Tag: screwdriver

  • ಸ್ಕ್ರೂಡ್ರೈವರ್‌ನಲ್ಲಿ ಪತ್ನಿಯ ಕತ್ತು, ಎದೆಗೆ ಚುಚ್ಚಿ ಕೊಲೆಗೆ ಮುಂದಾದ ಪತಿ!

    ಸ್ಕ್ರೂಡ್ರೈವರ್‌ನಲ್ಲಿ ಪತ್ನಿಯ ಕತ್ತು, ಎದೆಗೆ ಚುಚ್ಚಿ ಕೊಲೆಗೆ ಮುಂದಾದ ಪತಿ!

    ಚಿಕ್ಕಬಳ್ಳಾಪುರ: ಸ್ಕ್ರೂಡ್ರೈವರ್ ಮೂಲಕ ಪತ್ನಿಯ ಕತ್ತು, ಎದೆಗೆ ಚುಚ್ಚಿ ಪತಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ದಲ್ಲಿ ನಡೆದಿದೆ. ಗಾಯಗೊಂಡಾಕೆಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. ಈಕೆಯನ್ನು ಗಂಡ ರಾಜೇಶ್ ಕೊಲೆ ಮಾಡಲು ಯತ್ನಿಸಿದ್ದಾನೆ.

    ಏಮಿದು ಘಟನೆ..?: ಪ್ರೀತಿಸಿ ಮದುವೆ (Nirmala- Rajesh Love Marriage) ಯಾದ ನಿರ್ಮಲಾ, ಪತಿ ರಾಜೇಶ್‍ನನ್ನು ಬಿಟ್ಟು ತಿಂಗಳಿಂದ ನಾಪತ್ತೆಯಾಗಿದ್ದಳು. ಹೆಂಡತಿ ಎಲ್ಲೋ ಹೊದ್ಲು ಅಂತ ಹುಡುಕಾಡ್ತಿದ್ದ ಗಂಡನ ಕಣ್ಣಿಗೆ ಕಂಡಿದ್ದೇ ತಡ, ಹೆಂಡತಿನಾ ಜೊತೆ ಬರುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಆದರೆ ಹೆಂಡತಿ ನಾನು ಬರಲ್ಲ ಅಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಗಂಡ ಆಕೆಯ ಮುಖಮೂತಿ ನೋಡದೆ ಸ್ಕ್ರೂಡ್ರೈವರ್‍ನಿಂದ ಕುತ್ತಿಗೆಗೆ ಚುಚ್ಚಿ ಹಾಗೂ ಚಾಕುವಿನಿಂದ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆ ಸೇರಿದ್ದಾಳೆ. ಇತ್ತ ಗಂಡ, ಹೆಂಡತಿ ಸತ್ತೇ ಹೋದಳು ಅನ್ನೋ ಭಯದಿಂದ ಬಾರ್‍ಗೆ ಹೋಗಿ ಎಣ್ಣೆ ಕುಡಿದು ನಶೆಯಲ್ಲಿ ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇದನ್ನೂ ಓದಿ: ಅಂಕೋಲಾ ಬಸ್ ನಿಲ್ದಾಣದಲ್ಲಿ ಕಸ ಸ್ವಚ್ಛ ಮಾಡಿದ ಹಾಲಕ್ಕಿ ಮಹಿಳೆಯನ್ನು ಹೊಗಳಿದ ಆನಂದ್ ಮಹೇಂದ್ರ

    ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಿಮ್ಮಲಕುಂಟೆ ನಿವಾಸಿಯಾಗಿರುವ ರಾಜೇಶ್, ವೃತ್ತಿಯಲ್ಲಿ ಬೋರ್ ಮೋಟಾರ್ ರಿಪೇರಿ ಮಾಡುತ್ತಿದ್ದಾನೆ. ಈತ ಬೆಂಗಳೂರಿನ ಕೆ.ಆರ್ ಪುರಂನ ಲೀಲಾ ಜೊತೆ ಮೊದಲ ಮದುವೆಯಾಗಿದ್ದ. ಆದರೆ ಲೀಲಾ ಬಾಣಂತಿಗೆ ತವರು ಮನೆ ಸೇರಿದಾಗ ಆಕೆಯ ಅಕ್ಕ ನಿರ್ಮಲಾಳನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ನಂತರ ಕೂಲಿ ಅರಸಿ ಊರೂರು ಅಲೆದು ಸಂಸಾರ ನಡೆಸುತ್ತಿದ್ದರು. ಆದರೆ ಕಳೆದ 1 ತಿಂಗಳ ಹಿಂದೆ ದಿಬ್ಬೂರಹಳ್ಳಿಯಲ್ಲಿ ವಾಸವಿದ್ದಾಗ ನಿರ್ಮಲಾ, ರಾಜೇಶ್ ಗೆ ಏನೂ ಹೇಳದೆ ಹೊರಟು ಹೋಗಿದ್ದಳು. ಹೀಗಾಗಿ ಹೆಂಡತಿ ಹುಡುಕಾಟ ನಡೆಸುತ್ತಿದ್ದ ರಾಜೇಶ್ ಗೆ ನಿನ್ನೆ ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೇನಹಳ್ಳಿ ಬಳಿ ನಿರ್ಮಲಾ ಕಂಡಿದ್ದಾಳೆ.

    ಸ್ನೇಹಿತೆ ಸುನೀತಾ ಮನೆಯಲ್ಲಿದ್ದ ನಿರ್ಮಲಾಳನ್ನ ಪರಿಪರಿಯಾಗಿ ತನ್ನ ಜೊತೆ ವಾಪಸ್ ಬರುವಂತೆ ಕೇಳಿಕೊಂಡಿದ್ದಾನೆ. ಆದರೆ ನಾನು ನಿನ್ನ ಜೊತೆ ಬರಲ್ಲ ನನ್ನ ಮರ್ಯಾದೆ ತೆಗೀಬೇಡಿ ಅಂತ ಗಲಾಟೆ ಮಾಡಿದ್ದಾಳೆ. ಇದರಿಂದ ರೋಸಿ ಹೋದ ರಾಜೇಶ್, ಸುನೀತಾ ಮನೆಯಲ್ಲಿಯೇ ಇದ್ದ ಸ್ಕ್ರೂಡ್ರೈವರ್ ತಗೊಂಡು ನಿರ್ಮಲಾ ಕುತ್ತಿಗೆಗೆ ಇರಿದಿದ್ದಾನೆ. ತನ್ನ ಬಳಿಯೇ ಇದ್ದ ಚಿಕ್ಕ ಚಾಕುವಿನಿಂದ ಎದೆ ಹಾಗೂ ಕುತ್ತಿಗೆ ಮುಖದ ಮೇಲೆ ಕೊಯ್ದಿದ್ದಾನೆ.

    ನಿರ್ಮಲಾ ಹೇಳೋ ಪ್ರಕಾರ, ಎಡಗೈ ಮೂಳೆ ಸಮಸ್ಯೆಗೆ ಗಂಡ ಚಿಕಿತ್ಸೆ ಕೊಡಿಸ್ತಿಲ್ಲ ಅಂತ ತವರು ಮನೆ ಸೇರಿದ್ದೆ. ಚಿಕಿತ್ಸೆ ಪಡೆಯೋಕೆ ದುಡ್ಡು ಇಲ್ಲ ಅಂತ ಮುದ್ದೇನಹಳ್ಳಿಯ ಪ್ರೀ ಹಾಸ್ಪಿಟಲ್ ಗೆ ಟ್ರೀಟ್ ಮೆಂಟ್ ಗೆ ಅಂತ ಬಂದಿದ್ದೆ. ಈ ವೇಳೆ ಸ್ನೇಹಿತೆ ಸುನೀತಾ ಸಿಕ್ಕಿದರು. ಅವರ ಮನೆಗೆ ಹೋಗಿದ್ದೆ. ಆದರೆ ಅಲ್ಲಿಗೆ ನನ್ನ ಗಂಡ ಬಂದು ಏಕಾಏಕಿ ಗಲಾಟೆ ಮಾಡಿ ಮರ್ಡರ್ ಮಾಡೋಕೆ ಮುಂದಾದನು. ಈ ವೇಳೆ ಸುನೀತಾ ಸಹ ನಿರ್ಮಲಾ ರಕ್ಷಣೆಗೆ ಮುಂದಾಗಿದ್ದು, ಆಕೆಯ ಕೈಗೆ ಗಾಯವಾಗಿದೆ ಎಂದು ತಿಳಿಸಿದ್ದಾಳೆ.

