Tag: school

  • ಕಲ್ಲಡ್ಕ ಪ್ರಭಾಕರ್‍ ಭಟ್‍ಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬರಲಿದೆ: ರಮಾನಾಥ ರೈ

    ಕಲ್ಲಡ್ಕ ಪ್ರಭಾಕರ್‍ ಭಟ್‍ಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬರಲಿದೆ: ರಮಾನಾಥ ರೈ

    ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಅವರಿಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬರಲಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಅವರು ವಾಗ್ದಾಳಿ ನಡೆಸಿದ್ದಾರೆ.

    ಬಂಟ್ವಾಳ ತಾಲೂಕಿನ ಬಿಸಿ ರೋಡ್‍ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಭಾಕರ್ ಭಟ್ ಅವರು ಜನರಲ್ಲಿ ಭಿಕ್ಷೆ ಕೇಳುತ್ತಿದ್ದಾರೆ. ಮಕ್ಕಳ ಕೈಯಲ್ಲಿ ತಟ್ಟೆ ಹಿಡಿದು ರಸ್ತೆಯಲ್ಲಿ ನಿಲ್ಲಿಸಿದ್ದಕ್ಕೆ ಇನ್ನು ಮುಂದೆ ಇವರೇ ತಟ್ಟೆ ಹಿಡಿದು ನಿಲ್ಲುವ ಪರಿಸ್ಥಿತಿ ಬರಲಿದೆ. ಭಿಕ್ಷೆ ಬೇಡುವಂಥ ಸ್ಥಿತಿ ಇವರಿಗೆ ಬರಲಿದೆ ಅಂತಾ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

    ನಾವು ಬಡವರ ಹೊಟ್ಟೆಗೆ ಮೇಲೆ ಹೊಡೆಯುವುದಿಲ್ಲ. ಮಕ್ಕಳು ತಟ್ಟೆ ಹಿಡಿಯ ಬೇಕಾಗಿಲ್ಲ ಇವರು ತಟ್ಟೆ ಹಿಡಿಯಬೇಕು. ಪ್ರಜ್ಞಾವಂತ ನಾಗರೀಕರು ಇವುಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು.

    ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಸರ್ಕಾರ ಅನುದಾನ ಕಡಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಎರಡೂ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳು ಆಗಸ್ಟ್ ನಲ್ಲಿ ಬಿಸಿ ರೋಡ್‍ನಲ್ಲಿ ತಟ್ಟೆ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದ್ದರು.

  • ವಿಡಿಯೋ: ನೈಟ್ರೋಜನ್ ತುಂಬಿದ್ದ ಬಲೂನ್‍ಗಳ ಸ್ಫೋಟ- 15 ಜನರಿಗೆ ಗಾಯ

    ವಿಡಿಯೋ: ನೈಟ್ರೋಜನ್ ತುಂಬಿದ್ದ ಬಲೂನ್‍ಗಳ ಸ್ಫೋಟ- 15 ಜನರಿಗೆ ಗಾಯ

    ಚಂಡೀಗಢ : ಬಲೂನ್‍ಗಳು ಸ್ಫೋಟಗೊಂಡ ಪರಿಣಾಮ 15 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಚಂಡೀಘಡದಲ್ಲಿ ನಡೆದಿದೆ.

    ಅಲೇನ್ ಕೆರಿಯರ್ ಇನ್ಸ್‍ಟಿಟ್ಯೂಟ್‍ನ ವಾರ್ಷಿಕೋತ್ಸವದ ವೇಳೆ ಹಳೆಯ ವಿದ್ಯಾರ್ಥಿಗಳು ಬಲೂನ್‍ಗಳನ್ನು ಗಾಳಿಯಲ್ಲಿ ಹಾರಿಬಿಟ್ಟ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.

    ನೈಟ್ರೊಜನ್ ತುಂಬಿದ್ದ ಬಲೂನ್‍ಗಳು ಬಲ್ಬ್‍ವೊಂದಕ್ಕೆ ಸಿಲುಕಿದ್ದು, ಉಷ್ಣತೆಯಿಂದಾಗಿ ಬಲೂನ್‍ಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.

    ಘಟನೆಯಲ್ಲಿ ಗಾಯಗೊಂಡವರನ್ನು ಇಲ್ಲಿನ ಸೆಕ್ಟರ್ 32ರ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಶಿಕ್ಷಕರೂ ಇವರೇ.. ಡ್ರೈವರೂ ಇವರೇ-ವೇತನದ ಶೇ.25ರಷ್ಟು ಬಡ ಮಕ್ಕಳಿಗೆ ಮೀಸಲು

    ಶಿಕ್ಷಕರೂ ಇವರೇ.. ಡ್ರೈವರೂ ಇವರೇ-ವೇತನದ ಶೇ.25ರಷ್ಟು ಬಡ ಮಕ್ಕಳಿಗೆ ಮೀಸಲು

    ಬೆಂಗಳೂರು: ಕೆಲ ಬಡ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರೋದು ಹಾಗೂ ವಾಪಾಸ್ ಕರೆದುಕೊಂಡು ಹೋಗೋದೇ ದೊಡ್ಡ ಸಮಸ್ಯೆ. ಕಾರಣ ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕಾಗಿರುತ್ತದೆ. ಇಂತಹ ಬಡವರ ಮಕ್ಕಳನ್ನು ತಾವೇ ಪೋಷಕರಂತೆ ಶಾಲೆಗೆ ಕೆರೆದುಕೊಂಡು ಬಂದು ಪುನಃ ವಾಪಸ್ ಕರೆದುಕೊಂಡು ಬಿಡುತ್ತಾರೆ. ನೆಲಮಂಗಲದ ಅಪರೂಪದ ಮೇಷ್ಟ್ರು ನಮ್ಮ ಇವತ್ತಿನ ಪಬ್ಲಿಕ್ ಹೀರೋ.

    ಮೂಲತಃ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದ ಮರುಳ ಸಿದ್ದಯ್ಯ ಅವರು ಕಳೆದ 19 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 5 ವರ್ಷಗಳಿಂದ ನೆಲಮಂಗಲ ತಾಲೂಕಿನ ಪಾಪಬೋವಿಪಾಳ್ಯದ ಶಾಲೆಯಲ್ಲಿ ಮರುಳ ಸಿದ್ದಯ್ಯ ಕೆಲಸ ಮಾಡಿಕೊಂಡಿದ್ದಾರೆ.

    ತಮ್ಮ ಶಾಲೆಗೆ ಬರೋ ಬಡವರ ಮಕ್ಕಳನ್ನು ಇವರೇ ತಮ್ಮ ಬೈಕ್ ಅಥವಾ ಕಾರಿನಲ್ಲಿ ಕರೆದುಕೊಂಡು ಬರುತ್ತಾರೆ. ಸಂಜೆ ಶಾಲೆ ಮುಗಿದ ಬಳಿಕ ಮತ್ತೆ ತಾವೇ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ.

    ಕಲ್ಲುಕ್ವಾರಿ, ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳನ್ನೆಲ್ಲಾ ಮರಳಿ ಶಾಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಂಬಳದಲ್ಲಿಯೇ ಬಡಮಕ್ಕಳಿಗೆ ಶೇ.25 ರಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇವರ ಸೇವೆಗೆ ಕುಟುಂಬ ಕೂಡಾ ಸಾಥ್ ನೀಡಿದೆ.

  • ಪುಸ್ತಕದಲ್ಲಿ ಹಾಜರ್, ಶಾಲೆಗೆ ಚಕ್ಕರ್- ಕುಡಿದು ಊರೆಲ್ಲಾ ತೂರಾಡೋ ಹೆಡ್ ಮಾಸ್ಟರ್

    ಪುಸ್ತಕದಲ್ಲಿ ಹಾಜರ್, ಶಾಲೆಗೆ ಚಕ್ಕರ್- ಕುಡಿದು ಊರೆಲ್ಲಾ ತೂರಾಡೋ ಹೆಡ್ ಮಾಸ್ಟರ್

    ರಾಯಚೂರು: ಸೆಪ್ಟಂಬರ್ ತಿಂಗಳು ಅಂದ್ರೆ ಅದು ಶಿಕ್ಷಕರಿಗೆ ಮೀಸಲು. ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವ ಉತ್ತಮ ಶಿಕ್ಷಕರನ್ನ ಗುರುತಿಸಿ ಇಡೀ ತಿಂಗಳು ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಆದರೆ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕ ಕಂ ಮುಖ್ಯೋಪಾಧ್ಯಾಯನೊಬ್ಬ ಶಾಲೆಗೆ ಬರದೇ ಕಂಠಪೂರ್ತಿ ಮದ್ಯ ಕುಡಿದು ಊರ ತುಂಬೆಲ್ಲಾ ತೂರಾಡುತ್ತಿರುತ್ತಾನೆ.

    ಸಿಂಧನೂರು ತಾಲೂಕಿನ ಮೀರಾಪುರ ಕ್ಯಾಂಪ್‍ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾರುತಿ ರಾಠೋಡ್‍ನನ್ನ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ನಿತ್ಯ ಕುಡಿದು ಟೈಟಾಗಿ ಶಾಲೆ, ರಸ್ತೆ ಎಲ್ಲೆಂದರಲ್ಲಿ ಮಲಗಿರುತ್ತಾನೆ. ಮಕ್ಕಳಿಗೆ ಪಾಠ ಹೇಳಿ ಅವರ ಭವಿಷ್ಯ ನಿರ್ಮಿಸುವ ಜವಾಬ್ದಾರಿ ಹೊತ್ತಿರೋ ಶಿಕ್ಷಕ ಇವನು. ಶಾಲೆಯ ಮುಖ್ಯೋಪಾಧ್ಯಾಯ ಆಗಿರುವುದರಿಂದ ಮನಸ್ಸಿಗೆ ಬಂದಾಗ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಕುಡಿದು ಊರೆಲ್ಲಾ ತೂರಾಡಿಕೊಂಡಿರುತ್ತಾನೆ.

    ಮೇಷ್ಟ್ರು ಪಾಠ ಹೇಳ್ತಾರೆ ಅಂತ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ನಿತ್ಯವೂ ನಿರಾಸೆ. ಈ ಕುಡುಕ ಮೇಷ್ಟ್ರಿಗೆ ಟೈಮ್ ಟೇಬಲ್ ಇಲ್ಲ. ಹೀಗಾಗಿ ಶಾಲೆಯ ಎಲ್ಲಾ ಕೋಣೆಗಳಿಗೂ ಯಾವಾಗಲೂ ಬೀಗ ಜಡಿದಿರುತ್ತೆ. ಮಾರುತಿ ರಾಠೋಡ್ ಅವಾಂತರ ಇಷ್ಟಕ್ಕೆ ಮುಗಿದಿಲ್ಲ. ಇವನ ದುರ್ವರ್ತನೆಯಿಂದ ಸಂಬಳ ತಡೆ ಹಿಡಿದರೆ ಕುಡಿದ ಅಮಲಿನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಜಗಳ ಆಡುತ್ತಾನೆ.

    ಮುಖ್ಯೋಪಾಧ್ಯಾಯನ ವಿರುದ್ಧ ದೂರು ನೀಡಿ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಈಗ ಕ್ರಮಕ್ಕೆ ಮುಂದಾಗಿರುವ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಮೊದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಕಳುಹಿಸಲು ಪೋಷಕರು ಹಿಂಜರಿಯುತ್ತಿರುವ ಹೊತ್ತಲ್ಲಿ ಇಂತಹ ಶಿಕ್ಷಕರು ಇನ್ನಷ್ಟು ಬೇಸರ ಮೂಡಿಸುತ್ತಿದ್ದಾರೆ.

  • ಹುಡುಗನೊಂದಿಗೆ ಮಾತಾಡಿದ್ದಕ್ಕೆ 13 ವರ್ಷದ ಮಗಳನ್ನ ಕೊಂದ ತಂದೆ

    ಹುಡುಗನೊಂದಿಗೆ ಮಾತಾಡಿದ್ದಕ್ಕೆ 13 ವರ್ಷದ ಮಗಳನ್ನ ಕೊಂದ ತಂದೆ

     

    ಹೈದರಾಬಾದ್: ಮರ್ಯಾದಾ ಹತ್ಯೆಗೆ ತೆಲಂಗಾಣದಲ್ಲಿ 13 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಹುಡುಗನೊಂದಿಗೆ ಮಾತನಾಡುತ್ತಿದ್ದಳೆಂಬ ಕಾರಣಕ್ಕೆ ತಂದೆಯೇ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಶವಕ್ಕೆ ಬೆಂಕಿ ಇಟ್ಟು, ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾಗಿ ತೆಲಂಗಾಣ ಪೊಲೀಸರು ಹೇಳಿದ್ದಾರೆ.

    13 ವರ್ಷದ ರಾಧಿಕಾ ಕೊಲೆಯಾದ ದುರ್ದೈವಿ. ಹೈದರಾಬಾದ್‍ನಿಂದ 130 ಕಿ.ಮೀ ದೂರದಲ್ಲಿರುವ ಚಿಂತಪಲ್ಲಿ ಗ್ರಾಮದಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ. ಬಾಲಕಿ ರಾಧಿಕಾ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ರಾಧಿಕಾ ಯಾವಾಗ್ಲೂ ತುಂಬಾ ಉತ್ಸುಕಳಾಗಿರುತ್ತಿದ್ದಳು. ಹಾಡು ಹೇಳೋದು ಅವಳಿಗೆ ತುಂಬಾ ಇಷ್ಟ ಅಂತ ಆಕೆಯ ಕ್ಲಾಸ್‍ಮೇಟ್‍ಗಳು ಹೇಳಿದ್ದಾರೆ.

    ರಾಧಿಕಾ ತಂದೆ ನರಸಿಂಹ ಕೃಷಿಕನಾಗಿದ್ದು, ತನ್ನ ಮಗಳು ಅದೇ ಗ್ರಾಮದ ಹುಡುಗನೊಬ್ಬನೊಂದಿಗೆ ಆಗಾಗ ಮಾತನಾಡುತ್ತಿದ್ದುದನ್ನು ಗಮನಿಸಿದ್ದ. ಸೆಪ್ಟೆಂಬರ್ 15ರಂದು ಸಂಜೆ ರಾಧಿಕಾ ಶಾಲೆ ಮುಗಿದ ನಂತರ ಮನೆಗೆ ಬಂದು, ಮನೆಯಲ್ಲಿ ಯಾರೂ ಇಲ್ಲವಾದ ಕಾರಣ ಹತ್ತಿರದಲ್ಲೇ ಇದ್ದ ಸಂಬಂಧಿಕರ ಮನೆಗೆ ಹೋಗಿದ್ದಳು.

    ರಾಧಿಕಾ ಪೋಷಕರು ಕೆಲಸ ಮುಗಿಸಿ ಹಿಂದಿರುಗಿದ ನಂತರ ರಾಧಿಕಾ ಅದೇ ಹುಡುಗನೊಂದಿಗೆ ಮಾತನಾಡುತ್ತಿದ್ದುದನ್ನು ನೋಡಿದ್ದರು. ಆ ಹುಡುಗನೊಂದಿಗೆ ಮಾತನಾಡುವ ಸಲುವಾಗೇ ಆಕೆ ಸಂಬಂಧಿಕರ ಮನೆಗೆ ಆಗಾಗ ಹೋಗ್ತಿರ್ತಾಳೆ ಎಂದು ಭಾವಿಸಿ, ಈ ಬಗ್ಗೆ ರಾಧಿಕಾಳನ್ನ ಪ್ರಶ್ನಿಸಿದ್ದರು. ಆಗ ರಾಧಿಕಾ ಹಾಗೇ ಸುಮ್ಮನೆ ಮಾತಾಡುತ್ತಿದ್ದೆವು ಅಷ್ಟೇ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ನರಸಿಂಹ, ಕುಟುಂಬದ ಮರ್ಯಾದೆ ಹಾಳು ಮಾಡುತ್ತಿದ್ದೀಯ ಎಂದು ಕೋಪದಲ್ಲಿ ರಾಧಿಕಾಗೆ ಹೊಡೆಯಲು ಶುರುಮಾಡಿದ್ದ. ಕೋಪದಿಂದ ಆಕೆಯ ಕತ್ತು ಹಿಸುಕಿದ್ದ.

    ನಂತರ ಬಾಲಕಿ ಸತ್ತಿದ್ದಾಳೆಂದು ಭಯಗೊಂಡು ತಾಯಿ ಲಿಂಗಮ್ಮ ಹಾಗೂ ತಂದೆ ನರಸಿಂಹ ಶವಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ನಂತರ ಬಾಲಕಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರು ದಾಖಲಿಸಿದ್ದರು.

    ಆದ್ರೆ ಮಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿ ಕೊಲೆಯಾಗಿರುವುದು ದೃಢಪಟ್ಟಿದೆ. ಬಾಲಕಿಯ ನಾಲಗೆ ಹೊರಗೆ ಚಾಚಿದ್ದರಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಶವಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

    ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ಆ ವ್ಯಕ್ತಿ ಅಕ್ಕಪಕ್ಕ ಓಡಾಡಿ ಇತರೆ ವಸ್ತುಗಳಿಗೂ ಬೆಂಕಿ ಹೊತ್ತಿಕೊಳ್ಳುತ್ತದೆ. ಆದ್ರೆ ರಾಧಿಕಾಳ ದೇಹ ಅರ್ಧ ಸುಟ್ಟಿದ್ದು, ಒಂದೇ ಸ್ಥಳದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಮೊದಲೇ ಆಕೆಯನ್ನು ಕೊಂದು ನಂತರ ಶವಕ್ಕೆ ಬೆಂಕಿ ಹಚ್ಚಲಾಗಿದೆ ಎಂಬ ಅನುಮಾನವಿತ್ತು ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಬಾಲಿ ಗಂಗಾರೆಡ್ಡಿ ತಿಳಿಸಿದ್ದಾರೆ.

    ತಂದೆ ತಾಯಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಮಗಳನ್ನು ಕೊಲೆ ಮಡಿರುವುದಾಗಿ ತಂದೆ ಒಪ್ಪಿಕೊಂಡಿದ್ದಾನೆ. ರಾಧಿಕಾಳೊಂದಿಗೆ ಮಾತನಾಡುತ್ತಿದ್ದ ಹುಡುಗ ನನ್ನನ್ನು ನೋಡಿ ಓಡಿಹೋದ. ಕುಟುಂಬದ ಮರ್ಯಾದೆ ಹಾಳುಮಾಡುತ್ತಿದ್ದಾಳೆಂಬ ಕೋಪದಲ್ಲಿ ಆಕೆಯನ್ನು ಕೊಂದೆ ಎಂದು ನರಸಿಂಹ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

    ನರಸಿಂಹ ಯಾವಾಗ್ಲೂ ಬಾಲಕಿಯನ್ನ ಶಿಸ್ತಿನಲ್ಲಿಡಲು ಪ್ರಯತ್ನಿಸುತ್ತಿದ್ದ. ರಾಧಿಕಾಗೆ ಗಾಯಕಿಯಾಗಬೇಕೆಂಬ ಕನಸಿತ್ತು. ಆಕೆ ಸಂಗೀತ ಕಾರ್ಯಕ್ರಮಗಳನ್ನು ನೋಡಿ ಅದನ್ನು ಅನುಕರಿಸುತ್ತಿದ್ದುದನ್ನು ತಂದೆ ವಿರೋಧಿಸುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಪೊಲೀಸರು ರಾಧಿಕಾ ಪೋಷಕರ ವಿರುದ್ಧ ಕೊಲೆ ಹಾಗು ಸಾಕ್ಷಿ ನಾಶ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

  • ಶಾಲೆಯ 3ನೇ ಮಹಡಿಯಿಂದ ತಳ್ಳಿ ಬಾಲಕಿಯ ಕೊಲೆ!

    ಶಾಲೆಯ 3ನೇ ಮಹಡಿಯಿಂದ ತಳ್ಳಿ ಬಾಲಕಿಯ ಕೊಲೆ!

    ಲಕ್ನೋ: ಗುರ್ಗಾವ್‍ನ ಶಾಲೆಯೊಂದರ ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕನ ಕೊಲೆ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಶಾಲೆಯ ಮೂರನೇ ಮಹಡಿಯಿಂದ ಬಾಲಕಿಯನ್ನು ತಳ್ಳಿ ಕೊಲೆ ಮಾಡಲಾಗಿದೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.

    ಇಲ್ಲಿನ ಡಿಯೋರಿಯಾದ ಮಾರ್ಡನ್ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಸೋಮವಾರದಂದು ಈ ಘಟನೆ ನಡೆದಿದೆ. 16 ವರ್ಷದ ಬಾಲಕಿ ನೀತು ಚೌಹಾಣ್ ಮೂರನೇ ಮಹಡಿಯಲ್ಲಿದ್ದ ಟಾಯ್ಲೆಟ್‍ಗೆ ಹೋಗಿದ್ದು, ಅಲ್ಲಿಂದ ಕೆಳಗೆ ಬಿದ್ದಿದ್ದಾಳೆ. ಆಕೆಯ ಕ್ಲಾಸ್‍ರೂಮ್ ಮೊದಲನೇ ಮಹಡಿಯಲ್ಲಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಕೆಳಗೆ ಬಿದ್ದ ನೀತೂಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಅಲ್ಲಿಂದ ಗೋರಖ್‍ಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಯಿತು ಎಂದು ಎಸ್‍ಎಸ್‍ಪಿ ರಾಜೀವ್ ಮಲ್ಹೋತ್ರಾ ಹೇಳಿದ್ದಾರೆ.

    ನಮ್ಮ ಮಗಳನ್ನು ಯಾರೋ ಮೇಲಿನಿಂದ ತಳ್ಳಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಬಾಲಕಿಯ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

    ಪೋಷಕರ ಪ್ರತಿಭಟನೆಗೆ ಹೆದರಿ ಶಾಲೆಯ ಆಡಳಿತ ಮಂಡಳಿ ಶಾಲೆಯನ್ನ ಲಾಕ್ ಮಾಡಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಘಟನೆ ನಡೆದಾಗಿನಿಂದ ಶಾಲೆಯ ಮುಖ್ಯೋಪಾಧ್ಯಾಯರಾದ ಆದ್ಯ ತಿವಾರಿ ಅವರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ವರದಿಯಾಗಿದೆ.

    ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ವಹಿಸಿದ್ದು, ಅವರು ಡಿಇಓ(ಡಿಸ್ಟ್ರಿಕ್ಟ್ ಇನ್‍ಸ್ಪೆಕ್ಟರ್ ಆಫ್ ಸ್ಕೂಲ್ಸ್) ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆಂದು ಎಸ್‍ಎಸ್‍ಪಿ ಹೇಳಿದ್ದಾರೆ.

  • ಶಾಲೆಯಲ್ಲಿ ಅಗ್ನಿ ಅವಘಡ: 23 ವಿದ್ಯಾರ್ಥಿಗಳು ಸೇರಿ 25 ಮಂದಿ ದಾರುಣ ಸಾವು

    ಶಾಲೆಯಲ್ಲಿ ಅಗ್ನಿ ಅವಘಡ: 23 ವಿದ್ಯಾರ್ಥಿಗಳು ಸೇರಿ 25 ಮಂದಿ ದಾರುಣ ಸಾವು

    ಕೌಲಾಲಂಪುರ್: ಮಲೇಷ್ಯಾದ ಧಾರ್ಮಿಕ ಶಾಲೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 23 ವಿದ್ಯಾರ್ಥಿಗಳು ಸೇರಿ ಒಟ್ಟು 25 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಮಲೇಷ್ಯಾದ ರಾಜಧಾನಿ ಕೌಲಾಲಂಪೂರ್ ಹೃದಯಭಾಗದಲ್ಲಿರುವ ತಹಫಿಜ್ ದಾರುಲ್ ಖುರಾನ್ ಇತ್ತಿಪಾಖಿಯಾ ಧಾರ್ಮಿಕ ಕೇಂದ್ರದ ಎರಡು ಅಂತಸ್ತುಗಳ ಕಟ್ಟಡದಲ್ಲಿ ಗುರುವಾರ ಮುಂಜಾನೆ ಸುಮಾರು 5.40ರ ವೇಳೆಗೆ ವಿದ್ಯಾರ್ಥಿಗಳು ಕುರಾನ್ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಮುಂಜಾನೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಾವು ಮಲಗಿದ್ದ ಕೋಣೆಯಿಂದ ಶಾಲೆಯಲ್ಲಿ ಬೆಂಕಿ ಹೊತ್ತಿ ಉರಿಯುವುದನ್ನು ಗಮನಿಸಿದ್ದರು. ತಕ್ಷಣ ಅವರು ಸಮೀಪದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.

    ಕೂಡಲೇ ಮಲೇಷ್ಯಾದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಆದರೆ ಅಷ್ಟು ಹೊತ್ತಿಗೆ ಸಾವು-ನೋವುಗಳು ಸಂಭವಿಸಿತ್ತು. ಈ ಅಗ್ನಿ ಅವಘಡದಲ್ಲಿ 23 ವಿದ್ಯಾರ್ಥಿಗಳು ಮತ್ತು ಇಬ್ಬರು ವಾರ್ಡನ್‍ಗಳು ಮೃತಪಟ್ಟಿದ್ದಾರೆ ಅಂತ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಬೆಂಕಿಯಿಂದ ಕೆಲವರು ಉಸಿರಾಡಲು ಸಾಧ್ಯವಾಗದೇ ಮತ್ತು ಕೆಲವರು ಬೆಂಕಿಯಿಂದ ಪಾರಾಗಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ. ಇನ್ನು ಅವಘಡದಲ್ಲಿ ಗಾಯಗೊಂಡ 7 ಮಂದಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ 11 ಮಂದಿಯನ್ನು ಅಪಾಯದಿಂದ ರಕ್ಷಿಸಲಾಗಿದೆ. ಈ ಶಾಲೆಯಲ್ಲಿ 5 ರಿಂದ 18 ವರ್ಷದವರೆಗಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು.

    ಕಳೆದ 20 ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ಅವಘಡಗಳಲ್ಲಿ ಇದು ಒಂದು ಎಂದು ಕೌಲಾಲಂಪೂರ್ ಅಗ್ನಿ ಮತ್ತು ರಕ್ಷಣಾ ಇಲಾಖೆಯ ನಿರ್ದೇಶಕ ಖಿರುದ್ದೀನ್ ದ್ರಾಮನ್ ತಿಳಿಸಿದ್ದಾರೆ. ಈ ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

    https://twitter.com/amalyna07/status/908143263957131264?ref_src=twsrc%5Etfw&ref_url=http%3A%2F%2Fwww.india.com%2Fnews%2Fworld%2Fmalaysia-25-including-students-killed-in-fire-at-kuala-lumpur-school-2470024%2F

  • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣಕ್ಕೆ ಟಾಯ್ಲೆಟ್ ನಲ್ಲೂ ಸಿಸಿಟಿವಿ ಅಳವಡಿಸಿ- ಪೊಲೀಸರ ಸುತ್ತೋಲೆ

    ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣಕ್ಕೆ ಟಾಯ್ಲೆಟ್ ನಲ್ಲೂ ಸಿಸಿಟಿವಿ ಅಳವಡಿಸಿ- ಪೊಲೀಸರ ಸುತ್ತೋಲೆ

    ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಿಸೋ ಸಲುವಾಗಿ ಪೊಲೀಸ್ ಇಲಾಖೆ ಶಾಲೆಗಳಿಗೆ ಸುತ್ತೋಲೆಯೊಂದನ್ನ ನೀಡಿದೆ.

    ಶಾಲೆಗಳ ಬಾತ್‍ರೂಂ, ವಾಷ್‍ರೂಂಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಬಾತ್‍ರೂಂನಲ್ಲಿನ ದೃಶ್ಯಗಳು ಡಿವಿಆರ್‍ನಲ್ಲಿ ರೆಕಾರ್ಡ್ ಆಗಬೇಕು ಎಂದು ಬೆಂಗಳೂರು ಪೊಲೀಸ್ ಇಲಾಖೆಯಿಂದ ಶಾಲೆಗಳಿಗೆ ಸುತ್ತೋಲೆ ಹೋಗಿದೆ.

    ಬೆಂಗಳೂರು ನಗರದ 12 ಖಾಸಗಿ ಶಾಲೆಗಳಿಗೆ ಪೊಲೀಸ್ ಇನ್ಸ್ ಪೆಕ್ಟರ್‍ಗಳಿಂದ ಹೀಗೊಂದು ಸುತ್ತೋಲೆ ಹೋಗಿದೆ. ಬಾತ್‍ರೂಂಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂಬ ಪೊಲೀಸ್ ಇಲಾಖೆಯ ಈ ಸುತ್ತೋಲೆ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

    ಕೆಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 30ರ ರಾತ್ರಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. 8 ವರ್ಷದ ಬಾಲಕಿಯ ಮೇಲೆ 13 ವರ್ಷದ ಬಾಲಕ ಬಾತ್ ರೂಮ್‍ನಲ್ಲಿ ಅತ್ಯಾಚಾರ ನಡೆಸಿದ್ದ. ಹುಡುಗಿಯ ಮೇಲೆ ದೌರ್ಜನ್ಯ ನಡೆಯುವಾಗ ಹೊರಗಡೆ ಬಾಲಕನೊಬ್ಬ ಕಾವಲು ಕಾಯ್ತಿದ್ದ. ಹೀಗಾಗಿ ಎಲ್ಲಾ ಶಾಲೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದ ಪೊಲೀಸರು ಶಾಲೆಯಲ್ಲಿ ಕಡ್ಡಾಯವಾಗಿ ಸಿಸಿಟಿವಿ ಹಾಕುವಂತೆ ಹೇಳಿದ್ದಾರೆ. ಮಕ್ಕಳನ್ನು ಯಾರು ಟಾಯ್ಲೆಟ್ ಒಳಗೆ ಕರೆದುಕೊಂಡು ಹೋಗ್ತಾರೆ ಅನ್ನೋ ದೃಷ್ಟಿಯಿಂದ ಟಾಯ್ಲೆಟ್‍ನಲ್ಲೂ ಸಿಸಿಟಿವಿ ಹಾಕಲು ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ:  ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕನನ್ನು ಕೊಂದಿದ್ದು ಹೇಗೆ: ಶಾಕಿಂಗ್ ಸಂಗತಿ ಬಾಯ್ಬಿಟ್ಟ ಕಂಡಕ್ಟರ್ 

    ಇದನ್ನೂ ಓದಿ:   2ನೇ ಕ್ಲಾಸ್ ಬಾಲಕನ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಅನುಮಾನ- ಟಾಯ್ಲೆಟ್‍ನಲ್ಲಿದ್ದ ಕಿಟಕಿಗೆ ಕಂಬಿ ಇರ್ಲಿಲ್ಲ

  • ಬಿಸಿ ಊಟದ ಕೆಲಸದವ್ರಿಗೆ ಕೈ ತುಂಬಾ ಸಂಬಳ- ಕೆಲಸ ಮಾಡೋದು ಮಾತ್ರ ವಿದ್ಯಾರ್ಥಿಗಳು

    ಬಿಸಿ ಊಟದ ಕೆಲಸದವ್ರಿಗೆ ಕೈ ತುಂಬಾ ಸಂಬಳ- ಕೆಲಸ ಮಾಡೋದು ಮಾತ್ರ ವಿದ್ಯಾರ್ಥಿಗಳು

    ವಿಜಯಪುರ: ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಬಿಸಿ ಊಟದ ವ್ಯವಸ್ಥೆ ಮಾಡಿದೆ. ಬಿಸಿ ಊಟದ ಕೆಲಸಕ್ಕಾಗಿಯೇ ಅಡುಗೆಯವರನ್ನೂ ನೇಮಿಸಿದೆ. ವಿಜಯಪುರದಲ್ಲಿ ಬಿಸಿ ಊಟದ ಕೆಲಸದವರು ಕೈ ತುಂಬಾ ಸಂಬಳ ತೆಗೆದುಕೊಳ್ತಾರೆ. ಆದ್ರೆ ಅವರ ಕೆಲಸವನ್ನೆಲ್ಲಾ ವಿದ್ಯಾರ್ಥಿಗಳೇ ಮಾಡುತ್ತಾರೆ.

    ಇದು ನಗರದ ಶಾಲೆ ನಂ 38 ಉರ್ದು ಶಾಲೆಯ ಕಥೆ. ಇಲ್ಲಿ ಕನ್ನಡ ಮತ್ತು ಉರ್ದು ಶಾಲೆಗಳು ಒಟ್ಟಾಗಿವೆ. ಉರ್ದು ಶಾಲೆಯಲ್ಲಿ 22 ವಿದ್ಯಾರ್ಥಿಗಳಿದ್ದಾರೆ. ಶನಿವಾರದಂದು ಕನ್ನಡ ಶಾಲೆಗೆ ಮಧ್ಯಾಹ್ನ ತರಗತಿಗಳು ಮುಗಿಯುತ್ತದೆ. ಆದ್ದರಿಂದ ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಅಡುಗೆ ಮಾಡಿ ಅಡುಗೆ ಸಹಾಯಕರು ಬೇಗನೆ ಮನೆಗೆ ಹೋಗುತ್ತಾರೆ.

    ಮಧ್ಯಾಹ್ನ ಊಟ ಮಾಡಿದ ಉರ್ದು ಶಾಲೆಯ ವಿದ್ಯಾರ್ಥಿಗಳು ತಟ್ಟೆಯಿಂದ ಹಿಡಿದು ಅಡುಗೆಯ ಪಾತ್ರೆಗಳನ್ನೆಲ್ಲಾ ತಾವೇ ತೊಳೆಯಬೇಕು. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಅವರನ್ನು ಪ್ರಶ್ನಿಸಿದರೆ ಈ ವಿಷಯನೇ ಗೊತ್ತಿಲ್ಲ. ನಾನು ಶಿಕ್ಷಕರ ಕಾರ್ಯಾಗಾರಕ್ಕೆ ಬಂದಿದ್ದೇನೆ ಅಂತಾ ಹೇಳಿದ್ದಾರೆ.

    ಆದರೆ ಇನ್ನೊಬ್ಬ ಶಿಕ್ಷಕಿ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

  • ಸಿಎಂ ಬರ್ತಾರೆಂದು 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದ ಬಳ್ಳಾರಿ ಶಿಕ್ಷಣ ಇಲಾಖೆ!

    ಸಿಎಂ ಬರ್ತಾರೆಂದು 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದ ಬಳ್ಳಾರಿ ಶಿಕ್ಷಣ ಇಲಾಖೆ!

    ಬಳ್ಳಾರಿ: ಸಿಎಂ ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಇವತ್ತು ರಜೆ ಘೋಷಣೆ ಮಾಡಿದೆ.

    ಇಂದು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶಕ್ಕಾಗಿ ಸಿಎಂ ಬರ್ತಿರೋದ್ರಿಂದ ಬಳ್ಳಾರಿ ನಗರ ವ್ಯಾಪ್ತಿಯ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ರಜೆ ನೀಡಲಾಗಿದೆ.

    ಸಾರಿಗೆ ಹಾಗು ಸುರಕ್ಷತೆ ಹಿನ್ನೆಲೆಯಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಶನಿವಾರದಂದು ಸಂಜೆವರೆಗೆ ಶಾಲೆ ಕಾರ್ಯ ನಿರ್ವಹಿಸಲಿದೆ ಎಂದು ಡಿಡಿಪಿಐ ಶ್ರೀಧರ್ ತಿಳಿಸಿದ್ದಾರೆ.