Tag: School Vehicle

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಶಾಲಾ ವಾಹನ ಅಪಘಾತ – ಓರ್ವ ಮಹಿಳೆ ಸಾವು

    ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಶಾಲಾ ವಾಹನ ಅಪಘಾತ – ಓರ್ವ ಮಹಿಳೆ ಸಾವು

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಬನವಾಸಿ (Banavasi) ಮತ್ತು ಯಲ್ಲಾಪುರ (Yallapura) ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ಅಜಾಗರೂಕತೆಯಿಂದ ಶಾಲಾ ವಾಹನ ಅಪಘಾತಕ್ಕೀಡಾಗಿದ್ದು, ವೃದ್ಧೆಯೊಬ್ಬರು ಸಾವಪ್ಪಿದ್ದಾರೆ.

    ಬನವಾಸಿ ಹೆದ್ದಾರಿಯಲ್ಲಿ ಶಾಲಾ ಬಸ್ ಪಲ್ಟಿ – ಮಹಿಳೆ ಸಾವು
    ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು 7 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಪಘಾತ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಬುಗುಡಿಕೊಪ್ಪದ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ 766E ರಲ್ಲಿ ಈ ಘಟನೆ ನಡೆದಿದೆ.

    ದುರಂತದಲ್ಲಿ ಕಸ್ತೂರಮ್ಮ (60) ಅವರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಬನವಾಸಿಯ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಗೆ ರವಾನೆ ಮಾಡಲಾಗಿದೆ. ರಾಣಿ ಬೆನ್ನೂರಿನ ಪರಿಣಿತಿ ವಿದ್ಯಾ ಮಂದಿರದ ಶಾಲೆಯವರು, ರಾಣಿ ಬೆನ್ನೂರಿನ ಸಿದ್ಧಾರೂಢ ನಗರದಿಂದ ಶಿರಸಿಯತ್ತ ಮಕ್ಕಳನ್ನು ಪ್ರವಾಸಕ್ಕೆ ಕರೆತರುತ್ತಿದ್ದರು. ಈ ವೇಳೆ ಚಾಲಕನ ಅತಿವೇಗದ ಚಾಲನೆಯಿಂದಲೇ ಘಟನೆ ಸಂಭವಿಸಿದ್ದು, ಇದೀಗ ಈ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ

    ಮತ್ತೊಂದೆಡೆ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲು ಘಟ್ಟದಲ್ಲಿ ಕೆಟ್ಟು ನಿಂತಿದ್ದ ಟ್ಯಾಂಕರ್‍ಗೆ ಶಾಲಾ ವಾಹ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಸುಮಾರು 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ- ಟಿಕೆಟ್ ನಿರಾಕರಿಸಿದ್ದಕ್ಕೆ ಆಪ್ ಸೇರಿದ ಶಾಸಕ

    ಹುಬ್ಬಳ್ಳಿಯ ಸೈಂಟ್ ಅಂಥೋನಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹುಬ್ಬಳಿಯಿಂದ ಅಂಕೋಲಾ ಮಾರ್ಗವಾಗಿ ಸುಂಕಸಾಳದತ್ತ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ಘಟ್ಟದಲ್ಲಿ ಓವರ್ ಟೇಕ್ ಮಾಡಲು ಹೋಗಿ ಕೆಟ್ಟು ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿಹೊಡೆದಿದೆ. ಇದರ ಪರಿಣಾಮ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶಾಲಾ ವಾಹನ, ಬೈಕ್ ನಡುವೆ ಅಪಘಾತ – ಸವಾರ ಸಾವು

    ಶಾಲಾ ವಾಹನ, ಬೈಕ್ ನಡುವೆ ಅಪಘಾತ – ಸವಾರ ಸಾವು

    ಮಡಿಕೇರಿ: ಶಾಲಾ ವಾಹನ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಟ್ಟಳ್ಳಿ ಸಮೀಪ ಕತ್ತಲೆಕಾಡು ತಿರುವಿನಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಕೂಲಿ ಕೆಲಸಕ್ಕೆಂದು ಸಿದ್ದಾಪುರಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಮತ್ತು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿತ್ತು. ಘಟನೆಯಲ್ಲಿ ಮಕ್ಕಂದೂರು ನಿವಾಸಿ ಕೂಲಿ ಕಾರ್ಮಿಕ ಲಿತೀಶ್ ಪೂಜಾರಿ (22) ಮತ್ತು ಮೂರನೇ ಮೈಲ್ ನಿವಾಸಿ ಬಿ.ಎನ್.ಕೋಟಿ (60) ತೀವ್ರ ಗಾಯಗೊಂಡಿದ್ದರು. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ ಉಚಿತ: ಕೇಂದ್ರ

    ಇಬ್ಬರನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಲತೀಶ್ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಬಿ.ಎನ್ ಕೋಟಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಾಕಿದ ನಾಯಿಯಿಂದಲ್ಲೆ ಮೃತಪಟ್ಟ 82 ವರ್ಷದ ವೃದ್ಧೆ

    Live Tv
    [brid partner=56869869 player=32851 video=960834 autoplay=true]

  • ಶಾಲಾ ವಾಹನಗಳಲ್ಲಿ ಸಂಚರಿಸುವ ನಿಮ್ಮ ಮಕ್ಕಳು ಎಷ್ಟು ಸೇಫ್ – ಪೋಷಕರಿಗೆ ಭಾಸ್ಕರ್ ರಾವ್ ಪ್ರಶ್ನೆ

    ಶಾಲಾ ವಾಹನಗಳಲ್ಲಿ ಸಂಚರಿಸುವ ನಿಮ್ಮ ಮಕ್ಕಳು ಎಷ್ಟು ಸೇಫ್ – ಪೋಷಕರಿಗೆ ಭಾಸ್ಕರ್ ರಾವ್ ಪ್ರಶ್ನೆ

    ಬೆಂಗಳೂರು: ಪೊಲೀಸ್ ಕಮೀಷನರ್ ಬಾಸ್ಕರ್ ರಾವ್, ಶಾಲಾ ವಾಹನವೊಂದರ ಫೋಟೋ ಹಾಕಿ ಶಾಲೆ ಆಡಳಿತ ಮಂಡಳಿ ಮತ್ತು ಪೋಷಕರನ್ನು ಪ್ರಶ್ನಿಸಿದ್ದಾರೆ.

    4+1 ಜನರ ಸಾಮಥ್ರ್ಯವುಳ್ಳ ಓಮಿನಿ ವಾಹನದಲ್ಲಿ 15 ಮಕ್ಕಳು ಪ್ರಯಾಣಿಸುತ್ತಿದ್ದಾರೆ. ಈ ರೀತಿಯ ವಾಹನಗಳನ್ನು ತಡೆದ್ರೆ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ವಾಹನದ ಸಿಲಿಂಡರ್ ಮೇಲೆ ಮಕ್ಕಳು ಕುಳಿತಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಸಾಗಿಸುವ ವಾಹನಗಳು ಅಪಘಾತಕ್ಕೊಳಗಾಗುವ ಸಾಧ್ಯತೆಗಳಿರುತ್ತವೆ. ಒಂದ ವೇಳೆ ಅಪಘಾತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.

    ಭಾಸ್ಕರ್ ರಾವ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಿಮ್ಮ ಕರ್ತವ್ಯವನ್ನು ನೀವು ಮಾಡಿ. ಯಾರ ಮುಲಾಜಿಗೆ ಒಳಗಾಗೋದು ಒಳಿತಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ. ಮಕ್ಕಳ ಸುರಕ್ಷತೆಯನ್ನು ಶಾಲೆಗಳು ಯೋಚನೆ ಮಾಡಿ, ಉತ್ತಮವಾದ ವಾಹನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಬರೆದುಕೊಂಡು ಅದೇ ರೀತಿ ಬೇರೆ ಶಾಲಾ ವಾಹನಗಳ ಫೋಟೋ ಹಂಚಿಕೊಂಡಿದ್ದಾರೆ.

  • 80 ಮಕ್ಕಳಿದ್ದ ಶಾಲಾ ವಾಹನ ಪಲ್ಟಿ – ತಪ್ಪಿತು ಭಾರೀ ಅನಾಹುತ

    80 ಮಕ್ಕಳಿದ್ದ ಶಾಲಾ ವಾಹನ ಪಲ್ಟಿ – ತಪ್ಪಿತು ಭಾರೀ ಅನಾಹುತ

    ವಿಜಯಪುರ: ಚಲಿಸುತ್ತಿದ್ದ ಶಾಲಾ ವಾಹನದ ಟೈರ್ ಸ್ಫೋಟಗೊಂಡು ತೆರೆದ ಬಾವಿಯ ಪಕ್ಕದಲ್ಲೇ ಉರುಳಿಬಿದ್ದ ಘಟನೆ ವಿಜಯಪುರದ ಇಂಡಿ ತಾಲೂಕಿನ ಧೂಳಖೇಡ ಬಳಿ ನಡೆದಿದೆ.

    ಧೂಳಖೇಡ ಗ್ರಾಮದ ಶ್ರೀ ಕಮಲ ಪಬ್ಲಿಕ್ ಸ್ಕೂಲ್ ಗೆ ಸೇರಿದ ಶಾಲಾ ವಾಹನ ಇದಾಗಿದ್ದು, ಶಾಲೆ ಮುಗಿದ ಬಳಿಕ ಸುಮಾರು 80 ವಿದ್ಯಾರ್ಥಿಗಳನ್ನ ಮನೆಗೆ ವಾಪಸ್ ಕರೆತಂದು ಬಿಡುತ್ತಿದ್ದ ವೇಳೆ ಶಿರನಾಳ -ಮರಗೂರ ಮಧ್ಯೆ ನಡೆದಿದೆ. ವಾಹನ ಪಲ್ಟಿಯಾದ ಅಲ್ಪ ಅಂತರದಲ್ಲಿ ತೆರೆದ ಬಾವಿ ಇದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.

    ಘಟನೆಗೆ ವಾಹನದ ಟೈರ್ ಸ್ಫೋಟಗೊಂಡಿದ್ದೇ ಕಾರಣ ಎನ್ನಲಾಗಿದ್ದು, ಘಟನೆ ಬಳಿಕ ವಾಹನದ ಚಾಲಕ ಮಾರುತಿ ಹೂಗಾರ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನೆ ಬಳಿಕ ಚಾಲಕ ಪರಾರಿಯಾಗಿದ್ದು ವಿದ್ಯಾರ್ಥಿಗಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಖಾಸಗಿ ಶಾಲೆ ಆಡಳಿತ ಮಂಡಳಿ ಹಾಗೂ ವಾಹನ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೈಕ್ ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್ -ಓರ್ವ ಸಾವು

    ಬೈಕ್ ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್ -ಓರ್ವ ಸಾವು

    ಬೆಂಗಳೂರು: ಶಾಲಾ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮ ಬೈಕ್‍ನ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯ ಮಂಟಪ ಗೇಟ್ ಬಳಿ ನಡೆದಿದೆ.

    ಆಂಧ್ರಪ್ರದೇಶ ಮೂಲದ ನಾಗೇಶ್(ಜಾನಿ) ಮೃತ ಬೈಕ್ ಹಿಂಬದಿ ಸವಾರ. ಎಂಡೆವೋರ್ ಅಕಾಡೆಮಿಗೆ ಸೇರಿದ ಶಾಲಾವಹನ ಬೈಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಕೆಳಗೆ ಬಿದಿದ್ದಾರೆ. ಹಿಂಬದಿ ಸವಾರನ ಮೇಲೆ ವಾಹನ ಹರಿದ ಪರಿಣಾಮ ನಾಗೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮೃತ ನಾಗೇಶ್ ಬನ್ನೇರುಘಟ್ಟದ ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಪಘಾತದ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಎಂಡೆವೋರ್ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಬೇರೊಬ್ಬ ಚಾಲಕನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಲು ಡ್ರಾಮ ನಡೆಸಿದ್ದಾರೆ ಎಂದು ಹೇಳಲಾಗಿದೆ.

  • ತನ್ನ ಪ್ರಾಣವನ್ನ ಲೆಕ್ಕಿಸದೇ ವ್ಯಾನ್ ಚಕ್ರಕ್ಕೆ ಅಡ್ಡಲಾಗಿ ಮಲಗಿ 25 ಮಕ್ಕಳನ್ನ ರಕ್ಷಿಸಿದ್ರು!

    ತನ್ನ ಪ್ರಾಣವನ್ನ ಲೆಕ್ಕಿಸದೇ ವ್ಯಾನ್ ಚಕ್ರಕ್ಕೆ ಅಡ್ಡಲಾಗಿ ಮಲಗಿ 25 ಮಕ್ಕಳನ್ನ ರಕ್ಷಿಸಿದ್ರು!

    ರಾಯ್‍ಪುರ: ಎಲ್ಲರನ್ನು ಬೆರಗುಗೊಳಿಸುವಂತಹ ಸಂಗತಿ ಇದು. ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ಚಲಿಸುತ್ತಿದ್ದ ಶಾಲಾ ವಾಹನದ ಚಕ್ರದ ಕೆಳಗೆ ಹೋಗಿ ಸ್ಪೀಡ್‍ಬ್ರೇಕರ್ ನಂತೆ ಅಡ್ಡಲಾಗಿ ಮಲಗಿ ವಾಹನವನ್ನು ನಿಲ್ಲಿಸಿ 25 ಶಾಲಾ ಮಕ್ಕಳನ್ನು ರಕ್ಷಿಸಿದ್ದಾರೆ.

    ವಾಹನದ ಚಾಲಕ 30 ವರ್ಷದ ಶಿವ ಯಾದವ್ ಈ ಸಾಹಸವನ್ನು ಮಾಡಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವು ಮಕ್ಕಳಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಡೆದಿದ್ದೇನು?
    ಛತ್ತೀಸ್‍ಗಢದ ರಾಯ್‍ಪುರದ ಕುನ್‍ಕುರಿ ನಾರಾಯಣಪುರ ಪ್ರಾಂತ್ಯದ ಮಕ್ಕಳನ್ನು ಪ್ರತಿದಿನದಂತೆ ಚಾಲಕ ಶಿವು ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಶಿವು ಒಂದು ಇಳಿಜಾರಿನ ಪ್ರದೇಶದಲ್ಲಿ ವಾಹನವನ್ನು ಮೊದಲ ಗೇರಿನಲ್ಲಿ ನಿಲ್ಲಿಸಿ ವಿರಾಮಕ್ಕಾಗಿ ಕೆಳಗೆ ಇಳಿದು ಹೋಗಿದ್ದಾರೆ.

    ಈ ವೇಳೆ ವಾಹನದಲ್ಲಿದ್ದ ಮಗುವೊಂದು ಗೇರ್ ಎಳೆದಿದೆ. ಪರಿಣಾಮ ಗೇರ್ ನ್ಯೂಟ್ರಲ್ ಗೆ ಬಿದ್ದು, ವಾಹನ ಚಲಿಸಲು ಆರಂಭಿಸಿದೆ. ತಕ್ಷಣ ಶಿವು ಜೊತೆಗೆ ವಿರಾಮಿಸುತ್ತಿದ್ದ ಬೇರೊಬ್ಬ ಚಾಲಕ ಗಮನಿಸಿ ಶಿವುಗೆ ತಿಳಿಸಿದ್ದಾರೆ. ಆದರೆ ಶಿವುಗೆ ತಕ್ಷಣ ಏನು ಮಾಡಬೇಕು ಎಂದು ತೋಚಲಿಲ್ಲ.

    ಬಳಿಕ ವಾಹನವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ಸುತ್ತಮುತ್ತ ಕಲ್ಲಿಗಾಗಿ ಹುಡುಕುತ್ತಾರೆ. ಆದರೆ ಯಾವ ಕಲ್ಲು ಸಿಗಲಿಲ್ಲ. ಕೊನೆಗೆ ಚಿಂತಿಸಿ ಪ್ರಯೋಜನವಿಲ್ಲ ಎಂದು ತಾವೇ ವಾಹನದ ಚಕ್ರಕ್ಕೆ ಅಡ್ಡಲಾಗಿ ಮಲಗಿ ವಾಹನವನ್ನು ನಿಲ್ಲಿಸಿಸುತ್ತಾರೆ. ಬಳಿಕ ಸ್ಥಳದಲ್ಲಿದ್ದವರು ಬಂದು ವಾಹನವನ್ನು ನಿಲ್ಲಿಸಿ ಶಿವುವನ್ನು ಹೊರಗೆ ಎಳೆದಿದ್ದಾರೆ.

    ಈ ಘಟನೆಯಿಂದ ವಾಹನದಲ್ಲಿದ್ದ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ ಹೊರತು ದೊಡ್ಡ ಪ್ರಮಾಣದ ಅಪಘಾತವೇನು ಸಂಭವಿಸಿಲ್ಲ. ಇನ್ನು ಗಾಯಗೊಂಡಿದ್ದ ಚಾಲಕ ಶಿವುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.