ಕೋಲ್ಕತ್ತಾ: ಇಲ್ಲಿನ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯವು (CFSL) ಕೇಂದ್ರೀಯ ತನಿಖಾ ದಳಕ್ಕೆ (CBI) ವರದಿ ಅಂಶಗಳು ಬಹಿರಂಗಗೊಂಡಿದೆ. ಆದ್ರೆ ವರದಿಯ ಅಂಶಗಳು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.
ಸಿಬಿಐಗೆ ಸಲ್ಲಿಸಿದ ವರದಿಯಲ್ಲಿ ಸಾಕ್ಷ್ಯಗಳಿಲ್ಲದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೌದು. ದೆಹಲಿಯ ಸಿಎಫ್‌ಎಸ್‌ಎಲ್‌ನ ತಜ್ಞರು ಕಳೆದ ಆಗಸ್ಟ್ 14ರಂದು ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಪರಿಶೀಲಿಸಿದ್ದರು. ಈ ವೇಳೆ ಅತ್ಯಾಚಾರಿ ಎದುರು ಸಂತ್ರಸ್ತೆ ತೋರಿಸಿದ ಸಂಭಾವ್ಯ ಹೋರಾಟ ಅಥವಾ ಅವರ ನಡುವಿನ ಪ್ರತಿರೋಧದ ಸಾಕ್ಷ್ಯವು ಸ್ಥಳದಲ್ಲಿ ಕಾಣೆಯಾಗಿದೆ. ಕೆಲವು ಪ್ರಮುಖ ಸಾಕ್ಷ್ಯಗಳು ಸ್ಥಳದಲ್ಲಿ ಕಂಡುಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ ಎಂದು ಸಿಬಿಐ ಮೂಲಗಳು ಕೋರ್ಟ್‌ಗೆ ತಿಳಿಸಿವೆ.
ಮೊದಲು ತನಿಖೆ ನಡೆಸಿದ್ದ ಕೋಲ್ಕತ್ತಾ ಪೊಲೀಸರು, ಆಗಸ್ಟ್ 9 ರಂದು ಸಂತ್ರಸ್ತೆಯ ದೇಹವನ್ನು ಗುರುತಿಸಿದ ಸೆಮಿನಾರ್ ಹಾಲ್‌ನಿಂದ 40 ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿತ್ತು. ನಂತರ ಪ್ರಕರಣವನ್ನ ಸಿಬಿಐ ತನಿಖೆಗೆ ವರ್ಗಾಯಿಸಲಾಗಿತ್ತು. ಅದಾದ ಬಳಿಕ ವಶಕ್ಕೆ ಪಡೆದಿದ್ದ ವಸ್ತುಗಳನ್ನು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.
ಇದಕ್ಕೂ ಮೊದಲು ಆಗಸ್ಟ್ 14 ರಂದು, CFSL ತಜ್ಞರ ತಂಡವು ಅಪರಾಧ ನಡೆದ ಸೆಮಿನಾರ್ ಹಾಲ್ ಅನ್ನು ಭೌತಿಕವಾಗಿ ಪರೀಕ್ಷಿಸಿತ್ತು. ಆಗ ವಶಪಡಿಸಿಕೊಂಡ ವಸ್ತುಗಳ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ಸಿಬಿಐಗೆ ವರದಿ ಸಲ್ಲಿಸಿತು. ಇದನ್ನೂ ಓದಿ: 4 ಮಕ್ಕಳೊಂದಿಗೆ ಪಾಕ್‌ನಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಗರ್ಭಿಣಿ
ಬೆಳಕಿಗಿಂತ ವೇಗವಾಗಿ ಕಾರ್ಯನಿರ್ವಹಿಸುವುದು ಮೆದುಳು..! ಇಷ್ಟೆಲ್ಲ ವೇಗವಾಗಿ ಕಾರ್ಯ ನಿರ್ವಹಿಸಲು ಮೆದುಳು ಅಪಾರವಾದ ಪ್ರೋಟಿನ್‌ನ್ನು ಬಳಸಿಕೊಳ್ಳುತ್ತದೆ. ಹೌದು! ಹಾಗೇ ಬಳಕೆ ಮಾಡಿದ ಪ್ರೋಟಿನ್‌ನ್ನು ತ್ಯಾಜ್ಯವಾದ ಬಳಿಕ ಮೆದುಳು ತನ್ನದೇ ಆದ ವಿಶೇಷ ವ್ಯವಸ್ಥೆಯ ಮೂಲಕ ಮೆದುಳಿನಿಂದ ಹೊರಹಾಕುತ್ತದೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ಪತ್ತೆ ಹಚ್ಚಿದ್ದಾರೆ.
ಮೆದುಳಿನ ಜೀವಕೋಶಗಳು ಬಹಳಷ್ಟು ಪೋಷಕಾಂಶಗಳನ್ನು ಬಳಸುತ್ತವೆ. ಹಾಗೇ ಅವು ಬಹಳಷ್ಟು ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತವೆ. ಸೆಲ್ಯುಲಾರ್ ಕಸವನ್ನು ಹೊರಹಾಕಲು ಮೆದುಳು ವಿಶೇಷ ಕೊಳಾಯಿಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ದೀರ್ಘಕಾಲದ ಅಧ್ಯಯನದ ಬಳಿಕ ಕಂಡುಕೊಂಡಿದ್ದಾರೆ. ಮೆದುಳು ಸಣ್ಣ ತ್ಯಾಜ್ಯ-ತೆರವು ಚಾನಲ್‌ಗಳ ಜಾಲವನ್ನು ಹೊಂದಿದೆ. ಈ ಚಾನಲ್‌ಗಳ ಮೂಲಕ ಮೆದುಳು ತ್ಯಾಜ್ಯವನ್ನು ಹೊರಹಾಕುತ್ತದೆ.
ಇಲಿಗಳ ಮೆದುಳಿನಲ್ಲಿ ಈ ತ್ಯಾಜ್ಯ ಹೊರಹಾಕುವ ಜಾಲವನ್ನು ವಿಜ್ಞಾನಿಗಳು ಮೊದಲು ಪತ್ತೆ ಮಾಡಿದ್ದರು. ಇಲಿಗಳಲ್ಲಿ ಈ ಕ್ರಿಯೆ ಜರುಗುವುದನ್ನು ಬಹಳ ಸುಲಭವಾಗಿ ಪತ್ತೆ ಮಾಡಬಹುದು. ಅಲ್ಲದೇ ಸ್ಕ್ಯಾನಿಂಗ್ ಮೂಲಕ ಇದನ್ನು ನೋಡಬಹುದಾಗಿದೆ. ಈಗ ರೋಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಂತಿಮವಾಗಿ ಮನುಷ್ಯರ ಜೀವಂತ ಮೆದುಳಿನಲ್ಲಿರುವ ಸಣ್ಣ ತ್ಯಾಜ್ಯ-ತೆರವು ಚಾನಲ್‌ಗಳ ಜಾಲವನ್ನು ಗುರುತಿಸಿದ್ದಾರೆ. ಮನುಷ್ಯರ ಮೆದುಳಿನಲ್ಲಿ ಅಷ್ಟು ಸುಲಭವಾಗಿ ಈ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಈಗಿನ ತಂತ್ರಜ್ಞಾನಗಳು ಸಾಲುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಈ ಬಗ್ಗೆ ಅಧ್ಯಯನ ವರದಿಯು ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಮ್ಯಾಗಝಿನ್‌ನಲ್ಲಿ ಪ್ರಕಟವಾಗಿದೆ.
ಮೆದುಳು ನಿದ್ರೆಯ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅದು ಮೆದುಳನ್ನು ಆಳವಾಗಿ ಕ್ಲೀನ್ ಮಾಡುವ ಸಮಯವಾಗಿದೆ. ಇದರಿಂದಾಗಿ ಮನುಷ್ಯನಿಗೆ ಒಳ್ಳೆಯ ನಿದ್ರೆ ಅವಶ್ಯಕವಾಗಿರುತ್ತದೆ. ಮನುಷ್ಯನಿಗೆ ನಿದ್ರೆ ಸರಿಯಾಗದೇ, ಮೆದುಳಿಗೆ ಸರಿಯಾದ ವಿಶ್ರಾಂತಿ ಸಿಗದೆ ತ್ಯಾಜ್ಯವನ್ನು ಹೊರಹಾಕಲು ಸಾಧ್ಯವಾಗದೇ ಇದ್ದರೆ ಬುದ್ಧಿಮಾಂದ್ಯತೆ ಹಾಗೂ ಆಲ್ಝೈಮರ್ನ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಹಾಗಾದರೆ ಮೆದುಳು ತನ್ನನ್ನು ಹೇಗೆ ಶುದ್ಧೀಕರಿಸುತ್ತದೆ?
ವಿಜ್ಞಾನಿಗಳು ಮೆದುಳಿನಲ್ಲಿ ʻಗ್ಲಿಂಫಾಟಿಕ್ ಸಿಸ್ಟಮ್ʼ ಎಂದು ಕರೆಯಲ್ಪಡುವ ಜಾಲವನ್ನು ಪತ್ತೆ ಮಾಡಿದ್ದಾರೆ. ಈ ಜಾಲವು ಸೆರೆಬ್ರೊಸ್ಪೈನಲ್ ಎಂಬ ದ್ರವವವನ್ನು ಮೆದುಳಿನ ರಕ್ತನಾಳಗಳ ಸುತ್ತಲಿನ ಚಾನಲ್‌ಗಳ ಅಂಗಾಂಶಕ್ಕೆ ಕಳಿಸಲು ಮತ್ತು ಮೆದುಳಿನಿಂದ ನಿರ್ಗಮಿಸುವವರೆಗೆ ತ್ಯಾಜ್ಯವನ್ನು ಚಲಿಸಲು ಬಳಸುತ್ತದೆ. ಈ ಕಾರ್ಯ ಪ್ರಾಣಿಗಳು ಹಾಗೂ ಮನುಷ್ಯರು ಮಲಗಿರುವ ಸಮಯದಲ್ಲಿ ವೇಗವಾಗಿ ನಡೆಯುತ್ತದೆ.
ಮೆದುಳಿನ ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೂ ಸಹ ಸ್ಪಷ್ಟವಾಗಿಲ್ಲ. ಯಾಕೆಂದರೆ ಜನರಲ್ಲಿ ಅಂತಹ ವ್ಯವಸ್ಥೆಯನ್ನು ಕಂಡುಹಿಡಿಯುವುದು ಕಷ್ಟ. ನಿಯಮಿತ ಎಂಆರ್‌ಐ ಸ್ಕ್ಯಾನ್‌ಗಳು ಕೆಲವು ದ್ರವ ತುಂಬಿದ ಚಾನಲ್‌ಗಳನ್ನು ಗುರುತಿಸಲಷ್ಟೇ ಶಕ್ತವಾಗಿವೆ. ಅವುಗಳ ಕಾರ್ಯವನ್ನು ಪತ್ತೆ ಮಾಡಲು ಇದರಿಂದ ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಇಲ್ಲಿಯವರೆಗೂ ಅಧ್ಯಯನ ಮಾಡಿರುವ ಮೆದುಳು ಆರೋಗ್ಯವಂತರದ್ದಲ್ಲ. ಮೆದುಳಿನ ಶಸ್ತ್ರಚಿಕಿತ್ಸೆಗೆ ಬಂದವರನ್ನು ಅಧ್ಯಯನ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಟು ಸ್ಪಷ್ಟೀಕರಣಕ್ಕೆ ಆರೋಗ್ಯವಂತ ಜನರ ಮೆದುಳಿನ ಅಧ್ಯಯನ ಅಗತ್ಯ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಮೆದುಳಿನ ಭಾಗಗಳು ಯಾವುವು?
ಮೆದುಳು ಪ್ರಮುಖವಾಗಿ ಮೇಲ್ಮೆದುಳು, ಕಿರುಮೆದುಳು ಮತ್ತು ಮೆದುಳಿನ ಕಾಂಡವನ್ನು ಒಳಗೊಂಡಿರುತ್ತದೆ. ಹೆಚ್ಚಿನ ಭಾಗವನ್ನು ಮೇಲ್ಮೆದುಳು ಆಕ್ರಮಿಸಿರುತ್ತದೆ. ಇದು ನಿಯಂತ್ರಣದ ಕೇಂದ್ರ ಬಿಂದುವಾಗಿದೆ ಇದು ಎರಡು ಗೋಳಾರ್ಧವಾಗಿದ್ದು, ಆಳವಾದ ಸಂದಿನಿಂದ ಬೇರ್ಪಟ್ಟಿರುತ್ತದೆ. ಎರಡೂ ಅರ್ಧಭಾಗಗಳು ಕಾರ್ಪಸ್ ಕೊಲೊಸಮ್ ಎಂಬ ಬಿಳಿ ನಾರಿನಂತಹ ವಸ್ತುವಿನಿಂದ ಸಂಪರ್ಕ ಹೊಂದಿರುತ್ತವೆ. ಮೃದು ರಚನೆಗಳನ್ನು ಹೊಂದಿರುವ ಈ ಎರಡೂ ಅರ್ಧಭಾಗಗಳು ಒಂದೇ ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತವೆ. ಈ ಗೋಳಾರ್ಧಗಳು ಅನೇಕ ಸಂಕೀರ್ಣ ಮಡಿಕೆಗಳು ಮತ್ತು ಆಳವಾದ ಕೊರಕಲುಗಳನ್ನು ಹೊಂದಿವೆ.
ಮೆದುಳು ದೇಹದಲ್ಲಿ ಅತ್ಯಂತ ಜಟಿಲ ರಚನೆ!
ಮಾನವನ ಮೆದುಳು ದೇಹದಲ್ಲಿ ಅತ್ಯಂತ ಜಟಿಲ ರಚನೆಯಾಗಿದ್ದು, ಅದರ ಸಂಕೀರ್ಣ ಬೆಳವಣಿಗೆಯು ಮನುಷ್ಯನನ್ನು ವಿಶ್ವದ ಅತ್ಯುನ್ನತ ಸ್ಥಾನಕ್ಕೆ ಏರಲು ಅನುವು ಮಾಡಿಕೊಟ್ಟಿದೆ. ಇದು ಅಸಂಖ್ಯಾತ ನರ ಕೋಶಗಳು ಮತ್ತು ನರಜಾಲಗಳನ್ನು ಒಳಗೊಂಡಿದೆ. ಇದು ಸುಮಾರು 1300 ಗ್ರಾಂ ತೂಕವಿದ್ದು, ವ್ಯಕ್ತಿಯ ಮಾನಸಿಕ ಸಾಮರ್ಥ್ಯಕ್ಕೂ ಅದರ ತೂಕಕ್ಕೂ ಯಾವುದೇ ಸಂಬಂಧವಿರುವುದಿಲ್ಲ.
ಮೆದುಳಿನ ತೂಕ ನಮ್ಮ ದೇಹದ ಒಟ್ಟು ತೂಕದ ಕೇವಲ 1/50 ರಷ್ಟಿದ್ದರೂ ಸಹ ಪ್ರತಿ ಬಡಿತದಲ್ಲಿ ಹೃದಯದಿಂದ ಪಂಪ್ ಮಾಡಲಾದ ರಕ್ತದ 1/5 ರಷ್ಟು ರಕ್ತವು ಇದಕ್ಕೆ ಅತ್ಯವಶ್ಯಕ. ಆಮ್ಲಜನಕ ಮತ್ತು ಗ್ಲೂಕೋಸ್ ಅವಶ್ಯಕತೆ ತುಂಬಾ ಹೆಚ್ಚಾಗಿ ಬೇಕಾಗಿದ್ದು, ಈ ಪ್ರಮುಖ ವಸ್ತುಗಳ ನಿರಂತರ ಪೂರೈಕೆ ಮೆದುಳಿನ ಚಟುವಟಿಕೆಗೆ ಇರಲೇ ಬೇಕು. ಇವುಗಳ ಯಾವುದೇ ಕೊರತೆಯು ಜೀವಕೋಶಗಳ ಸಾವಿಗೆ ಕಾರಣವಾಗುತ್ತದೆ. ಇಷ್ಟೇ ಅಲ್ಲದೇ ಪ್ರಜ್ಞಾಹೀನತೆ ಮತ್ತು ದೇಹದ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಮೆದುಳಿಗೆ ನಿರಂತರ ರಕ್ತ ಪೂರೈಕೆಯನ್ನು ಕಾಪಾಡಿಕೊಳ್ಳಲು ಪ್ರಕೃತಿಯೇ ಸಾಕಷ್ಟು ಸುವ್ಯವಸ್ಥೆಯನ್ನು ಮಾಡಿದೆ.
ಕಣ್ಣುಗಳು, ಕಿವಿಗಳು, ನಾಲಿಗೆ, ಮೂಗು ಮತ್ತು ಚರ್ಮದಿಂದ ವಿವಿಧ ಮಾಹಿತಿಗಳು ಮೆದುಳನ್ನು ತಲುಪುತ್ತವೆ ಮತ್ತು ಮೆದುಳು ಅವುಗಳನ್ನು ಅರ್ಥೈಸುತ್ತದೆ. ನಂತರ ದೃಷ್ಟಿ, ಶಬ್ದ, ರುಚಿ, ವಾಸನೆ ಅಥವಾ ಸ್ಪರ್ಶ, ನೋವು ಅಥವಾ ತಾಪಮಾನದ ಸಂವೇದನೆ ಎಂದು ಪ್ರತ್ಯೇಕವಾಗಿ ನಮ್ಮ ಅನುಭವಕ್ಕೆ ಬರುತ್ತದೆ.
ಮೆದುಳಿನ ಆರೋಗ್ಯಕ್ಕೆ ಸಮಸ್ಯೆ ಕೊಡುವ ಅಭ್ಯಾಸಗಳು ಯಾವುವು?
ಸಾಕಷ್ಟು ನಿದ್ರೆ ಮಾಡದಿರುವುದು
ನಮ್ಮ ಒತ್ತಡದ ಜೀವನದಲ್ಲಿ ನಿದ್ರೆಯನ್ನು ಕಡೆಗಣಿಸುತ್ತೇವೆ. ನಿದ್ರೆಯ ಅಭಾವವು ಅರಿವಿನ ಸಾಮರ್ಥ್ಯಗಳನ್ನು ದುರ್ಬಲಗೊಳಿಸುತ್ತದೆ. ನೆನಪು, ತಾರ್ಕಿಕತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತದೆ.
ಒಂದು ಗಂಟೆ ಮುಂಚಿತವಾಗಿ ಮಲಗುವುದು, ಮಲಗುವ ಒಂದು ಗಂಟೆ ಮೊದಲು ಆಲ್ಕೋಹಾಲ್ ಮತ್ತು ಕೆಫೀನ್‌ನಿಂದ ದೂರವಿರುವುದು ಮತ್ತು ಮೊಬೈಲ್, ಕಂಪ್ಯೂಟರ್ ಬೆಳಕನ್ನು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ಇವೆಲ್ಲವೂ ಮೆದುಳಿನ ರಕ್ಷಣಾತ್ಮಕ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ.
ದೀರ್ಘಕಾಲ ಕುಳಿತುಕೊಳ್ಳುವುದು
UCLA ಹೆಲ್ತ್ ಅಧ್ಯಯನದ ಪ್ರಕಾರ ದೀರ್ಘಕಾಲ ಕುಳಿತುಕೊಳ್ಳುವುದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಕನಿಷ್ಠ 150 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ ವ್ಯಾಯಾಮವನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.
ಅಸಮರ್ಪಕ ನೀರಿನ ಸೇವನೆ
ನೀರು ಮೆದುಳಿನ ಪ್ರಮುಖ ಅಂಶವಾಗಿದೆ. ಆದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದನ್ನು ಮರೆತುಬಿಡುತ್ತೇವೆ. ನಿರ್ಜಲೀಕರಣವು ಪ್ರತಿಕ್ರಿಯೆಯ ಸಮಯ, ಸ್ಮರಣೆ ಮತ್ತು ಗಮನದ ಮೇಲೆ ಪರಿಣಾಮ ಬೀರಬಹುದು.
ಉಪಹಾರವನ್ನು ಬಿಟ್ಟುಬಿಡುವುದು
ಬೆಳಗಿನ ಉಪಾಹಾರವು ದಿನದ ಅತ್ಯಂತ ಮಹತ್ವದ ಎಂದು ಪರಿಗಣಿಸಲ್ಪಟ್ಟಿದೆ. ಇದು ಮೆದುಳಿಗೆ ಅಗತ್ಯವಾದ ಪ್ರಮುಖ ಶಕ್ತಿಯನ್ನು ನೀಡುತ್ತದೆ. ಉಪಾಹಾರವನ್ನು ಬಿಟ್ಟುಬಿಡುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
– ಕ್ರಿಯಾಶೀಲ ಮಕ್ಕಳಿಗುಂಟು ನಾಸಾಗೆ ಭೇಟಿ ನೀಡುವ ಬಂಪರ್ ಆಫರ್
ಬೆಂಗಳೂರು: ವಿಜ್ಞಾನ ಲೋಕದ (Science World) ಕೌತಕಗಳನ್ನು ಮಕ್ಕಳು ಕಣ್ತುಂಬಿಕೊಳ್ಳಲು ಮಕ್ಕಳು ಬಾಹ್ಯಾಕಾಶಕ್ಕೇ ಹೋಗಬೇಕಿಲ್ಲ. ಈಗ ಮಕ್ಕಳ ಬಳಿಗೇ ಬರುತ್ತಿದೆ ʻಲಿಲ್ ಬಿಗ್ ಫ್ಯಾಂಟಸಿʼಹೆಸರಿ (Lil Big Fantasy) ಸೈನ್ಸ್ ಬಸ್!
ಹೌದು. ಮಕ್ಕಳಿಗೆ ವಿಜ್ಞಾನ ಲೋಕದ ಕೌತುಕಗಳ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ವಿಜ್ಞಾನ ಅನ್ವೇಷಿಸಿ, ಅದರ ಅನುಭವ ಪಡೆದುಕೊಳ್ಳಲು ಐಟಿಸಿ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಅವರಿಂದ ಈ ವಿನೂತನ ಸೈನ್ಸ್‌ಬಸ್‌ವೊಂದನ್ನ (Science Bus) ಅನಾವರಣಗೊಳಿಸಲಾಗಿದೆ. ಇಸ್ರೋ ಮಾಜಿ ಅಧ್ಯಕ್ಷ ಪ್ರಕಾಶ್ ರಾವ್, ಬಾಲಿವುಡ್ ನಟಿ ಮಂದಿರಾ ಬೇಡಿ, ನಿಮ್ಹಾನ್ಸ್‌ನ ಡಿಎಂ ಡಾ.ಮೇಘಾ ಮಹಾಜನ್, ಐಟಿಸಿ ಲಿಮಿಟೆಡ್ ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್, ಫುಡ್ಸ್ ಡಿವಿಷನ್ ಸಿಒಒ ಅಲಿ ಹ್ಯಾರಿಸ್ ಶೇರ್ ಬಸ್‌ನನ್ನು ಅನಾವರಣಗೊಳಿಸಿದರು. ಇದನ್ನೂ ಓದಿ: ಬೆಂಗಳೂರು ಜನ್ರ ದುಡ್ಡು ಚೀನಾ ಕಂಪನಿಗಳಿಗೆ ಜಮೆ – ಉತ್ತರ ಸೈಬರ್ ಠಾಣೆಯಲ್ಲಿ 122 ಕೇಸ್ ಪತ್ತೆ
ಈ ಕುರಿತು ಮಾತನಾಡಿದ ಇಸ್ರೋ (ISRO) ಮಾಜಿ ನಿರ್ದೇಶಕ ಪ್ರಕಾಶ್ ರಾವ್, ಪ್ರತಿಯೊಂದು ಮಕ್ಕಳಲ್ಲೂ ವಿಶೇಷ ಪರಿಕಲ್ಪನೆಗಳಿರುತ್ತವೆ. ವಿಜ್ಞಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಅವರ ಸೃಜನಶೀಲತೆಯನ್ನು ಉತ್ತೇಜಿಸಿ ಅವರ ಕಲ್ಪನೆಗೆ ಜೀವ ನೀಡುವ ಉದ್ದೇಶದಿಂದ ಈ ಸೈನ್ಸ್ ಬಸ್‌ನನ್ನು ಐಟಿಸಿ ತಂಡ ಬಿಡುಗಡೆ ಮಾಡಿದೆ. ಮಕ್ಕಳು ಈ ಬಸ್‌ನಲ್ಲಿ ತಮ್ಮ ಕಲ್ಪನೆಯನ್ನು ಜೀವಂತವಾಗಿಸಿಕೊಳ್ಳಬಹುದು. ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬಹುದು ಎಂದು ಹೇಳಿದರು. ಈ ರೀತಿಯ ಪ್ರಯತ್ನಗಳು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಇನ್ನಷ್ಟು ಆಸಕ್ತಿ ಹಾಗೂ ಕುತೂಹಲ ಮೂಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಐಟಿಸಿ ಲಿಮಿಟೆಡ್ ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್, ಫುಡ್ಸ್ ಡಿವಿಷನ್ ಸಿಒಒ ಅಲಿ ಹ್ಯಾರಿಸ್ ಶೇರ್ ಮಾತನಾಡಿ, ಈಗಿನ ಮಕ್ಕಳು ಸಾಕಷ್ಟು ಫ್ಯಾಂಟಸಿ ಆಲೋಚನೆಗಳನ್ನು ಹೊಂದಿರುತ್ತಾರೆ. ಅವರ ಆಲೋಚನೆಗಳಿಗೆ ತಕ್ಕಂತೆ ಐಟಿಸಿ ತಂಡ ಈ ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಸೈನ್ಸ್ ಬಸ್‌ನನ್ನು ತಯಾರಿಸಿದೆ. ಇದರಿಂದ ಮಕ್ಕಳ ಫ್ಯಾಂಟಸಿ ಮತ್ತು ಕಲ್ಪನಾಶೀಲತೆಯನ್ನು ಇಲ್ಲಿ ಪ್ರದರ್ಶಿಸಬಹುದು. ಈ ಬಸ್‌ನಲ್ಲಿ ಅಳವಡಿಸಿರುವ ತಂತ್ರಜ್ಞಾನದಲ್ಲಿ. ಮಕ್ಕಳು ತಮಗೆ ಇಷ್ಟವಾದ ಚಿತ್ರ, ಕಾರ್ಟೂನ್ ಅಥವಾ ಯಾವುದೇ ಕಲೆಯನ್ನು ಇಲ್ಲಿ ತಮ್ಮ ಕೈಯಿಂದ ಬಿಡಿಸಿದರೆ, ಅದು 3D ಸಂವಾದಾತ್ಮಕ ಅಕ್ಷರಗಳಾಗಿ ಪರಿವರ್ತನೆಗೊಂಡು ಡಿಜಿಟಲ್ ರಚನೆಯಾಗಿ ಪರದೆ ಮೇಲೆ ಪ್ರದರ್ಶನಗೊಳ್ಳಲಿದೆ. ಇದು ಮಕ್ಕಳಿಗೆ ತಾರಾಲಯದ ಅನುಭವ ನೀಡುವ ಜೊತೆಗೆ ನಮ್ಮ ವಿಜ್ಞಾನದ ಕೂತೂಹಲಗಳ ಬಗ್ಗೆಯೂ ಮಾಹಿತಿ ನೀಡಲಿದೆ ಎಂದರು. ಅಲ್ಲದೇ ಈ ಮೂಲಕ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಮೂಲ ಉದ್ದೇಶವನ್ನು ಒಳಗೊಂಡಿದೆ ಎಂದು ವಿವರಿಸಿದರು.
ಬಾಲಿವುಡ್ ನಟಿ ಮಂದಿರಾ ಬೇಡಿ ಮಾತನಾಡಿ, ನನ್ನ ಮಗಳಿಗೆ ಈಗ 8 ವರ್ಷ, ಆಕೆ ಪ್ರತಿದಿನ ಒಂದೊಂದು ಕಲ್ಪನೆ ಮಾಡಿಕೊಳ್ಳುತ್ತಾಳೆ. ಒಮ್ಮೆ ತಾನು ಪೈಲೆಟ್ ಆಗ ಬಯಸುವೆನ್ನುವ ಆಕೆ, ಮತ್ತೊಂದು ದಿನ ಶೆಫ್ ಆಗುವೆ ಅಂತಾಳೆ. ಹೀಗೆ ಮಕ್ಕಳ ಕಲ್ಪನೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅವರ ಕಲ್ಪನೆಗೆ ರೆಕ್ಕೆ ಪುಕ್ಕ ನೀಡುವುದು ನಮ್ಮ ಜವಾಬ್ದಾರಿ, ಈ ನಿಟ್ಟಿನಲ್ಲಿ ಐಟಿಸಿ ತಂಡ ಈ ಪ್ರಯತ್ನ ಮಾಡುವ ಮೂಲಕ ಮಕ್ಕಳ ವಿನೂತನ ಕಲ್ಪನೆಗಳಿಗೆ ರೆಕ್ಕೆ ಕಟ್ಟಿದಂತಾಗಲಿದೆ ಎಂದರು. ಸಮಾರಂಭದಲ್ಲಿ ಸೇಂಟ್ ಜೋಸೆಫ್ ಶಾಲೆ ಪ್ರಾಂಶುಪಾಲ ರೋಹನ್ ಡಿ ಅಲ್ಮೇಡಾ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್ `ದಶೋತ್ಸವ’ – ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮ
NASAಗೆ ಭೇಟಿ ನೀಡುವ ಅವಕಾಶ:
ಈ ಬಸ್‌ನಲ್ಲಿ ಮಕ್ಕಳು ತಮ್ಮ ಆಸಕ್ತಿದಾಯಕ ವಿಚಾರ ಹಾಗೂ ಕಲೆಯನ್ನು ಪ್ರದರ್ಶಿಸಬಹುದು. ಯಾವ ಮಗುವಿನ ಕಲ್ಪನೆಯು ಹೆಚ್ಚು ವಿಭಿನ್ನ ಹಾಗೂ ವಿಶೇಷವಾಗಿರುತ್ತದೆಯೋ ಅಂತಹ ಆಯ್ದ ಮಕ್ಕಳನ್ನ ನಾಸಾಗೆ ಕರೆದೊಯ್ಯುವ ಕೆಲಸವನ್ನು ಐಟಿಸಿ ಡಾರ್ಕ್ ಫ್ಯಾಂಟಸಿ ತಂಡ ಮಾಡಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಈ ಹೊಸ ಬಸ್‌ಗೆ ಚಾಲನೆ ಸಿಕ್ಕಿದ್ದು, ಈ ಬಸ್ ಇಡೀ ದೇಶಾದ್ಯಂತ ಎಲ್ಲೆಡೆ ಸಂಚರಿಸಿ, ಕೋಟ್ಯಂತರ ಮಕ್ಕಳ ಕ್ರಿಯಾತ್ಮಕತೆ ಹಾಗೂ ಕಲ್ಪನೆಗೆ ಸಾಕ್ಷಿಯಾಗಲಿದೆ. ಇದನ್ನೂ ಓದಿ: ಶೀಘ್ರದಲ್ಲೇ APMCಗಳ ಡಿಜಿಟಲೀಕರಣ ಕಾರ್ಯ ಪೂರ್ಣ: ಸಚಿವ ಶಿವಾನಂದ ಪಾಟೀಲ್
ಬಸ್‌ನ ವಿಶೇಷತೆ ಏನು?
ʻಫ್ಯಾಂಟಸಿ ಸ್ಪೇಸ್‌ಶಿಪ್ʼ ಆಗಿರುವ ಈ ಬಸ್ ಹಲವು ವಿಶೇಷ ಹಾಗೂ ಕೌತುಕದಿಂದ ಕೂಡಿದೆ. ಈ ಬಸ್‌ನಲ್ಲಿ ವಿಸ್ತಾರವಾದ ಸಂವಾದಾತ್ಮಕ ಪರದೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯಿಂದ ನಡೆಸಲ್ಪಡುತ್ತದೆ. ಈ ಬಸ್‌ನಲ್ಲಿ, ಮಕ್ಕಳು ತಮ್ಮ ಕೈಯಿಂದ ಬಿಡಿಸದ ಚಿತ್ರ ಅಥವಾ ಪಾತ್ರವು ರೋಮಾಂಚಕ ಡಿಜಿಟಲ್ ರಚನೆಗಳಾಗಿ ಪರಿವರ್ತನೆಗೊಳ್ಳಲಿದೆ. ಮಕ್ಕಳು ಪೇಪರ್ ಮೇಲೆ ಬರೆದ ಈ ಕಲಾಕೃತಿಯನ್ನು ಸ್ಕ್ಯಾನ್ ಮಾಡಿದ ನಂತರ, ಅವರ ಕ್ಯಾರೆಕ್ಟರ್‌ಗಳು ಅಥವಾ ಕಲಾಕೃತಿಗಳು ಸ್ಪೇಸ್‌ಶಿಪ್‌ನಲ್ಲಿ ಡಿಜಿಟಲ್ ರೂಪದಲ್ಲಿ 3D ಸಂವಾದಾತ್ಮಕ ಅಕ್ಷರಗಳಾಗಿ ಪ್ರದರ್ಶನಗೊಳ್ಳಲಿದೆ. ಈ ಸ್ಕ್ರೀನ್‌ನಲ್ಲಿ ಮೂಡಿಬರುವ ಕಲಾಕೃತಿಗಳನ್ನು ಮಕ್ಕಳು ತಮ್ಮ ಕೈಯಲ್ಲಿ ಮುಟ್ಟುವ ಮೂಲಕ ತಾವೇ ಸ್ಪೇಸ್‌ಶಿಪ್‌ನಲ್ಲಿ ಓಡಾಡುತ್ತಿರುವ ಅನುಭವ ಪಡೆಯಬಹುದು. ಬಾಹ್ಯಾಕಾಶಯಾನ ಮಾಡುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಮಕ್ಕಳಿಗೆ ಆಕಾಶಯಾನದ ಬಗ್ಗೆ ಹೆಚ್ಚೆಚ್ಚು ಕಲ್ಪನೆಗಳಿರುತ್ತವೆ. ಈ ಬಸ್‌ನಲ್ಲಿ 3ಡಿ ಎಫೆಕ್ಟ್ ಮೂಲಕ ಮಕ್ಕಳು ಬಾಹ್ಯಾಕಾಶ ಯಾನದ ನೈಜ ಅನುಭವ ಪಡೆದುಕೊಳ್ಳಬಹುದು. ನೂರಾರು ಕಕ್ಷೆಗಳು ತಮ್ಮ ಸುತ್ತುವ, ಹಾದು ಹೋಗುವ ಅನುಭವ, ಗಗನಯಾತ್ರಿಕರು ನಮ್ಮ ಸುತ್ತಲೇ ಸುತ್ತುತ್ತಿರುವ ಅನುಭವ ಹೀಗೆ ಆಕಾಶಯಾನದ ವಾಸ್ತವ ಆನಂದವನ್ನು ಮಕ್ಕಳು ಈ ಬಸ್‌ನಲ್ಲಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಇದಷ್ಟೇ ಅಲ್ಲದೇ, ಇನ್ನಷ್ಟು ವಿಶೇಷ ಹಾಗೂ ವಿಜ್ಞಾನದ ಅನುಭವವನ್ನು ಪಡೆದುಕೊಳ್ಳಬಹುದು.
ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜು (RG Kar Medical College) ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಆತ್ಮಹತ್ಯೆ ಅಂತ ಬಿಂಬಿಸಲು ಪ್ರಯತ್ನಿಸಿದ್ದರು. ಅದಕ್ಕಾಗಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾರೆ ಎಂಬುದಾಗಿ ಸಿಬಿಐ ಕೋರ್ಟ್‌ಗೆ ಸಲ್ಲಿಸಿದ ತನ್ನ ರಿಮ್ಯಾಂಡ್ ಕಾಪಿಯಲ್ಲಿ ತಿಳಿಸಿದೆ.
ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅವ್ಯವಹಾರ ಮತ್ತು ʻಹ್ಯತ್ಯಾʼಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರ (Evidence) ನಾಶ ಆರೋಪದ ಮೇಲೆ ಸಂದೀಪ್ ಘೋಷ್ ಅವರನ್ನ ಸಿಬಿಐ (CBI) ಬಂಧಿಸಿದೆ. ಈ ಕೇಸ್‌ನಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ತಲಾ ಠಾಣೆಯ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್ ಅವರನ್ನೂ ಸಹ ಬಂಧಿಸಲಾಗಿದೆ. ಇದನ್ನೂ ಓದಿ: ಮುಂದಿನ 24 ಗಂಟೆಯಲ್ಲಿ ದೆಹಲಿ ಗದ್ದುಗೆಗೆ ನೂತನ ಸಾರಥಿ – ಸಿಎಂ ರೇಸ್‌ನಲ್ಲಿರುವ ಟಾಪ್ -5 ಕಲಿಗಳು ಯಾರು?
ಈ ಪ್ರಕರಣದ ಕುರಿತು ಸಿಬಿಐ ಕೋರ್ಟ್‌ಗೆ ಸಲ್ಲಿಸಿದ ರಿಮ್ಯಾಂಡ್ ಕಾಪಿಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಡಾ. ಸಂದೀಪ್ ಘೋಷ್ ಆಗಸ್ಟ್ 9ರಂದು ಬೆಳಗ್ಗೆ 9:58ರ ವೇಳೆಗೆ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರೂ ತಕ್ಷಣ ಆಸ್ಪತ್ರೆ ತಲುಪಲಿಲ್ಲ. ಪೊಲೀಸರಿಗೆ ದೂರು ಸಹ ದಾಖಲಿಸಲಿಲ್ಲ. ಸಂತ್ರಸ್ತೆಯ ದೇಹದ ಮೇಲೆ ಗಾಯದ ಗುರುತುಗಳಿದ್ದರೂ ಅದನ್ನು ಆತ್ಮಹತ್ಯೆ ಅಂತ ಬಿಂಬಿಸಲು ಹೊರಟಿದ್ದರು. ಆಸ್ಪತ್ರೆಯಿಂದ ಸಂತ್ರಸ್ತೆ ಪೋಷಕರಿಗೆ ದೂರವಾಣಿ ಕರೆ ಮಾಡಿ ಆತ್ಮಹತ್ಯೆ ಅಂತ ತಿಳಿಸಿದ್ದರು ಎಂದು ಸಿಬಿಐ ತನ್ನ ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಿದೆ.
ಮುಂದುವರಿದು, ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಾದ ನಂತರ ಘೋಷ್ ಪೊಲೀಸ್ ಅಧಿಕಾರಿ ಮತ್ತು ವಕೀಲರೊಂದಿಗೆ ಸಂಪರ್ಕದಲ್ಲಿದ್ದರು. ಸಂತ್ರಸ್ತೆ ಪೋಷಕರು ಆಸ್ಪತ್ರೆಗೆ ಬಂದಾಗಲೂ ಅವರನ್ನು ಭೇಟಿಯಾಗಲಿಲ್ಲ. ಘಟನೆ ನಂತರ ಮುಂದಿನ ವೈದ್ಯಕೀಯ ಪ್ರಕ್ರಿಯೆಗಳ ಬಗ್ಗೆ ಗಮನ ಹರಿಸಲಿಲ್ಲ. ಮೃತದೇಹವನ್ನು ತಕ್ಷಣವೇ ಶವಾಗಾರಕ್ಕೆ ಕಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಸಿಬಿಐ ಕೋರ್ಟ್‌ಗೆ ತಿಳಿಸಿದೆ. ಇದನ್ನೂ ಓದಿ: ವರದಕ್ಷಿಣೆಯಾಗಿ ಬೈಕ್ ಕೇಳಿದ್ದ ಪತಿ – ಕೊಡದಿದ್ದಕ್ಕೆ ತವರು ಮನೆಯಿಂದ ಕರೆತಂದು ಪತ್ನಿಯನ್ನೇ ಕೊಂದ!
ಇನ್ನೂ ಪೊಲೀಸ್ ಅಧಿಕಾರಿ ಮೊಂಡಲ್ ಸಹ ಮಾಹಿತಿ ಪಡೆದ ಒಂದು ಗಂಟೆ ನಂತರ ಘಟನಾ ಸ್ಥಳಕ್ಕೆ ತಲುಪಿದರು. ಘೋರ ಸ್ವರೂಪದಲ್ಲಿ ಕೊಲೆಯಾಗಿರುವುದು ಕಂಡುಬಂದರೂ ಸೂಕ್ತ ಸಮಯಕ್ಕೆ ಎಫ್‌ಐಆರ್ ದಾಖಲಿಸಲಿಲ್ಲ. ತಡರಾತ್ರಿ ಎಫ್‌ಐಆರ್ ದಾಖಲಿಸಲಾಗಿದೆ, ಸುಪ್ರೀಂ ಕೋರ್ಟ್ ಮತ್ತು ಕೋಲ್ಕತ್ತಾ ಹೈಕೋರ್ಟ್ ಪದೇ ಪದೇ ಹೇಳಿದರೂ ಪ್ರಕರಣದ ಕುರಿತು ತಲೆ ಕೆಡಿಸಿಕೊಂಡಿಲ್ಲ. ಕುಟುಂಬದ ಸದಸ್ಯರು ಮತ್ತೆ ಶವಪರೀಕ್ಷೆಗೆ ಒತ್ತಾಯಿಸಿದರೂ ಶವದ ಅಂತ್ಯಸಂಸ್ಕಾರಕ್ಕೆ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ ಎಂದು ಘಟನಾ ವಿವರವನ್ನು ಸಿಬಿಐ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಕೋಲ್ಕತ್ತಾ: ಹಣಕಾಸು ಅವ್ಯವಹಾರ ಪ್ರಕಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (Kolkata’s RG Kar hospital) ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನ ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ.
ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರ ನಾಶ ಆರೋಪಕ್ಕೆ ಆರೋಪದ ಮೇಲೆ ಸಂದೀಪ್ ಘೋಷ್ ಅವರನ್ನ ಬಂಧಿಸಿರುವುದಾಗಿ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಭೀಕರ ಅಪಘಾತ – 6 ಯಾತ್ರಾರ್ಥಿಗಳು ದುರ್ಮರಣ
ಇದೇ ತಿಂಗಳ ಸೆಪ್ಟೆಂಬರ್ 2ರಂದು ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಬಿಐ ಬಂಧಿಸಿತ್ತು. ಬಳಿಕ ಆರ್ಥಿಕ ಅವ್ಯವಹಾರಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ ಕೋಲ್ಕತ್ತಾ ಹೈಕೋರ್ಟ್ (Kolkata High Court) ಆದೇಶವನ್ನು ಪ್ರಶ್ನಿಸಿ ಘೋಷ್ (Sandip Ghosh) ಅರ್ಜಿ ಸಲ್ಲಿಸಿದ್ದರು, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹ:
ಸದ್ಯ ಪೊಲೀಸ್ ಅಧಿಕಾರಿ ಮೊಂಡಲ್ ಅವರ ಬಂಧನದ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನ ತಕ್ಷಣವೇ ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿಯೇ ಸಾಕ್ಷಾತ್ ವಿಶ್ವನಾಥ, ಅದನ್ನು ಮಸೀದಿ ಎನ್ನುವುದು ವಿಷಾದನೀಯ: ಯೋಗಿ ಆದಿತ್ಯನಾಥ್
ಕಳೆದ ತಿಂಗಳು ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸಲು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ಮೂರು ವಾರಗಳ ಗಡುವು ನೀಡಿತ್ತು. ಸೆ.17ರಂದು ಗಡುವು ಮುಕ್ತಾಯವಾಗಲಿದ್ದು, ಅಂದೇ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಕೋಲ್ಕತ್ತಾ: ಇಲ್ಲಿನ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.
ವೈದ್ಯಕೀಯ ಕಾಲೇಜಿನಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಜೊತೆಗೆ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಅಪ್ರಾಮಾಣಿಕತೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅಲ್ಲದೇ ಪ್ರಕರಣ ಜಾಮೀನು ರಹಿತ ಸ್ವರೂಪದ್ದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಮದುವೆಯಾಗ್ತೀನಿ ಅಂತಾ ಎಣ್ಣೆ ಕುಡಿಸಿ ರಸ್ತೆಯಲ್ಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ದುರುಳ
ಸಂದೀಪ್ ಘೋಷ್, 2021ರ ಫೆಬ್ರವರಿಯಿಂದ 2023ರ ಸೆಪ್ಟೆಂಬರ್ ವರೆಗೆ RG ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 2023 ರಲ್ಲಿ ವರ್ಗಾವಣೆಯಾಗಿದ್ದರು. ಇದಾದ ಒಂದೇ ತಿಂಗಳಲ್ಲಿ ಮತ್ತೆ ಅದೇ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದರು. ಕಳೆದ ತಿಂಗಳು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಯುವ ದಿನದವರೆಗೂ ಅವರು ಹುದ್ದೆಯಲ್ಲಿದ್ದರು. ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೃತ ದೇಹವು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಬಂಗಾಳ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿತು. ಬೆನ್ನಲ್ಲೇ ಸಂದೀಪ್ ಘೋಷ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದಾದ ಬಳಿಕ ಈ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಘವು ಡಾ.ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿತು.
ಕೋಲ್ಕತ್ತಾ: ಕಳೆದ ತಿಂಗಳು ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದ್ದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ (Kolkata’s RG Kar hospital) ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ನನ್ನ (Sandip Ghosh) ಕೇಂದ್ರೀಯ ತನಿಖಾ ದಳ (CBI) ಸೋಮವಾರ ಬಂಧಿಸಿದೆ.
ವೈದ್ಯಕೀಯ ಕಾಲೇಜಿನಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಜೊತೆಗೆ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಅಪ್ರಾಮಾಣಿಕತೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅಲ್ಲದೇ ಪ್ರಕರಣ ಜಾಮೀನು ರಹಿತ ಸ್ವರೂಪದ್ದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Kolkata Horror | ಕಿರಿಯ ವೈದ್ಯರಿಗೆ ನಾನು ಎಂದಿಗೂ ಬೆದರಿಕೆ ಹಾಕಿಲ್ಲ: ಮಮತಾ ಬ್ಯಾನರ್ಜಿ
ಕೋಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡದಿಂದ ಸಿಬಿಐ ತನಿಖೆ ಹೊಣೆ ವಹಿಸಿಕೊಂಡಿತ್ತು. ಬಳಿಕ ಎಫ್‌ಐಆರ್ ದಾಖಲಿಸಿದ್ದ ಸಿಬಿಐ ಕಳೆದ 2 ವಾರಗಳಿಂದ 150ಕ್ಕೂ ಹೆಚ್ಚುಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ಸಂದೀಪ್ ಘೋಷ್, 2021ರ ಫೆಬ್ರವರಿಯಿಂದ 2023ರ ಸೆಪ್ಟೆಂಬರ್ ವರೆಗೆ RG ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಅಕ್ಟೋಬರ್ 2023 ರಲ್ಲಿ ವರ್ಗಾವಣೆಯಾಗಿದ್ದರು. ಇದಾದ ಒಂದೇ ತಿಂಗಳಲ್ಲಿ ಮತ್ತೆ ಅದೇ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದರು. ಕಳೆದ ತಿಂಗಳು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಯುವ ದಿನದವರೆಗೂ ಅವರು ಹುದ್ದೆಯಲ್ಲಿದ್ದರು. ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೃತ ದೇಹವು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಬಂಗಾಳ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿತು.
ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಕೋಲ್ಕತ್ತಾ ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆ (Kolkata Case Investigation) ಹೊಸ ಹೊಸ ಆಯಾಮಗಳಲ್ಲಿ ನಡೆಯುತ್ತಿದ್ದು, ಹೊಸ ಹೊಸ ಸಾಕ್ಷ್ಯಗಳು ಬೆಳಕಿಗೆ ಬರುತ್ತಿವೆ.
ಕೋಲ್ಕತ್ತಾ (Kolkata) ಟ್ರೈನಿ ವೈದ್ಯೆ ರೇಪ್ & ಮರ್ಡರ್ ಕೇಸ್‌ನ ಆರೋಪಿ ಮದ್ಯ ಸೇವಿಸಿ ಆಗಾಗ್ಗೆ ಜಗಳವಾಡುತ್ತಿದ್ದ, ಸೆಕ್ಸ್ ವೀಡಿಯೋ ನೋಡುವ ಚಟ ಹೊಂದಿದ್ದ ಎಂಬ ಅಂಶಗಳು ತನಿಖೆಯಲ್ಲಿ ಬಯಲಾಗಿವೆ. ಆದ್ರೆ ಅದಕ್ಕಿಂತಲೂ ಕ್ರೂರವಾದ ಪ್ರಕರಣಗಳು ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದಿತ್ತು. ಸೀರಿಯಲ್ ಕಿಲ್ಲರ್‌ವೊಬ್ಬ 40ಕ್ಕೂ ಹೆಚ್ಚು ವಯಸ್ಕ ಮಹಿಳೆಯರನ್ನು ಕೊಂದು ರುಂಡ-ಮುಂಡಗಳನ್ನು ಕತ್ತರಿಸಿ ಬಿಸಾಡಿದ್ದ. ಈ ಪ್ರಕರಣಗಳನ್ನು ಗಮನಿಸಿದಾಗ ಕೊಲೆಗಾರನ ಮನಸ್ಸು ಎಷ್ಟು ವಿಕೃತವಾಗಿತ್ತು ಎಂಬುದು ತಿಳಿಯುತ್ತದೆ. ಕೆಲ ಸಿನಿಮಾ, ವೆಬ್‌ಸಿರೀಸ್‌ಗಳಲ್ಲೂ (Web Series) ಇಂತಹ ಸೈಕೋ ಕಿಲ್ಲರ್‌ಗಳ ಬಗ್ಗೆ ಕಥೆ ಎಣೆಯಲಾಗಿದೆ. ಇಂತಹ ʻಕ್ರಿಮಿನಲ್ ಮೈಂಡ್ʼ (Criminal Mind) ಇರುವ ವ್ಯಕ್ತಿಗಳ ಬಗ್ಗೆ ಮನೋವಿಜ್ಞಾನಿಗಳು ಏನಂತಾರೆ ನೋಡೋಣ…
ವಿಜ್ಞಾನದಲ್ಲಿ ಎಲ್ಲದಕ್ಕೂ ಉತ್ತರವಿಲ್ಲ
ವಿಜ್ಞಾನ (Science) ಲೋಕವೆಂಬುದು ಕುತೂಹಲ, ಬಗೆದಷ್ಟು ಆಳ. ಇಲ್ಲಿ ಎಲ್ಲದಕ್ಕೂ ಉತ್ತರ ಸಿಗುವುದಿಲ್ಲ. ಕೆಲವೊಂದು ಅನುಭವಕ್ಕೆ ಬಂದಾಗಷ್ಟೇ ನಂಬಬೇಕಾಗುತ್ತದೆ, ಇಲ್ಲದಿದ್ದರೆ ಅನುಭವಕ್ಕಾಗಿ ಕಾಯಬೇಕಾಗುತ್ತೆ. ಆದಾಗ್ಯೂ ಕೆಲ ಮನೋವಿಜ್ಞಾನಿಗಳು ಮನುಷ್ಯನಲ್ಲಿ ಮಾನಸಿಕ ವಿಕೃತಿಗಳನ್ನು ಕಂಡಾಗ ಅವುಗಳನ್ನು ʻಕ್ರಿಮಿನಲ್ ಮೈಂಡ್ʼ ಅನ್ನೋ ಪದಗಳಲ್ಲಿ ಗುರುತಿಸಿ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ʻಕ್ರಿಮಿನಲ್ ಮೈಂಡ್ʼ ಎಂಬ ಪದವನ್ನು ಮೊದಲಬಾರಿಗೆ 1928ರಲ್ಲಿ ಪರಿಚಯಿಸಲಾಯಿತು. ʻಜರ್ನಲ್ ಆಫ್ ಅಬ್ನಾರ್ಮಲ್ ಅಂಡ್ ಸೋಶಿಯಲ್ ಸೈಕಾಲಜಿʼ ಎಂಬ ಜರ್ನಲ್‌ನಲ್ಲಿ ಲೇಖನವೂ ಪ್ರಕಟವಾಯಿತು. ʻಕ್ರಿಮಿನಲ್ ಮೈಂಡ್ʼ ವ್ಯಕ್ತಿಗಳು ಕೇವಲ ಒಬ್ಬಿಬ್ಬರಿಗೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಅಪಾಯಕಾರಿ ಎಂದು ಹೇಳಿದ್ದರು. ʻಕ್ರಿಮಿನಲ್ ಮೈಂಡ್ʼ ಎಂಬ ಪದವು ಸುಮಾರು ನೂರು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ, ಇಂತಹ ಕೇಸ್‌ಗಳು ವಿಜ್ಞಾನ ಲೋಕಕ್ಕೆ ಹಾಗೂ ವಿಜ್ಞಾನಿಗಳಿಗೆ ಸವಾಲಿನದ್ದಾಗಿಯೇ ಇದೆ. ಕೆಲ ವಿಜ್ಞಾನಿಗಳು ಇಂತಹ ಮಾನಸಿಕ ಸ್ಥಿತಿಯುಳ್ಳ ವ್ಯಕ್ತಿಗಳನ್ನು ಮುಂಚಿತವಾಗಿಯೇ ಗುರುತಿಸಬಹುದಾ ಅನ್ನೋ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಅದಕ್ಕಾಗಿ ಮೆದುಳಿನ ಸ್ಕ್ಯಾನರ್‌ಗಳ ಮೊರೆ ಹೋಗಿದ್ದಾರೆ.
ತಜ್ಞರ ಪ್ರಕಾರ, ಕೆಲವೇ ಕೆಲವು ಲಕ್ಷಣಗಳನ್ನು ನೋಡಿ ಭವಿಷ್ಯದಲ್ಲಿ ಯಾರೂ ಭಯಾನಕ ಕೊಲೆಗಾರನಾಗಬಹುದು ಅಂತ ನಿರ್ಧರಿಸಲು ಸಾಧ್ಯವಿಲ್ಲ. ಏಕೆಂದರೆ ಅನೇಕ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರಚೋದನೆಯಿಂದಾಗಿ ತಪ್ಪು ಮಾಡಿರುತ್ತಾನೆ. ಆ ತಪ್ಪನ್ನು ಮುಚ್ಚಿಹಾಕಲು ಮತ್ತೆ ಮತ್ತೆ ತಪ್ಪು ಮಾಡುತ್ತಲೇ ಇರುತ್ತಾನೆ. ಇದನ್ನು ʻಕೋಲ್ಡ್ ಬ್ಲಡ್ʼ ಎಂದೂ ಸಹ ಕರೆಯುತ್ತಾರೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.
ಕೋಲ್ಡ್ ಬ್ಲಡ್ ಹಿಂದಿನ ಕಥೆ ಏನು?
ಸಾಮಾನ್ಯವಾಗಿ ಮನೋವಿಜ್ಞಾನಿಗಳು ಹೇಳುವ ಪ್ರಕಾರ, ಕೊಲೆಗಾರನ ಮನಸ್ಥಿತಿ ಹೊಂದಿರುವ ವ್ಯಕ್ತಿಗಳಲ್ಲಿ ಮೆದುಳಿನ ಕಾರ್ಟೆಕ್ಸ್ ಎಂಬ ಭಾಗವು ಸಾಮಾನ್ಯ ಸ್ಥಿತಿಗಿಂತ ಕೊಂಚ ಕುಗ್ಗಿರುತ್ತದೆ. ಇದಕ್ಕೆ ಉದಾಹರಣೆಯೂ ಇದೆ. 90ರ ದಶಕದಲ್ಲಿ ನ್ಯೂರೋ ಕ್ರಿಮಿನಾಲಜಿಸ್ಟ್ ಅಡ್ರಿಯನ್ ರಯಾನ್ ಅವರು ಕೋಲ್ಡ್-ಬ್ಲಡ್ ಕೊಲೆಗಾರರ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದರು. ಅದಕ್ಕಾಗಿ ಅಮೆರಿಕನ್ ಜೈಲುಗಳಿಗೆ ತೆರಳಿದ್ದರು. ಆಗ ಕ್ಯಾಲಿಫೋರ್ನಿಯಾ ಇಂತಹ ಕೊಲೆ ಪ್ರಕಣಗಳಿಂದ ಕುಖ್ಯಾತಿಯಾಗಿತ್ತು. ಆದ್ದರಿಂದ ರಯಾನ್ ಅವರು ಇಂತಹವರ ಮೆದುಳಿನಲ್ಲಿರುವ ಜೀವರಾಸಾಯನಿಕ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು 40ಕ್ಕೂ ಹೆಚ್ಚು ಕೈದಿಗಳ ʻಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿʼ (ಪಿಇಟಿ) ಟೆಸ್ಟ್ ಕೂಡ ನಡೆಸಿದ್ದರು. ಈ ವೇಳೆ ಮೆದುಳಿನ ಹಲವು ಭಾಗಗಳು ಕುಗ್ಗಿರುವುದು ಸ್ಕ್ಯಾನ್‌ನಲ್ಲಿ ಕಂಡುಬಂದಿತು. ರಯಾನ್ ತಮ್ಮ ಅಧ್ಯಯನ ವರದಿ ಬಿಡುಗಡೆ ಮಾಡಿದಾಗ ಜನರು ಆತನನ್ನು ಹುಚ್ಚ ಎಂದು ಕರೆಯಲು ಶುರು ಮಾಡಿದರು. ಕಾಲಾನಂತರದಲ್ಲಿ ಅದನ್ನು ಜನ ನಂಬತೊಡಗಿದರು. ಇದಾದ ಸ್ವಲ್ಪ ಸಮಯದ ನಂತರ ʻದಿ ಅನ್ಯಾಟಮಿ ಆಫ್ ವಯಲೆನ್ಸ್ʼ ಎಂಬ ಪುಸ್ತಕವನ್ನು ಹೊರತಂದರು, ಅದರಲ್ಲಿ ಡಾ.ರಯಾನ್ ಅಪರಾಧಿಗಳ ಮನಸ್ಸಿನಲ್ಲಿ ತಮ್ಮ 35 ವರ್ಷಗಳ ಅನುಭವವನ್ನು ದಾಖಲಿಸಿದರು.
ಪ್ರಿಫ್ರಂಟಲ್ ಕಾರ್ಟೆಕ್ಸ್‌ನಲ್ಲಿ ಈ ಕುಗ್ಗುವಿಕೆ ಏಕೆ ಆಗುತ್ತದೆ?
ವಿಜ್ಞಾನಿಗಳ ಪ್ರಕಾರ, ಇದಕ್ಕೆ ಹಲವು ಕಾರಣಗಳಿರಬಹುದು. ಆನುವಂಶಿಕವು ಆಗಿರಬಹುದು, ಕೆಲವೊಮ್ಮೆ ತಲೆಗೆ ಆಳವಾದ ಪೆಟ್ಟಾಗುವುದರಿಂದ, ಬಾಲ್ಯದಲ್ಲಿ ದೌರ್ಜನ್ಯಕ್ಕೆ ಒಳಗಾದವರು, ಕಷ್ಟದಿಂದ ಜೀವನ ನಡೆಸಿದವರಿಗೂ ಈ ರೀತಿ ಸಂಭವಿಸಬಹುದು. ಆದ್ರೆ ಸರಣಿ ಕೊಲೆಗಾರರ ಸ್ಥಿತಿ ಕೊಂಚ ವ್ಯತ್ಯಾಸ ಇರುತ್ತದೆ. ಅದರೂ ಅವರ ಆಲೋಚನೆ, ತಿಳಿವಳಿಕೆ ಹಾಗೂ ಒತ್ತಡಕ್ಕೆ ಒಳಗಾದ ಸನ್ನಿವೇಶಗಳು ಇವೆಲ್ಲವೂ ಅವರ ಮನಸ್ಥಿತಿಗೆ ಕಾರಣವಾಗಿರುತ್ತದೆ. ಅಂತಹವರು ತಮ್ಮ ಬಗ್ಗೆ ಬಿಟ್ಟು ಯಾರೊಬ್ಬರ ಬಗ್ಗೆಯೂ ಚಿಂತಿಸುವುದಿಲ್ಲ. ಒಂದು ವೇಳೆ ತಮ್ಮ ಮಾನಸಿಕ ಸ್ಥಿತಿಗೆ ತೊಂದರೆಯಾದ್ರೆ, ಪ್ಲ್ಯಾನ್ ಮಾಡಿ ಕೊಲೆ ಮಾಡುತ್ತಾರೆ. ಜೊತೆಗೆ ಕೊಲೆಯ ಪಶ್ಚಾತಾಪವೂ ಅವರಿಗೆ ಕಾಡುವುದಿಲ್ಲ, ಕೊಲೆ ಮಾಡಿರುವುದಾಗಿ ತಾವೇ ಒಪ್ಪಿಕೊಳ್ಳುತ್ತಾರೆ. ಇದೇ ರೀತಿ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್ & ಮರ್ಡರ್ ಆರೋಪಿ ಸಂಜಯ್ ರಾಯ್ ಪ್ರಕರಣದಲ್ಲೂ ಆಗಿದೆ ಎಂದು ಹೇಳಲಾಗಿದೆ.
ಪಾಲಿಗ್ರಾಫ್ ಟೆಸ್ಟ್ ಏಕೆ ಬೇಕು?
ಸುಳ್ಳುಪತ್ತೆ ಮಾಡುವಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತೆ ಎನ್ನುವ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ. ಈ ಪರೀಕ್ಷೆಯನ್ನು ಸಾಮಾನ್ಯವಾಗಿ, ಅಪರಾಧ ಪ್ರಕರಣದಲ್ಲಿ ಆರೋಪಿಗಳ ಮೇಲೆ ಮಾಡಲಾಗುತ್ತದೆ. ಆರೋಪಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದರೆ, ಆತನ ಮೇಲೆ ಸಿಕ್ಕಾಪಟ್ಟೆ ಡೌಟ್ ಇದ್ದಾಗ ಇಂಥ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹಾಗೆಂದು ಎಲ್ಲಾ ಆರೋಪಿಗಳ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಏಕೆಂದರೆ, ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಇಂಥ ಪರೀಕ್ಷೆಗೆ ಒಳಪಡುವ ಮೊದಲು ಆರೋಪಿ ಇದಕ್ಕೆ ಒಪ್ಪಿಗೆ ಸೂಚಿಸುವುದು ಕಡ್ಡಾಯ. ಒಂದು ವೇಳೆ ಆರೋಪಿ ಈ ಪರೀಕ್ಷೆಗೆ ಒಳಗಾಗಲು ಒಪ್ಪಿಗೆ ಸೂಚಿಸದೇ ಹೋದರೆ, ಆಗಲೂ ಪರೀಕ್ಷೆ ಮಾಡಿದರೆ, ಭಾರತೀಯ ಸಂವಿಧಾನದ ಆರ್ಟಿಕಲ್ 20(3) ಪ್ರಕಾರ ಅದು ಕಾನೂನು ವಿರೋಧಿ ಆಗುತ್ತದೆ.
ಬೆಂಗಳೂರು: ಈ ವರ್ಷ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ವಿಜ್ಞಾನ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು 596 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ರ‍್ಯಾಂಕ್ ಅನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ವಿಜ್ಞಾನ ವಿಭಾದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಪಟ್ಟಿ ಹೀಗಿದೆ.
596 ಅಂಕ ಪಡೆದ ವಿದ್ಯಾರ್ಥಿಗಳು:
ಎಸ್‌ಎಮ್ ಕೌಶಿಕ್ – ಗಂಗೋತ್ರಿ ಪಿಯು ಕಾಲೇಜು ಶ್ರೀನಿವಾಸಪುರ, ಕೋಲಾರ ಜಿಲ್ಲೆ
ಸುರಭಿ ಎಸ್ – ಆರ್‌ವಿ ಪಿಯು ಕಾಲೇಜು ಎನ್‌ಎಮ್‌ಕೆಆರ್‌ವಿ ಕ್ಯಾಂಪಸ್ 3ನೇ ಬ್ಲಾಕ್ ಜಯನಗರ, ಬೆಂಗಳೂರು
595 ಅಂಕ ಪಡೆದ ವಿದ್ಯಾರ್ಥಿಗಳು:
ಕಟ್ಟೋಜು ಜಯಿಶಿಕ – ಆರ್‌ವಿ ಪಿಯು ಕಾಲೇಜು ಎನ್‌ಎಮ್‌ಕೆಆರ್‌ವಿ ಕ್ಯಾಂಪಸ್ 3ನೇ ಬ್ಲಾಕ್ ಜಯನಗರ, ಬೆಂಗಳೂರು
ಸಾತ್ವಿಕ್ ಪದ್ಮನಾಭ ಭಟ್ – ಮಹಾತ್ಮಗಾಂಧಿ ಮೆಮೋರಿಯಲ್ ಪಿಯು ಕಾಲೇಜು, ಉಡುಪಿ
ಜೆಸ್ವಿತ ದಿಯಾಸ್ – ಪೂರ್ಣಪ್ರಜ್ಞಾ ಪಿಯು ಕಾಲೇಜು, ಉಡುಪಿ
594 ಅಂಕ ಪಡೆದ ವಿದ್ಯಾರ್ಥಿಗಳು:
ಹರ್ಷಿತ ಆರ್ – ನಾರಾಯಣ ಪಿಯು ಕಾಲೇಜು, ಬೆಂಗಳೂರು
ನೇಹಾ ರಾವ್ – ಶ್ರೀ ವೆಂಕಟರಮಣ ಪಿಯು ಕಾಲೇಜು, ಕುಂದಾಪುರ, ಉಡುಪಿ
ಅದಿತಿ ಆರ್ – ಎನ್‌ಎಮ್‌ಕೆಆರ್‌ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
ರುಚಿತಾ ಎಂ – ಸರ್ವೋದಯ ಪಿಯು ಕಾಲೇಜು, ತುಮಕೂರು
ಸಮಯ ಸದಾನಂದ ಮಬೆನ್ – ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
ಯೋಗೇಶ್ ತುಕರಾಮ್ ಬಡಚಿ – ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು ದಕ್ಷಿಣ ಕನ್ನಡ ಜಿಲ್ಲೆ
ರಜತ ಎಂ ಹೆಗಡೆ – ಎಂಇಎಸ್ ಚೈತನ್ಯ ಪಿಯು ಕಾಲೇಜು, ಉತ್ತರ ಕನ್ನಡ ಜಿಲ್ಲೆ
ಸಿರಿ ಆರ್ ಆಚಾರ್ಯ – ಆರ್‌ವಿ ಪಿಯು ಕಾಲೇಜು, ಎನ್‌ಎಮ್‌ಕೆಆರ್‌ವಿ ಕ್ಯಾಂಪಸ್ 3ನೇ ಬ್ಲಾಕ್ ಜಯನಗರ, ಬೆಂಗಳೂರು
ಪ್ರಚಿತ ಎಂ – ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
ವಿಜಯಪುರ: ಸೈನ್ಸ್ (Science) ಓದಲು ಇಷ್ಟವಿಲ್ಲದ ಕಾರಣ ವಿದ್ಯಾರ್ಥಿನಿ (Student) ನೇಣಿಗೆ ಶರಣಾದ ಘಟನೆ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ಪದ್ಮಾವತಿ ಸಂಜಯ ಮೇಟಿ (17) ನೇಣಿಗೆ ಶರಣಾದ ಪ್ರಥಮ ಪಿಯುಸಿ (PUC) ವಿದ್ಯಾರ್ಥಿನಿ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಕೋಲ ಮಾಪುರ ಮೂಲದ ಪದ್ಮಾವತಿ, ಡೆತ್‍ನೋಟ್ ಬರೆದಿಟ್ಟು ವಸತಿ ನಿಲಯದ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾಳೆ.
ಡೆತ್‍ನೋಟ್‍ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ನನಗೆ ಸೈನ್ಸ್ ಓದಲು ಇಷ್ಟವಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಲಿದೆ ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿಟ್ಟು ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]