– ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದ ವಿಜ್ಞಾನಿ ದುರಂತ ಅಂತ್ಯ – ಸಹೋದರನಿಂದ ಮೂತ್ರಪಿಂಡ ದಾನ ಪಡೆದಿದ್ದ ಡಾ.ಸ್ವರ್ಣಕರ್
ಚಂಡೀಗಢ: ಬಾಡಿಗೆ ಮನೆಯ ಬಳಿ ಪಾರ್ಕಿಂಗ್ ವಿಚಾರಕ್ಕೆ ಆಗ ಗಲಾಟೆಯಲ್ಲಿ ನೆರೆ ಮನೆಯವನಿಂದ ಹಲ್ಲೆಗೊಳಗಾಗಿದ್ದ ವಿಜ್ಞಾನಿಯೊಬ್ಬರು ಸಾವಿಗೀಡಾಗಿರುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.
ಮೊಹಾಲಿಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (IISER) ಕೆಲಸ ಮಾಡುತ್ತಿದ್ದ ವಿಜ್ಞಾನಿ ಡಾ. ಅಭಿಷೇಕ್ ಸ್ವರ್ಣಕರ್ (39) ಮೃತಪಟ್ಟಿದ್ದಾರೆ. ಇವರು ಸೆಕ್ಟರ್ 67 ರಲ್ಲಿರುವ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಂಗಳವಾರ ರಾತ್ರಿ ಪಾರ್ಕಿಂಗ್ ವಿಚಾರಕ್ಕೆ ನೆರೆಮನೆಯ ಮಾಂಟಿ ಎಂಬಾತನೊಂದಿಗೆ ಗಲಾಟೆ ನಡೆದು ಹಲ್ಲೆಗೊಳಗಾಗಿದ್ದರು.
ಮೂಲತಃ ಜಾರ್ಖಂಡ್‌ನ ಧನ್ಬಾದ್‌ನವರಾದ ಡಾ. ಸ್ವರ್ಣಕರ್ ಒಬ್ಬ ವಿಶಿಷ್ಟ ವಿಜ್ಞಾನಿಯಾಗಿದ್ದರು. ಅವರ ಕೆಲಸದ ಬಗ್ಗೆ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದರು. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಭಾರತಕ್ಕೆ ಮರಳಿದ್ದರು. IISER ನಲ್ಲಿ ಯೋಜನಾ ವಿಜ್ಞಾನಿಯಾಗಿ ಸೇರಿಕೊಂಡಿದ್ದರು. ವಿಜ್ಞಾನಿಗೆ ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಅವರ ಸಹೋದರಿ ತನ್ನ ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡಿದ್ದರು. ಸ್ವರ್ಣಕರ್ ಡಯಾಲಿಸಿಸ್‌ನಲ್ಲಿದ್ದರು. ಹಲ್ಲೆಯ ನಂತರ, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದರು.
ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಜ್ಞಾನಿಯ ಕುಟುಂಬ ಒತ್ತಾಯಿಸಿದೆ. ಮುಂದಿನ ಕ್ರಮ ಕೈಗೊಳ್ಳಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂ: ವಯನಾಡ್ ಭೂಕುಸಿತದ (Wayanad Landslide) ಕುರಿತು ತಮ್ಮ ಅಭಿಪ್ರಾಯಗಳನ್ನು ಮತ್ತು ಅಧ್ಯಯನ ವರದಿಗಳನ್ನು ಸರ್ಕಾರದ ಅನುಮತಿ ಇಲ್ಲದೇ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಕೇರಳ ಸರ್ಕಾರ (Government of Kerala) ವಿಜ್ಞಾನಿಗಳಿಗೆ (Scientist) ನಿರ್ಬಂಧ ಹೇರಿದೆ.
ಪ್ರಭಾಸ್ ಮುಖ್ಯ ಭೂಮಿಕೆಯ ಕಲ್ಕಿ ಸಿನಿಮಾದಲ್ಲಿ ರಾಜಮೌಳಿಯೂ (Rajamouli) ಪಾತ್ರ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಅವರು ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದು, ಅದು ವಿಜ್ಞಾನಿ (Scientist) ಪಾತ್ರವಾಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಇಂಥದ್ದೊಂದು ಸುದ್ದಿಯಂತೂ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ.
ಪ್ರತಿ ಹಂತದಲ್ಲೂ ನಾನಾ ರೀತಿಯ ಸುದ್ದಿಗಳನ್ನು ಮಾಡುತ್ತಲೇ ಬರುತ್ತಿದೆ ಚಿತ್ರತಂಡ. ಮೊನ್ನೆಯಷ್ಟೇ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look) ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.
ಈ ನಡುವೆ ಕಲ್ಕಿ (Kalki) ಸಿನಿಮಾದ ಫೋಟೋವೊಂದು ಲೀಕ್ ಆಗಿತ್ತು. ಸಿನಿಮಾದ ಪ್ರಮುಖ ಗೆಟಪ್ ಒಳಗೊಂಡಿದ್ದ ಆ ಫೋಟೋವನ್ನು ಯಾರು ಲೀಕ್ ಮಾಡಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಲೆಕೆಡಿಸಿಕೊಂಡಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ಹೀಗೆ ಪಾತ್ರಗಳ ಬಗ್ಗೆ ರಿವಿಲ್ ಮಾಡುತ್ತಿರುವುದು ಕೋಪ ತರಿಸಿತ್ತು. ಇದೀಗ ನಿರ್ಮಾಪಕರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.
ಕಲ್ಕಿ ಸಿನಿಮಾದ ವಿಎಫ್ಎಕ್ಷ್ ಮಾಡುತ್ತಿರುವ ಸಂಸ್ಥೆಯೇ ಫೋಟೋವನ್ನು ಲೀಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರು ಪೊಲೀಸ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಭಾರೀ ಬಜೆಟ್ ನಲ್ಲಿ ರೆಡಿ ಆಗಿರುವ ಕಲ್ಕಿ ಚಿತ್ರಕ್ಕೆ ಈ ಹಿಂದೆ ಪ್ರಾಜೆಕ್ಟ್ ಕೆ (Project K) ಹೆಸರಿನಿಂದ ಕರೆಯಲಾಗುತ್ತಿತ್ತು. ಸಿನಿಮಾದ ಗ್ಲಿಂಪ್ಸ್ (Glimpse) ರಿಲೀಸ್ ದಿನ ಅಸಲಿ ಹೆಸರನ್ನು ಅನೌನ್ಸ್ ಮಾಡಲಾಯಿತು. ಈ ಗ್ಲಿಂಪ್ಸ್ ನಲ್ಲಿ ಸಾಕಷ್ಟು ಸಂಗತಿಗಳನ್ನು ನಿರ್ದೇಶಕರು ಹೇಳಿದ್ದರು.
ನವದೆಹಲಿ: ಶ್ರೀಹರಿಕೋಟಾದಲ್ಲಿ (Sriharikota) ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಕೌಂಟ್‌ಡೌನ್‌ಗೆ (Countdown) ಧ್ವನಿ ನೀಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿ (Scientist) ವಲರ್ಮತಿ (Valarmathi) ಅವರು ಹೃದಯಾಘಾತದಿಂದ (Heart Attack) ಭಾನುವಾರ ನಿಧನರಾಗಿದ್ದಾರೆ.
The voice of Valarmathi Madam will not be there for the countdowns of future missions of ISRO from Sriharikotta. Chandrayan 3 was her final countdown announcement. An unexpected demise . Feel so sad.Pranams! pic.twitter.com/T9cMQkLU6J
ಅವರ ನಿಧನಕ್ಕೆ ಇಸ್ರೋದ ಮಾಜಿ ನಿರ್ದೇಶಕರಾದ ಡಾ.ಪಿ.ವಿ.ವೆಂಕಟಕೃಷ್ಣನ್ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‌ಗಳ ಕೌಂಟ್‌ಡೌನ್‌ಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಆಕೆಯ ಅಂತಿಮ ಕೌಂಟ್‌ಡೌನ್ ಘೋಷಣೆಯಾಗಿತ್ತು. ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಹುಪತ್ನಿತ್ವ ನಿಷೇಧ – ಮಸೂದೆ ಮಂಡನೆಗೆ ಮುಂದಾದ ಅಸ್ಸಾಂ ಸರ್ಕಾರ
ವಲರ್ಮತಿ ಯಾರು?
ವಲರ್ಮತಿ ಆರ್‌ಐಎಸ್‌ಎಟಿ-1ರ ಪಾಜೆಕ್ಟ್ ಡೈರೆಕ್ಟರ್ ಆಗಿದ್ದು, 2015ರಲ್ಲಿ ಸರ್ಕಾರ ನೀಡಿದ ಅಬ್ದುಲ್ ಕಲಾಂ ಪ್ರಶಸ್ತಿಗೆ ಭಾಜನರಾಗಿದ್ದರು. ವಲರ್ಮತಿ 1984ರಲ್ಲಿ ಇಸ್ರೋಗೆ ಸೇರಿದ್ದು, ಇನ್ಸಾಟ್ 2ಎ, ಐಆರ್‌ಎಸ್, ಐಸಿ, ಐಡಿ, ಟಿಇಎಸ್ ಸೇರಿದಂತೆ ಹಲವು ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ
ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ಸಿನ ಹಿಂದೆ ಇಸ್ರೋ ವಿಜ್ಞಾನಿಗಳ ಅಹರ್ನಿಶಿ ಶ್ರಮವಿದೆ. ಈ ತಂಡದ ನಾಯಕತ್ವ ವಹಿಸಿ ಚಂದ್ರಯಾನದ ಯಶಸ್ಸಿನಲ್ಲಿ 7 ಮಂದಿ ವಿಜ್ಞಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇವರಲ್ಲಿ ಐವರು ವಿಜ್ಞಾನಿಗಳು ಮಂಗಳವಾರ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಕೂಡ ಸಲ್ಲಿಸಿದ್ರು. ಅಂದಹಾಗೇ ಅವರ್ಯಾರು..? ಈ ಯೋಜನೆಯಲ್ಲಿ ಅವರ ಪಾತ್ರ ಏನು ಎಂಬುದನ್ನು ನೋಡೋಣ..
ಚಂದ್ರಯಾನ- 3 ಯಶಸ್ಸಿನ ರೂವಾರಿಗಳು:
* ಎಸ್.ಸೋಮನಾಥ್ (ಇಸ್ರೋ ಚೇರ್ಮನ್): ಎಲ್‍ವಿಎಂ3 ಯೋಜನೆಯಲ್ಲಿ ಇವರೇ ಪ್ರಮುಖರು. 2022ರ ಜನವರಿಯಲ್ಲಿ ಇಸ್ರೋ ಚೇರ್ಮನ್ ಆದ ಸೋಮನಾಥ್ ಅವರು, ಇದಕ್ಕೂ ಮೊದಲು ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್ ನಲ್ಲಿ ಲಿಕ್ವಿಡ್ ಪ್ರೊಪಲ್ಶನ್ ಸೆಂಟರ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ರು. ಶೀಘ್ರವೇ ಮಾನವಸಹಿತ ಗಗನಯಾನ್ ಮಿಷನ್, ಸೋಲಾರ್ ಮಿಷನ್ ನೇತೃತ್ವ ವಹಿಸಿದ್ದಾರೆ. ಇವರು ಬೆಂಗಳೂರಿನ ಐಐಎಸ್‍ಸಿಯಲ್ಲಿ ಓದಿದ್ದಾರೆ.
* ಪಿ.ವೀರಮುತ್ತುವೇಲ್ (ಚಂದ್ರಯಾನ-3 ಪ್ರಾಜೆಕ್ಟ್ ಡೈರೆಕ್ಟರ್): ಚಂದ್ರಯಾನ-3 ಪ್ರಾಜೆಕ್ಟ್ ಡೈರೆಕ್ಟರ್. ಹೊಸ ರೋವರ್, ಲ್ಯಾಂಡರ್ ನಿರ್ಮಾಣದಲ್ಲಿ ಇವರದ್ದೇ ಪ್ರಮುಖ ಪಾತ್ರ. ಚಂದ್ರಯಾನ-2 ತಂಡದಲ್ಲಿ ಇವರು ಕೆಲಸ ಮಾಡಿದ್ದರು. ಈ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿರುವ ಇಸ್ರೋ ಇನ್‍ಫ್ರಾಸ್ಟ್ರಕ್ಚರ್ ಪ್ರೋಗ್ರಾಮ್ ಡೆಪ್ಯುಟಿ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಇದನ್ನೂ ಓದಿ: ವಿಕ್ರಮ್ ಲ್ಯಾಂಡ್ ಆದ ಬಳಿಕ ಮೊದಲ ಚಿತ್ರ ರಿಲೀಸ್
* ಕೆ ಕಲ್ಪನಾ (ಚಂದ್ರಯಾನ- 3 ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್): ಚೆನ್ನೈನಲ್ಲಿ ಬಿಟೆಕ್ ಪೂರ್ಣಗೊಳಿಸಿದ ಬೆನ್ನಲ್ಲೇ ಕಲ್ಪನಾ ಇಸ್ರೋ ಸೇರಿದ್ದರು. ಮೊದಲು ಶ್ರೀಹರಿಕೋಟಾದಲ್ಲಿ ಐದು ವರ್ಷ ಕೆಲಸ ಮಾಡಿದ್ರು. ನಂತ್ರ ಬೆಂಗಳೂರಿನ ಉಪಗ್ರಹ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ರು. ಐದು ಉಪಗ್ರಹಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಚಂದ್ರಯಾನ-2 ಯೋಜನೆಯ ಭಾಗವಾಗಿದ್ದರು.. ಚಂದ್ರಯಾನ-3 ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
* ಎಂ ಶಂಕರನ್ (ಯುಆರ್ ಎಸ್‍ಸಿ ನಿರ್ದೇಶಕ): ಯುಆರ್ ರಾವ್ ಸ್ಯಾಟಲೈಟ್ ಸೆಂಟರ್ ನಿರ್ದೇಶಕರು. ಇವರನ್ನು ಇಸ್ರೋ ಪವರ್ ಹೌಸ್ ಎಂದು ಕರೆಯುತ್ತಾರೆ. ಉಪಗ್ರಹಗಳಿಗೆ ಅಗತ್ಯವಾದ ಪವರ್ ಸಿಸ್ಟಂ ಅಭಿವೃದ್ಧಿಪಡಿಸುವಲ್ಲಿ ಇವರಿಗೆ ಮೂರು ದಶಕಗಳ ಅನುಭವ ಇದೆ. ಚಂದ್ರಯಾನ-3 ಮಿಷನ್‍ನಲ್ಲಿರುವ ಲ್ಯಾಂಡರ್ ಶಕ್ತಿ ಪರೀಕ್ಷಿಸಲು ಚಂದ್ರನ ಮೇಲ್ಮೈ ಮಾದರಿಯನ್ನು ರೂಪಿಸುವಲ್ಲಿ ಇವರದ್ದೇ ಪ್ರಮುಖ ಪಾತ್ರ.
* ವಿ.ನಾರಾಯಣನ್ (ಎಲ್‍ಪಿಎಸ್‍ಸಿ ನಿರ್ದೇಶಕ): ತಿರುವನಂತಪುರದ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಂ ಸೆಂಟರ್ ನಿರ್ದೇಶಕರು. ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್‍ಗೆ ಅಗತ್ಯವಾದ ಥ್ರಸ್ಟರ್ ಗಳನ್ನು ಇವರ ನೇತೃತ್ವದಲ್ಲಿಯೇ ರೂಪಿಸಲಾಗಿದೆ.
* ಬಿಎನ್ ರಾಮಕೃಷ್ಣ (ಐಎಸ್‍ಟಿಆರ್ ಎಸಿ ನಿರ್ದೇಶಕ): ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರಾಕಿಂಗ್ ಅಂಡ್ ಕಮಾಂಡ್ ನೆಟ್‍ವರ್ಕ್ ಸೆಂಟರ್ ನಿರ್ದೇಶಕರು. ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯ ಕೊನೆಯ 20 ನಿಮಿಷಗಳನ್ನು ಇಲ್ಲಿಂದಲೇ ಮೇಲ್ವಿಚಾರಣೆ ಮಾಡಲಾಯ್ತು. ದೇಶದಲ್ಲೇ ಅತಿದೊಡ್ಡ 32 ಮೀಟರ್ ಗಳ ಡಿಶ್ ಅಂಟೆನಾ ಇಲ್ಲಿದ್ದು, ಇದ್ರ ನೆರವಿಂದ ವಿಕ್ರಮ್ ಲ್ಯಾಂಡರ್‍ಗೆ ಕಮಾಂಡ್ ಕಳಿಸಲಾಗುತ್ತದೆ.
– ಪಾಕ್‌ಗೆ ಗುಪ್ತ ಮಾಹಿತಿ ರವಾನಿಸ್ತಿದ್ದ ರಕ್ಷಣಾ ಸಂಸ್ಥೆಯ ವಿಜ್ಞಾನಿ
-ಚಾರ್ಜ್‌ಶೀಟ್‌ನಲ್ಲಿ ಹಲವು ಸ್ಫೋಟಕ ಮಾಹಿತಿ ಬಯಲು
ಮುಂಬೈ: ಪಾಕಿಸ್ತಾನಿ (Pakistan) ಏಜೆಂಟ್ಗೆ ಗೌಪ್ಯ ಮಾಹಿತಿ ಸೋರಿಕೆ ಮಾಡ್ತಿದ್ದ ಆರೋಪ ಮೇಲೆ ಬಂಧಿತನಾಗಿದ್ದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿ (Scientist) ಪ್ರದೀಪ್ ಕುರುಲ್ಕರ್ ವಿರುದ್ಧ ಮಹಾರಾಷ್ಟ್ರ (Maharastra) ಭಯೋತ್ಪಾದನಾ ನಿಗ್ರಹ ದಳ (ATS) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಪುಣೆಯಲ್ಲಿರುವ DRDO ನಿರ್ದೇಶಕರಾಗಿದ್ದ ಪ್ರದೀಪ್ ಕಳೆದ ಮೇ 3ರಂದು ಬಂಧಿನಾಗಿದ್ದ. ಜಾರಾ ದಾಸ್‌ಗುಪ್ತಾ ಹೆಸರಿನ ಪಾಕಿಸ್ತಾನದ ಮಹಿಳಾ ಏಜೆಂಟ್‌ನೊಂದಿಗೆ ವಾಟ್ಸಪ್, ವೀಡಿಯೋ ಹಾಗೂ ಆಡಿಯೋ ಕಾಲ್ ನಲ್ಲಿ ಮಾತನಾಡುತ್ತಾ ಸಂಪರ್ಕದಲ್ಲಿದ್ದರು. ಮೊದಲು ತಾನು ಯುಕೆ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದಾನೆ. ನಂತರ ಆಕೆಗೆ ಅಶ್ಲೀಲ ವೀಡಿಯೋ ಮತ್ತು ಸಂದೇಶಗಳನ್ನ ಕಳುಹಿಸುವ ಮೂಲಕ ಪಾಕ್ ಏಜೆಂಟ್ ಜೊತೆಗೆ ಸ್ನೇಹ ಬೆಳೆಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ನಂತರ ಐಪಿ ವಿಳಾಸ ಪತ್ತೆ ಮಾಡಿದಾಗ ಪಾಕಿಸ್ತಾನ ಲೊಕೇಶನ್ ಪತ್ತೆಯಾಗಿದೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ರವಾನೆ – ರಕ್ಷಣಾ ಸಂಸ್ಥೆಯ ವಿಜ್ಞಾನಿ ಅರೆಸ್ಟ್