    ಸದ್ಯ ಗಾಯಾಳು ನಿರ್ಮಲಾಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ

    ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ

    ಬೆಳಗಾವಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ದುಷ್ಕರ್ಮಿಗಳು ಸ್ಕ್ರೂಡ್ರೈವರ್‌ನಿಂದ (Screwdriver) ಯುವಕನ ಎದೆಗೆ ಚುಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿರುವ ಮಚ್ಚೆ ಬಳಿ ಯಳ್ಳೂರ ರಸ್ತೆಯಲ್ಲಿ ನಡೆದಿದೆ.

    ತಾಲೂಕಿನ ಮಜಗಾಂವ ಗ್ರಾಮದ ಪ್ರತೀಕ್ ಲೋಹಾರ್ (21) ಹತ್ಯೆಯಾದ ಯುವಕ. ಬೆಳಗಾವಿ (Belagavi) ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಹೋಗುವಾಗ ಹತ್ಯೆ ಮಾಡಲಾಗಿದೆ. ಪ್ರತೀಕ್ ಸ್ನೇಹಿತನ (Friend) ಜೊತೆಗೆ ಕೆಲವರು ಜಗಳ ಆಡುತ್ತಿದ್ದರು. ಈ ವೇಳೆ ಜಗಳ ಬಿಡಿಸಲು ಹೋಗಿದ್ದ ಪ್ರತೀಕ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ಪ್ರೀತಂ ಗೌಡರಿಂದ ಭರಪೂರ ಕೊಡುಗೆ – ಬಾಗಿನ ಹೆಸರಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚಿಕೆ

    ಈ ಹಿಂದೆ ಹಲವು ಬಾರಿ ದುಷ್ಕರ್ಮಿಗಳು ಪ್ರತೀಕ್ ಜತೆಗೆ ಜಗಳವಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆತ‌‌ ಜಗಳ ಬಿಡಿಸಲು ಬರುತ್ತಿದ್ದಂತೆ ಪ್ರತೀಕ್‌ನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಬೈಕ್‌ನಲ್ಲಿದ್ದ ಸ್ಕ್ರೂಡ್ರೈವರ್‌ನಿಂದ ಎದೆಗೆ ಚುಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ- ಮಾಂಸ ಸಂರಕ್ಷಣೆಯ ತರಬೇತಿ ಪಡೆದಿದ್ದ ಅಫ್ತಾಬ್

  • ಮಾತನಾಡದ್ದಕ್ಕೆ 51 ಬಾರಿ ಸ್ಕ್ರೂ ಡ್ರೈವರ್‌ನಿಂದ ಇರಿದು ಯುವತಿಯ ಕೊಲೆ

    ಮಾತನಾಡದ್ದಕ್ಕೆ 51 ಬಾರಿ ಸ್ಕ್ರೂ ಡ್ರೈವರ್‌ನಿಂದ ಇರಿದು ಯುವತಿಯ ಕೊಲೆ

    ರಾಯ್ಪುರ್: ಮಾತನಾಡದಿದ್ದಕ್ಕೆ ವ್ಯಕ್ತಿಯೊಬ್ಬ 20 ವರ್ಷದ ಯುವತಿಯನ್ನು (Woman) 51 ಬಾರಿ ಸ್ಕ್ರೂ ಡ್ರೈವರ್‌ನಿಂದ (Screwdriver) ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಛತ್ತೀಸ್‍ಗಢದ (Chhattisgarh) ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.

    ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಜಶ್ಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಈತ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಬಸ್‍ನಲ್ಲಿ ಹೋಗುತ್ತಿದ್ದ ಯುವತಿಯ ಪರಿಚಯವಾಗಿತ್ತು. ಈ ಪರಿಚಯದ ಮೂಲಕವೇ ನಂಬರ್‌ನ್ನು ಕಂಡೆಕ್ಟರ್‌ಗೆ ನಂಬರ್ ನೀಡಿದ್ದಳು.

    ಆದರೆ ಆತ ಕೆಲಸಕ್ಕಾಗಿ ಗುಜರಾತ್‍ನ ಅಹಮದಾಬಾದ್‍ಗೆ ತೆರಳಿದ್ದ. ಇದಾದ ಬಳಿಕವು ಕೆಲವು ತಿಂಗಳ ಕಾಲ ಫೋನ್ (Phone) ಸಂಪರ್ಕದಲ್ಲಿದ್ದರು. ಆದರೆ ನಂತರದಲ್ಲಿ ಆ ಯುವತಿಯು ಆತನೊಂದಿಗೆ ಫೋನ್‍ನಲ್ಲಿ ಮಾತನಾಡುವುದನ್ನು ನಿಲ್ಲಿಸಿದ್ದಾಳೆ. ಅದರಿಂದ ಸಿಟ್ಟಿಗೆದ್ದ ಕಂಡೆಕ್ಟರ್ ಆಕೆಯ ಪೋಷಕರಿಗೂ ಬೆದರಿಕೆಯನ್ನು ಹಾಕಿದ್ದ. ಇದನ್ನೂ ಓದಿ: KGF ನ ಬಿಇಎಂಎಲ್ ಬಳಕೆ ಮಾಡದ 967 ಎಕರೆ ಜಾಗದಲ್ಲಿ ಕೈಗಾರಿಕೆ ಟೌನ್ ಶಿಪ್: ಮುರುಗೇಶ್‌ ನಿರಾಣಿ

    ಆದಾದ ಬಳಿಕವೂ ಆಕೆ ಮಾತನಾಡದಿದ್ದರಿಂದ ಆಕೆ ಒಬ್ಬಳೇ ಇದ್ದಾಗ ಅವಳ ಮನೆಗೆ ಬಂದಿದ್ದಾನೆ. ಈ ವೇಳೆ ಆಕೆ ಕಿರುಚಾಡಿ ನೆರೆಹೊರೆಯವರನ್ನು ಕರೆಯಲು ಪ್ರಯತ್ನಿಸಿದ್ದಾಳೆ. ಆದರೆ ಆರೋಪಿಯು ಯುವತಿ ಕಿರುಚದಂತೆ ತಡೆಯಲು ಆಕೆಯ ಬಾಯಿಯನ್ನು ದಿಂಬಿನಿಂದ ಮುಚ್ಚಿ ಸ್ಕ್ರೂ ಡ್ರೈವರ್‌ನಲ್ಲಿ 51 ಬಾರಿ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.

    crime

    ಘಟನೆಯಾದ ನಂತರ ಮನೆಗೆ ಬಂದ ಯುವತಿಯ ಸಹೋದರ ರಕ್ತದ ಮಡುವಿನಲ್ಲಿ ಆಕೆಯನ್ನು ಕಂಡಿದ್ದಾನೆ. ಕೂಡಲೇ ಆತ ಪೊಲೀಸರಿಗೆ ದೂರು ದಾಖಲಿಸಿದ್ದಾನೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ವಿದೇಶಿಯರಿಗೆ ಟಫ್ ರೂಲ್ಸ್ – ಫೈಜರ್ ಲಸಿಕೆ ನೀಡಲು ನಿರ್ಧಾರ

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಪತ್ನಿಯನ್ನೆ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಂದ!

    ಕುಡಿದ ಮತ್ತಿನಲ್ಲಿ ಪತ್ನಿಯನ್ನೆ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಂದ!

    ತುಮಕೂರು: ಕುಡಿದ ಮತ್ತಿನಲ್ಲಿ ಪತ್ನಿಯನ್ನ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಲೆ ಮಾಡಿರೋ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ಜಯಮ್ಮ(52) ಕೊಲೆಯಾದ ದುರ್ದೈವಿ ಮಹಿಳೆ. ತುಮಕೂರು ಜಿಲ್ಲೆ ಹೆಬ್ಬೂರು ಸಮೀಪದ ಕೆಂಬಳಲು ಕಾಲೋನಿಯಲ್ಲಿ ಪ್ರಕರಣ ನಡೆದಿದೆ. ಪಾಪಿ ಪತಿ ನಾಗರಾಜ್(58) ಕೊಲೆಗೈದ ಆರೋಪಿಯಾಗಿದ್ದಾನೆ. ನಾಗರಾಜ್ ಕ್ಷುಲ್ಲಕ ಕಾರಣಕ್ಕೆ ಜಯಮ್ಮಳನ್ನ ಸ್ಕ್ರೂಡೈವರ್‌ನಿಂದ ಚುಚ್ಚಿ ಕೊಲೆ ಮಾಡಿದ್ದೂ, ಅಲ್ಲದೆ ಬಾತ್ ರೂಂ ಫಿಟ್ ಗುಂಡಿಯಲ್ಲಿ ಬಿಸಾಡಿದ್ದಾನೆ. ಇದನ್ನೂ ಓದಿ: ಕೊರೊನಾ ಹರಡಿದ್ದು, ಟ್ರಾಫಿಕ್ ಜಾಮ್ ಮಾಡಿದ್ದು ಪಾದಯಾತ್ರೆ ಸಾಧನೆ: ಕಾರಜೋಳ ವ್ಯಂಗ್ಯ

    ನಡೆದಿದ್ದೇನು?
    ನಾಗರಾಜ್, ಜಯಮ್ಮಳನ್ನು ಎರಡನೇ ಮದುವೆಯಾಗಿದ್ದನು. ಕಳೆದ ಮೂರು ದಿನಗಳ ಹಿಂದೆ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವೇಳೆ ಸ್ಕ್ರೂಡೈವರ್ ನಿಂದ ಪತ್ನಿಗೆ ಮನಬಂದಂತೆ ಚುಚ್ಚಿ ಕೊಲೆಗೈದಿದ್ದಾನೆ. ಬಳಿಕ ಮನೆ ಹಿಂಬದಿಯಿದ್ದ ಬಾತ್ ರೂಂ ಫಿಟ್ ಗೆ ಮೃತದೇಹವನ್ನ ಎಸೆದಿದ್ದಾನೆ.

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!

  • ಬೆಕ್ಕನ್ನು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದವನಿಗೆ 9 ಸಾವಿರ ದಂಡ

    ಬೆಕ್ಕನ್ನು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದವನಿಗೆ 9 ಸಾವಿರ ದಂಡ

    ಮುಂಬೈ: 2018 ರಲ್ಲಿ ಬೆಕ್ಕನ್ನು ಸ್ಕ್ರೂಡ್ರೈವರ್‌ನಿಂದ  ಚುಚ್ಚಿ ಕೊಂದವನಿಗೆ ಮುಂಬೈ ಕೋರ್ಟ್ 9,150 ರೂ. ದಂಡ ಹಾಕಿದೆ.

    40 ವರ್ಷ ಸಂಜಯ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು ಕೋರ್ಟ್ ದಂಡ ವಿಧಿಸಿದೆ. ಈತ 2018 ಮೇ 14 ರಂದು ತನ್ನ ಮನೆಗೆ ಬಂದ ಬೆಕ್ಕನ್ನು ಸ್ಕ್ರೂಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಿದ್ದ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಜಯ್ ವಿರುದ್ಧ ಆರ್.ಸಿ.ಎಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಮೇ 14 ರಂದು ಮನೆಗೆ ಬಂದು ಮನೆಯಲ್ಲಿ ಆಟವಾಡುತ್ತಿದ್ದ ಬೆಕ್ಕನ್ನು ಸಂಜಯ್ ಗಡೆ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಸಾಯಿಸಿ ಹಾಕಿದ್ದ. ನಂತರ ಆದರ ಮೃತದೇಹವನ್ನು ಕೋಲಿನ ಮೇಲೆ ಇಟ್ಟುಕೊಂಡು ಅದನ್ನು ಬಿಸಾಡಲು ಹೋಗಿದ್ದಾನೆ. ಈ ಸಮಯದಲ್ಲಿ ಸ್ಥಳೀಯರು ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ಫೋಟೋ ವೈರಲ್ ಆದ ನಂತರ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ನಿರಾಲಿ ಕೊರಡಿಯಾ ಅವರು ಸಂಜಯ್ ವಿರುದ್ಧ ಮೇ 21, 2018 ರಂದು ದೂರು ನೀಡಿದ್ದರು. ಇದನ್ನು ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ದೂರನ್ನು ದಾಖಲಿಸಿಕೊಂಡ ಪೊಲೀಸರು ಸಂಜಯ್ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಕಟ್ಟುವ ಕಾಯ್ದೆ ಮತ್ತು ವಿವಿಧ ವಿಭಾಗಗಳ ಆಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋವನ್ನು ಸಾಕ್ಷಿಯಾಗಿ ನೀಡಿದ್ದರು. ಇಂದು ಈ ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಸಂಜಯ್ ಗಡೆಗೆ 9,150 ರೂ. ದಂಡ ವಿಧಿಸಿದ್ದಾರೆ.

    ಪೊಲೀಸರು ನೀಡಿರುವ ಸಾಕ್ಷಿಯನ್ನು ಪರಿಶೀಲನೆ ಮಾಡಿದರೆ ಸಂಜಯ್ ಗಡೆ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಆದರೆ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿ ಇಲ್ಲದ ಕಾರಣ ಆತನಿಗೆ ಕೇವಲ ದಂಡ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

  • ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಶಿಮ್ಲಾ: ಮನುಷ್ಯನೊಬ್ಬನ ಹೊಟ್ಟೆಯೊಳಗೆ 8 ಸ್ಪೂನ್ಸ್ ಮತ್ತು 2 ಸ್ಕ್ರೂ ಡ್ರೈವರ್, 2 ಟೂತ್‍ಬ್ರೆಶ್ ಮತ್ತು ಚಾಕುವನ್ನು ನೋಡಿದ ಡಾಕ್ಟರ್‍ಗಳು ಶಾಕ್ ಆಗಿದ್ದಾರೆ.

    ಈ ಘಟನೆ ಮಂಡಿ ಎಂಬ ನಗರದಲ್ಲಿ ನಡೆದಿದೆ. ಇಲ್ಲಿನ ಕರ್ನ್ ಸೇನ್ ಎಂಬ 35 ವರ್ಷದ ವ್ಯಕ್ತಿಯು ಅಡುಗೆ ಮನೆಯಲ್ಲಿ ಇರಬೇಕಾದ ಸ್ಪೂನ್ಸ್, ಸ್ಕ್ರೂ ಡ್ರೈವರ್, ಟೂತ್‍ಬ್ರೆಶ್ ಮತ್ತು ಚಾಕು ಎಲ್ಲಾ ವಸ್ತುಗಳನ್ನು ಹೊಟ್ಟೆಯಲ್ಲೇ ಇಟ್ಟಕೊಂಡಿದ್ದಾನೆ.

    ಕೆಲ ದಿನಗಳ ಹಿಂದೆ ಕರ್ನ್ ಸೇನ್ ಹೊಟ್ಟೆಯಲ್ಲಿ ಹುಣ್ಣಿದೆ ಎಂದು ಹೇಳಿದ್ದನು. ಇದರಿಂದ ಮನೆಯವರು ಅವನನ್ನು ಸುಂದರ್ ನಗರದ ಅಸ್ಪತ್ರೆಗೆ ಕೆರದುಕೊಂಡು ಬಂದಿದ್ದಾರೆ. ಪ್ರಾಥಮಿಕ ಪರೀಕ್ಷೆಯ ನಂತರ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಅಸ್ಪತ್ರೆಗೆ ಕಳುಹಿಸಲಾಗಿದೆ.

    ಇಲ್ಲಿ ಅವರಿಗೆ ಎಕ್ಸ್-ರೇ ಮಾಡಲಾಗಿದೆ. ಈ ವೇಳೆ ಅವರ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡು ಬಂದಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಮೂರು ಜನ ವೈದ್ಯರ ತಂಡ 4 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರಕ್ಕೆ ತೆಗೆದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಾಕ್ಟರ್, ಇದು ತಂಬ ಅಪರೂಪದ ಪ್ರಕರಣ ಎಕ್ಸ್-ರೇ ಯಲ್ಲಿ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡುಬಂದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದೇವೆ. ಈ ರೋಗಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ. ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.