Tag: SCO Summit

  • PublicTV Explainer: ಮತ್ತೊಮ್ಮೆ ಇಂಡೋ-ಚೀನಾ ಭಾಯಿ ಭಾಯಿ- ಭಾರತಕ್ಕೆ ಚೀನಾ ಯಾಕೆ ಬೇಕು?

    PublicTV Explainer: ಮತ್ತೊಮ್ಮೆ ಇಂಡೋ-ಚೀನಾ ಭಾಯಿ ಭಾಯಿ- ಭಾರತಕ್ಕೆ ಚೀನಾ ಯಾಕೆ ಬೇಕು?

    ಗತ್ತಿನ ಮೇಲೆ ದೊಡ್ಡಣ್ಣ ಅಮೆರಿಕ ಸುಂಕದ ಸಮರವನ್ನು ಸಾರುತ್ತಿರುವ ಬೆನ್ನಲ್ಲೇ ಇತ್ತ ಭಾರತ ಹಾಗೂ ಚೀನಾದ ನಡುವಿನ ಹೊಸ ಸಂಬಂಧ ಬೆಳೆಯುವ ಆಶಾ ಭಾವನೆ ಮೂಡಿದೆ.

    ಚೀನಾದ (China) ಟಿಯಾಂಜಿನ್‌ನಲ್ಲಿ ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಒಕ್ಕೂಟದ (SCO) ಶೃಂಗಸಭೆ ಜಾಗತಿಕ ರಾಜಕೀಯದ ಮಹತ್ವಪೂರ್ಣ ವೇದಿಕೆಯಾಗಿತ್ತು.ಈ ಶೃಂಗಸಭೆಯಲ್ಲಿ ಭಾರತ (India) ಮತ್ತು ಚೀನಾ ನಡುವೆ ನಡೆದ ದ್ವಿಪಕ್ಷೀಯ ಸಭೆ ವಿಶ್ವದ ಗಮನ ಸೆಳೆದಿದೆ.

    ದ್ವಿಪಕ್ಷೀಯ ಸಭೆಗೂ ಮೊದಲು ಎರಡು ದೇಶಗಳು ಗಡಿಯಲ್ಲಿ ನಿಯೋಜನೆಗೊಂಡಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತ್ತು.  ಕಳೆದ ವರ್ಷ ಈ ಪ್ರಕ್ರಿಯೆ ಆರಂಭಗೊಂಡಿತ್ತು. ನಂತರ ಅಜಿತ್‌ ದೋವಲ್‌, ಜೈಶಂಕರ್‌ ಚೀನಾಗೆ ಹೋಗಿದ್ದರು. ಚೀನಾದ ಅಧಿಕಾರಿಗಳು ಭಾರತಕ್ಕೆ ಬಂದಿದ್ದರು. ಎರಡೂ ಕಡೆ ಮತ್ತೆ ಸಂಬಂಧ ಸುಧಾರಣೆಯಾದ ಹಿನ್ನೆಲೆಯಲ್ಲಿ  ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ (Xi Jinping) ಮಹತ್ವದ ಮಾತುಕತೆ ನಡೆಸಿದರು. ಗಲ್ವಾನ್ ಕಣಿವೆ ಘರ್ಷಣೆಯ ನಂತರ 7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ನೀಡಿದ್ದು ವಿಶೇಷವಾಗಿತ್ತು.

    ಅಮೆರಿಕ ವಿಧಿಸಿರುವ ಸುಂಕಗಳು ಮತ್ತು ಚೀನಾದ ಅಸ್ಥಿರ ಸಂಬಂಧಗಳ ನಡುವೆಯೂ ಪ್ರಧಾನಿ ಮೋದಿ (Narendra Modi) ಮತ್ತು ಕ್ಸಿ ಜಿನ್‌ಪಿಂಗ್ 50 ನಿಮಿಷಗಳಿಗೂ ಹೆಚ್ಚು ಕಾಲ ದ್ವಿಪಕ್ಷೀಯ ಸಭೆ ನಡೆಸಿದರು.

    ಶಾಂಘೈ ಸಹಕಾರ ಶೃಂಗಸಭೆ ಎಂದರೇನು?

    ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯನ್ನು 2001ರಲ್ಲಿ ಸ್ಥಾಪಿಸಲಾಯಿತು. ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಇರಾನ್‌ ಮತ್ತು ಮಧ್ಯ ಏಷ್ಯಾದ ದೇಶಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ. ಭಾರತವು 2017ರಲ್ಲಿ ಶಾಂಘೈ ಸಹಕಾರ ಶೃಂಗಸಭೆಯ ಸದಸ್ಯ ರಾಷ್ಟ್ರವಾಯಿತು. 2022-23 ರಲ್ಲಿ ಶಾಂಘೈ ಸಹಕಾರ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿತ್ತು. 

    ಗಡಿ ಸಂಘರ್ಷಕ್ಕೆ ಕಾರಣ ಏನು?

    ಪೂರ್ವ ಲಡಾಖ್‌ನ ಪಾಂಗಾಂಗ್‌ ತ್ಸೊ ಸರೋವರದ ಉತ್ತರ ದಂಡೆಯಲ್ಲಿ 2020ರಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಮುಖಾಮುಖಿ ಸಂಘರ್ಷ ಆರಂಭವಾಗಿತ್ತು. ಭಾರತದ ಯೋಧರು ಗಸ್ತು ನಡೆಸುತ್ತಿದ್ದ ಸ್ಥಳಕ್ಕೆ ಹೋಗಲು ಸಾಧ್ಯವಾಗದಂತೆ ಚೀನೀಯರು ಬಂಕರ್‌ ನಿರ್ಮಿಸಿದ್ದರು. ಇಲ್ಲಿಂದ ಸ್ವಲ್ಪ ಉತ್ತರಕ್ಕಿರುವ, ಗಲ್ವನ್‌ ಕಣಿವೆ ಪ್ರದೇಶದಲ್ಲಿ ಭಾರತವು ತನ್ನ ಭೂಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡುತ್ತಿದೆ ಮತ್ತು ಅಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದೆ ಎಂಬುದು ಚೀನಾದ ಆರೋಪವಾಗಿತ್ತು. ಇಲ್ಲಿಂದ ಚೀನಾ ಹಾಗೂ ಭಾರತದ ನಡುವೆ ಗಡಿ ವಿವಾದ ಪ್ರಾರಂಭವಾಯಿತು.

    ಭಾರತಕ್ಕೆ ಚೀನಾದ ನಡುವಿನ ಸಂಬಂಧ ಏಕೆ ಮುಖ್ಯ?

