Tag: school

  • ಶಾಲೆಗೆ ನುಗ್ಗಿ 28 ಸಾವಿರ ರೂ., ಡಿವಿಆರ್ ಎಗರಿಸಿದ ಖತರನಾಕ್ ಕಳ್ಳರು

    ಶಾಲೆಗೆ ನುಗ್ಗಿ 28 ಸಾವಿರ ರೂ., ಡಿವಿಆರ್ ಎಗರಿಸಿದ ಖತರನಾಕ್ ಕಳ್ಳರು

    ಬೆಂಗಳೂರು: ಮುಸುಕುಧಾರಿ ಕಳ್ಳರು ಖಾಸಗಿ ಶಾಲೆಯೊಂದಕ್ಕೆ ನುಗ್ಗಿ ಆಫೀಸ್ ರೂಮ್ ನಲ್ಲಿದ್ದ 28 ಸಾವಿರ ರೂ. ನಗದು ಒಂದು ಡಿವಿಆರ್ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

    ಹೊಸಕೋಟೆ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸನ್ ವ್ಯಾಲಿ ಶಾಲೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ. ಆಫೀಸ್ ರೂಮ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಈ ಕುರಿತು ಶಾಲೆಯ ಆಡಳಿತ ಮಂಡಳಿ ಸೂಲಿಬೆಲೆ ಠಾಣೆಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಶಾಲೆಯ ರಜೆ ದಿನವಾದ ಭಾನುವಾರ ರಾತ್ರಿ ಮೂವರು ಕಳ್ಳರು, ಆಫೀಸ್ ಬೀಗ ಒಡೆದು ಒಳಗೆ ನುಗ್ಗಿದ್ದಾರೆ. ಮುಸುಕು ಧರಿಸಿದ್ದ ಅವರು, ಮುಖಕ್ಕೆ ಪೌಡರ್ ಹಚ್ಚಿಕೊಂಡಿದ್ದರು. ನಿಧಾನವಾಗಿ ಒಬ್ಬೊಬ್ಬರೆ ಒಳಗೆ ನುಗ್ಗಿದ್ದಾರೆ. ಈ ದೃಶ್ಯ ಆಫೀಸ್ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾ ನೋಡಿದ ಕಳ್ಳರು ಅದನ್ನು ಒಡೆದು ಹಾಕಿದ್ದಾರೆ.

    ಕಳ್ಳರು ಬೀರುವಿನಲ್ಲಿದ್ದ 28 ಸಾವಿರ ರೂ. ನಗದು ಹಾಗೂ 16 ಸಾವಿರ ಮೌಲ್ಯದ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೋಲಿಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಭಾರದ ಶಾಲಾ ಬ್ಯಾಗ್ ಹೊತ್ತುಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!

    ಭಾರದ ಶಾಲಾ ಬ್ಯಾಗ್ ಹೊತ್ತುಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!

    ಬೆಂಗಳೂರು: ಭಾರದ ಶಾಲಾ ಬ್ಯಾಗ್ ಹೊತ್ತುಕೊಂಡು ಹೋಗುವ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

    ಭಾರದ ಶಾಲಾ ಬ್ಯಾಗ್‍ಗಳಿಗೆ ಮಿತಿ ಹೇರಲಾಗಿದ್ದು, ಮಕ್ಕಳಿಗೆ ಕೊಡುವ ಹೋಂ ವರ್ಕ್ ಕಿರಿಕಿರಿಗೂ ನಿಯಂತ್ರಣ ನೀಡಲಾಗಿದೆ. ಶಾಲಾ ಮಕ್ಕಳ ಬ್ಯಾಗ್‍ನ ತೂಕ ಮತ್ತು ಮಕ್ಕಳಿಗೆ ಹೋಂ ವರ್ಕ್ ಕೊಡುವ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಲಾಯದಿಂದ ನಿರ್ದೇಶನಗಳ ಪಾಲನೆಗೆ ಸುತ್ತೋಲೆ ಪ್ರಕಟವಾಗಿದೆ. ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳು ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಲಾಗಿದೆ.

    ಎಷ್ಟು ಕೆಜಿ ತೂಕ?
    1. 1 ಮತ್ತು 2 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ನ ತೂಕ 1.5 ಕೆ.ಜಿ ದಾಟುವಂತಿಲ್ಲ
    2. 3 ಮತ್ತು 4 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ತೂಕ 2 ರಿಂದ 3 ಕೆ.ಜಿ ಇರಬೇಕು
    3. 6 ಮತ್ತು 7 ನೇ ತರಗತಿಗೆ ಮಕ್ಕಳ ಸ್ಕೂಲ್ ಬ್ಯಾಗ್ 4 ಕೆ.ಜಿ ಮಾತ್ರ ಇರಬೇಕು
    4. 8 ಮತ್ತು 9 ನೇ ತರಗತಿ ಮಕ್ಕಳಿಗೆ 4.5 ಕೆ.ಜಿ ಶಾಲಾ ಬ್ಯಾಗ್
    5. 10 ನೇ ತರಗತಿ ಮಕ್ಕಳಿಗೆ 5 ಕೆ.ಜಿ ತೂಕದ ಸ್ಕೂಲ್ ಬ್ಯಾಗ್

    ಸುತ್ತೋಲೆಯಲ್ಲಿ ಏನಿದೆ?1 ಮತ್ತು 2 ನೇ ತರಗತಿ ಮಕ್ಕಳಿಗೆ ಶಿಕ್ಷಕರು ಹೋಂ ವರ್ಕ್ ಕೊಡುವಂತಿಲ್ಲ. ಹೋಂ ವರ್ಕ್ ಕೊಟ್ಟರೂ ಭಾಷೆ ಮತ್ತು ಗಣಿತ ವಿಷಯಗಳಷ್ಟೇ ಕೊಡಬೇಕು. ಮಕ್ಕಳಿಗೆ ಹೆಚ್ಚುವರಿ ಬುಕ್ ಗಳನ್ನು ತರುವಂತೆ ಶಿಕ್ಷಕರು ಒತ್ತಾಯಿಸುವಂತಿಲ್ಲ. ಅಲ್ಲದೇ ಹೆಚ್ಚುವರಿ ಶಾಲಾ ಪರಿಕರಗಳನ್ನು ತರುವಂತೆಯೂ ಬಲವಂತ ಮಾಡಬಾರದು. ಎಲ್ಲ ರಾಜ್ಯಗಳೂ ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 12 ವರ್ಷಗಳಿಂದ ವಾರದಲ್ಲಿ 2 ದಿನ ಶಿಕ್ಷಕನಿಂದ ಶಾಲೆಯ ಶೌಚಾಲಯ ಶುಚಿ

    12 ವರ್ಷಗಳಿಂದ ವಾರದಲ್ಲಿ 2 ದಿನ ಶಿಕ್ಷಕನಿಂದ ಶಾಲೆಯ ಶೌಚಾಲಯ ಶುಚಿ

    ಕೊಪ್ಪಳ: ವಾರದಲ್ಲಿ ಎರಡು ದಿನ ಶಾಲೆಯ ಶೌಚಾಲಯ ಶುಚಿಗೊಳಿಸುವ ಶಿಕ್ಷಕರೊಬ್ಬರು ಕೊಪ್ಪಳದಲ್ಲಿದ್ದಾರೆ.

    ಕುಕನೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಎರಡು ದಿನ ಶಾಲೆಯ ಶುಚಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಮನೆಯ ಶೌಚಾಲಯವನ್ನೇ ಶುಚಿಗೊಳಿಸಲು ಮೂಗು ಮುರಿಯೋ ಇಂದಿನ ದಿನದಲ್ಲಿ ಶಾಲೆಯ ಶೌಚಾಲಯವನ್ನ ಶುಚಿಗೊಳಿಸುವ ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಮಾದರಿಯಾಗಿದ್ದಾರೆ.

    ಪ್ರತಿವಾರದಲ್ಲಿ ಎರಡು ದಿನ ತಮ್ಮ ಶಾಲೆಯ ಶೌಚಾಲಯವನನ್ನ ಖುದ್ದು ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಶುಚಿಗೊಳಿಸುತ್ತಾರೆ. ಇದು ನಿನ್ನೆ ಮೊನ್ನೆದಲ್ಲ ಕಳೆದ 12 ವರ್ಷಗಳಿಂದ ವೆಂಕಪ್ಪ ಈ ಕಾಯಕದಲ್ಲಿ ತೊಡಗಿದ್ದಾರೆ. ಸ್ವಚ್ಛತೆ ಬಗ್ಗೆ ಭಾಷಣ ಮಾಡುವವರ ಮಧ್ಯೆ ವೆಂಕಪ್ಪ ಅರಕಲ್ ಅವರ ಈ ಮಹಾನ್ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

    ಶಾಲೆಯ ಶೌಚಾಲಯವನ್ನ ಶುಚಿಗೊಳಿಸುವುದು ನನಗೆ ಹೆಮ್ಮೆ ಹಾಗೂ ಸಂತೋಷ. ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಪಾಠ ಮಾಡಿದರೇನು ಪ್ರಯೋಜನ ನಾವು ಅದನ್ನ ಕಾರ್ಯರೂಪಕ್ಕೆ ತರಬೇಕು ಅನ್ನೋ ಉದ್ದೇಶದಿಂದ ಈ ಕಾಯಕ ಮಾಡಲಾಗುತ್ತಿದೆ ಎಂದು ಶಿಕ್ಷಕ ವೆಂಕಪ್ಪ ಅರಕಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಫೀಸ್ ಕಟ್ಟದ್ದಕ್ಕೆ 25 SSLC ವಿದ್ಯಾರ್ಥಿಗಳನ್ನ ಪರೀಕ್ಷೆಯಿಂದ ಹೊರ ಹಾಕಿದ್ರು!

    ಫೀಸ್ ಕಟ್ಟದ್ದಕ್ಕೆ 25 SSLC ವಿದ್ಯಾರ್ಥಿಗಳನ್ನ ಪರೀಕ್ಷೆಯಿಂದ ಹೊರ ಹಾಕಿದ್ರು!

    ಚಾಮರಾಜನಗರ: ಶೈಕ್ಷಣಿಕ ಶುಲ್ಕ ಪಾವತಿ ಮಾಡಿಲ್ಲವೆಂದು ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ 25 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೇ ಕೊಠಡಿಯಿಂದ ಹೊರ ಹಾಕಿದ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

    ಕೊಳ್ಳೇಗಾಲದ ಜಿ.ವಿ.ಗೌಡ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗಿದ್ದವು. ಆದರೆ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಿರಲಿಲ್ಲ. ಹೀಗಾಗಿ ಅವರನ್ನು ಪರೀಕ್ಷಾ ಕೊಠಡಿಯಿಂದ ಹೊರ ಹಾಕಿ ಆಡಳಿತ ಮಂಡಳಿ ಅವಮಾನವೀಯತೆ ಮೆರೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಶಾಲೆಯ ಆಡಳಿತ ಮಂಡಳಿ ವರ್ತನೆಯಿಂದ ಕಂಗಾಲದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಕುಳಿತು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರಿಗೂ ಒಂದೇ ಮಾದರಿಯಲ್ಲಿ ಶಿಕ್ಷಣ ದೊರಕಬೇಕು ಅಂತಾ ಹೇಳುತ್ತಿದ್ದ ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಕ್ಷೇತ್ರದಲ್ಲಿ ಈ ರೀತಿಯ ಘಟನೆ ನಡೆದಿದೆ.

