Tag: School Van

  • Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    ಲಕ್ನೋ: ಸ್ಕೂಲ್ ವ್ಯಾನ್‌ನಲ್ಲಿ (School Van) 4 ವರ್ಷದ ಬಾಲಕಿ ಮೇಲೆ ಚಾಲಕ ಅತ್ಯಾಚಾರವೆಸಗಿದ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದ್ದು, ಆರೋಪಿಯನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಆರಿಫ್ ಬಂಧಿತ ಶಾಲಾ ವಾಹನ ಚಾಲಕ. ಈ ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಪೂರ್ವ ಪೊಲೀಸ್ ಉಪ ಆಯುಕ್ತ (DCP) ಶಶಾಂಕ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಟೇಕಾಫ್ ಆಗಿ 16 ನಿಮಿಷಕ್ಕೆ ಲ್ಯಾಂಡ್ ಆಯ್ತು ಏರ್ ಇಂಡಿಯಾ ವಿಮಾನ

    ಜುಲೈ 17 ರಂದು ಬಾಲಕಿಯ ತಾಯಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ 4 ವರ್ಷದ ಮಗಳು ಶಾಲೆಯಲ್ಲಿ ಓದುತ್ತಿದ್ದು, ಸ್ಕೂಲ್ ವ್ಯಾನ್ ಚಾಲಕ ಆರಿಫ್ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಯಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ ಜ್ಯುವೆಲರಿ ಶಾಪ್ ದರೋಡೆ ಕೇಸ್ – 30 ರೂ. ಫೋನ್ ಪೇ ಮಾಡಿ ಸಿಕ್ಕಿಬಿದ್ದ ಖದೀಮರು

    ನನ್ನ ಮಗಳು ಖಾಸಗಿ ಭಾಗದಲ್ಲಿ ನೋವಿನ ಬಗ್ಗೆ ನನಗೆ ತಿಳಿಸಿದ್ದಳು. ಅವಳನ್ನು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ಖಾಸಗಿ ಭಾಗದಲ್ಲಿ ಗಾಯಗಳಾಗಿರುವುದು ಕಂಡುಬಂದಿದೆ. ಈ ಕುರಿತು ನಾನು ಪ್ರಾಂಶುಪಾಲರಿಗೆ ದೂರು ನೀಡಿದ್ದೇನೆ. ಪ್ರಾಂಶುಪಾಲರು ಅದರ ಬಗ್ಗೆ ಮಾತನಾಡುವುದಾಗಿ ಹೇಳಿದರು. ಅಲ್ಲದೇ ದೂರು ನೀಡುವುದರಿಂದ ಮಗುವಿನ ಭವಿಷ್ಯ ಮತ್ತು ಶಾಲೆಯ ಖ್ಯಾತಿ ಹಾಳಾಗುತ್ತದೆ ಎಂದು ಹೇಳಿದ್ದರು. ಅದಾದ ಬಳಿಕವೂ ಎರಡು ದಿನ ಕಾದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ಮತ್ತೆ ಚಾಲಕ ಕರೆ ಮಾಡಿ ಮಗಳನ್ನು ಶಾಲಾ ವಾಹನದಲ್ಲಿ ಕಳುಹಿಸುವಂತೆ ಕೇಳಿದಾಗ ಅವನ ಮೇಲೆ ಕೋಪಗೊಂಡೆ. ಈ ವೇಳೆ ಚಾಲಕ ನಮ್ಮ ಮೇಲೆ ದೌರ್ಜನ್ಯ ಎಸಗಿ ಅಪಹರಣದ ಬೆದರಿಕೆ ಹಾಕಿದ್ದಾನೆ. ಇಷ್ಟದರೂ ಶಾಲೆಯ ಆಡಳಿತ ಮಂಡಳಿ ಆತನ ವಿರುದ್ಧ ದೂರು ನೀಡದಂತೆ ಮನವಿ ಮಾಡಿದೆ. ಈ ಬಗ್ಗೆ ನನ್ನ ಬಳಿ ಎಲ್ಲಾ ಸಾಕ್ಷಿಗಳಿವೆ ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಆರ್‌ಟಿ ಅರಣ್ಯದಲ್ಲಿ ಪ್ರವಾಸಿಗರಿಗೆ ತಾಯಿ ಚಿರತೆ, ಎರಡು ಮರಿಗಳ ದರ್ಶನ

    ತಾಯಿ ನೀಡಿದ ದೂರಿನ ಆಧಾರದ ಮೇಲೆ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವುದಾಗಿ ಡಿಸಿಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

  • Bengaluru | ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಸ್ಕೂಲ್ ವ್ಯಾನ್ – ಸವಾರ ಬಚಾವ್

    Bengaluru | ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಸ್ಕೂಲ್ ವ್ಯಾನ್ – ಸವಾರ ಬಚಾವ್

    ಬೆಂಗಳೂರು: ಅತಿವೇಗವಾಗಿ ಬಂದ ಸ್ಕೂಲ್ ವ್ಯಾನ್ (School Van) ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ಮಹದೇವಪುರ (Mahadevapura) ಸಂಚಾರ ಠಾಣಾ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ನಡೆದಿದೆ.

    ಕನ್ನಮಂಗಲ ಗೇಟ್ ಮೂಲಕ ವೈಟ್‌ಫೀಲ್ಡ್ ಕಡೆ ಬರುತ್ತಿದ್ದ ಶಾಲಾ ವಾಹನ ವೇಗವಾಗಿ ಬಂದು ಸಿಗ್ನಲ್ ಬಳಿ ನಿಯಂತ್ರಣ ಸಿಗದೇ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮುಂದೆ ಬರುತ್ತಿದ್ದ ಕಾರಿಗೂ ಡಿಕ್ಕಿ ಹೊಡೆದು ಶಾಲಾ ವಾಹನ ನಿಂತಿದೆ. ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದ ಸವಾರನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಅಸ್ಸಾಂ | ಧುಬ್ರಿಯಲ್ಲಿ ಗೋವಿನ ತಲೆ ಪತ್ತೆ ಕೇಸ್ – 30ಕ್ಕೂ ಹೆಚ್ಚು ಜನ ಅರೆಸ್ಟ್‌

    ಘಟನೆ ಸಂಬಂಧ ಮಹಾದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಬೆಳಗ್ಗೆ 10:30ರ ಸುಮಾರಿಗೆ ಘಟನೆ ನಡೆದಿದೆ. ಅಪಘಾತದ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮಲೆನಾಡಲ್ಲಿ ಉತ್ತಮ ಮಳೆ – ತುಂಗಭದ್ರಾ ಜಲಾಶಯಕ್ಕೆ 51,654 ಕ್ಯುಸೆಕ್ ಒಳಹರಿವು

  • ಶಾಲಾ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳಿಸೋ ಮುನ್ನ ಎಚ್ಚರ!

    ಶಾಲಾ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳಿಸೋ ಮುನ್ನ ಎಚ್ಚರ!

    ಬೆಂಗಳೂರು: ಶಾಲಾ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳಿಸುವ ಮುನ್ನ ಎಚ್ಚರವಿರಲಿ. ಯಾಕಂದ್ರೆ ಬೆಳ್ಳಂಬೆಳಿಗ್ಗೆ ಕಂಠಪೂರ್ತಿ ಕುಡಿದು ಸ್ಕೂಲ್ ವ್ಯಾನ್‌ಗಳನ್ನು ಓಡಿಸುತ್ತಿದ್ದಾರೆ. ಇಂತಹ ಘಟನೆಯೊಂದು ಆರ್‌ಆರ್ ನಗರ (RR Nagar) ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಇದನ್ನೂ ಓದಿ: ಲುಫ್ತಾನ್ಸಾ ಏರ್‌ಲೈನ್ಸ್‌ನ ಡ್ರೀಮ್‌ಲೈನರ್‌ ವಿಮಾನಕ್ಕೆ ಬಾಂಬ್‌ ಬೆದರಿಕೆ – ಅರ್ಧದಲ್ಲೇ ಫ್ರಾಂಕ್‌ಫರ್ಟ್‌ಗೆ ವಾಪಸ್‌

    ಹೌದು, ಶಾಲೆಗಳು ಶುರುವಾದ ಹಿನ್ನೆಲೆ ಸಂಚಾರಿ ಪೊಲೀಸರು ಶಾಲಾ ವಾಹನಗಳ ಮೇಲೆ ಕಣ್ಣಿಟ್ಟಿದ್ದು, ‌ಡ್ರೈವರ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳ್ಳಂಬೆಳಿಗ್ಗೆ ಸಂಚಾರಿ ಪೊಲೀಸರು ಶಾಲಾ ವಾಹನ ಚಾಲಕನೊಬ್ಬನ ಡಿಡಿ ಚೆಕ್ ಮಾಡಿದ್ದು, ರೀಡಿಂಗ್ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.

    ಕಂಠಪೂರ್ತಿ ಕುಡಿದು ವಾಹನ ಚಲಾಯಿಸುತ್ತಿರುವುದು ತಿಳಿದುಬಂದಿದ್ದು, ಇದೇ ಅವಸ್ಥೆಯಲ್ಲಿಯೇ ಹಲವು ಕಡೆ ವಾಹನ ಚಾಲನೆ ಮಾಡಿಕೊಂಡು ಬಂದಿರುವುದಾಗಿ ಪತ್ತೆಯಾಗಿದೆ. ಒಟ್ಟು 4,559 ಶಾಲಾ ವಾಹನಗಳ ಪರಿಶೀಲನೆ ಮಾಡಲಾಗಿದ್ದು, 59 ಚಾಲಕರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಸದ್ಯ 59 ವಾಹನ ಚಾಲಕರ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಪೊಲೀಸರು ಬೇಜವಾಬ್ದಾರಿಯಿಂದಿದ್ದ ಶಾಲೆಗಳಿಗೂ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ನಿಮ್ಮಪ್ಪನಿಗೆ ಸಿಎಂ ಕುರ್ಚಿ ಬಿಟ್ಟುಕೊಡಲು ಹೇಳಿ: ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

  • Nelamangala | 2 ಸ್ಕೂಲ್ ಬಸ್‌ಗಳ ನಡುವೆ ಅಪಘಾತ – ಮಕ್ಕಳಿಗೆ ಸಣ್ಣಪುಟ್ಟ ಗಾಯ

    Nelamangala | 2 ಸ್ಕೂಲ್ ಬಸ್‌ಗಳ ನಡುವೆ ಅಪಘಾತ – ಮಕ್ಕಳಿಗೆ ಸಣ್ಣಪುಟ್ಟ ಗಾಯ

    ನೆಲಮಂಗಲ: ವಿವಿಧ ಗ್ರಾಮಗಳಿಂದ ಪುಟಾಣಿ ಮಕ್ಕಳನ್ನ ಪಿಕ್ ಮಾಡಿ ಶಾಲೆಗೆ ಬರುವ ಸಂರ‍್ಭದಲ್ಲಿ ಶಾಲಾ ಬಸ್ (School Bus) ಚಾಲಕನ ನಿರ್ಲಕ್ಷ್ಯದಿಂದ ಒಂದು ಶಾಲಾ ವಾಹನ ಪಲ್ಟಿಯಾದ ಪರಿಣಾಮ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಬೆಂಗಳೂರು (Bengaluru) ಹೊರವಲಯ ನೆಲಮಂಗಲ (Nelamangala) ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಾದಾವರದ ನೈಸ್ ರಸ್ತೆಯ ಪಿಕಾಕ್ ಬಡಾವಣೆಯಲ್ಲಿ ಅಪಘಾತ ನಡೆದಿದೆ. ಘಟನೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ಡೆಲ್ಲಿ ಪಬ್ಲಿಕ್ ಶಾಲೆಯ ವಾಹನ ಪಲ್ಟಿಯಾಗಿದೆ. 30ಕ್ಕೂ ಹೆಚ್ಚಿನ ಮಕ್ಕಳನ್ನ ಶಾಲೆಗೆ ಕರೆತರಲಾಗುತ್ತಿದ್ದು, ಚಾಲಕರ ನಡುವೆ ಪೈಪೋಟಿ ಉಂಟಾಗಿ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ ಬಸ್ ಪಲ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ – ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್

    ಘಟನೆಯಲ್ಲಿ ಶಾಲಾ ಪುಟಾಣಿ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದು, ಬಸ್ ಪಲ್ಟಿಯಾದ ಹಿನ್ನೆಲೆ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಕ್ಕಳ ಪೋಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ

  • ಪಬ್ಲಿಕ್ ಟಿವಿಯ `ಬೆಳಕು’ ಇಂಪ್ಯಾಕ್ಟ್: ಜಂಗ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಬಸ್ ಕೊಡಿಸಿದ ರೆಡ್ಡಿ

    ಪಬ್ಲಿಕ್ ಟಿವಿಯ `ಬೆಳಕು’ ಇಂಪ್ಯಾಕ್ಟ್: ಜಂಗ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಬಸ್ ಕೊಡಿಸಿದ ರೆಡ್ಡಿ

    ಕೊಪ್ಪಳ: ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಅಂಜನಾದ್ರಿ ಬೆಟ್ಟದ (Anjanadri Betta) ನೆರಳಿನಲ್ಲೇ ಇದ್ದ ಗ್ರಾಮವದು. ಆದರೂ, ಸಾರಿಗೆ ಸೌಲಭ್ಯದ ಕೊರತೆಯಿಂದ ಗ್ರಾಮದ ನೂರಾರು ವಿದ್ಯಾರ್ಥಿಗಳು ಹೈಸ್ಕೂಲ್ ಶಿಕ್ಷಣಕ್ಕೂ 5 ಕಿ.ಮೀ ನಡೆಯಬೇಕಿತ್ತು. ಸಾರಿಗೆ ಸೌಲಭ್ಯದ ಕೊರತೆಯಿಂದ ಹತ್ತಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಇದೀಗ ಈ ವಿದ್ಯಾರ್ಥಿಗಳಿಗೆ ಆಶಾಕಿರಣ ಮೂಡಿದ್ದು, ಶಾಸಕ ಜನಾರ್ದನ ರೆಡ್ಡಿ ಹೊಸ ಬಸ್ ಖರೀದಿಸಿ ಕೊಟ್ಟಿದ್ದಾರೆ. ಇದು `ಪಬ್ಲಿಕ್ ಟಿವಿ’ಯ ಬೆಳಕು (PUBLiC TV Belaku Impact) ಕಾರ್ಯಕ್ರಮದ ಬಿಗ್ ಇಂಪ್ಯಾಕ್ಟ್ ಆಗಿದೆ.

    ಹೌದು. ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗ್ಲಿ ಗ್ರಾಮದ ಜನರಿಗೆ ಸಾರಿಗೆ ಸೌಲಭ್ಯದ ಕೊರತೆಯಿತ್ತು. ಈ ಕುರಿತು `ಪಬ್ಲಿಕ್ ಟಿವಿ’ಯ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು. ಈ ವರದಿಗೆ ಓಗೊಟ್ಟ ಶಾಸಕ ಜನಾರ್ದನ ರೆಡ್ಡಿ, ಹೊಸ ಬಸ್ ಖರೀದಿಸಿ ಕೊಟ್ಟಿದ್ದಾರೆ. ಶಾಸಕ ಜನಾರ್ದನ ರೆಡ್ಡಿಯವರ (Janardhana Reddy) ಪತ್ನಿ ಅರುಣಾ ಲಕ್ಷ್ಮೀ ಶಾಲಾ ವಾಹನವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದು, ಹೊಸ ಶಾಲಾ ವಾಹನವನ್ನು ಖುಷಿಯಿಂದ ಪೂಜೆ ಮಾಡಿ ಗ್ರಾಮಸ್ಥರು ಬರಮಾಡಿಕೊಂಡಿದ್ದಾರೆ. ಜೊತೆಗೆ ಶಾಲಾ ವಾಹನವನ್ನು ಕಂಡು ಮಕ್ಕಳಲ್ಲಿ ಸಂತೋಷ ಮನೆಮಾಡಿದೆ.ಇದನ್ನೂ ಓದಿ:ದೇವೇಗೌಡರ ತುರ್ತು ಬುಲಾವ್‌ – ಚನ್ನಪಟ್ಟಣದಲ್ಲಿ ಅಖಾಡಕ್ಕಿಳಿಯುತ್ತಾರಾ ನಿಖಿಲ್‌ ಕುಮಾರಸ್ವಾಮಿ?

    ಜಂಗ್ಲಿ ಮತ್ತು ರಂಗಾಪುರ ಗ್ರಾಮದ ವಿದ್ಯಾರ್ಥಿಗಳು ಈ ಕಾಲದಲ್ಲೂ ಹೈಸ್ಕೂಲ್ ಶಿಕ್ಷಣ ಪಡೆಯಲು ಬರೋಬ್ಬರಿ 5 ಕಿ.ಮೀ. ನಡೆದುಕೊಂಡು ಹೋಗಬೇಕಿದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬರೋಬ್ಬರಿ 5 ಕಿ.ಮೀ. ನಡೆದು ನಂತರ ಬಸ್ ಏರಿ ಶಾಲೆ ತಲುಪಬೇಕಿತ್ತು. ಇದರಿಂದ ಈ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲೆ- ಕಾಲೇಜ್ ತಲುಪಲು ಸಾಧ್ಯವಾಗುತ್ತಿರಲಿಲ್ಲ. ನಿಗದಿತ ಸಮಯಕ್ಕೆ ಶಾಲೆಗೆ ತಲುಪದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಿದ್ದರು.

    ಇಡೀ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಪ್ರಚಾರ ವಸ್ತುವಾಗಿರುವ ಅಂಜನಾದ್ರಿ ಸಮೀಪದಲ್ಲಿ ಇಂತಹ ಅವ್ಯವಸ್ಥೆಯಿರುವ ಕುರಿತು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ವೀಕ್ಷಕರ ಮುಂದೆ ಇಟ್ಟಿತ್ತು. ವರದಿ ನೋಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ತಮ್ಮ ಸ್ವಂತ ಹಣದಲ್ಲಿ ಈ ಗ್ರಾಮಕ್ಕೆ ಶಾಲಾ ವಾಹನ ನೀಡಿದ್ದು, ಶಾಲಾ ವಾಹನವನ್ನು ಅರುಣಾ ಲಕ್ಷ್ಮೀ ಜಂಗ್ಲಿ, ರಂಗಪುರ, ಅಂಜನಳ್ಳಿ ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದಾರೆ.

    ಈ ಶಾಲಾ ವಾಹನದಿಂದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗಂಗಾವತಿ ಮತ್ತು ಆನೆಗೊಂದಿ ಗ್ರಾಮದ ಶಾಲೆ-ಕಾಲೇಜಿಗೆ ತೆರಳುವ ಪ್ರಾಥಮಿಕ ಶಾಲೆಯಿಂದ ಪದವಿ ವಿದ್ಯಾರ್ಥಿಗಳಿಗೆ ವಾಹನ ಅನುಕೂಲವಾಗಲಿದೆ. ಸಾರಿಗೆ ಸೌಲಭ್ಯ ಇಲ್ಲದ್ದರಿಂದ ಸಾಕಷ್ಟು ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಬಿಡಿಸಿದ್ದರು. ಇನ್ನು ಗರ್ಭಿಣಿಯರು, ಬಾಣಂತಿಯರು ಹಾಗೂ ಕಾಯಿಲೆಗೆ ತುತ್ತಾದ ರೋಗಿಗಳು ತಾಲೂಕು ಕೇಂದ್ರ ತಲುಪಲು ಸಂಕಷ್ಟ ಪಡಬೇಕಿತ್ತು. ಆದರೆ

    ಗ್ರಾಮಕ್ಕೆ ಸಾರಿಗೆ ಸೌಲಭ್ಯ ಪಡೆಯಲು ಈ ಗ್ರಾಮಸ್ಥರು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಿದ್ದರು. ಮತದಾನ ಬಹಿಷ್ಕಾರ, ರಸ್ತೆ ತಡೆ, ತಾಲೂಕು ಕೇಂದ್ರದಲ್ಲಿ ಹಂತ-ಹಂತವಾಗಿ ಹೋರಾಟ ಮಾಡಿದ್ದರೂ, ಪ್ರಯೋಜನ ಆಗಿರಲಿಲ್ಲ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾದ ಬೆನ್ನಲ್ಲೇ ಇದೀಗ ಜಂಗ್ಲಿ ಗ್ರಾಮದ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿದ್ದು, ಬಹು ವರ್ಷದ ಸಮಸ್ಯೆಗೆ ಪರಿಹಾರ ಸಿಕ್ಕಿದೆ.ಇದನ್ನೂ ಓದಿ:ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ

  • ಶಾಲಾ ವಾಹನ, ಬಸ್ ನಡುವೆ ಭೀಕರ ಅಪಘಾತ- ಆರು ವಿದ್ಯಾರ್ಥಿಗಳ ದುರ್ಮರಣ

    ಶಾಲಾ ವಾಹನ, ಬಸ್ ನಡುವೆ ಭೀಕರ ಅಪಘಾತ- ಆರು ವಿದ್ಯಾರ್ಥಿಗಳ ದುರ್ಮರಣ

    ಲಕ್ನೋ: ಶಾಲಾ ವ್ಯಾನ್ (School Van) ಹಾಗೂ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಆರು ವಿದ್ಯಾರ್ಥಿಗಳು (students) ಹಾಗೂ ವ್ಯಾನ್ ಚಾಲಕ ಮೃತಪಟ್ಟ ಘಟನೆ ಉತ್ತರ ಪ್ರದೇಶದ (Uttar Pradesh) ಬುಡೌನ್‍ನಲ್ಲಿ ನಡೆದಿದೆ.

    ಖಾಸಗಿ ಶಾಲೆಯ ವಾಹನ ವಿದ್ಯಾರ್ಥಿಗಳನ್ನು ಇಂದು ಬೆಳಗ್ಗೆ ಶಾಲೆಗೆ ಕರೆದೊಯ್ಯುವ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಮಾರು 16 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಚಾಲಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನಾಲ್ಕು ಜನ ವಿದ್ಯಾರ್ಥಿಗಳು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಪಕ್ಷಗಳ ಹಣದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇಲ್ಲ- ಸುಪ್ರೀಂಗೆ ಕೇಂದ್ರ ಸರ್ಕಾರದ ಹೇಳಿಕೆ

    ಆಸ್ಪತ್ರೆಯ ಆವರಣದಲ್ಲಿ ಮೃತ ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗಾಯಗೊಂಡವರ ಪಾಲಕರು ತಮ್ಮ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅವರು ಆಸ್ಪತ್ರೆಯ ವೈದ್ಯರಿಗೆ ಸೂಚಿಸಿದ್ದಾರೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: Kerala Bomb Blast: ಅತ್ತೆ ಕುಳಿತಿದ್ದ ಜಾಗ ತಪ್ಪಿಸಿ ಬಾಂಬ್ ಇಟ್ಟಿದ್ದೆ: ಆರೋಪಿ ಬಾಯ್ಬಿಟ್ಟ ಸತ್ಯವೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೈವೇಟ್ ವ್ಯಾನಿನಲ್ಲಿ ಮಕ್ಕಳಿಗೆ ಉಸಿರಾಡೋಕೂ ಕಷ್ಟ – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ಪ್ರೈವೇಟ್ ವ್ಯಾನಿನಲ್ಲಿ ಮಕ್ಕಳಿಗೆ ಉಸಿರಾಡೋಕೂ ಕಷ್ಟ – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಖಾಸಗಿ ಶಾಲೆಗೆ ತೆರಳುತ್ತಿರುವ ಮಕ್ಕಳು ಸೇಫ್ ಅಲ್ಲ. ಏಕೆಂದರೆ ಖಾಸಗಿ ಶಾಲೆಯ ಖಾಸಗಿ ಸ್ಕೂಲ್ ವ್ಯಾನ್, ಕ್ಯಾಬ್‍ಗಳು ಡೇಂಜರ್ ಸ್ಥಿತಿಯಲ್ಲಿದೆ. ಶಾಲೆ ಹೋಗುವ ಮಕ್ಕಳನ್ನು ಕುರಿಗಳ ಮಂದೆಯಂತೆ ತುಂಬುತ್ತಿದ್ದಾರೆ. ಈ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ.

    ಸ್ಥಳ – ಕನ್ನಿಂಗ್ ಹ್ಯಾಮ್ ರೋಡ್
    ಸಮಯ – 4:00
    ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಶಾಲಾ ವಾಹನವಾದರೆ ಆರ್ ಟಿಓ ನಿಯಮದಂತೆ ಇರುತ್ತದೆ. ಜೊತೆಗೆ ಮಕ್ಕಳ ಸಂಖ್ಯೆ ಸಹ ನಿಯಮಿತವಾಗಿರುತ್ತದೆ. ಆದರೆ ಈ ಶಾಲೆಯಲ್ಲಿ ಖಾಸಗಿ ಕ್ಯಾಬ್‍ಗಳ ಕಾರುಬಾರು ಜೋರಾಗಿದೆ. ಈ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ, ಅವರು ಹೇಳಿದ್ದು ಹೀಗೆ.

    ಪ್ರತಿನಿಧಿ: ಏನ್ ಸರ್ ಇಷ್ಟೊಂದು ಸ್ಕೂಲ್ ಮಕ್ಕಳು ತುಂಬಿದ್ದೀರಾ?
    ಕ್ಯಾಬ್ ಡ್ರೈವರ್: ಎಷ್ಟೊಂದು ಮೇಡಂ
    ಪ್ರತಿನಿಧಿ: ಎಷ್ಟೊಂದು ಅಂತೀರಾ?
    ಡ್ರೈವರ್: ಚಿಕ್ಕ ಮಕ್ಕಳು ಮೇಡಂ
    ಪ್ರತಿನಿಧಿ: ಚಿಕ್ಕ ಮಕ್ಕಳು ಅಂತೀರಾ
    ಡ್ರೈವರ್: ಇರಪ್ಪ ಇಳಿಸ್ತೀನಿ ಅಲ್ಲೇ ಇರೋ
    ಪ್ರತಿನಿಧಿ: ಎಷ್ಟು ಜನ ಇದ್ದೀರಾ? ಯಾಕ್ ಸರ್ ಇಷ್ಟೊಂದು ಜನರನ್ನು ತುಂಬಿದ್ದೀರಾ.
    ಡ್ರೈವರ್: ಹಾ ಮೇಡಂ
    ಪ್ರತಿನಿಧಿ: ಇಷ್ಟೊಂದು ಜನ ತುಂಬಿದ್ದೀರಾ?
    ಡ್ರೈವರ್: ಇಲ್ಲ ಮೇಡಂ ಬರೀ ಹದಿನೈದು ಜನ ಅಷ್ಟೇ?
    ಪ್ರತಿನಿಧಿ: 15 ಜನನಾ? ಅಷ್ಟಾದ್ರೂ ಹೆಂಗ್ ಕುಳಿತು ಕೊಳ್ತಾರೆ? ಇಂದು ಮಗುವಿಗೆ ಎಷ್ಟು ಸರ್?
    ಡ್ರೈವರ್: ಎಷ್ಟು ಮೇಡಂ 600-500 ರೂ.
    ಪ್ರತಿನಿಧಿ: ನೀವ್ ಆರಾಮಾಗಿ ಕರೆದುಕೊಂಡ್ ಬಂದ್ರೆ

    ಹೊಟ್ಟೆ ಪಾಡಿಗಾಗಿ ಕ್ಯಾಬ್ ಡ್ರೈವರ್ ಗಳು ಹೀಗೆ ಕುರಿಗಳಂತೆ ಮಕ್ಕಳನ್ನ ತುಂಬುತ್ತಾರೆ. ಆದರೆ ಪೋಷಕರು ಏನ್ ಮಾಡ್ತಾ ಇದ್ದಾರೆ. 500 ರೂ. ಕೊಟ್ಟರೆ ಈ ರೀತಿ ಕುರಿ ಗಾಡಿ, 1000 ರೂ ಕೊಟ್ಟರೆ ಕ್ಯಾಬ್ ಸಿಗುತ್ತೆ. ಇದೆಲ್ಲ ಪರಿಶೀಲಿಸದೇ ನಿಮ್ಮ ಮಕ್ಕಳನ್ನ ನೀವು ಹೀಗೆ ಕಳುಹಿಸುತ್ತಿದ್ದೀರಾ.

    ಸ್ಥಳ – ಲಗ್ಗೆರೆ ರೋಡ್
    ಸಮಯ – 3.30
    ಬೆಂಗಳೂರಿನ ಲಗ್ಗೆರೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಒಮನಿ ವ್ಯಾನ್‍ಗಳಲ್ಲಿ ಮಕ್ಕಳನ್ನು ತುಂಬುತ್ತಾರೆ. ಕೂರಲು ಸೀಟ್ ಇಲ್ಲದೇ ಮಕ್ಕಳನ್ನು ಕಾಲಿಡುವ ಜಾಗದಲ್ಲಿ ಕೂರಿಸುತ್ತಾರೆ. ಈ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ಹೀಗೆ;
    ಪ್ರತಿನಿಧಿ: ಏನ್ ಸರ್ ಇಷ್ಟೊಂದು ಜನ ತುಂಬಿದ್ದೀರಾ
    ಡ್ರೈವರ್: ಎಷ್ಟ್ ಜನ ತುಂಬಿದ್ದಾರೆ ಮೇಡಂ?
    ಪ್ರತಿನಿಧಿ: 15 ಜನ ತುಂಬಿದ್ದೀರಲ್ಲ ಸರ್
    ಡ್ರೈವರ್: 15 ಜನನಾ?

    ಸ್ಥಳ – ಶಿವಾನಂದ ಸರ್ಕಲ್
    ಸಮಯ – 9.30
    ಅಪಾಯದ ಅರಿವಿಲ್ಲದ ಮಕ್ಕಳು ಈ ಬಗ್ಗೆ ಹುಡುಕಾಟದ ಮಾತುಗಳನ್ನಾಡುತ್ತಾರೆ.
    ಪ್ರತಿನಿಧಿ: ಆರ್ ಟಿಐ ರೂಲ್ಸ್ ಪ್ರಕಾರ ಹೀಗೆ ತುಂಬುವಂತಿಲ್ಲ, ನಿಮ್ಮ ವಾಹನದಲ್ಲಿ ಎಷ್ಟು ಜನ ಹೋಗುತ್ತೀರಾ?
    ವಿದ್ಯಾರ್ಥಿನಿ: ನಮ್ಮ ವಾಹನದಲ್ಲಿ 6 ಜನನೇ. ಅದೇ ಬೇರೆ ವಾಹನ ನೋಡಿದ್ರೆ 15 – 20 ಜನ ಇರುತ್ತಾರೆ.
    ಪ್ರತಿನಿಧಿ: ಭಯ ಆಗಲ್ವ ಹೋಗುವುದಕ್ಕೆ
    ವಿದ್ಯಾರ್ಥಿನಿ: ನಾವೆಲ್ಲ ಚಿಕ್ಕವರಲ್ಲ

    ರಸ್ತೆ ಹಾಗೂ ಸಾರಿಗೆ ಪ್ರಾಧಿಕಾರ ಸುಪ್ರೀಂ ಕೋರ್ಟ್ ಸಹ ಶಾಲಾ ಮಕ್ಕಳ ವಾಹನ ಸುರಕ್ಷತೆ ಬಗ್ಗೆ ನಿರ್ದೇಶನ ನೀಡಿದೆ. ಮೋಟಾರು ವೆಹಿಕಲ್ ಕಾಯ್ದೆ ಪ್ರಕಾರ ಮಕ್ಕಳ ಕುರಿಗಳಂತೆ ತುಂಬುವಂತಿಲ್ಲ. ಏನೆಲ್ಲ ನಿಯಮಗಳು ಉಲ್ಲಂಘನೆಯಾಗಿದೆ.
    * ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ (ಫಸ್ಟೆಡ್ ಬಾಕ್ಸ್)
    * ಮಕ್ಕಳನ್ನು ಕುರಿಗಳಂತೆ ತುಂಬಿದ್ದಾರೆ
    * ಸಿಸಿಟಿವಿ ಹಾಕಿಲ್ಲ
    * ಶಾಲಾ ಮಕ್ಕಳ ವಾಹನ ಎಂದು ಉಲ್ಲೇಖಿಸಿಲ್ಲ
    * ಮಕ್ಕಳ ಸುರಕ್ಷತೆಯ ಕ್ರಮಗಳ ಕೈಗೊಂಡಿಲ್ಲ

    12 ವರ್ಷ ಮೇಲ್ಪಟ್ಟ ಮಕ್ಕಳು ಪ್ರಯಾಣಿಸುವ ವಾಹನದ ಸೀಟ್ ಕ್ಯಾಪಸಿಟಿ ಆಧಾರದಲ್ಲಿ ಮಾತ್ರ ಪ್ರಯಾಣಿಸಬೇಕು. ಅನುಮತಿ ನೀಡಿದ ಸೀಟ್ ಗಳಲ್ಲಿ ಶೇ. ಒಂದು ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸಬೇಕು. ಕುರಿಗಳಂತೆ ತುಂಬುವಂತಿಲ್ಲ. ಒಂದೊಮ್ಮೆ ಪ್ರಯಾಣಿಸಿದರೆ ದಂಡ ಹಾಗೂ ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ಹೀಗೆ ಕುರಿಗಳಂತೆ ತುಂಬಿದು, ಕಂಡರೂ ಟ್ರಾಫಿಕ್ ಪೊಲೀಸರು ನೋಡದಂತೆ ಹೋಗುತ್ತಾರೆ. ಇದನ್ನೆಲ್ಲ ಕೇಳಬೇಕಾದ ಆರ್‍ಟಿಓ ಮಾತ್ರ ನಾಪತ್ತೆ ಆಗಿದ್ದಾರೆ.

  • ಕಮರಿಗೆ ಉರುಳಿದ ಶಾಲಾ ವಾಹನ – 8 ಮಕ್ಕಳು ದುರ್ಮರಣ

    ಕಮರಿಗೆ ಉರುಳಿದ ಶಾಲಾ ವಾಹನ – 8 ಮಕ್ಕಳು ದುರ್ಮರಣ

    ಡೆಹ್ರಾಡೂನ್: ಸುಮಾರು 18 ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ವಾಹನವೊಂದು ಆಳವಾದ ಕಮರಿಗೆ ಉರುಳಿ ಅಪಘಾತಕ್ಕೀಡಾಗಿದ್ದು, 8 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಡೆಹ್ರಾಡೂನ್‍ನ ತೆಹ್ರಿ ಗರ್ವಾಲ್‍ನ ಕಂಗ್ಸಾಲಿ ಗ್ರಾಮದ ಬಳಿ ಶಾಲಾ ವಾಹನ ಅಪಘಾತಕ್ಕೀಡಾಗಿದೆ. ಸುಮಾರು 18 ವಿದ್ಯಾರ್ಥಿಗಳು ಶಾಲಾ ವಾಹನದಲ್ಲಿ ಶಾಲೆಗೆ ತೆರೆಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಪಕ್ಕದಲ್ಲಿದ್ದ ಕಮರಿಗೆ ಪಲ್ಟಿಯಾಗಿದೆ. ಈ ದುರಂತದಲ್ಲಿ 8 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಕ್ಕಳು ಗಾಯಗೊಂಡಿದ್ದಾರೆ.

    ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‍ಡಿಆರ್‍ಎಫ್) ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸದ್ಯ ಗಾಯಗೊಂಡ ವಿದ್ಯಾರ್ಥಿಗಳನ್ನು ವಾಹನದಿಂದ ಹೊರಗೆ ಕರೆತಂದು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆಯಲ್ಲಿ 8 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ (ಗರ್ವಾಲ್) ಅಜಯ್ ರೌತೆಲಾ ಖಚಿತಪಡಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • 30ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ವ್ಯಾನ್ ಡಿವೈಡರ್ ಗೆ ಡಿಕ್ಕಿ

    30ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ವ್ಯಾನ್ ಡಿವೈಡರ್ ಗೆ ಡಿಕ್ಕಿ

    ಕೋಲಾರ: ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಶಾಲಾ ವ್ಯಾನ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ.

    ಜಿಲ್ಲೆಯ ಮಾಲೂರು ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾಲೂರಿನ ಹೊರವಲಯದಲ್ಲಿರುವ ಶ್ರೀ ಸಿದ್ದೇಶ್ವರ ಹೆರಿಟೇಜ್ ಸ್ಕೂಲ್ ಗೆ ಸೇರಿದ ವ್ಯಾನ್ ಇದಾಗಿದ್ದು, ವ್ಯಾನ್ ಚಾಲಕ ಪಾನಮತ್ತನಾಗಿ ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

    ಅವಘಡ ಆದ ಸಂದರ್ಭದಲ್ಲಿ ಬಸ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿದ್ದರು. ಆದ್ರೆ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಈ ಘಟನೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಸ್ಥಳೀಯರು ಚಾಲಕನ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ.

  • ಶಾಲಾ ಮಕ್ಕಳನ್ನು ರಕ್ಷಿಸಿ ಪ್ರಾಣ ಕಳೆದುಕೊಂಡ ವ್ಯಾನ್ ಡ್ರೈವರ್!

    ಶಾಲಾ ಮಕ್ಕಳನ್ನು ರಕ್ಷಿಸಿ ಪ್ರಾಣ ಕಳೆದುಕೊಂಡ ವ್ಯಾನ್ ಡ್ರೈವರ್!

    ಮುಂಬೈ: ಮಕ್ಕಳ ಜೀವವನ್ನು ಉಳಿಸಿ ಶಾಲಾ ವ್ಯಾನ್ ಚಾಲಕ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ವಿರಾರ ನಗರದಲ್ಲಿ ನಡೆದಿದೆ.

    ಖಾಸಗಿ ಶಾಲೆಯ ಪ್ರಕಾಶ್ ಪಾಟೀಲ್ (44) ಮಕ್ಕಳಿಗಾಗಿ ಪ್ರಾಣಾ ತ್ಯಾಗ ಮಾಡಿದ ಶಾಲಾ ವ್ಯಾನ್ ಚಾಲಕ.

    ಘಟನೆ ವಿವರ:
    ಪ್ರಕಾಶ್ ಪಾಟೀಲ್ ಸೋಮವಾರ ಮಧ್ಯಾಹ್ನ ಶಾಲೆಯಿಂದ ಮಕ್ಕಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ವಾಟರ್-ಲಾಗ್ಡ್ ಪಾಕೆಟ್ಸ್ ಮೂಲಕ ವಾಸೈಗೆ ಹೋಗುತ್ತಿದ್ದರು. ವಿರಾರದಲ್ಲಿರುವ ನೇರಿಂಗಿ ಗ್ರಾಮದ ಮೂಲಕ ವ್ಯಾನ್ ಚಲಿಸುತ್ತಿತ್ತು. ವ್ಯಾನ್ ಸಂಚರಿಸುತ್ತಿದ್ದ ಪಕ್ಕದಲ್ಲೇ ತೊರೆ ಹರಿಯುತ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಅದಾಗಲೇ ವ್ಯಾನ್ ನಲ್ಲಿ ನಾಲ್ಕು ಮಕ್ಕಳು ಇದ್ದರು. ಕಹ್ರೋಡಿ ಜಂಕ್ಷನ್ ಹತ್ತಿರ ಬರುತ್ತಿದ್ದಂತೆಯೇ ಭಾರೀ ಮಳೆ ಆರಂಭವಾಗಿದೆ. ಹೀಗಾಗಿ ಚಾಲಕನಿಗೆ ರಸ್ತೆ ಕಾಣುತ್ತಿರಲಿಲ್ಲ. ಅಲ್ಲದೇ ಸುಮಾರು ಮೂರು ಅಡಿಯಷ್ಟು ನೀರು ರಸ್ತೆಯಲ್ಲೇ ಹರಿಯುತ್ತಿದ್ದರಿಂದ ಚಾಲಕನಿಗೆ ತೊರೆ, ರಸ್ತೆ ಕಾಣದೇ ಮುಂದೆ ಚಲಿಸಲು ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಭಾರೀ ಮಳೆಯಿಂದ ನೀರು ತುಂಬಿ ಹರಿಯುತ್ತಿದ್ದರಿಂದ ಅನಾಹುತ ಕಟ್ಟಿಟ್ಟಬುತ್ತಿ ಅಂತ ತಿಳಿದುಕೊಂಡು ಆತಂಕಗೊಂಡ ಚಾಲಕ ವ್ಯಾನ ನಿಲ್ಲಿಸಿದ್ದಾನೆ.

    ಬಳಿಕ ಮಕ್ಕಳನ್ನು ವ್ಯಾನಿನಿಂದ ಇಳಿಯುವಂತೆ ಹೇಳಿದ್ದಾರೆ. ಅಲ್ಲದೇ ಮಕ್ಕಳನ್ನು ತಾವೇ ಸ್ವತಃ ವ್ಯಾನಿನಿಂದ ಇಳಿಸಿದ್ದಾರೆ. ಈ ವೇಳೆ ರಭಸವಾಗಿ ಹರಿಯುತ್ತಿರುವ ನೀರಿಗೆ ಸಿಲುಕಿ ಇಬ್ಬರು ಮಕ್ಕಳು ತೊರೆಗೆ ಬಿದ್ದಿದ್ದಾರೆ. ಕೂಡಲೇ ಚಾಲಕ ತೊರೆಗೆ ಹಾರಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಚಾಲಕ ತೊರೆಯ ಅಂಚಿನಲ್ಲಿದ್ದರಿಂದ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆಗ ಮಕ್ಕಳು ಸಹಾಯಕ್ಕಾಗಿ ಕಿರುಚಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಸ್ಥಳೀಯರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಚಾಲಕನಿಗಾಗಿ ಶೋಧಕಾರ್ಯ ಮಾಡಿದ್ದಾರೆ. ಈ ವೇಳೆ ಕೇವಲ 20 ನಿಮಿಷಗಳಲ್ಲಿ ಪಾಟೀಲ್ ದೇಹ ಸುಮಾರು 1.5 ಕಿ.ಮೀ. ದೂರ ಹೋಗಿದ್ದು, ಸದ್ಯ ಅವರ ಮೃತ ದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಾಟೀಲ್ ವಸೈದ ಪಾರೋಲ್ ಗ್ರಾಮದ ನಿವಾಸಿಯಾಗಿದ್ದು, ಎರಡು ವರ್ಷಗಳಿಂದ ವ್ಯಾನ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ಕುರಿತು ತನಿಖೆ ಪೂರ್ಣಗೊಂಡ ನಂತರ, ಪಾಟೀಲ್ ಕುಟುಂಬಕ್ಕೆ ಪರಿಹಾರವನ್ನು ಶಿಫಾರಸ್ಸು ಮಾಡುತ್ತೇವೆ. ಈ ಘಟನೆ ಸಂಭವಿಸಿದ ನಂತರ ಪಾಟೀಲ್ ಅವರನ್ನು ಧೈರ್ಯಶಾಲಿ ಎಂದು ಗ್ರಾಮಸ್ಥರು ಪ್ರಶಂಸಿದ್ದಾರೆ ಎಂದು ವಿರಾರ್ ವಿಭಾಗದ ಉಪ ಸೂಪರಿಟೆಂಡೆಂಟ್ ಜಯಂತ್ ಬಾಜ್ಬೆಲೆ ಹೇಳಿದ್ದಾರೆ.

    ನನ್ನ ಸಹೋದರ ಸಹಾಯ ಮನೋಭಾವವನ್ನು ಹೊಂದಿದ್ದರು. ಆತ ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಯಾರೊಂದಿಗೂ ಗಲಾಟೆ ಮಾಡಿಕೊಳ್ಳುತ್ತಿರಲಿಲ್ಲ. ಅಗತ್ಯವಿರುವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು. ಆತ ತನ್ನ ಜೀವನದ ಬಗ್ಗೆ ಯೋಚಿಸಲಿಲ್ಲ ಎಂದು ಪಾಟೀಲ್ ಸಹೋದರ ಹೇಳಿದ್ದಾರೆ.