Tag: Script

  • ‘ಹನುಮಾನ್’ ಸೀಕ್ವೆಲ್: ಸ್ಕ್ರಿಪ್ಟ್ ಪೂಜೆ ನೆರವೇರಿಸಿದ ನಿರ್ದೇಶಕ

    ‘ಹನುಮಾನ್’ ಸೀಕ್ವೆಲ್: ಸ್ಕ್ರಿಪ್ಟ್ ಪೂಜೆ ನೆರವೇರಿಸಿದ ನಿರ್ದೇಶಕ

    ಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿದೆ. ಈ ಶುಭ ದಿನದಂದು, ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ (Prashant Verma) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮುಂಬರುವ ಚಿತ್ರ ‘ಜೈ ಹನುಮಾನ್’ (Hanuman) ಸಿನಿಮಾಗಾಗಿ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ಇಂದು ಜೈ ಹನುಮಾನ್ ಸಿನಿಮಾದ ಸ್ಟ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.

    ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಚಿತ್ರ ಹನುಮಾನ್ ಜನವರಿ 12 ರಂದು ಬಿಡುಗಡೆಯಾಯಿತು. ತೇಜ ಸಜ್ಜ (Teja Sajja), ವರಲಕ್ಷ್ಮಿ ಶರತ್‌ಕುಮಾರ್, ಅಮೃತ ಅಯ್ಯರ್ ಮತ್ತು ವಿನಯ್ ರೈ ನಟಿಸಿರುವ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಕ್ಸಸ್ ಬೆನ್ನಲ್ಲೇ ಜೈ ಹನುಮಾನ್ ಸಿನಿಮಾದ ಕೆಲಸ ಶುರುವಾಗಿವೆ.

    ಹನುಮಾನ ಸಿನಿಮಾ ಮೂಲಕ ಪ್ರಶಾಂತ್ ವರ್ಮಾ ರಾಷ್ಟ್ರವ್ಯಾಪಿ ಜನಪ್ರಿಯರಾಗಿದ್ದಾರೆ. ಸೃಜನಶೀಲ ನಿರ್ದೇಶಕರು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ನಿಂದ ಮತ್ತೊಂದು ಮಹಾಕಾವ್ಯ ಸಾಹಸವನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ. ಅದರ ಭಾಗವಾಗಿ ಜೈ ಹನುಮಾನ್ ಸಿನಿಮಾ ಘೋಷಿಸಿದ್ದು, ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಸೀಕ್ವೆಲ್‌ಗಾಗಿ ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ನ್ನು ಸಿದ್ಧಪಡಿಸಿದ್ದಾರೆ.

     

    ಹೈದರಾಬಾದ್‌ನ ಹನುಮಾನ್ ದೇವಾಲಯದಲ್ಲಿಂದು ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಮುಂದಿನ ದಿನಗಳಲ್ಲಿ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದ್ದಾರೆ.

  • ವೋಟ್ ಮಾಡಿ ಅಮೆರಿಕಾ ವಿಮಾನ ಏರಿದ ನಟ ರಕ್ಷಿತ್ ಶೆಟ್ಟಿ

    ವೋಟ್ ಮಾಡಿ ಅಮೆರಿಕಾ ವಿಮಾನ ಏರಿದ ನಟ ರಕ್ಷಿತ್ ಶೆಟ್ಟಿ

    ಬೆಳಗ್ಗೆಯಷ್ಟೇ ಉಡುಪಿಯಲ್ಲಿ ಮತದಾನ ಮಾಡಿರುವ ರಕ್ಷಿತ್ ಶೆಟ್ಟಿ (Rakshit Shetty) , ಇಂದು ರಾತ್ರಿ ಅಮೆರಿಕಾದ (America) ವಿಮಾನ ಏರಲಿದ್ದಾರೆ. ಮತದಾನ ಮಾಡುವುದಕ್ಕಾಗಿಯೇ ಕಾಯುತ್ತಿದ್ದ ಅವರು, ಮತದಾನದ ಕರ್ತವ್ಯ ಮುಗಿಸಿ ಇಂದು ಯುಎಸ್.ಎಗೆ ಪಯಣ ಬೆಳೆಸುತ್ತಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ.

    777 ಚಾರ್ಲಿ ನಂತರ ರಕ್ಷಿತ್ ಮತ್ತ್ಯಾವ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೂ ಅವರು ಉತ್ತರಿಸಿದ್ದಾರೆ. ಇದೀಗ ರಿಚರ್ಡ್ ಆಂಟೋನಿ (Richard Antony)  ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಈ ಸಿನಿಮಾದ ಸ್ಕ್ರಿಪ್ಟ್ (Script)ಮಾಡಲು ಅವರು ಅಮೆರಿಕಾಗೆ ತೆರಳಲಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ಈಗಾಗಲೇ ಸ್ಕ್ರಿಪ್ಟ್ ಬರೆಯಲು ತೊಡಗಿಕೊಂಡಿರುವ ರಕ್ಷಿತ್, ಅದರ ಅಂತಿಮ ಹಂತದ ಸ್ಕ್ರಿಪ್ಟ್ ಗಾಗಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಾರಂತೆ. ಅಮೆರಿಕಾಗೆ ಹೋಗಲು ತಮ್ಮದೇ ಆದ ಕಾರಣವನ್ನು ನೀಡಿದ್ದಾರೆ ರಕ್ಷಿತ್. ಅಲ್ಲಿ ಹಗಲು ಇದ್ದರೆ, ಇಲ್ಲಿ ರಾತ್ರಿ ಇರುತ್ತದೆ. ಇಲ್ಲಿ ರಾತ್ರಿಯಾದರೆ ಅಲ್ಲಿ ಹಗಲು. ಫೋನ್ ತೊಂದರೆ ಇರುವುದಿಲ್ಲ. ಹಾಗಾಗಿ ಅಮೆರಿಕಾ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

    ರಿಚರ್ಡ್ ಆಂಟೋನಿ ಸಿನಿಮಾಗೆ ಅವರೇ ನಟ ಹಾಗೂ ನಿರ್ದೇಶಕ. ಇದು ಅವರದ್ದೇ ಉಳಿದವರು ಕಂಡಂತೆ ಪ್ರೀಕ್ವೆಲ್ ಸಿನಿಮಾವಾಗಿದೆ. ಹೀಗಾಗಿ ಹೆಚ್ಚು ಚಿತ್ರದ ಮೇಲೆ ಫೋಕಸ್ ಮಾಡಿದ್ದಾರಂತೆ ರಕ್ಷಿತ್. ಸದ್ಯ ಅವರು ಸಪ್ತ ಸಾಗರದಾಚೆ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿದ್ದು, ಈ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ.

  • ‘ಕಾಂತಾರ’ ಕಥೆಗಾಗಿ ಮೆಗಾ ಪ್ಲ್ಯಾನ್ ಹೆಣೆದಿದ್ದಾರಂತೆ ರಿಷಬ್ ಶೆಟ್ಟಿ

    ‘ಕಾಂತಾರ’ ಕಥೆಗಾಗಿ ಮೆಗಾ ಪ್ಲ್ಯಾನ್ ಹೆಣೆದಿದ್ದಾರಂತೆ ರಿಷಬ್ ಶೆಟ್ಟಿ

    ಕಾಂತಾರ (Kantara) ಮೈದಾನ ಸದ್ಯಕ್ಕೆ ಸೈಲೆಂಟಾಗಿದೆ. ಆದರೆ ಇನ್ನೇನು ಕೆಲವೇ ವಾರಗಳಲ್ಲಿ ಹವಾ ಎಬ್ಬಿಸಲಿದೆ. ಅದುವರೆಗೆ ಒಳಗೊಳಗೆ ಹೊಸದೊಂದು ಮೆಗಾಪ್ಲಾನ್ ತಯಾರಾಗುತ್ತಿದೆ. ಅದು ಕನ್ನಡ ಚಿತ್ರರಂಗಕ್ಕೆ ಹೊಸದು. ಇದಕ್ಕೆಲ್ಲ ಮೂಲ ಕಾರಣ ಒನ್ಸ್ ಅಗೇನ್ ರಿಷಬ್‌ ಶೆಟ್ಟಿ (Rishabh Shetty). ಕಾಂತಾರ ಎರಡನೇ ಭಾಗವನ್ನು ಆರಂಭಿಸುವ ಮುನ್ನ ಅವರು ಹೊಸ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗಿದ್ದಾರೆ.

    ಎಲ್ಲರ ಕಣ್ಣು ಈಗ ರಿಷಬ್‌ ಶೆಟ್ಟಿ ಅಂಡ್ ಗ್ಯಾಂಗ್‌ನತ್ತ ನೆಟ್ಟಿವೆ. ಕಾಂತಾರದ ಮಹಾ ಗೆಲುವು ಇಡೀ ತಂಡವನ್ನು ಎಲ್ಲಿಗೋ ಹೋಗಿ ಮುಟ್ಟಿಸಿದೆ. ಆ ಸಂಭ್ರಮವನ್ನು ಅನುಭವಿಸಬೇಕು. ಜೊತೆಗೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಾಂತಾರಕ್ಕಿಂತ ಅದ್ಭುತವನ್ನು ಸೃಷ್ಟಿ ಮಾಡಬೇಕು. ಅದಕ್ಕಾಗಿ ಸಕಲ ಸಿದ್ಧತೆ ನಡೆಸುತ್ತಿದೆ ಕಾಂತಾರ ತಂಡ. ಮೊಟ್ಟ ಮೊದಲಿಗೆ ಅದ್ಭುತ ಕತೆಯನ್ನು (Story) ಹುಡುಕಬೇಕು. ಅದಕ್ಕಾಗಿ ದೃಶ್ಯಗಳನ್ನು ಹೊಸೆಯಬೇಕು. ಹಾಗೆಯೇ ಪ್ರತಿ ದೃಶ್ಯಕ್ಕೆ ದೇವರಂಥ ಸಂಭಾಷಣೆ ಹೊಸೆಯಬೇಕು. ಇಲ್ಲೇ ರಿಷಬ್ ಹೊಸ ಥಿಯರಿ ಅಳವಡಿಕೊಳ್ಳಲಿದ್ದಾರಂತೆ.

    ಏನಿದು ಡಿವೈನ್ ಸ್ಟಾರ್ ಪ್ಲಾನು? ವಿಷಯ ಇಷ್ಟೇ. ಕಾಂತಾರ ಸಿನಿಮಾಕ್ಕಾಗಿ ಮೂರು ಮೂರು ರೈಟರ್ಸ್ ಕೆಲಸ ಮಾಡುತ್ತಿದ್ದಾರೆ. ಶೆಟ್ಟರ ಜೊತೆ ಇನ್ನು ಮೂವರು ಕುಳಿತು ಚರ್ಚೆ ಮಾಡಿದ್ದಾರೆ. ಅಫ್‌ಕೋರ್ಸ್ ಎಲ್ಲವೂ ಶೆಟ್ಟರ ಬತ್ತಳಿಕೆಯಿಂದ ಬಂದ ಅಸ್ತ್ರಗಳೆ. ಆದರೂ ಫೈನಲ್ ಡ್ರಾಫ್ಟ್ ಮಾಡುವಾಗ ಸಹಜವಾಗಿ ಅಂತಿಮ ಸಲಹೆ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಫೈನಲ್ ವರ್ಶನ್ ಸ್ಕ್ರಿಪ್ಟ್ ಸಿದ್ಧವಾಗಿದೆ. ಈಗ ಕಾಂತಾರದ ಮೇಲಿನ ನಿರೀಕ್ಷೆ ವಿಶ್ವದ ತುಂಬಾ ಹಬ್ಬಿದೆ. ಇದನ್ನೂ ಓದಿ:`ಸಿಟಾಡೆಲ್’ ಫಸ್ಟ್ ಲುಕ್ ಔಟ್: ಆ್ಯಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ

    ಸಿನಿಮಾದ ಸ್ಕ್ರಿಪ್ಟ್ ಅನ್ನು ಅದ್ಭುತವಾಗಿಸಲು ಒಟ್ಟು ಹದಿನಾರು ಮಂದಿಯ ಬರಹಗಾರರ ತಂಡ ಕಾಂತಾರಕ್ಕಾಗಿ ಒಂದುಗೂಡಿದ್ದಾರೆ ಅನ್ನೋದು ಮಾಹಿತಿ. ಈ ಹಿಂದೆ ಶೆಟ್ಟರ ತಂಡದಲ್ಲಿದ್ದ ಖಾಯಂ ಬರಹಗಾರರು ಇಲ್ಲೂ ಮುಂದುವರೆದಿದ್ದಾರೆ. ಅವರ ಜೊತೆ ಇನ್ನು ಕೆಲವು ಅಕ್ಷರ ಬಲ್ಲವರನ್ನು ಕರೆದುಕೊಂಡು ಬಂದಿದ್ದಾರಂತೆ. ಒಂದೊಂದು ದೃಶ್ಯವನ್ನು ಎಲ್ಲರೂ ಬರೆಯಬೇಕು. ಅದರಲ್ಲಿ ಗ್ರೇಟ್ ಅನ್ನಿಸಿಕೊಳ್ಳುವ ದೃಶ್ಯಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಟಾಲಿವುಡ್‌ನಲ್ಲಿ ಈ ರೀತಿ ಪರಚೂರಿ ಬ್ರದರ್ಸ್ ಮಾಡುತ್ತಿದ್ದರು. ಹಲವು ಹುಡುಗರಿಂದ ಡೈಲಾಗ್ ಬರೆಸುತ್ತಿದ್ದರು. ಅದರಲ್ಲಿ ಬೆಸ್ಟ್ ಡೈಲಾಗ್ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದನ್ನೇ ರಿಷಬ್ ಮಾಡಲಿದ್ದಾರಾ ಅಥವಾ ಇದೆಲ್ಲ ಗಾಳಿಸುದ್ದಿಯಾ ? ಶೆಟ್ಟರಿಗೆ ಸಂದೇಶ ಮಾಡಿದ್ದೇವೆ. ಉತ್ತರ ಇನ್ನೂ ಬಂದಿಲ್ಲ.

    ಇನ್ನು ಕೆಲವು ದಿನಗಳಲ್ಲಿ ಶೆಟ್ಟರ ಮೊಬೈಲ್ ಸ್ವಿಚ್  ಆಫ್ ಆಗಲಿದೆ. ಅಲ್ಲಿಂದ ಅವರ ಕಾಡಿನಲ್ಲಿ ಕತೆ ಬೇಟೆ ಶುರುವಾಗಲಿದೆ. ಅದು ಮುಗಿದ ಮೇಲೆ ಚಿತ್ರಕತೆ, ಸಂಭಾಷಣೆ ಇತ್ಯಾದಿ. ಎಲ್ಲವೂ ಕೆಲವು ತಿಂಗಳಲ್ಲಿ ಅಂತಿಮ ರೂಪು ಪಡೆಯಲಿದೆ. ಅದಾದ ಮೇಲೆ ಶೂಟಿಂಗ್‌ಗೆ ಹೊರಡಲು ಸಜ್ಜಾಗಲಿದ್ದಾರೆ. ಈ ಬಾರಿ ಮೊದಲ ಭಾಗಕ್ಕಿಂತ ದೊಡ್ಡ ಮಟ್ಟದಲ್ಲಿ, ದೊಡ್ಡ ಕ್ವಾನ್ವಾಸ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ಕಥಾ ಕಲ್ಪನೆ ಕೂಡ ವಿಶಾಲವಾಗಿರಲಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಈ ಬಾರಿ ಹಿಂದೆ ಮುಂದೆ ಯೋಚಿಸದೆ ಕಾಸು ಸುರಿಯಲಿದ್ದಾರೆ. ಎಷ್ಟು ಕೋಟಿ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್ ಆಫ್ ಕಾಂತಾರ.

    ಒಂದು ಸಿನಿಮಾ ಅನಿರೀಕ್ಷಿತವಾಗಿ ಗೆದ್ದು ಬಿಟ್ಟರೆ, ಎಲ್ಲರ ಕಲ್ಪನೆ ಮೀರಿ ಕಾಸು ಮಾಡಿದರೆ, ಒಂದು ಚಿತ್ರರಂಗದ ದಿಕ್ಕನ್ನೇ ಹೊಸ ದಾದಿಯತ್ತ ಕರೆದುಕೊಂಡು ಹೋದರೆ ಏನಾಗುತ್ತದೋ ಈಗ ಕಾಂತಾರಕ್ಕೂ ಅದೇ ಆಗಿದೆ. ಕನಸು ಮನಸಲ್ಲೂ ಇಂಥ ದೀಪಾವಳಿ ಮಾಡುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಅದೀಗ ನಡೆದುಹೋಗಿದೆ. ಈಗ ಎಲ್ಲ ಜವಾಬ್ದಾರಿ ರಿಷಬ್‌ಶೆಟ್ಟಿ ಹಾಗೂ ತಂಡದ ಮೇಲೆ ಬಿದ್ದಿದೆ.

  • ಲವ್‍ಮಾಕ್ಟೇಲ್-2 ಸ್ಕ್ರಿಪ್ಟ್ ಬರೆಯೋದ್ರಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಫುಲ್ ಬ್ಯುಸಿ

    ಲವ್‍ಮಾಕ್ಟೇಲ್-2 ಸ್ಕ್ರಿಪ್ಟ್ ಬರೆಯೋದ್ರಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಫುಲ್ ಬ್ಯುಸಿ

    ಬೆಂಗಳೂರು: ಲವ್ ಮಾಕ್‍ಟೇಲ್ ಸಕ್ಸಸ್ ಬಳಿಕ ಅದೇ ಸೀಕ್ವೆಲ್‍ನ ಮತ್ತೊಂದು ಸಿನಿಮಾ ಮಾಡಲು ನಟ, ನಿರ್ದೇಶಕ ಡಾರ್ಲಿಂಗ್ ನಿರ್ಧರಿಸಿರುವುದು ತಿಳಿದಿರುವ ವಿಚಾರ. ಆದರೆ ಅದರ ಕೆಲಸಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಡಾರ್ಲಿಂಗ್ ಕೃಷ್ಣ ನೀಡಿರಲಿಲ್ಲ. ಇದೀಗ ಆ ಗುಟ್ಟು ಹೊರ ಬಿದ್ದಿದ್ದು, ಲವ್ ಮಾಕ್‍ಟೇಲ್-2 ತಯಾರಿ ಭರದಿಂದ ಸಾಗಿದೆ.

    ಕನ್ನಡ ಚಿತ್ರರಂಗದಲ್ಲಿ ಲವ್ ಮಾಕ್‍ಟೇಲ್ ಮಾಡಿದ ಮೋಡಿ ಅಂತಿತದ್ದಲ್ಲ. ಇನ್ನೇನು ಎಲ್ಲ ಥೀಯೇಟರ್‍ಗಳಲ್ಲಿ ತೆಗೆಯಲಾಗಿದೆ ಎನ್ನುವಷ್ಟರಲ್ಲೇ ಕೇವಲ ಒಂದು ಚಿತ್ರಮಂದಿರಲ್ಲಿ ಒಂದೇ ಶೋ ನಡೆಯುತ್ತಿದ್ದ ಸಿನಿಮಾ, ಬರು ಬರುತ್ತ ಮಲ್ಟಿಫ್ಲೆಕ್ಸ್‍ಗಳಲ್ಲಿ ಸದ್ದು ಮಾಡಲು ಪ್ರಾರಂಭಿಸಿತು. ಥೀಯೇಟರ್‍ನಲ್ಲಿ ಸದ್ದು ಮಾಡಿದ್ದಲ್ಲದೇ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಹ ಫುಲ್ ಹವಾ ಸೃಷ್ಟಿಸಿತ್ತು. ಸಾಮಾಜಿಕ ಜಲತಾಣಗಳಲ್ಲಂತೂ ನಿಧಿಮಾ ಬಗ್ಗೆಯೇ ಮಾತು. ಹುಡುಗರು ಹೆಂಡತಿ ಇದ್ದರೆ ನಿಧಿಮಾ ರೀತಿ ಇರಬೇಕು ಎನ್ನುವಷ್ಟರ ಮಟ್ಟಿಗೆ ಚರ್ಚೆ ನಡೆದಿತ್ತು.

    ಸಿನಿಮಾ ಸೋತಿತು ಎನ್ನುವಷ್ಟರಲ್ಲಿ ಅದು ಗೆದ್ದ ಪರಿ ಹಾಗೂ ಜನಪ್ರಿಯತೆ ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಹೀಗಾಗಿ ಅದೇ ಮೂಡ್‍ನಲ್ಲಿದ್ದರು. ಈ ಹೊತ್ತಿನಲ್ಲಿ ಇನ್ನೊಂದು ಅಚ್ಚರಿಯ ಸುದ್ದಿಯೂ ಹೊರ ಬಿತ್ತು. ಅದೇ ಲವ್ ಮಾಕ್‍ಟೇಲ್-2 ಸಿನಿಮಾ ಮಾಡುವುದು. ಹೌದು ಡಾರ್ಲಿಂಗ್ ಕೃಷ್ಣ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದಾಗಿನಿಂದ ಅದರಲ್ಲೇ ಮಗ್ನರಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಸ್ಕ್ರಿಪ್ಟ್ ಬರೆಯಲು ಇದೇ ಉತ್ತಮ ಅವಕಾಶ ಎಂದು ಮನೆಯಲ್ಲೇ ಕುಳಿತು, ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

    ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಆ್ಯಂಡ್ ಟೀಮ್ ಸಿನಿಮಾ ಸ್ಕ್ರಿಪ್ಟ್ ಬರೆಯುವ ಕಾರ್ಯದಲ್ಲಿ ಮಗ್ನರಾಗಿದ್ದು, ಹಗಲು ರಾತ್ರಿ ಎನ್ನದೆ, ಪೆನ್, ಪುಸ್ತಕ ಹಿಡಿದು ಕೆಲಸ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕಂಡಿದ್ದು, ಡಾರ್ಲಿಂಗ್ ಕೃಷ್ಣ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿದ್ದು, ಬ್ರೇನ್‍ಸ್ಟಾರ್ಮಿಂಗ್ ಫಾರ್ ಲವ್ ಮಾಕ್‍ಟೇಲ್-2 ವಿತ್ ಮೈ ಟೀಮ್ ಎಂದು ಲವ್ ಎಮೋಜಿ ಹಾಕಿದ್ದಾರೆ. ಅಲ್ಲದೆ ಹ್ಯಾಶ್ ಟ್ಯಾಗ್‍ನೊಂದಿಗೆ ಸ್ಕ್ರಿಪ್ಟಿಂಗ್, ಸಂಡೇ ಎಂದು ಬರೆದು, ಮಿಲನ ನಾಗರಾಜ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

     

    View this post on Instagram

     

    Brainstorming for Love mocktail 2 with my team♥️♥️ #scripting #Sunday @milananagaraj

    A post shared by Darling Krishna (@darling_krishnaa) on

    ಈ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡುತ್ತಿದ್ದು, ವೇಟಿಂಗ್ ಫಾರ್ ಲವ್ ಮಾಕ್‍ಟೇಲ್-2 ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮೈ ಫೇವರಿಟ್ ಕಪಲ್ಸ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಲವ್ ಮಾಕ್‍ಟೇಲ್-2ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.