ಪ್ರದೀಪ್ ಜೊತೆಗೆ ಚಾಟ್ ಮಾಡುತ್ತಿದ್ದ ಪಾಕ್ ಏಜೆಂಟ್, ಬ್ರಹ್ಮೋಸ್ ಕ್ಷಿಪಣಿ, ಡ್ರೋನ್, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್ ಮತ್ತು ಮಿಲಿಟರಿ ಬ್ರಿಡ್ಜಿಂಗ್ ಸಿಸ್ಟಮ್ ಅನೇಕ ವಿಷಯಗಳ ಬಗ್ಗೆ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನ ಪಡೆಯಲು ಪ್ರಯತ್ನಿಸಿದ್ದಾಳೆ. ಮಹಿಳಾ ಏಜೆಂಟ್ ಮೋಹಕ್ಕೆ ಸಿಲುಕಿದ್ದ ಕುರುಲ್ಕರ್ ಡಿಆರ್‌ಡಿಒದ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನ ತನ್ನ ವೈಯಕ್ತಿಕ ಫೋನ್‌ನಲ್ಲಿ ಸಂಗ್ರಹಿಸಿ ನಂತರ ಅದನ್ನ ಜಾರಾಳೊಂದಿಗೆ ಹಂಚಿಕೊಂಡಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Threadಗೆ ಸ್ಟಾರ್ ಕ್ರಿಕೆಟಿಗರಿಂದ ಫುಲ್ ಸಪೋರ್ಟ್ – ಎಲೋನ್ ಮಸ್ಕ್‌ಗೆ ಟಾಂಗ್ ಕೊಟ್ಟ ಅಶ್ವಿನ್
ಪಾಕ್ ಏಜೆಂಟ್ ಜೊತೆಗೆ ಕುರುಲ್ಕರ್ 2022ರ ಜೂನ್‌ನಿಂದ ಡಿಸೆಂಬರ್ ವರೆಗೆ ಸಂಪರ್ಕದಲ್ಲಿದ್ದ. 2023ರಲ್ಲಿ ಡಿಆರ್‌ಡಿಒ ಚಟುವಟಿಕೆಗಳಲ್ಲಿ ಅನುಮಾನ ಕಂಡುಬಂದ ನಂತರ ಕೂಡಲೇ ನಂಬರ್ ಬ್ಲಾಕ್ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾನೆ. ನಂತರ ಕೆಲ ದಿನಗಳಲ್ಲೇ ʻನೀವು ನನ್ನ ಸಂಪರ್ಕ ಸಂಖ್ಯೆಯನ್ನ ಏಕೆ ಬ್ಲಾಕ್ ಮಾಡಿದ್ದೀರಿ..? ಅಂತಾ ಅಪರಿಚಿತ ಸಂಖ್ಯೆಯಿಂದ ಮತ್ತೊಂದು ವಾಟ್ಸಪ್ ಸಂದೇಶ ಸ್ವೀಕರಿಸಿದ್ದಾನೆ. ಈ ವೇಳೆ ಪ್ರದೀಪ್ ಅಧಿಕೃತ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ ಎಂದು ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ. ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಹನಿಟ್ರ್ಯಾಪ್ ಶಂಕೆ ವ್ಯಕ್ತಪಡಿಸಿದೆ.
ಮುಂಬೈ: ಪಾಕಿಸ್ತಾನಿ (Pakistan) ಏಜೆಂಟ್ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Defence Research and Development Organisation) ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿಯೊಬ್ಬನನ್ನು (Scientist) ಮಹಾರಾಷ್ಟ್ರ (Maharastra) ಭಯೋತ್ಪಾದನಾ ನಿಗ್ರಹ ದಳ (Anti Terrorism Squad) ಬಂಧಿಸಿದೆ.
ಉನ್ನತ ಹುದ್ದೆಯಲ್ಲಿದ್ದ ಆರೋಪಿಯು ವಾಟ್ಸಾಪ್ (WhatsApp) ಮತ್ತು ವೀಡಿಯೊ ಕರೆಗಳ ಮೂಲಕ ಪಾಕಿಸ್ತಾನ ಗುಪ್ತಚರ ಏಜೆಂಟ್‍ನೊಂದಿಗೆ ಸಂಪರ್ಕದಲ್ಲಿದ್ದ. ಆರೋಪಿಯನ್ನು ಹನಿಟ್ರ್ಯಾಪ್ ( Honey Trap) ಮೂಲಕ ಬೆದರಿಸಿ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿಯಲಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ಹಿನ್ನೆಲೆ – ಕರ್ನಾಟಕದಲ್ಲಿ ಅಮಿತ್ ಶಾ ಕಾರ್ಯಕ್ರಮಗಳು ರದ್ದು
ಶತ್ರು ದೇಶಗಳಿಗೆ ತನ್ನ ಬಳಿಯಿರುವ ರಹಸ್ಯ ಮಾಹಿತಿಗಳನ್ನು ಒದಗಿಸಿದರೆ ದೇಶದ ಭದ್ರತೆಗೆ ಅಪಾಯವನ್ನುಂಟುಮಾಡಬಹುದು ಎಂದು ತಿಳಿದಿದ್ದರೂ ಆರೋಪಿ ಮಾಹಿತಿ ನೀಡಿದ್ದಾನೆ. ಈ ಮೂಲಕ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 50 ಸಾವಿರ ವರ್ಷಗಳ ಹಿಂದೆ ಅಂದ್ರೆ ಶಿಲಾ ಯುಗದ ಸಂದರ್ಭದಲ್ಲಿ ಭೂಮಿಯ ಸಮೀಪದಲ್ಲಿ ಹಾದು ಹೋಗಿದ್ದ ಹಸಿರು ಧೂಮಕೇತು ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬಂದಿದೆ. ಆಕಾಶದಲ್ಲಿ ಸಂಭವಿಸುವ ಕೌತುಕವನ್ನು ಬರಿಗಣ್ಣಿನಿಂದ ಕಣ್ತುಂಬಿಕೊಳ್ಳಬಹುದು ಎಂದು ನಾಸಾ (NASA) ತಿಳಿಸಿದೆ. ಉತ್ತರ ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲದ ಮಧ್ಯೆ ಇದು ಕಂಡುಬರಲಿದೆ.
ಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಅಥವಾ ಸಪ್ತರ್ಷಿ ಮಂಡಲದ ಸಮೀಪ ಇದನ್ನ ಯಾವುದೇ ದೃಶ್ಯ ಉಪಕರಣಗಳ ಸಹಾಯವಿಲ್ಲದೇ ವೀಕ್ಷಿಸಬಹುದು. ಸೌರವ್ಯೂಹದ ಆಚೆಗಿನ ಕೌಡ್‌ನಿಂದ ಹೊರಬಂದು ಭೂಮಿಯ ಸಮೀಪಕ್ಕೆ ಧೂಮಕೇತು ಬರುತ್ತಿದ್ದು, ಇದಕ್ಕೆ ಹಸಿರು ಧೂಮಕೇತು ಎಂದು ಕರೆಯಲಾಗಿದೆ. ಮಂಜು ಮತ್ತು ಧೂಳಿನಿಂದ ಕೂಡಿರುವ ಈ ಧೂಮಕೇತುವನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.
50 ವರ್ಷಗಳ ಹಿಂದೆ ಭೂಮಿ ಸಮೀಪಕ್ಕೆ ಬಂದಿದ್ದ ಈ ಹಸಿರು ಧೂಮಕೇತು, 2022ರ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ವೀಕ್ಷಿಸಲಾಗಿತ್ತು. ಬುಧವಾರ ರಾತ್ರಿ 7 ಗಂಟೆಯಿಂದ ಗುರುವಾರ ಮುಂಜಾನೆ 4 ಗಂಟೆಯ ತನಕ ಇದು ಗೋಚರಿಸುತ್ತಿತ್ತು. ಈ ಧೂಮಕೇತುವಿಗೆ `C/2022 E3 (ZTF)’ ಎಂದು ಹೆಸರಿಡಲಾಗಿದೆ.
ಬುಧವಾರ ಹಾಗೂ ಗುರುವಾರ ಹಸಿರು ಧೂಮಕೇತುವನ್ನು, ಬೆಳಗಿನ ಜಾವ 5 ಗಂಟೆವರೆ ಬೈನಾಕೂಲರ್ ಮೂಲಕ ಕಣ್ತುಂಬಿಕೊಳ್ಳಬಹುದಿತ್ತು ಎಂದು ನೆಹರೂ ತಾರಾಲಯದ (Jawaharlal Nehru Planetarium) ಹಿರಿಯ ವಿಜ್ಞಾನಿ (Scientist) ಡಾ. ಆನಂದ್ ಸ್ಪಷ್ಟಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಅಸನಿ ಚಂಡಮಾರುತದ ಪರಿಣಾಮವಾಗಿ ನಗರದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಪ್ರತಿಕ್ರಿಯಿಸಿ, ಅಸನಿ ಚಂಡಮಾರುತದ ತೀವ್ರತೆಯಿಂದಾಗಿ ಮಳೆಯಾಗುವ ವೇಳೆ ಗಾಳಿ ಹೆಚ್ಚಾಗಲಿದ್ದು, ಗುಡುಗು ಹಾಗೂ ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಅತಿಯಾಗಿ ಮಳೆಯಾಗಲಿದ್ದು, ಸೈಕ್ಲೋನ್‍ನಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವಮೋರ್ಚಾ ಸಭೆಯಲ್ಲಿ ದ್ರಾವಿಡ್ ಭಾಗಿಯಾಗಲಿದ್ದಾರೆ: ಬಿಜೆಪಿ ಶಾಸಕ
ನವದೆಹಲಿ: ಇಸ್ರೋ (ISRO) ನೂತನ ಅಧ್ಯಕ್ಷರಾಗಿ ರಾಕೆಟ್ ವಿಜ್ಞಾನಿ ಎಸ್.ಸೋಮನಾಥ್ ನೇಮಕವಾಗಿದ್ದಾರೆ.
ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಆ ಸ್ಥಾನಕ್ಕೆ ಇದೀಗ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ ನೇಮಕಗೊಂಡಿದ್ದಾರೆ. ಇಸ್ರೋ ಅಧ್ಯಕ್ಷರಾಗಿರುವುದರ ಜೊತೆಗೆ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ
2018ರಿಂದಲೂ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸೋಮನಾಥ್, ಈಗಾಗಲೇ Liquid Propulsion Systems ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
S Somanath appointed as the new Secretary, Department of Space and Chairman, Space Commission #ISROpic.twitter.com/TpzGvFUrV0
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಳೆಯ ವಿದ್ಯಾರ್ಥಿ ಸೋಮನಾಥ್, 1985ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಗೆ ಸೇರಿದರು ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಯೋಜನೆಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಕುರ್ಚಿಗಾಗಿ ರಾಜಕಾರಣ ಮಾಡೋದು : ಎ. ನಾರಾಯಣ ಸ್ವಾಮಿ
ಜೂನ್ 2015ರಲ್ಲಿ, ಸೋಮನಾಥ್ ಅವರು ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC), ತಿರುವನಂತಪುರಂನ ನಿರ್ದೇಶಕರಾಗಿ ನೇಮಕಗೊಂಡರು. ಕೊಲ್ಲಂನ TKM ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದರು ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು, ಅವರು 1985 ರಲ್ಲಿ VSSC ಗೆ ಸೇರಿದರು. ಅವರು ಜೂನ್ 2010 ರಿಂದ 2014 ರವರೆಗೆ GSLV Mk-III ನ ಯೋಜನಾ ನಿರ್ದೇಶಕರಾಗಿದ್ದರು. ಅವರು VSSC ಯಲ್ಲಿನ ‘ಸ್ಟ್ರಕ್ಚರ್ಸ್’ ಘಟಕದ ಉಪ ನಿರ್ದೇಶಕರಾಗಿದ್ದರು.
Ambassador of Belgium to India
H.E. Mr. François Delhaye called on Dr. K. Sivan, Chairman, ISRO/ Secretary, Department of Space at ISRO Headquarters on September 22, 2021.https://t.co/26kqrIEG7Vpic.twitter.com/xBde6vXBkb
ಚಂದ್ರಯಾನ-2, GSAT-9 ಯೋಜನೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಸೋಮನಾಥ್ ಅವರನ್ನು ರಾಕೆಟ್ ವಿಜ್ಞಾನಿ ಎಂದು ಕರೆಯಲಾಗುತ್ತದೆ. ಕೊಲ್ಲಂನ ಟಿಕೆಂ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.