Tag: school children

  • ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಹಸು ಬಲಿ ರೈತ ಕಂಗಾಲು

    ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಹಸು ಬಲಿ ರೈತ ಕಂಗಾಲು

    – ಮಕ್ಕಳ ಮೇಲೆ ನಿಗಾ ಇಡುವಂತೆ ಎಚ್ಚರಿಕೆ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಒಂದೆಡೆ ಕಾಡಾನೆ ಹಾವಳಿಯಿಂದ ಗ್ರಾಮೀಣ ಜನರು ತೋಟಗಳಲ್ಲಿ ಓಡಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಹಲವೆಡೆ ಹುಲಿಗಳ (Tigers) ಅಟ್ಟಹಾಸ ಮುಂದುವರೆಯುತ್ತಿದೆ.

    ಮಂಗಳವಾರ ರಾತ್ರಿ ಕೂಡ ಪೋನ್ನಂಪೇಟೆ ತಾಲೂಕಿನ ಮಾಯಮುಡಿಯ ಕೊಂಗಂಡ ನಂಜಪ್ಪ ಅವರ ಹಸುವನ್ನು ಹುಲಿ ಕೊಂದು ಹಾಕಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಕೊಂದು ಹುಲಿ ಬಹಳ ದೂರದ ವರೆಗೆ ಎಳೆದೊಯ್ದಿದಿದೆ. ಇದನ್ನೂ ಓದಿ: Lokayukta Raid | ಹುಟ್ಟುಹಬ್ಬದಂದು ಹಾಸ್ಟೆಲ್‌ನಲ್ಲಿ ಹೂಮಳೆ – ಅಂದು ವಾರ್ಡನ್‌, ಈಗ ಅಧಿಕಾರಿ

    ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ಹುಲಿ ಕಾಫಿ ತೋಟದ ಒಳಗೆ ಸುಳಿದಾಡುತ್ತಿದ್ದು, ಕಾರ್ಮಿಕರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಯಶ್-‌ ‘ಟಾಕ್ಸಿಕ್‌’ ಬರ್ತ್‌ಡೇ ಪೀಕ್‌ ಗ್ಲಿಂಪ್ಸ್‌ ಔಟ್‌

  • ಬ್ಯಾಂಕಾಕ್‌ನಲ್ಲಿ ಘೋರ ದುರಂತ – ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ

    ಬ್ಯಾಂಕಾಕ್‌ನಲ್ಲಿ ಘೋರ ದುರಂತ – ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ

    ಬ್ಯಾಂಕಾಕ್‌: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಘೋರ ದುರಂತ ನಡೆದಿದೆ. ಶಾಲಾ ಬಸ್ಸೊಂದರಲ್ಲಿ ಅಗ್ನಿ ಆಕಸ್ಮಿಕ (School Bus fire) ಸಂಭವಿಸಿದೆ. ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವವಾಗಿ ದಹನವಾಗಿದ್ದಾರೆ. 16 ಮಕ್ಕಳು, ಮೂವರು ಶಿಕ್ಷಕರನ್ನು (Teachers) ರಕ್ಷಿಸಲಾಗಿದೆ.

    ಪ್ರವಾಸಕ್ಕೆ ತರಳಿದ್ದ ಶಾಲಾ ಬಸ್‌ ವಾಪಸ್‌ಗೆ ಥೈಲ್ಯಾಂಡ್‌ಗೆ (Thailand) ಮರಳುತ್ತಿದ್ದಾಗ ಮುಂಭಾಗ ಟೈರ್‌ ಸ್ಫೋಟಗೊಂಡ ನಂತರ ಘಟನೆ ಸಂಭವಿಸಿದೆ ಎನ್ನಲಾಗಿದೆ. ನಿಖರ ಕಾರಣ ಇನ್ನೂ ತಿಳಿದುಬಂದಿದೆ. ಬ್ಯಾಂಕಾಕ್‌ನ ಉತ್ತರಕ್ಕೆ 100 ಕಿಮೀ ದೂರದಲ್ಲಿ ಘಟನೆ ನಡೆದಿದ್ದು, ಥಾಯ್ಲೆಂಡ್ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಅಂತಿಮ ಹಂತದ ಚುನಾವಣೆ ಸಂಪನ್ನ – ಶೇ.65ಕ್ಕೂ ಹೆಚ್ಚು ಮತದಾನ

    ಘಟನೆ ಬಳಿಕ ಬಾನೆತ್ತರಕ್ಕೆ ಬಿಂಕಿಯ ಕಿಡಿ ಹಾಗೂ ದಟ್ಟ ಹೊಗೆ ಆವರಿಸಿದೆ. ಈ ಕುರಿತ ವೀಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿಯೂ ಸದ್ದು ಮಾಡುತ್ತಿವೆ. ಘಟನೆಯಲ್ಲಿ ಬದುಕುಳಿದ 16 ಮಕ್ಕಳು, ಮೂವರು ಶಿಕ್ಷಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

    ಈವರೆಗೆ ಹೊರತೆಗೆಯಲಾಗಿರುವ 23 ಶವಗಳಲ್ಲಿ 11 ಗಂಡು, 7 ಗಂಡು, 7 ಮಹಿಳೆಯರ ಶವಗಳಿವೆ. ಐವರ ಗುರುತು ಪತ್ತೆಯಾಗದಷ್ಟು ಬೆಂದು ಸುಟ್ಟು ಕರಕಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಗಾಂಧಿ ಭವನ ಲೋಕಾರ್ಪಣೆಗೆ ಸಕಲ ಸಿದ್ಧತೆ

  • ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಭಾಗ್ಯ: ಮಧು ಬಂಗಾರಪ್ಪ

    ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಭಾಗ್ಯ: ಮಧು ಬಂಗಾರಪ್ಪ

    ಬೆಂಗಳೂರು: ಮಿಡ್ ಡೇ ಮೀಲ್ಸ್ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳಿಗೆ ಪೌಷ್ಟಿಕಾಹಾರ ನೀಡಲು ನಿರ್ಧಾರ ಮಾಡಲಾಗಿದೆ. ಮಧ್ಯಾಹ್ನ ಬಿಸಿಯೂಟದ ಜೊತೆ ರಾಗಿ ಮಾಲ್ಟ್ ಕೊಡುವ ನಿರ್ಧಾರ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

    ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಪ್ರೊಗ್ರಾಮ್ ಲಾಂಚ್ ಮಾಡ್ತೀವಿ. ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ನಿಟ್ಟಿನಲ್ಲಿ ರಾಗಿ ಮಾಲ್ಟ್ ನೀಡುವ ನಿರ್ಧಾರ ಮಾಡಿದ್ದೇವೆ. ಒಂದು ಎನ್‌ಜಿಒ ಎರಡು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ರು. ಅದು ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಕ್ಷೀರಭಾಗ್ಯದ ಹಾಲಿನ ಜೊತೆ ಬೆಳಗ್ಗೆ ರಾಗಿಗಂಜಿ ಕೊಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

    ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ಮಾಡಲು ನಿರ್ಧಾರ ಆಗಿದೆ. 6 ತಿಂಗಳಲ್ಲಿ ಎಲ್ಲವೂ ಸರಿ ಆಗುತ್ತದೆ. 3 ಸಾವಿರ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ನಿರ್ಧಾರ ಮಾಡಲಾಗಿದೆ. ಎರಡು ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆ ಅಭಿವೃದ್ಧಿ ಮಾಡಲು ನಿರ್ಧಾರ ಮಾಡಲಾಗಿದೆ. ಎಲ್‌ಕೆಜಿಯಿಂದ 12 ನೇ ತರಗತಿವರೆಗೂ ಕೆಪಿಎಸ್ ಶಾಲೆಯಲ್ಲಿ ಇರಲಿದೆ. ಮೊದಲ ಬಾರಿಗೆ 3 ಪಬ್ಲಿಕ್ ಪರೀಕ್ಷೆ ಮಾಡ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿದೆ ಎಂದರು.

    ಎಸ್‌ಇಪಿ ಅನುಷ್ಠಾನ ಆಗಲಿದೆ. ಈ ಬಗ್ಗೆ ಮೊದಲ ಸಭೆ ಆಗಿದೆ. ಎಸ್‌ಇಪಿ ಇರೋದರಿಂದ ಉತ್ತಮ ಶಿಕ್ಷಣ ವ್ಯವಸ್ಥೆ ನಿರ್ಮಾಣ ಆಗಲಿದೆ. ಎಸ್‌ಇಪಿ ರಾಜ್ಯ ಪಠ್ಯ ಕ್ರಮವೋ, ಸಿಬಿಎಸ್‌ಇ ಪಠ್ಯಕ್ಕೋ ಅಂತ ರಿಪೋರ್ಟ್ ಬಂದ ಮೇಲೆ ಗೊತ್ತಾಗಲಿದೆ. ನಮ್ಮ ಸಿಲಬಸ್ ಸಿಬಿಎಸ್‌ಇ ಗಿಂತ ಉತ್ತಮವಾಗಿ ಇರಲಿದೆ. ವರದಿ ಬಂದ ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡ್ತೀವಿ ಎಂದು ಮಾಹಿತಿ ನೀಡಿದರು.

    10 ಮತ್ತು 12ನೇ ತರಗತಿ ಪರೀಕ್ಷೆಗೆ ಹಿಜಬ್‌ಗೆ ಅವಕಾಶ ಕೊಡುವ ವಿಚಾರವಾಗಿ ಮಾತನಾಡಿ, ಹಿಜಬ್ ವಿಚಾರ ಕೋರ್ಟ್ನಲ್ಲಿ ಇದೆ. ಈ ಬಗ್ಗೆ ನಾನು ಈಗ ಪ್ರತಿಕ್ರಿಯೆ ಕೊಡೋದು ಸರಿಯಲ್ಲ ಎಂದರು.

    ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಬಿ.ಬಿ.ಕಾವೇರಿ, ಪಿ.ಎಂ.ಪೋಷಣ್, ನಿರ್ದೇಶಕರಾದ ಶುಭಾ ಕಲ್ಯಾಣ್, ಅಪರ ಆಯುಕ್ತರಾದ ಜಯಶ್ರೀ ಇದ್ದರು.

  • ನವಶಿಲಾಯುಗ ಕೋಟೆ ಪ್ರದೇಶ ರಕ್ಷಣೆಗೆ ನಿಂತ ವಿದ್ಯಾರ್ಥಿಗಳು – ತರಗತಿ ಬಹಿಷ್ಕರಿಸಿ ಪ್ರತಿಭಟನೆ

    ನವಶಿಲಾಯುಗ ಕೋಟೆ ಪ್ರದೇಶ ರಕ್ಷಣೆಗೆ ನಿಂತ ವಿದ್ಯಾರ್ಥಿಗಳು – ತರಗತಿ ಬಹಿಷ್ಕರಿಸಿ ಪ್ರತಿಭಟನೆ

    ಹಾವೇರಿ: ಶಿಕಾರಿಪುರ ಏತ ನೀರಾವರಿ ಯೋಜನೆಗೆ ವಿರೋಧಿಸಿ ತರಗತಿ ಬಹಿಷ್ಕರಿಸಿ ಸರ್ಕಾರಿ ಶಾಲೆ ಮಕ್ಕಳು ಪ್ರತಿಭಟನೆ ಮಾಡಿದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ನಡೆದಿದೆ.

    ಹಳ್ಳೂರು ಗ್ರಾಮದ ನವಶಿಲಾಯುಗ ಕೋಟೆ ಪ್ರದೇಶದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಇದು ಸುಮಾರು ಸಾವಿರಾರು ವರ್ಷಗಳ ಇತಿಹಾಸ, ನವ ಶಿಲಾಯುಗದ ಕುರುಹುಗಳು ಪತ್ತೆ ಆಗಿದ್ದ ಕೋಟೆ ಪ್ರದೇಶವಾಗಿದೆ. ಇತಿಹಾಸ ಹಾಳು ಮಾಡಿ ಕಾಮಗಾರಿ ಮಾಡ್ತಿರೋದಕ್ಕೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕೋಟೆ ಪ್ರದೇಶದ ಬಳಿ ಇರುವ ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸೋ ಯೋಜನೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸೋ ಯೋಜನೆ ಕಾಮಗಾರಿಗೆ ಕೋಟೆ ಪ್ರದೇಶದಲ್ಲಿ ಜಾಗವನ್ನು ಸರ್ಕಾರ ನೀಡಿದೆ.

    ಕೋಟೆ ಪ್ರದೇಶವನ್ನ ಕೈ ಬಿಡಬೇಕು. ಒಂದು ವೇಳೆ ಇದು ಹೀಗೆ ಮುಂದುವರೆದರೆ ಪ್ರತಿಭಟನೆ ಮಾಡೋದಾಗಿ ಶಾಲಾ ಮಕ್ಕಳು ಎಚ್ಚರಿಕೆ ನೀಡಿದ್ದಾರೆ. ಐತಿಹಾಸಿಕ ಜಾಗವನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

  • ವಿನೂತನವಾಗಿ ಹೊಸ ವರ್ಷಕ್ಕೆ ಸ್ವಾಗತ ಕೋರಿದ ಶಾಲಾ ಮಕ್ಕಳು

    ವಿನೂತನವಾಗಿ ಹೊಸ ವರ್ಷಕ್ಕೆ ಸ್ವಾಗತ ಕೋರಿದ ಶಾಲಾ ಮಕ್ಕಳು

    ವಿಜಯಪುರ: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಜಿಲ್ಲೆಯ ನಿಡಗುಂದಿ ಪಟ್ಟಣದ ಶಾಲಾ ಮಕ್ಕಳು ಹೊಸ ವರ್ಷಾಚರಣೆಯನು ವಿಭಿನ್ನವಾಗಿ ಸ್ವಾಗತಿಸಿದ್ದಾರೆ.

    ನಿಡಗುಂದಿ ಪಟ್ಟಣದ ಬನಶಂಕರಿ ಪಬ್ಲಿಕ್ ಸ್ಕೂಲ್‍ನಲ್ಲಿ 2020 ಸುಸ್ವಾಗತ ಎಂಬ ಮಾದರಿಯಲ್ಲಿ ಶಾಲಾ ಮಕ್ಕಳು ಕುಳಿತು ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದಾರೆ.

    ಶಾಲೆಯ ಒಟ್ಟು 280 ವಿದ್ಯಾರ್ಥಿಗಳು ಸೇರಿ ಈ ವಿನೂತನ ಮಾದರಿಯಲ್ಲಿ ನೃತ್ಯಪ್ರದರ್ಶನ ಮಾಡಿ ಹೊಸ ವರ್ಷಾಚರಣೆ ಮಾಡಿದರು. ಶಾಲಾ ಮಕ್ಕಳು 2ನೇ ದಿನಗಳಲ್ಲಿ ತರಬೇತಿ ಪಡೆದು ಪ್ರದರ್ಶನ ನೀಡಿದ್ದು ವಿಶೇಷವಾಗಿದೆ. ಇಂದು ಬೆಳಗ್ಗೆ ಶಾಲೆಯಲ್ಲಿ ವಿಶೇಷ ವಿನ್ಯಾಸ ರೂಪಿಸಿದ ಮಕ್ಕಳು ಶಾಲಾ ಆಡಳಿತ ಮಂಡಳಿಯ ಗಮನ ಸೆಳೆದರು. ಇನ್ನು ಮಕ್ಕಳ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿದ ಮಕ್ಕಳು

    ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿದ ಮಕ್ಕಳು

    -2200 ಹಣ, ಪಾನ್, ಎಟಿಎಂ ಕಾರ್ಡ್ ಇತ್ತು

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ದಾರಿಯಲ್ಲಿ ಸಿಕ್ಕ ಪರ್ಸ್ ಅನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ.

    6ನೇ ತರಗತಿಯ ಭರತ್, ಶರತ್, 5ನೇ ತರಗತಿಯ ಚೈತ್ರಾ ಮತ್ತು 3ನೇ ತರಗತಿಯ ಭೂಮಿಕಾ ಒಂದೇ ಕುಟುಂಬದ ನಾಲ್ವರು ಮಕ್ಕಳು ಶನಿವಾರ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಆಗ ಶಿವಪುರ ರಸ್ತೆಯ ಸೂರ್ಯ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿತ್ತು. ಅದರಲ್ಲಿ 2200 ರೂಪಾಯಿ ಹಣ, ಪಾನ್ ಹಾಗೂ ಎಟಿಎಂ ಕಾರ್ಡ್ ಇದ್ದವು.

    ಮಕ್ಕಳು ಸಿಕ್ಕ ಪರ್ಸ್ ಅನ್ನು ಸೋಮವಾರ ಶಾಲೆಗೆ ಬಂದು ಶಿಕ್ಷಕ ಸುಖೇಶ್ ಅವರಿಗೆ ಕೊಟ್ಟಿದ್ದಾರೆ. ಶಿಕ್ಷಕರು ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಮಕ್ಕಳ ಪ್ರಾಮಾಣಿಕತೆಯನ್ನ ಕೊಂಡಾಡಿದ್ದಾರೆ. ಮಕ್ಕಳು ಕೊಟ್ಟ ಪರ್ಸ್ ಅನ್ನು ಶಿಕ್ಷಕ ಸುಖೇಶ್, ಸಂದೀಪ್ ಅವರನ್ನು ಸಂಪರ್ಕಿಸಿ ಮಕ್ಕಳ ಕೈಯಿಂದಲೇ ಅವರಿಗೆ  ಅವರ ಪರ್ಸ್  ಹಿಂದಿರುಗಿಸಿದ್ದಾರೆ. ಮಕ್ಕಳ ಪ್ರಾಮಾಣಿಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಶೈಕ್ಷಣಿಕ ವರ್ಷ ಮುಗಿದ್ರೂ ಆಗಿಲ್ಲ ವಿತರಣೆ – ವಿಜಯಪುರದಲ್ಲಿ ಸೈಕಲ್ ಪಂಚರ್!

    ಶೈಕ್ಷಣಿಕ ವರ್ಷ ಮುಗಿದ್ರೂ ಆಗಿಲ್ಲ ವಿತರಣೆ – ವಿಜಯಪುರದಲ್ಲಿ ಸೈಕಲ್ ಪಂಚರ್!

    ವಿಜಯಪುರ: ಬಡ ಹೈಸ್ಕೂಲ್ ಮಕ್ಕಳಿಗೆ ಪ್ರತಿವರ್ಷ ಜೂನ್-ಜುಲೈನಲ್ಲೇ ಸೈಕಲ್ ಕೊಡಬೇಕಿದ್ರೂ ಸಹ ಪ್ರಸಕ್ತ ಶೈಕ್ಷಣಿಕ ವರ್ಷವೇ ಮುಗಿಯುತ್ತಿದ್ರೂ ಇದೂವರೆಗೂ ವಿತರಣೆಯೇ ಆಗಿಲ್ಲ.

    2018ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಬರೋಬ್ಬರಿ 27,607 ಸೈಕಲ್‍ಗಳನ್ನು ಸರ್ಕಾರ ಮಂಜೂರು ಮಾಡಿದೆ. ಅದರಂತೆ ಜಲ್ಲೆಯಾದ್ಯಂತ ಆಯಾ ವಿಭಾಗಗಳಲ್ಲಿ ಅಷ್ಟೂ ಸೈಕಲ್‍ಗಳು ಧೂಳು ತಿನ್ನುತ್ತಾ ಬಿದ್ದಿವೆ. ಸೈಕಲ್‍ಗಳ ಚಕ್ರದಲ್ಲಿ ಗಾಳಿ ಹೋಗಿದ್ದು, ಟ್ಯೂಬ್ ಹಾಗೂ ಟೈರ್ ಸತ್ವ ಕಳೆದುಕೊಂಡಿವೆ. ಇಂತಹ ಸೈಕಲ್ ಪಡೆದ ಕೆಲ ವಿದ್ಯಾರ್ಥಿಗಳು ರಿಪೇರಿಗೆ ನೂರಾರು ರೂಪಾಯಿ ಖರ್ಚು ಮಾಡುವಂತಾಗಿದೆ ಎಂದು ಪೋಷಕರಾದ ಸಂತೋಷ್ ಆರೋಪಿಸಿದ್ದಾರೆ.

    ತಿಂಗಳ ಹಿಂದೆ ಸೈಕಲ್ ಬಂದಾಗ ಕೆಲವು ಕಡೆ ಅಲ್ಪ ಪ್ರಮಾಣದಲ್ಲಿ ಸೈಕಲ್ ವಿತರಣೆ ಮಾಡಲಾಗಿದೆ. ಹೀಗೆ ಕೊಟ್ಟ ಬಹುತೇಕ ಸೈಕಲ್‍ಗಳಲ್ಲಿ ಸೀಟ್, ಬ್ರೇಕ್, ಲಾಕರ್, ಸ್ಟ್ಯಾಂಡ್, ಯಾವುದೂ ಸರಿ ಇಲ್ಲ. ಇಂತಹ ಕಳಪೆ ಗುಣಮಟ್ಟದ ಸೈಕಲ್ ಪಡೆದ ಮಕ್ಕಳು ಗೋಳಾಡ್ತಿದ್ದಾರೆ. ಇದೀಗ ಸೈಕಲ್ ವಿತರಣೆಗೆ ಗುತ್ತಿಗೆ ಪಡೆದ ಗುತ್ತಿಗೆದಾರರು ಇಂತಹದ್ದೇ ಸೈಕಲ್‍ಗಳ ವಿತರಣೆಗೆ ಮುಂದಾಗಿರುವಾಗಿ ವಿತರಕ ಪರಮಾನಂದ ಸಾತಿಹಾಳ ಹೇಳಿದ್ದಾರೆ.

    ಒಟ್ಟಿನಲ್ಲಿ ಸೈಕಲ್‍ಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಎಲ್ಲಾ ಪರಿಶೀಲನೆ ಮುಗಿದಿದ್ದು ಇನ್ನೊಂದು ವಾರದಲ್ಲಿ ಸೈಕಲ್ ವಿತರಣೆ ಮಾಡ್ತೀವಿ ಅಂತಿದ್ದಾರೆ. ಇನ್ನೊಂದು ತಿಂಗಳಲ್ಲಿ ಪರೀಕ್ಷೆ ಮುಗಿದು ವಿದ್ಯಾರ್ಥಿಗಳಿಗೆ ರಜೆ ಬರೋ ಹೊತ್ತಲ್ಲಿ ಸೈಕಲ್ ನೀಡಿದ್ರೆ ಏನ್ ಪ್ರಯೋಜನ ಎಂದು ವಿದ್ಯಾರ್ಥಿಗಳ ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವಿದ್ಯಾರ್ಥಿಯ ಹರಿದಿರುವ ಸಮವಸ್ತ್ರ ನೋಡಿ ಸಚಿವರು ಅಸಮಾಧಾನ!

    ವಿದ್ಯಾರ್ಥಿಯ ಹರಿದಿರುವ ಸಮವಸ್ತ್ರ ನೋಡಿ ಸಚಿವರು ಅಸಮಾಧಾನ!

    ತುಮಕೂರು: ಬಿಸಿಎಂ ವಸತಿ ಶಾಲೆಯ ಮಕ್ಕಳು ಹರಿದಿರುವ ಸಮವಸ್ತ್ರ ಹಾಕಿರುವುದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಪುಟ್ಟರಂಗ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ಸಂಜೆ ಕುಣಿಗಲ್ ಪಟ್ಟಣದಲ್ಲಿರುವ ಬಿಸಿಎಂ ವಸತಿ ಶಾಲೆಗೆ ಸಚಿವ ಪುಟ್ಟರಂಗಶೆಟ್ಟಿ ಭೇಟಿ ನೀಡಿ, ಶಾಲೆಯಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಯೋರ್ವ ಹರಿದ ಬಟ್ಟೆ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು, ಮಕ್ಕಳಿಗೆ ಹರಿದ ಬಟ್ಟೆ ಯಾಕೆ ನೀಡಿದ್ದೀರಿ ಅಂತ ಶಾಲಾ ಉಸ್ತುವಾರಿಯನ್ನು ಪ್ರಶ್ನೆ ಮಾಡಿದ್ದಾರೆ.

    ಇಲಾಖೆಯಿಂದ ಸಮವಸ್ತ್ರ ಸರಬರಾಜಾಗಿಲ್ಲದ ಕಾರಣ ಹರಿದ ಬಟ್ಟೆ ಹಾಕಿದ್ದಾನೆ ಎಂದು ಸಮಜಾಯಿಷಿ ನೀಡಿದರು. ಕೂಡಲೇ ಸಮವಸ್ತ್ರ ಖರೀದಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು. ಇದೇ ವೇಳೆ ಶಾಲೆಯಲ್ಲಿ ಗ್ರಂಥಾಲಯ ಹಾಗೂ ಕಂಪ್ಯೂಟರ್ ಇಲ್ಲದಿದ್ದಕ್ಕೆ ಕೂಡ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇಲಾಖೆಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಚಿವರಿಗೆ ಶಾಸಕ ಡಾ. ರಂಗನಾಥ್ ಸಾಥ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೋಷಕರೇ ಎಚ್ಚರ.. ಮನೆಯಲ್ಲೇ ಮಕ್ಕಳು ಮಾಡ್ತಾರೆ ಕಳ್ಳತನ!

    ಪೋಷಕರೇ ಎಚ್ಚರ.. ಮನೆಯಲ್ಲೇ ಮಕ್ಕಳು ಮಾಡ್ತಾರೆ ಕಳ್ಳತನ!

    – ಬಳ್ಳಾರಿಯಲ್ಲಿ ಡೇಂಜರಸ್ ಗ್ಯಾಂಗ್ ಅರೆಸ್ಟ್

    ಬಳ್ಳಾರಿ: ನಿಮ್ಮ ಮಕ್ಕಳು ನಿಮ್ಮ ಮನೆಯಲ್ಲೇ ಕಳ್ಳತನ ಮಾಡ್ತಿದ್ದಾರೆ ಅಂದ್ರೆ ಯಾವ ಪೋಷಕರೂ ಕೂಡ ನಂಬಲ್ಲ. ಆದ್ರೆ ಬಳ್ಳಾರಿಯಲ್ಲಿ ಶಾಲಾ ಮಕ್ಕಳು ಕಳ್ಳತನಕ್ಕೆ ಇಳಿದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹೌದು. ಬಳ್ಳಾರಿಯ ಮಿಲ್ಲರ್‍ಪೇಟೆಯಲ್ಲಿ ಡೇಂಜರ್ ಗ್ಯಾಂಗ್ ಒಂದು ಹುಟ್ಟಿಕೊಂಡಿದೆ. ಈ ಗ್ಯಾಂಗ್ ಶಾಲಾ ಮಕ್ಕಳನ್ನ ಬೆದರಿಸಿ ಕಳ್ಳತನ ಮಾಡಿಸ್ತಾ ಇರೋ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳ ಜೊತೆ ಮೊದ ಮೊದಲು ಸ್ನೇಹ ಬೆಳೆಸೋ ಈ ಗ್ಯಾಂಗ್ ನ ಸದಸ್ಯರು ನಂತರ ಆ ಮಕ್ಕಳನ್ನ ಬೆದರಿಸ್ತಾರೆ. ಕೊಲೆ ಮಾಡೋ ