Tag: school

  • ಖಾಸಗಿ ಶಾಲಾ ಬಸ್, ಬೈಕ್ ನಡುವೆ ಭೀಕರ ಅಪಘಾತ- ಇಬ್ಬರು ದುರ್ಮರಣ

    ಖಾಸಗಿ ಶಾಲಾ ಬಸ್, ಬೈಕ್ ನಡುವೆ ಭೀಕರ ಅಪಘಾತ- ಇಬ್ಬರು ದುರ್ಮರಣ

    ಬೆಂಗಳೂರು: ಬೆಳ್ಳಂ ಬೆಳ್ಳಗೆ ಖಾಸಗಿ ಶಾಲಾ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಸಾವಿಗಿಡಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಿದರಗುಪ್ಪೆ ಗ್ರಾಮದ ಬಳಿ ನಡೆದಿದೆ.

    ಖಾಸಗಿ ಶಾಲಾ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸ್ವಲ್ಪ ದೂರಕ್ಕೆ ಬಿದ್ದು ಬೆಂಕಿ ಹೊತ್ತಿ ಉರಿದಿದ್ದು ಬಾರಿ ಅನಾಹುತ ತಪ್ಪಿದಂತಾಗಿದೆ.

    ಶಾಲಾ ಬಸ್ ನಲ್ಲಿ 10ಕ್ಕೂ ಹೆಚ್ಚು ಮಕ್ಕಳಿದ್ದು ಬಾರಿ ಅನಾಹುತದಿಂದ ಪಾರಾಗಿದ್ದಾರೆ. ನಂತರ ಬೇರೊಂದು ಬಸ್ ವ್ಯವಸ್ಥೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಲಾಗಿದೆ. ಈ ಘಟನೆ ನಡೆದ ಬಳಿಕ ಶಾಲಾ ಬಸ್ ಚಾಲಕ ಪರಾರಿಯಾಗಿದ್ದು, ಮೃತರ ವಿವರ ಇನ್ನು ತಿಳಿದು ಬಂದಿಲ್ಲ.

    ಸದ್ಯ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆ ಆವರಣದಲ್ಲಿಯೇ ವಿದ್ಯಾರ್ಥಿನಿಯ ಸ್ಕರ್ಟ್ ನಲ್ಲಿ ಕೈ ಹಾಕ್ದ!

    ಶಾಲೆ ಆವರಣದಲ್ಲಿಯೇ ವಿದ್ಯಾರ್ಥಿನಿಯ ಸ್ಕರ್ಟ್ ನಲ್ಲಿ ಕೈ ಹಾಕ್ದ!

    ಮುಂಬೈ: ಖಾಸಗಿ ಶಾಲೆಯ ಆವರಣದಲ್ಲಿ 12 ವರ್ಷದ ವಿದ್ಯಾರ್ಥಿನಿಯ ಸ್ಕರ್ಟ್‍ನಲ್ಲಿ ಕೈ ಹಾಕಿ, ಲೈಂಗಿಕ ಕಿರುಕುಳ ನೀಡಿದ ಘಟನೆ ಮುಂಬೈನಲ್ಲಿ ನಡೆದಿದ್ದು, ಶಾಲೆಯ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿನಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

    ಮಹಾರಾಷ್ಟ್ರದ ಉತ್ತರ ಮುಂಬೈ ಚಾರ್ಕೋಪ್ ಪ್ರದೇಶದ ಖಾಸಗಿ ಶಾಲೆಯ ಕ್ಯಾಂಟೀನ್‍ನಲ್ಲಿ ಗುರುವಾರ ಬೆಳಗ್ಗೆ 9ರಿಂದ 10 ಗಂಟೆ ಘಟನೆ ನಡೆದಿದೆ. ವಿದ್ಯಾರ್ಥಿನಿ ಒಬ್ಬಳೇ ಇದ್ದಾಗ, ಅಪರಿಚಿತ ಬಾಲಕನೊಬ್ಬ ಆಕೆಯನ್ನು ಹಿಡಿದು, ಸ್ಕರ್ಟ್ ನಲ್ಲಿ ಕೈಹಾಕಿ ಲೈಂಗಿಕ ಕಿರುಕುಳ ನೀಡಿ ಪರರಾರಿಯಾಗಿದ್ದಾನೆ.

    ಈ ಕುರಿತು ಬಾಲಕಿ ತನ್ನ ಪೋಷಕರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳ ರಕ್ಷಣೆಯಲ್ಲಿ ನಿಷ್ಕಾಳಜಿ ತೋರಿದ್ದಾರೆ. ತಕ್ಷಣವೇ ತಪ್ಪಿಸ್ಥನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಶುಕ್ರವಾರ ಅನೇಕರು ಶಾಲೆಯ ಆವರಣದಲ್ಲಿ ಅನೇಕ ವಿದ್ಯಾರ್ಥಿಗಳ ಪೋಷಕರು ಕೆಲ ಹೊತ್ತು ಜಮಾಯಿಸಿದ್ದರು.

    ಪೋಕ್ಸೋ ಕಾಯ್ದೆ ಅಡಿ ಪ್ರಕರಣದ ದಾಖಲಾಗಿದ್ದು, ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ-ಸಂಬಳದ ಅರ್ಧ ಹಣ ಶಾಲೆಗೆ ಮೀಸಲಿಟ್ಟ ಶಿಕ್ಷಕ

    ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ-ಸಂಬಳದ ಅರ್ಧ ಹಣ ಶಾಲೆಗೆ ಮೀಸಲಿಟ್ಟ ಶಿಕ್ಷಕ

    ಗದಗ: ಅನೇಕ ಶಿಕ್ಷಕರು ಬಿಲ್ ಮತ್ತು ಬೆಲ್‍ಗೆ ಸೀಮಿತರಾಗಿದ್ದಾರೆ ಅನ್ನೋ ಆರೋಪ ಇದೆ. ಆದರೆ ಗದಗನ ನರೇಗಲ್ ಶಾಲೆಯ ಶಿಕ್ಷಕ ಡಿ.ಎಚ್.ಪರಂಗಿ ಅವರು ತಮ್ಮ ಆದಾಯದ ಅರ್ಧದಷ್ಟು ಹಣವನ್ನು ಬಡಮಕ್ಕಳ ಶಿಕ್ಷಣ, ಪರಿಸರ, ಸಾಮಾಜಿಕ ಕಾರ್ಯಕ್ಕೆ ಖರ್ಚು ಮಾಡುತ್ತಿದ್ದಾರೆ.

    ಪರಂಗಿಯವರು ತಾವೇ ಶಿಕ್ಷಕರನ್ನು ನೇಮಿಸಿಕೊಂಡು ಇಂಗ್ಲಿಷ್ ಮೀಡಿಯಮ್‍ನ ಎಲ್‍ಕೆಜಿ, ಯುಕೆಜಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿದ್ದಾರೆ. ಶಾಲೆಯ ಎಲ್ಲ ಮಕ್ಕಳಿಗೆ ಬಟ್ಟೆ, ಟೈ, ಶೂ, ಬ್ಯಾಗ್ ಹಾಗೂ ನೋಟ್‍ಬುಕ್ ಹಾಗೂ ಸಿಬ್ಬಂದಿಗೆ ತಮ್ಮ ಸ್ವಂತ ಹಣದಲ್ಲಿ ವೇತನ ನೀಡುತ್ತಿದ್ದಾರೆ. ಲ್ಯಾಪ್‍ಟಾಪ್, ಪ್ರೊಜೆಕ್ಟರ್, ಬ್ಲೂಟೂತ್, ಟಿವಿ ಖರೀದಿಸಿ 5 ರಿಂದ 7 ನೇ ತರಗತಿ ಮಕ್ಕಳಿಗೆ ಪಾಠ ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ.

    ಭಿಕ್ಷೆ ಬೇಡುವ ಮಕ್ಕಳನ್ನ ಶಾಲೆಗೆ ಕರೆತಂದು, ಅಕ್ಷರ ಪಾತ್ರೆ ನೀಡಿದ್ದಾರೆ. ಗುಳೆ ಹೋಗುವ ಕುಟುಂಬದ ಮಕ್ಕಳನ್ನ ಶಾಲೆಗೆ ಸೇರಿಸುವ ನಿರಂತರ ಪ್ರಯತ್ನ ಮಾಡಿದ್ದಾರೆ. ಪ್ರತಿವರ್ಷ ಹತ್ತಾರು ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅವರ ಶಿಕ್ಷಣದ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಗುರುವಿನ ಪದಕ್ಕೆ ನಿಜವಾದ ಅರ್ಥ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=OJTqI8zOGMc

  • ಗೆಳತಿಯಿಂದ ರಾಖಿ ಕಟ್ಟಿಸಿಕೊ ಅಂತಾ ಶಿಕ್ಷಕರು ಒತ್ತಾಯಿಸಿದ್ದಕ್ಕೆ ಶಾಲೆಯಿಂದ ಹಾರಿದ ವಿದ್ಯಾರ್ಥಿ!

    ಗೆಳತಿಯಿಂದ ರಾಖಿ ಕಟ್ಟಿಸಿಕೊ ಅಂತಾ ಶಿಕ್ಷಕರು ಒತ್ತಾಯಿಸಿದ್ದಕ್ಕೆ ಶಾಲೆಯಿಂದ ಹಾರಿದ ವಿದ್ಯಾರ್ಥಿ!

    ಅಗರ್ತಲಾ: ರಕ್ಷಾಬಂಧನದ ನಿಮಿತ್ತ ಗೆಳತಿಯರಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಶಿಕ್ಷಕಿ ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಾಲೆಯ ಕಟ್ಟಡದಿಂದ ಹಾರಿದ ಘಟನೆ ತ್ರಿಪುರಾದ ಅಗರ್ತಲಾದಲ್ಲಿ ನಡೆದಿದೆ.

    ದಿಲೀಪ್ ಕುಮಾರ್(18) ಸಹಾ ಶಾಲೆಯ ಕಟ್ಟದಿಂದ ಹಾರಿದ ವಿದ್ಯಾರ್ಥಿ. ರಕ್ಷಾ ಬಂಧನದ ನಂತರದ ದಿನವಾದ ಸೋಮವಾರ ದಿಲೀಪ್ ಪ್ರೀತಿಸುತ್ತಿದ್ದ ಗೆಳತಿಯ ಪೋಷಕರು ಶಾಲೆಗೆ ಬಂದಿದ್ದರು. ಅವರು ತಮ್ಮ ಮಗಳಿಂದ ದಿಲೀಪ್ ರಾಖಿ ಕಟ್ಟಿಸಿ, ಇಬ್ಬರು ಅಣ್ಣ ತಂಗಿಯಂತೆ ಇರಬೇಕೆಂದು ಶಿಕ್ಷಕರಿಗೆ ತಿಳಿಸಿದ್ದರು ಎಂದು ವರದಿಯಾಗಿದೆ.

    ದಿಲೀಪ್ ಗೆಳತಿಯ ಪೋಷಕರ ಮಾತು ಕೇಳಿದ ಶಾಲೆಯ ಪ್ರಾಚಾರ್ಯರ ಹಾಗೂ ಕೆಲವು ಶಿಕ್ಷಕರು ರಾಖಿ ಕಟ್ಟಿಸಲು ನಿರ್ಧರಿಸಿದ್ದರು. ಆದರೆ ಶಿಕ್ಷಕರೂ ಎಷ್ಟೇ ತಿಳಿಸಿ ಹೇಳಿದರೂ ದಿಲೀಪ್ ಹಾಗೂ ಆತನ ಗೆಳತಿ ಒಪ್ಪಲಿಲ್ಲ. ಆದರೆ ಬಲವಂತವಾಗಿ ಕೆಲವು ಶಿಕ್ಷಕರು ರಾಖಿ ಕಟ್ಟಿಸಲು ಮುಂದಾದಾಗ ದಿಲೀಪ್ ಶಾಲೆಯ ಎರಡನೇ ಮಹಡಿಯಿಂದ ಹಾರಿದ್ದಾನೆ. ಅದೃಷ್ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಲೆಯ ಶಿಕ್ಷಕರ ನಡೆಯನ್ನು ಖಂಡಿಸಿ, ದಿಲೀಪ್ ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ಹುಬ್ಬಳ್ಳಿ: ಅಮ್ಮ ಬೇಕು ಅಮ್ಮ ಎಂದು ಹಠಹಿಡಿದಿದ್ದ 4 ವರ್ಷದ ಮಗುವಿನ ಬೆನ್ನಿಗೆ ನರ್ಸರಿ ಶಾಲೆಯ ಶಿಕ್ಷಕ ಹಾಗೂ ಆಯಾ ಬರೆ ಎಳೆದ ಅಮಾನವೀಯ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನನಗೆ ಅಮ್ಮ ಬೇಕು ಎಂದು ಹಠ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ ಎಂದು ಮಗುವಿನ ತಾಯಿ ಕಾವೇರಿ ಆರೋಪಿಸಿದ್ದಾರೆ.

    ಹೆಗ್ಗೇರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಸತೀಶ್ ನಾಯ್ಡು ಈ ನರ್ಸರಿ ಶಾಲೆಯನ್ನು ಆರಂಭಿಸಿದ್ದು, 35ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲದೇ ಕಾವೇರಿ ಅವರು ಈಗಷ್ಟೇ ಒಂದು ವಾರದ ಹಿಂದೆ ತನ್ನ ಮಗನನ್ನು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ಪ್ರತಿನಿತ್ಯ ಆಗಮಿಸುವ ಬಾಲಕ ಪ್ರತಿದಿನ ಅಮ್ಮ ಬೇಕು ಅಮ್ಮ ಬೇಕು ಅಂತ ಹಠ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಶಾಲೆಯ ಆಯಾ ಬಾಲಕನ ಬೆನ್ನಿಗೆ ಬರೆ ಎಳೆದು ಗಾಯಗೊಳಿಸಿದ್ದಾಳೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಬಂದಿರುವ ಆರೋಪವನ್ನು ಶಿಕ್ಷಕ ಸತೀಶ್ ನಾಯ್ಡು ಅಲ್ಲಗಳೆದಿದ್ದು, ಆ ರೀತಿ ನಡೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಈ ಕುರಿತಂತೆ ಮಗುವಿನ ತಾಯಿ ಕಾವೇರಿ, ಶಿಕ್ಷಕ ಸತೀಶ ಹಾಗೂ ಆಯಾ ಮೇಲೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದ್ರೋಣ ಚಿತ್ರೀಕರಣ ವೇಳೆ ಪುಟಾಣಿ ಜೊತೆ ಕಾಲಕಳೆದ ಶಿವಣ್ಣ- ವಿಡಿಯೋ ವೈರಲ್

    ದ್ರೋಣ ಚಿತ್ರೀಕರಣ ವೇಳೆ ಪುಟಾಣಿ ಜೊತೆ ಕಾಲಕಳೆದ ಶಿವಣ್ಣ- ವಿಡಿಯೋ ವೈರಲ್

    ಬೆಂಗಳೂರು: ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ‘ದ್ರೋಣ’ ಸಿನಿಮಾದ ಚಿತ್ರೀಕರಣದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಶಿವಣ್ಣ ಅದೇ ಶಾಲೆಯಲ್ಲಿ ಓದುತ್ತಿರುವ ಪುಟಾಣಿ ಬಾಲಕಿ ಜೊತೆ ಸ್ವಲ್ಪ ಸಮಯವನ್ನು ಕಳೆದಿದ್ದಾರೆ.

    ಶಿವಣ್ಣ ಶೂಟಿಂಗ್ ನಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಬಾಲಕಿಯೊಂದಿಗೆ ಸಮಯ ಕಳೆದಿದ್ದಾರೆ. ಈ ವೇಳೆ ಬಾಲಕಿ ಹಾಡು ಸಹ ಹೇಳಿದ್ದು, ಪುಟಾಣಿಯ ಹಾಡಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಬಾಲಕಿಯ ಹೆಸರು ದೀಪ್ತಿಯಾಗಿದ್ದು, ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ. ಕಳೆದ ಒಂದು ವಾರದಿಂದ ಈ ಶಾಲಾ ಆವರಣದಲ್ಲಿ ದ್ರೋಣ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಲಕಿಯ ಸುಮಧುರ ಕಂಠಕ್ಕೆ ಮೆಚ್ಚುಗೆಯನ್ನು ನೀಡಿ ಬಾಲಕಿ ಕಟ್ಟಿದ ರಾಕಿಗೆ ಮನಸೋತಿದ್ದಾರೆ.

    ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ. ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ರೇಖಾದಾಸ್, ಪ್ರಕಾಶ್ ಹೆಗ್ಗೋಡು, ಆನಂದ್, ಶಂಕರ ರಾವ್, ವಿಜಯಕಿರಣ್, ನಟಿಸುತ್ತಿದ್ದಾರೆ. ಈ ಚಿತ್ರವನ್ನು ಬಿ. ಮಹದೇವ, ಬಿ. ಸಂಗಮೇಶ್ ಹಾಗೂ ಶೇಶು ಚಕ್ರವರ್ತಿ ನಿರ್ಮಿಸುತ್ತಿದ್ದಾರೆ. ಪ್ರಮೋದ್ ಚಕ್ರವರ್ತಿ ಈ ಚಿತ್ರದ ಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದು, ರಾಮ್ ಕ್ರಿಶ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

    https://www.youtube.com/watch?v=qqLSQj-sTv8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಜ್ಜಿ ಮನೆಯಿಂದ ಶಾಲೆಗೆ ಬರೋದಕ್ಕೆ ಕಷ್ಟವಾಗುತ್ತಿದೆ: ಹಟ್ಟಿಹೊಳೆ ವಿದ್ಯಾರ್ಥಿ ನವೀನ್

    ಅಜ್ಜಿ ಮನೆಯಿಂದ ಶಾಲೆಗೆ ಬರೋದಕ್ಕೆ ಕಷ್ಟವಾಗುತ್ತಿದೆ: ಹಟ್ಟಿಹೊಳೆ ವಿದ್ಯಾರ್ಥಿ ನವೀನ್

    ಮಡಿಕೇರಿ: ಆತೂರಿನಲ್ಲಿರುವ ಅಜ್ಜಿ ಮನೆಯಿಂದ ಶಾಲೆಗೆ ಬರೋದಕ್ಕೆ ಕಷ್ಟವಾಗುತ್ತಿದೆ. ನಾನು ಮನೆಗೆ ಹೋಗಿದ್ದರೆ, ಚೆನ್ನಾಗಿ ಇರುತ್ತಿತ್ತು ಎಂದು ವಿದ್ಯಾರ್ಥಿ ನವೀನ್ ಹೇಳಿದ್ದಾರೆ.

    ನಮ್ಮ ಮನೆ ಹಟ್ಟಿಹೊಳೆಯಲ್ಲಿದೆ. ನಮ್ಮ ಮನೆ ಹತ್ತಿರ ಗುಡ್ಡ ಕುಸಿಯುತ್ತಿತ್ತು. ಆ ವೇಳೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದು ನೀವು ಇಲ್ಲಿ ಇರಬೇಡಿ, ಇಲ್ಲಿಂದ ಹೋಗಿ ಎಂದು ಹೇಳಿದರು. ಅವರ ಮಾತು ಕೇಳಿ ನನ್ನ ತಂದೆ ಕೂಡ ಹೆದರಿ ಇಲ್ಲಿಂದ ಹೋಗೋಣ ಎಂದು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಹಟ್ಟಿಹೊಳೆ ಬಿಟ್ಟು ನಾನು ಹಾಗೂ ನನ್ನ ಕುಟುಂಬದವರು ಈಗ ಆತೂರು ಎಸ್ಟೇಟ್‍ನಲ್ಲಿರುವ ನಮ್ಮ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆ ದಿನ ಜೋರಾಗಿ ಮಳೆ ಬಂದಾಗ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ 50ಕ್ಕೂ ಹೆಚ್ಚು ಹಸು ಹೆದರಿಕೊಂಡು ಓಡಿ ಹೋಗಿದೆ ಎಂದು ತುಂಬಾ ಜನ ಅಳುತ್ತಾ ಹೇಳುತ್ತಿದ್ದಾರೆ. ಸದ್ಯ ಈಗ ಹಟ್ಟಿಹೊಳೆಯಲ್ಲಿರುವ ಮನೆಗೆ ಕೆಲವರು ಹೋಗಬಹುದು ಎಂದು ಹೇಳಿದರೆ ಇನ್ನೂ ಕೆಲವರು ಹಟ್ಟಿಹೊಳೆಗೆ ಹೋಗಲು ಸಾಧ್ಯವಿಲ್ಲ. ನಿಮ್ಮ ಅಜ್ಜಿ ಮನೆಯಲ್ಲೇ ಸ್ವಲ್ಪ ದಿನ ವಾಸವಿರು. ಅಲ್ಲಿ ಮತ್ತೆ ಏನಾದರೂ ಆದರೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಕೊಡಗಿನ 61 ಶಾಲೆಗಳಿಗೆ ಹೋಗುವಂತಿಲ್ಲ, 76 ರಿಪೇರಿಯಾಗಬೇಕಿದೆ: ಎನ್.ಮಹೇಶ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಮಡಿಕೇರಿ: ಪ್ರಕೃತಿಯ ಮುನಿಸಿಗೆ ನಲುಗಿಹೋಗಿರುವ ಕೊಡಗಿನಲ್ಲಿ ಇಂದು ಶಾಲೆಗಳು ಪುನಾರಂಭವಗೊಂಡಿವೆ. ಪ್ರವಾಹ ಪೀಡಿತ ಪ್ರದೇಶ ಬಿಟ್ಟು ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಶಾಲೆಗಳು ಇಂದಿನಿಂದ ಆರಂಭಗೊಂಡಿವೆ.

    12 ದಿನಗಳಿಂದ ಪಾಠವಿಲ್ಲದೇ ಮಕ್ಕಳು ಇಂದು ತರಗತಿಗಳಿಗೆ ಹಾಜರಾಗಿದ್ದಾರೆ. ಆದ್ರೆ ಇಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಂಡು ಕಣ್ಣೀರು ಹಾಕಿದ್ದಾರೆ.

    ಮಳೆ ಬಂದ ಕಾರಣ 12 ದಿನ ರಜೆ ಇತ್ತು. ಗೆಳೆಯರಿಲ್ಲದೇ ಬೇಜಾರಾಗುತ್ತಿತ್ತು. ಶಾಲೆಗ ಹೋಗಬೇಕನ್ನಿಸುತ್ತಿತ್ತು. ಆದ್ರೆ ಇಂದು ಶಾಲೆಗೆ ಬಂದು ತುಂಬಾ ಖುಷಿಯಾಗುತ್ತಿದೆ ಅಂತ ಬೋಯಕೇರಿ ಶಾಲೆಯ ವಿದ್ಯಾರ್ಥಿ ಅನಿರುದ್ಧ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.

    ಮಕ್ಕಳು ಕರೆ ಮಾಡಿ ಯಾವ ಶಾಲೆ ಆರಂಭವಾಗುತ್ತದೆ ಅಂತ ಕೇಳುತ್ತಾನೇ ಇದ್ರು. ಯಾಕಂದ್ರೆ ಅವರ ಮನಸ್ಥಿತಿ ಕೂಡ ಹಾಗೆಯೇ ಇತ್ತು. ಮಕ್ಕಳಿಗೂ ಕೂಡ ಹೆತ್ತವರನ್ನು ಬಿಟ್ಟು ಹೋಗಲು ಕಷ್ಟವಾಗುತ್ತಿತ್ತು. ಆದ್ರೆ ಇಂದು ಶಾಲೆ ಆರಂಭವಾಗಿದೆ. ಇದೀಗ ಮಕ್ಕಳಿಗಿಂತ ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮ ಶಾಲೆಯ ಮಕ್ಕಳು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೆವು ಅಂತ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.

    ಭಾರೀ ಮಳೆಯಿಂದಾಗಿ ಶಾಲೆಯೂ ಕೂಡ ಮುಚ್ಚಿತ್ತು. ತುಂಬಾ ಬೇಜಾರಾಗುತ್ತಿತ್ತು. ಎಲ್ಲಿ ಏನಾಗಿದೆ ಅಂತ ನಾವು ಕರೆ ಮಾಡಿ ತಿಳಿದುಕೊಂಡಿದ್ವಿ. ಯಾವತ್ತೂ ಶಾಲಾ ಆವರಣಕ್ಕೆ ಬರುತ್ತಿದ್ದಂತೆಯೇ ಎಲ್ಲಾ ಮಕ್ಕಳು ಓಡಿಕೊಂಡು ಬರುತ್ತಿದ್ದರು. ಆದ್ರೆ ಇಂದು ಮಕ್ಕಳ ಸಂಖ್ಯೆ ಕಡಿಮೆ ಇದ್ದುದನ್ನು ಕಂಡು ಕಣ್ಣಲ್ಲಿ ನೀರು ಬಂತು. ನಾವು ಬರುತ್ತಿರುವುದನ್ನು ಕಂಡು ಕೆಲ ಮಕ್ಕಳು ಅರ್ಧ ದಾರಿಗೆ ಓಡಿ ಬರುತ್ತಿದ್ದರು. ಇಂದು ಆ ಮಕ್ಕಳನ್ನು ನೆನೆದು ನಿಜವಾಗಲೂ ದುಃಖವಾಯ್ತು ಅಂತ ಮತ್ತೊಬ್ಬ ಶಿಕ್ಷಕಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಭಾವುಕರಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲಬುರಗಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ಕಾಡ್ತಿದೆ ಪ್ರಾಣ ಭಯ!

    ಕಲಬುರಗಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ಕಾಡ್ತಿದೆ ಪ್ರಾಣ ಭಯ!

    ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮತ್ತು ಮಕ್ಕಳು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಪಾಠ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

    ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿರುವ ಈ ಸರ್ಕಾರಿ ಶಾಲೆಯಲ್ಲಿ ಇನ್ನೂರಕ್ಕೂ ಅಧಿಕ ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಪಾಠ ಕೇಳುತ್ತಿದ್ದಾರೆ. ಶಾಲೆಯ ಎಲ್ಲಾ ಕೋಣೆಗಳ ಮೇಲ್ಚಾವಣಿ ಶಿಥಿಲಗೊಂಡಿದ್ದು, ಅಲ್ಲದೇ ಗೋಡೆಗಳು ಸಹ ಬಿರುಕು ಬಿಟ್ಟು ಕುಸಿದು ಬೀಳುವ ಅಪಾಯ ಎದುರಾಗಿದೆ. ಮಳೆ ಬಂದರೆ ಸಾಕು ಬಿರುಕುಬಿಟ್ಟ ಮೇಲ್ಚಾವಣಿ ಮೂಲಕ ಮಳೆ ನೀರೆಲ್ಲಾ ತರಗತಿ ಕೋಣೆಗಳ ತುಂಬೆಲ್ಲಾ ಆಗುತ್ತವೆ.

    ಮೈಸೂರು ಸರ್ಕಾರವಿದ್ದಾಗ ಈ ಸರ್ಕಾರಿ ಶಾಲೆ ಆರಂಭವಾಗಿದ್ದು 5 ದಶಕಗಳಷ್ಟು ಹಳೆಯದಾದ ಈ ಶಾಲೆ ಇದುವರೆಗೆ ದುರಸ್ತಿ ಕಂಡಿಲ್ಲ. ಶಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಬಂದರೂ ಸಹ, ಶಿಕ್ಷಣ ಇಲಾಖೆ ಮಾತ್ರ ಈ ಶಾಲೆಯತ್ತ ಗಮನ ಹರಿಸದೇ ಇರೋದು ಆಕ್ರೋಶಕ್ಕೆ ಕಾರಣವಾಗಿದೆ.

    ಶಾಲಾ ಕಟ್ಟಡವನ್ನು ದುರಸ್ತಿ ಮಾಡಿಸಿ ಎಂದು ಬಿಇಓ, ಡಿಡಿಪಿಐ ಹಾಗೂ ಜಿಲ್ಲಾ ಪಂಚಾಯತ್‍ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದು, ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ. ಮಳೆಗಾಲ ಬೇರೆ ಆರಂಭವಾಗಿದ್ದರಿಂದ ಶಾಲೆಯ ಎಲ್ಲಾ ಕೋಣೆಗಳು ಸೋರುತ್ತಿದ್ದು, ಮೇಲ್ಚಾವಣಿ ಕುಸಿಯುವ ಅಪಾಯ ಎದುರಾಗಿದೆ. ಶಿಕ್ಷಣಕ್ಕೆ ಅನೂಕುಲವಾದಂತಹ ಯಾವೊಂದು ವಾತಾವರಣ ಈ ಶಾಲೆಯಲ್ಲಿಲ್ಲ. ಒಂದರಿಂದ ಏಳನೇ ತರಗತಿವರೆಗೆ ಇರುವ ಈ ಶಾಲೆ ಅರ್ಧ ಶತಮಾನದಷ್ಟು ಹಳೆಯದಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇನ್ನಾದರು ಸಂಬಂಧಪಟ್ಟ ಶಿಕ್ಷಣ ಇಲಾಖೆ ದುರಸ್ತಿ ಭಾಗ್ಯ ಕರುಣಿಸುತ್ತದೆಯೇ ಎಂಬುದನ್ನು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೀಟರ್ ಬಡ್ಡಿವ್ಯವಹಾರ ಮಾಡುತ್ತಾ ಶಾಲೆಗೆ ಬಾರದ ಶಿಕ್ಷಕನ ವಿರುದ್ಧ ಪ್ರತಿಭಟನೆ!

    ಮೀಟರ್ ಬಡ್ಡಿವ್ಯವಹಾರ ಮಾಡುತ್ತಾ ಶಾಲೆಗೆ ಬಾರದ ಶಿಕ್ಷಕನ ವಿರುದ್ಧ ಪ್ರತಿಭಟನೆ!

    ಕೋಲಾರ: ಮೀಟರ್ ಬಡ್ಡಿವ್ಯವಹಾರ ಮಾಡಿಕೊಂಡು ಶಾಲೆಗೆ ಬಾರದ ಶಿಕ್ಷಕನನ್ನು ವರ್ಗಾವಣೆ ಮಾಡಿ, ಬೇರೆ ಶಿಕ್ಷರನ್ನು ನೇಮಿಸುವಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

    ಕೋಲಾರ ತಾಲೂಕಿನ ನಂದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಂಜುಂಡಗೌಡ, ಊರಿನಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಶಾಲೆಗೆ ಸರಿಯಾಗಿ ಹಾಜರಾಗುತ್ತಿಲ್ಲ. ಅಲ್ಲದೇ ಕಳೆದ 5 ವರ್ಷಗಳಿಂದಲೂ ಶಿಕ್ಷಕ ಶಾಲೆಗೆ ಸರಿಯಾಗಿ ಬಾರದೆ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಶಾಲೆಯಲ್ಲಿ ಸುಮಾರು 70 ಮಕ್ಕಳು ಕಲಿಯುತ್ತಿದ್ದು, ಶಿಕ್ಷಕನ ವರ್ತನೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹೈರಾಣಾಗಿದ್ದಾರೆ. ಅಲ್ಲದೇ ಇದನ್ನು ಪ್ರಶ್ನಿಸುವ ಸಹ ಶಿಕ್ಷಕರ ಮೇಲೆಯೂ ರಾಜಕೀಯ ಪ್ರಭಾವ ಬಳಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಶಿಕ್ಷಕನ ವರ್ತನೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಶಿಕ್ಷಕನನ್ನು ಕೂಡಲೇ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv