Tag: School Van

  • ಸರಣಿ ಅಪಘಾತ: ಪೂಜೆಗಾಗಿ ಮದ್ವೆ ಆಮಂತ್ರಣ ಪತ್ರಿಕೆ ತೆಗೆದುಕೊಂಡು ಹೋಗ್ತಿದ್ದ ವ್ಯಕ್ತಿ ದುರ್ಮರಣ

    ಸರಣಿ ಅಪಘಾತ: ಪೂಜೆಗಾಗಿ ಮದ್ವೆ ಆಮಂತ್ರಣ ಪತ್ರಿಕೆ ತೆಗೆದುಕೊಂಡು ಹೋಗ್ತಿದ್ದ ವ್ಯಕ್ತಿ ದುರ್ಮರಣ

    ಬೆಂಗಳೂರು: ನಗರದ ಹೊರವಲಯ ನೆಲಮಂಗಲ ತಾಲೂಕಿನ ರಾಯರಪಾಳ್ಯದ ಬಳಿ ಕೆಎಸ್‍ಆರ್ ಟಿಸಿ ಬಸ್ ಹಾಗೂ ಖಾಸಗಿ ಶಾಲಾ ವಾಹನ ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದಿದ್ದು, ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ.

    ಮೃತ ದುರ್ದೈವಿಯನ್ನು ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ಡಿ.ಹನುಮಂತಯ್ಯ ಎನ್ನಲಾಗಿದೆ. ಮದುವೆಯ ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಹನುಮಂತಯ್ಯ ಈ ಅವಘಡಕ್ಕೆ ಬಲಿಯಾಗಿದ್ದಾರೆ.

    ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿದ್ದ 35 ಮಂದಿ ಪ್ರಯಾಣಿಕರಿದ್ದು, ಹೆದ್ದಾರಿ ಮದ್ಯದ ಕಂದಕಕ್ಕೆ ಬಸ್ ಉರುಳದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ ನಿಯಂತ್ರಣಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

    ಈ ಸರಣಿ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದು, ಟ್ರಾಫಿಕ್ ಜಾಮ್ ತೆರವು ಮಾಡಿದ್ದಾರೆ.

  • ಎಲ್‍ಕೆಜಿ ಯಲ್ಲಿ ಓದುತ್ತಿದ್ದ ಬಾಲಕ ಶಾಲಾ ವಾಹನದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವು

    ಎಲ್‍ಕೆಜಿ ಯಲ್ಲಿ ಓದುತ್ತಿದ್ದ ಬಾಲಕ ಶಾಲಾ ವಾಹನದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವು

    ರಾಮನಗರ: ಶಾಲಾ ವಾಹನದ ಹಿಂಬದಿಯ ಚಕ್ರಕ್ಕೆ ಸಿಲುಕಿ ಐದು ವರ್ಷದ ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿಪುರದಲ್ಲಿ ನಡೆದಿದೆ.

    ವಿರೂಪಾಕ್ಷಿಪುರ ನಿವಾಸಿ ಜಯಸ್ವಾಮಿ ಹಾಗೂ ನಾಗಮಣಿ ದಂಪತಿಯ ಪುತ್ರ ಧನುಷ್ ಗೌಡ ಮೃತ ದುರ್ದೈವಿ. ಚನ್ನಪಟ್ಟಣದ ದಿವ್ಯ ಚೇತನ ಶಾಲೆಯಲ್ಲಿ ಧನುಷ್ ಎಲ್‍ಕೆಜಿ ಯಲ್ಲಿ ಓದುತ್ತಿದ್ದ.

    ಇಂದು ಶಾಲೆಯಿಂದ ಹೊರಟ ಧನುಷ್ ನನ್ನು ಗ್ರಾಮದಲ್ಲಿ ಇಳಿಸಿದ ಅದೇ ಶಾಲೆಯ ಬಸ್ ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಬಸ್ ನಿಂದ ಇಳಿದು ಹಿಂಬದಿ ನಿಂತಿದ್ದಾಗ ಬಸ್ ಆತನ ಮೇಲೆ ಹರಿದಿದೆ.

    ಘಟನೆ ಸಂಬಂಧ ಅಕ್ಕೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಶಾಲಾ ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕಿಳಿದ ಸರ್ಕಾರಿ ಬಸ್- 26 ಜನರಿಗೆ ಗಾಯ

    ಶಾಲಾ ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕಿಳಿದ ಸರ್ಕಾರಿ ಬಸ್- 26 ಜನರಿಗೆ ಗಾಯ

    ಮಂಡ್ಯ: ಶಾಲಾ ವಾಹನಕ್ಕೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಹಳ್ಳಕ್ಕೆ ಇಳಿದಿದ್ದು, ಬಸ್ಸಿನೊಳಗಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಸಮೀಪ ಈ ಘಟನೆ ನಡೆದಿದೆ. ಮೈಸೂರು ಡಿಪೋಗೆ ಸೇರಿದ ಸರ್ಕಾರಿ ಬಸ್, ಶ್ರೀರಂಗಪಟ್ಟಣದಿಂದ ಎಂ.ಶೆಟ್ಟಿಹಳ್ಳಿ ಮಾರ್ಗವಾಗಿ ಜನರನ್ನು ಕರೆದುಕೊಂಡು ಹೋಗುತ್ತಿತ್ತು. ಇನ್ನು ಇದೇ ಮಾರ್ಗದಲ್ಲಿ ಶಾಲಾ ವಾಹನವೂ ಕೂಡ ಬರುತ್ತಿತ್ತು.

    ರಸ್ತೆ ಹಾಳಾಗಿರೋ ಹಿನ್ನೆಲೆಯಲ್ಲಿ ಎರಡು ವಾಹನ ಒಂದೇ ಬಾರಿಗೆ ಸಂಚಾರ ಮಾಡುವುದು ಕಷ್ಟವಾಗಿದೆ. ಇದರಿಂದ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆಯೋದನ್ನ ತಪ್ಪಿಸೋದಕ್ಕೆ ಹೋಗಿ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಜಮೀನಿನ ಪಕ್ಕದಲ್ಲಿರುವ ಹಳ್ಳದೊಳಗೆ ಇಳಿದಿದೆ.

    ಈ ವೇಳೆ ಬಸಿನೊಳಗಿದ್ದ ಮಕ್ಕಳು ಸೇರಿದಂತೆ ಸುಮಾರು 26 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ರಸ್ತೆ ಕಿರಿದಾಗಿದ್ದು, ದುರಸ್ತಿಯಾಗದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.

  • ಬಟ್ಟೆ ಒಗೆಯುತ್ತಿದ್ದ ಮಹಿಳೆ, ಬಾಲಕನಿಗೆ ಡಿಕ್ಕಿ ಹೊಡೆದು ಕೆರೆಗೆ ನುಗ್ಗಿದ ಶಾಲಾ ವ್ಯಾನ್

    ಬಟ್ಟೆ ಒಗೆಯುತ್ತಿದ್ದ ಮಹಿಳೆ, ಬಾಲಕನಿಗೆ ಡಿಕ್ಕಿ ಹೊಡೆದು ಕೆರೆಗೆ ನುಗ್ಗಿದ ಶಾಲಾ ವ್ಯಾನ್

    ಮಂಡ್ಯ: ಚಾಲಕನ ಅಜಾಗರುಕತೆಯಿಂದ ಶಾಲಾ ವ್ಯಾನ್‍ವೊಂದು ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆ ಮತ್ತು ಬಾಲಕನಿಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಗೌಡಗೆರೆ ಬಳಿ ನಡೆದಿದೆ.

    ಜ್ಞಾನಧಾರ ಎಂಬ ಖಾಸಗಿ ಶಾಲೆಗೆ ಸೇರಿದ ವ್ಯಾನ್ ಇದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಗ್ರಾಮಕ್ಕೆ ಬರುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ಅಜಾಗರುಕತೆಯಿಂದ ಗೌಡಗೆರೆ ಸಮೀಪದಲ್ಲಿ ಕೆರೆಯ ಕಡೆಗೆ ನುಗ್ಗಿದೆ.

    ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಹೊನ್ನಮ್ಮ ಮತ್ತು ದಿನೇಶ್ ಎಂಬುವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಈ ಅವಘಡ ಸಂಭವಿಸುವ ವೇಳೆಯಲ್ಲಿ ವ್ಯಾನ್‍ನಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರಿಂದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ.