Tag: Sculptor

  • ಕಲ್ಲಲ್ಲೂ ಕಲೆ ಅರಳಿಸುವ ಶಿಲ್ಪಕಲಾವಿದ ಲೋಕಣ್ಣ ಬಡಿಗೇರಗೆ ಬೇಕಿದೆ ನೆರವು!

    ಕಲ್ಲಲ್ಲೂ ಕಲೆ ಅರಳಿಸುವ ಶಿಲ್ಪಕಲಾವಿದ ಲೋಕಣ್ಣ ಬಡಿಗೇರಗೆ ಬೇಕಿದೆ ನೆರವು!

    ಬಾಗಲಕೋಟೆ: ಬೆಳ್ಳಂಬೆಳಗ್ಗೆ ಉಳಿ, ಚಾಣ, ಸುತ್ತಿಗೆ ಹಿಡಿದರೆ ಕಲ್ಲು ಮಣಿಸುವುದೇ ಅವರ ನಿತ್ಯದ ಕಾಯಕ. ಕಲ್ಲು ತಂದು ಅದಕ್ಕೊಂದು ರೂಪ ಕೊಟ್ಟು ಶಿಲ್ಪಗಳನ್ನು ತಯಾರಿಸುತ್ತಾರೆ. ಲಲಿತಕಲಾ ಸೇವೆಗೆ ನೀಡುವ ಯಾವುದೇ ಸವಲತ್ತು ಸಿಕ್ಕಿಲ್ಲವಾದರೂ ತಮ್ಮ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರು ಯಾರಿರಬಹುದು ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆಯಾ? ಅವರೇ ಬಾಗಲಕೋಟೆ (Bagalakote) ಜಿಲ್ಲೆ ಮುಧೋಳ ತಾಲೂಕಿನ ಲಕ್ಷಾನಟ್ಟಿ ಗ್ರಾಮದ ಲೋಕಣ್ಣ ಬಡಿಗೇರ (Lokanna Badigera).

    ಮೂರ್ತಿ ಕೆತ್ತನೆಗೆ ಆಸಕ್ತಿ, ತಾಳ್ಮೆ, ಏಕಾಗ್ರತೆ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆ ದಿನದ ಶ್ರಮ ಸಂಪೂರ್ಣ ವ್ಯರ್ಥ. ಆದರೂ ಕಲೆಯನ್ನೇ (Art) ನಂಬಿ ಜೀವನ ನಡೆಸುತ್ತಿದೆ ಲೋಕಣ್ಣ ಬಡಿಗೇರ ಕುಟುಂಬ. ತಾತ-ಮುತ್ತಾತಂದಿರ ಕಾಲದಿಂದಲೂ ಕಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಶಿಲ್ಪಕಲಾ ಕ್ಷೇತ್ರದಲ್ಲಿ ನೈಪುಣ್ಯ ಮೈಗೂಡಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತ ಕೊರೊನಾ ನಂತರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಲ್ಪಕಲಾ ಅಕಾಡೆಮಿಗಳಿಂದ ಸಹಾಯ ಕೋರಿದ್ದಾರೆ.

    ನೋಡುಗರ ಕಣ್ಣಿಗೆ ಬರೀ ಕಲ್ಲು ಕಂಡರೆ, ಶಿಲ್ಪಿಯ (Sculptor) ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಕೆತ್ತನೆ ಕಾರ್ಯವನ್ನು ಯಾವ ಹಂತದಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿ ಕಲ್ಲನ್ನು ಕೆತ್ತಿ ಸುಂದರ ಶಿಲ್ಪವನ್ನು ರೂಪಿಸುತ್ತಾರೆ.

    ದಿನಕ್ಕೆ 2 ತಾಸು ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತಾರೆ. 1 ಮೂರ್ತಿ ರೂಪುಗೊಳ್ಳಲು ಎರಡರಿಂದ ನಾಲ್ಕು ತಿಂಗಳು ಸಮಯ ಹಿಡಿಯುತ್ತದೆ. 2 ಇಂಚಿನ ಮೂರ್ತಿಯಿಂದ, 9 ಅಡಿ ಉದ್ದದ ಮೂರ್ತಿಯವರೆಗೂ ಶಿಲ್ಪ ಕೆತ್ತನೆ ಮಾಡುತ್ತಾರೆ.

    ಕಲಾವಿದ ಲೋಕಣ್ಣ ಬಡಿಗೇರ ಅವರ ಕಲಾಕುಸುರಿಯಿಂದ ಶಿವ, ಹನುಮಂತ, ತ್ರಯಂಬಕೇಶ್ವರಿ, ದುರ್ಗಾದೇವಿ, ವಾಲ್ಮೀಕಿ ಮೂರ್ತಿಗಳು, ಸಿದ್ಧಾರೊಢ, ಶಿವಾಜಿ, ವೀರಭದ್ರೇಶ್ವರ, ಗಣಪತಿ, ಬುದ್ಧ, ಬಸವ ಸೇರಿದಂತೆ ದೇವಸ್ಥಾನದ ದ್ವಾರಗಳು ಸಿದ್ಧಗೊಂಡಿವೆ. ಇವರ ಕೈಯಿಂದ ಅರಳಿದ ಕಲಾಕೃತಿಗಳು ಹೈದರಾಬಾದ್, ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಮಾರಾಟವಾಗಿವೆ. ಮುಂಗಡವಾಗಿ ಬೇಡಿಕೆ ಸಲ್ಲಿಸಿ ಜನರು ಮೂರ್ತಿಗಳನ್ನು ಕೆತ್ತಿಸಿಕೊಳ್ಳಬಹುದಾಗಿದೆ.

    ಈ ಬಗ್ಗೆ ಮಾತನಾಡಿರುವ ವಿಶ್ವಕರ್ಮ ಶಿಲ್ಪಕಲಾವಿದ ಲೋಕಣ್ಣ ಬಡಿಗೇರ, ತನಗೆ ಶಿಲ್ಪಕಲೆ ಬಿಟ್ಟು ನನಗೆ ಬೇರೆ ಗೊತ್ತಿಲ್ಲ. ಈ ಕಲೆಯೇ ಜೀವನಾಧಾರ. 20 ವರ್ಷಗಳಿಂದ ನಾನು ಶಿಲ್ಪಕಲೆ ಮತ್ತು ಕ್ಲೇ ಮೋಡ್ಲಿಂಗ್ (ಮಣ್ಣಿನ ಮೂರ್ತಿ) ಮಾಡುತ್ತಿದ್ದೇನೆ. ಈ ಶಿಲ್ಪಕಲೆ ನಮ್ಮ ಅಜ್ಜಿ ಮುತ್ತಜ್ಜನ ಕಾಲದಿಂದಲೂ ತಂದೆ ಮಾಡಿಕೊಂಡು ಬರುತ್ತಿದ್ದ ಕೆಲಸ ಮುಂದುವರಿಸಿಕೊಂಡು ಬಂದಿದ್ದೇವೆ. 20 ವರ್ಷದಲ್ಲಿ ಸಾವಿರಾರು ಮೂರ್ತಿ ಕೆತ್ತನೆ ಮಾಡುವುದರ ಮೂಲಕ ಜನಮನ ಗಳಿಸಿದ್ದೇನೆ. ಜನರು ಬಂದು ತಮ್ಮಿಷ್ಟದ ಮೂರ್ತಿ ಮಾಡಿಸಿಕೊಂಡು ಹೋಗ್ತಾರೆ. ಆದ್ರೆ, ಇಷ್ಟೇ ಹಣ ಕೊಡಬೇಕು ಎಂದು ಯಾರಿಗೂ ಒತ್ತಾಯಿಸುವುದಿಲ್ಲ. ಅವರು ನೀಡುವ ಹಣದಲ್ಲಿಯೇ ಸಂತೃಪ್ತ ಜೀವನ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ಆದರೀಗ ಕಲ್ಲಲ್ಲಿ ಕಲೆಯನ್ನು ಅರಳಿಸುವ‌ ಕಲಾವಿದನಿಗೆ ಸರ್ಕಾರದ ನೆರವು ಬೇಕಿದೆ. ಲೋಕಣ್ಣ ಬಡಿಗೇರ ಅವರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂಬುದು ಕಲಾಪ್ರಿಯರ ಒತ್ತಾಸೆ.

  • ರಾಮಮಂದಿರ ನಿರ್ಮಾಣದಲ್ಲಿ ಹನುಮನ ನಾಡಿನ ಶಿಲ್ಪಿ

    ರಾಮಮಂದಿರ ನಿರ್ಮಾಣದಲ್ಲಿ ಹನುಮನ ನಾಡಿನ ಶಿಲ್ಪಿ

    ಕೊಪ್ಪಳ: ಶ್ರೀರಾಮಚಂದ್ರನ ಜನ್ಮ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮಚಂದ್ರನ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ರಾಮನ ಭಕ್ತನಾಗಿರುವ ಹನುಮನ ನಾಡಿನಿಂದ ಶಿಲ್ಪಿ ಓರ್ವ ಹೋಗುವ ಮೂಲಕ ದೇವಸ್ಥಾನ ನಿರ್ಮಾಣದ ಕೆತ್ತನೆಯ ಕೆಲಸದಲ್ಲಿ ನಿರತರಾಗಿ ವಾಪಸ್ಸು ಬಂದಿದ್ದಾರೆ.

    ಕೊಪ್ಪಳದ (Koppal) ಗಂಗಾವತಿ (Gangavati) ನಗರದ 24ನೇ ವಾರ್ಡಿನ ಲಕ್ಷ್ಮಿಕ್ಯಾಂಪ್ ನಿವಾಸಿಯಾಗಿರುವ ಶಿಲ್ಪಿ ಪ್ರಶಾಂತ್ ಸೋನಾರ್ ಎನ್ನುವವರು ಸರಿಸುಮಾರು 45 ದಿನಗಳ ಕಾಲ ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ ನಿರ್ಮಾಣ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಚಿತ್ರಗಳನ್ನು ಬಿಡಿಸುವ, ಶಿಲ್ಪಗಳನ್ನು ಕೆತ್ತುವ ಆಸಕ್ತಿಯನ್ನು ಹೊಂದಿದ್ದ ಪ್ರಶಾಂತ್ ಅವರು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನಡೆಯುವ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಆಸಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ನಂತರ ಚೆನ್ನಪಟ್ಟಣ ತಾಲೂಕಿನ ಕೆಂಗಲ್ ಗ್ರಾಮದ ಶ್ರೀಗಂಗರಸ ಶಿಲ್ಪಕಲಾ ಶಿಕ್ಷಣ ಕೇಂದ್ರದಲ್ಲಿ ಸುಮಾರು 5 ವರ್ಷಗಳ ಕಾಲ ಶಿಲ್ಪಕಲೆಯ ಕುರಿತು ಶಿಕ್ಷಣ ಪಡೆದುಕೊಂಡು, ಸುಮಾರು ಕಡೆಗಳಲ್ಲಿ ಶಿಲ್ಪ ಕಲೆಗಳ, ದೇವರ ಮೂರ್ತಿಗಳ ಕೆತ್ತನೆಯ ಕೆಲಸ ಮಾಡಿ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ, ಧಾರವಾಡದ ಮುಖ್ಯಶಿಲ್ಪಿಯಾಗಿರುವ ರವೀಂದ್ರ ಆಚಾರ್ ಅವರ ಸಂದೇಶದ ಮೇರೆಗೆ ಕರ್ನಾಟಕದಿಂದ 4 ಜನ ಶಿಲ್ಪಿಗಳು ಅಯೋಧ್ಯೆಯನ್ನು ತಲುಪಿದ್ದರು. ಅದರಲ್ಲಿ ಪ್ರಶಾಂತ್ ಸೋನಾರ್ ಕೂಡ ಒಬ್ಬರಾಗಿದ್ದಾರೆ. ಇವರನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಸಂವಿಧಾನದ ಮೂಲಭೂತ ಹಕ್ಕುಗಳ ಭಾಗದಲ್ಲಿ ಶ್ರೀರಾಮ-ಲಕ್ಷ್ಮಣ, ಸೀತಾದೇವಿಯ ಚಿತ್ರಗಳಿವೆ: ಜಗದೀಪ್‌ ಧನಕರ್‌

     

