Tag: Schoolgirl

  • ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ

    ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ

    ಚೆನ್ನೈ: ಹಾಸ್ಟೆಲ್ ವಾರ್ಡನ್, ಶಾಲಾ ಬಾಲಕಿಯೋರ್ವಳ ಕುಟುಂಬವನ್ನು ಮತಾಂತರ ಆಗುವಂತೆ ಪೀಡಿಸುತ್ತಿದ್ದ ಹಿನ್ನೆಲೆ ಬಾಲಕಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಂಜವೂರ್‌ನಲ್ಲಿ ವರದಿಯಾಗಿದೆ.

    ಬಾಲಕಿ ಸಾವಿಗೆ ಶರಣಾಗುವ ಮುನ್ನ ವೀಡಿಯೋ ಮಾಡಿದ್ದು, ನನ್ನ ಕುಟುಂಬಕ್ಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ನನ್ನ ಹಾಸ್ಟೆಲ್ ವಾರ್ಡನ್ ಕಿರುಕುಳ ನೀಡುತ್ತಿದ್ದು, ಅಷ್ಟೇ ಅಲ್ಲದೆ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಹಾಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಬಾಲಕಿ ಹೇಳಿಕೊಂಡಿದ್ದಾಳೆ. ಈ ಘಟನೆ ಜನವರಿ 9 ರಂದು ನಡೆದಿದೆ. ವಿಷ ಸೇವಿಸಿದ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನ ಎಳೆದೊಯ್ದು ಅತ್ಯಾಚಾರ ಮಾಡಿದ್ರು

    ಬಾಲಕಿ ತಿಳಿಸಿರುವಂತೆ ಹಾಸ್ಟೆಲ್ ವಾರ್ಡನ್ ಮೊದಲು ಬಾಲಕಿಯ ಪೋಷಕರಲ್ಲಿ ಆಕೆಯ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ತಿಳಿಸಿದ್ದರಂತೆ. ಬಳಿಕ ಆಕೆಯ ಕುಟುಂಬಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯ ವೀಡಿಯೋ ಹೇಳಿಕೆಯನ್ನು ಪರಿಗಣಿಸಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹಾಸ್ಟಲ್‌ ವಾರ್ಡನ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಡಾನ್ಸ್ ಮಾಡಿದ ವಧುವಿನ ಕೆನ್ನೆಗೆ ಹೊಡೆದ ವರ- ಮದುವೆ ಮುರಿದು ಬಿತ್ತು

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ವೀಡಿಯೋ  ಶೇರ್ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಇತ್ತ ಈ ಪ್ರಕರಣ ರಾಜಕೀಯ ತಿರುವು ಕೂಡ ಪಡೆದುಕೊಳ್ಳುತ್ತಿದೆ.

  • ವಿದ್ಯಾರ್ಥಿನಿಗೆ ಕಚ್ಚಿದ ಕೋತಿ- ಸೊಳ್ಳೆ ಪರದೆ ಸಹಾಯದಿಂದ ಸೆರೆ

    ವಿದ್ಯಾರ್ಥಿನಿಗೆ ಕಚ್ಚಿದ ಕೋತಿ- ಸೊಳ್ಳೆ ಪರದೆ ಸಹಾಯದಿಂದ ಸೆರೆ

    ರಾಮನಗರ: ಶಾಲಾ ವಿದ್ಯಾರ್ಥಿನಿಗೆ ಕಚ್ಚಿ ಘಾಸಿಗೊಳಿಸಿದ ಕೋತಿಯನ್ನು ಗ್ರಾಮದ ಜನರು ಸೆರೆಹಿಡಿದಿದ್ದಾರೆ. ಘಟನೆ ರಾಮನಗರ ತಾಲೂಕಿನ ನಾಗೋಹಳ್ಳಿಯಲ್ಲಿ ನಡೆದಿದೆ.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ನಿನ್ನೆ ಮಂಗವೊಂದು ಕಚ್ಚಿ ತೀವ್ರ ಗಾಯ ಮಾಡಿತ್ತು. ಬಳಿಕ ಸಾರ್ವಜನಿಕರು ವಿದ್ಯಾರ್ಥಿನಿಯನ್ನು ಮಂಗನಿಂದ ರಕ್ಷಿಸಿದ್ದರು.

    ಕೈಲಾಂಚ ಹೋಬಳಿ ಪ್ರದೇಶದಲ್ಲಿ ಮಂಗಗಳ ಹಾವಳಿ ಹೆಚ್ಚಿದ್ದು, ಇಂದು ಗ್ರಾಮದ ಜನರು ಒಟ್ಟಾಗಿ ತೊಂದರೆ ಕೊಟ್ಟ ಕೋತಿಯನ್ನು ಸೆರೆ ಹಿಡಿದಿದ್ದಾರೆ. ಕೋತಿಯನ್ನು ಹಿಡಿಯಲು ಗ್ರಾಮಸ್ಥರು ಸೊಳ್ಳೆ ಪರದೆಯನ್ನು ಬಳಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಪಡಿತರ ಅಕ್ಕಿ ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು

    ಗಾಯಗೊಂಡಿದ್ದ ವಿದ್ಯಾರ್ಥಿನಿಗೆ ಕೈಲಾಂಚ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಸಾರ್ವಜನಿಕರು ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ವಿದ್ಯಾರ್ಥಿನಿಯ ಪೋಷಕರು ರಾಮನಗರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

  • ಶಾಲೆ ಆರಂಭವಾಗುತ್ತಿದ್ದಂತೆ ಗದಗದ 10 ಜನ ಶಿಕ್ಷಕರಿಗೆ ಕೊರೊನಾ

    ಶಾಲೆ ಆರಂಭವಾಗುತ್ತಿದ್ದಂತೆ ಗದಗದ 10 ಜನ ಶಿಕ್ಷಕರಿಗೆ ಕೊರೊನಾ

    ಗದಗ: ರಾಜ್ಯಾದ್ಯಂತ ವರ್ಷದ ಆರಂಭದಲ್ಲಿ ಶಾಲಾ ಕಾಲೇಜು ಮತ್ತೆ ಪ್ರಾರಂಭವಾಗಿ ಎಲ್ಲಾ ಮಕ್ಕಳಿಗೆ ಸಂತಸ ತಂದಿದೆ. ಆದ್ರೆ ಗದಗ ಜಿಲ್ಲೆಯ ಕೆಲ ಮಕ್ಕಳಿಗೆ ಮಾತ್ರ ಈ ವರ್ಷವು ಕೂಡ ಕಹಿಯಾಗಿದೆ. ಗದಗ ಜಿಲ್ಲೆಯಲ್ಲಿ ಶಾಲೆ ಆರಂಭವಾಗುತ್ತಿದ್ದಂತೆಯೇ 10 ಜನ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 5 ಶಾಲೆಗಳನ್ನು ಬಂದ್ ಮಾಡಲಾಗಿದೆ.

    ಕೋವಿಡ್-19 ಹಿನ್ನೆಲೆ ಕಳೆದ 10 ತಿಂಗಳಿನಿಂದ ಮುಚ್ಚಲಾಗಿದ್ದ ಶಾಲಾ ಕಾಲೇಜುಗಳನ್ನು ಸರ್ಕಾರ ಹೊಸ ವರ್ಷದ ಆರಂಭದಲ್ಲಿ ಪುನಾರಂಭಿಸಲು ನಿರ್ಧರಿಸಿ ಇದೀಗ 10ನೇ ತರಗತಿ ಹಾಗೂ ಪಿಯುಸಿ ತರಗತಿಗಳನ್ನು ತೆರೆಯಲಾಗಿದೆ.

    ಗದಗ ಜಿಲ್ಲೆಯಾದ್ಯಂತ 10 ಜನ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಐದು ಶಾಲೆಯ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಶಿಕ್ಷಣ ನೀಡಲಾಗುತ್ತಿಲ್ಲ. ಗದಗ ನಗರದ ಮೂರು ಹಾಗೂ ಜಿಲ್ಲೆಯ ಎರಡು ಶಾಲೆಯನ್ನು ಬಂದ್ ಮಾಡಲಾಗಿದೆ.

    ಶಿಕ್ಷಕರಿಗೆ ಕೊರೊನಾ ಸೋಂಕು ಇರುವ ಹಿನ್ನೆಲೆ 2 ಬಾರಿ ಶಾಲೆಯನ್ನು ಸ್ವಚ್ಛಗೊಳಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಒಟ್ಟು 6,665 ಶಿಕ್ಷಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 10 ಜನರಿಗೆ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆಯ ಮೇರೆಗೆ ಶಿಕ್ಷಕರು ಈಗ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಗದಗದ ಡಿಡಿಪಿಐ ಬಸವಲಿಂಗಪ್ಪ ಹೇಳಿಕೆ ನೀಡಿದ್ದಾರೆ.