Tag: SDM College

  • ಎಸ್‌ಡಿಎಂ ಲಾ ಕಾಲೇಜಿನ ಸುವರ್ಣ ಪಥ ಕಾನೂನು ಶಿಕ್ಷಣದ ವಿಕಸನಕ್ಕೆ ಹಿಡಿದ ಕೈಗನ್ನಡಿ :  ಅಟಾರ್ನಿ ಜನರಲ್ ಡಾ. ವೆಂಕಟ್ರಮಣಿ

    ಎಸ್‌ಡಿಎಂ ಲಾ ಕಾಲೇಜಿನ ಸುವರ್ಣ ಪಥ ಕಾನೂನು ಶಿಕ್ಷಣದ ವಿಕಸನಕ್ಕೆ ಹಿಡಿದ ಕೈಗನ್ನಡಿ : ಅಟಾರ್ನಿ ಜನರಲ್ ಡಾ. ವೆಂಕಟ್ರಮಣಿ

    ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ (SDM Law College) ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ದಿ. 15 ರಂದು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಪೂರ್ವ ವಿದ್ಯಾರ್ಥಿ ಪುನರ್ ಮಿಲನ ಕಾರ್ಯಕ್ರಮ ನಡೆಯಿತು.

    ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರ (Veerendra Heggade) ಘನ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಅಟಾರ್ನಿ ಜನರಲ್ ಡಾ. ಆರ್ ವೆಂಕಟ್ರಮಣಿ (R. Venkataramani) ಪ್ರದಾನ ಭಾಷಣ ಮಾಡಿದರು.

    ಭಾರತದ ಅಟಾರ್ನಿ ಜನರಲ್ ಡಾ. ವೆಂಕಟ್ರಮಣಿ ಮಾತನಾಡಿ, ಎಸ್‌ಡಿಎಂ ಕಾನೂನು ಕಾಲೇಜಿನ 50 ವರ್ಷಗಳ ಆಚರಣೆಯ ಭಾಗವಾಗಿರುವುದು ಸಂತಸ ತಂದಿದೆ. ಅಚಲ ವಿಶ್ವಾಸದಿಂದ, ಈ ಸಂಸ್ಥೆಯು ಒಂದು ಶತಮಾನವನ್ನು ಮೀರಿ ಬೆಳೆದಿದೆ, ಅಭಿವೃದ್ಧಿ ಹೊಂದಿದೆ. ಸುವರ್ಣ ಪಥ ಕಾರ್ಯಕ್ರಮ ಕಾನೂನು ಶಿಕ್ಷಣದ ವಿಕಸನಕ್ಕೆ ಹಿಡಿದ ಕೈಗನ್ನಡಿ. ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ಮಾರ್ಗದರ್ಶನ ನೀಡಿದ ಪ್ರಾಧ್ಯಾಪಕರಿಗೆ ಹೃತ್ಪೂರ್ವಕ ವಂದನೆ ಸಲ್ಲಿಸಿದರು.

    ಏಷ್ಯಾದಲ್ಲಿ ಕಾನೂನು ಶಿಕ್ಷಣ ಗಮನಾರ್ಹವಾಗಿ ಬೆಳೆದಿದೆ. ಕಾನೂನು ಶಿಕ್ಷಣದ ವಿಕಸನದಲ್ಲಿ ಹೆಗ್ಗಡೆಯವರ ಪಾತ್ರ ಮಹತ್ತರವಾದದ್ದು. ಪೂಜ್ಯ ಹೆಗ್ಗಡೆಯವರ ದೂರದೃಷ್ಟಿತ್ವದಿಂದ ಸಾಮಾನ್ಯರಿಗೂ ಕಾನೂನು ಶಿಕ್ಷಣ ಪಡೆಯುವುದು ಸಾಧ್ಯವಾಗಿದೆ. ಎಸ್‌ಡಿಎಂ ಸಂಸ್ಥೆಯ ಗುಣಮಟ್ಟದ ಶಿಕ್ಷಣದಿಂದ ಅಸಂಖ್ಯಾತ ವಿದ್ಯಾರ್ಥಿಗಳು ಕಾನೂನು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಅನೇಕರನ್ನು ಪ್ರೇರೇಪಿಸುತ್ತಿದೆ ಎಂದರು.

    ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಪಠ್ಯ ಪುಸ್ತಕಗಳ ಕಲಿಕೆಯ ಜೊತೆಗೆ ಕ್ರೀಡೆ ಸೃಜನಾತ್ಮಕ ಕಲಿಕೆಗೂ ಒತ್ತುನಿಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬಹುದಾದ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ ಎಂದು ವೀರೇಂದ್ರ ಹೆಗ್ಗಡೆ ನುಡಿದರು.  ಇದನ್ನೂ ಓದಿ: Waqf: 150 ಕೋಟಿ ಆಫರ್| ವಿಜಯೇಂದ್ರ ಮೇಲಿನ ಸಿದ್ದರಾಮಯ್ಯ ಆರೋಪ ಸುಳ್ಳು: ಅನ್ವರ್ ಮಾಣಿಪ್ಪಾಡಿ

    ಒಂದು ಕಾಲದಲ್ಲಿ ಕಡಿಮೆ ಕಿಮ್ಮತ್ತು ಹೊಂದಿದ್ದ ವಕೀಲ ವೃತ್ತಿ ಇಂದು ಅತ್ಯಂತ ಗೌರವಾನ್ವಿತ ಹುದ್ದೆಗಳಲ್ಲಿ ಒಂದಾಗಿದೆ ಎಂದ ಅವರು ಎಸ್‌ಡಿಎಂ ಕಾನೂನು ಕಾಲೇಜು ಆರಂಭಿಸಿದ ದಿನಗಳನ್ನು ಮೆಲುಕು ಹಾಕುತ್ತಾ, ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಹೆಚ್ಚಿದ್ದ ಸಂದರ್ಭದಲ್ಲಿ ಕಾನೂನು ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತು ಕಾನೂನು ಕಾಲೇಜು ಆರಂಭಿಸಿ ಇದೀಗ ಕಾಲೇಜು ಯಶಸ್ವಿ ಐವತ್ತು ವರ್ಷ ಪೂರೈಸಿದೆ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೆಲ್ಲ ಒಳ್ಳೆಯ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

    ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಾಹುಲ್ ಹಮೀದ್ ರೆಹಮಾನ್, ಕೇರಳದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆಂಟೋನಿ ಡೊಮಿನಿಕ್, ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾ. ಮೈಕೆಲ್ ಡಿ’ಕುನ್ಹಾ , ನಿವೃತ್ತ ಐಎಎಸ್ ಅಧಿಕಾರಿ ಶಾಮ್ ಭಟ್, ಸಿಂಬೋಸಿಸ್‌ ಕಾನೂನು ಶಾಲೆ ನಿರ್ದೇಶಕಿ ಡಾ ಶಶಿಕಲಾ ಗುರುಪುರ ಸೇರಿದಂತೆ ಪ್ರಮುಖ ಗಣ್ಯರು ಕಾನೂನು ದಿಗ್ಗಜರು,ಕಾಲೇಜಿನ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

     

  • ಅವಳಿ ಸಹೋದರಿಯರ ವಿಶೇಷ ಸಾಧನೆ – ಇಬ್ಬರಿಗೂ ಸಮಾನ ಅಂಕ

    ಅವಳಿ ಸಹೋದರಿಯರ ವಿಶೇಷ ಸಾಧನೆ – ಇಬ್ಬರಿಗೂ ಸಮಾನ ಅಂಕ

    ಮಂಗಳೂರು: ಅವಳಿ ಸಹೋದರಿಯರಿಬ್ಬರು (Twin Sisters) ಪಿಯುಸಿ (PUC) ಪರೀಕ್ಷೆಯಲ್ಲಿ ಸಮಾನವಾದ ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಲ್ಲದೇ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಗಂಡಿ (Belthangady) ತಾಲೂಕಿನ ನೆರಿಯ ಗ್ರಾಮದ ಅವಳಿ ಸಹೋದರಿಯರಾದ ಸ್ಪಂದನ ಮತ್ತು ಸ್ಪರ್ಶ ಪಿಯುಸಿ ಪರೀಕ್ಷೆಯಲ್ಲಿ 600ರಲ್ಲಿ 594 ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಉಜಿರೆಯ (Ujire) ಎಸ್‌ಡಿಎಂ  ಕಾಲೇಜಿನ (SDM College) ದ್ವಿತೀಯ ಪಿಯುಸಿ ವಾಣಿಜ್ಯ (Commerce) ವಿಭಾಗದ ವಿದ್ಯಾರ್ಥಿನಿಯರಾದ ಇವರು ಸಮಾನವಾಗಿ 594 ಅಂಕ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: ಪಿಯು ಪರೀಕ್ಷಾ ಫಲಿತಾಂಶ – ದಕ್ಷಿಣ ಕನ್ನಡ ಫಸ್ಟ್‌, ಉಡುಪಿ ಸೆಕೆಂಡ್‌ 

    ಸ್ಪಂದನ ಮತ್ತು ಸ್ಪರ್ಶ ಇಂಗ್ಲಿಷ್ (English) ಮತ್ತು ಅರ್ಥಶಾಸ್ತ್ರ (Economics) ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲಿ ಸಮಾನವಾದ ಅಂಕಗಳನ್ನು ಪಡೆದಿದ್ದಾರೆ. ಸ್ಪಂದನ ಇಂಗ್ಲಿಷ್‌ನಲ್ಲಿ 98 ಹಾಗೂ ಸ್ಪರ್ಶ 97 ಅಂಕಗಳನ್ನು ಪಡೆದಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ಪಂದನ 98 ಅಂಕಗಳನ್ನು ಪಡೆದಿದ್ದರೆ, ಸ್ಪರ್ಶ 99 ಅಂಕಗಳನ್ನು ಪಡೆದಿದ್ದಾರೆ. ಹಿಂದಿಯಲ್ಲಿ (Hindi) ಇಬ್ಬರೂ 98 ಅಂಕಗಳನ್ನು ಪಡೆದು ಉಳಿದೆಲ್ಲಾ ವಿಷಯಗಳಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: 2nd PUC Result: ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ

  • ರೋಗಿಗಳಿಗಾಗಿ ವ್ಹೀಲ್‍ಚೇರ್ ಸಂಶೋಧನೆ-ಯಾವ ಭಾಷೆಯಲ್ಲಿ ಹೇಳಿದ್ರೂ ಚಲಿಸುತ್ತೆ

    ರೋಗಿಗಳಿಗಾಗಿ ವ್ಹೀಲ್‍ಚೇರ್ ಸಂಶೋಧನೆ-ಯಾವ ಭಾಷೆಯಲ್ಲಿ ಹೇಳಿದ್ರೂ ಚಲಿಸುತ್ತೆ

    -ಧಾರವಾಡ ಎಸ್‍ಡಿಎಂ ಸ್ಟೂಡೆಂಟ್ಸ್ ಸಾಧನೆ

    ಧಾರವಾಡ: ಈ ಚೇರ್ ಲೆಫ್ಟ್ ಅಂದ್ರೆ ಎಡಕ್ಕೆ ಹೋಗುತ್ತೆ. ರೈಟ್ ಅಂದ್ರೆ ಬಲಕ್ಕೆ ಹೋಗುತ್ತೆ. ಹೋಗುವಾಗ್ಲೆ ನಿಲ್ಲು ಅಂದ್ರೆ ನಿಂತೇ ಬಿಡುತ್ತದೆ. ಹೌದು. ಧಾರವಾಡದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೋಗಿಗಳಿಗಾಗಿ ಈ ಹೊಸ ಮೂವಿಂಗ್ ಚೇರನ್ನ ತಯಾರಿಸಿದ್ದಾರೆ.

    ಧಾರವಾಡದ ಎಸ್‍ಡಿಎಂ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳು ಈ ಆವಿಷ್ಕಾರವನ್ನ ಮಾಡಿದ್ದಾರೆ. ಇದನ್ನ ವಿಶೇಷವಾಗಿ ವೃದ್ಧ ಹಾಗೂ ಅಂಗವಿಕಲರನ್ನ ಗಮನದಲ್ಲಿಟ್ಟುಕೊಂಡು ಆವಿಷ್ಕರಿಸಲಾಗಿದೆ. ಪುಷ್ಪಾ ಚೌಹಾಣ್, ಕಿರಣ್, ವೈಷ್ಣವಿ ಹಾಗೂ ಕೃತಿಕಾ ಎಂಬ ವಿದ್ಯಾರ್ಥಿನಿಯರ ಒಂದು ವರ್ಷದ ಪರಿಶ್ರಮದಿಂದ ಈ ಚೇರ್ ಅನ್ನು ತಯಾರಿಸಿದ್ದಾರೆ.

    ವಿಶೇಷತೆ: 12 ವ್ಯಾಟಿನ ಚಾರ್ಜೇಬಲ್ ಬ್ಯಾಟರಿ ಮೇಲೆ ಓಡಾಡುವ ಈ ವ್ಹೀಲ್‍ಚೇರ್, ಒಟ್ಟು 7 ಆಯಾಮಗಳ ಕಡೆ ಚಲಿಸುತ್ತದೆ. ಈ ಕುರ್ಚಿ ಮೆಮೊರಿಯಲ್ಲಿ ಒಟ್ಟು 80 ಜನರ ಧ್ವನಿಯನ್ನ ಮುದ್ರಿಸಿ ಇಡಬಹುದು. ವಿಶ್ವದ ಯಾವುದೇ ಭಾಷೆಯಲ್ಲಿ ಮೂಮೆಂಟ್ ಆಗಲು ಹೇಳಿದ್ರೂ ಇದು ಚಲಿಸುತ್ತೆ. ಭಾಷೆ ಬದಲಿಸಲು ಕೇವಲ 30 ಸೆಕೆಂಡು ಸಾಕು. 75 ಕೆಜಿ ತೂಕದ ಮನುಷ್ಯ ಇದರ ಮೇಲೆ ಕುಳಿತುಕೊಂಡು ಓಡಾಡಬಹುದು. ಈ ಮೂವಿಂಗ್ ಚೇರ್ ತಯಾರಿಸಲು 48 ಸಾವಿರ ರೂ. ಖರ್ಚಾಗಿದೆ.

    ಸತತ ಒಂದು ವರ್ಷಗಳ ಕಾಲ ಪ್ರಯತ್ನ ಪಟ್ಟು ವಿದ್ಯಾರ್ಥಿಗಳು ಮೂವಿಂಗ್ ವ್ಹೀಲ್ ಚೇರ್ ಆವಿಷ್ಕರಿಸಿದ್ದಾರೆ. ವಿದ್ಯಾರ್ಥಿನಿಗಳ ಈ ಆವಿಷ್ಕಾರಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕಿದ್ರೆ ವಿಶ್ವಖ್ಯಾತಿ ಪಡೆಯಬಹುದು.

    https://youtu.be/WZLElPCcUNs