Tag: school

  • ಸಂತಾಪದ ವೇಳೆ ಶಾಲೆಯಲ್ಲಿ ಭಾವುಕರಾದ ಹುತಾತ್ಮ ಯೋಧನ ಶಿಕ್ಷಕರು

    ಸಂತಾಪದ ವೇಳೆ ಶಾಲೆಯಲ್ಲಿ ಭಾವುಕರಾದ ಹುತಾತ್ಮ ಯೋಧನ ಶಿಕ್ಷಕರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರುವನ್ನು ನೆನಪು ಮಾಡಿಕೊಂಡು ಅವರ ಶಿಕ್ಷಕರು ಸಂತಾಪ ಸೂಚಿಸುವ ವೇಳೆ ಭಾವುಕರಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ, ಕೆಎಂ ದೊಡ್ಡಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಗುರುವಾರ ಅವರು ಹುತಾತ್ಮರಾದ ಹಿನ್ನೆಲೆಯಲ್ಲಿ ಅವರು ಓದಿದ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದರು. ಈ ವೇಳೆ ಗುರು ಅವರಿಗೆ ಪಾಠ ಮಾಡಿದ ಶಿಕ್ಷಕರು ಭಾವುಕರಾದರು.

    ಶಿಕ್ಷಕಿ ಲತಾ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಗುರು ಶಾಲೆಯಲ್ಲಿ ತುಂಬಾ ಒಳ್ಳೆ ವಿದ್ಯಾರ್ಥಿ. ಓದಿನಲ್ಲಿ ಮಾತ್ರವಲ್ಲದೇ ಇತರ ಚಟುವಟಿಕೆಯಲ್ಲಿ ತುಂಬಾ ಸಕ್ರಿಯರಾಗಿ ಭಾಗಿಯಾಗುತ್ತಿದ್ದರು. ನಿಮ್ಮ ಭವಿಷ್ಯ ಏನು ಎಂದು ಕೇಳುತ್ತಿದ್ದಾಗ ಗುರು ಹಾಗೂ ಅವರ ಸ್ನೇಹಿತರು ನಾವು ಸೈನಿಕರಾಗುತ್ತೇವೆ ಎಂದು ಉತ್ತರಿಸಿದ್ದರು” ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

    ಗುರು ನಮ್ಮ ಶಾಲೆಯಲ್ಲಿ ಓದಿದ್ದಾರೆ ಎಂಬ ಹೆಮ್ಮೆ ಒಂದು ಕಡೆ ಇದ್ದರೆ, ಮತ್ತೊಂದೆಡೆ ದೇಶ ಪ್ರೇಮ ಇಟ್ಟುಕೊಂಡು ದೇಶ ಸೇವೆ ಮಾಡಬೇಕು ಎಂದು ಸೈನ್ಯ ಸೇರಿದ ಗುರು ಅವರು ಉಗ್ರರ ದಾಳಿಗೆ ಬಲಿಯಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

    ಗುರು ಅವರ ಮದುವೆ ಆಗಿ ಕೇವಲ 8 ತಿಂಗಳು ಎಂಬ ವಿಷಯ ತಿಳಿಯಿತು. ಗುರು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಧೈರ್ಯ ಸಿಗಲಿ. ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕು ಹಾಗೂ ಮುಂದೆ ಈ ರೀತಿ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಲತಾ ಹೇಳಿದರು.

    https://www.youtube.com/watch?v=P8Y_QHDFbO4&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಸಿಯೂಟ ಸೇವಿಸಿ 17 ಮಕ್ಕಳು ಅಸ್ವಸ್ಥ!

    ಬಿಸಿಯೂಟ ಸೇವಿಸಿ 17 ಮಕ್ಕಳು ಅಸ್ವಸ್ಥ!

    ಚಿಕ್ಕಮಗಳೂರು: ಶಾಲೆಯಲ್ಲಿ ಮಕ್ಕಳಿಗೆ ನೀಡಿದ್ದ ಬಿಸಿಯೂಟದ ಪುಳಿಯೊಗರೆ ತಿಂದು, ಹಾಲು ಕುಡಿದ 17 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಶಿರವಾಸೆಯಲ್ಲಿ ನಡೆದಿದೆ.

    ಶಿರವಾಸೆ ಗ್ರಾಮದಲ್ಲಿರುವ ವಿವೇಕಾನಂದ ಶಾಲೆಯಲ್ಲಿ ಮಧ್ಯಾಹ್ನ ಊಟದ ಬಳಿಕ ಮಕ್ಕಳಿಗೆ ಹಾಲನ್ನು ನೀಡಲಾಗಿತ್ತು. ಮಕ್ಕಳು ಊಟ ಮಾಡಿ ಹಾಲು ಕುಡಿಯುತ್ತಿದ್ದಂತೆ ತಲೆಸುತ್ತು, ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಕೂಡಲೇ ಎಚ್ಚೆತ್ತ ಶಿಕ್ಷಕರು ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಅಲ್ಲಿಂದ ಎಲ್ಲಾ ಮಕ್ಕಳನ್ನ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಆಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ತಹಶೀಲ್ದಾರ್ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಮಾಧ್ಯಹ್ನದ ಊಟಕ್ಕೆ ತಯಾರು ಮಾಡಲಾಗಿದ್ದ ಪುಳಿಯೊಗರೆ ಹಾಗೂ ಹಾಲನ್ನು ಪರೀಕ್ಷೆಗೆಂದು ಲ್ಯಾಬ್‍ಗೆ ಕಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

    ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

    ಚಿಕ್ಕಬಳ್ಳಾಪುರ: ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಲಕ್ಷ್ಮೀದೇವಿಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

    ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಬಿಸಿಯೂಟ ಸೇವಿಸುತ್ತಿದ್ದರು. ಹಾಗೆಯೇ ಇಂದು ಕೂಡ ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳು ಸೇವಿಸಿದ್ದಾರೆ. ಆದ್ರೆ ಊಟ ಸೇವನೆ ಬಳಿಕ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ವಾಂತಿ ಭೇದಿ ಶುರುವಾಗಿ ಶಾಲೆಯಲ್ಲಿಯೇ ಅಸ್ವಸ್ಥರಾಗಿದ್ದಾರೆ. ಕೂಡಲೇ ಎಚ್ಚೆತ್ತ ಶಿಕ್ಷಕರು ಅಸ್ವಸ್ಥ ವಿದ್ಯಾರ್ಥಿಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಸದ್ಯ ಈ ಘಟನೆಯಿಂದ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು, ಬಿಸಿಯೂಟ ಸರಬರಾಜು ಮಾಡುವ ಗುತ್ತಿಗೆದಾರ ಶ್ರೀರಾಮರೆಡ್ಡಿ ಅವರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಶಿಕ್ಷಕರು ಹಾಗೂ ಪೋಷಕರು ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಾಂಶುಪಾಲರ ಕೋಣೆಯಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ

    ಪ್ರಾಂಶುಪಾಲರ ಕೋಣೆಯಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ

    ವಿಜಯಪುರ: ಸರ್ಕಾರಿ ಶಾಲೆಯ ಪ್ರಾಂಶುಪಾಲರ ಕೋಣೆಯಲ್ಲಿ ಕೆಲ ಪುಡಾರಿಗಳು ದೇಹದ ಕೂದಲನ್ನು ತಗೆದು ಬಿಸಾಕಿದ ಘಟನೆ ವಿಜಯಪುರದ ಜುಮ್ನಾಳ ಗ್ರಾಮದಲ್ಲಿ ನಡೆದಿದೆ.

    ಜುಮ್ನಾಳ ಸರ್ಕಾರಿ ಗಂಡು ಮಕ್ಕಳ ಶಾಲೆಯ ಪ್ರಾಂಶುಪಾಲರ ಕೋಣೆಯ ಗುರುವಾರ ರಾತ್ರಿ ಬೀಗ ಒಡೆದು ಕೋಣೆಯ ಮೇಜಿನ ಮೇಲೆ ದೇಹದ ಕೂದಲು ಮತ್ತು ಅದನ್ನು ತಗೆಯುವುದಕ್ಕೆ ಬಳಸಿದ ಬ್ಲೇಡ್ ಸೇರಿದಂತೆ ಸಾಮಗ್ರಿಗಳನ್ನು ಅಲ್ಲಿಯೇ ಬಿಸಾಡಿದ್ದಾರೆ. ಅಲ್ಲದೆ ಗುಟ್ಕಾ ಚೀಟಿಗಳನ್ನು ಎಸೆದು ಪರಾರಿಯಾಗಿದ್ದಾರೆ.

    ಇಂದು ಶಾಲೆಯ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಶಾಲಾ ಮಕ್ಕಳು ಸೇರಿದಂತೆ ಶಾಲಾ ಸಿಬ್ಬಂದಿ ಭಯ ಭೀತರಾಗಿದ್ದು, ಕಿಡಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಕಿಡಿಗೇಡಿಗಳು ಪ್ರಾಂಶುಪಾಲರ ಕೋಣೆಯಲ್ಲಿ ಈ ರೀತಿ ಕೃತ್ಯ ಎಸಗಿರುವುದು ವಿಚಿತ್ರ ಎಂದು ಎನಿಸುತ್ತದೆ. ಈ ಕೆಲಸ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯರಾದ ಜಿತೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾದ ಶಿಕ್ಷಕ

    ಶಾಲೆಯ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾದ ಶಿಕ್ಷಕ

    ರಾಂಚಿ: ಶಿಕ್ಷಕನೋರ್ವ ಶಾಲೆಯ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಾರ್ಖಂಡ್ ರಾಜ್ಯದ ಕೊಡ್ರಮಾ ಜಿಲ್ಲೆಯ ಜಿ.ಎಸ್.ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದಿದೆ.

    ವಿಶಾಲ್ ಶರ್ಮಾ ಆತ್ಮಹತ್ಯೆಗೆ ಶರಣಾದ ಶಿಕ್ಷಕ. ವಿಶಾಲ್ ಶರ್ಮಾ ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮಂಗಳವಾರ ಎಂದಿನಂತೆ ಬೆಳಗ್ಗೆ ಪ್ರಾರ್ಥನೆಗೆ ಶಿಕ್ಷಕ ವಿಶಾಲ್ ಗೈರಾಗಿದ್ದರು. ಮಕ್ಕಳು ಶಿಕ್ಷಕರನ್ನು ಕರೆ ತರುವುದಾಗಿ ಅವರ ಕೋಣೆಯತ್ತ ತೆರಳಿದ್ದರು. ಬಾಗಿಲು ಹಾಕಿದ್ದರಿಂದ ಮಕ್ಕಳು ಕಿಟಕಿಯಲ್ಲಿ ನೋಡಿದಾಗ ವಿಶಾಲ್ ಶವ ನೇತಾಡುವ ಸ್ಥಿತಿಯಲ್ಲಿತ್ತು. ಇದನ್ನ ಕಂಡ ಮಕ್ಕಳು ಜೋರಾಗಿ ಕಿರುಚುತ್ತಾ ಮೈದಾನದತ್ತ ಓಡಿ ಬಂದರು ಎಂದು ಶಾಲೆಯ ನಿರ್ದೇಶಕ ನಿತೇಶ್ ಕುಮಾರ್ ತಿಳಿಸಿದ್ದಾರೆ.

    ಸದ್ಯ ಶಾಲೆಗೆ ರಜೆ ನೀಡಲಾಗಿದ್ದು, ಪೊಲೀಸರು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ವಿಶಾಲ್ ಮೂಲತಃ ಗಿರಿಡಿಹ ಜಿಲ್ಲೆಯ ಲೆದಾ ಬರ್ಕಟ್ಟಾ ನಿವಾಸಿಯಾಗಿದ್ದು, ಆತನ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಸೋಮವಾರ ರಾತ್ರಿ 9 ಗಂಟೆಯವರೆಗೂ ವಿಶಾಲ್ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ. ಶಾಲೆಯಲ್ಲಿ ಆಯೋಜಿಸಿರುವ ಸರಸ್ವತಿ ಪೂಜೆಗೆ ಯಾರನ್ನು ಆಹ್ವಾನಿಸಬೇಕು ಎಂಬುದರ ಕುರಿತಾಗಿ ನಮ್ಮ ಜೊತೆ ಚರ್ಚೆ ನಡೆಸಿದ್ದರು. ತಾವೇ ಎಲ್ಲ ಆಹ್ವಾನ ಪತ್ರಿಕೆಗಳ ಮೇಲೆ ಅತಿಥಿಗಳ ಹೆಸರು ಬರೆದು ತಮ್ಮ ಕೋಣೆಯತ್ತ ಹೋಗಿದ್ದರು. ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿಶಾಲ್ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ನಿತೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕ್ಲಾಸಿಗೆ ನುಗ್ಗಿತು 7 ಅಡಿ ಉದ್ದದ ಕಾಳಿಂಗ ಸರ್ಪ- ವಿದ್ಯಾರ್ಥಿಗಳು ಕಕ್ಕಾಬಿಕ್ಕಿ

    ಕ್ಲಾಸಿಗೆ ನುಗ್ಗಿತು 7 ಅಡಿ ಉದ್ದದ ಕಾಳಿಂಗ ಸರ್ಪ- ವಿದ್ಯಾರ್ಥಿಗಳು ಕಕ್ಕಾಬಿಕ್ಕಿ

    ಉಡುಪಿ: ಬರೋಬ್ಬರಿ 7 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಶಾಲೆಯೊಂದರ ತರಗತಿಗೆ ನುಗ್ಗಿ ಮಕ್ಕಳನ್ನು ಬೆಚ್ಚಿಬೀಳಿಸಿದ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ನಡೆದಿದೆ.

    ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕಾಳಿಂಗ ಸರ್ಪ, ಚಿರತೆ, ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದ್ದು, ಗದ್ದೆ, ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪ ಇದೀಗ ಹೊಸಂಗಡಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ತಗರತಿಗೆ ಬಂದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿತ್ತು. ಕಾಳಿಂಗ ಸರ್ಪ ಕ್ಲಾಸಿಗೆ ನುಗ್ಗಿದ ಪರಿಣಾಮ ನೂರಾರು ಮಕ್ಕಳು ಭಯಭೀತಗೊಂಡರು. ಅಲ್ಲದೆ ಬರೋಬ್ಬರಿ 7 ಅಡಿ ಉದ್ದದ ಕಾಳಿಂಗನನ್ನು ನೋಡಿ ವಿದ್ಯಾರ್ಥಿಗಳು ತರಗತಿಯಿಂದ ಹೊರ ಓಡಿದ್ದಾರೆ. ವಿದ್ಯಾರ್ಥಿಗಳ ಭಯ ಕಂಡು ಶಿಕ್ಷಕರು ತಕ್ಷಣ ಸ್ಥಳೀಯ ಉರಗ ತಜ್ಞರನ್ನು ಕರೆಸಿ ಸರ್ಪವನ್ನು ಹಿಡಿಸಿದ್ದಾರೆ.

    ಸ್ಥಳಕ್ಕೆ ಬಂದು ಉರಗ ತಜ್ಞರು ಕಾರ್ಯಾಚರಣೆ ಇಳಿದ ಸಂದರ್ಭದಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ಹರಸಾಹಸ ಪಡಬೇಕಾಯ್ತು. ಬಿಲದೊಳಗೆ ಸೇರಲು ಹೋಗಿದ್ದ ಕಾಳಿಂಗ ಸರ್ಪವನ್ನು ಕೊನೆಗೂ ಸೆರೆಹಿಡಿದು ಗೋಣಿಚೀಲಕ್ಕೆ ತುಂಬಿಸಲಾಯ್ತು. ಗೋಣಿಯ ಬಾಯಿಗೆ ಪೈಪ್ ಕಟ್ಟಿ, ಕೃತಕ ಬಿಲವನ್ನು ನಿರ್ಮಿಸಿ ಹಾವನ್ನು ಸೆರೆ ಹಿಡಿದ ದೃಶ್ಯ ಬಹಳ ರೋಚಕವಾಗಿತ್ತು. ಹಾವನ್ನು ಸೆರೆ ಹಿಡಿದ ಮೇಲೆ ಮಕ್ಕಳು ಹಾಗೂ ಶಿಕ್ಷಕರು ನಿರಾಳಾರಾದರು. ಸದ್ಯ ಸರೆಹಿಡಿದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧೋನಿ, ಕೊಹ್ಲಿ ಇಬ್ಬರ ಪತ್ನಿಯರು ಒಂದೇ ಶಾಲೆಯ ವಿದ್ಯಾರ್ಥಿಗಳು – ಫೋಟೋ ವೈರಲ್

    ಧೋನಿ, ಕೊಹ್ಲಿ ಇಬ್ಬರ ಪತ್ನಿಯರು ಒಂದೇ ಶಾಲೆಯ ವಿದ್ಯಾರ್ಥಿಗಳು – ಫೋಟೋ ವೈರಲ್

    ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಎಷ್ಟು ಖ್ಯಾತಿ ಪಡೆದಿದ್ದರೋ ಅವರ ಪತ್ನಿಯರೂ ಕೂಡ ಅಷ್ಟೇ ಹೆಸರು ಪಡೆದಿದ್ದಾರೆ. ಆದರೆ ಈ ಇಬ್ಬರ ಕುರಿತು ವಿಶೇಷ ಫೋಟೋವೊಂದು ವೈರಲ್ ಆಗಿದೆ.

    ಧೋನಿ ಪತ್ನಿ ಸಾಕ್ಷಿ ಹಾಗೂ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಇಬ್ಬರು ಒಂದೇ ಶಾಲೆಯ ವಿದ್ಯಾರ್ಥಿಗಳು ಎನ್ನುವ ವಿಚಾರ ಸದ್ಯ ಬಹಿರಂಗವಾಗಿದ್ದು, ಇಬ್ಬರು ಶಾಲೆಯ ದಿನಗಳಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಸದ್ಯ ವೈರಲ್ ಆಗಿರುವ ಫೋಟೋಗಳಲ್ಲಿ ಇಬ್ಬರು ಶಾಲೆಯ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ತಯಾರಾಗಿರುವುದನ್ನು ಕಾಣಬಹುದು. ಫೋಟೋದಲ್ಲಿ ಅನುಷ್ಕಾ ಶರ್ಮಾ ಪಿಂಕ್ ಗಾಗ್ರ ಚೊಲಿ ಡ್ರೆಸ್ ಧರಿಸಿದ್ದರೆ, ಸಾಕ್ಷಿ ರಾಣಿ ರೀತಿಯಲ್ಲಿ ಡ್ರೆಸ್ ಹಾಕಿದ್ದಾರೆ. ಅಲ್ಲದೇ ಶಾಲೆಯ ಎಲ್ಲಾ ಮಕ್ಕಳ ಗ್ರೂಪ್ ಫೋಟೋ ಕೂಡ ಸದ್ಯ ಲಭ್ಯವಾಗಿದೆ.

    ಒಂದೇ ಶಾಲೆಯಲ್ಲಿ ಓದಿದ ವಿಚಾರದ ಬಗ್ಗೆ ಇದುವರೆಗೂ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ. ಇಬ್ಬರೂ ಅಸ್ಸಾಂನ ಸೇಂಟ್ ಮೇರಿ ಶಾಲೆಯಲ್ಲಿ ಓದಿದ್ದು, 2013 ರಲ್ಲಿ ಇಬ್ಬರು ಪರಸ್ಪರ ಭೇಟಿಯ ವೇಳೆ ಸತ್ಯ ತಿಳಿದುಬಂದಿದೆ. ಅನುಷ್ಕಾ ಶರ್ಮಾ ಮಾತ್ರ ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು ಎಂದು ವರದಿಯಾಗಿದೆ. ಅಂದಹಾಗೇ ಇಬ್ಬರು ಓದಿದ್ದು ಅಸ್ಸಾಂನ ಸಣ್ಣ ಪಟ್ಟಣದಲ್ಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಾಲಾ ಪ್ರವಾಸಕ್ಕೆಂದು ಟಾಟಾ ಏಸ್‍ನಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿದ ಶಿಕ್ಷಕರು

    ಶಾಲಾ ಪ್ರವಾಸಕ್ಕೆಂದು ಟಾಟಾ ಏಸ್‍ನಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿದ ಶಿಕ್ಷಕರು

    ದಾವಣಗೆರೆ: ಶಾಲಾ ಪ್ರವಾಸಕ್ಕೆಂದು 2 ಟಾಟಾ ಏಸ್‍ನಲ್ಲಿ ಶಿಕ್ಷಕರು ಶಾಲಾ ಮಕ್ಕಳನ್ನು ಕುರಿಗಳಂತೆ ತುಂಬಿದ ಅಮಾನವೀಯ ಘಟನೆ ದಾವಣಗೆರೆಯ ಶ್ರೀ ಸತ್ಯ ಸಾಯಿ ಶಾಲೆಯಲ್ಲಿ ನಡೆದಿದೆ.

    ಶಾಲಾ ಆಡಳಿತ ಮಂಡಳಿ ಶಾಲಾ ಪ್ರವಾಸಕ್ಕೆ 2 ಟಾಟಾಏಸ್ ತರಿಸಿಕೊಂಡಿದ್ದರು. ಶಾಲಾ ಶಿಕ್ಷಕರು ಟಾಟಾ ಏಸ್‍ನಲ್ಲಿ 30 ರಿಂದ 40 ಮಕ್ಕಳನ್ನು ತುಂಬಿದ್ದಾರೆ. ಟಾಟಾ ಏಸ್‍ನಲ್ಲಿ ಮಕ್ಕಳು ಒಬ್ಬರ ಮೇಲೆ ಒಬ್ಬರು ಕುಳಿತು ಪ್ರಯಾಣ ಮಾಡುತ್ತಿದ್ದಾರೆ.

    ದಾವಣಗೆರೆಯ ಅನಗೋಡು ಪಾರ್ಕ್‍ಗೆ ಶಿಕ್ಷಕರು ಪ್ರವಾಸ ಕರೆ ತಂದಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ. ಅಪಘಾತ ವಾದರೆ ಯಾರು ಹೊಣೆ ಎಂದು ಸಾರ್ವಜನರಿಕರು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ ಶಾಲೆಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಧ್ಯಾಹ್ನದ ಬಿಸಿಯೂಟಕ್ಕೆ ಹುಳಭರಿತ ಅಕ್ಕಿ, ಬೇಳೆ ಪೂರೈಕೆ – ತಿನ್ನಲಾಗದೇ ಅನ್ನ ಎಸೆಯುತ್ತಿರೋ ವಿದ್ಯಾರ್ಥಿಗಳು

    ಮಧ್ಯಾಹ್ನದ ಬಿಸಿಯೂಟಕ್ಕೆ ಹುಳಭರಿತ ಅಕ್ಕಿ, ಬೇಳೆ ಪೂರೈಕೆ – ತಿನ್ನಲಾಗದೇ ಅನ್ನ ಎಸೆಯುತ್ತಿರೋ ವಿದ್ಯಾರ್ಥಿಗಳು

    ಮೈಸೂರು: ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಹುಳಭರಿತ ಆಹಾರ ಸರಬರಾಜಾಗುತ್ತಿದ್ದು, ತಿನ್ನಲಾಗದೇ ಮಕ್ಕಳು ಅನ್ನ ಬಿಸಾಕುವಂತಹ ಪರಿಸ್ಥಿತಿ ಎದುರಾಗಿದೆ.

    ಹೌದು. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿದ್ಯಾಂತಹ ಸುಮಾರು 304 ಶಾಲೆಯ ವಿದ್ಯಾರ್ಥಿಗಳು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಶಾಲೆಗಳಿಗೆ ಉತ್ತಮವಾದ ಆಹಾರ ಪದಾರ್ಥಗಳ ಪೂರೈಕೆ ಆಗುತ್ತಿಲ್ಲ. ಕಳೆದು ಎರಡು ತಿಂಗಳಿಂದ ಶಾಲೆಗಳಿಗೆ ಪೂರೈಕೆಯಾಗಿರುವ ತೊಗರಿಬೇಳೆ ಹಾಗೂ ಅಕ್ಕಿಯಲ್ಲಿ ಓಟ್ಟೆಹುಳುಗಳು ತುಂಬಿವೆ. ಬಿಸಿಯೂಟದ ಸಿಬ್ಬಂದಿ ಇವುಗಳನ್ನು ಎಷ್ಟೇ ಶುಚಿ ಮಾಡಿದ್ರೂ ತೆಗೆಯಲು ಸಾಧ್ಯವಾಗುತ್ತಿಲ್ಲ. ಯಾವುದೇ ಪೋಷಕಾಂಶ ಸಿಗದ ಈ ಆಹಾರವನ್ನು ಮಕ್ಕಳು ತಿನ್ನಲು ಸಾಧ್ಯವಾಗದೇ ಬಿಸಾಕುತ್ತಿದ್ದಾರೆ.

    ಈ ವಿಚಾರವನ್ನು ಅಕ್ಷರ ದಾಸೋಹದ ಅಧಿಕಾರಿಗಳ ಗಮನಕ್ಕೆ ತಲಾಗಿದೆ. ಆದ್ರೆ ಅವರು, ಆಹಾರ ಇಲಾಖೆಯಿಂದ ಪೂರೈಕೆಯಾಗುತ್ತಿರುವ ಆಹಾರವೇ ಇದಾಗಿದ್ದು ನಾವೇನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಇತ್ತ ಸಿಬ್ಬಂದಿ ಬೇರೆ ದಾರಿಯಿಲ್ಲ ಎಂಬಂತೆ ಇದೇ ಆಹಾರವನ್ನು ಮಧ್ಯಾಹ್ನ ಅಡುಗೆ ಮಾಡಿ ಮಕ್ಕಳಿಗೆ ನೀಡುವಂತೆ ಆಗಿದೆ. ಹಸಿದು ಬಂದ ಬಡ ಮಕ್ಕಳು ಕೂಡ ತಟ್ಟೆಯಲ್ಲಿ ಹುಳ ಕಂಡರೂ ಕಣ್ಮುಚ್ಚಿಕೊಂಡು ತಿನ್ನುತ್ತಿರುವುದು ವಿಷಾದದ ಸಂಗತಿಯಾಗಿದೆ.

    ಒಟ್ಟಿನಲ್ಲಿ ಬಿಸಿಯೂಟ ತಯಾರಿಕೆಗೆ ಶಾಲೆಗಳಿಗೆ ಕಳಪೆ ಆಹಾರ ಪದಾರ್ಥ ಪೂರೈಕೆಯಾಗುತ್ತಿದ್ದು ಮಕ್ಕಳ ಪ್ರಾಣದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟು ಎಸೆದ ಪೇದೆ ವಜಾ

    ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟು ಎಸೆದ ಪೇದೆ ವಜಾ

    ಮುಂಬೈ: ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟುಗಳನ್ನು ಎಸೆದಿದ್ದ ಪೇದೆಯನ್ನು ಮಹಾರಾಷ್ಟ್ರ ಪೊಲೀಸ್ ವಜಾಗೊಳಿಸಿ ಆದೇಶ ಹೊರಡಿಸಿದೆ.

    ಪ್ರಮೋದ್ ವಾಲ್ಕೆ ವಜಾಗೊಂಡ ಪೇದೆ. ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಪೇದೆಯನ್ನು ವಜಾ ಮಾಡಿದ್ದಾರೆ.

    ಆಗಿದ್ದೇನು?:
    ನಾಗ್ಪುರದ ಜಿಲ್ಲಾ ಪರಿಷದ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನಡೆದಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಮೋದ್ ವಾಲ್ಕೆ ನೋಡುತ್ತಿದ್ದರು. ಈ ವೇಳೆ 6ನೇ ತರಗತಿಯ ವಿದ್ಯಾರ್ಥಿನಿಯರು ವೇದಿಕೆಯ ಮೇಲೆ ಚಕ್ ದ್ ಇಂಡಿಯಾ ಸಿನಿಮಾದ ‘ಆಜಾ ಆಜಾ ಜಿಂದೆ ಶಾಮೆ ಆನೆ ಕೇತಲೆ’ ಹಾಡಿಗೆ ನೃತ್ಯ ಮಾಡುತ್ತಿದ್ದರು. ತಕ್ಷಣವೇ ವೇದಿಕೆ ಏರಿದ ಪ್ರಮೋದ್ ವಾಲ್ಕೆ ಮಕ್ಕಳ ಮೇಲೆ ನೋಟುಗಳನ್ನು ಹಾಕಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವೇದಿಕೆಯ ಹತ್ತಿ, ಮಕ್ಕಳ ಮೇಲೆ ನೋಟ್ ಹಾಕಿರುವುದು ಆಕ್ಷೇಪಾರ್ಹವಾಗಿದೆ. ಹೀಗಾಗಿ ಅವರನ್ನು ವಜಾ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ವೈರಗಡೆ ತಿಳಿಸಿದ್ದಾರೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಮೋದ್ ವಾಲ್ಕೆ, ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ನನ್ನನ್ನು ಜಿಲ್ಲಾ ಪರಿಷದ್ ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಕೆಲವರು ಮಕ್ಕಳನ್ನು ಪ್ರೋತ್ಸಾಹಿಸಲು ಹಣ ಹಾಕಲು ವೇದಿಕೆಯ ಮೇಲೆ ಹತ್ತಲು ಮುಂದಾಗಿದ್ದರು. ಅವರನ್ನು ತಡೆದು, ಹಣವನ್ನು ಸಂಗ್ರಹಿಸಿ, ನಾನೇ ಮಕ್ಕಳ ಮೇಲೆ ಹಾಕಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv