Tag: SCST Reservation

  • ಕ್ರಿಕೆಟ್‌ನಲ್ಲೂ ಮೀಸಲಾತಿ ತರಬೇಕು – ನಟ ಚೇತನ್

    ಕ್ರಿಕೆಟ್‌ನಲ್ಲೂ ಮೀಸಲಾತಿ ತರಬೇಕು – ನಟ ಚೇತನ್

    ಚಾಮರಾಜನಗರ: ಭಾರತೀಯ ಕ್ರಿಕೆಟ್‌ನಲ್ಲಿ (Cricket) ಶೇ.70 ಆಟಗಾರರು ಮೇಲ್ಜಾತಿಯವರೇ ಇದ್ದಾರೆ. ಆದ್ದರಿಂದ ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ (Reservation) ತರಬೇಕು ಎಂದು ನಟ ಚೇತನ್ (Chetan Ahimsa) ಹೇಳಿಕೆ ನೀಡಿದ್ದಾರೆ.

    ಚಾಮರಾಜನಗರದಲ್ಲಿ ನಡೆದ `ಮೀಸಲಾತಿ ಪ್ರಾತಿನಿಧ್ಯವೋ, ಆರ್ಥಿಕ ಸಬಲೀಕರಣವೋ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿ, 3ಬಿ ಯಿಂದ 2ಎಗೆ ಸೇರಿಸಿ ಅನ್ನೋ ಪಂಚಮಸಾಲಿಗಳ ಹೋರಾಟ ಸ್ವಾರ್ಥದ ಹೋರಾಟ. 4 ಪರ್ಸೆಂಟ್‌ನಿಂದ ನಿಂದ 12 ಪರ್ಸೆಂಟ್‌ಗೆ ಮೀಸಲಾತಿ ಹೆಚ್ಚಿಸಬೇಕೆನ್ನುವ ಒಕ್ಕಲಿಗರ ಹೋರಾಟ ಒಪ್ಪಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್‌ ಆಲ್‌ರೌಂಡರ್‌ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್‌ ರೋಚಕ ಜಯ

    ಅಷ್ಟು ಜನಸಂಖ್ಯೆ ಇದ್ರೆ ಮೀಸಲಾತಿ ಹೆಚ್ಚಳ ತಪ್ಪಿಲ್ಲ ಅಂದಿದ್ದಾರೆ. ಇದೇ ವೇಳೆ, ದಕ್ಷಿಣ ಆಫ್ರಿಕಾ ತಂಡದಲ್ಲಿ 6 ಮಂದಿ ಕರಿಯರಿಗೆ ಮೀಸಲಾತಿ ಇದೆ. ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ. ಎಸ್ಸಿ, ಎಸ್ಟಿಗೆ ಮೀಸಲಾತಿ (SC ST Reservation) ಕೊಟ್ಟಲ್ಲಿ ಇನ್ನೂ ಉತ್ತಮ ಕ್ರಿಕೆಟ್ ಟೀಂ ಆಗುತ್ತೆ ಅಂತ ಚೇತನ್ ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಗುಜರಾತ್ ಚುನಾವಣೆ- ತಾಯಿಯ ಆಶೀರ್ವಾದ ಪಡೆದ ಮೋದಿ

    ಇಂದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ (Team India) 186 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾದೇಶ 187 ರನ್ ಗಳಿಸಿ ಒಂದು ವಿಕೆಟ್ ರೋಚಕ ಜಯ ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯಗೆ ಅಹಿಂದ ನಾಯಕ ಅನ್ನೋದು 5 ವರ್ಷಕ್ಕೊಮ್ಮೆ ನೆನಪಾಗುತ್ತೆ – ಶ್ರೀರಾಮುಲು

    ಸಿದ್ದರಾಮಯ್ಯಗೆ ಅಹಿಂದ ನಾಯಕ ಅನ್ನೋದು 5 ವರ್ಷಕ್ಕೊಮ್ಮೆ ನೆನಪಾಗುತ್ತೆ – ಶ್ರೀರಾಮುಲು

    ರಾಯಚೂರು: ಸಿದ್ದರಾಮಯ್ಯನವರಿಗೆ (Siddaramaiah) ತಾವು ಅಹಿಂದ ನಾಯಕ ಅನ್ನೋದು ಪಂಚವಾರ್ಷಿಕ ಯೋಜನೆ ತರ ಐದು ವರ್ಷಗಳಿಗೊಮ್ಮೆ ನೆನಪಿಗೆ ಬರುತ್ತೆ ಎಂದು ಸಚಿವ ಶ್ರೀರಾಮುಲು (SriRamulu) ಕುಟುಕಿದ್ದಾರೆ.

    ರಾಯಚೂರಿನಲ್ಲಿಂದು (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಳ ಸಮುದಾಯದವರಿಗೆ ಮೀಸಲಾತಿ (Reservation) ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಪ್ರಿನ್ಸಿಪಲ್ ಸೆಕ್ರೆಟರಿ ಜಾದವ್ ಅವರು ವರದಿ ಕೊಟ್ಟಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದರೂ ಆಯೋಗ ರಚನೆ ಮಾಡಲಿಲ್ಲ. ಎಸ್ಸಿ-ಎಸ್ಟಿಗೆ ಮೀಸಲಾತಿ (SCST Reservation) ಹೆಚ್ಚಿಸುವ ಕೆಲಸ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡ್ತಿರೋರು ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು: ಕಟೀಲ್ ಕಿಡಿ

    ಹಿಂದುಳಿದವರ, ಅಹಿಂದ ನಾಯಕರು ಅಂತ ಕರೆಯಿಸಿ ಕೊಳ್ಳುವ ಅರ್ಹತೆ ಸಿದ್ದರಾಮಯ್ಯ (Siddaramaiah) ಅವರಿಗೆ ಇಲ್ಲ. ಅದು ಏನಿದ್ದರೂ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ. ಹೀಗಾಗಿ ಸಿಎಂಗೆ ಅಭಿನಂದನೆ ಸಲ್ಲಿಸಲು ನವೆಂಬರ್ 20ಕ್ಕೆ ಬಳ್ಳಾರಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಸಿದ್ದರಾಮಯ್ಯ ಮಹಾ ಸುಳ್ಳ, ಅವರ ಮನೆ ದೇವರ ಹೆಸರೇ ಮಹಾ ಸುಳ್ಳ. ಆತ ಯಾವ ಮಾತು ಉಳಿಸಿಕೊಂಡಿಲ್ಲ. ಇಡೀ ರಾಜ್ಯದ ಹಿಂದುಳಿದ ಜಾತಿಯವರು ರೋಸಿ ಹೋಗಿದ್ದಾರೆ. ಎಸ್ಸಿ-ಎಸ್ಟಿ ಜನಾಂಗದವರೂ ಅವರನ್ನ ನಂಬಲ್ಲ. ಮುಂದಿನ ಚುನಾವಣೆಯಲ್ಲಿ ಜನರೇ ಸಿದ್ದರಾಮಯ್ಯರನ್ನ ತಿರಸ್ಕಾರ ಮಾಡ್ತಾರೆ ಎಂದು ಭವಿಷ್ಯ ನುಡಿದರು.

    Live Tv
    [brid partner=56869869 player=32851 video=960834 autoplay=true]

  • ಎಸ್ಸಿ, ಎಸ್ಟಿ ಮೀಸಲಾತಿ ಕಾಂಗ್ರೆಸ್‌ ಪಕ್ಷದ ಕೂಸು – ಡಿಕೆಶಿ

    ಎಸ್ಸಿ, ಎಸ್ಟಿ ಮೀಸಲಾತಿ ಕಾಂಗ್ರೆಸ್‌ ಪಕ್ಷದ ಕೂಸು – ಡಿಕೆಶಿ

    ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ (SC ST Reservation) ಕಾಂಗ್ರೆಸ್‌ (Congress) ಪಕ್ಷದ ಕೂಸು. ನ್ಯಾ.ನಾಗಮೋಹನ್‌ ದಾಸ್‌ ಸಮಿತಿ (Nagamohan Das Committee) ನಾವು ಮಾಡಿದ್ದಕ್ಕೆ ಯಶಸ್ಸು ಕಂಡಿದೆ ಎಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ತಿರುಗೇಟು ನೀಡಿದ್ದಾರೆ.

    ಕೆಪಿಸಿಸಿ (KPCC) ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಯಕೆ ಜನಾಂಗಕ್ಕೆ ನ್ಯಾಯ ಒದಗಿಸಬೇಕು ಎನ್ನುವುದಾಗಿದೆ. ಎಸ್‌ಟಿ ಜನಾಂಗದ ಮೇಲೆ ಬಿಜೆಪಿಗೆ (BJP) ನಂಬಿಕೆ ಇಲ್ಲ. ಅಧಿಕಾರ ಬಂದ 24 ಗಂಟೆಯಲ್ಲೇ ಬಿಜೆಪಿ ಇದನ್ನು ಮಾಡಬೇಕಿತ್ತು ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್

    ಈಗಲೂ ಡಬಲ್ ಇಂಜಿನ್ ಸರ್ಕಾರ ಇದೆ. ಬರೀ ಪೇಪರ್‌ನಲ್ಲಿ ಇಟ್ಟು ಚಾಕ್ಲೆಟ್ ಕೊಡೋಕೆ ಹೋಗಬೇಡಿ. ಬಿಜೆಪಿ ತೀರ್ಮಾನ ಕೇವಲ ಕಣ್ಣು ಒರೆಸುವುದಷ್ಟೇ, ಬೇರೇನೂ ಇಲ್ಲ. ಸಿಎಂ ದೆಹಲಿಯಲ್ಲಿ ಕೂತು ಪಾರ್ಲಿಮೆಂಟ್‌ನಲ್ಲಿ ಇಟ್ಟು 9ನೇ ಶೆಡ್ಯೂಲ್‌ನಲ್ಲಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.

    ಭಾರತ್ ಜೋಡೋ ಯಾತ್ರೆ (Bharat Jodo Yatra) ಕುರಿತು ಮಾತನಾಡಿದ ಡಿಕೆಶಿ, ಪಾದಯಾತ್ರೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ದೆಹಲಿಯಲ್ಲಿ ನಾಡಿದ್ದು ಮೀಟಿಂಗ್ ಇದೆ. ಬಸ್ ಯಾತ್ರೆ ಬಗ್ಗೆ ನಾನೊಬ್ಬನೇ ಕೂತು ನಿರ್ಧಾರ ಮಾಡುವುದಕ್ಕೆ ಆಗುವುದಿಲ್ಲ. ಅಲ್ಲಿ ಈ ಸಂಬಂಧ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಎಲ್ಲ ನಾಯಕರ ಬಳಿ ಚರ್ಚೆ ಮಾಡಿ ಬಸ್ ಯಾತ್ರೆ ಬಗ್ಗೆ ನಿರ್ಧಾರ ಮಾಡ್ತೇವೆ. ಕಲೆಕ್ಟಿವ್ ಆಗಿ ಕುಳಿತು ನಿರ್ಧಾರ ಕೈಗೊಂಡು ಕಲೆಕ್ಟಿವ್ ಲೀಡರ್ ಶಿಪ್‌ನಲ್ಲಿ ಮತ್ತೊಂದು ಯಾತ್ರೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ – ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್

    ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್

    ಬೆಂಗಳೂರು: ಮೀಸಲಾತಿ (Reservation) ಕೊಡೋದಕ್ಕೆ ಗಂಡೆದೆ ಬೇಕು. ನಮ್ಮ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಆ ಗಂಡೆದೆ ಇದೆ ಎಂದು ಸಚಿವ ಆರ್.ಅಶೋಕ್ (R Ashok), ಬೊಮ್ಮಾಯಿ ಅವರ ಗುಣಗಾನ ಮಾಡಿದ್ದಾರೆ.

    ಇಲ್ಲಿ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡೆದೆ ಇರೋದಕ್ಕೆ ಮೀಸಲಾತಿ (Reservation) ಕೊಟ್ಟಿದ್ದಾರೆ. ಯಾರೂ ಮಾಡದ ಕೆಲಸವನ್ನು ಬೊಮ್ಮಾಯಿ ಮಾಡಿದ್ದಾರೆ. ಅವರು ಚಾಣಕ್ಯ ಇದ್ದ ಹಾಗೆ. ಮೀಸಲಾತಿ ಜೇನುಗೂಡು ಎಂದು ಬಹಳ ಜನ ಹಿಂಜರಿಯುತ್ತಿದ್ದರು. ಆದರೆ ಬೊಮ್ಮಾಯಿ ಅವರು ಜೇನುಗೂಡಿಗೆ ಕೈಹಾಕಿದರು. ಜೇನುಗೂಡಿಗೆ ಕಲ್ಲು ಹೊಡೆದು ಎಸ್ಸಿ-ಎಸ್ಟಿ ಸಮುದಾಯದವರಿಗೆ (SCST Reservation) ಮೀಸಲಾತಿಯ ಜೇನು ಕೊಟ್ಟಿದ್ದಾರೆ ಎಂದು ಹೊಗಳಿದ್ದಾರೆ.

    ನಮ್ಮ ಮುಖ್ಯಮಂತ್ರಿಗಳು ಚಾಣಕ್ಯ ವಿದ್ಯೆ ಕಲಿತವರು. ಚಾಣಕ್ಯ ತನದಿಂದ ಜೇನುಗೂಡಿಗೆ ಕಲ್ಲು ಹೊಡೆದಂತೆ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರ ತಗೊಂಡಿದ್ದಾರೆ. ಹಿಂದೆ ಬಂದ ಸರ್ಕಾರಗಳು ಯಾರು ಕೂಡ ಮೀಸಲಾತಿಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಒಬ್ಬರು ಏನು ಬ್ರದರ್ ಅಂತಾರೆ, ಇನ್ನೊಬ್ಬರು ನೋಡಿ ಜೇನುಗೂಡಿಗೆ ಕಲ್ಲು ಹೊಡೆದಿದ್ದೀರಿ ನಿಮಗೆ ಮುಂದೆ ಸರಿಯಾಗಿ ಆಗುತ್ತೆ ಅಂದಿದ್ರು. ಆದರೆ ಇವತ್ತು ಏನು ಆಗೇ ಇಲ್ಲ ನೋಡಿ ಎಂದು ಟಾಂಗ್ ನೀಡಿದ್ದಾರೆ.

    ಗಂಡೆದೆ ಇರೋರು ಮೀಸಲಾತಿ ಕೊಡೋಕೆ ಸಾಧ್ಯ. ಆ ಗಂಡೆದೆ ತೋರಿಸಿದವರು ಬೊಮ್ಮಾಯಿ ಮಾತ್ರ. ಏನಾದರೂ ಮಾಡೇ ಮಾಡ್ತೀನಿ ಅನ್ನೋರು ಇತಿಹಾಸ ಸೃಷ್ಟಿಸೋರು. ಏನು ಮಾಡೋಕೆ ಆಗಲ್ಲ ಅನ್ನೋರು ಮಣ್ಣು ಸೇರೋರು. ಈಗ ಇತಿಹಾಸ ಸೃಷ್ಟಿಸಿದ್ದು ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ. ಅವರು ಮಾನಸಿಕವಾಗಿ ಪ್ರಿಪೇರ್ ಆಗಿ ಇದನ್ನು ಮಾಡಿದ್ರು. ದೀಪಾವಳಿಗೆ (Diwali) ಗೆಜೆಟ್ ಕಾಪಿ ಕೊಡಬೇಕು ಅಂತಾ ಗೆಜೆಟ್ ತಂದಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ – ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಬೊಮ್ಮಾಯಿ

    SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ – ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಬೊಮ್ಮಾಯಿ

    ಹುಬ್ಬಳ್ಳಿ: ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳಿಗೆ ಮೀಸಲಾತಿ (Reservation) ಹೆಚ್ಚಳಕ್ಕೆ ಅಧ್ಯಾದೇಶ ಹೊರಡಿಸಲು ರಾಜ್ಯಪಾಲರು ಅಂಕಿತ ಹಾಕಿದ್ದು, ಈ ಸುಗ್ರೀವಾಜ್ಞೆಗೆ ಮುಂದಿನ ಅಧಿವೇಶನದಲ್ಲಿ ಎರಡೂ ಸದನಗಳಿಂದ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಗಗಳಿಗೆ ಕಾನೂನಿನ ರಕ್ಷಣೆ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಮೀಸಲಾತಿ (Reservation) ಬಗ್ಗೆ ಆಯೋಗಗಳ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ – SC, ST ಸಮುದಾಯಗಳಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್‌

    ಯಾವುದೇ ವರ್ಗದ ಮೀಸಲಾತಿ ತೆಗೆಯುವುದಾಗಲಿ, ಸೇರ್ಪಡೆ ಮಾಡುವುದರ ಬಗ್ಗೆಯಾಗಲೀ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಏನೇ ಮಾಡಿದರೂ ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿಯೇ ಮಾಡಬೇಕು. ಮೀಸಲಾತಿ ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದ್ದು, ಸರ್ಕಾರದ ಮುಖ್ಯಸ್ಥನಾಗಿ ಸಂವಿಧಾನ (Constitution Of India) ಮತ್ತು ಕಾನೂನಿನ (Law) ಚೌಕಟ್ಟಿನಲ್ಲಿ ಮುಂದುವರಿಯಬೇಕು ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: PFI ಬ್ಯಾನ್ ಎಂದಾಗ ಸ್ವಾಗತಿಸೋರು ರಾಮಸೇನೆಯವ್ರಿಗೆ ಚಿಕ್ಕಪ್ಪನ ಮಕ್ಕಳಾ?: ಸಿಎಂ ಇಬ್ರಾಹಿಂ

    ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಕ್ರಮವಾಗಿ 2% ಮತ್ತು 4% ಮೀಸಲಾತಿ ಹೆಚ್ಚಿಸಿದೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಭಾನುವಾರ ಅಂಕಿತ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೇ.10ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸಂಘ ಒತ್ತಾಯ

    ಶೇ.10ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸಂಘ ಒತ್ತಾಯ

    ಬೆಂಗಳೂರು: ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗ ಸಮುದಾಯದ (Vokkaliga Community) ಮೀಸಲಾತಿ (Reservation) ಪ್ರಮಾಣವನ್ನು ಶೇ.4ರಿಂದ ಶೇ.10ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘ ಒತ್ತಾಯಿಸಿದೆ.

    ರಾಜ್ಯದ ಜನಸಂಖ್ಯೆಯಲ್ಲಿ ಶೇ.16ರಷ್ಟು ಒಕ್ಕಲಿಗ ಸಮುದಾಯದ (Vokkaliga Community) ಜನಸಂಖ್ಯೆ ಇದ್ದು, ಶೇ.4 ಮೀಸಲಾತಿ ಕಡಿಮೆಯಾಗಿದೆ. ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ 3A ಅಡಿಯಲ್ಲಿ ಒಕ್ಕಲಿಗರ ಸಮುದಾಯ ಸೇರಿಸಲಾಗಿದೆ. 3A ನಲ್ಲಿ ಒಕ್ಕಲಿಗರ ಉಪ ಪಂಗಡಗಳು ಹಾಗೂ ಇತರೆ ಜಾತಿಗಳೂ (Cast) ಸೇರಿವೆ ಎಂದು ಹೇಳಿದೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಪೋಸ್ಟ್‌ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

    ರಾಜ್ಯ ಸರ್ಕಾರ (Government Of Karnataka) ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ (SC ST Reservation) ಹೆಚ್ಚಳ ಮಾಡಿರುವುದನ್ನು ಒಕ್ಕಲಿಗರ ಸಂಘ ಸ್ವಾಗತಿಸುತ್ತದೆ. ಅದೇ ರೀತಿ 3ಎ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಶೇ.10ಕ್ಕೆ ಹೆಚ್ಚಿಸುವ ಮೂಲಕ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಂಘ ಮನವಿ ಮಾಡಿದೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆ ನೆನೆಯದಿದ್ದರೆ ನರಕಕ್ಕೆ ಹೋಗ್ತೀರಾ: ಬಿ.ಎಲ್. ಸಂತೋಷ್‌

    ನಮ್ಮ ಸಮುದಾಯ ಅನಾದಿಕಾಲದಿಂದಲೂ ಕೃಷಿಯನ್ನೇ ನಂಬಿ ಬದುಕುತ್ತಿದೆ. ಬೇಸಾಯದ ವೆಚ್ಚ ದಿನದಿಂದ ದಿನಕ್ಕೆ ದುಬಾರಿಯಾಗಿದ್ದು, ಅತಿವೃಷ್ಟಿ, ಪ್ರವಾಹ, ಬರ, ಕೀಟ ಹಾಗೂ ರೋಗ ಬಾಧೆಯಿಂದ ಪದೇ-ಪದೇ ಸಂಕಷ್ಟಕ್ಕೆ ಸಿಲುಕುತ್ತಿದೆ. ನಮ್ಮ ಸಮುದಾಯದ ಶೇ.70ರಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸಾಕಷ್ಟು ಬಡವರೂ ಇದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಈ ಮೂಲಕ ಒಕ್ಕಲಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷರು ಹಾಗೂ ಶಾಸಕರೂ ಆದ ಸಿ.ಎನ್.ಬಾಲಕೃಷ್ಣ (CN Balakrishna), ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]