Tag: SDPI

  • ಎಬಿವಿಪಿ ಕಾರ್ಯಕರ್ತನ ಕಗ್ಗೊಲೆ- ಎಸ್‍ಡಿಪಿಐ ಸಂಘಟನೆಯ ನಾಲ್ವರ ಬಂಧನ

    ಎಬಿವಿಪಿ ಕಾರ್ಯಕರ್ತನ ಕಗ್ಗೊಲೆ- ಎಸ್‍ಡಿಪಿಐ ಸಂಘಟನೆಯ ನಾಲ್ವರ ಬಂಧನ

    ತಿರುವನಂತಪುರಂ: ಕೇರಳದಲ್ಲಿ ಎಬಿವಿಪಿ ಕಾರ್ಯಕರ್ತರೊಬ್ಬರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

    ಬಂಧಿತರನ್ನು ಮೊಹಮ್ಮದ್, ಮಿನಿಕ್ಕೊಲದ ಸಲೀಂ, ನೀವೆಲಿ ಅಮೀರ್ ಹಾಗೂ ಶಾಹಿನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಸ್‍ಡಿಪಿಐ ಸದಸ್ಯರು ಎನ್ನಲಾಗಿದೆ.

    ಏನಿದು ಘಟನೆ?: ಎಬಿವಿಪಿ ಕಾರ್ಯಕರ್ತ ಹಾಗೂ ಆರ್‍ಎಸ್‍ಎಸ್ ನ ಮುಖ್ಯ ಶಿಕ್ಷಕ್ ಆಗಿದ್ದ ಶ್ಯಾಮ್ ಪ್ರಸಾದ್ ಅವರ ಮೇಲೆ ಶುಕ್ರವಾರ ಸಂಜೆ ಕನ್ನಾವಂ ಸಮೀಪದ ಕೊಮ್ಮೇರಿ ಎಂಬಲ್ಲಿ ತಂಡವೊಂದು ದಾಳಿ ಮಾಡಿತ್ತು. ಕೂಡಲೇ ಶ್ಯಾಮ್ ಪ್ರಸಾದ್ ತಪ್ಪಿಸಿಕೊಂಡು ಅಲ್ಲೆ ಇದ್ದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದರು. ಆದ್ರೆ ಆ ಮನೆಗೆ ಬೀಗ ಜಡಿದಿದ್ದರಿಂದ ಶ್ಯಾಮ್ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪರಿಣಾಮ ದುಷ್ಕರ್ಮಿಗಳ ಕೈಗೆ ಸಿಲುಕಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದರು ಎಂದು ವರದಿಯಾಗಿದೆ.

    ಘಟನೆಯ ಬಳಿಕ ದುಷ್ಕರ್ಮಿಗಳು ವಾಯ್‍ನಾಡಿಗೆ ಪರಾರಿಯಾಗಿದ್ದರು. ಕೊಲೆ ಸಂಬಂಧ ಪೆರಾವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಗಳನ್ನು ವಾಯ್‍ನಾಡಿನಲ್ಲಿ ಬಂಧಿಸಲಾಗಿದ್ದು, ಪೆರಾವೂರ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

    ಬಿಜೆಪಿ ಪ್ರತಿಭಟನೆ: ಎಬಿವಿಪಿ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಶನಿವಾರ ಪ್ರತಿಭಟನೆ ನಡೆಸಿತ್ತು. 12 ಗಂಟೆ ನಡೆಸಿದ ಹರತಾಳದಲ್ಲಿ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಅಲ್ಲದೇ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

    ಶನಿವಾರ ಸಂಜೆ ಮೃತನ ಅಂತ್ಯಸಂಸ್ಕಾರ ನಡೆದಿದೆ. ಅದಕ್ಕೂ ಮೊದಲು ಮರಣೋತ್ತರ ಪರೀಕ್ಷೆಯ ಬಳಿಕ ಅಂತಿಮ ದರ್ಶನಕ್ಕಾಗಿ ಮೃತನ ಪಾರ್ಥೀವ ಶರೀರವನ್ನು ಪರಿಯರಮ್ ಮೆಡಿಕಲ್ ಕಾಲೇಜಿನಲ್ಲಿ ಇಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಭಾಗವಹಿಸಿ ಅಂತಿಮ ದರ್ಶನ ಪಡೆದ್ರು. ಬಳಿಕ ಶ್ಯಾಮ್ ಪ್ರಸಾದ್ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

  • ಪ್ರತಾಪ್ ಸಿಂಹ ಗೆಲುವಿಗೆ ಎಸ್‍ಡಿಪಿಐ ಕಾರಣ: ಯುಟಿ ಖಾದರ್

    ಪ್ರತಾಪ್ ಸಿಂಹ ಗೆಲುವಿಗೆ ಎಸ್‍ಡಿಪಿಐ ಕಾರಣ: ಯುಟಿ ಖಾದರ್

    ಚಾಮರಾಜನಗರ: ಚುನಾವಣೆ ಸಂದರ್ಭದಲ್ಲಿ ಎಸ್‍ಡಿಪಿಐ ಮತ್ತು ಬಿಜೆಪಿ ಅವರು ಒಂದಾಗುತ್ತಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಹಳಷ್ಟು ಜನರ ಗೆಲುವಿಗೆ ಆ ಸಂಘನೆಗಳು ಕಾರಣ ಎಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಸ್‍ಡಿಪಿಐ, ಪಿಎಫ್‍ಐ, ಭಜರಂಗದಳ ಇವು ರಾಷ್ಟ್ರೀಯ ಸಂಘಟನೆಗಳು, ಈ ರಾಷ್ಟ್ರೀಯ ಸಂಘಟನೆಗಳನ್ನು ರಾಜ್ಯ ಸರ್ಕಾರ ನಿಷೇಧ ಮಾಡುವುದು ಹೇಗೆ ಸಾಧ್ಯ? ಆ ಸಂಘಟನೆಗಳನ್ನ ರಾಜ್ಯ ಸರ್ಕಾರ ಬ್ಯಾನ್ ಮಾಡಿ ಎಂದು ಹೇಳುತ್ತಾ ಜನರನ್ನು ಬಿಜೆಪಿ ನಾಯಕರು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ದೇಶದ್ರೋಹಿ, ಕೊಲೆಮಾಡುವಂತ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲಿ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಆ ಸಂಘಟನೆಗಳನ್ನು ಬ್ಯಾನ್ ಮಾಡಲು ಧೈರ್ಯ ಇಲ್ಲ. ಈಗ ಬಿಜೆಪಿಯವರೇ ಆ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಚುನಾವಣೆ ವೇಳೆ ಅವರನ್ನು ನಮ್ಮ ವಿರುದ್ಧ ಎತ್ತಿಕಟ್ಟಿ ನಿಲ್ಲಿಸುತ್ತಾರೆ. ಇಲ್ಲಿರುವ ಬಿಜೆಪಿ ಸಂಘಟನೆಗಳು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಕರ್ತವ್ಯ ನಮ್ಮದು ಎಂದು ಹೇಳುವ ಮೂಲಕ ಸರ್ಕಾರದ ನಡೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.

    ಬೈಕ್ ರ‍್ಯಾಲಿ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಅನುಮತಿ ನೀಡಿರಲಿಲ್ಲ. ಮಂಗಳೂರಲ್ಲಿ ಅವರು ಪ್ರತಿಭಟನೆ ಮಾಡಿಕೊಳ್ಳಲಿ. ಪ್ರತಿಭಟನೆ ಮಾಡುವುದರ ಮೂಲಕ ಜಿಲ್ಲೆಯನ್ನು ಇಬ್ಬಾಗ ಮಾಡದಿರಲಿ ಎಂದು ಹೇಳಿದರು.

  • ಅಶ್ರಫ್ ಸಾಯ್ಸಿದ್ದು ಬಿಜೆಪಿ, ಶರತ್ ಕೊಂದಿದ್ದು ಪಿಎಫ್‍ಐ: ಮತ್ತೆ ಬೆಂಕಿ ಹಚ್ಚಿದ ರೈ

    ಅಶ್ರಫ್ ಸಾಯ್ಸಿದ್ದು ಬಿಜೆಪಿ, ಶರತ್ ಕೊಂದಿದ್ದು ಪಿಎಫ್‍ಐ: ಮತ್ತೆ ಬೆಂಕಿ ಹಚ್ಚಿದ ರೈ

    ಬೆಂಗಳೂರು: ರಾಜ್ಯದಲ್ಲಿ ಜನರ ಹತ್ಯೆಗಳನ್ನು ಮಾಡುವುದು ಎರಡೇ ಪಕ್ಷಗಳು ಅಂತ ಹೇಳುವ ಮೂಲಕ ತಣ್ಣಗಾಗಿರೋ ಕರಾವಳಿಯಲ್ಲಿ ಮತ್ತೆ ಬೆಂಕಿ ಹಚ್ಚುವ ಕೆಲಸಕ್ಕೆ ಅರಣ್ಯ ಸಚಿವ ರಮಾನಾಥ ರೈ ಕೈ ಹಾಕಿದ್ದಾರೆ.

    ಎಸ್‍ಡಿಪಿಐ-ಪಿಎಫ್‍ಐ ಮತ್ತು ಬಿಜೆಪಿ ಕೊಲೆಯ ರಾಜಕಾರಣ ಮಾಡುತ್ತಿದೆ. ಅಶ್ರಫ್‍ನನ್ನು ಬಿಜೆಪಿಯೇ ಕೊಲೆ ಮಾಡಿದೆ. ಅದಕ್ಕೆ ಶರತ್‍ನನ್ನು ಎಸ್‍ಡಿಪಿಐ-ಪಿಎಫ್‍ಐ ಕೊಲೆ ಮಾಡಿದೆ ಅಂತ ಹೇಳಿದ್ದಾರೆ.

    ಈ ಎರಡು ಮತೀಯ ಶಕ್ತಿಗಳು ಕೊಲೆ ರಾಜಕಾರಣ ಮಾಡುತ್ತಿವೆ. ಈ ಮಧ್ಯೆ ನನ್ನ ಬಳಿ ರಾಜೀನಾಮೆ ಕೇಳ್ತಿದ್ದಾರೆ ಅಂತ ಅವರು ಹೇಳಿದರು.

    ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    ಇದನ್ನೂ ಓದಿ: ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

  • ಬಂಟ್ವಾಳದ ಬೆಂಜನಪದವಿನಲ್ಲಿ ಎಸ್‍ಡಿಪಿಐ ವಲಯ ಅಧ್ಯಕ್ಷನ ಬರ್ಬರ ಹತ್ಯೆ

    ಬಂಟ್ವಾಳದ ಬೆಂಜನಪದವಿನಲ್ಲಿ ಎಸ್‍ಡಿಪಿಐ ವಲಯ ಅಧ್ಯಕ್ಷನ ಬರ್ಬರ ಹತ್ಯೆ

    ಮಂಗಳೂರು: ಎಸ್‍ಡಿಪಿಐ ವಲಯ ಅಧ್ಯಕ್ಷನನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

    ಪೊಳಲಿ ಸಮೀಪದ ಅಮ್ಮುಂಜೆ ನಿವಾಸಿ ಅಶ್ರಫ್ (30) ಕೊಲೆಯಾದ ವ್ಯಕ್ತಿ. ಮಂಗಳೂರು ಜಿಲ್ಲೆ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಈ ಘಟನೆ ನಡೆದಿದೆ. ಬೈಕಿನಲ್ಲಿ ಬಂದ ಮುಸುಕುಧಾರಿಗಳು ಆಟೋ ತಡೆದು ಅಶ್ರಫ್‍ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

    ಅಶ್ರಫ್ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಹಳೇ ವೈಷಮ್ಯದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಹಿನ್ನೆಲೆಯಲ್ಲಿ ಬಂಟ್ವಾಳ ಹಾಗೂ ಕಲ್ಲಡ್ಕದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಅಂಗಡಿ-ಮುಂಗಟ್ಟಿಗಳನ್ನ ಮುಚ್ಚಿಸುತ್ತಿದ್ದಾರೆ.

    ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.