    ಮಂದಿರ ಗರ್ಭ ಗುಡಿಯಲ್ಲಿ ಕೆಲಸ: ರಾಜ್ಯದಲ್ಲಿ ಅಯೋಧ್ಯೆಗೆ ಹೋಗಿರುವ 4 ಜನ ಶಿಲ್ಪಿಗಳಲ್ಲಿ ಪ್ರಶಾಂತ್ ಸೋನಾರ್ ಅವರಿಗೆ ರಾಮಮಂದಿರದ ಗರ್ಭ ಗುಡಿಯಲ್ಲಿ ಕೆತ್ತನೆ ಮಾಡುವ ಕೆಲಸ ನೀಡಲಾಗಿತ್ತು. ಸುಮಾರು 45 ದಿನಗಳ ಕಾಲ ರಾಮಮಂದಿರ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದೇವಸ್ಥಾನದ ಗರ್ಭಗುಡಿ ಬಳಿಯ ಕಂಬಗಳಲ್ಲಿ ಬಳ್ಳಿ ಕೆತ್ತನೆ, ಕಂಬಗಳಲ್ಲಿ ವಿಗ್ರಹಗಳ ಕೆತ್ತನೆ ಕೆಲಸವನ್ನು ಮಾಡಲಾಗಿದೆ. ಇವರಿಗೆ ನೀಡಿದ ಕೆಲಸ ಪೂರ್ಣಗೊಳಿಸಿ, ವಾಪಸ್ಸು ಬಂದಿದ್ದು, ದೇವಸ್ಥಾನ ಉದ್ಘಾಟನೆಯ ನಂತರವೂ ಸಹ ಇನ್ನೂ ದೇವಸ್ಥಾನ ಕೆಲಸ ನಡೆಯಲಿದೆ. ಮತ್ತೆ ಆಹ್ವಾನ ಬಂದರೆ ಮತ್ತೆ ಹೋಗಿ ಶ್ರೀರಾಮಚಂದ್ರನ ಸೇವೆಯನ್ನು ಮಾಡುವೆ ಎನ್ನುವ ಆಶಯವನ್ನು ಪ್ರಶಾಂತ್ ಸೋನಾರ್ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಆಹ್ವಾನ

    ಫುಲ್ ಟೈಟ್ ಸೆಕ್ಯೂರಿಟಿ:
    ಅಯೋಧ್ಯೆಯ ರಾಮಮಂದಿರದಲ್ಲಿನ ಹೊರಾಂಗಣದ ಸ್ತಂಭ, ಶಿಲಾ ಕೃತಿಗಳ ಕೆತ್ತನೆ ಕಾರ್ಯದಲ್ಲಿ ಸುಮಾರು 45 ದಿನಗಳನ್ನು ಕಳೆದಿರುವ ಗಂಗಾವತಿಯ ಶಿಲ್ಪ ಕಲಾವಿದ ಪ್ರಶಾಂತ್ ಸೋನಾರ್ ಅದೊಂದು ಅದ್ಭುತ ಅನುಭವ ಎಂದು ಹೇಳಿಕೊಳ್ಳುತ್ತಾರೆ. ಬೆಳಗ್ಗೆ ಎಂಟು ಗಂಟೆಗೆ ಶುರುವಾಗುತ್ತಿದ್ದ ಕೆಲಸ, ಸಂಜೆ ಆರು ಗಂಟೆಗೆ ಮುಗಿಯುತ್ತಿತ್ತು. ಅತ್ಯಂತ ಟೈಟ್ ಸೆಕ್ಯೂರಿಟಿಯಲ್ಲಿ ನಾವು ಕೆಲಸ ಮಾಡಬೇಕಿತ್ತು. ಮುಖ್ಯವಾಗಿ ನಮಗೆ ಕೊಟ್ಟ ಕೆಲಸವಷ್ಟೆ ಮಾಡಬೇಕಿತ್ತು. ನಮ್ಮ ತಂಡದ ಸದಸ್ಯರನ್ನು ಹೊರತು ಪಡಿಸಿದರೆ ಬೇರೆ ಗುಂಪಿನೊಂದಿಗೆ ಪರಸ್ಪರ ಮಾತುಕತೆಗೆ ಆಸ್ಪದ ಇರುತ್ತಿರಲಿಲ್ಲ. ಮುಖ್ಯವಾಗಿ ನಾವು ಮಾಡುವ ಕೆಲಸದ ತಾಣಕ್ಕೆ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ. ಅನಗತ್ಯ ಯಾರೊಂದಿಗೂ ಮಾತನಾಡುವಂತಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯಸಭೆಗೆ ಅವಕಾಶ ನೀಡಿ, ಲೋಕಸಭೆಯಲ್ಲಿ 3 ಕ್ಷೇತ್ರ ಗೆಲ್ಲಿಸುವೆ: ಅಮಿತ್ ಶಾ ಮುಂದೆ ಸೋಮಣ್ಣ ಮನವಿ

  • ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಗದಗದ ಶಿಲ್ಪಿಗೆ ಆಹ್ವಾನ

    ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಗದಗದ ಶಿಲ್ಪಿಗೆ ಆಹ್ವಾನ

    ಗದಗ: ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ನಿರ್ಮಾಣ ಕಾರ್ಯಕ್ಕೆ ಗದಗ (Gadag) ಜಿಲ್ಲೆಯ ಶಿಲ್ಪಿಯೋರ್ವನಿಗೆ (Sculptor) ಆಹ್ವಾನ ಬಂದಿದೆ.

    ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಿ ನಾಗಮೂರ್ತಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಬರುವಂತೆ ಆಮಂತ್ರಣ ಬಂದಿದೆ. ನಾಗಮೂರ್ತಿ ಮೂಲತಃ ಕೊಪ್ಪಳ ಜಿಲ್ಲೆ ಕಾತರಕಿ ಗ್ರಾಮದ ನಿವಾಸಿ. ಮುಂಡರಗಿ ಪಟ್ಟಣದಲ್ಲಿ ಶಿಲ್ಪ ಕಲೆಯ ಶಾಪ್ ನಡೆಸುತ್ತಿದ್ದಾರೆ.

    ಇವರು ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆಯಲ್ಲಿ ದೊರೆಯುವ (ಕೃಷ್ಣ ಶಿಲೆ) ಕರಿಕಲ್ಲುಗಳನ್ನು ಬಳಸಿ ಮೂರ್ತಿ ತಯಾರಿಸುತ್ತಿದ್ದರು. ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯ ವ್ಯಾಸಂಗ ಮಾಡಿದ್ದಾರೆ. ಐದಾರು ವರ್ಷಗಳಿಂದ ಶಿಲ್ಪ ಕಲೆಯ ಬಗ್ಗೆ ಮುಂಡರಗಿ ವೆಂಕಟೇಶ್ ಸುತಾರ ಎಂಬವರ ಹತ್ತಿರ ತರಬೇತಿ ಪಡೆದುಕೊಂಡು ಈಗ ತಾವೇ ಶಾಪ್ ಆರಂಭಿಸಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ನಿರ್ಮಾಣವಾಗದ ಸ್ಕೈವಾಕ್ – ಜೀವ ಭಯದಲ್ಲಿ ರಸ್ತೆ ದಾಟುವ ಸಾರ್ವಜನಿಕರು

    ಇವರ ಅದ್ಭುತ ಕಲಾ ಮೂರ್ತಿಗಳ ತಯಾರಿಕೆ ಗಮನಿಸಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಆಹ್ವಾನಿಸಲಾಗಿದೆ. ಸ್ಥಳೀಯರು ನಾಗಮೂರ್ತಿಯವರನ್ನು ಸನ್ಮಾನಿಸಿ ಗೌರವಿಸಿ ರಾಮ ಮಂದಿರ ಕಾರ್ಯಕ್ಕೆ ಕಳುಹಿಸಿದ್ದಾರೆ. ಈ ಸೌಭಾಗ್ಯ ಒದಗಿ ಬಂದಿರುವುದು ತುಂಬಾನೆ ಖುಷಿಯಾಗಿದೆ. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನನಗೆ ಆಹ್ವಾನ ಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದಿದ್ದಾರೆ ನಾಗಮೂರ್ತಿ. ಇದನ್ನೂ ಓದಿ: ಕರ್ನಾಟಕದ ರೈತರಿಗೆ ಪ್ರಧಾನಿ ಮೋದಿ ವಿಶೇಷ ಪ್ಯಾಕೇಜ್ ಘೋಷಿಸಬೇಕು – ಸುಮಲತಾ ಮನವಿ

  • ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಿ: ಹೆಚ್‌ಡಿಕೆ ಪ್ರಶ್ನೆ

    ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಿ: ಹೆಚ್‌ಡಿಕೆ ಪ್ರಶ್ನೆ

    ರಾಮನಗರ: ಕೋಲಾರದ ಶಿವಾರಪಟ್ಟಣ ಎಂಬ ಹಳ್ಳಿಯಲ್ಲಿ ಕಳೆದ 35 – 40 ವರ್ಷಗಳಿಂದ ದೇವರ ಪ್ರತಿಮೆ ಮಾಡಿಕೊಂಡು ಬಂದಿರುವುದು ಮುಸ್ಲಿಂ ಕುಟುಂಬದವರೇ. ಇಂದಿಗೂ ಅವರು ಶಿಲ್ಪಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಯಾವಾಗ ಬಹಿಷ್ಕರಿಸುತ್ತೀರಿ? ಎಂಬುದನ್ನು ಬಿಜೆಪಿಯವರು ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿ ಟೀಕಿಸಿದ್ದಾರೆ.

    ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಮುಂದೊಂದು ದಿನ ಆರ್‌ಎಸ್‌ಎಸ್ ಒಪ್ಪಿಕೊಳ್ಳುತ್ತೀರಾ ಎನ್ನುವ ಸಭಾಪತಿಗಳು ಇದನ್ನೇಕೆ ನೋಡುತ್ತಿಲ್ಲ. ಇದೆಲ್ಲವೂ ಸುಧಾರಣೆ ಆಗೋದು ಯಾವಾಗ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ

    KUMARASWAMY

    ನಾನು ಜಾತಿ ಕೇಳುವುದಿಲ್ಲ: ಈಚೆಗಷ್ಟೇ ನಾನು `ದೇವಸ್ಥಾನಗಳಲ್ಲಿ ದಲಿತರಿಗೆ ಪೂಜೆ ಮಾಡುವುದಕ್ಕೆ ಬಿಡುತ್ತಾರೆಯೇ? ಎಂದು ಪ್ರಶ್ನಿಸಿದ್ದೆ. ಇದಕ್ಕೆ ಈ ವಿವಾದವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಮನೆಯೊಳಗೂ ದಲಿತರನ್ನೂ ಹೀಗೇ ಸೇರಿಸುತ್ತಾರೆಯೇ ಎಂದು ಸ್ವಾಮೀಜಿಯೊಬ್ಬರು ಪ್ರಶ್ನಿಸಿದ್ದರು. ಆ ಸ್ವಾಮೀಜಿ ಅವರು ಬೇಕಿದ್ದರೆ ಬಂದು ನನ್ನ ಮನೆಯ ವಾತಾವರಣ ನೋಡಲಿ, ಅವರಿಗೂ ಉಳಿದುಕೊಳ್ಳಲು ಆಶ್ರಮದ ಪದ್ಧತಿಯಂತೆಯೇ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    KUMARASWAMY

    ದಲಿತರೂ ಸೇರಿದಂತೆ ಎಲ್ಲ ವರ್ಗದ ಜನರು ನಮ್ಮ ತೋಟದ ಕೆಲಸಕ್ಕೆ ಬೆಳಿಗ್ಗೆ 5:30 ರಿಂದಲೇ ಬರುತ್ತಾರೆ. ಪ್ರತಿದಿನ ನಾನು ಅವರ ಕಷ್ಟಗಳನ್ನು ವಿಚಾರಿಸುತ್ತೇನೆಯೇ ಹೊರತು ಯಾವ ಜಾತಿ? ಎಂದು ಕೇಳುವುದಿಲ್ಲ ಇಂದಿಗೂ ಅವರಿಗೆ ನನ್ನ ಮನೆಯಲ್ಲಿ ಮುಕ್ತವಾಗಿ ಓಡಾಡಿಕೊಂಡು ಕೆಲಸ ಮಾಡುವ ವಾತಾವರಣ ಕಲ್ಪಿಸಿಕೊಟ್ಟಿದ್ದೇನೆ. ಮನೆಯಲ್ಲಿ ದಲಿತರೂ ನನ್ನ ಜೊತೆ ಕುಳಿತು ಊಟ ಮಾಡುತ್ತಾರೆ. ನಾನು ಯಾವುದೇ ವರ್ಗವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿಲ್ಲ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ, ಅದನ್ನು ಹಾಳುಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

  • 23,000 ರುದ್ರಾಕ್ಷಿ ಬಳಸಿ ಶಿವನ ಶಿಲ್ಪಕಲೆ – ಕಲಾವಿದನ ಕೈಚಳಕಕ್ಕೆ ಮನಸೋತ ನೆಟ್ಟಿಗರು

    23,000 ರುದ್ರಾಕ್ಷಿ ಬಳಸಿ ಶಿವನ ಶಿಲ್ಪಕಲೆ – ಕಲಾವಿದನ ಕೈಚಳಕಕ್ಕೆ ಮನಸೋತ ನೆಟ್ಟಿಗರು

    ಭುವನೇಶ್ವರ: ದೇಶಾದ್ಯಂತ ಜನರು ಇಂದು ಮಹಾ ಶಿವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ನಡುವೆ ಕಲಾವಿದರೊಬ್ಬರು ಕಡಲತೀರದ ಮರಳಿನಲ್ಲಿ 23,436 ರುದ್ರಾಕ್ಷಿ ಮಣಿಗಳನ್ನು ಬಳಸಿ ಶಿವನ ಶಿಲ್ಪಕಲೆಯನ್ನು ರಚಿಸಿದ್ದಾರೆ.

    ಜನಪ್ರಿಯ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲತೀರದಲ್ಲಿ 23,436 ರುದ್ರಾಕ್ಷಿ ಮಣಿಗಳಿಂದ ಅಲಂಕರಿಸಿ ಶಿವನ ಶಿಲ್ಪಕಲೆಯನ್ನು ರಚಿಸಿದ್ದಾರೆ. ಈ ಶಿಲ್ಪವನ್ನು ಬಿಡಿಸಲು ಸುದರ್ಶನ್ ಪಟ್ನಾಯಕ್ 12 ಟನ್ ಮರಳನ್ನು ಬಳಸಿದ್ದು, ಆರು ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ ಮತ್ತು ಮೊದಲ ಬಾರಿಗೆ ತಮ್ಮ ಮರಳಿನ ಕಲೆಯಲ್ಲಿ ರುದ್ರಾಕ್ಷಿಯನ್ನು ಬಳಸಿದ್ದಾರೆ. ಜೊತೆಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಶಾಂತವಾಗಲಿ ಎಂದು ಪ್ರಾರ್ಥಿಸೋಣ ಎಂದು ಬರೆದಿದ್ದಾರೆ. ಇದನ್ನೂ ಓದಿ: ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಪ್ರತಿ ಬಾರಿಯೂ ಸುದರ್ಶನ್ ಮರಳಿನ ಮೇಲೆ ಹೊಸ ರೀತಿಯದ್ದೇನಾದರೂ ಮಾಡಲು ಪ್ರಯತ್ನಿಸುತ್ತಾರೆ. ಕಳೆದ ಬಾರಿ ಶಿವರಾತ್ರಿ ಹಬ್ಬದಂದು ತರಕಾರಿ, ಕೆಂಪು ಗುಲಾಬಿ ಇತ್ಯಾದಿಗಳನ್ನು ಬಳಸಿದ್ದ ಅವರು ಈ ಬಾರಿ ಶಿವನ ಶಿಲ್ಪಕ್ಕೆ ರುದ್ರಾಕ್ಷಿಯನ್ನು ಬಳಸಿದ್ದಾರೆ. ಪದ್ಮಶ್ರೀ ಪುರಸ್ಕೃತರಾಗಿರುವ ಸುದರ್ಶನ್ ಜಗತ್ತಿನಾದ್ಯಂತ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮರಳು ಶಿಲ್ಪಕಲಾ ಸ್ಪರ್ಧೆಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸಿ ದೇಶಕ್ಕೆ ಹಲವು ಬಹುಮಾನಗಳನ್ನು ಗಳಿಸಿದ್ದಾರೆ. ಕಲೆಯ ಮೂಲಕ ಆಗಾಗ ಜಾಗತಿಕ ಶಾಂತಿ, ಜಾಗತಿಕ ತಾಪಮಾನ, ಭಯೋತ್ಪಾದನೆಯನ್ನು ನಿಲ್ಲಿಸಿ, ಎಚ್‍ಐವಿ/ಏಡ್ಸ್ ಮತ್ತು ಕೋವಿಡ್ -19 ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಮರಳು ಶಿಲ್ಪಕಲೆಯ ಮೂಲಕ ಸಾಮಾಜಿಕ ಸಂದೇಶಗಳನ್ನು ಸಾರುತ್ತಿರುತ್ತಾರೆ. ಇದನ್ನೂ ಓದಿ: CBI ಎಂದು ಸುಳ್ಳು ಹೇಳಿ ಲಕ್ಷಾಂತರ ರೂ. ಹಣ, ಕೆಜಿಗಟ್ಟಲೆ ಚಿನ್ನದೋಚಿದರು!

  • ಕ್ವಾರಂಟೈನ್ ಕೇಂದ್ರದಲ್ಲೇ ಅರಳಿದ ವಿಘ್ನ ವಿನಾಶಕ

    ಕ್ವಾರಂಟೈನ್ ಕೇಂದ್ರದಲ್ಲೇ ಅರಳಿದ ವಿಘ್ನ ವಿನಾಶಕ

    ಬಾಗಲಕೋಟೆ: ಕೆಸರಿನಲ್ಲಿಯೇ ಕಮಲದ ಹೂ ಅರಳುವಂತೆ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರೂ ಜಿಲ್ಲೆಯ ಶಿಲ್ಪಕಲಾವಿದರೊಬ್ಬರು ತಮ್ಮ ಕೈ ಚಳಕದಿಂದ ಗಣೇಶನ ಮೂರ್ತಿ ಕೆತ್ತನೆ ಮಾಡಿ ಗಮನ ಸಳೆದಿದ್ದಾರೆ.

    ಮುಧೋಳ ತಾಲೂಕಿನ ಲೋಕಾಪುರದ ಮಲ್ಲಪ್ಪ ಬಡಿಗೇರ ಅವರ ಕುಟುಂಬಸ್ಥರು ಕೊರೊನಾ ಭೀತಿ ಹಿನ್ನೆಲೆ ಮಹಾರಾಷ್ಟ್ರದಿಂದ ಊರಿಗೆ ವಾಪಸ್ ಆಗಿದ್ದರು. ಆದರೆ ಅವರನ್ನು ಲೋಕಾಪುರದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಹೀಗಾಗಿ ಮಲ್ಲಪ್ಪ ಅವರು ಕೂಡ ಕುಟುಂಬಸ್ಥರೊಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದಿದ್ದರು.

    ಶಿಲ್ಪಕಲಾವಿದ ಮಲ್ಲಪ್ಪ ತಮ್ಮ ಆಸಕ್ತಿಯನ್ನು ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ಅವರು ಮೂರ್ತಿ ಕೆತ್ತನೆ ಕೆಲಸ ಕೊಟ್ಟು ಅಗತ್ಯ ಸಾಮಗ್ರಿಗಳನ್ನು ನೀಡಿದ್ದರು. ತಮಗೆ ದೊರೆತ ಕೆಲವೇ ಕೆಲವು ಸಾಮಗ್ರಿಗಳಿಂದ ಮಲ್ಲಪ್ಪ ಅವರು ವಿಘ್ನ ವಿನಾಶಕ ಗಣೇಶ್‍ನ ವಿಗ್ರಹವನ್ನ ಕೆತ್ತನೆ ಮಾಡಿ ಗಮನ ಸಳೆದಿದ್ದಾರೆ.

    ಲೋಕಾಪುರ ಪಂಚಾಯಿತಿ ಪಿಡಿಓ ಅವರು ಮಲ್ಲಪ್ಪ ಅವರಿಗೆ 10 ಸಾವಿರ ರೂ.ವನ್ನು ಪ್ರೋತ್ಸಾಹ ಧನವಾಗಿ ಕೊಟ್ಟು ಮೂರ್ತಿಯನ್ನು ಖರೀದಿಸಿ ಬೆಂಬಲಿಸಿದ್ದಾರೆ. ಮಲ್ಲಪ್ಪ ಅವರ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಕ್ವಾರಂಟೈನ್‍ನಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.