Tag: Scientists

  • ಸಮುದ್ರದ ತಳದಲ್ಲಿ ಇದೆಯಂತೆ ಸಿಹಿನೀರು – ಭೂಮಿ ಮೇಲಿನ ಜನರಿಗೆ ಕುಡಿಯೋಕೆ ಸಿಗುತ್ತಾ?

    ಸಮುದ್ರದ ತಳದಲ್ಲಿ ಇದೆಯಂತೆ ಸಿಹಿನೀರು – ಭೂಮಿ ಮೇಲಿನ ಜನರಿಗೆ ಕುಡಿಯೋಕೆ ಸಿಗುತ್ತಾ?

    – ಸಮುದ್ರ ತಳಕ್ಕೆ ಸಿಹಿನೀರು ಹೇಗೆ ಬಂತು?

    ಮುದ್ರ ಎಂದಾಕ್ಷಣ ಎಲ್ಲರಿಗೂ ಥಟ್ಟನೆ ನೆನಪಾಗುವುದು ಉಪ್ಪು ನೀರು. ಭೂಮಿಯ ಮುಕ್ಕಾಲು ಭಾಗ ಆವರಿಸಿರೋದು ಇದರಿಂದಲೇ. ಸಮುದ್ರದ ನೀರೆಲ್ಲ ಸಿಹಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆ ಎಷ್ಟು ಜನರಲ್ಲಿ ಮೂಡಿರಲ್ಲ ಹೇಳಿ? ಎಷ್ಟೋ ಸಲ ಹಾಗೆ ಯೋಚನೆ ಮಾಡಿಯೂ ಇರುತ್ತಾರೆ. ಹಾಗಾದ್ರೆ ಸಮುದ್ರದಲ್ಲಿ ಸಿಹಿನೀರು ಸಿಗಲ್ವಾ ಎಂಬ ತಾರ್ಕಿಕ ಪ್ರಶ್ನೆಯೂ ಮೂಡಬಹುದು. ಅದು ಹೇಗೆ ಸಾಧ್ಯ? ಅಂತ ಹೆಚ್ಚಿನವರು ಭಾವಿಸಲೂ ಬಹುದು. ಪ್ರಕೃತಿಯ ವಿಸ್ಮಯವನ್ನು ಭೇದಿಸುವ ವಿಜ್ಞಾನಿಗಳು ಮತ್ತೊಂದು ಅಚ್ಚರಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಸಮುದ್ರದ ತಳದಲ್ಲಿ ಸಿಹಿನೀರನ್ನು ಪತ್ತೆಹಚ್ಚಿದ್ದಾರೆ. ಅಷ್ಟೇ ಅಲ್ಲ, ಸಿಹಿನೀರಿಗೆ ಕಾರಣವಾಗುವ ಜಲಚರವನ್ನೂ ಗುರುತಿಸಿದ್ದಾರೆ.

    ಸಮುದ್ರದ ನೀರು ಉಪ್ಪಾಗಿರುವುದೇಕೆ?
    ಸಮುದ್ರ ತಳದ ಸಿಹಿನೀರಿನ ಬಗ್ಗೆ ತಿಳಿಯುವುದಕ್ಕೂ ಮೊದಲು, ಸಮುದ್ರದ ನೀರು ಉಪ್ಪಾಗಿರುವುದೇಕೆ ಎಂಬುದನ್ನು ತಿಳಿಯೋಣ. ಸಮುದ್ರವು ತನ್ನ ಉಪ್ಪನ್ನು ಪ್ರಾಥಮಿಕವಾಗಿ ಭೂಮಿಯ ಮೇಲಿನ ಬಂಡೆಗಳಿAದ ಹವಾಮಾನ ಎಂಬ ಪ್ರಕ್ರಿಯೆಯ ಮೂಲಕ ಪಡೆಯುತ್ತದೆ. ಅಲ್ಲಿ ಆಮ್ಲೀಯ ಮಳೆನೀರು ಬಂಡೆಗಳನ್ನು ಸವೆಸಿ, ನದಿಗಳಿಗೆ ಮತ್ತು ಅಂತಿಮವಾಗಿ ಸಾಗರಕ್ಕೆ ಹರಿಯುವ ಖನಿಜ ಅಯಾನುಗಳನ್ನು ಬಿಡುಗಡೆ ಮಾಡುತ್ತದೆ. ನೀರೊಳಗಿನ ಜ್ವಾಲಾಮುಖಿ ಚಟುವಟಿಕೆಯು ಸಹ ಉಪ್ಪಿನಾಂಶಕ್ಕೆ ಕೊಡುಗೆ ನೀಡುತ್ತದೆ. ಕರಗಿದ ಖನಿಜಗಳನ್ನು ನೇರವಾಗಿ ನೀರಿಗೆ ಬಿಡುಗಡೆ ಮಾಡುತ್ತದೆ. ಲಕ್ಷಾಂತರ ವರ್ಷಗಳಿಂದ, ಈ ಲವಣಗಳು ಸಾಗರಗಳಲ್ಲಿ ಸಂಗ್ರಹವಾಗಿ ಅವುಗಳನ್ನು ಉಪ್ಪಾಗಿಸುತ್ತವೆ.

    ಹುಡುಕಿದ್ದು ಏನೋ, ಸಿಕ್ಕಿದ್ದೇನೋ!
    ಸುಮಾರು 50 ವರ್ಷಗಳ ಹಿಂದೆ ಯುಎಸ್ ಸರ್ಕಾರಿ ಹಡಗು ಸಮುದ್ರದ ತಳದಲ್ಲಿ ಖನಿಜಗಳು ಮತ್ತು ಹೈಡ್ರೋಕಾರ್ಬನ್‌ಗಳನ್ನು ಹುಡುಕುತ್ತಿತ್ತು. ದೇಶದ ಈಶಾನ್ಯ ಕರಾವಳಿಯ ಸಮುದ್ರ ತಳದಲ್ಲಿ ಕೊರೆಯುವಾಗ ಅನಿರೀಕ್ಷಿತವಾಗಿ ಸಿಹಿನೀರನ್ನು ಕಂಡುಕೊಂಡಿತು. ಈಗ ಅಂತರರಾಷ್ಟ್ರೀಯ ವಿಜ್ಞಾನಿಗಳ ಗುಂಪು ಈ ಅಚ್ಚರಿಯ ಆವಿಷ್ಕಾರವನ್ನು ಅನುಸರಿಸಿ, ನ್ಯೂಜೆರ್ಸಿಯಿಂದ ಮೈನೆವರೆಗೆ ವ್ಯಾಪಿಸಿರುವ ಅಟ್ಲಾಂಟಿಕ್ ಮಹಾಸಾಗರದ ಅಡಿಯಲ್ಲಿ ಸಿಹಿನೀರಿನಿಂದ ಆವೃತವಾಗಿರುವ ದೊಡ್ಡ ಜಲಚರದ ಅಸ್ತಿತ್ವವನ್ನು ದೃಢಪಡಿಸಿದೆ. ವಿಜ್ಞಾನಿಗಳು ಸಮುದ್ರದ ಕೆಳಗೆ 1,289 ಅಡಿಗಳಷ್ಟು ಆಳದಲ್ಲಿ ಸಿಕ್ಕ ಸಿಹಿನೀರಿನಲ್ಲಿ ವಿಶ್ಲೇಷಣೆಗಾಗಿ ಸುಮಾರು 50,000 ಲೀಟರ್ ನೀರನ್ನು ಸಂಗ್ರಹಿಸಿದ್ದಾರೆ. ‘ಭೂಮಿಯ ಮೇಲೆ ಸಿಹಿನೀರನ್ನು ಹುಡುಕುವ ಕೊನೆಯ ಸ್ಥಳಗಳಲ್ಲಿ ಇದು ಒಂದು’ ಎಂದು ಕೊಲೊರಾಡೋ ಸ್ಕೂಲ್ ಆಫ್ ಮೈನ್ಸ್ನ ಭೂ ಭೌತಶಾಸ್ತ್ರಜ್ಞ ಮತ್ತು ಜಲಶಾಸ್ತ್ರಜ್ಞ ಬ್ರಾಂಡನ್ ಡುಗನ್ ತಿಳಿಸಿದ್ದಾರೆ.

    ಜಗತ್ತಿನಾದ್ಯಂತ ಆಳವಿಲ್ಲದ ಉಪ್ಪುನೀರಿನಲ್ಲಿ ಅಸ್ತಿತ್ವದಲ್ಲಿದೆ ಎಂಬ ಅನೇಕ ಸಿಹಿನೀರಿನ ನಿಕ್ಷೇಪಗಳಲ್ಲಿ ಕಡಲಾಚೆಯ ಜಲಚರವೂ (Aquifers ಇದು ಮಣ್ಣು, ಕೆಸರು ಅಥವಾ ಬಂಡೆಗಳಂತಹ ಭೂಮಿಯೊಳಗಿನ ಪೋರಸದ (porous) ಪದರಗಳಾಗಿವೆ) ಒಂದು. ಕಡಲಾಚೆಯ ಜಲಚರ ವ್ಯವಸ್ಥೆಗಳು ಯಾವುವು? ಅವು ಸಿಹಿನೀರನ್ನು ಹೇಗೆ ಪಡೆಯುತ್ತವೆ? ಅವು ಏಕೆ ಮಹತ್ವದ್ದಾಗಿವೆ ಎಂಬುದನ್ನು ಇಲ್ಲಿ ನೋಡೋಣ.

