Tag: scorpio

  • ಸ್ಕಾರ್ಪಿಯೋ, ಬೈಕ್ ಮುಖಾಮುಖಿ ಡಿಕ್ಕಿ- ಸವಾರ ದುರ್ಮರಣ

    ಸ್ಕಾರ್ಪಿಯೋ, ಬೈಕ್ ಮುಖಾಮುಖಿ ಡಿಕ್ಕಿ- ಸವಾರ ದುರ್ಮರಣ

    ಕಾರವಾರ: ಸ್ಕಾರ್ಪಿಯೋ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಸಿಂಗನಳ್ಳಿ ಬಳಿ ನಡೆದಿದೆ.

    ದಾಂಡೇಲಿಯ ಜಗಲಪೇಟೆ ನಿವಾಸಿ 24 ವರ್ಷದ ಮುನಾಫ ಸಾವನ್ನಪ್ಪಿದ ಬೈಕ್ ಸವಾರನಾಗಿದ್ದು, ಪತ್ನಿ 19 ವರ್ಷದ ರಮೀಜಾ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಲಾಗಿದೆ.

    ಮಳಗಿಯಿಂದ ಹೊರಟಿದ್ದ ಗೋವಾ ನೋಂದಣಿ ಹೊಂದಿದ್ದ ಬೈಕ್ ಹಾಗೂ ಶಿರಸಿ ಕಡೆ ಹೊರಟಿದ್ದ ತಮಿಳುನಾಡು ನೋಂದಣಿಯ ಸ್ಕಾರ್ಪಿಯೋ ಕಾರು ಅತೀ ವೇಗದಲ್ಲಿ ಮುಖಾಮುಖಿಯಾದುದ್ದೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹಾಗೂ ಸ್ಕಾರ್ಪಿಯೋ ನಜ್ಜುಗುಜ್ಜಾಗಿದೆ.

    ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಗೋವಾದಲ್ಲಿ ಮದ್ವೆ ಕಾರ್ಯ ಮುಗಿಸಿ ವಾಪಸ್ಸಾಗ್ತಿದ್ದವರು ಮಸಣ ಸೇರಿದ್ರು..!

    ಗೋವಾದಲ್ಲಿ ಮದ್ವೆ ಕಾರ್ಯ ಮುಗಿಸಿ ವಾಪಸ್ಸಾಗ್ತಿದ್ದವರು ಮಸಣ ಸೇರಿದ್ರು..!

    ಕಾರವಾರ: ಅತೀ ವೇಗದ ಚಾಲನೆಯಿಂದ ನಿಂತ್ರಣ ತಪ್ಪಿದ ಸ್ಕಾರ್ಪಿಯೋ ವಾಹನವು ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಆರೊಳ್ಳಿ ಕ್ರಾಸ್ ಬಳಿ ನಡೆದಿದೆ.

    ಮೃತ ದುರ್ದೈವಿಗಳನ್ನು ಫಾತಿಮಾ, ರುಕಿಯಾ, ಚಾಬುಸಾಬ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಆನಂದಪುರ ಮೂಲದವರು ಎಂದು ಹೇಳಲಾಗುತ್ತಿದೆ. ಗೋವಾದಲ್ಲಿ ಮದುವೆ ಕಾರ್ಯ ಮುಗಿಸಿ ವಾಪಸ್ಸಾಗುತ್ತಿದ್ದಾಗ ಇಂದು ಬೆಳಗ್ಗಿನ ಜಾವ ಈ ಅಪಘಾತ ಸಂಭವಿಸಿದೆ.

    ಕಾರಿನಲ್ಲಿದ್ದ ಆರು ಜನರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಹೊನ್ನಾವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕ್ಯಾಂಟರ್, ಸ್ಕಾರ್ಪಿಯೋ ಮುಖಾಮುಖಿ ಡಿಕ್ಕಿ: ಇಬ್ಬರ ದುರ್ಮರಣ

    ಕ್ಯಾಂಟರ್, ಸ್ಕಾರ್ಪಿಯೋ ಮುಖಾಮುಖಿ ಡಿಕ್ಕಿ: ಇಬ್ಬರ ದುರ್ಮರಣ

    ಚಿಕ್ಕಬಳ್ಳಾಪುರ: ಕ್ಯಾಂಟರ್ ಹಾಗೂ ಸ್ಕಾರ್ಪಿಯೋ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೈಜಕೂರು ಬಳಿ ನಡೆದಿದೆ.

    ಸ್ಕಾರ್ಪಿಯೋದಲ್ಲಿದ್ದ ನವಶಾದ್ (28) ಮತ್ತು ಮನ್ಸೂರು (30) ಮೃತ ದುರ್ದೈವಿಗಳಾಗಿದ್ದಾರೆ. ಇಂದು ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಸ್ಕಾರ್ಪಿಯೋಗೆ ಎದುರುಗಡೆಯಿಂದ ಬಂದ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಅಪಘಾತದ ರಭಸಕ್ಕೆ ಸ್ಕಾರ್ಪಿಯೋ ವಾಹನ ಸಂಪೂರ್ಣ ನಜ್ಜು-ಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಂಟರ್ ಚಾಲಕ ಹಾಗೂ ಸ್ಕಾರ್ಪಿಯೋದಲ್ಲಿದ್ದ ಮತ್ತೊಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಆಂಧ್ರಪ್ರದೇಶದ ರಾಚೋಟಿ ಜಿಲ್ಲೆಯರವರೆಂದು ತಿಳಿದು ಬಂದಿದ್ದು, ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾದಗಿರಿಯಲ್ಲಿ ನಾಗರಪಂಚಮಿಯಂದು ನಡೆಯುತ್ತೆ ವಿಶೇಷ ಚೇಳಿನ ಜಾತ್ರೆ!

    ಯಾದಗಿರಿಯಲ್ಲಿ ನಾಗರಪಂಚಮಿಯಂದು ನಡೆಯುತ್ತೆ ವಿಶೇಷ ಚೇಳಿನ ಜಾತ್ರೆ!

    ಯಾದಗಿರಿ: ನಾಗರಪಂಚಮಿ ದಿನ ನಾಗಪ್ಪನ ಮೂರ್ತಿಗೆ ಹಾಲೆರೆಯುವುದು ವಿಶೇಷ ಆದರೆ ಜಿಲ್ಲೆಯ ಕಂದಕೂರು ಗ್ರಾಮದಲ್ಲಿ ಪಂಚಮಿ ದಿನದಂದೇ ವಿಶೇಷವಾಗಿ ಚೇಳಿನ ಜಾತ್ರೆ ನಡೆಯುತ್ತದೆ.

    ಕಂದಕೂರು ಗ್ರಾಮದ ಬೆಟ್ಟದ ಮಧ್ಯೆ ಕೊಂಡಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯದಲ್ಲಿ ಪ್ರತಿ ನಾಗರಪಂಚಮಿಯ ದಿನದಂದು ವಿಶೇಷವಾಗಿ ಚೇಳಿನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಈ ದೇವಾಲಯದಲ್ಲಿ ಬಲು ಅಪರೂಪದ ಚೇಳಿನ ಮೂರ್ತಿಗಳಿವೆ. ಜಾತ್ರೆಯ ದಿನದಂದು ಸಾವಿರಾರು ಚೇಳುಗಳು ಇಲ್ಲಿಗೆ ಬಂದು ಸೇರುತ್ತವೆ.

    ಹಬ್ಬದಂದು ಭಕ್ತರು ಬೆಟ್ಟದ ಮೇಲಿರುವ ದೇವತೆಗೆ ಹಾಗೂ ಚೇಳಿನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆಯುತ್ತಾರೆ. ನಂತರ ಸುತ್ತಲಿನ ಗುಡ್ಡದಲ್ಲಿ ಹೇರಳವಾಗಿ ಸಿಗುವ ಚೇಳುಗಳನ್ನು ಹಿಡಿದು ಸಂಭ್ರಮ ಪಡುತ್ತಾರೆ. ಮಕ್ಕಳು, ಮಹಿಳೆಯರು ಹಾಗೂ ದೊಡ್ಡವರೆನ್ನದೆ ಚೇಳುಗಳನ್ನು ಕೈಮೇಲೆ ಹಾಗೂ ಮೈಮೇಲೆ ಹಾಕಿಕೊಂಡು ಜಾತ್ರೆಯನ್ನು ಆಚರಿಸುತ್ತಾರೆ.

    ವಿಶೇಷ ಜಾತ್ರೆಯ ಕುರಿತು ಗ್ರಾಮದ ಶ್ವೇತಾ ಪ್ರತಿಕ್ರಿಯಿಸಿ, ನಾವು ಸುಮಾರು ವರ್ಷಗಳಿಂದ ದೇವರ ದರ್ಶನ ಪಡೆಯುವುದಕ್ಕೆ ಬರುತ್ತಿದ್ದೇವೆ. ದರ್ಶನದ ನಂತರ ಮಕ್ಕಳು, ಮಹಿಳೆಯರು ಎನ್ನದೇ ಎಲ್ಲರು ಸೇರಿ ಕಲ್ಲುಗಳಲ್ಲಿ ಅಡಗಿರುವ ಹಾಗೂ ಒಡಾಡಿಕೊಂಡಿರುವ ಚೇಳುಗಳನ್ನು ಯಾವುದೇ ಆತಂಕವಿಲ್ಲದೇ ಭಕ್ತಿ ಪರಾಕಾಷ್ಠೆಯಿಂದ ಹಿಡಿದುಕೊಳ್ಳುತ್ತೇವೆ. ಇಲ್ಲಿ ಕೇವಲ ನಾಗರಪಂಚಮಿ ದಿನದಂದು ಮಾತ್ರ ಚೇಳುಗಳು ಕಾಣಸಿಗುತ್ತವೆ. ಈ ಚೇಳುಗಳು ಪಂಚಮಿ ದಿನದಂದು ಯಾರಿಗೂ ಕಚ್ಚುವುದಿಲ್ಲ, ಒಂದು ವೇಳೆ ಕಚ್ಚಿದರೆ ದೇವಿಯ ಭಂಡಾರ ಹಚ್ಚುತ್ತಾರೆ. ಇದರಿಂದ ಯಾರಿಗು ಏನೂ ತೊಂದರೆಯಾಗುವುದಿಲ್ಲವೆಂದು ತಿಳಿಸಿದ್ದಾರೆ.

    ನಾಗರ ಪಂಚಮಿಯಂದು ಎಲ್ಲಾ ಕಡೆ ಕಲ್ಲು ನಾಗಪ್ಪನಿಗೆ ಹಾಲೆರೆಯುತ್ತಾರೆ. ಆದರೆ ಕೊಂಡಮ್ಮದೇವಿಯ ದೇವಸ್ಥಾನದಲ್ಲಿ ಮಾತ್ರ ಚೇಳುಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ನಿಜ ಚೇಳುಗಳನ್ನು ಹಿಡಿದುಕೊಂಡು ಜಾತ್ರೆಯಲ್ಲಿ ಸಂಭ್ರಮಿಸುವುದು ವಿಶೇಷ. ಈ ಜಾತ್ರೆಗೆ ಜಿಲ್ಲೆಯ ವಿವಿಧ ಕಡೆ ಹಾಗೂ ತೆಲಂಗಾಣ, ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ ಎಂದು ಇಲ್ಲಿಗೆ ಆಗಮಿಸಿದ ರಾಕೇಶ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಅಪಾಯದಿಂದ ಪಾರಾದ ಪ್ರಯಾಣಿಕರು!

    ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಅಪಾಯದಿಂದ ಪಾರಾದ ಪ್ರಯಾಣಿಕರು!

    ರಾಮನಗರ: ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಜಿಲ್ಲೆಯ ಮದರ್ ಸಾಬರದೊಡ್ಡಿ ಗ್ರಾಮದ ಬಳಿ ನಡೆದಿದೆ.

    ಸ್ಕಾರ್ಪಿಯೋ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಕಾರ್ಪಿಯೋ ವಾಹನವು ಬೆಂಗಳೂರಿನ ಮೂಲದವರೆಂದು ಹೇಳಲಾಗುತ್ತಿದ್ದು, ಚಲಿಸುವಾಗಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ ಚಲಿಸುತ್ತಿದ್ದಾಗ ಇಂಜಿನ್ ನಿಂದ ಮೊದಲು ಬೆಂಕಿಕಾಣಿಸಿಕೊಂಡಿದೆ. ಇದರಿಂದ ಅನುಮಾನಗೊಂಡ ಚಾಲಕ ಕೂಡಲೇ ಕಾರನ್ನು ನಿಲ್ಲಿಸಿದ್ದಾರೆ.

    ಕಾರಿನ ಬ್ಯಾನೆಟ್ ತೆಗೆದು ನೋಡಿದಾಗ ಬೆಂಕಿ ಕಂಡು ಬಂದಿದೆ. ಕೂಡಲೇ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ವ್ಯಾಪಕವಾಗಿ ಆವರಿಸಿಕೊಂಡ ಹಿನ್ನೆಲೆಯಲ್ಲಿ ಸ್ಕಾರ್ಪಿಯೋ ಕಾರ್ ಸಂಪೂರ್ಣ ಸುಟ್ಟು ಹೋಗಿದೆ.

    ಘಟನೆ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಕಾರ್ಪಿಯೊ, ಟಾಟಾ ಏಸ್, ಸ್ಕೂಟಿ ನಡುವೆ ಸರಣಿ ಅಪಘಾತ- ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಸ್ಕಾರ್ಪಿಯೊ, ಟಾಟಾ ಏಸ್, ಸ್ಕೂಟಿ ನಡುವೆ ಸರಣಿ ಅಪಘಾತ- ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಬಾಗಲಕೋಟೆ: ಸ್ಕಾರ್ಪಿಯೊ, ಟಾಟಾ ಏಸ್, ಸ್ಕೂಟಿ ನಡುವೆ ಡಿಕ್ಕಿಯಾಗಿ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಜಮಖಂಡಿ-ಮುಧೋಳ ಮಾರ್ಗ ಮಧ್ಯೆ ನಡೆದಿದೆ.

    ಸ್ಕಾರ್ಪಿಯೋ ಬೆಳಗಾವಿ ಜಿಲ್ಲೆಯ ಸವದತ್ತಿಯಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಹೊರಟಿತ್ತು. ಈ ವೇಳೆ ಸ್ಕಾರ್ಪಿಯೋ ಕಾರ್ ಟೈರ್ ಬ್ಲಾಸ್ಟ್ ಆಗಿದ್ದಕ್ಕೆ ಸರಣಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಕಾರ್ಪಿಯೋ ಕಾರ್ ಟೈರ್ ಬ್ಲಾಸ್ಟ್ ಆಗಿ ಟಾಟಾ ಏಸ್, ಸ್ಕೂಟಿ ನಡುವೆ ಡಿಕ್ಕಿಯಾಗಿದೆ.

    ಸದ್ಯ ಗಾಯಾಳುಗಳನ್ನು ತಾಲೂಕು ಆಸ್ಪತ್ರಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಮಂಗಳೂರು: ಕರಾವಳಿಯಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ. ರಾತ್ರಿ ರಸ್ತೆ ಬದಿ ಮಲಗುವ ದನಗಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಹಾಕಿ ಅಪಹರಿಸಿ ಹತ್ಯೆ ಮಾಡುತ್ತಿದ್ದು, ನಿರಂತರವಾಗಿ ದನ ಕಳ್ಳತನ ಮಾಡುತ್ತಿದ್ದಾರೆ.

    ಫೆಬ್ರವರಿ 16 ರಂದು ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಸ್ಕಾರ್ಪಿಯೋ ಮತ್ತು ಮಾರುತಿ 800 ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ದನಗಳನ್ನು ಓಡಿಸಿಕೊಂಡು ಹೋಗಿ ಅಪಹರಿಸಿ ಕಾರ್ ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸುಳ್ಯ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ ಘಟನೆ ನಡೆದಿದ್ದು, ಮಧ್ಯರಾತ್ರಿಯೇ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ.

    ಬಿಡಾಡಿ ದನಗಳನ್ನು ಮಾರುತಿ 800 ಕಾರ್ ನಲ್ಲಿ ಅಮಾನುಷವಾಗಿ ತುಂಬಿಕೊಂಡು ಹೋಗಿ ಹತ್ಯೆ ಮಾಡುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ರೂ ಕಳ್ಳತನ ಮಾತ್ರ ನಿಂತಿಲ್ಲ. ರಸ್ತೆ ಬದಿಯ ದನಗಳ ಸ್ಥಿತಿ ಈ ರೀತಿಯಾದ್ರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಲ್ಲೂ ಕಳ್ಳರು ಅಟ್ಟಹಾಸ ಮೆರೆಯುತ್ತಿದ್ದರು. ಅಲ್ಲದೇ ಕೊಟ್ಟಿಗೆಗೆ ನುಗ್ಗಿ ದನಕಳ್ಳತನ ನಡೆಸುತ್ತಿದ್ದಾರೆ ಅಂತ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

    https://www.youtube.com/watch?v=jBR9MhxRPEQ

  • ಚಾರ್ಮಾಡಿ ಘಾಟ್ ಬಳಿ 400 ಅಡಿ ಆಳದ ಕಂದಕಕ್ಕೆ ಬಿದ್ದ ಸ್ಕಾರ್ಪಿಯೋ- ಪವಾಡಸದೃಶವಾಗಿ ಬದುಕುಳಿದ ಪ್ರಯಾಣಿಕರು!

    ಚಾರ್ಮಾಡಿ ಘಾಟ್ ಬಳಿ 400 ಅಡಿ ಆಳದ ಕಂದಕಕ್ಕೆ ಬಿದ್ದ ಸ್ಕಾರ್ಪಿಯೋ- ಪವಾಡಸದೃಶವಾಗಿ ಬದುಕುಳಿದ ಪ್ರಯಾಣಿಕರು!

    ಚಿಕ್ಕಮಗಳೂರು: ಹಾಸನದಿಂದ ಮಂಗಳೂರಿಗೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಳಿ 400 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಆದ್ರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಸುಳ್ಯ ಮೂಲದ ಗುರು ಹಾಗೂ ಬೆಳ್ತಂಗಡಿ ಮೂಲದ ಲೋಹಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಕಾರು 400 ಅಡಿಯ ಪ್ರಪಾತಕ್ಕೆ ಬೀಳಲು ಮಳೆ ಹಾಗೂ ದಟ್ಟವಾದ ಮಂಜು ಕವಿದಿದ್ದೇ ಕಾರಣ ಎಂದು ಅಂದಾಜಿಸಲಾಗಿದೆ. 400 ಅಡಿಯ ಪ್ರಪಾತಕ್ಕೆ ಬಿದ್ದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಇಂತಹ ಜಾಗದಲ್ಲಿ ಬಿದ್ರೂ ಪ್ರಯಾಣಿಕರು ಬದುಕಿರೋದು ಪವಾಡವೇ ಸರಿ.

    ಇದೀಗ ಸ್ಥಳಕ್ಕೆ ಆಗಮಿಸಿರೋ ಮೂಡಿಗೆರೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರನ್ನ ಮೇಲೆತ್ತಲು ಹರಸಾಹಸ ಪಡ್ತಿದ್ದಾರೆ. ಮಂಗಳೂರಿನಿಂದ ಅಥವಾ ಹಾಸನದಿಂದ ಬರಲಿರುವ ದೊಡ್ಡ ಕ್ರೇನ್‍ಗಾಗಿ ಕಾಯುತ್ತಿದ್ದಾರೆ.