    ಭಾರತದ ಸರಕು ಪೂರೈಕೆ ವ್ಯವಸ್ಥೆಯ ಮೇಲೆ ಚೀನಾ ಹಿಡಿತ ಸಾಧಿಸಬಹುದು. ಗಡಿ ವಿವಾದ ಸೇರಿದಂತೆ ಉಭಯ ರಾಷ್ಟ್ರಗಳ ನಡುವೆ ಯಾವುದೇ ಬಿಕ್ಕಟ್ಟು ಉದ್ಭವವಾದರೆ ಭಾರತದ ಮೇಲೆ ಒತ್ತಡ ಹೇರುವುದಕ್ಕೆ ಇದನ್ನೇ ಮೂಲ ತಂತ್ರವಾಗಿಸಬಹುದು. ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿದರೆ ಅದು ಭಾರತದ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಹಿಂದೆ ವಾಹನಗಳ ತಯಾರಿಕೆಗೆ ಪ್ರಮುಖವಾಗಿ ಬೇಕಾಗಿದ್ದ ಖನಿಜ ಲೋಹಗಳ‌ ಮೇಲೆ ಚೀನಾ ನಿರ್ಬಂಧ ಹೇರಿತ್ತು. ಇದು ಭಾರತದ ವಾಹನ ಉದ್ಯಮದ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಬಹಳ ಮುಖ್ಯವಾಗಿದೆ.

    ಭಾರತ ಹಾಗೂ ಚೀನಾ ವಿಶ್ವದ ಅತ್ಯಂತ ಜನಸಂಖ್ಯೆಯುಳ್ಳ ರಾಷ್ಟ್ರಗಳಾಗಿರುವುದರ ಜೊತೆಗೆ ಆರ್ಥಿಕ ಹಾಗೂ ಸೇನಾ ಶಕ್ತಿಯ ವಿಚಾರದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಭಾವಶಾಲಿ ರಾಷ್ಟ್ರಗಳಾಗಿವೆ. ಹೀಗಾಗಿ ಎರಡೂ ದೇಶಗಳಿಗೂ ಈಗ ಸಹಕಾರದಿಂದ ಮುಂದುವರಿಯಲು ಒಪ್ಪಿಗೆ ನೀಡಿವೆ.

    ದ್ವಿಪಕ್ಷೀಯ ಸಭೆಯಲ್ಲಿ ಏನೇನು ಚರ್ಚೆ ನಡೆದಿದೆ?

    ಗಡಿಯಲ್ಲಿ ಶಾಂತಿ:

    ವಿವಾದಿತ ಗಡಿ ಪ್ರದೇಶಗಳಲ್ಲಿ ಸಂಪರ್ಕ ಕಡಿತ ಮತ್ತು ಶಾಂತತೆಯನ್ನು ಪುನಃಸ್ಥಾಪಿಸುವಲ್ಲಿ ಆಗಿರುವ ಪ್ರಗತಿಯ ಬಗ್ಗೆ ಪರಸ್ಪರ ಚರ್ಚೆಯಾಗಿದೆ. ಅಸ್ತಿತ್ವದಲ್ಲಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಕಾರ್ಯವಿಧಾನಗಳ ಮೂಲಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡವು. ಈ ವೇಳೆ ಪ್ರಧಾನಿ ಮೋದಿ ಅವರು ಗಡಿಯಲ್ಲಿ ಶಾಂತಿಯು ದ್ವಿಪಕ್ಷೀಯ ಸಂಬಂಧಗಳ ಮತ್ತಷ್ಟು ಬೆಳವಣಿಗೆಗೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.

    ಜಾಗತಿಕ ಸಂಸ್ಥೆಗಳಿಗೂ ಗುದ್ದು

    ಶೃಂಗಸಭೆಯಲ್ಲಿ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಪ್ರಸ್ತುತ ಜಾಗತಿಕ ಸಂಸ್ಥೆಗಳು, ವಿಶೇಷವಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಮತ್ತು ವಿಶ್ವಸಂಸ್ಥೆ (UN) ಕಾರ್ಯಕ್ಷಮತೆ ಮತ್ತು ಪ್ರಸ್ತುತತೆಯಲ್ಲಿ ಕುಂಠಿತವಾಗುತ್ತಿವೆ ಎಂದು ಒತ್ತಿ ಹೇಳಿದರು.

    ಉಭಯ ರಾಷ್ಟ್ರದ ನಾಯಕರು ಏಷ್ಯನ್ ಶತಮಾನ ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡಿದರು.  ಡ್ರ್ಯಾಗನ್‌(ಚೀನಾ) ಮತ್ತು ಆನೆ(ಭಾರತ) ಜೊತೆಯಾಗಿ ನೃತ್ಯ ಮಾಡಿದರೆ ಎರಡೂ ದೇಶಗಳಿಗೆ ಲಾಭ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದರು.

    ಏಷ್ಯನ್‌ ಶತಮಾನ ಪರಿಕಲ್ಪನೆ ಎಂದರೇನು? 

    ಏಷ್ಯನ್‌ ಶತಮಾನ ಎಂಬುದು 21ನೇ ಶತಮಾನದಲ್ಲಿ ಚೀನಾ, ಭಾರತ ಮತ್ತು ಇತರ ಏಷ್ಯಾದ ದೇಶಗಳು ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಜಾಗತಿಕ ಮಟ್ಟದಲ್ಲಿ ಪ್ರಬಲ ಪಾತ್ರವಹಿಸುವುದನ್ನು ಸೂಚಿಸುವ ಪರಿಕಲ್ಪನೆಯಾಗಿದೆ.

    ಏನಿದು ಪಂಚಶೀಲ ನೀತಿಗೆ ಸಹಿ:

    1947ರಲ್ಲಿ ಭಾರತ ಸ್ವತಂತ್ರಗೊಂಡು, ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ರೂಪುಗೊಂಡ ಬಳಿಕ, ಉಭಯ ದೇಶಗಳು ಪರಸ್ಪರ ವ್ಯವಹಾರಕ್ಕೆ ಕೆಲವು ನಿಯಮಗಳನ್ನು ರೂಪಿಸುವ ಕುರಿತು ಕಾರ್ಯಾಚರಿಸಲು ಆರಂಭಿಸಿದವು.

    ಎಪ್ರಿಲ್‌ 29, 1954ರಂದು, ಭಾರತ ಮತ್ತು ಚೀನಾಗಳು ಟಿಬೆಟ್‌ ಜೊತೆಗಿನ ವ್ಯಾಪಾರ ಮತ್ತು ಸಂಬಂಧದ ಕುರಿತು ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಇದು ಪಂಚಶೀಲ ಅಂದರೆ, ಶಾಂತಿಯುತ ಸಹಬಾಳ್ವೆಗಾಗಿ ಐದು ನೀತಿಗಳಿಗೆ ಹಾದಿ ಮಾಡಿಕೊಟ್ಟಿತು.

    ಪಂಚಶೀಲ ನೀತಿಗಳೇನು?

    1.ಪರಸ್ಪರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಗೌರವ

    ಉಭಯ ದೇಶಗಳು ಪರಸ್ಪರರ ಭೂ ಪ್ರದೇಶ ಮತ್ತು ಸ್ವಾತಂತ್ರ್ಯಕ್ಕೆ ಗೌರವ ನೀಡಬೇಕು. ಪರಸ್ಪರ ಭೂ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು, ಅಥವಾ ಗಡಿಗಳನ್ನು ಬದಲಾಯಿಸಲು ಪ್ರಯತ್ನ ನಡೆಸಬಾರದು.

    2.ಪರಸ್ಪರರ ಮೇಲೆ ಆಕ್ರಮಣಕಾರಿ ಮನೋಭಾವ ಸಲ್ಲದು

    ಎರಡು ದೇಶಗಳ ಪೈಕಿ, ಯಾವುದೇ ರಾಷ್ಟ್ರಗಳು ಒಂದರ ಮೇಲೆ ಒಂದು ದಾಳಿ ಮಾಡುವುದಾಗಲಿ, ಬೆದರಿಸುವುದಾಗಲಿ ಮಾಡಬಾರದು. ಶಾಂತಿಯನ್ನು ಕಾಪಾಡಿ, ಸಾರ್ವಜನಿಕರು ಮತ್ತು ಸ್ಥಿರತೆಗೆ ತೊಂದರೆ ಉಂಟುಮಾಡುವಂತಹ ಯುದ್ಧಗಳನ್ನು ತಪ್ಪಿಸಬೇಕು.

    3.ಆಂತರಿಕ ವಿಚಾರಗಳಲ್ಲಿ ಮಧ್ಯ ಪ್ರವೇಶಿಸಬಾರದು

    ಭಾರತ ಮತ್ತು ಚೀನಾಗಳು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕು. ಒಂದು ದೇಶದ ರಾಜಕೀಯ, ಸಂಸ್ಕೃತಿ ಅಥವಾ ಆಂತರಿಕ ನಿರ್ಧಾರಗಳಲ್ಲಿ ಇನ್ನೊಂದು ದೇಶ ಮಧ್ಯ ಪ್ರವೇಶ ಮಾಡಬಾರದು.

    4.ಸಮಾನತೆಯಿಂದ ಪ್ರಯೋಜನ

    ಭಾರತ ಮತ್ತು ಚೀನಾಗಳು ಸಮಾನ ರಾಷ್ಟ್ರಗಳು. ಎರಡೂ ದೇಶಗಳು ವ್ಯಾಪಾರ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಿ, ಪರಸ್ಪರ ಪ್ರಯೋಜನಗಳನ್ನು ಹಂಚಿಕೊಂಡು, ಅಭಿವೃದ್ಧಿಗೆ ನೆರವಾಗಬೇಕು.

    5.ಶಾಂತಿಯುತ ಸಹಬಾಳ್ವೆ

    ಪರಸ್ಪರ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಭಾರತ ಮತ್ತು ಚೀನಾಗಳು ಶಾಂತಿಯುತವಾಗಿ ಬಾಳಬೇಕು. ಪರಸ್ಪರ ರಾಷ್ಟ್ರಗಳ ಕುರಿತು ಗೌರವದ ಭಾವನೆ ಹೊಂದಿ, ಎದುರಾಗುವ ಯಾವುದೇ ಸಮಸ್ಯೆಯನ್ನು ಮಾತುಕತೆಗಳ ಮೂಲಕವೇ ಪರಿಹರಿಸಬೇಕು. ಬದಲಾಗಿ ಯಾವುದೇ ಯುದ್ಧದ ನಿರ್ಧಾರವನ್ನು ಕೈಗೆತ್ತಿಕೊಳ್ಳಬಾರದು.

  • ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    – ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಖಂಡನೆ; ಪಾಕ್‌ಗೆ ಕಪಾಳಮೋಕ್ಷ
    – ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು

    ಬೀಜಿಂಗ್‌: ಭಯೋತ್ಪಾದನೆ (Terrorism) ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಈಗ ಬಹುದೊಡ್ಡ ರಾಜತಾಂತ್ರಿಕ ಯಶಸ್ಸು ಸಿಕ್ಕಂತಾಗಿದೆ. ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ (SCO)ದ ಶೃಂಗ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಒಮ್ಮತವಾಗಿ ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನ ಖಂಡಿಸಿವೆ. ಜೊತೆಗೆ ಭಯೋತ್ಪಾದನೆ ತಡೆಯುವ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.

    ಪ್ರಧಾನಿ ಮೋದಿ ಭಾಷಣದ ಬಳಿಕ ಎಸ್‌ಸಿಒ ಪಹಲ್ಗಾಮ್‌ ದಾಳಿ (Pahalgam Terror Attack) ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿತು. ದಾಳಿಯನ್ನು ಒಕ್ಕೊರಲಿನಿಂದ ಖಂಡಿಸಿದ್ದು, ಭಾರತಕ್ಕೆ ಬೆಂಬಲ ಸೂಚಿಸಿತು. 26 ಮಂದಿ ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು, ಎಸ್‌ಸಿಒ ಸದಸ್ಯ ರಾಷ್ಟ್ರಗಳು ಬಲವಾಗಿ ಖಂಡಿಸಿದವು. ಮೃತರು ಮತ್ತು ಗಾಯಗೊಂಡವರ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದವು. ಅಮಾನವೀಯ ದಾಳಿಯ ಅಪರಾಧಿಗಳು ಮತ್ತು ಪ್ರಾಯೋಜಕರನ್ನ ನ್ಯಾಯದ ಕಟಕಟೆಗೆ ತರಬೇಕು ಎಂದು ಒತ್ತಾಯಿಸಿದವು.

    ಶೆಹಬಾಜ್‌ ಷರೀಫ್‌ ಸಭೆಯಲ್ಲಿ ಪಾಲ್ಗೊಂಡಿದ್ದಾಗಲೇ ಈ ಬೆಳವಣಿಗೆ ನಡೆದಿರುವುದು ಪಾಕಿಸ್ತಾನದ ಪ್ರಧಾನಿಗೆ (Pakistan PrimeMinister) ಕಪಾಳಮೋಕ್ಷ ಮಾಡಿದಂತಾಗಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್‌ ಆಪ್ತನಿಂದ ಜಾತಿ ಅಸ್ತ್ರ

    ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ; ಮೋದಿ
    ಇನ್ನೂ ಎಸ್‌ಸಿಒ ಸಭೆಯಲ್ಲಿ ಪಾಕ್‌ ಪ್ರಧಾನಿ ಎದುರಲ್ಲೇ ಪಹಲ್ಗಾಮ್‌ ಭಯೋತ್ಪಾದಕ ದಾಳಿ ಪ್ರಸ್ತಾಪಿಸಿದ ನರೇಂದ್ರ ಮೋದಿ (Narendra Modi), ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ ಕೋರಿದರು. ಅಲ್ಲದೇ ಭಯೋತ್ಪಾದನೆಯ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸ್ವೀಕಾರಾರ್ಹವಲ್ಲ, ಎಸ್‌ಸಿಒ ಸದಸ್ಯ ರಾಷ್ಟ್ರಗಳು ಒಂದೇ ಧ್ವನಿಯಲ್ಲಿ ಹೇಳಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಇದನ್ನೂ ಓದಿ: ರಾಜತಾಂತ್ರಿಕ ಯಶಸ್ಸು – ಗಡಿಯಾಚೆಗಿನ ಭಯೋತ್ಪಾದನೆ ತಡೆಗೆ ಭಾರತಕ್ಕೆ ಚೀನಾ ಬೆಂಬಲ

    ಇದಕ್ಕೂ ಮುನ್ನ, ಕಳೆದ 4 ದಶಕಗಳಿಂದಲೂ ಭಾರತ ಭಯೋತ್ಪಾದನೆಯಿಂದ ಬಳಲುತ್ತಿದೆ. ಈ ಭಯೋತ್ಪಾದನಾ ಪಿಡುಗಿಗೆ ಅನೇಕ ತಾಯಂದಿರು ತಮ್ಮ ಮಕ್ಕಳನ್ನ ಕಳೆದುಕೊಂಡಿದ್ದಾರೆ. ಇತ್ತೀಚಿನ ಪಹಲ್ಗಾಮ್‌ ದಾಳಿಯಲ್ಲಿ ನಾವು ಈ ಭಯೋತ್ಪಾದನೆಯ ಕೊಳಕು ಮನಸ್ಥಿತಿಯನ್ನ ನೋಡಿದ್ದೇವೆ. ಈ ಬಿಕ್ಕಟ್ಟಿನ ಸಮಯದಲ್ಲಿ ನಮ್ಮೊಟ್ಟಿಗೆ ನಿಂತ ಸ್ನೇಹಿತರಿಗೆ ನಾನು ಧನ್ಯವಾದ ಹೇಳುತ್ತೇನೆ. ಇದು ಕೇವಲ ಭಾರತದ ಆತ್ಮದ ಮೇಲಿನ ದಾಳಿಯಾಗಿರಲಿಲ್ಲ. ಬದಲಾಗಿ ಮಾನವೀಯತೆ ಮೇಲೆ ನಂಬಿಕೆಯಿಟ್ಟಿರುವ ಪ್ರತಿಯೊಂದು ದೇಶಕ್ಕೂ ಬಹಿರಂಗ ಸವಾಲಾಗಿತ್ತು. ಆದಾಗ್ಯೂ ಕೆಲ ದೇಶಗಳು ಭಯೋತ್ಪಾದನೆಗೆ ಬಹಿರಂಗ ಬೆಂಬಲ ನೀಡಿದವು, ಇದು ಎಷ್ಟು ಸರಿ? ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಪಾಕಿಸ್ತಾನ ಮ್ಯಾಪ್‌ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್‌ ದೋವಲ್‌

    ಪ್ರತಿಯೊಂದು ದೇಶದ ಅಭಿವೃದ್ಧಿಗೆ ಭದ್ರತೆ, ಶಾಂತಿ ಮತ್ತು ಸ್ಥಿರತೆ ನಿರ್ಣಾಯಕವಾದದ್ದು. ಆದ್ರೆ ಈ ಬೆಳವಣಿಗೆಗೆ ಭಯೋತ್ಪಾದನೆ ಒಂದು ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಭಾರತ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತೊಡಗಿದ್ದು, ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕೆಂದು ಬಯಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

  • ಪುಟಿನ್‌, ಮೋದಿ, ಜಿನ್‌ಪಿಂಗ್‌ ಮಾತುಕತೆ – Video Of The Day ಎಂದ ರಷ್ಯಾ

    ಪುಟಿನ್‌, ಮೋದಿ, ಜಿನ್‌ಪಿಂಗ್‌ ಮಾತುಕತೆ – Video Of The Day ಎಂದ ರಷ್ಯಾ

    ಬೀಜಿಂಗ್‌: ಶಾಂಘೈ ಸಹಕಾರ ಶೃಂಗಸಭೆ (SCO Summit) ಆರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ (Narendra Modi) ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದೆ.

    ರಷ್ಯಾದ ವಿದೇಶಾಂಗ ಸಚಿವಾಲಯ ಮೂವರು ಮಾತನಾಡುತ್ತಿರುವ ವಿಡಿಯೋವನ್ನು #VideoOfTheDay ಹ್ಯಾಶ್‌ಟ್ಯಾಗ್‌ ಹಾಕಿ ಪೋಸ್ಟ್‌ ಮಾಡಿದೆ.

    ವ್ಲಾದಿಮರ್‌ ಪುಟಿನ್‌ (Vladimir Putin) ಅವರ ಎಡಕೈಯನ್ನು ಹಿಡಿದುಕೊಂಡು ಮೋದಿ ಅವರು ಬರುತ್ತಿದ್ದಾರೆ. ನಡೆದುಕೊಂಡು ಬರುತ್ತಿದ್ದಾಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಎದುರಾಗಿದ್ದಾರೆ. ಈ ವೇಳೆ ಮೂವರು ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಲಘು ಸಂಭಾಷಣೆ ಮಾಡಿದ್ದಾರೆ.  ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ಆಪ್ತನಿಂದ ಜಾತಿ ಅಸ್ತ್ರ


    ಭಾರತ, ರಷ್ಯಾ, ಚೀನಾದ ಜೊತೆ ಅಮೆರಿಕದ ಸಂಬಂಧ ಈಗ ಹಾಳಾಗಿದೆ. ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕದ್ದಕ್ಕೆ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ ಅಮೆರಿಕ 25% ತೆರಿಗೆ ವಿಧಿಸಿತ್ತು. ನಂತರ ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ಹಾಕಿದೆ. ಇದನ್ನೂ ಓದಿ: ಮೋದಿ ಸಂಚಾರಕ್ಕೆ ಜಿನ್‌ಪಿಂಗ್‌ ಮೆಚ್ಚಿನ ಕಾರು ನೀಡಿದ ಚೀನಾ!

    ಅಮೆರಿಕ ತೆರಿಗೆ ಸಮರ ಆರಂಭಿಸಿದ ಬೆನ್ನಲ್ಲೇ ಮೂವರು ನಾಯಕರು ಮಾತುಕತೆ ನಡೆಸಿರುವುದು ಈಗ ವಿಶ್ವದಲ್ಲಿ ಸಂಚಲನ ಮೂಡಿಸಿದೆ.

  • ರಾಜತಾಂತ್ರಿಕ ಯಶಸ್ಸು – ಗಡಿಯಾಚೆಗಿನ ಭಯೋತ್ಪಾದನೆ ತಡೆಗೆ ಭಾರತಕ್ಕೆ ಚೀನಾ ಬೆಂಬಲ

    ರಾಜತಾಂತ್ರಿಕ ಯಶಸ್ಸು – ಗಡಿಯಾಚೆಗಿನ ಭಯೋತ್ಪಾದನೆ ತಡೆಗೆ ಭಾರತಕ್ಕೆ ಚೀನಾ ಬೆಂಬಲ

    ಬೀಜಿಂಗ್‌: ಗಡಿಯಾಚೆಗೆ ಭಯೋತ್ಪಾದನೆ ತಡೆಯುವ ಭಾರತದ ಹೋರಾಟಕ್ಕೆ ಈಗ ಚೀನಾ ಕೂಡ ಬೆಂಬಲ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಇದು ಭಯೋತ್ಪಾದನೆ ತಡೆಯುವ ಹೋರಾಟದಲ್ಲಿ ಭಾರತಕ್ಕೆ (India) ಮತ್ತೊಂದು ರಾಜತಾಂತ್ರಿಕ ಯಶಸ್ಸು ಸಿಕ್ಕಂತಾಗಿದೆ.

    7 ವರ್ಷಗಳ ಬಳಿಕ ಚೀನಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು, ಹಲವು ಮಹತ್ವದ ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತ & ಚೀನಾ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ: ಕ್ಸಿ ಜಿನ್‌ಪಿಂಗ್‌

    ಈ ಕುರಿತು ಇಂದು‌ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಜಿನ್‌ಪಿಂಗ್‌ ಅವರೊಂದಿಗೆ ಮಾತುಕತೆಯ ಸಮಯದಲ್ಲಿ ಪ್ರಧಾನಿ ಮೋದಿ (Narendra Modi) ಗಡಿಯಾಚೆಗಿನ ಭಯೋತ್ಪಾದನೆ ತಡೆಯುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ಕಮ್ಯುನಿಸ್ಟ್‌ ಪಕ್ಷದ ಪ್ರಬಲ ನಾಯಕ, ಜಿನ್‌ಪಿಂಗ್‌ ಆಪ್ತಮಿತ್ರನನ್ನ ಭೇಟಿಯಾದ ಮೋದಿ

    Narendra Modi Xi Jinping

    ಉಭಯ ನಾಯಕರ ನಡುವಿನ ಸಭೆಯು ಭಾರತ ಮತ್ತು ಚೀನಾ ದೇಶಗಳ ದೇಶಿಯ ಅಭಿವೃದ್ಧಿಯನ್ನು ಕೇಂದ್ರಿಕರಿಸಿದೆ. ಹೀಗಾಗಿ ಸ್ನೇಹಪರ ಸಂಬಂಧಗಳು ಯಥಾ ಸ್ಥಿತಿಯಲ್ಲಿ ಮುಂದುವರಿಯಲಿವೆ, ಗಡಿಯಲ್ಲಿ ಶಾಂತಿ ಇರಲಿದ್ದು, ದ್ವಿಪಕ್ಷಿಯ ಸಂಬಂಧಗಳು 2.8 ಶತಕೋಟಿ ಜನರಿಗೆ ಪ್ರಯೋಜನ ನೀಡಲಿವೆ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಮ್ಯಾಪ್‌ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್‌ ದೋವಲ್‌

    ಅಲ್ಲದೇ ಪರಸ್ಪರ ಸಹಕಾರ ಬಲಪಡಿಸಲು ಚೀನಾ ಅಧ್ಯಕ್ಷರು ನಾಲ್ಕು ಸಲಹೆಗಳನ್ನ ನೀಡಿದ್ದಾರೆ. ಇದಕ್ಕೆ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿದ ಮೋದಿ, ಗಡಿಯಲ್ಲಿ ಶಾಂತಿ, ಸ್ಥಿರತೆ ಅಗತ್ಯ ಎಂದು ಒತ್ತಿ ಹೇಳಿದರು. ಬಳಿಕ ಪರಸ್ಪರ ಅಭಿವೃದ್ಧಿ, ವ್ಯಾಪಾರ ಸಮತೋಲನ, ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ಜನರಿಂದ ಜನರ ಸಂಪರ್ಕ ಹೆಚ್ಚಿಸುವ ವಿಷಯಗಳ ಬಗ್ಗೆ ಒಟ್ಟಾಗಿ ಸಾಗುವ ಕುರಿತು ಚರ್ಚೆ ನಡೆಯಿತು. ಕೊನೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡಲು ಉಭಯ ನಾಯಕರು ಒಪ್ಪಿಕೊಂಡಿರುವುದಾಗಿ ತಿಳಿಸಿದರು. ಇದನ್ನೂ ಓದಿ:  ಪರಸ್ಪರ ನಂಬಿಕೆ, ಗೌರವ ಆಧಾರದಲ್ಲಿ ಭಾರತ-ಚೀನಾ ಸಂಬಂಧ ಮುಂದಕ್ಕೆ ಕೊಂಡೊಯ್ಯಲು ಬದ್ಧ: ಮೋದಿ

    pm modi xi jinping meeting

    2026ರ ಬ್ರಿಕ್ಸ್ ಶೃಂಗಸಭೆಗೆ ಆಹ್ವಾನ ಕೊಟ್ಟ ಮೋದಿ
    ಮುಂದುವರಿದು ಮಾತನಾಡಿದ ವಿಕ್ರಮ್ ಮಿಶ್ರಿ, ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಿದ ವಿಶ್ವನಾಯಕರು ವಿಶ್ವವ್ಯಾಪಾರ ಸ್ಥಿರಗೊಳಿಸುವಲ್ಲಿ ಭಾರತ ಮತ್ತು ಚೀನಾದ ಪಾತ್ರದ ಬಗ್ಗೆಯೂ ಚರ್ಚಿಸಿದರು. ಇದೇ ವೇಳೆ ನರೇಂದ್ರ ಮೋದಿ ಅವರು 2026ಕ್ಕೆ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಕ್ಸಿ ಜಿನ್‌ಪಿಂಗ್ ಅವರನ್ನು ಆಹ್ವಾನಿಸಿದರು. ಇದರೊಂದಿಗೆ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಬೇಕಾದ ಉಪಕ್ರಮಗಳ ಬಗ್ಗೆ ಒತ್ತಿ ಹೇಳಿದರು.

  • ಪಾಕಿಸ್ತಾನ ಮ್ಯಾಪ್‌ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್‌ ದೋವಲ್‌

    ಪಾಕಿಸ್ತಾನ ಮ್ಯಾಪ್‌ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್‌ ದೋವಲ್‌

    – 5 ವರ್ಷಗಳ ಹಿಂದಿನ ಘಟನೆ ನೆನಪಿಸಿದ ಚೀನಾ ಭೇಟಿ

    ಬೀಜಿಂಗ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ (Ajit Doval) ಅವರ ಚೀನಾ ಭೇಟಿಯು 5 ವರ್ಷಗಳ ಹಿಂದಿನ ಘಟನೆಯೊಂದನ್ನು ನೆನಪಿಸಿದೆ. ಇದೇ ಐದು ವರ್ಷಗಳ ಹಿಂದೆ, ಚೀನಾದ ಎಸ್‌ಸಿಒ ಸಭೆಯಿಂದಲೇ ಎದ್ದು ಅಜಿತ್‌ ದೋವಲ್‌ ಹೊರಬಂದಿದ್ದರು. ಆ ಕ್ಷಣವನ್ನು ಈಗಿನ ಭೇಟಿ ನೆನಪಿಸುತ್ತಿದೆ.

    ಅಷ್ಟಕ್ಕೂ ಆಗ ಏನಾಗಿತ್ತು?
    ಅದು 2020ರ ಸೆಪ್ಟೆಂಬರ್ ತಿಂಗಳು. ಕೋವಿಡ್-19 ಸಾಂಕ್ರಾಮಿಕದ ಉತ್ತುಂಗದ ಸಂದರ್ಭ. ರಾಜತಾಂತ್ರಿಕತೆ ಹೆಚ್ಚಾಗಿ ಆನ್‌ಲೈನ್‌ಗೆ ಬದಲಾಗಿತ್ತು. SCO ರಾಷ್ಟ್ರೀಯ ಭದ್ರತಾ ಸಲಹೆಗಾರರು ವರ್ಚುವಲ್ ಆಗಿ ಸಭೆ ಸೇರುತ್ತಿದ್ದರು. ಆಗಿನ ಸಭೆ ಸಮಯದಲ್ಲಿ, ಪಾಕಿಸ್ತಾನದ ಪ್ರತಿನಿಧಿ ಡಾ. ಮೊಯೀದ್ ಯೂಸುಫ್ ಹೊಸದಾಗಿ ಬಿಡುಗಡೆ ಮಾಡಲಾದ ರಾಜಕೀಯ ನಕ್ಷೆಯನ್ನು ಪ್ರದರ್ಶಿಸಿದರು. ಅದರ ಮೇಲೆ, ಭಾರತದ ಅವಿಭಾಜ್ಯ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಜುನಾಗಢ್‌ಗಳ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸಿದೆ ಎಂದು ವಾದಿಸಿದ್ದರು. ಅವರ ನಡೆ, ದ್ವಿಪಕ್ಷೀಯ ವಿವಾದಗಳನ್ನು ಬಹುಪಕ್ಷೀಯ ವೇದಿಕೆಗಳಿಗೆ ತರುವುದನ್ನು ನಿಷೇಧಿಸುವ SCO ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿತ್ತು. ಇದನ್ನೂ ಓದಿ: ಭಾರತ & ಚೀನಾ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ: ಕ್ಸಿ ಜಿನ್‌ಪಿಂಗ್‌

    ಅದಕ್ಕೆ ಭಾರತ ಕೂಡಲೇ ಆಕ್ಷೇಪ ವ್ಯಕ್ತಪಡಿಸಿತು. ಆಗ ರಷ್ಯಾ ಸಭೆಯ ಅಧ್ಯಕ್ಷತೆ ವಹಿಸಿತ್ತು. ಪಾಕಿಸ್ತಾನದಿಂದ ನಕ್ಷೆಯನ್ನು ತೆಗೆದುಹಾಕುವಂತೆ ಪದೇ ಪದೇ ಒತ್ತಾಯಿಸಲಾಯಿತು. ಆದರೆ, ಆ ಎಚ್ಚರಿಕೆಗಳನ್ನು ಪಾಕ್‌ ನಿರ್ಲಕ್ಷಿಸಿತು. ಆ ಕ್ಷಣದಲ್ಲಿ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಭೆಯಿಂದಲೇ ಹೊರನಡೆದರು. ಆ ಮೂಲಕ ಭಾರತವು ತನ್ನ ಪ್ರಾದೇಶಿಕ ಸಮಗ್ರತೆಯನ್ನು ಪ್ರಶ್ನಿಸಲು ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿತು. ಆ ಸಂದರ್ಭದಲ್ಲಿ, ಅಜಿತ್ ದೋವಲ್ ದೇಶದ ಸಾರ್ವಭೌಮತೆಯ ಬಗ್ಗೆ ದೃಢವಾದ ನಿಲುವನ್ನು ತೆಗೆದುಕೊಂಡಿದ್ದನ್ನು ಈ ಭೇಟಿ ನೆನಪಿಸುತ್ತದೆ.

    ಪಾಕಿಸ್ತಾನ ನಡೆದುಕೊಂಡ ರೀತಿಯು SCO ಚಾರ್ಟರ್‌ನ ಸ್ಪಷ್ಟ ಉಲ್ಲಂಘನೆ. SCO ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಎಲ್ಲಾ ಸ್ಥಾಪಿತ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಭಾರತ ಗರಂ ಆಗಿತ್ತು. ಪಾಕಿಸ್ತಾನದ ಪ್ರಚೋದನಕಾರಿ ಕ್ರಮವನ್ನು ಬೆಂಬಲಿಸುವುದಿಲ್ಲ ಎಂದು ರಷ್ಯಾ ಕೂಡ ದೃಢಪಡಿಸಿತ್ತು. ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪತ್ರುಶೇವ್ ಅವರು, ಅಜಿತ್ ದೋವಲ್ ಅವರನ್ನು ಹೊರನಡೆದಿದ್ದಕ್ಕಾಗಿ ಶ್ಲಾಘಿಸಿದ್ದರು. ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವ ಆಧಾರದಲ್ಲಿ ಭಾರತ-ಚೀನಾ ಸಂಬಂಧ ಮುಂದಕ್ಕೆ ಕೊಂಡೊಯ್ಯಲು ಬದ್ಧ: ಮೋದಿ

    ಈಗ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೀನಾಕ್ಕೆ ಭೇಟಿ ಕೊಟ್ಟಿದ್ದಾರೆ. ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿರುವ ಅಮೆರಿಕದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲು ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದಾರೆ.

  • ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ – ಚೀನಾದಲ್ಲಿ ಪುಟಿನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಝಲೆನ್ಸ್ಕಿ ಕರೆ

    ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ – ಚೀನಾದಲ್ಲಿ ಪುಟಿನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಝಲೆನ್ಸ್ಕಿ ಕರೆ

    ಬೀಜಿಂಗ್‌: 7 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಚೀನಾಕ್ಕೆ ಭೇಟಿ ನೀಡಿದ್ದಾರೆ. ಚೀನಾದ ಟಿಯಾಂಜಿನ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಗೆ ಭವ್ಯ ಸ್ವಾಗತ ನೀಡಲಾಯಿತು.

    ಪ್ರಧಾನಿ ಮೋದಿ 2018ರಲ್ಲಿ ಕೊನೆಯ ಬಾರಿ ಚೀನಾ (China) ಪ್ರವಾಸ ಕೈಗೊಂಡಿದ್ದರು. ಆದ್ರೆ 2020ರ ಗಲ್ವಾನ್‌ ಘರ್ಷಣೆಯ ಬಳಿಕ ಪರಸ್ಪರ ದೂರ ಸರಿದಿದ್ದ ಭಾರತ ಮತ್ತು ಚೀನಾ ಭವಿಷ್ಯದ ಭೌಗೋಳಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈಗ ಮತ್ತೆ ಹತ್ತಿರವಾಗಲು ಮುಂದಾಗಿವೆ. ಇಡೀ ಜಗತ್ತು ಅಚ್ಚರಿಗೊಳ್ಳುವ ರೀತಿಯಲ್ಲಿ ಭಾರತ-ಚೀನಾ (India China) ಸಂಬಂಧ ಸುಧಾರಣೆ ಕಾಣುತ್ತಿದೆ. ಇದನ್ನೂ ಓದಿ: 7 ವರ್ಷಗಳ ನಂತರ ಚೀನಾಗೆ ಪ್ರಧಾನಿ ಮೋದಿ ಭೇಟಿ

    ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ (Xi Jinping) ಅವರ ಆಹ್ವಾನದ ಮೇರೆಗೆ ಭೇಟಿ ನೀಡಿರುವ ಮೋದಿ ಶಾಂಘೈ ಸಹಕಾರ ಮಂಡಳಿ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 25ನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಆ.31ರಂದು ಸಭೆಯ ಔತಣಕೂಟದಲ್ಲಿ ಭಾಗಿಯಾಗಲಿದ್ದು, ಸೆ.1ರಂದು ಮುಖ್ಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಮಯದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ರನ್ನೂ ಭೇಟಿಯಾಗಲಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ಮೋದಿ ಕೆಲವು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.  ಇದನ್ನೂ ಓದಿ: ಜಪಾನ್‌ ಪ್ರಧಾನಿ, ಅವರ ಪತ್ನಿಗೆ ವಿಶೇಷ ಗಿಫ್ಟ್‌ ಕೊಟ್ಟ ಮೋದಿ – ಚಂದ್ರಶಿಲೆಯ ಬಟ್ಟಲು, ಪಶ್ಮಿನಾ ಶಾಲಿನ ವಿಶೇಷತೆ ಏನು?

    ಪುಟಿನ್‌ ಭೇಟಿಗೂ ಮುನ್ನವೇ ಝಲೆನ್ಸ್ಕಿ ಕರೆ
    ಆಗಸ್ಟ್‌ 31ರಂದು ಟಿಯಾನ್‌ಜಿನ್‌ನಲ್ಲಿ ನಡೆಯುವ ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಚೀನಾ ಅಧ್ಯಕ್ಷ ಕ್ಷಿ, ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಚರ್ಚೆ ನಡೆಸಲಿದ್ದಾರೆ. ಅಮೆರಿಕದ 50% ಸುಂಕದ ಬಗ್ಗೆ ಗಂಭೀರ ಮಾತುಕತೆ ನಡೆಸಲಿದ್ದಾರೆ. ಆದ್ರೆ ತ್ರಿಮೂರ್ತಿಗಳ ಭೇಟಿಗೂ ಮುನ್ನವೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದು, ಉಕ್ರೇನ್‌ನಲ್ಲಿನ ಯುದ್ಧ ಹಾಗೂ ಶಾಂತಿ ನಿರೀಕ್ಷೆಯ ಕುರಿತು ಮಾತುಕತೆ ನಡೆಸಿದ್ದಾರೆ. ಬಳಿಕ ಚೀನಾದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತವು ʻರಷ್ಯಾ ಮತ್ತು ಇತರ ನಾಯಕರಿಗೆ ಸೂಕ್ತ ಸಂದೇಶʼ ನೀಡಲು ಸಿದ್ಧವಾಗಿದೆ ಝಲೆನ್ಸ್ಕಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಟ್ರಂಪ್‌ ಸುಂಕ ಸಮರಕ್ಕೆ ಕೌಂಟರ್‌ ಕೊಡಲು ಸಜ್ಜು
    ಇದಕ್ಕೂ ಮುನ್ನ ಚೀನಾ ದ್ವಿಪಕ್ಷೀಯ ಸಂಬಂಧ ಬಗ್ಗೆ ಮಾತನಾಡಿರುವ ಮೋದಿ, ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಭಾರತ-ಚೀನಾ ಒಟ್ಟಾಗಿ ಕೆಲಸ ಮಾಡಬೇಕು. ಪರಸ್ಪರ ಗೌರವ, ಆಸಕ್ತಿ, ಸೂಕ್ಷ್ಮ ಮಾತುಕತೆಯ ಆಧಾರದ ಮೇಲೆ ದೀರ್ಘಕಾಲಿನ ದೃಷ್ಟಿಕೋನದಿಂದ ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಲು ನಾವು ಸಿದ್ಧರಿದ್ದೇವೆ. 2 ನೆರೆಹೊರೆಯ ಮತ್ತು ಜಗತ್ತಿನ ದೊಡ್ಡ ರಾಷ್ಟ್ರಗಳಾಗಿ ಭಾರತ ಮತ್ತು ಚೀನಾ ನಡುವಿನ ಸೌಹಾರ್ದಯುತ ಸಂಬಂಧ ಜಾಗತಿಕ ಶಾಂತಿ, ಸಮೃದ್ಧಿ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಅಂತ ಮೋದಿ ಪ್ರತಿಪಾದಿಸಿದ್ದಾರೆ.

  • ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಗೆ ಮೋದಿ ಸ್ವಾಗತಿಸಿದ ಚೀನಾ; ಗಲ್ವಾನ್‌ ಘರ್ಷಣೆ ಬಳಿಕ ಮೊದಲ ಭೇಟಿ

    ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಗೆ ಮೋದಿ ಸ್ವಾಗತಿಸಿದ ಚೀನಾ; ಗಲ್ವಾನ್‌ ಘರ್ಷಣೆ ಬಳಿಕ ಮೊದಲ ಭೇಟಿ

    – ಟ್ರಂಪ್ ಜೊತೆ ಹೇಗೆ ಡೀಲ್ ಮಾಡಬೇಕೆಂದು ಮೋದಿಗೆ ಹೇಳಿಕೊಡ್ತೀವಿ; ಇಸ್ರೇಲ್‌ ಪ್ರಧಾನಿ

    ಬೀಜಿಂಗ್‌: ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಗೆ ಚೀನಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ (Chinese Foreign Ministry) ತಿಳಿಸಿರುವುದಾಗಿ ವರದಿಯಾಗಿದೆ.

    ಇದೇ ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 1ರ ವರೆಗೆ ಟಿಯಾಂಜಿನ್‌ನಲ್ಲಿ ಶೃಂಗ ಸಭೆ ನಡೆಯಲಿದೆ. 2020ರಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಗಲ್ವಾನ್‌ ಘರ್ಷಣೆ ಬಳಿಕ ಚೀನಾಕ್ಕೆ ಮೋದಿ (Narendra Modi) ಅವರ ಮೊದಲ ಭೇಟಿ ಇದಾಗಲಿದೆ. ಟ್ರಂಪ್‌ ಸುಂಕ ಸಮರದ ನಡುವೆ ಬ್ರಿಕ್ಸ್‌ ಒಕ್ಕೂಟ ಭಾಗವಾಗಿರು ಚೀನಾ ಮೋದಿ ಅವರಿಗೆ ಆಹ್ವಾನ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಈ ಸಭೆಯು ಉಭಯ ರಾಷ್ಟ್ರಗಳ ಅಭಿವೃದ್ಧಿಯ ಮಾತುಕತೆಗಳ ಮೇಲೆ ಕೇಂದ್ರೀಕೃತವಾಗಿದೆ. ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಒಪ್ಪಂಗಳು ಆಗುವ ಸಾಧ್ಯತೆಯಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ.

    ಕಳೆದ ಜೂನ್‌ನಲ್ಲಿ ನಡೆದ ಶೃಂಗ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಭಾರತವನ್ನು ಪ್ರತಿನಿಧಿಸಿದ್ದರು. ಇದನ್ನೂ ಓದಿ: ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತಗೊಳಿಸಿಲ್ಲ: ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟನೆ

    ಅಮೆರಿಕದಲ್ಲಿ ಆಂತರಿಕೆ ಭಿನ್ನಮತ ಸ್ಫೋಟ
    ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ, ಅಮೆರಿಕದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಅಮೆರಿಕದ ಅನೇಕ ರಾಜಕಾರಣಿಗಳು, ಆರ್ಥಿಕ ತಜ್ಞರು ಕಿಡಿಕಾರಿದ್ದಾರೆ. ಅಮೆರಿಕ ಕಾಂಗ್ರೆಸ್‌ನ ಡೆಮಾಕ್ರೆಟಿಕ್ ಸದಸ್ಯ ಗ್ರೆಗೊರಿ ಮೀಕ್ಸ್ ಮಾತಾಡಿ, ಟ್ರಂಪ್ ಅನಗತ್ಯ ಸುಂಕಗಳು ಎರಡು ದೇಶಗಳ ನಡುವೆ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ನಡೆಸಿದ್ದ 2 ದಶಕಗಳ ಪ್ರಯತ್ನವನ್ನು ಅಪಾಯಕ್ಕೆ ಸಿಲುಕಿಸಿದೆ. ರಾಜತಾಂತ್ರಿಕ ಸಂಬಂಧ ಮೇಲೆ ಪರಿಣಾಮ ಬೀರಲಿದೆ ಅಂತ ಟೀಕಿಸಿದ್ದಾರೆ.

    ಹೇಗೆ ಡೀಲ್‌ ಮಾಡಬೇಕೆಂದು ಹೇಳಿಕೊಡ್ತೇವೆ: ನೆತನ್ಯಾಹು
    ಈ ಬೆನ್ನಲ್ಲೇ ಭಾರತದ ಪರ ಬ್ಯಾಟ್ ಮಾಡಿರುವ ಚೀನಾ, ಶೇ.50ರಷ್ಟು ಸುಂಕ ವಿಧಿಸಿರುವ ಟ್ರಂಪ್ ನಡೆಯನ್ನು ಖಂಡಿಸಿದೆ. ಟ್ರಂಪ್ ಜೊತೆ ಹೇಗೆ ಡೀಲ್ ಮಾಡಬೇಕು ಅಂತ ಮೋದಿಗೆ ಸಲಹೆ ಕೊಡ್ತೇವೆ ಅಂತ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ:  ಆದಾಯ ತೆರಿಗೆ ಮಸೂದೆ-2025 ಹಿಂಪಡೆದ ಕೇಂದ್ರ – ಆ.11ರಂದು ಹೊಸ ಆವೃತ್ತಿ ಪರಿಚಯ

    ಮೋದಿಗೆ ಪುಟಿನ್‌ ಫೋನ್‌ ಕಾಲ್‌
    ಇನ್ನೂ ಭಾರತ ಭೇಟಿಗೆ ಆಹ್ವಾನ ನೀಡಿದ ಬೆನ್ನಲ್ಲೇ ಮೋದಿ ಜೊತೆ ರಷ್ಯಾ ಅಧ್ಯಕ್ಷ ಪುಟಿನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಜೈಲಿಂದ ಬಂದ ಮರುದಿನವೇ ಮತ್ತೆ ಸಹೋದ್ಯೋಗಿ ಯುವತಿಗೆ ಕಿರುಕುಳ – ಕೇರಳ ಯುವಕ ಯುಕೆಯಿಂದ ಗಡೀಪಾರು ಸಾಧ್ಯತೆ

  • ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ – ವಿದೇಶಾಂಗ ಸಚಿವ ಜೈಶಂಕರ್

    ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ – ವಿದೇಶಾಂಗ ಸಚಿವ ಜೈಶಂಕರ್

    ನವದೆಹಲಿ: ಭಯೋತ್ಪಾದನೆ (Terrorism) ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವ ಪ್ರಾಯೋಜಕರು ಮತ್ತು ಹಣಕಾಸುದಾರರನ್ನು ಪತ್ತೆ ಹಚ್ಚುವುದು ಹಾಗೂ ಅವರಿಗೆ ಕಠಿಣ ಶಿಕ್ಷೆ ನೀಡುವುದು ಬಹಳ ಮುಖ್ಯ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ.

    ಕಝಕಿಸ್ತಾನದ (Kazakhstan) ಅಸ್ತಾನಾದಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದ ತ್ರಿಭೂತಗಳು, ಇದರ ವಿರುದ್ಧ ಹೋರಾಡುವ ತುರ್ತು ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮಂಡ್‌ ನೆಕ್ಲೇಸ್‌ ಕಳ್ಳತನ

    ಭಯೋತ್ಪಾದನೆ ಇಂದು ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಜಾಗತಿಕ ಮತ್ತು ರಾಷ್ಟ್ರೀಯ ಶಾಂತಿಗೆ ಬೆದರಿಕೆಯಾಗಿ ಪರಿಣಮಿಸಿದೆ. ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ತಕ್ಷಣ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆ ವಿರುದ್ಧ ಹೋರಾಡಲು ಸಮಗ್ರ ವಿಧಾನದ ಅಗತ್ಯವಿದೆ. ಭಯೋತ್ಪಾದಕರು ಮಾತ್ರ ದುಷ್ಕರ್ಮಿಗಳಲ್ಲ, ಅವರಿಗೆ ಸಹಾಯ ಮಾಡುವ ಸಂಚಾಲಕರು, ಹಣಕಾಸುದಾರರು ಮತ್ತು ಪ್ರಾಯೋಜಕರ ವಿರುದ್ಧ ಜಂಟಿ ಕ್ರಮವಿರಬೇಕು. ಇವರನೆಲ್ಲವನ್ನೂ ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡುವ ಅಗತ್ಯವಿದೆ ಎಂದಿದ್ದಾರೆ. ಇದನ್ನೂ ಓದಿ:  ದೆಹಲಿ ನಾಗರಿಕರಿಗೆ 25 ಲಕ್ಷ ಆರೋಗ್ಯ ವಿಮೆ: ಪ್ಯಾರಿದೀದಿ ಬಳಿಕ ಕಾಂಗ್ರೆಸ್‌ನಿಂದ ಎರಡನೇ ಗ್ಯಾರಂಟಿ

    ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ಚೌಕಟ್ಟಿನ (RATS) ಸಹಾಯದಿಂದ ಭಯೋತ್ಪಾದನೆಯ ವಿರುದ್ಧ ಬಲವಾದ ಕ್ರಮವನ್ನು SCO ತೆಗೆದುಕೊಳ್ಳಬಹುದು ಎಂಬ ವಿಶ್ವಾಸವಿದೆ. ಅಸ್ತಾನಾದಲ್ಲಿ ನಡೆದ ಶೃಂಗಸಭೆಯಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದದ ವಿರುದ್ಧ ಜಂಟಿ ಕ್ರಮದ ಕುರಿತು ಚರ್ಚಿಸಲಾಗಿದ್ದು, ಈ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ಖನಿಜಗಳಿಗಾಗಿ ಚೀನಾದ ಮೇಲೆ ಅವಲಂಬನೆ – ಕಾಶ್ಮೀರದಲ್ಲಿ ನಿಕ್ಷೇಪ ಇದ್ರೂ ಯಾಕೆ ಗಣಿ ಸಾಧ್ಯವಾಗಿಲ್ಲ?