡನೆ ಮಾಡಿದೆ ಎಂದಿದ್ದಾರೆ.

    ಮೀನುಗಾರರಿಗೆ ಈ ಹಿಂದಿನ ಬಜೆಟ್‍ನಲ್ಲಿ ಘೋಷಿಸಿದ ಯೋಜನೆಗಳನ್ನೇ ಜಾರಿಗೆ ತಂದಿಲ್ಲ. ಕಳೆದ ವರ್ಷ ಘೋಷಿಸಿದ್ದ ಮನೆಗಳು ಇನ್ನೂ ನಿರ್ಮಾಣ ಆಗಿಲ್ಲ. ಸಮುದ್ರ ತೀರದ ಕೊಂಡಿ ರಸ್ತೆ ಮತ್ತು ಕಡಲ್ಕೊರೆತಕ್ಕೆ ಇನ್ನೂ ಶಾಶ್ವತ ಪರಿಹಾರ ಕೊಟ್ಟಿಲ್ಲ. ಕರಾವಳಿ ಪ್ರದೇಶದ ಜನರಿಗೆ ಮೋಸ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

     ಸಬ್ಸಿಡಿ ಸೀಮೆಎಣ್ಣೆಯನ್ನೇ ಕೊಟ್ಟಿಲ್ಲ ಈಗ ಡೀಸೆಲ್ ಬಗ್ಗೆ ಹೇಳುತ್ತಿದ್ದಾರೆ ಎಂದು ಅವರು ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್‌ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ

    LIVE TV

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಎಸ್‌ಡಿಪಿಐ ಟಿಕೆಟ್ – ಜೈಲಿನಿಂದಲೇ ಸ್ಪರ್ಧೆ

    ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಎಸ್‌ಡಿಪಿಐ ಟಿಕೆಟ್ – ಜೈಲಿನಿಂದಲೇ ಸ್ಪರ್ಧೆ

    ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಶಾಫಿ ಬೆಳ್ಳಾರೆಗೆ (Shafi Bellare) ಎಸ್‌ಡಿಪಿಐ (SDPI) ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದೆ.

    ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಫಿ ಬೆಳ್ಳಾರೆಯನ್ನು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಪುತ್ತೂರಿನಲ್ಲಿ ನಡೆದ ಎಸ್‌ಡಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಈ ಘೋಷಣೆಯನ್ನು ಮಾಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಅಬ್ದುಲ್ ಮಜೀದ್, ಶಾಫಿ ಬೆಳ್ಳಾರೆಗೆ ಟಿಕೆಟ್ ಕೊಡಿ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಶಾಫಿ ಹೆಸರನ್ನು ಸೇರಿಸಲಾಗಿದೆ. ಶಾಫಿ ರಾಜಕೀಯವಾಗಿ ಬೆಳೆಯುತ್ತಾರೆ ಎಂಬ ಕಾರಣಕ್ಕೆ ಅವರ ಮೇಲೆ ಕೊಲೆ ಆರೋಪ ಮಾಡಲಾಗಿದೆ. ಶಾಫಿ ಬಂಧನದ ಹಿಂದೆ ರಾಜಕೀಯ ದುರುದ್ದೇಶವಿದೆ. ಈ ಪ್ರಕರಣದಲ್ಲಿ ಶಾಫಿ ಕೇವಲ ಆರೋಪಿ, ಅವರ ಪರವಾಗಿ ನಿಲ್ಲುವ ಸಲುವಾಗಿ ಟಿಕೆಟ್ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂಡಿಗೆರೆ ಬಿಜೆಪಿ ಶಾಸಕ ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶಾಫಿ ಆರೋಪಿಯಾಗಿದ್ದು ಎನ್‌ಐಎ ಬಂಧನದಲ್ಲಿದ್ದಾನೆ. ಎನ್‌ಐಎ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಶಾಫಿಯನ್ನು ಬಂಧಿಸಿತ್ತು. ಇದೀಗ ಶಾಫಿ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾನೆ. ಇದನ್ನೂ ಓದಿ: LTTE ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತ: ಇಂದಿರಾ ಆಪ್ತ, ತಮಿಳು ನಾಯಕ ಸ್ಫೋಟಕ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • NIA ದಾಳಿ – ನನ್ನ ಕಿರಿಯ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ: ಇಸ್ಮಾಯಿಲ್ ನಾಲಬಂದ್

    NIA ದಾಳಿ – ನನ್ನ ಕಿರಿಯ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ: ಇಸ್ಮಾಯಿಲ್ ನಾಲಬಂದ್

    ಹುಬ್ಬಳ್ಳಿ: ರಾಜ್ಯಾದ್ಯಂತ ಹಲವಡೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ಹಿನ್ನೆಲೆ, ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ (Hubballi) ಎಸ್‍ಡಿಪಿಐ (SDPI) ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ, ಕಚೇರಿ ಮೇಲೆಯೂ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಹಳೇ ಹುಬ್ಬಳ್ಳಿಯ ನೂರಾನಿ ಪ್ಲಾಟ್‍ನಲ್ಲಿರುವ ಎಸ್‍ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಮತ್ತು ಕಚೇರಿಯನ್ನು ಸಂಪೂರ್ಣ ಪರಿಶೀಲನೆ ನಡೆಸಿ ಅಧಿಕಾರಿಗಳು ಅಗತ್ಯ ದಾಖಲಾತಿಗಳೊಂದಿಗೆ ವಾಪಸಾಗಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – NIA ದಾಳಿ, ಮೂವರ ಬಂಧನ

    ಅಧಿಕಾರಿಗಳ ನಿರ್ಗಮನದ ಬಳಿಕ ಮಾತನಾಡಿದ ಇಸ್ಮಾಯಿಲ್, ಕಳೆದ ಆರು ವರ್ಷದಿಂದ ಎಸ್‍ಡಿಪಿಐನಲ್ಲಿ ಕೆಲಸ ಮಾಡುತ್ತಿದ್ದೆ ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಐದು ಗಂಟೆಗೆ NIA ಅಧಿಕಾರಿಗಳು ಬಂದು ವಿಚಾರಣೆ ಮಾಡಬೇಕೆಂದರು. ನಾವು ಸಹಕಾರ ನೀಡಿದ್ದೇವೆ. ಅವರು ಸೌಜನ್ಯ ಪೂರ್ವಕವಾಗಿ ನಮ್ಮನ್ನು ನಡೆಸಿಕೊಂಡಿದ್ದಾರೆ. ಆದರೆ ಅವರು ನನ್ನ ಕಿರಿಯ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಆತ ಊರಿನಲ್ಲಿ ಇಲ್ಲ ಹೀಗಾಗಿ ನ.7 ರಂದು ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ರೇಣುಕಾಚಾರ್ಯ ಅನುಮಾನ

    Live Tv
    [brid partner=56869869 player=32851 video=960834 autoplay=true]

  • ಬ್ಯಾನ್ ಆದ್ರೂ ಸಕ್ರಿಯವಾಗಿದ್ಯಾ PFI?- ಬೇಟೆ ಮುಂದುವರಿಸಿದ ಮಂಗಳೂರು ಪೊಲೀಸರು

    ಬ್ಯಾನ್ ಆದ್ರೂ ಸಕ್ರಿಯವಾಗಿದ್ಯಾ PFI?- ಬೇಟೆ ಮುಂದುವರಿಸಿದ ಮಂಗಳೂರು ಪೊಲೀಸರು

    ಮಂಗಳೂರು: ಪಿಎಫ್‌ಐ (PFI) ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್ (PFI Ban) ಮಾಡಿ ವಾರಗಳೇ ಕಳೆದಿವೆ. ಆದರೆ ಆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಇನ್ನೂ ತಮ್ಮ ಹಳೇ ಚಾಳಿಯನ್ನು ಮುಂದುವರಿಸುತ್ತಲೇ ಇದ್ದಾರೆ. ಬ್ಯಾನ್ ಬಳಿಕವೂ ಭೂಗತರಾಗಿ ಸಕ್ರಿಯ ಚಟುವಟಿಕೆ ನಡೆಸುತ್ತಾ ಇದ್ದಾರೆ ಎನ್ನುವ ಮಾಹಿತಿಯಂತೆ ಪೊಲೀಸರು ಮತ್ತೆ ಬಂಧನದ ಬೇಟೆ ಮುಂದುವರಿಸಿದ್ದಾರೆ. ರಾಜ್ಯದ ಕರಾವಳಿಯ ಮಂಗಳೂರಿನಲ್ಲಿ (Mangaluru) ಇಂದು ಮತ್ತೆ ಐವರನ್ನು ಬಂಧಿಸಲಾಗಿದೆ.

    ನಿಷೇಧಿತ ಪಿಎಎಫ್‌ಐ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರ ಬಂಧನದ ಬೇಟೆ ಮುಂದುವರಿದಿದೆ. ಪಿಎಫ್‌ಐ ಬ್ಯಾನ್ ಆದ ಬಳಿಕವೂ ಭೂಗತರಾಗಿದ್ದುಕೊಂಡು ಸಕ್ರಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅದರಲ್ಲೂ ಪಿಎಫ್‌ಐ ಬಹಳಷ್ಟು ಆಕ್ವೀವ್ ಆಗಿದ್ದ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಸೂಚನೆಯಂತೆ ಪೊಲೀಸರು ಬಂಧನದ ಬೇಟೆ ಮುಂದುವರಿಸಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರು (Mangaluru Police) ಕಾರ್ಯಾಚರಣೆ ನಡೆಸಿದ್ದು ಒಟ್ಟು 5 ಮಂದಿ ಪಿಎಫ್‌ಐ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮಂಗಳೂರು ಗ್ರಾಮಾಂತರ, ಪಣಂಬೂರು, ಸುರತ್ಕಲ್, ಉಳ್ಳಾಲ ಸೇರಿ 8 ಕಡೆಗಳಲ್ಲಿ ಏಕಕಾಲಕ್ಕೆ ಸ್ಥಳೀಯ ಪೊಲೀಸರು ಮನೆಗಳಿಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಯುಎಪಿಎ ಆಕ್ಟ್, ಸೆಕ್ಷನ್ 121 ಸೇರಿ ವಿವಿಧ ಐಪಿಸಿ ಸೆಕ್ಷನ್ ನಡಿ ಕೇಸ್ ದಾಖಲಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

    ಪಿಎಫ್‌ಐ ಮಾತ್ರವಲ್ಲದೆ ಎಸ್‌ಡಿಪಿಐ (SDPI) ಪಕ್ಷದ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಪಿಎಫ್‌ಐ ಜೊತೆ ಸಂಪರ್ಕದಲ್ಲಿರೋ ಎಸ್‌ಡಿಪಿಐ ನಾಯಕರು ಹಾಗೂ ಕಾರ್ಯಕರ್ತರ ಮೇಲೂ ಕಣ್ಣಿಟ್ಟಿರುವ ಪೊಲೀಸರು ಅವರ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಎಸ್‌ಡಿಪಿಐನ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಅವರ ಮನೆಗೂ ಇಂದು ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ದಾಳಿ ವೇಳೆ ಅಬೂಬಕ್ಕರ್ ಮನೆಯಲ್ಲಿ ಇಲ್ಲದಿದ್ದು ಬಂಧಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಐಷಾರಾಮಿ ವಾಹನದಲ್ಲಿ ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ – ಆಟೋ ರಿಕ್ಷಾ ಐಷಾರಾಮಿನಾ? ಓಲಾ, ಉಬರ್‌ಗೆ ಹೈಕೋರ್ಟ್ ಪ್ರಶ್ನೆ

    ಹೀಗೆ ಪೊಲೀಸರು ಪಿಎಫ್‌ಐ, ಎಸ್‌ಡಿಪಿಐನ ಮುಖಂಡರು ಹಾಗೂ ಕಾರ್ಯಕರ್ತರ ಬೇಟೆ ಮುಂದುವರಿಸಿದ್ದಾರೆ. ಆದರೆ ಈ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದರೆ ಸಾಕಾಗಲ್ಲ. ಇಂದಲ್ಲ ನಾಳೆ ಮತ್ತೊಂದು ಹೆಸರಲ್ಲಿ ಪ್ರತ್ಯಕ್ಷವಾಗುತ್ತಾರೆ. ಹೀಗಾಗಿ ಪೊಲೀಸರು ಹಾಗೂ ಸರ್ಕಾರ ಇಂತಹ ಸಂಘಟನೆಯಲ್ಲಿದ್ದವರ ಮೇಲೆ ವಿಶೇಷವಾಗಿ ಕಣ್ಣಿಡಬೇಕು. ಅವರನ್ನು ಬುಡಸಮೇತರಾಗಿ ಕಿತ್ತೊಗೆಯಬೇಕು. ಇಲ್ಲದೇ ಇದ್ದಲ್ಲಿ ಈ ದೇಶಕ್ಕೆ ಅವರು ಮಾರಕವಾಗಲಿದ್ದಾರೆ ಎಂದು ಹಿಂದೂ ಮಹಾ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಗುಜರಾತ್ ಎಎಪಿ ಮುಖ್ಯಸ್ಥ ಪೊಲೀಸ್ ವಶಕ್ಕೆ

    ಪಿಎಫ್‌ಐ ನಿಷೇಧ ಆಗಿದ್ರೂ ಅದರ ಮುಖಂಡರು ಹಾಗೂ ಕಾರ್ಯಕರ್ತರು ಮತ್ತಷ್ಟು ಸಕ್ರಿಯವಾಗಿರೋ ಎಲ್ಲಾ ಸಾಧ್ಯತೆಗಳು ಇದೆ. ಇತ್ತೀಚೆಗೆ ಬಂಟ್ವಾಳದ ನೈನಾಡು ಎಂಬಲ್ಲಿ ರಸ್ತೆಯಲ್ಲಿ ಪಿಎಫ್‌ಐ ಅನ್ನು ನಾವು ಮತ್ತೆ ತರುತ್ತೇವೆ ಎನ್ನುವುದನ್ನು ಬರೆದಿರುವುದೇ ಸಾಕ್ಷಿಯಾಗಿದೆ. ಹೀಗಾಗಿ ಪೊಲೀಸರು ಹಾಗೂ ಸರ್ಕಾರ ಮತ್ತಷ್ಟು ಎಚ್ಚೆತ್ತುಕೊಳ್ಳೋ ಅನಿವಾರ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನ SDPI, PFI ನಾಯಕರ ಮನೆ ಮೇಲೆ ದಾಳಿ – ಐವರು ಅರೆಸ್ಟ್‌

    ಮಂಗಳೂರಿನ SDPI, PFI ನಾಯಕರ ಮನೆ ಮೇಲೆ ದಾಳಿ – ಐವರು ಅರೆಸ್ಟ್‌

    ಮಂಗಳೂರು: ಎಸ್‌ಡಿಪಿಐ(SDPI) ಮತ್ತು ನಿಷೇಧಿತ ಪಿಎಫ್‌ಐ(PFI) ಸಂಘಟನೆಯ ಮುಖಂಡರು, ಕಾರ್ಯಕರ್ತರ ಮನೆ ಮೇಲೆ ಪೊಲೀಸ್‌(Police) ದಾಳಿ ನಡೆದಿದೆ.

    ಈ ಹಿಂದೆ ನಡೆದ ದಾಳಿಯ ಮುಂದುವರಿದ ಭಾಗವಾಗಿ ಮಂಗಳೂರಿನ ಪಣಂಬೂರು, ಸುರತ್ಕಲ್, ಉಳ್ಳಾಲ, ಮಂಗಳೂರು ಗ್ರಾಮಾಂತರ ಸೇರಿ ಎಂಟು ಕಡೆ ದಾಳಿ ನಡೆಸಲಾಗಿದೆ. ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ನೇತೃತ್ವದಲ್ಲಿ ದಾಳಿ ನಡೆದಿದೆ.
    ಇದನ್ನೂ ಓದಿ: ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ಈ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ವ್ಯಕ್ತಿಗಳು ತಲೆ ಮರೆಸಿಕೊಂಡಿದ್ದರು. ಈಗ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ 5 ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಎಸ್‌ಡಿಪಿಐ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿ ಪಿಎಫ್‌ಐ ಜೊತೆಗಿನ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

    ಈಗಾಗಲೇ ಬಂಧನಕ್ಕೆ ಒಳಗಾದ ಮಂಗಳೂರಿನ ಪ್ರಮುಖ ಮೂವರು ಪಿಎಫ್‌ಐ ಮುಖಂಡರನ್ನು ರಾಷ್ಟ್ರೀಯ ತನಿಖಾ ದಳ(NIA) ಎನ್‌ಐಎ ವಿಚಾರಣೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ

    PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ

    ನವದೆಹಲಿ: ನಿಷೇಧಿತ ಪಿಎಫ್‌ಐ (PFI) ಸಂಘಟನೆಯೊಂದಿಗೆ ಎಸ್‌ಡಿಪಿಐ (SDPI) ಯಾವುದೇ ಸಂಬಂಧ ಹೊಂದಿಲ್ಲ ಎಂದು ಮುಖ್ಯ ಚುನಾವಣಾ ಆಯೋಗ (Election Commission) ಸ್ಪಷ್ಟನೆ ನೀಡಿದೆ.

    ಸೆಪ್ಟೆಂಬರ್ 28ರಂದು ಕೇಂದ್ರ ಸರ್ಕಾರ ಪಿಎಫ್‌ಐ (PFI) ಸಂಘಟನೆಯನ್ನು ನಿಷೇಧಿಸಿತು. ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯ್ದೆ (UAPA) ಅಡಿಯಲ್ಲಿ ಪಿಎಫ್‌ಐ ಹಾಗೂ ಅದರ 8 ಅಂಗ ಸಂಸ್ಥೆಗಳನ್ನು ನಿಷೇಧಿಸಿತು. ಇದನ್ನೂ ಓದಿ: ಪಿಎಫ್‌ಐ ಕಾರ್ಯಕರ್ತರಿಗೆ 3 ಹಂತದ ತರಬೇತಿ – ಹಿಂದೂ ಹೆಸರಿನಲ್ಲಿ ಹಾಲ್‌ ಖರೀದಿಸಿ, ದಾನ

    ಎಸ್‌ಡಿಪಿಐ ಎಲ್ಲಾ ಅಗತ್ಯ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಪಿಎಫ್‌ಐ ನೊಂದಿಗೆ ಯಾವುದೇ ನಂಟಿರುವುದು ಕಂಡುಬಂದಿಲ್ಲ ಎಂದು ಮುಖ್ಯ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ (Rajiv Kumar) ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    ಈ ಕುರಿತು ಮಾತನಾಡಿರುವ ಅವರು, ಪಿಎಫ್‌ಐ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ನಮಗೆ ತಿಳಿದಿದೆ. ಆದರೆ ಎಸ್‌ಡಿಪಿಐ ಎಲ್ಲಾ ರೀತಿಯ ಅಗತ್ಯ ದಾಖಲೆ ಸಲ್ಲಿಸಿದ್ದು, ಈವರೆಗೂ ಪಿಎಫ್‌ಐನೊಂದಿಗೆ ಯಾವುದೇ ಸಂಪರ್ಕ ಹೊಂದಿರುವುದು ಕಂಡುಬಂದಿಲ್ಲ. ಎಸ್‌ಡಿಪಿಐ ಕಡೆಯಿಂದ ಲೋಪವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

    2009ರ ಜೂನ್ 21ರಂದು ಎಸ್‌ಡಿಪಿಐ ಅಸ್ತಿತ್ವಕ್ಕೆ ಬಂದಿದ್ದು, 2010 ಏಪ್ರಿಲ್ 13ರಂದು ಭಾರತದ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದೆ. ಇಲ್ಲಿಯವರೆಗೆ ಎಸ್‌ಡಿಪಿಐ ಕರ್ನಾಟಕ, ಕೇರಳ, ತಮಿಳುನಾಡು, ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಆಂಧ್ರಪ್ರದೇಶಗಳಲ್ಲಿ ಸದಸ್ಯರನ್ನು ಹೊಂದಿದ್ದು ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಆದಿವಾಸಿಗಳು ಸೇರಿದಂತೆ ಎಲ್ಲ ವರ್ಗದ ನಾಗರಿಕರ ಪ್ರಗತಿಗಾಗಿ ಶ್ರಮಿಸುತ್ತಿದೆ ಎಂದು ಪಕ್ಷ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]