Tag: SDPI leader

  • ರಂಜಾನ್ ವೇಳೆ ಸಂಘ ಪರಿವಾರದ ವಿರುದ್ಧ ವಿವಾದಿತ ಪೋಸ್ಟರ್ ಪ್ರದರ್ಶನ – ಎಸ್‌ಡಿಪಿಐ ಮುಖಂಡನ ಬಂಧನ

    ರಂಜಾನ್ ವೇಳೆ ಸಂಘ ಪರಿವಾರದ ವಿರುದ್ಧ ವಿವಾದಿತ ಪೋಸ್ಟರ್ ಪ್ರದರ್ಶನ – ಎಸ್‌ಡಿಪಿಐ ಮುಖಂಡನ ಬಂಧನ

    ಹುಬ್ಬಳ್ಳಿ: ರಂಜಾನ್ (Ramzan) ಪ್ರಾರ್ಥನೆ ವೇಳೆ ಸಂಘ ಪಾರಿವಾರದ ವಿರುದ್ಧ ಅವಹೇಳನಕಾರಿ ಪ್ಲೇ ಕಾರ್ಡ್ ಪ್ರದರ್ಶಿಸಿದ್ದ ಪ್ರಕರಣದಲ್ಲಿ ಎಸ್‌ಡಿಪಿಐ ಮುಖಂಡನನ್ನು (SDPI Leader) ಪೊಲೀಸರು ಬಂಧಿಸಿದ್ದಾರೆ.

    ಎಸ್‌ಡಿಪಿಐ ಮುಖಂಡ ಅಬ್ದುಲ್ ಗಪ್ಪುರ್ ಕುರಹಟ್ಟಿ ಬಂಧಿತ ಆರೋಪಿ. ಇದನ್ನೂ ಓದಿ: Hubballi | ರಂಜಾನ್ ಆಚರಣೆ ವೇಳೆ ಎಸ್‌ಡಿಪಿಐನಿಂದ ವಿವಾದಿತ ಪೋಸ್ಟರ್‌ಗಳ ಪ್ರದರ್ಶನ

    ಪ್ರಾರ್ಥನೆ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ಸಂಘ ಪರಿವಾರಗಳ ವಿರುದ್ಧ ಪ್ಲೇ ಕಾರ್ಡ್ ತೋರಿಸಿದ್ದರು. ಇದರಿಂದ ಆಕ್ರೋಶಗೊಂಡು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಮಹಿಳೆ ಅನುಮಾನಾಸ್ಪದ ಸಾವು – ಪತಿಯ ಅಕ್ರಮ ಸಂಬಂಧದಿಂದ ಕೊಲೆ ಆರೋಪ

    ದೂರಿನ ಅನ್ವಯ ಅಬ್ದುಲ್ ಗಪ್ಪುರ್ ಕುರಹಟ್ಟಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಅಬ್ದುಲ್ ಗಪ್ಪುರ್‌ನನ್ನು ಬಂಧಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಭೂಕಂಪವಾಗಿದ್ರೂ ಸೈಟ್ ಫೈಲ್ ಕದಿಯಲು ಯತ್ನಿಸಿದ ಚೀನಿಯರು – ನಾಲ್ವರು ಅರೆಸ್ಟ್

    ಪೊಲೀಸರು ಅಬ್ದುಲ್ ಗಪ್ಪುರ್ ಮೊಬೈಲ್ ಫೋನ್ ಸಹ ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

  • ಎಸ್‍ಡಿಪಿಐ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸರು

    ಎಸ್‍ಡಿಪಿಐ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸರು

    ಬೆಂಗಳೂರು: ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆ ಖಂಡಿಸಿ ನಗರದ ಪ್ರೀಡಂ ಪಾರ್ಕ್‍ನಲ್ಲಿ ಎಸ್‍ಡಿಪಿಐ ಸಂಘಟನೆಯ ಪ್ರತಿಭಟನೆಗೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

    police (1)

    ಇಂದು ಪ್ರತಿಭಟನೆ ಮಾಡಲು ಎಸ್‍ಡಿಪಿಐ ಸಂಘಟನೆ ಅಧ್ಯಕ್ಷ ಸಲೀಂ ಅನುಮತಿ ಕೇಳಿದ್ದರು. ದೇಶದಲ್ಲಾಗುತ್ತಿರೋ ಬೆಳವಣಿಗೆಯಿಂದ ಎಚ್ಚೆತ್ತ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಎನ್‍ಕೌಂಟರ್ – ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಓರ್ವ ಹತ್ಯೆ

    ಪ್ರತಿಭಟನೆಗೆ ಸೋಮವಾರದ ನಂತರ ಅನುಮತಿ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.

  • ಕೇರಳ ಕಾನೂನುಬಾಹಿರ ರಾಜ್ಯವಾಗಿ ಬದಲಾವಣೆ: ಜೆಪಿ ನಡ್ಡಾ

    ಕೇರಳ ಕಾನೂನುಬಾಹಿರ ರಾಜ್ಯವಾಗಿ ಬದಲಾವಣೆ: ಜೆಪಿ ನಡ್ಡಾ

    ನವದೆಹಲಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕಾನೂನು ಬಾಹಿರ ಕೆಲಸವನ್ನು ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕಿಡಿ ಕಾರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ನಾಯಕ ರಂಜಿತ್ ಶ್ರೀನಿವಾಸ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು. ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಡೆದ ಎಸ್‌ಡಿಪಿಐ ಹಾಗೂ ಬಿಜೆಪಿ ನಾಯಕರ ಹತ್ಯೆಗಳು ಇಡೀ ರಾಜ್ಯವನ್ನೆ ಬೆಚ್ಚಿ ಬಿಳಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಲಪ್ಪುಳದಲ್ಲಿ SDPI ನಾಯಕ, ಬಿಜೆಪಿ ಮುಖಂಡನ ಹತ್ಯೆ – ಸೆಕ್ಷನ್ 144 ಜಾರಿ

    ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರನ್ನು ಬರ್ಬರವಾಗಿ ಹತ್ಯೆಗೈದಿರುವುದು ಖಂಡನೀಯ. ಇಂತಹ ಹೇಡಿತನದ ಕೃತ್ಯಗಳನ್ನು ಬಿಜೆಪಿ ಸಹಿಸಲು ಸಾಧ್ಯವಿಲ್ಲ. ಸಿಎಂ ಅವರ ನೇತೃತ್ವದಲ್ಲಿ ಕೇರಳ ಕಾನೂನುಬಾಹಿರ ರಾಜ್ಯವಾಗಿ ಬದಲಾಗುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಹತ್ಯೆಯನ್ನು ಖಂಡಿಸಿದ ಅವರು ಸರ್ಕಾರ ಸೂಕ್ತ ಕ್ರಮ ಕೈಗೊಂಡು, ತನಿಖೆ ನಡೆಸಲು ಒತ್ತಾಯಿಸಿದರು.

  • ಅಲಪ್ಪುಳದಲ್ಲಿ SDPI ನಾಯಕ, ಬಿಜೆಪಿ ಮುಖಂಡನ ಹತ್ಯೆ – ಸೆಕ್ಷನ್ 144 ಜಾರಿ

    ಅಲಪ್ಪುಳದಲ್ಲಿ SDPI ನಾಯಕ, ಬಿಜೆಪಿ ಮುಖಂಡನ ಹತ್ಯೆ – ಸೆಕ್ಷನ್ 144 ಜಾರಿ

    ತಿರುವನಂತಪುರಂ: ಬಿಜೆಪಿ ಮುಖಂಡ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ನಾಯಕರ ಹತ್ಯೆ ಪ್ರಕರಣದ ಹಿನ್ನೆಲೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

    ಭಾನುವಾರ ಬೆಳಗ್ಗೆ ಬಿಜೆಪಿಯ ಮೋರ್ಚಾ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ನುಗ್ಗಿದ ಗ್ಯಾಂಗ್ ಅವರ ಕತ್ತು ಸೀಳಿ ಕೊಂದಿದ್ದಾರೆ.

    ಶನಿವಾರ ಕೇರಳದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆಎಸ್ ಶಾನ್ ಅವರ ಮೇಲೆ ಕೇರಳದ ಕೊಚ್ಚಿಯಲ್ಲಿ ಅಪರಿಚಿತ ಗ್ಯಾಂಗ್‍ವೊಂದು ದಾಳಿ ನಡೆಸಿತ್ತು. ಇದಾದ ಒಂದು ದಿನದ ನಂತರ ಭಾನುವಾರ ಬೆಳಗ್ಗೆ ರಂಜಿತ್ ಶ್ರೀನಿವಾಸನ್ ಅವರ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: SDPI ನಾಯಕನ ಹತ್ಯೆ ನಂತ್ರ ಬಿಜೆಪಿ ಮುಖಂಡನ ಕತ್ತು ಸೀಳಿ ಕೊಂದ್ರು

    ಕೆ.ಎಸ್. ಶಾನ್ ಮನೆಗೆ ತೆರಳುತ್ತಿದ್ದ ವೇಳೆ ಅವರ ಬೈಕ್‍ಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಅವರಿಗೆ 40ಕ್ಕೂ ಹೆಚ್ಚು ಗಾಯಗಳಾಗಿತ್ತು. ಹೀಗಾಗಿ ಅವರನ್ನು ಕೊಚ್ಚಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

    ಈ ಘಟನೆ ಕುರಿತಂತೆ ಎಸ್‍ಡಿಪಿಐ ಅಧ್ಯಕ್ಷ ಎಂ.ಕೆ.ಫೈಝಿ ಅವರು, ಕೆ.ಎಸ್.ಶಾನ್ ರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

    ಇದೀಗ ಈ ಭೀಕರ ಹತ್ಯೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಂಡಿಸಿದ್ದಾರೆ. ದಾಳಿಯ ಹಿಂದಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಲಿದ್ದಾರೆ. ಇಂತಹ ಸಂಕುಚಿತ ಮತ್ತು ಅಮಾನವೀಯ ಕೃತ್ಯಗಳು ರಾಜ್ಯಕ್ಕೆ ಹಾನಿಕಾರಕವಾಗಿದೆ. ಕೊಲೆ ಮಾಡುವವರ ಗುಂಪುನ್ನು ಮತ್ತು ದ್ವೇಷ ತುಂಬಿಸಿಕೊಂಡಿರುವವರನ್ನು ಪ್ರತ್ಯೇಕಿಸಿ ನಾಗರಿಕ ಸಮಾಜದಿಂದ ದೂರ ಇಡಬೇಕು ಎಂದು ಕಿಡಿಕಾರಿದ್ದಾರೆ.

  • ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್

    ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್

    ಬೆಂಗಳೂರು: ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾ ಎಸ್‍ಡಿಪಿಐ (Social Democratic Party of India) ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

    ಎಸ್‍ಡಿಪಿಐ ಮುಖಂಡ ಮುಜಾಮಿಲ್ ಪಾಷಾನನ್ನು ಡಿಜೆ ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಮುಜಾಮಿಲ್ ಪಾಷಾ ಎ-1 ಆರೋಪಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

    ಮಂಗಳವಾರ ರಾತ್ರಿ ಕೆಜಿ ಹಳ್ಳಿಯಲ್ಲಿ ದಾಂಧಲೆ ಮಾಡುತ್ತಿದ್ದ ಗಲಭೆಕೋರರ ಜೊತೆ ಮುಜಾಮಿಲ್ ಪಾಷಾ ಇದ್ದನು. ಅಲ್ಲದೇ ಗಲಭೆ ನಡೆಯುತ್ತಿದ್ದಾಗ ಮೈಕ್ ಹಿಡಿದುಕೊಂಡು ಗಲಭೆಗೋರರ ಜೊತೆ ಮಾತನಾಡಿದ್ದನು. ಹೀಗಾಗಿ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಿ ಡಿಜೆ ಪೊಲೀಸರು ಮುಜಾಮಿಲ್ ಪಾಷಾನನ್ನು ಬಂಧಿಸಿದ್ದಾರೆ.

    ಮುಜಾಮಿಲ್ ಪಾಷಾನ ವಿರುದ್ಧ ಈಗಾಗಲೇ ಡಿಜೆ ಹಳ್ಳಿ ಠಾಣೆಯಲ್ಲಿ ಐದು ಕೇಸ್ ದಾಖಲಾಗಿವೆ. ಗುಂಪು ಕಟ್ಟಿಕೊಂಡು ಹಲ್ಲೆ ಮತ್ತು ಪ್ರಚೋದಾನಾತ್ಮಕ ಹೇಳಿಕೆ ಪ್ರಕರಣ ದಾಖಲಾಗಿವೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.