Tag: SDMC

  • ಶಾಲೆ ಆರಂಭ ಯಾವಾಗ – ಪೋಷಕರ ಅಭಿಪ್ರಾಯ ಏನು? ತಜ್ಞರ ಸಲಹೆ ಏನು?

    ಶಾಲೆ ಆರಂಭ ಯಾವಾಗ – ಪೋಷಕರ ಅಭಿಪ್ರಾಯ ಏನು? ತಜ್ಞರ ಸಲಹೆ ಏನು?

    ಬೆಂಗಳೂರು: ಕೊರೊನಾ ಕಾಲದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಕು ಬೇಡ ಎಂಬ ಚರ್ಚೆಗಳ ನಡುವೆಯೇ ಶಾಲೆಗಳನ್ನು ಯಾವಾಗ ಶುರು ಮಾಡಬೇಕು ಎಂಬ ಕುರಿತೂ ಚರ್ಚೆಗಳು ನಡೆಯುತ್ತಿವೆ. ಆಗಸ್ಟ್ 15ರ ಬಳಿಕ ಹಂತ ಹಂತವಾಗಿ ಶುರು ಮಾಡಲು  ಚಿಂತನೆ ನಡೆದಿದೆ.

    ಮೊದಲು ಪ್ರೌಢ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಶಾಲೆ ಮತ್ತು ಎಲ್‍ಕೆಜಿ-ಯುಕೆಜಿ ಮಕ್ಕಳಿಗೆ ಶಾಲೆ ಆರಂಭಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಇಂದಿನಿಂದ ಜೂನ್ 20ರವರೆಗೆ ಪೋಷಕರ ಅಭಿಪ್ರಾಯ ಸಂಗ್ರಹ ಕಾರ್ಯ ಆರಂಭವಾಗಿದೆ.

    ಎಲ್ಲಾ ಶಾಲೆಗಳು ಎಸ್‍ಡಿಎಂಸಿ ಸದಸ್ಯರ ಸಮ್ಮುಖದಲ್ಲಿ ಪೋಷಕರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿವೆ. ಮೊದಲ ದಿನವಾದ ಇಂದು ಹಲವು ಶಾಲೆಗಳಲ್ಲಿ ಅಭಿಪ್ರಾಯ ಸಂಗ್ರಹ ಕಾರ್ಯ ನಡೆದಿದ್ದು, ಅಲ್ಲಿ ವ್ಯಕ್ತವಾದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

    ಪೋಷಕರ ಅಭಿಪ್ರಾಯ ಏನು?
    – ಶಾಲೆಗಳ ಆರಂಭಕ್ಕೆ ಅವಸರದ, ಗೊಂದಲದ ನಿರ್ಧಾರ ಸರಿಯಲ್ಲ
    – ಶಾಲೆಗಳು 2-3 ತಿಂಗಳು ತಡವಾಗಿ ಆರಂಭವಾದರೆ ಜಗತ್ತು ಮುಳುಗಲ್ಲ
    – ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರ್ಕಾರ ಯೋಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕು


    – ತಕ್ಷಣಕ್ಕೆ ಶಾಲೆಗಳ ಪ್ರಾರಂಭ ಬೇಡ – ಬಹುತೇಕ ಪೋಷಕರ ಮಾತು
    – ಕೊರೊನಾ ಕಡಿಮೆ ಆಗೋವರೆಗೂ ಶಾಲೆಗಳ ಪ್ರಾರಂಭ ಬೇಡ.
    – ಮಾದರಿ 1 – ಸಾಮಾಜಿಕ ಅಂತರದೊಂದಿಗೆ ಶಾಲೆ ಆರಂಭಕ್ಕೆ ವಿರೋಧ
    – ಮಾದರಿ 2 -ಪಾಳಿಯ ಲೆಕ್ಕದಲ್ಲಿ ಬೇಕಿದ್ರೆ ತರಗತಿ ಪ್ರಾರಂಭಕ್ಕೆ ಒಲವು (ಕೊರೋನಾ ಕಂಟ್ರೋಲ್ ನಂತರ)
    – ಮಾದರಿ 3 – ದಿನ ಬಿಟ್ಟು ದಿನ ತರಗತಿ ಮಾಡೋ ವ್ಯವಸ್ಥೆಗೆ ಒಲವು (ಕೊರೋನಾ ಕಂಟ್ರೋಲ್ ನಂತರ)

    ತಜ್ಞರ ಸಲಹೆ ಏನು?
    – ತಡವಾಗಿ ಶಾಲೆ ಆರಂಭಿಸಿದ್ರೂ ವಿಳಂಬ ಸರಿದೂಗಿಸಲು ಹಲವು ಮಾರ್ಗ
    – ಶೈಕ್ಷಣಿಕ ವರ್ಷದ ಪಠ್ಯ ಸರಿದೂಗಿಸಲು ಹಲವು ಮಾರ್ಗ
    – ತಿಂಗಳಲ್ಲಿ ಒಂದು ಶನಿವಾರ ಬಿಟ್ಟು ಉಳಿದ ಎಲ್ಲ ಶನಿವಾರ ಪೂರ್ಣಾವಧಿ ಶಾಲೆ ನಡೆಸಿ
    – ಎಲ್ಲಾ ವಿಧದ ಜಯಂತಿಗಳಂದು ರಜೆ, ಅಕ್ಟೋಬರ್ ರಜೆ ರದ್ದುಪಡಿಸಿ
    – ಸಿಲೆಬಸ್ ಪಠ್ಯಗಳನ್ನು ಅರ್ಧಕ್ಕೆ ಇಳಿಸಿ (20 ಚಾಪ್ಟರ್ ಇದ್ದರೇ ಅದನ್ನು 10ಕ್ಕೆ ಇಳಿಸಿ)
    – ಹೆಚ್ಚುವರಿ 1 ಗಂಟೆ, ವಿಶೇಷ ತರಗತಿ ಆಯೋಜಿಸಿ
    – ಶೈಕ್ಷಣಿಕ ವರ್ಷವನ್ನು ಮಾರ್ಚ್, ಏಪ್ರಿಲ್ ಬದಲು ಮೇ ಮಧ್ಯದವರೆಗೆ ಮುಂದುವರಿಸಿ

  • ನೇಣು ಬಿಗಿದುಕೊಂಡು ಶಿಕ್ಷಕಿ ಆತ್ಮಹತ್ಯೆ

    ನೇಣು ಬಿಗಿದುಕೊಂಡು ಶಿಕ್ಷಕಿ ಆತ್ಮಹತ್ಯೆ

    ಚಿತ್ರದುರ್ಗ: ಎಸ್‍ಡಿಎಂಸಿ ಸದಸ್ಯ ಹಾಗೂ ಸಹ-ಶಿಕ್ಷಕರ ಕಿರುಕುಳ ಆರೋಪದಿಂದ ಮನನೊಂದ ಶಿಕ್ಷಕಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದ ಅಕ್ಕಮಹಾದೇವಿ ಬಡಾವಣೆಯಲ್ಲಿ ನಡೆದಿದೆ.

    ದೇವಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯಶಿಕ್ಷಕಿ ತಿಪ್ಪೀರಮ್ಮ(46) ನೇಣಿಗೆ ಶರಣಾದ ದುರ್ದೈವಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ವಿತರಿಸುವ ಶೂ ಖರೀದಿಯಲ್ಲಿ ತಿಪ್ಪೀರಮ್ಮ ಅವ್ಯವಹಾರ ಎಸಗಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ಕುರಿತು ಇಲಾಖಾ ಅಧಿಕಾರಿಗಳು ತನಿಖೆಯನ್ನು ನಡೆಸಿದ್ದರು. ತನಿಖೆ ಬಳಿಕ ಮುಖ್ಯಶಿಕ್ಷಕಿ ತಿಪ್ಪಿರಮ್ಮರನ್ನು ಚನ್ನಮ್ಮನ ಹಳ್ಳಿ ಶಾಲೆಗೆ ವರ್ಗಾವಣೆ ಮಾಡಿದ್ದರು. ಇದರಿಂದ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

    ಎಸ್‍ಡಿಎಂಸಿ ಸದಸ್ಯ ಲಿಂಗಪ್ಪ, ಸಹಶಿಕ್ಷಕಿ ಸವಿತಾ, ಶಾಂತಮ್ಮ ಹಾಗೂ ಸಹಶಿಕ್ಷಕ ರಮೇಶ್ ಪ್ರತಿನಿತ್ಯ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬದ ಸದಸ್ಯರೊಂದಿಗೆ ತಿಪ್ಪೀರಮ್ಮ ಅಳಲು ತೋಡಿಕೊಂಡಿದ್ದರು ಎಂದು ತಿಳಿದುಬಂದಿದೆ.

    ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.