ಹುಬ್ಬಳ್ಳಿ: ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜ್ ಬಳಿ ನಡೆದಿದೆ.
ಯಲ್ಲಾಪುರ ಓಣಿಯ ರಾಜಸಾಬ ಮುಲ್ಲಾ, ಖಾಜಾಸಾಬ ಮುಲ್ಲಾ ಮೃತ ದುರ್ದೈವಿಗಳು. ಇವರಿಬ್ಬರು ಎಂದಿನಂತೆ ತಮ್ಮ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ವೇಳೆ ಹಿಂಬದಿಯಿಂದ ಬರುತ್ತಿದ್ದ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ಬಳಿಕ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಉತ್ತರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
– ವೆಂಟಿಲೇಟರ್ ಜೋಡಣೆ ವೇಳೆ ಸ್ಕಾಟಿ ಬಳಕೆ – ಬ್ಲಿಂಕ್ ಇನ್ ಕಂಪನಿಯ ಉತ್ಪನ್ನ ಸ್ಕಾಟಿ
ಬೆಂಗಳೂರು: ಕೊರೊನಾದ ಕೇಂದ್ರಬಿಂದು ಚೀನಾದ ವುಹಾನ್ ನಗರದಲ್ಲಿನ ರಕ್ಷಣಾ ಕಾರ್ಯಕ್ರಮಕ್ಕೆ ಬೆಂಗಳೂರಿನ ಕಂಪನಿಯೊಂದು ಕೈಜೋಡಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.
ಒಂದು ವಾರದಲ್ಲಿ ವುಹಾನ್ ನಗರದಲ್ಲಿ 1 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದನ್ನು ನೀವು ಓದಿರಬಹುದು. ಕೊರೊನಾ ತಡೆಗಟ್ಟಡಲು ಚೀನಾ ಸರ್ಕಾರ ಸಮರೋಪಾದಿಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿತ್ತು. ಈ ಆರೋಗ್ಯ ರಕ್ಷಣಾ ಕೆಲಸಕ್ಕೆ ಬೆಂಗಳೂರು ಮೂಲದ ಎಆರ್(ಅಗ್ಯುಮೆಂಟೆಡ್ ರಿಯಾಲಿಟಿ) ಕಂಪನಿಯ ಸಹಕಾರವಿತ್ತು.
ಕೊರೊನಾ ವಿಪರೀತವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ವುಹಾನ್ ನಗರವನ್ನು ಲಾಕ್‍ಡೌನ್ ಮಾಡಲಾಗಿತ್ತು. ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವೆಂಟಿಲೇಟರ್ ಅವಶ್ಯಕವಾಗಿತ್ತು. ಈ ವೇಳೆ ಹಲವು ವೆಂಟಿಲೇಟರ್ ಗಳು ಜರ್ಮನಿಯ ಹ್ಯೂಬರ್ & ರಾನರ್ ಕಂಪನಿಯಿಂದ ಬಂದಿದ್ದವು. ತುರ್ತು ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿಗೆ ಚೀನಾಗೆ ತೆರಳಿ ಆಸ್ಪತ್ರೆಗೆ ತೆರಳಿ ಜೋಡಿಸುವುದು ಸವಾಲಿನ ಕೆಲಸವಾಗಿತ್ತು. ಈ ಕಷ್ಟದ ಸಂದರ್ಭದಲ್ಲಿ ಚೀನಿಯರಿಗೆ ಸಹಾಯ ಮಾಡಿದ್ದು ಬೆಂಗಳೂರಿನ ಬ್ಲಿಂಕ್‍ಇನ್ ಕಂಪನಿ.
ಸಹಾಯ ಹೇಗೆ?
ಹ್ಯೂಬರ್ & ರಾನರ್ ಕಂಪನಿ ಬ್ಲಿಂಕ್‍ಇನ್ ಕಂಪನಿಯ ಅಗ್ಯುಮೆಂಟೆಡ್ ರಿಯಾಲಿಟಿ ಉತ್ಪನ್ನವಾದ ‘ಸ್ಕಾಟಿ’ಯನ್ನು ಬಳಸಿದೆ. ವುಹಾನ್ ನಲ್ಲಿರುವ ವೈದ್ಯಕೀಯ ಸಿಬ್ಬಂದಿ ಕಂಪ್ಯೂಟರ್ ನಲ್ಲಿ ಮೂಡಿದ ಚಿತ್ರ/ ವಿಡಿಯೋಗಳ ಸಹಾಯದಿಂದ ಸಹಾಯದಿಂದ ವೆಂಟಿಲೇಟರ್ ಜೋಡಿಸಿದ್ದಾರೆ.
ಚೀನಾದ ವೈದ್ಯಕೀಯ ತಂತ್ರಜ್ಞರು ಫೋನಿನ ಮೂಲಕ ಹ್ಯೂಬರ್ & ರಾನರ್ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದುಕೊಂಡು ವೆಂಟಿಲೇಟರ್ ಜೋಡಿಸುತ್ತಿದ್ದಾಗ ಹಲವು ಸಮಸ್ಯೆಗಳು ಬಂದಿದೆ. ಈ ವೇಳೆ ‘ಸ್ಕಾಟಿ’ ಸಹಾಯದಿಂದ ಗ್ರಾಫಿಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.
ಹಲವು ಎರ್ ಅಪ್ಲಿಕೇಶನ್ ಗಳಿದ್ದು ಅವುಗಳನ್ನು ಬಳಸುವುದು ಅಷ್ಟು ಸುಲಭವಲ್ಲ. ಆದರೆ ಸ್ಕಾಟಿ ವೆಬ್‍ಜಿಎಲ್(ವೆಬ್ ಗ್ರಾಫಿಕ್ಸ್ ಲೈಬ್ರೆರಿ) ಎಪಿಐ ಜಾವಾಸ್ಕ್ರಿಪ್ಟ್ ಆಗಿದ್ದು ಯಾವುದೇ ಬ್ರೌಸರ್ ಮೂಲಕ ಬಳಸಬಹುದಾಗಿದೆ. ಹೀಗಾಗಿ ಬಹಳ ಸುಲಭವಾಗಿ ಚೀನಿಯರು ವೆಂಟಿಲೇಟರ್ ಗಳನ್ನು ಜೋಡಿಸಿದ್ದಾರೆ.
ಸ್ಕಾಟಿ ಲೈಟ್‍ವೇಟ್ ಪ್ರೊಡಕ್ಟ್ ಆಗಿದ್ದರಿಂದ ಬಳಕೆ ಸುಲಭವಾಗಿದೆ. ಬೇರೆ ಎಆರ್ ಉತ್ಪನ್ನಗಳನ್ನು ಬಳಕೆ ಮಾಡಬೇಕಾದರೆ ತುಂಬಾ ಡೌನ್‍ಲೋಡ್ ಮಾಡಬೇಕಾಗುತ್ತದೆ. ಸ್ಕಾಟಿ ಬಳಕೆ ಸುಲಭವಾಗಿದೆ ಎಂದು ಬ್ಲಿಂಕ್ ಇನ್ ಸಿಇಒ ಮತ್ತು ಸಹಸಂಸ್ಥಾಪಕ ಹರ್ಷವರ್ಧನ್ ಕುಮಾರ್ ತಿಳಿಸಿದ್ದಾರೆ.
ಬ್ಲಿಂಕ್ ಇನ್ ಕಚೇರಿ ಬೆಂಗಳೂರು ಮತ್ತು ಜರ್ಮನಿಯಲ್ಲಿದೆ. ಜರ್ಮನಿಯಲ್ಲಿ ಎಐ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಮತ್ತು ಎಆರ್(ಅಗ್ಯುಮೆಂಟೆಡ್ ರಿಯಾಲಿಟಿ) ತಂತ್ರಜ್ಞರು ವಿರಳ ಮತ್ತು ದುಬಾರಿ. ಈ ಕಾರಣಕ್ಕೆ ಬೆಂಗಳೂರಿನಿಂದ ಟೆಕ್ ಸಹಾಯ ಸಿಗುತ್ತಿದೆ.
ಹರ್ಷವರ್ಧನ್ ಕುಮಾರ್, ನಿತಿನ್ ಕುಮಾರ್, ಧೀರಜ್ ಚೌಧರಿ ಬೆಂಗಳೂರಿನ ಬ್ಲಿಂಕ್‍ಇನ್ ಸಹಸಂಸ್ಥಾಪಕರಾಗಿದ್ದಾರೆ. ಮೂರು ವರ್ಷದ ಈ ಕಂಪನಿ ಜರ್ಮನಿ ವಿಕೆಬಿ ಇನ್ಯೂರೆನ್ಸ್ ಕಂಪನಿಯ ಜೊತೆ ಈಗ ಕೆಲಸ ಮಾಡುತ್ತಿದ್ದು ಮುಂದೆ ಯುರೋಪ್ ಅಟೋಮೊಬೈಲ್ ಕಂಪನಿಗಳ ಜೊತೆ ಕೆಲಸ ಮಾಡಲಿದೆ.