Tag: Screenshot

  • ವಾಟ್ಸಪ್‌ನಲ್ಲಿ ಇನ್ಮುಂದೆ ಸ್ಕ್ರೀನ್‌ಶಾಟ್ ತೆಗೆಯೋಕ್ಕಾಗಲ್ಲ – ಹೊಸ ಫೀಚರ್ ಬಗ್ಗೆ ಇಲ್ಲಿದೆ ಮಾಹಿತಿ

    ವಾಟ್ಸಪ್‌ನಲ್ಲಿ ಇನ್ಮುಂದೆ ಸ್ಕ್ರೀನ್‌ಶಾಟ್ ತೆಗೆಯೋಕ್ಕಾಗಲ್ಲ – ಹೊಸ ಫೀಚರ್ ಬಗ್ಗೆ ಇಲ್ಲಿದೆ ಮಾಹಿತಿ

    ವಾಷಿಂಗ್ಟನ್: ವಾಟ್ಸಪ್ ತನ್ನ ಬಳಕೆದಾರರಿಗೆ ಹೆಚ್ಚು ಹೆಚ್ಚು ಗೌಪ್ಯತೆಯನ್ನು ಕಾಪಾಡಲು ಹೊಸ ಹೊಸ ಫೀಚರ್‌ಗಳನ್ನು ತರುತ್ತಲೇ ಇದೆ. ಇದೀಗ ವಾಟ್ಸಪ್ ಬಳಕೆದಾರರ ಗೌಪ್ಯತೆಯನ್ನು ಕಾಪಾಡುವಂತಹ ಅತಿ ಉಪಯುಕ್ತ 3 ಫೀಚರ್‌ಗಳನ್ನು ತರಲು ಸಿದ್ಧವಾಗಿದೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಗೌಪ್ಯವಾಗಿಯೇ ಗ್ರೂಪ್‌ನಿಂದ ನಿರ್ಗಮಿಸಿ:
    ಮೆಸೆಜಿಂಗ್ ದೈತ್ಯ ಇದೀಗ ಬಳಕೆದಾರರಿಗೆ ವಾಟ್ಸಪ್ ಗ್ರೂಪ್‌ಗಳಿಂದ ಮೌನವಾಗಿ ತೊರೆಯಲು ಸಹಾಯ ಮಾಡುತ್ತಿದೆ. ಯಾವುದಾದರೂ ಗ್ರೂಪ್ ನಿಮಗೆ ಬಹಳಷ್ಟು ಕಿರಿಕಿರಿ ಉಂಟುಮಾಡುತ್ತಿದ್ದರೆ, ಆ ಗ್ರೂಪ್‌ನ ಸದಸ್ಯರಾರಿಗೂ ತಿಳಿಯದಂತೆ ನಿರ್ಗಮಿಸಲು ಸಾಧ್ಯವಿದೆ. ನೀವು ಗ್ರೂಪ್ ತೊರೆಯುವ ಬಗ್ಗೆ ಆ ಗ್ರೂಪ್‌ನ ಅಡ್ಮಿನ್‌ಗೆ ಮಾತ್ರ ತಿಳಿಯುವಂತಹ ಹೊಸ ಫೀಚರ್ ಅನ್ನು ವಾಟ್ಸಪ್ ತರುತ್ತಿದೆ.

    ಆನ್‌ಲೈನ್ ಸ್ಥಿತಿ ಮರೆಮಾಡಿ:
    ವಾಟ್ಸಪ್ ಬಳಕೆದಾರರಿಗೆ ತಮ್ಮ ಪ್ರೊಫೈಲ್ ಚಿತ್ರ ಹಾಗೂ ಕೊನೆಯದಾಗಿ ಆನ್‌ಲೈನ್ ಇದ್ದ ಸಮಯವನ್ನು ಮರೆ ಮಾಡುವಂತಹ ಅವಕಾಶ ಈ ಮೊದಲೇ ನೀಡಿತ್ತು. ಆದರೆ ನೀವು ಆನ್‌ಲೈನ್ ಇರುವುದನ್ನು ಮರೆ ಮಾಡಲು ಅವಕಾಶ ನೀಡಿರಲಿಲ್ಲ. ಇದೀಗ ವಾಟ್ಸಪ್ ಪ್ರತಿ ಚ್ಯಾಟ್‌ನ ಮೇಲ್ಗಡೆ ತೋರಿಸುವ ಆನ್‌ಲೈನ್ ಅಥವಾ ಆಫ್‌ಲೈನ್ ಸ್ಥಿತಿಯನ್ನು ಮರೆ ಮಾಡಲು ಅವಕಾಶ ನೀಡಲಿದೆ. ನೀವು ಆನ್‌ಲೈನ್ ಇರುವುದರಿಂದ ನಿಮ್ಮ ಸ್ನೇಹಿತರು ಕಿರಿಕಿರಿ ಮಾಡುತ್ತಿದ್ದರೆ, ಅವರಿಗೆ ತಿಳಿಯದಂತೆ ಈ ಫೀಚರ್ ಅನ್ನು ಬಳಸಿ ಕಿರಿಕಿರಿ ತಪ್ಪಿಸಬಹುದಾಗಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಸ್ಕ್ರೀನ್‌ಶಾಟ್‌ಗೆ ನಿರ್ಬಂಧ:
    ಗೌಪ್ಯತೆಗೆ ಬಹಳ ಮುಖ್ಯವಾದ ಫೀಚರ್ ಅನ್ನು ವಾಟ್ಸಪ್ ಕೊನೆಗೂ ತರಲಿದೆ. ವಾಟ್ಸಪ್ ವೀವ್ ವನ್ಸ್(ಒಂದು ಬಾರಿ ಮಾತ್ರ ತೋರಿಸು) ಫೀಚರ್ ಅನ್ನು ಬಳಸುವ ಸಮಯ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಿದೆ. ವಾಟ್ಸಪ್ ಮೊದಲ ಬಾರಿ ವಿವ್ ವನ್ಸ್ ಫೀಚರ್ ಬಗ್ಗೆ ತಿಳಿಸಿದಾಗ ಬಹಳಷ್ಟು ಜನ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಮೂಲಕ ಫೀಚರ್‌ನ ಫೈಲ್ಯೂರ್ ಬಗ್ಗೆ ಟೀಕಿಸಿದ್ದರು. ಇದೀಗ ವೀವ್ ವನ್ಸ್ ಫೀಚರ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದನ್ನು ವಾಟ್ಸಪ್ ನಿರ್ಬಂಧಿಸುತ್ತಿದ್ದು, ಈ ಮೂಲಕ ಬಳಕೆದಾರರ ಗೌಪ್ಯತೆಗೆ ಮತ್ತಷ್ಟು ಒತ್ತು ನೀಡುತ್ತಿದೆ. ಇದನ್ನೂ ಓದಿ: ಆರೋಗ್ಯ ಸೇತು ಕಾರ್ಯ ನಿರ್ವಹಿಸುತ್ತಿಲ್ಲ – ವೈಯಕ್ತಿಕ ಮಾಹಿತಿಗಳ ಕತೆಯೇನು?

    Live Tv
    [brid partner=56869869 player=32851 video=960834 autoplay=true]

  • ಸ್ಕ್ರೀನ್ ಶಾಟ್ ತೋರ್ಸಿ ಹಾಕ್ತಾರೆ ಟೋಪಿ – ಫೋನ್ ಪೇ, ಗೂಗಲ್ ಪೇ ಬಳಸುವವರೇ ಹುಷಾರ್

    ಸ್ಕ್ರೀನ್ ಶಾಟ್ ತೋರ್ಸಿ ಹಾಕ್ತಾರೆ ಟೋಪಿ – ಫೋನ್ ಪೇ, ಗೂಗಲ್ ಪೇ ಬಳಸುವವರೇ ಹುಷಾರ್

    ಚಿಕ್ಕೋಡಿ: ನಿಮ್ಮ ಅಂಗಡಿಗಳಲ್ಲಿ ನೀವು ಫೋನ್ ಪೇ, ಗೂಗಲ್ ಪೇ ಯೂಸ್ ಮಾಡ್ತಿದ್ದಿರಾ? ಹಾಗಾದ್ರೆ ಈ ಸ್ಟೋರಿನಾ ನೀವು ಮಿಸ್ ಮಾಡದೇ ನೋಡಬೇಕು. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡೋರು ಹೇಗೆಲ್ಲ ಮೋಸ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣ ಖರೀದಿಸಿ ಬಂಗಾರದ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕಿದ ಗ್ಯಾಂಗ್ ಒಂದು ಈಗ ಪೊಲೀಸರ ಬಲೆಗೆ ಬಿದ್ದಿದೆ.

    ಡಿಜಿಟಲ್ ಇಂಡಿಯಾ ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆ. ನಗದು ವ್ಯವಹಾರವನ್ನು ಕಡಿಮೆ ಮಾಡಬೇಕು. ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಈ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ. ಆದರೆ ಇದನ್ನೆ ದಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ 

    ಬೆಳಗಾವಿ ಜಿಲ್ಲೆಯ ಗೋಕಾಕ್, ಹುಕ್ಕೇರಿ ಮತ್ತು ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಂದೇ ರೀತಿಯ ಪ್ರಕರಣಗಳು ವರದಿಯಾಗಿದ್ದವು. ಇದನ್ನು ಬೆನ್ನಟ್ಟಿದ ಪೊಲೀಸರು ಈಗ ಗ್ಯಾಂಗ್‍ನ ಪತ್ತೆ ಮಾಡಿದ್ದಾರೆ. ಬಂಗಾರದ ಅಂಗಡಿಗಳನ್ನು ಟಾರ್ಗೆಟ್ ಮಾಡ್ತಿದ್ದ ಖದೀಮರ ತಂಡ ಮೊದಲು ಒಂದು ತೊಲ ಬಂಗಾರ(10 ಗ್ರಾಂ) ಖರೀದಿ ಮಾಡಿ ಅದರ ಸಂಪೂರ್ಣ ಅಮೌಂಟ್ ಫೋನ್ ಪೇ ಮೂಲಕ ಸಂದಾಯ ಮಾಡಿ ಅವರ ವಿಶ್ವಾಸ ಗಳಿಸಿ ನಂತರ ಅದೇ ಅಂಗಡಿಗಳಲ್ಲಿ ಹೆಚ್ಚು ಬಂಗಾರ ಖರೀದಿ ಮಾಡುತ್ತಾರೆ.

    ಹಣ ಸಂದಾಯ ಮಾಡದೇ ಅಷ್ಟೇ ಅಮೌಂಟ್ ಸ್ಕ್ರೀನ್ ಶಾಟ್‌ನ್ನು ಮಾಲೀಕರಿಗೆ ತೋರಿಸಿ ಮಕ್ಮಲ್ ಟೋಪಿ ಹಾಕಿ ಅಲ್ಲಿಂದ ಪರಾರಿಯಾಗುತ್ತಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಠಾಣೆ, ರಾಯಭಾಗ ಠಾಣೆ ಮತ್ತು ಹುಕ್ಕೇರಿ ಠಾಣೆಗಳಲ್ಲಿ ಈಗ ಬಂಧಿತರಾಗಿರುವ ಆರೋಪಿಗಳ ಮೇಲೆ 8 ಪ್ರಕರಣ ದಾಖಲಾಗಿದ್ದವು.

    ಕಾರ್ಯಾಚರಣೆ ನಡೆಸಿರುವ ಪೊಲೀಸರು ಮಹಾರಾಷ್ಟ್ರ ಮೂಲದ ಹಾಗೂ ಕರ್ನಾಟಕದ ಕಾಗವಾಡ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 22 ಲಕ್ಷ ರೂಪಾಯಿ ಮೌಲ್ಯದ 421 ಗ್ರಾಂ. ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಜಾದಿ ಕಾ ಅಮೃತ ಮಹೋತ್ಸವದ ಹಿಂದೆ ಮೂರು ಮುಖ್ಯ ಕಾರಣವಿದೆ: ಅಮಿತ್ ಶಾ

    ಬಂಗಾರ ಖರೀದಿಸಿ ಹಣ ಜಮೆ ಮಾಡಿದ ಸ್ಕ್ರೀನ್ ಶಾಟ್ ತೋರಿಸಿ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕುವ ಜನರ ಬಗ್ಗೆ ಎಚ್ಚರವಾಗಿರಿ. ಹಣ ಜಮೆ ಆಗಿದ್ದನ್ನು ಕನ್ಫರ್ಮ್ ಮಾಡಿಕೊಂಡು ವ್ಯವಹಾರ ಮಾಡಿ ಅಂತ ಎಸ್‍ಪಿ ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]