Tag: school girl

  • ಶಾಲೆಯಿಂದ ಮರಳುವಾಗ 5ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್

    ಶಾಲೆಯಿಂದ ಮರಳುವಾಗ 5ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್

    ಅಗರ್ತಲಾ: ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ 5ನೇ ತರಗತಿ ಬಾಲಕಿ ಮೇಲೆ ಕಾಮುಕರ ಗ್ಯಾಂಗ್‌ವೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತ್ರಿಪುರಾದ ದಕ್ಷಿಣಭಾಗದ (Tripura South District) ಜಿಲ್ಲೆಯೊಂದರಲ್ಲಿ ನಡೆದಿದೆ.

    ಇತ್ತೀಚಿಗಷ್ಟೇ ತ್ರಿಪುರಾದ ಉತ್ತರ ಭಾಗದ ಜಿಲ್ಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ (Gang Rape) ನಡೆದ ಪ್ರಕರಣ ಬೆಳಿಕಿಗೆ ಬಂದಿತ್ತು. ಇದಾದ ಮಾರನೇ ದಿನವೇ ಘಟನೆ ನಡೆದಿದೆ.ಇದನ್ನೂ ಓದಿ: 7 ತಿಂಗಳ ಹಿಂದಷ್ಟೇ ನಾನು ಬ್ರೇಕಪ್ ಮಾಡಿಕೊಂಡೆ: ಮೃಣಾಲ್ ಠಾಕೂರ್

    ಶಾಲೆಯಿಂದ ಮಗಳು ಹಿಂದಿರುಗದೇ ಇದ್ದಾಗ ಸಂತ್ರಸ್ತ ಬಾಲಕಿಯ ಪೋಷಕರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದ್ದಾರೆ. ಎಷ್ಟೇ ಹುಡುಕಿದರೂ ಸಿಗದೇ ಇದ್ದಾಗ ತ್ರಿಪುರಾದ ಬೆಲೊನಿಯಾ ಮಹಿಳಾ ಪೊಲೀಸ್ (Belonia Women Police Station) ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬೆಲೊನಿಯಾ ಠಾಣೆಯ ಓರ್ವ ಅಧಿಕಾರಿ ಮಾತನಾಡಿ, ಶಾಲೆಗೆ ಹೋದ ಮಗಳು ಮನೆಗೆ ಬರಲಿಲ್ಲ ಎಂಬ ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಿದಾಗ ಶನಿವಾರ ಸಂಜೆ ಸಂತ್ರಸ್ತ ಬಾಲಕಿಯ ಮನೆ ಹತ್ತಿರದಲ್ಲಿ ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾಲಕಿಯ ಪರಿಚಯಸ್ಥನೊಬ್ಬ ಮನೆ ಬಳಿ ಬಿಟ್ಟು ಹೋಗಿರುವುದು ನಂತರ ಗೊತ್ತಾಗಿದೆ. ತನಿಖೆ ಮಾಡಿದಾಗ ಆತ ಅದೇ ಬಡಾವಣೆಯ 22 ವರ್ಷದ ಹುಡುಗ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.

    ಇಲ್ಲಿಯವರೆಗೂ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ ಆದರೆ ಆರೋಪಿಯ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಪೋಕ್ಸೋ ಕಾಯ್ದೆ ಹಾಗೂ ಬೇರೆ ಬೇರೆ ಸೆಕ್ಷನ್‌ಗಳಡಿಯಲ್ಲಿ ಆರೋಪಿಸಲಾಗುವುದು ಎಂದು ತಿಳಿಸಿದ್ದಾರೆ.

    ಶುಕ್ರವಾರ ತ್ರಿಪುರಾದ ಉತ್ತರ ಭಾಗದ ಜಿಲ್ಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಆರೋಪ ಕೇಳಿಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ. ಸಂಜೆ ಹೊತ್ತಲ್ಲಿ ಅಂಗಡಿಗೆ ಎಂದು ಬಂದ ಬಾಲಕಿಯನ್ನು ಹತ್ತಿರದ ಕಾಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಬಾಲಕಿಯನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು, ಪೋಷಕರಿಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಮುಂದಿನ 24 ಗಂಟೆಯಲ್ಲಿ ದೆಹಲಿ ಗದ್ದುಗೆಗೆ ನೂತನ ಸಾರಥಿ – ಸಿಎಂ ರೇಸ್‌ನಲ್ಲಿರುವ ಟಾಪ್‌ -5 ಕಲಿಗಳು ಯಾರು?

    ಕಳೆದ ತಿಂಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆ ತ್ರಿಪುರಾ ದಕ್ಷಿಣ ಭಾಗದ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

  • ತುಂಬಿ ತುಳುಕುತ್ತಿದ್ದ ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು

    ತುಂಬಿ ತುಳುಕುತ್ತಿದ್ದ ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು

    ಹಾವೇರಿ: ಮಿತಿ ಮೀರಿ ಜನ ತುಂಬಿದ್ದ ಸಾರಿಗೆ ಬಸ್‍ನಿಂದ (Bus) ಬಿದ್ದು 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಹಾನಗಲ್ (Hangal) ತಾಲ್ಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಮಧು ಕುಂಬಾರ ಎಂದು ಗುರುತಿಸಲಾಗಿದೆ. ಬಸ್‍ನಲ್ಲಿ ಭಾರೀ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ದರಿಂದಾಗಿ ಬಾಲಕಿ ಬಾಗಿಲ ಬಳಿಯೇ ನಿಂತಿದ್ದಳು. ದುರಾದೃಷ್ಟವಶಾತ್ ಆಯತಪ್ಪಿ ಕೆಳಗಡೆ ಬಿದ್ದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಾಟ್ಸಾಪ್‍ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ

    ಬಾಲಕಿ ವಾಸನ ಗ್ರಾಮದಿಂದ ಕುಸನೂರು ಗ್ರಾಮದ ಶಾಲೆಗೆ ಬಸ್‍ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಪ್ರೌಢ ಶಾಲೆಗೆ ದಾಖಲಾಗಿದ್ದಳು. ಕುಟುಂಬದಲ್ಲಿ ಒಬ್ಬಳೇ ಮಗಳಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

  • ಮೋದಿ ಜೀ.. ನಮಗೆ ಒಳ್ಳೆ ಶಾಲೆ ಕಟ್ಟಿಸಿಕೊಡಿ ಪ್ಲೀಸ್‌ – ಪ್ರಧಾನಿ ಬಳಿ ಪುಟ್ಟ ಹುಡುಗಿ ಮನವಿ

    ಮೋದಿ ಜೀ.. ನಮಗೆ ಒಳ್ಳೆ ಶಾಲೆ ಕಟ್ಟಿಸಿಕೊಡಿ ಪ್ಲೀಸ್‌ – ಪ್ರಧಾನಿ ಬಳಿ ಪುಟ್ಟ ಹುಡುಗಿ ಮನವಿ

    ಶ್ರೀನಗರ: ಮೋದಿ ಜೀ.. ನೀವು ದೇಶದ ಮಾತು ಆಲಿಸುತ್ತೀರಾ. ದಯವಿಟ್ಟು ನನ್ನ ಮಾತನ್ನೂ ಕೇಳಿ. ನಮಗೆ ಒಂದೊಳ್ಳೆ ಶಾಲೆ ಕಟ್ಟಿಸಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಳಿ ಕಾಶ್ಮೀರದ ಪುಟ್ಟ ಹುಡುಗಿ ಮನವಿ ಮಾಡಿದ್ದಾಳೆ. ಬಾಲಕಿಯ ಮನವಿ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಜಮ್ಮು ಮತ್ತು ಕಾಶ್ಮೀರದ (Jammu Kasmir) ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಸೀರತ್ ನಾಜ್ ಎಂಬ ಬಾಲಕಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಯೊಂದನ್ನು ಮಾಡಿದ್ದಾಳೆ. ವೀಡಿಯೋದಲ್ಲಿ ತನ್ನ ಶಾಲೆಯ ದುಸ್ಥಿತಿ ಬಗ್ಗೆ ಬಾಲಕಿ ವಿವರಿಸಿದ್ದಾಳೆ. ಅಲ್ಲದೇ ಶಾಲೆಯ ಅವ್ಯವಸ್ಥೆಯನ್ನು ಸಹ ವೀಡಿಯೋದಲ್ಲಿ ಚಿತ್ರೀಕರಿಸಿದ್ದಾಳೆ. ಇದನ್ನೂ ಓದಿ: ಕೆಎಂಎಫ್‌ನಿಂದ ಫೆಡರಲ್‌ ತತ್ವ ಉಲ್ಲಂಘನೆ – ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ

    ವೀಡಿಯೋದಲ್ಲಿ ಬಾಲಕಿ ಏನು ಹೇಳಿದ್ದಾಳೆ?
    ಮೋದಿಜಿ, ನಾನು ನಿಮಗೆ ಒಂದು ವಿಷಯ ಹೇಳಬೇಕು. ನಮ್ಮ ಶಾಲೆಯ ನೆಲ ಎಷ್ಟು ಕೊಳಕಾಗಿದೆ ನೋಡಿ. ಶಿಕ್ಷಕರು ನಮ್ಮನ್ನು ಇಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತಾರೆ. ನಮ್ಮ ಶಾಲೆ ಇರುವ ದೊಡ್ಡ ಕಟ್ಟಡ ನೋಡಿ ಹೇಗಿದೆ. ಕಳೆದ 5 ವರ್ಷಗಳಿಂದ ಕಟ್ಟಡ ಎಷ್ಟು ಅಶುದ್ಧವಾಗಿದೆ ನೋಡಿ. ಶೌಚಾಲಯ ತುಂಬಾ ಕೊಳಕಾಗಿದೆ. ಬಾಗಿಲು ಮುರುದು ಹೋಗಿದೆ ನೋಡಿ.

    ನಮಗಾಗಿ ಒಂದು ಉತ್ತಮವಾದ ಶಾಲೆಯನ್ನು ನಿರ್ಮಿಸಿಕೊಡುವಂತೆ ವಿನಂತಿಸುತ್ತೇನೆ. ಈಗ ನಾವು ನೆಲದ ಮೇಲೆ ಕುಳಿತುಕೊಳ್ಳಬೇಕಾಗಿರುವುದರಿಂದ ನಮ್ಮ ಸಮವಸ್ತ್ರಗಳು ಕೊಳಕಾಗುತ್ತವೆ. ಸಮವಸ್ತ್ರವನ್ನು ಕೊಳಕು ಎಂದು ಅಮ್ಮ ಆಗಾಗ್ಗೆ ನಮ್ಮನ್ನು ಬೈಯುತ್ತಾರೆ. ನಮಗೆ ಕುಳಿತುಕೊಳ್ಳಲು ಬೆಂಚುಗಳಿಲ್ಲ. ಪ್ಲೀಸ್‌ ಮೋದಿ ಜೀ, ಶಾಲೆಯ ಮೂಲಸೌಕರ್ಯಗಳನ್ನು ಉತ್ತಮಗೊಳಿಸಲು ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ದಯವಿಟ್ಟು ನನ್ನ ಆಸೆಯನ್ನು ಈಡೇರಿಸಿ. ಇದನ್ನೂ ಓದಿ: ಇಬ್ಬರು ಭದ್ರತಾ ಸಿಬ್ಬಂದಿಗೆ ಗುಂಡಿಕ್ಕಿ ಬ್ಯಾಂಕ್‍ನಲ್ಲಿ 13.28 ಲಕ್ಷ ಲೂಟಿ

    ಮೋದಿ ಜೀ, ನೀವು ಇಡೀ ರಾಷ್ಟ್ರವನ್ನು ಆಲಿಸಿತ್ತೀರಿ. ದಯವಿಟ್ಟು ನನ್ನ ಮಾತನ್ನೂ ಕೇಳಿ. ನಮಗೆ ಒಳ್ಳೆಯ ಶಾಲೆ ಕಟ್ಟಿಸಿಕೊಡಿ. ನಮಗೆ ಒಳ್ಳೆಯ ಶಾಲೆ ಇದ್ದರೆ ಚೆನ್ನಾಗಿ ಓದುತ್ತೇವೆ. ಶಾಲೆ ಚೆನ್ನಾಗಿ ನಮ್ಮ ಬಟ್ಟೆ ಕೊಳಕಾಗಲ್ಲ. ಆಗ ಮನೆಯಲ್ಲಿ ಅಮ್ಮ ರೇಗುವುದಿಲ್ಲ. ದಯವಿಟ್ಟು ನಮಗಾಗಿ ಒಂದು ಒಳ್ಳೆಯ ಶಾಲೆಯನ್ನು ನಿರ್ಮಿಸಿಕೊಡಿ ಎಂದು ವೀಡಿಯೋದಲ್ಲಿ ಬಾಲಕಿ ಮನವಿ ಮಾಡಿದ್ದಾಳೆ.

  • ಚಿಕ್ಕಪ್ಪನಿಂದ 15ರ ಬಾಲಕಿಯ ಮೇಲೆ ಅತ್ಯಾಚಾರ- ಗಂಡು ಮಗುವಿಗೆ ಜನ್ಮ ಕೊಟ್ಟ ಅಪ್ರಾಪ್ತೆ

    ಚಿಕ್ಕಪ್ಪನಿಂದ 15ರ ಬಾಲಕಿಯ ಮೇಲೆ ಅತ್ಯಾಚಾರ- ಗಂಡು ಮಗುವಿಗೆ ಜನ್ಮ ಕೊಟ್ಟ ಅಪ್ರಾಪ್ತೆ

    ಲಕ್ನೋ: ಚಿಕ್ಕಪ್ಪನೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಅವಳನ್ನು ಗರ್ಭಿಣಿಯಾಗಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

    ಉತ್ತರಾಖಂಡದ ವಲಸೆ ಕಾರ್ಮಿಕನೊಬ್ಬ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ್ದಾನೆ. ಇದರ ಪರಿಣಾಮ ಬಾಲಕಿಯು ಗುರುಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಬಾಲಕಿ ಹಾಗೂ ಅವಳ ತಂದೆ, ತಾಯಿ ವಾಸಿಸುತ್ತಿದ್ದರು. ಬಾಲಕಿಯ ತಂದೆ, ತಾಯಿಯಿಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ಅಲ್ಲೇ ಪಕ್ಕ ಮನೆಯಲ್ಲಿ ವಾಸಿಸುತ್ತಿದ್ದ ಆಕೆಯ ಚಿಕ್ಕಪ್ಪ ಬಾಲಕಿಯನ್ನು ಯಾವುದೋ ನೆಪ ಹೇಳಿ ಮನೆಗೆ ಕರೆದಿದ್ದಾನೆ. ನಂತರ ಅಲ್ಲಿ ಅತ್ಯಾಚಾರವೆಸಗಿದ್ದಾನೆ. ದನ್ನೂ ಓದಿ: ಅಕ್ರಮ ಆಸ್ತಿ ಪತ್ತೆಯಾದರೆ ಬುಲ್ಡೋಜರ್ ನುಗ್ಗಿಸಿ – ಅಧಿಕಾರಿಗಳಿಗೆ ಮಮತಾ ಬ್ಯಾನರ್ಜಿ ಸವಾಲು

    ಕೆಲ ತಿಂಗಳ ಬಳಿಕ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಬಾಲಕಿಯನ್ನು ಅಲ್ಲಿಯೇ ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಆಕೆಯ ತಾಯಿ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕಿ ಗರ್ಭಿಣಿ ಆಗಿರುವ ವಿಷಯವನ್ನು ತಾಯಿಗೆ ತಿಳಿದಿದೆ. ಇದಾದ ನಂತರ ಬಾಲಕಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಘಟನೆಗೆ ಸಂಬಂಧಿಸಿ ಸಂತ್ರಸ್ತೆಯ ತಾಯಿಯು ನೀಡಿದ ದೂರಿನ ಆದರಾದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಬಾಲಕಿಯ ಚಿಕ್ಕಪ್ಪನಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವವನ್ನು ಸ್ವಾಗತಿಸಲ್ಲ, ಹುಬ್ಬಳ್ಳಿ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್‌ : ಅಂಜುಮನ್ ಸಂಸ್ಥೆ

    Live Tv
    [brid partner=56869869 player=32851 video=960834 autoplay=true]

  • ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಶಾಲಾ ಬಾಲಕಿ ಸಾವು

    ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಶಾಲಾ ಬಾಲಕಿ ಸಾವು

    ಬೆಳಗಾವಿ: ಪಕ್ಕದ ಮನೆಗ ಓದಲು ಹೋಗಿ ವಾಪಸ್ ಮನೆಗೆ ಬರುವಾಗ ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎಂಟು ವರ್ಷದ ಶಾಲಾ ಬಾಲಕಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಹುಲಿಕಟ್ಟಿ ಗ್ರಾಮದ ಚೂನವ್ವ ಸರ್ವಿ(8) ಮೃತ ದುರ್ದೈವಿ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಡರಿಸಿ ಬಿದ್ದಿದ್ದ ತಂತಿಯ ಮೇಲೆ ಕಾಲಿಟ್ಟು ವಿದ್ಯುತ್ ಸ್ಪರ್ಶಿಸಿ ಚೂನವ್ವ ಸರ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಘಟನೆ ಜೂ.24ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪ್ರೇಯಸಿ ದೂರಾಗಿದ್ದಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಪ್ರಾಣ ಬಿಟ್ಟ!

    ಇದೀಗ ಬಾಲಕಿ ಸಾವಿಗೆ ಕಾರಣರಾದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು, ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಡೀಸೆಲ್ ಕೊರತೆ- ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ: BMTC ಎಂಡಿ ಸ್ಪಷ್ಟನೆ

    Live Tv

  • ಶಾಲೆಗೆ ನುಗ್ಗಿ ಬಾಲಕಿಯ ಅಪಹರಣಕ್ಕೆ ಯತ್ನ- ಆರೋಪಿಗಳನ್ನು ಕೊಂದ ಗ್ರಾಮಸ್ಥರು

    ಶಾಲೆಗೆ ನುಗ್ಗಿ ಬಾಲಕಿಯ ಅಪಹರಣಕ್ಕೆ ಯತ್ನ- ಆರೋಪಿಗಳನ್ನು ಕೊಂದ ಗ್ರಾಮಸ್ಥರು

    ಪಾಟ್ನಾ: ವಿದ್ಯಾರ್ಥಿನಿಯನ್ನು ಅಪಹರಿಸಲು ಬಂದಿದ್ದ ನಾಲ್ವರಲ್ಲಿ ಮೂವರನ್ನು ಹಿಡಿದು, ಗ್ರಾಮಸ್ಥರು ಮನಬಂದಂತೆ ಥಳಿಸಿ ಕೊಲೆ ಮಾಡಿದ ಘಟನೆ ಬಿಹಾರ ಬೇಗುಸಾರೈ ಜಿಲ್ಲೆಯಲ್ಲಿ ನಡೆದಿದೆ.

    ಬೇಗುಸಾರೈ ಜಿಲ್ಲೆಯ ಮುಖೇಶ್ ಮಾಹ್ತೊ, ಬೌನಾ ಸಿಂಗ್ ಹಾಗೂ ಸಮಸ್ತಿಪುರ್ ಸಮೀಪ ರೋಸೆರಾ ಗ್ರಾಮದ ಹೀರಾ ಸಿಂಗ್ ಮೃತ ದುರ್ದೈವಿಗಳು.

    ನಡೆದದ್ದು ಏನು?
    ಹೊಸದಾಗಿ ಪ್ರಾರಂಭವಾಗಿದ್ದ ನಾರಾಯಣಿಪಾರ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಾಲ್ವರು ನುಗ್ಗಿದ್ದು, ಬಾಲಕಿಯೊಬ್ಬಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಅವರಿಗೆ ಹೆದರಿ ಯಾರು ಮಾಹಿತಿ ನೀಡದಿದ್ದಾಗ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ. ಅವರ ಕೈಗೆ ಬಾಲಕಿ ಸಿಗುತ್ತಿದ್ದಂತೆ ಆಕೆಯನ್ನು ಅಪಹರಿಸಲು ಮುಂದಾಗಿದ್ದರು. ಇದರಿಂದಾಗಿ ಗಾಬರಿಗೊಂಡು ಮಕ್ಕಳು ಕಿರುಚಲು ಪ್ರಾರಂಭಿಸಿದ್ದಾರೆ.

    ಹುಲ್ಲು ಕೊಯ್ದುಕೊಂಡು ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬಳು ಶಾಲೆಯಲ್ಲಿ ಮಕ್ಕಳು ಅಳುವ ಧ್ವನಿ ಕೇಳಿಸಿಕೊಂಡಿದ್ದು, ತಕ್ಷಣವೇ ಗ್ರಾಮಸ್ಥರನ್ನು ಕೂಗಿ ಕರೆದಿದ್ದಾರೆ. ಗ್ರಾಮಸ್ಥರು ಶಾಲೆಗೆ ಬರುತ್ತಿದ್ದಂತೆ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದರು. ಆದರೆ ನಾಲ್ವರಲ್ಲಿ ಒಬ್ಬ ಮಾತ್ರ ತಪ್ಪಿಸಿಕೊಂಡು ಹೋಗಿದ್ದು, ಉಳಿದ ಮೂವರು ಗ್ರಾಮಸ್ಥರ ಕೈಗೆ ಸಿಕ್ಕಿದ್ದರು.

    20ಕ್ಕೂ ಹೆಚ್ಚು ಜನರು ಕೋಲು ಹಿಡಿದು, ಬಂಧಿಸಿದ್ದ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವಕರ ಶೋಕಿಗಳಿಗೆ ಬ್ರೇಕ್ ಹಾಕಿ ಶಿಸ್ತಿನ ಬುದ್ಧಿ ಕಲಿಸುತ್ತಿದ್ದಾರೆ ಕೋಲಾರ ಪೊಲೀಸರು!

    ಯುವಕರ ಶೋಕಿಗಳಿಗೆ ಬ್ರೇಕ್ ಹಾಕಿ ಶಿಸ್ತಿನ ಬುದ್ಧಿ ಕಲಿಸುತ್ತಿದ್ದಾರೆ ಕೋಲಾರ ಪೊಲೀಸರು!

    ಕೋಲಾರ: ಶಾಲಾ ಬಾಲಕಿ ಅತ್ಯಾಚಾರ ಯತ್ನ, ಕೊಲೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಕೋಲಾರ ಪೊಲೀಸರು ಯುವಕರ ಶೋಕಿಗಳಿಗೆ ಬ್ರೇಕ್ ಹಾಕಿ ಶಿಸ್ತಿನ ಬುದ್ಧಿ ಕಲಿಸುತ್ತಿದ್ದಾರೆ.

    ಸ್ಟೈಲಿಷ್ ಗಡ್ಡದಾರಿಗಳಿಗೆ, ಪುಂಡ ಪೋಕರಿಗಳನ್ನು ಅಟ್ಟಗಟ್ಟಿ ಖುದ್ದು ಪೊಲೀಸರೇ ತಲೆ ಬೋಳಿಸಿ ಸಮಾಜದಲ್ಲಿ ಶಿಸ್ತಾಗಿರುವಂತೆ ಸಂದೇಶ ರವಾನೆ ಮಾಡುತ್ತಿದ್ದರೆ. ಚಿತ್ರ ವಿಚಿತ್ರ ಗಡ್ಡ, ತಲೆಗೂದಲು ಬಿಟ್ಟ ಯುವಕರನ್ನು ಹಿಡಿದು ಮಾಲೂರು ಪೊಲೀಸರು ಸಲ್ಯೂನ್ ಗೆ ಕರೆದುಕೊಂಡು ಹೋಗಿ ಖುದ್ದು ಶೇವಿಂಗ್, ಹೇರ್ ಕಟ್ ಮಾಡಿಸಿ ಯುವಕರಿಗೆ ಅರಿವು ಮೂಡಿಸುತ್ತಿದ್ದಾರೆ.

    ಕಳೆದ ಗುರುವಾರ ಮಾಲೂರು ಪಟ್ಟಣದಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಬಾಲಕಿ ಹತ್ಯೆ ಪ್ರಕರಣ ನಂತರ ಎಚ್ಚೆತ್ತುಕೊಂಡಿರುವ ಮಾಲೂರು ಪೊಲೀಸ್ ಇಲಾಖೆ ಯುವಕರಿಗೆ ಶಿಸ್ತಿನ ಪಾಠ ಕಲಿಕೆಗೆ ಮುಂದಾಗಿದ್ದಾರೆ.

    ಪುಂಡ ಪೋಕರಿಗಳನ್ನು ಮಟ್ಟ ಹಾಕಲು ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ರೋಡ್ ರೋಮಿಯೋ, ಬೈಕ್ ವಿಲ್ಹೀಂಗ್ ಮಾಡುವ ಯುವಕರನ್ನು ಪತ್ತೆ ಹಚ್ಚಿ ಶಿಸ್ತಿನ ಪಾಠ ಕಲಿಸುತ್ತಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ಸಿಕ್ಕಿದೆ.

  • ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ- ಡೆತ್‍ನೋಟ್ ಬರೆದು 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ- ಡೆತ್‍ನೋಟ್ ಬರೆದು 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ಫೀಸ್ ಕಟ್ಟದ ಕಾರಣ ಪರೀಕ್ಷೆ ನಡೆಯುತ್ತಿದ್ದ ವೇಳೆಯೇ ಕ್ಲಾಸ್ ರೂಮಿನಿಂದ ಹೊರಹಾಕಿದ್ದಕ್ಕೆ ಮನನೊಂದು 14 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ ನಲ್ಲಿ ನಡೆದಿದೆ.

    ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 9ನೇ ತರಗತಿ ಬಾಲಕಿಯನ್ನ ಕ್ಲಾಸ್‍ನಿಂದ ಹೊರಹಾಕಿ ಎಲ್ಲರ ಮುಂದೆ ಅವಮಾನಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕಿಯ ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿದ್ದು, “ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ” ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿ 2 ಸಾವಿರ ರೂ. ಫೀಸ್ ಕಟ್ಟುವುದು ಬಾಕಿ ಇತ್ತು ಎಂದು ಪೊಲೀಸರು ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ಶಾಲೆಯವರು ನನ್ನ ಹೆಸರು ಕರೆದು ಕ್ಲಾಸ್‍ನಿಂದ ಹೊರಹಾಕಿದಾಗ ನನಗೆ ಅವಮಾನವಾಯಿತು ಎಂದು ಬಾಲಕಿ ಮನೆಗೆ ಬಂದ ನಂತರ ತನ್ನ ಸಹೋದರಿಯೊಂದಿಗೆ ಹೇಳಿಕೊಂಡಿದ್ದಳು. ಆದ್ರೆ ಬಳಿಕ ಮಲ್ಕಜ್ಗಿರಿಯ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಕುಟುಂಬಸ್ಥರ ದೂರಿನನ್ವಯ ಪೊಲೀಸರು ಶಾಲೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಶಾಲಾ ಬಾಲಕಿಯನ್ನು ಚುಡಾಯಿಸಿದವನಿಗೆ ಗ್ರಾಮಸ್ಥರಿಂದ ಗೂಸ

    ಶಾಲಾ ಬಾಲಕಿಯನ್ನು ಚುಡಾಯಿಸಿದವನಿಗೆ ಗ್ರಾಮಸ್ಥರಿಂದ ಗೂಸ

    ದಾವಣಗೆರೆ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಆಟೋ ಹತ್ತುವಂತೆ ಚುಡಾಯಿಸುತ್ತಿದ್ದ ಯುವಕನಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ಜಿಲ್ಲೆಯ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಶಾಲಾ ಬಾಲಕಿಯನ್ನು ಆಟೋದಲ್ಲಿ ಬಂದ ನಾಲ್ವರು ಯುವಕರು ಚುಡಾಯಿಸಿ ಆಟೋ ಏರುವಂತೆ ಕಾಟ ಕೊಟ್ಟಿದ್ದಾರೆ. ಪ್ರಶ್ನಿಸಿದ ಲಿಂಗದಹಳ್ಳಿ ಗ್ರಾಮಸ್ಥರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ನಂತರ ಗ್ರಾಮಸ್ಥರೆಲ್ಲ ಬಂದಾಗ ಯುವಕರನ್ನು ಹಿಡಿಯಲು ಹೋದಾಗ ಆಟೋದಲ್ಲಿದ್ದ ನಿಟ್ಟುವಳ್ಳಿಯ ಅರುಣ್, ಗಣೇಶ್, ಫಯಾಜ್ ಪರಾರಿಯಾಗಿದ್ದಾರೆ.

    ಪುಂಡರ ಜೊತೆಗಿದ್ದ ಚಂದ್ರು ಮಾತ್ರ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ರೋಡ್ ರೊಮಿಯೋ ಚಂದ್ರನಿಗೆ ಸರಿಯಾಗಿ ಗೂಸ ಕೊಟ್ಟಿದ್ದಾರೆ. ಅಲ್ಲದೇ ಮದ್ಯಪಾನ ಸೇವನೆ ಮಾಡಿ ಆಟೋದಲ್ಲಿ ಲಿಂಗದಹಳ್ಳಿ ಗ್ರಾಮಕ್ಕೆ ಯುವಕರು ಬಂದಿದ್ದರು ಎಣ್ಣೆ ಗುಂಗಿನಲ್ಲಿ ಈ ರೀತಿಯಾಯಿತ್ತು ಎನ್ನುತ್ತಿದ್ದಾರೆ ಪುಂಡರು.

    ಇನ್ನು ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • 3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

    3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

    ಬೀಜಿಂಗ್: 3ನೇ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನ ಶಾಲಾ ಬಾಲಕಿಯೊಬ್ಬಳು ಹಿಡಿದುಕೊಳ್ಳಲು ಯತ್ನಿಸೋ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಈ ಘಟನೆ ಚೀನಾದ ಹೆನಾನ್ ಪ್ರಾಂತ್ಯದ ಕ್ಸಿಂಗ್‍ಯಾಂಗ್‍ನಲ್ಲಿ ಮೇ 9 ರಂದು ನಡೆದಿದ್ದು, ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯ ಹೆಸರು ಚೆನ್ ಕೆಯು, ಈಕೆ 6ನೇ ತರಗತಿ ಓದುತ್ತಿದ್ದಾಳೆಂದು ಚೈನಾ ಪ್ಲಸ್ ಪತ್ರಿಕೆ ವರದಿ ಮಾಡಿದೆ.

    ರಸ್ತೆಯಲ್ಲಿ ಇತರೆ ಬಾಲಕಿಯರೊಂದಿಗೆ ಚೆನ್ ನಡೆದುಕೊಂಡು ಹೋಗುತ್ತಿದ್ದಾಗ ಎಲ್ಲರೂ ಕಟ್ಟಡವೊಂದರ ಬಳಿ ನಿಂತು ಮೇಲೆ ನೋಡುತ್ತಿರ್ತಾರೆ. ಕೆಲವು ಸೆಕೆಂಡ್‍ಗಳ ಕಾಲ ಚೆನ್ ಕೂಡ ಅಲ್ಲೇ ನಿಂತು ನೋಡಿದ್ದಾಳೆ. ನಂತರ ತನ್ನ ಎರಡೂ ಕೈ ಚಾಚಿ ಕಟ್ಟಡದ ಬಳಿ ಓಡುತ್ತಾಳೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮಗು ಕೆಳಗೆ ಬೀಳುತ್ತದೆ. ನಂತರ ಚೆನ್ ಓಡಿಹೋಗಿ ಮಗುವನ್ನ ಎತ್ತಿಕೊಂಡು ಗಾಯವೇನಾದ್ರೂ ಆಯಿತಾ ಅಂತ ನೋಡೋದನ್ನ ವಿಡಿಯೋದಲ್ಲಿ ಕಾಣಬಹುದು.

    ಕೆಳಗೆ ಬೈಕ್‍ಗಳು ನಿಂತಿದ್ದರಿಂದ ಅದರ ಮೇಲೆ ಮೊದಲು ಬಿದ್ದು ನಂತರ ಮಗು ನೆಲಕ್ಕೆ ಬಿದ್ದಿದ್ದರಿಂದ ದೊಡ್ಡ ಅನಾಹುತವಾಗೋದು ತಪ್ಪಿದೆ. ಮಹಡಿಯಿಂದ ಕೆಳಗೆ ಬಿದ್ದ 2 ವರ್ಷದ ಮಗು ತನ್ನ ತಾಯಿಗಾಗಿ ಹುಡುಕಾಡುತ್ತಾ ಕಿಟಿಕಿಯ ಮೇಲೆ ಹತ್ತಿದ್ದು, ಈ ವೇಳೆ ಕೆಳಗೆ ಬಿದ್ದಿದೆ. ಘಟನೆ ನಡೆದ ನಂತರ ಮಗುವನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಅಂತ ವೈದ್ಯರು ಹೇಳಿರೋದಾಗಿ ವರದಿಯಾಗಿದೆ.

    https://www.youtube.com/watch?v=oiWpN-4fKus