    ಕಡಲಾಚೆಯ ಜಲಚರಗಳು ಯಾವುವು?
    ಭೂಮಿಯ ಮೇಲಿನ ಜಲಚರಗಳಂತೆಯೇ, ಕಡಲಾಚೆಯ ಜಲಚರಗಳು ಸಿಹಿನೀರನ್ನು ಒಳಗೊಂಡಿರುವ ಬಂಡೆ ಅಥವಾ ಕೆಸರಿನ ವ್ಯವಸ್ಥೆಯಾಗಿವೆ. ಅವು ಸಮುದ್ರ ತಳದಲ್ಲಿ ಇವೆ. ಕಡಲಾಚೆಯ ಜಲಚರಗಳು ಕರಾವಳಿಯಿಂದ 90 ಕಿಲೋಮೀಟರ್‌ಗಳ ವರೆಗೆ ವಿಸ್ತರಿಸಬಹುದು. ಭೂಮಿಯ ಮೇಲಿನ ಜಲಚರಗಳಿಂದ ತೆಗೆದಾಗ ಸಿಗುವ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ಸಿಹಿನೀರನ್ನು ಹೊಂದಿರುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಜರ್ನಲ್ ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ್ನಲ್ಲಿ ಪ್ರಕಟವಾದ 2021 ರ ಅಧ್ಯಯನವು, ’21 ನೇ ಶತಮಾನದಲ್ಲಿ ಸಂಭಾವ್ಯ ಸಿಹಿನೀರಿನ ಮೂಲವಾಗಿ ಕರಾವಳಿಯ ಏಕೀಕೃತವಲ್ಲದ ಕೆಸರು ವ್ಯವಸ್ಥೆಗಳಲ್ಲಿ ಕಡಲಾಚೆಯ ತಾಜಾ ಅಂತರ್ಜಲ ಇದೆ. ಸಮುದ್ರ ತಳದಲ್ಲಿ ಒಂದು ಮಿಲಿಯನ್ ಘನ ಕಿಲೋಮೀಟರ್ ಸಿಹಿನೀರು ಇದೆ ಎಂದು ಅಂದಾಜಿಸಿದೆ. ಎಲ್ಲಾ ಭೂಮಿಯ ತಾಜಾ ಅಂತರ್ಜಲದ ಸುಮಾರು 10% ರಷ್ಟಿದೆ.

    ಈಚಿನ ವರ್ಷಗಳಲ್ಲಿ ವಿಜ್ಞಾನಿಗಳು ಆಸ್ಟ್ರೇಲಿಯಾ, ಚೀನಾ, ಉತ್ತರ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದ ಕರಾವಳಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಕಡಲಾಚೆಯ ಜಲಚರಗಳ ಅಸ್ತಿತ್ವವನ್ನು ದೃಢಪಡಿಸಿದ್ದಾರೆ. ಆದಾಗ್ಯೂ, ಪ್ರಾಥಮಿಕವಾಗಿ ಭೂಮಿಯ ಮೇಲಿನ ಜಲಚರಗಳ ಮೇಲೆ ವಿಶೇಷ ಗಮನ ಮತ್ತು ಪ್ರಮುಖ ಕಾರಣಗಳಿಂದಾಗಿ, ಅವುಗಳ ಅನ್ವೇಷಣೆಗೆ ಹೆಚ್ಚಿನ ಆದ್ಯತೆ ಕೊಟ್ಟಿರಲಿಲ್ಲ. ಅದಕ್ಕಾಗಿಯೇ ಅಮೆರಿಕದ ಈಶಾನ್ಯದಿಂದ ದೂರದಲ್ಲಿರುವ ಕಡಲಾಚೆಯ ಜಲಚರಗಳ ಇತ್ತೀಚಿನ ಪರಿಶೋಧನೆಯು ನಿರ್ಣಾಯಕವಾಗಿದೆ. ಸಮುದ್ರದೊಳಗಿನ ಸಿಹಿನೀರಿನಿಗಾಗಿ ವ್ಯವಸ್ಥಿತವಾಗಿ ಕೊರೆಯುವ ಮೊದಲ ಜಾಗತಿಕ ದಂಡಯಾತ್ರೆ ಇದಾಗಿದೆ. ವಿಜ್ಞಾನಿಗಳು ಸಮುದ್ರ ತಳದಲ್ಲಿ 30 ರಿಂದ 50 ಕಿಲೋಮೀಟರ್‌ಗಳ ನಡುವೆ ಕೊರೆಯುತ್ತಾರೆ. ನ್ಯೂಯಾರ್ಕ್ ನಗರದಂತಹ ಮಹಾನಗರಕ್ಕೆ 800 ವರ್ಷಗಳ ಕಾಲ ಜಲಚರವು ಸಾಕಷ್ಟು ನೀರನ್ನು ಹೊಂದಿದೆ ಎಂದು ಅಂದಾಜಿಸಿದ್ದಾರೆ.

    ಸಮುದ್ರ ತಳಕ್ಕೆ ಸಿಹಿನೀರು ಹೇಗೆ ಬಂತು?
    ಭೂಮಿಯಲ್ಲಿರುವ ಜಲಚರಗಳು ಮಳೆ ಮತ್ತು ಹಿಮ ಕರಗುವಿಕೆಯಿಂದ ಸಿಹಿನೀರನ್ನು ಪಡೆಯುತ್ತವೆ. ಇದು ಮಣ್ಣಿನಲ್ಲಿ ಹೀರಿಕೊಂಡು ಬಂಡೆಗಳ ಮೂಲಕ ಕೆಳಗೆ ಹರಿಯುತ್ತದೆ. ಆದಾಗ್ಯೂ, ಕಡಲಾಚೆಯ ಜಲಚರಗಳು ಸಿಹಿನೀರನ್ನು ಹೇಗೆ ಪಡೆಯಬಹುದು ಎಂಬ ವಿಚಾರ ಸವಾಲಾಗಿ ಪರಿಣಮಿಸಿದೆ. ಸಿಹಿನೀರು ಅಲ್ಲಿಗೆ ಹೇಗೆ ಬರಬಹುದು ಎಂಬುದರ ಕುರಿತು ಸಾಕಷ್ಟು ಊಹೆಗಳಿವೆ. ಒಂದು ಸಿದ್ಧಾಂತದ ಪ್ರಕಾರ, ಹಿಂದಿನ ಹಿಮಯುಗಗಳಲ್ಲಿ ಸಮುದ್ರ ಮಟ್ಟ ಕಡಿಮೆಯಾಗಿದ್ದ ಮತ್ತು ಪ್ರಸ್ತುತ ಸಾಗರದಿಂದ ಆವೃತವಾಗಿರುವ ದೊಡ್ಡ ಪ್ರದೇಶಗಳು ಒಣ ಭೂಮಿಯಾಗಿದ್ದ ಸಮಯದಲ್ಲಿ ನೀರು ಸಮುದ್ರದ ತಳಭಾಗವನ್ನು ತಲುಪಿರಬಹುದು. ಪರಿಣಾಮವಾಗಿ, ಮಳೆಯು ನೆಲಕ್ಕೆ ಹರಿದು, ದೊಡ್ಡ ಪ್ರಮಾಣದ ಸಿಹಿನೀರನ್ನು ನಿರ್ಮಿಸಿತು. ಅಲ್ಲದೆ, ಈ ಸಮಯದಲ್ಲಿ ಮಂಜುಗಡ್ಡೆಯ ಗಾತ್ರವು ಬೆಳೆದಿತ್ತು. ಅವುಗಳ ತೂಕವು ನೀರನ್ನು ಸಮುದ್ರಕ್ಕೆ ವಿಸ್ತರಿಸಿದ ಸರಂಧ್ರ ಬಂಡೆಗಳಿಗೆ ತಳ್ಳಿರಬಹುದು.

    ಇನ್ನೊಂದು ಸಿದ್ಧಾಂತದ ಪ್ರಕಾರ, ಮಳೆಯ ನಂತರ ನಿಯಮಿತವಾಗಿ ನೀರು ಪೂರೈಕೆಯಾಗುತ್ತಿರಬಹುದು. ಕಡಲಾಚೆಯ ಜಲಚರಗಳ ಕೆಳಗಿರುವ ಸಿಹಿನೀರು ಉಪ್ಪುನೀರಿನೊಂದಿಗೆ ಬೆರೆಯದೇ ಇರಬಹುದು. ಏಕೆಂದರೆ ಜಲಚರಗಳ ಮೇಲಿರುವ ಜೇಡಿಮಣ್ಣಿನಿಂದ ಸಮೃದ್ಧವಾದ ಕೆಸರಿನಿಂದ ನಿರ್ಮಿಸಲಾದ ಕ್ಯಾಪ್ ರಾಕ್ ಪದರವಿದೆ. ‘ಜೇಡಿಮಣ್ಣು ವಿರೋಧಾಭಾಸವಾಗಿದೆ. ಇದು ಸಡಿಲವಾದಾಗ ಬಹಳಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಅದನ್ನು ಸಂಕ್ಷೇಪಿಸಿದಾಗ, ಅದು ಬಹುತೇಕ ಒಳನುಗ್ಗುವುದಿಲ್ಲ. ಈ ಕ್ಯಾಪ್ ಕಡಿಮೆ ಸಾಂದ್ರತೆಯ ಸಿಹಿನೀರು ಸಮುದ್ರ ತಳಕ್ಕೆ ಏರುವುದನ್ನು ತಡೆಯುತ್ತದೆ’ ಎಂದು ಸೈಂಟಿಫಿಕ್ ಅಮೆರಿಕನ್ ವರದಿ ತಿಳಿಸುತ್ತದೆ. ಯುಎಸ್ ಈಶಾನ್ಯ ಕರಾವಳಿಯಿಂದ ದೂರದಲ್ಲಿರುವ ಕಡಲಾಚೆಯ ಜಲಚರದಲ್ಲಿ ಸಿಹಿನೀರಿನ ಮೂಲವನ್ನು ಖಚಿತಪಡಿಸಿಕೊಳ್ಳಲು, ವಿಜ್ಞಾನಿಗಳು ಸಾವಿರಾರು ಮಾದರಿಗಳನ್ನು ಹೊರತೆಗೆದಿದ್ದಾರೆ. ಒಂದು ವೇಳೆ, ನೀರು ನವೀಕರಿಸಲಾಗದಿದ್ದರೆ ಮತ್ತು ಹಿಮಯುಗದಿಂದಲೂ ಇದ್ದರೆ, ಅದು ಮಿತವಾಗಿ ಬಳಸಬೇಕಾದ ಸೀಮಿತ ಸಂಪನ್ಮೂಲವಾಗಿರುತ್ತದೆ.

    ಭೂಮಿ ಮೇಲಿನ ನೀರಿನ ಕೊರತೆ ನಿವಾರಣೆಯಾಗುತ್ತಾ?
    ಕಡಲಾಚೆಯ ಜಲಚರಗಳು ಗಮನಾರ್ಹವಾಗಿವೆ. ಏಕೆಂದರೆ, ಈಗ ಸಿಕ್ಕಿರೋದು ಅವುಗಳು ಬಳಸದೆ ಇರುವ ಸಿಹಿನೀರಿನ ನಿಕ್ಷೇಪಗಳಾಗಿರಬಹುದು. ಭೂಮಿಯ ಮೇಲಿನ ನೀರಿನ ಕೊರತೆಯನ್ನು ನಿಭಾಯಿಸಲು ಸಹಾಯ ಮಾಡುತ್ತವೆ. 2023 ರ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಪ್ರಪಂಚವು ಪ್ರಸ್ತುತ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. 2030 ರ ವೇಳೆಗೆ ಜಾಗತಿಕ ಸಿಹಿನೀರಿನ ಬೇಡಿಕೆಯು ಪೂರೈಕೆಗಿಂತ 40% ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿದೆ. ಇದು ಬರಗಾಲ, ಮಳೆ ಮತ್ತು ಹಿಮಪಾತದ ಮಾದರಿಗಳಲ್ಲಿನ ಬದಲಾವಣೆಗಳಿಗೆ ಕಾರಣವಾಗಿದೆ. ಈ ಬೆಳವಣಿಗೆಯು ಸಿಹಿನೀರಿನ ಮೂಲಗಳ ಮರುಪೂರಣದ ಮೇಲೆ ತೀವ್ರ ಪರಿಣಾಮ ಬೀರಿದೆ. ಮಾಲಿನ್ಯ ಮತ್ತು ನೀರಿನ ವ್ಯರ್ಥ ಬಳಕೆಯೂ ಸಹ ಈ ಕೊರತೆಗೆ ಕಾರಣವಾಗಿದೆ.

    ನಮಗೆ ನೀರಿನ ಬಿಕ್ಕಟ್ಟು ಇದೆ ಎಂಬುದು ವೈಜ್ಞಾನಿಕ ಪುರಾವೆಯಾಗಿದೆ. ನಾವು ನೀರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ. ನೀರನ್ನು ಕಲುಷಿತಗೊಳಿಸುತ್ತಿದ್ದೇವೆ. ಹವಾಮಾನಕ್ಕೆ ನಾವು ಮಾಡುತ್ತಿರುವ ಕೆಲಸಗಳ ಮೂಲಕ ಇಡೀ ಜಾಗತಿಕ ಜಲವಿಜ್ಞಾನದ ಚಕ್ರವನ್ನು ಬದಲಾಯಿಸುತ್ತಿದ್ದೇವೆ ಎಂದು ಗ್ಲೋಬಲ್ ಕಮಿಷನ್ ಆನ್ ದಿ ಎಕನಾಮಿಕ್ಸ್ ಆಫ್ ವಾಟರ್ (GCEW) ನ ಸಹ-ಅಧ್ಯಕ್ಷರಾಗಿರುವ ಪಾಟ್ಸ್ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ನ ನಿರ್ದೇಶಕ ಜೋಹಾನ್ ರಾಕ್‌ಸ್ಟ್ರೋಮ್ ತಿಳಿಸಿದ್ದಾರೆ.

    ಸಮುದ್ರ ತಳದ ಸಿಹಿನೀರನ್ನು ಹೊರತೆಗೆಯಬಹುದೇ?
    ಕಡಲಾಚೆಯ ಜಲಚರಗಳನ್ನು ಸಿಹಿನೀರು ಪೂರೈಕೆಯ ಮೂಲವಾಗಿ ಪರಿವರ್ತಿಸುವ ಹಾದಿಯು ದೀರ್ಘವಾದದ್ದು. ಇದು ತುಂಬಾ ಸವಾಲುಗಳಿಂದ ಕೂಡಿದೆ. ಸಮುದ್ರ ತಳದಲ್ಲಿ ಕೊರೆಯುವಿಕೆಯು ಸಾಕಷ್ಟು ದುಬಾರಿಯಾಗಿದೆ. ಯುಎಸ್ ಈಶಾನ್ಯ ಕರಾವಳಿಯಿಂದ ಇತ್ತೀಚಿನ ಹೊರತೆಗೆಯುವಿಕೆಗೆ ಸುಮಾರು 25 ಮಿಲಿಯನ್ ಡಾಲರ್ (220 ಕೋಟಿ ರೂಪಾಯಿ) ವೆಚ್ಚವಾಗಿದೆ. ಸಮುದ್ರ ತಳದಲ್ಲಿ ಕಾರ್ಯನಿರ್ವಹಿಸುವ ಬಾವಿಗಳನ್ನು ವಿನ್ಯಾಸಗೊಳಿಸುವುದು, ನೀರನ್ನು ತೀರಕ್ಕೆ ಸಾಗಿಸುವುದು ಮತ್ತು ಉಪ್ಪುನೀರು ಸಿಹಿನೀರಿನೊಂದಿಗೆ ಬೆರೆಯದಂತೆ ಪಂಪಿಂಗ್ ಅನ್ನು ನಿಯಂತ್ರಿಸುವ ಅವಶ್ಯಕತೆಯಿದೆ.

    ಸಿಹಿನೀರು ಹೊರತೆಗೆದರೆ ಸಮುದ್ರ ಜೀವಿಗಳ ಮೇಲೆ ಎಫೆಕ್ಟ್ ಆಗುತ್ತಾ?
    ಕಡಲಾಚೆಯ ಜಲಚರಗಳಿಂದ ಸಿಹಿನೀರನ್ನು ಹೊರತೆಗೆಯುವುದರಿಂದ ಪರಿಸರ ವಿಜ್ಞಾನ ಮತ್ತು ಸಮುದ್ರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ನೀರನ್ನು ಹೊರತೆಗೆಯುವ ಸಂಬಂಧ ಮಾಲೀಕತ್ವ ಮತ್ತು ಹಕ್ಕುಗಳ ಸಮಸ್ಯೆಗಳಿವೆ. ಉದಾಹರಣೆಗೆ, ಹೊರತೆಗೆಯಲಾದ ನೀರನ್ನು ಯಾರು ನಿರ್ವಹಿಸುತ್ತಾರೆ? ಸ್ಥಳೀಯರು, ಮೀನುಗಾರಿಕೆ ಮತ್ತು ಕರಾವಳಿ ಸಮುದಾಯಗಳು ನೀರಿನ ನಿರ್ವಹಣೆಯಲ್ಲಿ ಎಷ್ಟು ಪಾಲನ್ನು ಪಡೆಯುತ್ತವೆ ಎಂಬುದು ಪ್ರಶ್ನೆಯಾಗಿದೆ. ಈ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದರೆ, ಬಹುತೇಕ ಅನಿರೀಕ್ಷಿತ ಪರಿಣಾಮಗಳು ಉಂಟಾಗುತ್ತವೆ ಎಂಬುದು ಸದ್ಯದ ವಿಶ್ಲೇಷಣೆ.

  • ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

    ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

    ಬೆಂಗಳೂರು: ಸೆಪ್ಟೆಂಬರ್ 7ರಂದು ಸಂಪೂರ್ಣ ರಕ್ತಚಂದ್ರಗ್ರಹಣ (Blood Moon Eclipse 2025) ಸಂಭವಿಸಲಿದೆ. ನಭೋಮಂಡಲದ ಈ ವಿಸ್ಮಯದ ಬಗ್ಗೆ ವಿಜ್ಞಾನಿಗಳು (Scientists) ಕಾತುರದಿಂದ ನೋಡುತ್ತಿದ್ದಾರೆ. ಈ ಬಗ್ಗೆ ವಿಜ್ಞಾನಿಗಳು ಮಾತನಾಡಿದ್ದಾರೆ.

    ಏನಿದು ಚಂದ್ರಗ್ರಹಣ?
    ಚಂದ್ರಗ್ರಹಣ ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಸಂಭವಿಸುತ್ತದೆ. ಭೂಮಿಯ ನೆರಳು ಕೆಲ ಕಾಲ ಚಂದಿರನ ಮೇಲೆ ಬೀಳುವುದರಿಂದ ಅದು ಮರೆಯಾಗುತ್ತದೆ. ಭೂಮಿಯ ನೆರಳಿನಲ್ಲಿ ಎರಡು ಭಾಗ ಇದೆ. ಒಂದು ಗಾಢ ಕತ್ತಲೆಯ ಭಾಗ, ಇದನ್ನು ಅಂಬ್ರಾ ಎನ್ನಲಾಗುತ್ತದೆ. ಹೊರಗಿನ ಮಬ್ಬಾದ ಭಾಗವನ್ನು ಪೆನಾಂಬ್ರಾ ಎನ್ನಲಾಗುತ್ತದೆ. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಸಂಪೂರ್ಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪುಬಣ್ಣದಲ್ಲಿ ಕಾಣಿಸುತ್ತಾನೆ. ಇದನ್ನೂ ಓದಿ: ಸೆ.7 ರಕ್ತಚಂದ್ರಗ್ರಹಣ – ಗರ್ಭಿಣಿಯರು ಏನು ಮಾಡಬೇಕು? ತಜ್ಞ ವೈದ್ಯರ ಸಲಹೆಗಳೇನು?

    ಈ ಪ್ರಕ್ರಿಯೆ ಯಾವಾಗ ಆರಂಭ?
    ಸೆಪ್ಟೆಂಬರ್ 7ರಂದು ರಾತ್ರಿ 9:57ಕ್ಕೆ ಚಂದ್ರ ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತಾನೆ. ನಂತರ ಚಂದ್ರ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಅವರಿಸಲ್ಪಡಿಸುತ್ತಾ 11:01ಕ್ಕೆ ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ. ಸಂಪೂರ್ಣ ಚಂದ್ರಗ್ರಹಣ 82 ನಿಮಿಷದವರೆಗೆ ಅಂದರೆ 12:23ರವರೆಗೆ ಮುಂದುವರೆಯಲಿದೆ. ಪಾರ್ಶ್ವ ಹಂತವು 1:26ರವರೆಗೆ ಮುಂದುವರೆಯಲಿದೆ. ಪಾರ್ಶ್ವಛಾಯ ಹಂತ ರಾತ್ರಿ 8:58ಕ್ಕೆ ಆರಂಭವಾಗಿ ಬೆಳಗಿನ ಜಾವ 2:25ಕ್ಕೆ ಅಂತ್ಯಗೊಳ್ಳುತ್ತದೆ.

    ವೀಕ್ಷಣೆ ಹೇಗೆ?
    ಚಂದ್ರಗ್ರಹಣ ವೀಕ್ಷಣೆಗೆ ಯಾವ ಸಾಧನ ಬೇಕಾಗಿಲ್ಲ, ಬರಿಗಣ್ಣಿನಲ್ಲಿ ನೋಡಬಹುದು. ಆದರೆ ದೂರದರ್ಶಕ, ದುರ್ಬಿನು ಬಳಸಿದರೆ ಇನ್ನಷ್ಟು ವೀಕ್ಷಣೆಯ ಅನುಭವ ಸುಂದರವಾಗುತ್ತದೆ.

    ವೀಕ್ಷಣೆಗೆ ಸ್ಥಳದ ಆಯ್ಕೆ ಹೇಗಿರಬೇಕು?
    ಗ್ರಹಣದ ಸಮಯ ತಡರಾತ್ರಿಯಾಗಿರೋದ್ರಿಂದ ತಮ್ಮ ಮನೆಗಳ ಹೊರಾಂಗಣ ಅಥವಾ ತಾರಸಿಗಳಲ್ಲಿ ವೀಕ್ಷಣೆ ಮಾಡಬಹುದು. ಮೋಡವಿದ್ದರೂ ಕೆಲಕಾಲ ಸ್ಪಷ್ಟವಾಗಿ ಕಾಣಿಸುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಅನೇಕ ಸಂಸ್ಥೆಗಳಿಂದ ಗ್ರಹಣ ವೀಕ್ಷಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

  • ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

    ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

    ಲಗಿದ್ದಾಗ ಅಥವಾ ಕುಳಿತಿದ್ದಾಗ ‘ಗುಯ್..’ ಅಂತ ಕಿವಿ ಹತ್ತಿರ ಸುಳಿಯುವ ಸೊಳ್ಳೆಗಳು ಅಂದ್ರೆ ಎಂತಹವರಿಗೂ ಹಿಂಸೆ. ಸಾಕಪ್ಪಾ.. ಸಾಕು ಈ ಸೊಳ್ಳೆಗಳ ಕಾಟ ಎನಿಸದೇ ಇರದು. ಮೈಮೇಲೆ ಕೂತು ಸೂಜಿ ಚುಚ್ಚಿ ರಕ್ತ ಹೀರುವಾಗ ಅದೆಷ್ಟು ಸೊಳ್ಳೆಯನ್ನು ಹೊಡೆದು ಕೊಂದಿಲ್ಲ. ಅದಕ್ಕೆ ಲೆಕ್ಕವೇ ಇಲ್ಲ. ಸೊಳ್ಳೆ ಸಂತಾನ ಇಲ್ಲದಿದ್ರೆ ಎಷ್ಟು ಆರಾಮಾಗಿ ನಿದ್ರೆ ಮಾಡಬಹುದಿತ್ತಲ್ವಾ ಅಂತ ಯೋಚಿಸಿದವರಿಲ್ಲ. ಸೊಳ್ಳೆಗಳು ಹತ್ತಿರ ಸುಳಿದಾಡಿದರೆ ಶತ್ರುಗಳಿಗಿಂತ ಹೆಚ್ಚು. ಅವುಗಳನ್ನು ಕೊಲ್ಲಲು ಸೊಳ್ಳೆಬತ್ತಿ, ಸೊಳ್ಳೆ ಬ್ಯಾಟ್ ಬಳಕೆಗೇನು ಕಮ್ಮಿಯಿಲ್ಲ. ಒಟ್ಟಾರೆ, ಸೊಳ್ಳೆ ಅಂದ್ರೆ ಕಿರಿಕಿರಿ.

    ನಿಮಗೆ ಗೊತ್ತಾ? ಸೊಳ್ಳೆಯಿಂದ ಜೀವಸಂಕುಲ ಉಳಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ಆ ನಿಟ್ಟಿನಲ್ಲಿ ಒಂದು ಕಾರ್ಯವನ್ನೂ ವಿಜ್ಞಾನಿಗಳು ಮಾಡಿದ್ದಾರೆ. ಈ ಪ್ರಯೋಗ ಅಮೆರಿಕಗೆ ಸೇರಿದ ಹವಾಯ್ (Hawaii) ದ್ವೀಪದಲ್ಲಿ ಅಂತಹದ್ದೊಂದು ಪ್ರಯೋಗ ಮಾಡಿದ್ದಾರೆ. ಏನಿದು ಪ್ರಯೋಗ? ಸೊಳ್ಳೆಗಳಿಂದಾಗುವ ಪ್ರಯೋಜನ ಏನು? ಜೀವಸಂಕುಲ ಉಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಡ್ರೋನ್ ಬಳಸಿ ಸೊಳ್ಳೆ ರಿಲೀಸ್!
    ಹವಾಯಿಯ ದೂರದ ಕಾಡುಗಳಲ್ಲಿ ವಿಜ್ಞಾನಿಗಳು ದೈತ್ಯ ಡ್ರೋನ್ ಬಳಸಿ ಸೊಳ್ಳೆಗಳ ಹಿಂಡುಗಳನ್ನು ಬಿಡುತ್ತಿದ್ದಾರೆ. ಇದೊಂಥರ ವಿಚಿತ್ರ ಪರಿಪಾಠ ಅಂತ ಅನ್ನಿಸಬಹುದು. ಆದರೆ, ಅದರಲ್ಲೊಂದು ಉದ್ದೇಶ ಇದೆ. ವಿಜ್ಞಾನಿಗಳು ಹವಾಯಿಯಲ್ಲಿ ಜೀವವನ್ನು ಪುನರುತ್ಥಾನಗೊಳಿಸಲು ಈ ಕೀಟಗಳನ್ನು ಬಿಡುತ್ತಿದ್ದಾರೆ.

    ಅಳಿವಿನ ಅಂಚಿನಲ್ಲಿ ಹನಿಕ್ರೀಪರ್ಸ್?
    ಈ ಸುಂದರ ಉಷ್ಣವಲಯದ ದ್ವೀಪವು ಅಳಿವಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು ಕಾಲದಲ್ಲಿ ಹವಾಯಿಯಲ್ಲಿ ಹೇರಳವಾಗಿದ್ದ ಹನಿಕ್ರೀಪರ್ಸ್ (Honeycreepers) ಹೆಸರಿನ ವರ್ಣರಂಜಿತ ಹಾಡುಹಕ್ಕಿಗಳು, ಆಕ್ರಮಣಕಾರಿ ಸೊಳ್ಳೆಗಳಿಂದ ಹರಡುವ ಪಕ್ಷಿ ಮಲೇರಿಯಾಗೆ ಬಲಿಯಾಗುತ್ತಿವೆ. ಪಕ್ಷಿಗಳು ಬದುಕುಳಿಯಲು ಹೆಣಗಾಡುತ್ತಿವೆ. ಈ ಪಕ್ಷಿಗಳ ಸಂತಾನ ಮತ್ತೆ ವೃದ್ಧಿಯಾಗಬೇಕೆಂದು ವಿಜ್ಞಾನಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಪಕ್ಷಿಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸುವ ಬ್ಯಾಕ್ಟೀರಿಯಾದ ತಳಿಗಳನ್ನು ಬೇರೆಡೆಗೆ ಸಾಗಿಸಲು, ಪ್ರಯೋಗಾಲಯದಲ್ಲಿ ಸಾಕಿದ ಮತ್ತು ಕಚ್ಚದ ಗಂಡು ಸೊಳ್ಳೆಗಳನ್ನು ಬಿಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

    ಮಲೇರಿಯಾ ಹರಡುತ್ತಿರುವ ಹನಿಕ್ರೀಪರ್ ಆವಾಸಸ್ಥಾನಗಳಿಗೆ ಈ ವಿಶೇಷ ಗಂಡು ಸೊಳ್ಳೆಗಳನ್ನು (Mosquitoes) ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಆ ಮೂಲಕ ವಿಜ್ಞಾನಿಗಳು ಕಚ್ಚುವ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರೋಗ ಹರಡುವಿಕೆಯನ್ನು ನಿಗ್ರಹಿಸಲು ಕ್ರಮಕೈಗೊಂಡಿದ್ದಾರೆ.

    ಏನಿದು ಬರ್ಡ್ಸ್, ನಾಟ್ ಸೊಳ್ಳೆಗಳು ಯೋಜನೆ?
    ‘ಬರ್ಡ್ಸ್, ನಾಟ್ ಸೊಳ್ಳೆಗಳು’ ಯೋಜನೆ ಮೂಲಕ ಈ ಕ್ರಮವಹಿಸಲಾಗಿದೆ. ಇದು ಸ್ಥಳೀಯ ಹವಾಯಿಯನ್ ಪಕ್ಷಿಗಳನ್ನು ರಕ್ಷಿಸಲು ಕೆಲಸ ಮಾಡುವ ಸಂಸ್ಥೆಗಳ ಒಕ್ಕೂಟವಾಗಿದೆ. ಯೋಜನೆಯನ್ನು 2023ರ ನವೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಮಾಯಿ ಮತ್ತು ಕೌಯಿಯಲ್ಲಿನ ಹನಿಕ್ರೀಪರ್ ಆವಾಸಸ್ಥಾನಗಳಲ್ಲಿ 40 ಮಿಲಿಯನ್‌ಗಿಂತಲೂ ಹೆಚ್ಚು ಗಂಡು ಸೊಳ್ಳೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಈ ಸೊಳ್ಳೆಗಳನ್ನು ಬಿಡುವುದರಿಂದ ಪಕ್ಷಿಗಳ ಆವಾಸಸ್ಥಾನದ ಕಾಡುಗಳಿಗೆ ಬೇರೆ ಸೊಳ್ಳೆಗಳು ಹೋಗಲು ಸಾಧ್ಯವಿಲ್ಲ ಎಂದು ಡ್ರೋನ್ ಕಾರ್ಯವನ್ನು ಮುನ್ನಡೆಸುತ್ತಿರುವ ಅಮೆರಿಕನ್ ಬರ್ಡ್ ಕನ್ಸರ್ವೆನ್ಸಿಯ ಹವಾಯಿ ಕಾರ್ಯಕ್ರಮ ನಿರ್ದೇಶಕ ಕ್ರಿಸ್ ಫಾರ್ಮರ್ ತಿಳಿಸಿದ್ದಾರೆ.

    ಆಕ್ರಮಣಕಾರಿ ಸೊಳ್ಳೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಅನೇಕ ಸ್ಥಳೀಯ ಪಕ್ಷಿ ಪ್ರಭೇದಗಳು ಶಾಶ್ವತವಾಗಿ ಕಣ್ಮರೆಯಾಗುತ್ತವೆ. ಕನಿಷ್ಠ 33 ಜಾತಿಯ ಹನಿಕ್ರೀಪರ್‌ಗಳು ಈಗ ಅಳಿದುಹೋಗಿವೆ. ಮೌಯಿಯಲ್ಲಿರುವ ಕಿವಿಕಿಯು, ಅಕೊಹೆಕೊಹೆ ಮತ್ತು ಕೌಯಿಯಲ್ಲಿರುವ ಅಕೆಕೆ ಸೇರಿದಂತೆ ಉಳಿದಿರುವ 17 ಜಾತಿಗಳಲ್ಲಿ ಹಲವು ಪಕ್ಷಿಗಳು ಅಳಿವಿನಂಚಿನಲ್ಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ಸಂತಾನೋತ್ಪತ್ತಿ ಸಮಸ್ಯೆ ಇರುವ ಸೊಳ್ಳೆಗಳನ್ನು ಬಿಡುಗಡೆ ಮಾಡುವುದರಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೆ, ಹನಿಕ್ರೀಪರ್ ಸಂಖ್ಯೆಯನ್ನು ಉಳಿಸಲು ಈ ಸೊಳ್ಳೆಗಳಿಗೆ ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

    ಹವಾಯ್‌ಗೆ ಮಾರಕ ಸೊಳ್ಳೆಗಳು ಬಂದಿದ್ಹೇಗೆ?
    ಸಾಮಾನ್ಯವಾಗಿ, ಸೊಳ್ಳೆಗಳು ಹವಾಯಿಯಲ್ಲಿ ವಾಸಿಸುವುದಿಲ್ಲ. ಆದರೆ 1826 ರಲ್ಲಿ ಒಂದು ತಿಮಿಂಗಿಲ ಬೇಟೆಯ ಹಡಗು ಆಕಸ್ಮಿಕವಾಗಿ ಅವುಗಳನ್ನು ದ್ವೀಪಗಳಿಗೆ ತಂದು ಬಿಟ್ಟಿವೆ. ಅವು ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ ವೃದ್ಧಿಯಾಗಿ ಅಭಿವೃದ್ಧಿ ಹೊಂದಿದವು. ಈಗ ಪಕ್ಷಿ ಪ್ರಭೇದಕ್ಕೆ ಕಂಟಕವಾಗಿ ಪರಿಣಮಿಸಿವೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಗಾದೆಯಂತೆ, ಆಕ್ರಮಣಕಾರಿ ಸೊಳ್ಳೆಗಳನ್ನು ಮಟ್ಟ ಹಾಕಲು ಸಾಕಿದ ಸೊಳ್ಳೆಗಳ ಅಸ್ತ್ರ ಪ್ರಯೋಗವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ.

  • ಇರಾನ್‌ನ ನ್ಯೂಕ್ಲಿಯರ್‌, ಮಿಲಿಟರಿ ಕೇಂದ್ರಗಳ ಮೇಲೆ ಇಸ್ರೇಲ್‌ ವಾಯುದಾಳಿ – ಪ್ಯಾರಾಮಿಲಿಟರಿ ಮುಖ್ಯಸ್ಥ, ಇಬ್ಬರು ವಿಜ್ಞಾನಿಗಳ ಹತ್ಯೆ

    ಇರಾನ್‌ನ ನ್ಯೂಕ್ಲಿಯರ್‌, ಮಿಲಿಟರಿ ಕೇಂದ್ರಗಳ ಮೇಲೆ ಇಸ್ರೇಲ್‌ ವಾಯುದಾಳಿ – ಪ್ಯಾರಾಮಿಲಿಟರಿ ಮುಖ್ಯಸ್ಥ, ಇಬ್ಬರು ವಿಜ್ಞಾನಿಗಳ ಹತ್ಯೆ

    ಟೆಹ್ರಾನ್: ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಕೇಂದ್ರ (Nuclear Plant) ಹಾಗೂ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್‌ನ ಡಜನ್‌ಗಟ್ಟಲೆ ಜೆಟ್‌ಗಳು ಭೀಕರ ದಾಳಿ ನಡೆಸಿವೆ. ಈ ದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹೊಸೈನ್ ಸಲಾಮಿ (Hossein Salami) ಹತ್ಯೆಗೀಡಾಗಿದ್ದಾರೆ. ಇದರಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.

    ಆಪರೇಷನ್‌ ರೈಸಿಂಗ್‌ ಲಯನ್‌ (Rising Lion) ಕಾರ್ಯಾಚರಣೆಯಲ್ಲಿ ಇರಾನ್‌ನ ಅಣ್ವಸ್ತ್ರ ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ (Israeli AirStrike) ನಡೆಸಿದ್ದು, ಟೆಹ್ರಾನ್‌ ಮೇಲಿನ ದಾಳಿಯನ್ನು ಇರಾನ್ ಖಚಿತಪಡಿಸಿದೆ. ದಾಳಿಯಲ್ಲಿ ಇರಾನ್‌ನ ಕ್ಷಿಪಣಿ ಕಾರ್ಖಾನೆಗಳು, ಯುರೇನಿಯಂ ಸಂಗ್ರಹಣಾ ಕೇಂದ್ರಕ್ಕೂ ಹಾನಿಯಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಏನಿದು Unlucky Day – 13ನೇ ತಾರೀಖು, ಶುಕ್ರವಾರ ಒಟ್ಟಿಗೆ ಬಂದರೆ ಏನಾಗುತ್ತೆ?

    ಇತ್ತ ಇಸ್ರೇಲ್‌ ಕೂಡ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುವುದನ್ನು ತಡೆಲು ಶುಕ್ರವಾರ ಇರಾನಿನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಇರಾನ್‌ 15 ಪರಮಾಣು ಬಾಂಬ್‌ಗಳನ್ನು ತಯಾರಿಸಲು ಸಾಕಷ್ಟು ಸಾಮಗ್ರಿಗಳನ್ನ ಸಂಗ್ರಹ ಮಾಡಿಕೊಂಡಿತ್ತು. ಇದನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸೇಡಿಗಾಗಿ ಠಾಗೂರ್ ಮನೆ ಮೇಲೆ ದಾಳಿ – 50ಕ್ಕೂ ಹೆಚ್ಚು ಜನರ ಮೇಲೆ ಕೇಸ್ 

    ಪ್ಯಾರಾಮಿಲಿಟರಿ ಮುಖ್ಯಸ್ಥ, ಪರಮಾಣು ವಿಜ್ಞಾನಿಗಳು ಸಾವು
    ಇನ್ನೂ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಇರಾನಿನ ಅರೆಸೇನಾ ಕ್ರಾಂತಿಕಾರಿ ಗಾರ್ಡ್ ಕಮಾಂಡರ್ ಹೊಸೇನ್ ಸಲಾಮಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳೂ ಹತರಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ

    ಭಾರತೀಯರಿಗೆ ಎಚ್ಚರಿಕೆ…
    ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಹಾಗೂ ಇರಾಕ್‌ನಲ್ಲಿ ಇರುವ ತನ್ನ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆಯನ್ನು ನೀಡಿದೆ. ಇರಾನ್ ಹಾಗೂ ಇರಾಕ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಈ ಸಂಬಂಧ ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು, ಭಾರತೀಯ ಪ್ರಜೆಗಳು ಜಾಗರೂಕರಾಗಿ ಇರಬೇಕು. ಅನಗತ್ಯವಾಗಿ ಹೊರಗಡೆ ಹೋಗಬಾರದು. ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರುವಂತೆಯೂ ತಿಳಿಸಿದೆ. ಇದನ್ನೂ ಓದಿ: ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

  • ಶುಕ್ರ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ವಿಜ್ಞಾನಿಗಳು ಹೇಳೋದೇನು?

    ಶುಕ್ರ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ವಿಜ್ಞಾನಿಗಳು ಹೇಳೋದೇನು?

    ಹಳ ಹಿಂದಿನಿಂದಲೂ ಶುಕ್ರ ಗ್ರಹವನ್ನು ಭೂಮಿಯಂತೆಯೇ ಇರುವ ಇನ್ನೊಂದು ಅವಳಿ ಗ್ರಹ ಎಂದು ವಿಜ್ಞಾನಿಗಳು ನಂಬಿದ್ದರು. ಜೊತೆಗೆ ಈ ಗ್ರಹ ಮಾನವ ವಾಸಕ್ಕೆ ಯೋಗ್ಯವಾಗಿದೆ ಎಂದು ಕೂಡ ವಿಶ್ವಾಸವನ್ನು ಹೊಂದಿದ್ದರು. ಈ ಕುರಿತು ವಿಜ್ಞಾನಿಗಳು ಹೇಳುವುದೇನು? ಮಾಹಿತಿ ಇಲ್ಲಿದೆ.

    ಶುಕ್ರ ಗ್ರಹವನ್ನು ಮೊದಲು ಭೂಮಿಯ ಅವಳಿ ಗ್ರಹವೆಂದು ನಂಬಿದ್ದರು. ಮೊದಲು ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಶುಕ್ರ ಗ್ರಹ ಮಾನವ ಜೀವನ ಸಾಗಿಸಲು ಬೆಂಬಲ ನೀಡುತ್ತದೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ನಂಬಿಕೆಗೆ ವಿರುದ್ಧವಾಗಿ ಪರಿಣಮಿಸಿದ್ದು, ಶುಕ್ರ ಗ್ರಹ ಜನರ ಜೀವನಕ್ಕೆ ಸೂಕ್ತವಾಗಿಲ್ಲ ಎನ್ನುವುದನ್ನು ಬಿಂಬಿಸಿದೆ. ಜೊತೆಗೆ ಶುಕ್ರ ಗ್ರಹದಲ್ಲಿ ಜ್ವಾಲಾಮುಖಿಗಳಿಂದ ಬಿಡುಗಡೆಯಾದ ಅನಿಲವನ್ನು ಆಧರಿಸಿ ಸಂಶೋಧನೆ ಮಾಡಿದಾಗ ಮಾನವನ ವಾಸ ಇಲ್ಲಿ ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

    ನೀರಿನ ಪ್ರಮಾಣ ಹೇಗಿದೆ?
    ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳುವಂತೆ, ಶುಕ್ರ ಗ್ರಹದ ಒಳಭಾಗವು ಅತ್ಯಂತ ಶುಷ್ಕವಾಗಿದ್ದು, ವರದಿಯಂತೆ ಇದು ಯಾವತ್ತೂ ನೀರನ್ನು ಹೊಂದಿರಲೇ ಇಲ್ಲ ಎಂದು ತಿಳಿಸಿದೆ. ವಾತಾವರಣದಲ್ಲಿರುವ ರಾಸಾಯನಿಕವನ್ನು ಸಂಯೋಜನೆಯ ಪರಿಶೀಲನೆ ನಡೆಸಿದಾಗ, ಅದು ಜ್ವಾಲಾಮುಖಿ ಸ್ಫೋಟದಿಂದ ಬಿಡುಗಡೆಯಾದ ಅನಿಲ ಎಂದು ತಿಳಿದುಬಂದಿದೆ.

    ಈ ಜ್ವಾಲಾಮುಖಿ ಅನಿಲಗಳು ಕೇವಲ 6% ನೀರಿನ ಆವಿಯನ್ನು ಹೊಂದಿರುತ್ತವೆ. ಇದು ಭೂಮಿಯಿಂದ ಹೊರಸೂಸಲ್ಪಡುವ ಅನಿಲಕ್ಕಿಂತ ತೀವ್ರವಾಗಿ ಭಿನ್ನವಾಗಿದ್ದು, ಅದು 60% ನೀರಿನ ಆವಿ ಹೊಂದಿರುತ್ತದೆ. ಇದು ಗ್ರಹದ ಕೆಳಪದರಿನಲ್ಲಿ ನೀರಿನ ಕೊರತೆಯನ್ನು ಸೂಚಿಸುತ್ತದೆ.

    ಈ ಹಿಂದೆ ಗ್ರಹದಲ್ಲಿ ನೀರಿತ್ತಾ?
    ಒಂದು ಸಿದ್ಧಾಂತದ ಪ್ರಕಾರ, ಶತಕೋಟಿ ವರ್ಷಗಳ ಹಿಂದೆ ಗ್ರಹವು ಅದರ ಮೇಲ್ಮೈಯಲ್ಲಿ ನೀರಿನಿಂದ ಹಾಗೂ ಸಮಶೀತೋಷ್ಣ ಹವಾಮಾನದಿಂದ ಕೂಡಿತ್ತು ಎನ್ನಲಾಗಿತ್ತು. ಆದರೆ ಬಳಿಕ ಹಸಿರುಮನೆ ಪರಿಣಾಮಕ್ಕೆ ತುತ್ತಾಗಿ ಬಿಸಿ ಹವಾಮಾನಕ್ಕೆ ತಿರುಗಲಾರಂಭಿಸಿತು. ಇದು ಅಲ್ಲಿನ ನೀರಿನ ಪ್ರಮಾಣವನ್ನು ಕ್ರಮೇಣ ಕಡಿಮೆಯಾಗಿಸಿತು.

    ಈಗ ಶುಕ್ರ ಗ್ರಹದ ಸ್ಥಿತಿ ಹೇಗಿದೆ?
    ಶುಕ್ರ ಗ್ರಹದ ಹವಾಮಾನವು ವಿಪರೀತ ಉಷ್ಣತೆಯಿಂದ ಕೂಡಿದೆ. ಭೂಮಿಯ ತಾಪಮಾನಕ್ಕೆ ಹೋಲಿಸಿದರೆ ಅಲ್ಲಿನ ತಾಪಮಾನ 90 ಪಟ್ಟು ಹೆಚ್ಚಾಗಿದೆ. ಅಲ್ಲಿ 465 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಕೂಡಿರುತ್ತದೆ. ಮೊದಲಿನ ಸಂಶೋಧನೆಯ ಪ್ರಕಾರ ಶುಕ್ರ ಗ್ರಹದಲ್ಲಿನ ತಾಪಮಾನವು ದೀರ್ಘಕಾಲ ಹೀಗೆಯೇ ಇರುವುದಿಲ್ಲ ಎಂದು ನಂಬಿದ್ದರು ಆದರೆ ಕಾಲಾನಂತರದಲ್ಲಿ ಇದು ವಿಭಿನ್ನವಾಗಿ ಬದಲಾಗಲು ಪ್ರಾರಂಭವಾಯಿತು. ಇನ್ನೂ ಇದಕ್ಕೆ ವಿರುದ್ಧವಾಗಿ, ಸೂರ್ಯನಿಂದ ದೂರದಲ್ಲಿರುವ ಮಂಗಳ ಗ್ರಹವು ವಿಭಿನ್ನ ಕಥೆಯನ್ನು ಹೇಳುತ್ತದೆ. ಮಂಗಳ ಗ್ರಹವು ಶತಕೋಟಿ ವರ್ಷಗಳ ಹಿಂದೆ ಸಾಗರವನ್ನು ಹೊಂದಿರಬಹುದೆಂದು ಪುರಾವೆಗಳು ಸೂಚಿಸುತ್ತವೆ, ಜೊತೆಗೆ ಅದರ ಕೆಳಪದರದಲ್ಲಿ ನೀರು ಇರುವ ಸಾಧ್ಯತೆಯಿದೆ ಎಂದು ತಿಳಿಸುತ್ತದೆ.

    21ನೇ ಶತಮಾನದಲ್ಲಿ ವಿಜ್ಞಾನಿಗಳಿಗೆ ಶುಕ್ರದ ಪರಿಶೋಧನೆಯು ಪ್ರಮುಖ ಕೇಂದ್ರವಾಗಿದೆ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಶುಕ್ರನ ಭೌಗೋಳಿಕ ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು 2030ಕ್ಕೆ ಡಿಎವಿಐಎನ್‌ಸಿಐ ಮಿಷನ್ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಇನ್ನೂ ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಗ್ರಹವನ್ನು ಅಧ್ಯಯನ ಮಾಡಲು ಶುಕ್ರಯಾನ್ ಮಿಷನ್ ಎಂದೂ ಕರೆಯಲ್ಪಡುವ ಶುಕ್ರ ಆರ್ಬಿಟರ್ ಮಿಷನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

    ಈ ಸಂಶೋಧನೆಗಳ ಹೊರತಾಗಿಯೂ, ಶುಕ್ರ ಗ್ರಹವನ್ನು ಅಧ್ಯಯನ ಮಾಡುವುದರಿಂದ ಗ್ರಹಗಳ ಅಭಿವೃದ್ಧಿ ಮತ್ತು ಜೀವನಕ್ಕೆ ಅಗತ್ಯವಾದ ಪರಿಸ್ಥಿತಿಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಬಹುದು. ಇದಲ್ಲದೆ, ಶುಕ್ರ ಅಧ್ಯಯನದ ಫಲಿತಾಂಶಗಳು ನಮ್ಮ ಸೌರವ್ಯೂಹದ ಆಚೆಗಿನ ಗ್ರಹಗಳ ಸಂಶೋಧನೆಯ ಮೇಲೆ ಪ್ರಭಾವ ಬೀರುತ್ತವೆ.

  • ವಾಸನೆ ಪತ್ತೆಹಚ್ಚುವುದರಲ್ಲಿ ನಾಯಿ, ಇಲಿಯನ್ನೇ ಮೀರಿಸುವ ರೋಬೊಟ್ ಸೃಷ್ಟಿ

    ವಾಸನೆ ಪತ್ತೆಹಚ್ಚುವುದರಲ್ಲಿ ನಾಯಿ, ಇಲಿಯನ್ನೇ ಮೀರಿಸುವ ರೋಬೊಟ್ ಸೃಷ್ಟಿ

    ಸಿಡ್ನಿ: ವಾಸನೆ ಪತ್ತೆ ಹಚ್ಚುವುದರಲ್ಲಿ ನಾಯಿ ಮತ್ತು ಇಲಿಯನ್ನೇ ಮೀರಿಸುವ ವೊಂದನ್ನು ಪಶ್ಚಿಮ ಸಿಡ್ನಿ (Sydney) ವಿವಿಯ ವಿಜ್ಞಾನಿಗಳು ಸೃಷ್ಟಿಯಾಗಿದೆ.

    ಪಶ್ಚಿಮ ಸಿಡ್ನಿ ವಿವಿಯ ವಿಜ್ಞಾನಿಗಳು ಈ ರೋಬೊಟ್ (Robot) ಅಭಿವೃದ್ಧಿ ಪಡಿಸಿದ್ದು, ವಾಸನೆಯನ್ನು ಪತ್ತೆ ಹಚ್ಚುವ ಪ್ರಾಣಿಗಳ ಉಳಿವಿಗೆ ಕಾರಣವಾಗಿದೆ. ಹಲವು ಸಮಸ್ಯೆಗಳಲ್ಲಿ ಪ್ರಾಣಿಗಳನ್ನು ಬಳಸಿ ಮನುಷ್ಯ ಪರಿಹಾರ ಕಂಡಿಕೊಳ್ಳುತ್ತಿದ್ದಾನೆ. ಪ್ರಾಣಿಗಳಿಗಿಂತಲೂ ವೇಗವಾಗಿ ಮತ್ತು ಸರಿಯಾಗಿ ಗುರುತಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮಖಂಡಿ ಓಲೆಮಠದ ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ ಲಿಂಗೈಕ್ಯ

    ಪ್ರಾಣಿಗಳಿಗೂ ಗುರುತಿಸಲು ಸಾಧ್ಯವಾಗದ ವಾಸನೆಯ ಮಾರ್ಗವನ್ನು ಈ ಯಂತ್ರ ಪತ್ತೆ ಹಚ್ಚುತ್ತದೆ. ಇದರಿಂದಾಗಿ ದಟ್ಟ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾದರೆ, ಭೂಕುಸಿತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಹಾಗೂ ಕಳ್ಳರ ಮಾರ್ಗವನ್ನು ಕಂಡುಹಿಡಿಯಲು ಇದು ಬಹಳಷ್ಟು ಪ್ರಯೋಜನಕಾರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಿಡ್ನ್ಯಾಪ್ ಆಗಿದ್ದ ಮಗು ಪತ್ತೆ

  • ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಕಾರಿಕೊ, ವೈಸ್‌ಮನ್‌ಗೆ ನೋಬೆಲ್ ಪುರಸ್ಕಾರ

    ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಕಾರಿಕೊ, ವೈಸ್‌ಮನ್‌ಗೆ ನೋಬೆಲ್ ಪುರಸ್ಕಾರ

    ಸ್ಟಾಕ್‌ಹೋಮ್: ಕೋವಿಡ್-19 ಲಸಿಕೆಗಳನ್ನು (Covid-19 Vaccine) ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರವಹಿಸಿರುವ ಹಂಗೇರಿ ಹಾಗೂ ಅಮೆರಿಕದ ವಿಜ್ಞಾನಿಗಳಾದ ಕ್ಯಾಲಿಟನ್ ಕಾರಿಕೊ (Katalin Kariko) ಹಾಗೂ ಡ್ರೂ ವೈಸ್‌ಮನ್ (Drew Weissman) ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರ (Nobel Prize) ದೊರೆತಿದೆ.

    ವೈಜ್ಞಾನಿಕ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡಿದೆ. ಪ್ರಶಸ್ತಿ ವಿಜೇತರಿಗೆ 8.31 ಕೋಟಿ ರೂ. ನಗದು ಬಹುಮಾನ ರೂಪದಲ್ಲಿ ಸಿಗಲಿದೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    ಕೋವಿಡ್-19 ವಿರುದ್ಧ ಪರಿಣಾಮಕಾರಿಯಾದ ಎಮ್‌ಆರ್‌ಎನ್‌ಎ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಕಾರಿಕೊ ಹಾಗೂ ವೈಸ್‌ಮನ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ 2023ರ ನೋಬೆಲ್ ಪುರಸ್ಕಾರವನ್ನು ಅವರಿಗೆ ನೀಡಲು ನಿರ್ಧರಿಸಿದ್ದಾಗಿ ಆಯ್ಕೆಯ ಸಮಿತಿ ತಿಳಿಸಿದೆ. ಇದನ್ನೂ ಓದಿ: ಭಾರತದ 74 ಲಕ್ಷ ವಾಟ್ಸಪ್ ಖಾತೆಗಳು ನಿಷೇಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಯಾನ-3 ಯಶಸ್ಸಿಗೆ ತಿರುಪತಿ ದೇವರಲ್ಲಿ ಪ್ರಾರ್ಥನೆ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರ ಖಂಡನೆ

    ಚಂದ್ರಯಾನ-3 ಯಶಸ್ಸಿಗೆ ತಿರುಪತಿ ದೇವರಲ್ಲಿ ಪ್ರಾರ್ಥನೆ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರ ಖಂಡನೆ

    – ವಿಜ್ಞಾನಿಗಳ ಟೀಕಿಸೋ ಭರದಲ್ಲಿ ಮಂಗಳಯಾನ-3 ಅಂತ ಉಲ್ಲೇಖಿಸಿ ಪೇಚಿಗೆ ಸಿಲುಕಿದ ಪ್ರಗತಿಪರರು

    ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ಸಿಗಾಗಿ ತಿರುಪತಿಗೆ ತೆರಳಿ ದೇವರಲ್ಲಿ ಪ್ರಾರ್ಥಿಸಿದ ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರು ಖಂಡನೆ ವ್ಯಕ್ತಪಡಿಸಿದ್ದಾರೆ.

    ಚಂದ್ರಯಾನಕ್ಕೂ ಮುನ್ನ ವಿಜ್ಞಾನಿಗಳು ನಿನ್ನೆ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಚಂದ್ರಯಾನ-3 ಯಶಸ್ಸಿಗಾಗಿ ಪ್ರಾರ್ಥಿಸಿದ್ದರು. ಈ ಸುದ್ದಿ ವೈರಲ್‌ ಆಗಿತ್ತು. ವಿಜ್ಞಾನಿಗಳ ನಡೆಗೆ ಪ್ರಗತಿಪರರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

     

     

     

    ಈ ಬಗ್ಗೆ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಪೋಸ್ಟ್ ಹಾಕಿ ಹಿರಿಯ ಸಾಹಿತಿ ಸನತ್ ಕುಮಾರ್ ಬೆಳಗಲಿ ಆಕ್ರೋಶ ಹೊರಹಾಕಿದ್ದಾರೆ. ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೋದಂತಹ ಸರ್ಕಾರಿ ಸ್ವಾಮ್ಯ ಸಂಸ್ಥೆ ನಡೆ ಸಾಮಾನ್ಯ ಜನರ ದಿಕ್ಕು ತಪ್ಪಿಸುವಂತಿದೆ ಎಂದು ಟೀಕಿಸಿದ್ದಾರೆ.

    ತಾವೇ ಪರೀಕ್ಷಿಸಿ, ಸಂಶೋಧಿಸಿ ರೂಪಿಸಿರುವ ಯಾನದ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂಬುದನ್ನ ಈ ಮೂಲಕ ಸಾಬೀತುಮಾಡಿದ್ದಾರೆ. ಇದರಿಂದ ಆತ್ಮಸ್ಥೈರ್ಯ ಮತ್ತು ಸಂಶೋಧನೆಗಳ ಬಗೆಗೆ ಇರುವ ಅನುಮಾನಗಳು ವ್ಯಕ್ತವಾಗುತ್ತೆ. ಈ ನಿಟ್ಟಿನಲ್ಲಿ ಈ ಕೃತ್ಯವು ಖಂಡನರ್ಹವಾಗಿದೆ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌

    ಪತ್ರದ ಕೆಳಗೆ ಹಿರಿಯ ಸಾಹಿತಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಅಲ್ಲಮಪ್ರಭು ಬೆಟ್ಟದೂರು, ವೆಂಕಟಯ್ಯ ಅಪ್ಪಗೆರೆ, ಸನತ್‌ ಕುಮಾರ್‌ ಬೆಳಗಲಿ, ಎಲ್.ಎನ್.ಮುಕುಂದರಾಜ್‌, ಆರ್‌.ಎನ್.ರಾಜಾನಾಯಕ್‌, ಕೆ.ಬಿ.ಮಹದೇವಪ್ಪ, ನಾಗೇಶ್‌ ಅರಳಕುಪ್ಪೆ, ಹುಲಿಕುಂಟಿಮೂರ್ತಿ, ಹೆಚ್‌.ಕೆ.ವಿವೇಕಾನಂದ, ಹೆಚ್‌.ಕೆ.ಎಸ್‌.ಸ್ವಾಮಿ, ಡಿ.ಎಂ.ಮಂಜುನಾಥಸ್ವಾಮಿ, ಕೆ.ಮಹಂತೇಶ್‌, ಡಾ.ಕೆ.ಎನ್.ನಾಗೇಶ್‌, ಪ್ರಭಾ ಬೆಳವಂಗಲ, ಆಲ್ಬೂರು ಶಿವರಾಜ ಹೆಸರನ್ನು ಉಲ್ಲೇಖಿಸಲಾಗಿದೆ.

    ಮಂಗಳಯಾನ-3 ಅಂತ ತಪ್ಪಾಗಿ ಉಲ್ಲೇಖ
    ಇಸ್ರೋ ಇಂದು ಉಡಾವಣೆ ಮಾಡುತ್ತಿರುವುದು ಚಂದ್ರಯಾನ-3 ಗಗನನೌಕೆ. ಆದರೆ ಇಸ್ರೋ ವಿಜ್ಞಾನಿಗಳನ್ನು ಟೀಕಿಸುವ ಭರದಲ್ಲಿ ಪ್ರಗತಿಪರ ಚಿಂತಕರು ಪೇಚಿಗೆ ಸಿಲುಕಿದ್ದಾರೆ. ಚಂದ್ರಯಾನ-3 ಬದಲಿಗೆ ಮಂಗಳಯಾನ-3 ಎಂದು ತಪ್ಪಾಗಿ ಉಲ್ಲೇಖಿಸಿದ್ದಾರೆ. ಈ ತಪ್ಪಿಗೆ ಪ್ರಗತಿಪರ ಚಿಂತಕರನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 48,500 ವರ್ಷಗಳ ಹಿಂದಿನ ಮಾರಣಾಂತಿಕ ವೈರಸ್‌ಗೆ ಮರುಜನ್ಮ – ವಿಶ್ವಕ್ಕೆ ಕಾದಿದೆಯಾ ಆಪತ್ತು?

    48,500 ವರ್ಷಗಳ ಹಿಂದಿನ ಮಾರಣಾಂತಿಕ ವೈರಸ್‌ಗೆ ಮರುಜನ್ಮ – ವಿಶ್ವಕ್ಕೆ ಕಾದಿದೆಯಾ ಆಪತ್ತು?

    ಮಾಸ್ಕೋ: ಹವಾಮಾನ ವೈಪರಿತ್ಯದಿಂದಾಗಿ ಪ್ರಾಚೀನ ಪರ್ಮಾಫ್ರಾಸ್ಟ್ (Ancient Permafrost) ಕರಗುವಿಕೆಯು ಮಾನವ ಜಗತ್ತಿಗೆ ಮತ್ತೊಂದು ವೈರಸ್ (Virus) ಭೀತಿ ತಂದೊಡ್ಡಿದೆ. ಸಾವಿರಾರು ವರ್ಷಗಳ ಹಿಂದೆ ಹೂತಿದ್ದ ಮಾರಣಾಂತಿಕ ವೈರಸ್‌ಗೆ ಮರುಜನ್ಮ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

    ಹೌದು, ಸುಮಾರು 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೂತಿದ್ದ ವೈರಸ್‌ಗಳಿಗೆ ಈಗ ಮರುಜನ್ಮ ನೀಡಲಾಗಿದೆ. ‘ಜೊಂಬಿ ವೈರಸ್’ (Zombie Virus) ಹೆಸರಿನ 13 ಹೊಸ ರೋಗಕಾರಕಗಳನ್ನು ಯುರೋಪಿಯನ್ ಸಂಶೋಧಕರು ರಷ್ಯಾದ (Russia) ಸೈಬೀರಿಯಾ ಪ್ರದೇಶದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಅವು ಹೆಪ್ಪುಗಟ್ಟಿದ ನೆಲದಲ್ಲಿ ಸಹಸ್ರಮಾನಗಳನ್ನು ಕಳೆದರೂ ಅವು ಸಾಂಕ್ರಾಮಿಕವಾಗಿ ಉಳಿದಿವೆ ಎನ್ನಲಾಗಿದೆ.  ಇದನ್ನೂ ಓದಿ: 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    ವಾತಾವರಣದ ತಾಪಮಾನ ಏರಿಕೆಯಿಂದಾಗಿ ಪರ್ಮಾಫ್ರಾಸ್ಟ್ (ಮಂಜುಗಡ್ಡೆಯ ಮೇಲಿನ ಪದರ) ಕರಗುವಿಕೆಯು ಈ ಹಿಂದೆ ಸಿಕ್ಕಿಬಿದ್ದಿರುವ ಮಿಥೇನ್‌ನಂತಹ ಹಸಿರುಮನೆ ಅನಿಲಗಳನ್ನು ಮುಕ್ತಗೊಳಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಈ ವೈರಸ್ ದೀರ್ಘಕಾಲದ ವರೆಗೆ ಸಾಂಕ್ರಾಮಿಕವಾಗಿ ಉಳಿಯಬಹುದು. ಒಮ್ಮೆ ಇವು ಹೊರಾಂಗಣ ಪರಿಸ್ಥಿತಿಗೆ ಹೊಂದಿಕೊಂಡರೆ ನಂತರದಲ್ಲಿ ಯಾವ ಪ್ರಮಾಣದಲ್ಲಿ ಸೋಂಕು ಹರಡುತ್ತದೆ, ಎಷ್ಟು ಪ್ರಮಾಣದಲ್ಲಿ ಅಪಾಯ ಬೀರುತ್ತದೆ ಅನ್ನೋದನ್ನ ಅಂದಾಜು ಮಾಡಲು ಸಾಧ್ಯವಿಲ್ಲ. ಈ ವೈರಸ್, ಮನುಷ್ಯ ಹಾಗೂ ಪ್ರಾಣಿಗಳಿಗೂ ತಗುಲುವಂತಹದ್ದಾಗಿದ್ದು, ಹೆಚ್ಚು ಸಮಸ್ಯಾತ್ಮಕವಾಗಲಿದೆ ಎಂದು ವಿಜ್ಞಾನಿಗಳು (Scientists) ಎಚ್ಚರಿಸಿದ್ದಾರೆ.

    ಜೊಂಬಿ ವೈರಸ್ ಕುರಿತು ಈಗಾಗಲೇ ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆ ಕಂಡಿವೆ. ಇತ್ತೀಚೆಗೆ ಬಿಡುಗಡೆಯಾದ ತಮಿಳು ನಟ ಜಯಂ ರವಿ ಅಭಿನಯದ `ಮಿರುತನ್’ ಸಿನಿಮಾದಲ್ಲೂ (Cinema) ಜೊಂಬಿ ವೈರಸ್ ಕುರಿತು ಜಾಗೃತಿ ಮೂಡಿಸಲಾಗಿದೆ. ಇದನ್ನೂ ಓದಿ: ಟ್ವಿಟ್ಟರ್‌ ಅಕ್ಷರ ಮಿತಿ 280ರಿಂದ 1,000ಕ್ಕೆ ಏರಿಕೆ – ಸುಳಿವು ನೀಡಿದ ಮಸ್ಕ್‌

    Live Tv
    [brid partner=56869869 player=32851 video=960834 autoplay=true]

  • ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ನವದೆಹಲಿ: ಮಿಯಾಮಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕೆಂಪು ಸಮುದ್ರದ ತಳಭಾಗದಲ್ಲಿ ಡೆಡ್ಲಿ ಪೂಲ್ (ಮಾರಣಾಂತಿಕ ಕೊಳ) ಪತ್ತೆಯಾಗಿದ್ದು, ಇದು ಪೂಲ್‌ನಲ್ಲಿ ಈಜುವ ಜೀವಿಯನ್ನು ಕೊಲ್ಲುತ್ತದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ವಿಜ್ಞಾನಿಗಳು ತಮ್ಮ ರಿಮೋಟ್ ಚಾಲಿತ ವಾಹನ ಬಳಸಿಕೊಂಡು ಕೆಂಪು ಸಮುದ್ರದ ತಳಭಾಗದಲ್ಲಿ 1.7 ಕಿ.ಮೀ ನಷ್ಟು ಉಪ್ಪು ನೀರಿನ ಡೆಡ್ಲಿ ಪೂಲ್ ಅನ್ನು ಕಂಡು ಹಿಡಿದ್ದಾರೆ. 10 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಯ 5 ನಿಮಿಷ ಇರುವಾಗ ಈ ಕೊಳವನ್ನು ಕಂಡುಹಿಡಿದಿದ್ದಾರೆ. ಈ ಪೂಲ್ ಅತಿಹೆಚ್ಚು ಉಪ್ಪು ನೀರಿನ ಕೇಂದ್ರೀಕೃತವಾಗಿದೆ. ಜೊತೆಗೆ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಸುತ್ತಮುತ್ತಲಿನ ಎಲ್ಲ ಸಾಗರಗಳಿಗಿಂತಲೂ ಹೆಚ್ಚು ಉಪ್ಪು ನೀರನ್ನು ಹೊಂದಿದೆ ಎಂದು ಸಂಶೋಧಕರು ವಿವರಿದ್ದಾರೆ. ಇದನ್ನೂ ಓದಿ: ನಾಲ್ವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು

    ಅಲ್ಲದೇ ಈ ಪೂಲ್ ಜಲಚರ ಜೀವರಾಶಿಗಳನ್ನು ದಿಗ್ಭ್ರಮೆಗೊಳಿಸುತ್ತದೆ, ಜೊತೆಗೆ ಕೊಲ್ಲಲೂಬಹುದು ಎಚ್ಚರಿಸಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಮುಖ ಸಂಶೋಧಕ ಸ್ಯಾಮ್ ಪುರ್ಕಿಸ್, ಈ ಪೂಲ್‌ಗಳು ಭೂಮಿಯ ಮೇಲ್ಮೈಗಿಂತಲೂ ಮಾರಣಾಂತಿಕ ಪರಿಸರ ವಾತಾವರಣವನ್ನು ಒಳಗೊಂಡಿರುತ್ತವೆ. ದಾರಿತಪ್ಪಿದ ಯಾವುದೇ ಪ್ರಾಣಿಗಳು ಅಥವಾ ಜಲಚರಗಳು ಈ ಪೂಲ್‌ಗಳನ್ನು ಪ್ರವೇಶಿಸಿದರೆ ಅವುಗಳ ಸಾವು ನಿಶ್ಚಿತ ಎಂದು ಹೇಳಿದ್ದಾರೆ.

    ಮೀನು, ಸೀಗಡಿ ಹಾಗೂ ಈಲ್‌ಗಳು ತಮ್ಮ ಆಹಾರಕ್ಕಾಗಿ ಭೇಟೆಯಾಡಲು ಈ ಡೆಡ್ಲಿಪೂಲ್‌ಗಳ ಸಮೀಪದ ಸ್ಥಳಗಳನ್ನು ಬಳಸಿಕೊಳ್ಳುತ್ತವೆ. ತಮ್ಮ ಆಹಾರಕ್ಕಾಗಿ ಕೊಳದ ಬಳಿ ಅಡಗಿಕೊಳ್ಳುತ್ತವೆ. ಆದರೆ ಕೊಳವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಇಂತಹ ಪೂಲ್‌ಗಳು ನಮ್ಮ ಭೂಮಿಯ ಗ್ರಹದಲ್ಲಿ ಮೊದಲು ಸಾಗರಗಳು ಹೇಗೆ ರೂಪು ಗೊಂಡವು? ಎಂಬುದನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಉಪ್ಪು ನೀರಿನ ಪೂಲ್‌ಗಳು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳ ನೆಲೆಯಾಗಿದೆ. ವೈವಿಧ್ಯತೆಗಳಿಂದ ಸಮೃದ್ಧವಾಗಿದೆ. ಆದರೆ ಇದೇ ರೀತಿ ಪ್ರತಿಕೂಲ ಪರಿಸ್ಥಿತಿಯನ್ನು ಹೊಂದಿರುವ ಅನ್ಯಗ್ರಹಗಳು ಯಾವುದೇ ಜೀವಿಗಳಿಗೆ ಆತಿಥ್ಯ ನೀಡಬಹುದೇ ಎಂಬುದನ್ನು ನಿರ್ಧರಿಸಲು ಇಂತಹ ಆವಿಷ್ಕಾರಗಳು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.

    ವಿಜ್ಞಾನಿಗಳು ಕಂಡುಹಿಡಿದ ಮೊದಲ ಉಪ್ಪುನೀರಿನ ಪೂಲ್ ಇದಲ್ಲ. ಕಳೆದ 30 ವರ್ಷಗಳಲ್ಲಿ ಸಮುದ್ರಶಾಸ್ತ್ರಜ್ಞರು ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ಮತ್ತು ಮೆಕ್ಸಿಕೋ ಕೊಲ್ಲಿಗಳಲ್ಲಿ ಸಾಕಷ್ಟು ಮಾರಣಾಂತಿಕ ಕೊಳಗಳನ್ನು ಕಂಡುಹಿಡಿದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]