    ಇಂತಹದ್ದೇ ಪ್ರಕರಣವೊಂದು ಬೆಂಗಳೂರಿನ ಜ್ಞಾನಜ್ಯೋತಿ ಶಾಲೆಯಲ್ಲಿ ಇದೇ ಮಾರ್ಚ್ ತಿಂಗಳಿನಲ್ಲಿ ನಡೆದಿತ್ತು. 2018-19ನೇ ಶೈಕ್ಷಣಿಕ ಸಾಲಿನ ಪುಸ್ತಕಗಳ ಶುಲ್ಕ ಪಾವತಿಸದ ಕಾರಣ ನಾಲ್ವರು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ, ಪರೀಕ್ಷಾ ಕೊಠಡಿಯಿಂದ ಹೊರಹಾಕಿದ್ದರು. ಶಾಲಾ ಆಡಳಿತ ಮಂಡಳಿಯ ಈ ನಡೆಯನ್ನು ವಿರೋಧಿಸಿ ಪರೀಕ್ಷೆಯಿಂದ ವಂಚಿತರಾದ ಮಕ್ಕಳ ಪೋಷಕರು, ಶಾಲೆಯ ಎದುರೇ ಪ್ರತಿಭಟನೆ ನಡೆಸಿ ಜೆಪಿ ನಗರ ಪೊಲೀಸ್ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹಿಮಪಾತಕ್ಕೆ ಸೇಬು ಬೆಳೆ ಹಾನಿ- ಸಂಚಾರ, ವಿದ್ಯುತ್ ಅಸ್ತವ್ಯಸ್ತ

    ಹಿಮಪಾತಕ್ಕೆ ಸೇಬು ಬೆಳೆ ಹಾನಿ- ಸಂಚಾರ, ವಿದ್ಯುತ್ ಅಸ್ತವ್ಯಸ್ತ

    -ಕ್ಯಾಂಡಲ್ ಬೆಳಕಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದ್ದು, ರಸ್ತೆ, ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಸೇಬು ಗಿಡಗಳ ಮೇಲೆ ಹಿಮ ಬಿದ್ದ ಪರಿಣಾಮ ಭಾರೀ ಹಾನಿ ಉಂಟಾಗಿದೆ.

    ಬೃಹತ್ ಪ್ರಮಾಣದಲ್ಲಿ ಸೇಬು ಗಿಡಗಳು ಹಾಳಾಗಿವೆ. ಇದರಿಂದಾಗಿ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ ಅವರು ಇಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸೇಬು ಬೆಳೆಗಾರರಿಗೆ ಆಗಿರುವ ನಷ್ಟವನ್ನು ಭರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ನವೆಂಬರ್ ಆರಂಭದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತ ಕಂಡು ಬಂದಿದೆ. ಇದೇ ರೀತಿ 2009, 2008 ಮತ್ತು 2004ರಲ್ಲಿ ಹಿಮಪಾತ ಸಂಭವಿಸಿತ್ತು ಅಂತ ಹವಾಮಾನ ಇಲಾಖೆ ತಿಳಿಸಿದೆ ಎಂದು ವರದಿಯಾಗಿದೆ.

    ಕಾಶ್ಮೀರದ ಗುಲ್ಮರ್ಗ್ ಕನಿಷ್ಠ ಮೂರು ಡಿಗ್ರಿ ಸೆಲ್ಸಿಯಸ್ ಹಾಗೂ ಶ್ರೀನಗರದಲ್ಲಿ 1.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ವಿದ್ಯುತ್ ಕಡಿತವಾಗಿದ್ದು, ವಿದ್ಯಾರ್ಥಿಗಳು ಕ್ಯಾಂಡಲ್ ಬೆಳಕಿನಲ್ಲಿ ಪರೀಕ್ಷೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಆಸ್ಪತ್ರೆಗಳಿಗೆ ವಿದ್ಯುತ್ ಕಡಿತದ ಬಿಸಿ ತಟ್ಟಿದೆ. ಹೀಗಾಗಿ ವಿದ್ಯುತ್ ದುರಸ್ತಿ ಕಾರ್ಯದಲ್ಲಿ 7 ಸಾವಿರ ಸಿಬ್ಬಂದಿ ತೊಡಗಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪಚುನಾವಣೆಯ 5 ಕ್ಷೇತ್ರಗಳಲ್ಲಿ ನ.3ರಂದು ಸರ್ಕಾರಿ ರಜೆ

    ಉಪಚುನಾವಣೆಯ 5 ಕ್ಷೇತ್ರಗಳಲ್ಲಿ ನ.3ರಂದು ಸರ್ಕಾರಿ ರಜೆ

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 5 ಕ್ಷೇತ್ರಗಳ ಉಪಚುನಾವಣೆಯ ಮತದಾನದ ದಿನವಾದ ನವೆಂಬರ್ 3ರಂದು ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಮಂಡ್ಯ, ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ, ರಾಮನಗರ ವಿಧಾನಸಭಾ ಮತಕ್ಷೇತ್ರಗಳಲ್ಲಿ ಇದೇ ಶನಿವಾರ ಮತದಾನ ನಡೆಯಲಿದೆ. ಹೀಗಾಗಿ ಈ ಐದೂ ಕ್ಷೇತ್ರಗಳ ವ್ಯಾಪ್ತಿಯ ಶಾಲಾ-ಕಾಲೇಜು, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದೆ.

    ಉಪಚುನಾವಣಾ ಕ್ಷೇತ್ರಗಳ ವ್ಯಾಪ್ತಿಯ ಹೊರಗೆ ಕೆಲಸ ನಿರ್ವಹಿಸಿಕೊಂಡು, ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿ ನೌಕರರಿಗೂ ರಜೆ ನೀಡಲಾಗಿದೆ. ಆದರೆ ತುರ್ತು ಸೇವೆಗಳ ಮೇಲೆ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರಿಗೆ ಈ ರಜೆ ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಸಚಿವಾಲಯ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಡ್‍ನಿಂದ ಶಿಕ್ಷಕನ ಮೇಲೆ ಹಲ್ಲೆಗೈದ 8ನೇ ಕ್ಲಾಸ್ ವಿದ್ಯಾರ್ಥಿ

    ರಾಡ್‍ನಿಂದ ಶಿಕ್ಷಕನ ಮೇಲೆ ಹಲ್ಲೆಗೈದ 8ನೇ ಕ್ಲಾಸ್ ವಿದ್ಯಾರ್ಥಿ

    ನವದೆಹಲಿ: 8ನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್‍ನಿಂದ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಸಾಕೇತ್ ಎಂಬಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಪ್ರಕರಣದ ಬಳಿಕ ಭಯಭೀತನಾದ ವಿದ್ಯಾರ್ಥಿ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದನು. ಸದ್ಯ ಹಲ್ಲೆಗೊಳಗಾಗಿರುವ ಶಿಕ್ಷಕರನ್ನು ಏಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಸುಂದರ್, ವಿದ್ಯಾರ್ಥಿಯಿಂದ ಹಲ್ಲೆಗೊಳಾಗದ ಶಿಕ್ಷಕ. ಇಂದು ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿ ಮೇಲೆ ಹಾಜರಾತಿ ವಿಷಯದಲ್ಲಿ ಗರಂ ಆಗಿದ್ದರು. ಶಾಲೆಗೆ ಪದೇ ಪದೇ ಗೈರಾಗುತ್ತಿರೋದ್ರಿಂದ ವಿದ್ಯಾರ್ಥಿ ಮೇಲೆ ಶಿಕ್ಷಕರು ಸಹಜವಾಗಿಯೇ ಕೋಪಗೊಂಡಿದ್ದರು.

    ಇದೇ ವೇಳೆ ವಿದ್ಯಾರ್ಥಿಯ ಬ್ಯಾಗ್ ಚೆಕ್ ಮಾಡುವಾಗ ಪುಸ್ತಕಗಳ ಮಧ್ಯೆ ಕಬ್ಬಿಣದ ರಾಡ್ ಸಿಕ್ಕಿದೆ. ಅನುಮಾನಗೊಂಡ ಶಿಕ್ಷಕರು ನಿನ್ನ ಬಳಿ ರಾಡ್ ಎಲ್ಲಿಂದ ಬಂತು ಪ್ರಶ್ನಿಸಿ ರಾಡ್‍ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟೇಬಲ್ ಮೇಲೆ ಇಟ್ಟ ರಾಡ್ ತೆಗೆದುಕೊಳ್ಳುವಾಗ ಶಿಕ್ಷಕರು ಆತನನ್ನು ತಡೆದಿದ್ದ ಸಂದರ್ಭದಲ್ಲಿ ಅದರಿಂದಲೇ ಹಲ್ಲೆ ಮಾಡಿ ವಿದ್ಯಾರ್ಥಿ ಪರಾರಿಯಾಗಿದ್ದಾನೆ.

    ಇಂದು ಬೆಳಗ್ಗೆ ಸುಮಾರು 9.30ಕ್ಕೆ ಶಿಕ್ಷಕರು ವಿದ್ಯಾರ್ಥಿಗಳ ಬ್ಯಾಗ್ ಚೆಕ್ ಮಾಡುವಾಗ ರಾಡ್ ದೊರೆತಿದೆ. ಕೂಡಲೇ ಶಿಕ್ಷಕ ಸುಂದರ್ ರಾಡ್ ವಶಕ್ಕೆ ಪಡೆದು ಟೇಬಲ್ ಮೇಲಿಟ್ಟು ಪಾಠ ಆರಂಭಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ಶಿಕ್ಷಕರಿಗೆ ಗೊತ್ತಾಗದಂತೆ ಮತ್ತೆ ರಾಡ್ ತೆಗೆದುಕೊಂಡು ಬ್ಯಾಗ್‍ನಲ್ಲಿ ಇಟ್ಟುಕೊಂಡಿದ್ದಾನೆ. ಶಿಕ್ಷಕ ಸುಂದರ್ ವಿದ್ಯಾರ್ಥಿಯ ಬ್ಯಾಗ್ ಪಡೆಯಲು ಮುಂದಾದಾಗ ಅದೇ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಸುಂದರ್ ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸುಂದರ್ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಹಪಾಠಿಗಳನ್ನೇ ಕೊಂದು ರಕ್ತ ಕುಡಿಯಲು ಸಂಚು ರೂಪಿಸಿದ್ದ ವಿದ್ಯಾರ್ಥಿನಿಯರು ಅರೆಸ್ಟ್

    ಸಹಪಾಠಿಗಳನ್ನೇ ಕೊಂದು ರಕ್ತ ಕುಡಿಯಲು ಸಂಚು ರೂಪಿಸಿದ್ದ ವಿದ್ಯಾರ್ಥಿನಿಯರು ಅರೆಸ್ಟ್

    ಫ್ಲೋರಿಡಾ: ನರಕ ಲೋಕದ ಸೈತಾನನ ಜೊತೆ ಇರಲು ತನ್ನ ಸಹಪಾಠಿಗಳನ್ನೇ ಕೊಲ್ಲಲು ಸಂಚು ರೂಪಿಸಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕದ ಬಾರ್ಟೊನಲ್ಲಿ ನಡೆದಿದೆ.

    ಬಾರ್ಟೊ ಮಿಡಿಲ್ ಸ್ಕೂಲ್‍ನ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ 11 ಮತ್ತು 12 ವರ್ಷದ ವಿದ್ಯಾರ್ಥಿನಿಯರು ತಮ್ಮ ಸ್ನೇಹಿತರನ್ನೇ ಕೊಂದು ಅವರ ರಕ್ತವನ್ನ ಕುಡಿಯಲು ಸಂಚು ರೂಪಿಸಿದ್ದರು.

    ಮಂಗಳವಾರ ಶಾಲೆಗೆ ಹರಿತವಾದ ಚಾಕುಗಳನ್ನ ತಂದಿದ್ದ ವಿದ್ಯಾರ್ಥಿನಿಯರು, ತರಗತಿಗೆ ಹಾಜರಾಗದ ಕಾರಣ ಶಾಲೆಯ ನಿರ್ವಾಹಕರು ಅವರನ್ನ ಹುಡುಕಲು ಹೊರಟಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಶಾಲೆಯ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬಾರ್ಟೊ ಪೊಲೀಸರು ತಿಳಿಸಿದ್ದಾರೆ.

    ವಿಷಯ ತಿಳಿದ ನಿರ್ವಾಹಕರು ಕೂಡಲೇ ಪೊಲೀಸರಿಗೆ ಕರೆ ಮಾಡಿ, ಬಾಲಕಿಯರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಕೊಲೆಗೆ ಸಂಚು ಮತ್ತು ಅಪಾಯಕಾರಿ ಆಯುಧವನ್ನ ತಂದಿರುವ ಅಡಿಯಲ್ಲಿ ಅವರನ್ನ ಪೊಲೀಸರು ಬಂಧಿಸಿದ್ದಾರೆ.

    ಹಾರರ್ ಸಿನಿಮಾದಿಂದ ಪ್ರೇರಿತರಾದ ಬಾಲಕಿಯರು, ಶಾಲೆಯ ವಾಶ್‍ರೂಂನಲ್ಲಿ ಚಿಕ್ಕ ಮಕ್ಕಳನ್ನ ಕೊಂದು, ಅವರ ರಕ್ತವನ್ನ ಕುಡಿದು, ಮಾಂಸವನ್ನ ತಿನ್ನೋದಕ್ಕೆ ಪ್ಲಾನ್ ಮಾಡಿದ್ದರು ಎಂದು ವಿಚಾರಣೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.

    ಸುಮಾರು 15-25 ವಿದ್ಯಾರ್ಥಿಗಳನ್ನ ಹತ್ಯೆ ಮಾಡುವ ಉದ್ದೇಶ ನಮ್ಮದಾಗಿತ್ತು. ಎಲ್ಲರನ್ನ ಕೊಂದ ನಂತರ ಕೊನೆಯಲ್ಲಿ ನಾವು ಆತ್ಮಹತ್ಯೆ ಮಾಡಿಕೊಂಡು ನರಕ ಲೋಕಕ್ಕೆ ಹೋಗಿ, ಅಲ್ಲಿ ಸೈತಾನನ ಜೊತೆ ಇರಲು ಮುಂದಾಗಿದ್ದೇವು ಎಂದು ಬಾಲಕಿಯರು ತಮ್ಮ ಕೃತ್ಯದ ಬಗ್ಗೆ ತಿಳಿಸಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯಿಲ್ಲಿ ಶಾಲೆಯ ಯಾವ ಮಕ್ಕಳಿಗೂ ಹಾನಿಯಾಗಿಲ್ಲ ಮತ್ತು ಮಕ್ಕಳಿಗೆ ಇಂತಹ ವಿಷಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನ ಮತ್ತು ಕೌನ್ಸಿಲರ್ ಗಳನ್ನು ನೇಮಕಗೊಳಿಸುತ್ತೇವೆ ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 7ರ ಬಾಲೆಯನ್ನು ಅಪಹರಿಸಿ ಅತ್ಯಾಚಾರಗೈದ 38ರ ಕಾಮುಕ!

    7ರ ಬಾಲೆಯನ್ನು ಅಪಹರಿಸಿ ಅತ್ಯಾಚಾರಗೈದ 38ರ ಕಾಮುಕ!

    ಚಂಡೀಗಢ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಏಳು ವರ್ಷದ ಅಪ್ರಾಪ್ತ ಬಾಲಕಿಯನ್ನು 39 ವರ್ಷದ ಕಾಮುಕ ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಹರ್ಯಾಣದ ರೆವಾರಿಯಲ್ಲಿ ನಡೆದಿದೆ.

    ಈ ಘಟನೆಯು ಮಂಗಳವಾರ ನಡೆದಿದ್ದು, ಬಾಲಕಿಯನ್ನು ಅಪಹರಿಸಿ ಹತ್ತಿರದ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಬಾಲಕಿ ಮನೆಗೆ ಹಿಂತಿರುಗಿದ್ದಾಳೆ. ಬಾಲಕಿಗೆ ರಕ್ತಸ್ರಾವವಾಗಿದ್ದ ಕಾರಣ ತಾಯಿಗೆ ತಿಳಿಸಿದ್ದಾಳೆ. ಬಳಿಕ ಕಾರ್ಮಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಂಗಳವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಈ ಕುರಿತು ಮತ್ತಷ್ಟು ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಪೊಲೀಸ್ ಉಪ ಅಧೀಕ್ಷಕ (ಡಿಎಸ್ಪಿ) ಸತ್ಪಾಲ್ ಕುಮಾರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಈ ಹಿಂದೆ ಅದೇ ಜಿಲ್ಲೆಯ ಕೋಸ್ಲಿ ಪ್ರದೇಶದ 19 ವರ್ಷದ ಸಿಬಿಎಸ್‍ಇ ಮೇಲಾಧಿಕಾರಿ ಮಹೇಂದ್ರಗಢದ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್ ನಡೆದ ಒಂದೇ ತಿಂಗಳಿಗೆ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಟ್ಟಡ ಕಟ್ಟಿದ 1 ವರ್ಷದ ಬಳಿಕ ಪಿಲ್ಲರ್ ಹಾಕಲು ಮುಂದಾದ ಅಧಿಕಾರಿಗಳು

    ಕಟ್ಟಡ ಕಟ್ಟಿದ 1 ವರ್ಷದ ಬಳಿಕ ಪಿಲ್ಲರ್ ಹಾಕಲು ಮುಂದಾದ ಅಧಿಕಾರಿಗಳು

    ಬೆಳಗಾವಿ: ಪಾಯ ಅಗೆದ ಮೇಲೆ ಬಿಲ್ಡಿಂಗ್ ಸರಿಯಾಗಿ ನಿಲ್ಲಬೇಕು ಅಂದರೆ ಮೊದಲು ಫಿಲ್ಲರ್ ಹಾಕಿ ನಂತರ ಕಟ್ಟಡ ಕಟ್ಟೋಕೆ ಆರಂಭಿಸುತ್ತಾರೆ. ಆದರೆ ಇಲ್ಲೊಂದು ಸರ್ಕಾರಿ ಕಟ್ಟಡಕ್ಕೆ ಕಟ್ಟಡ ಕಟ್ಟಿ ಒಂದು ವರ್ಷದ ಬಳಿಕ ಪಿಲ್ಲರ್ ಹಾಕಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಶಾಲೆಯ ಕಟ್ಟಡ ಕಟ್ಟಿದ ವರ್ಷದ ಬಳಿಕ ಪಿಲ್ಲರ್ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. 2016ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಕೆರೂರು ಗ್ರಾಮಕ್ಕೆ ಹೊಸ ಸರ್ಕಾರಿ ಫ್ರೌಡ ಶಾಲಾ ಕಟ್ಟಡ ಮಂಜೂರಾಗಿತ್ತು. ಕಟ್ಟಡ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪನಿ ತರಾತುರಿಯಲ್ಲಿ ಪ್ರಾರಂಭಮಾಡಿ ಕೆಲಸ ಮುಗಿಸಿತ್ತು. ಹೀಗಾಗಿ ಶಾಲೆಯ ಕಟ್ಟಡ ವಾಲಿದ್ದು ಬೀಳುವ ಸ್ಥಿತಿಗೆ ತಲುಪಿದೆ.

    ಈ ಶಾಲೆಯಲ್ಲಿ 438 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಿತ್ಯ ಜೀವ ಭಯದಲ್ಲೇ ಪಾಠ ಕಲಿಯುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನ ಕೇಳಿದರೆ ಬಿಲ್ಡಿಂಗ್ ಕಾಮಗಾರಿಗೆ ವೆಚ್ಚವಾದ ಮೊತ್ತ ಮತ್ತು ಯಾರಿಗೆ ಟೆಂಡರ್ ಕೊಡಲಾಗಿತ್ತು ಎಂಬುದು ನಮಗೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.

    ಸದ್ಯ ಕಟ್ಟಡ ಬೀಳದಂತೆ ಸೈಡಿಗೆ ಪಿಲ್ಲರ್ ಅಳವಡಿಸಲಾಗಿದೆ. ಆದರೂ ವಿದ್ಯಾರ್ಥಿಗಳಲ್ಲಿ ಆತಂಕ. ಇನ್ನಾದ್ರೂ ಕಳಪೆ ಕಾಮಗಾರಿ ಮಾಡಿ ಕೈ ತೊಳೆದುಕೊಂಡ ಗುತ್ತಿಗೆದಾರರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv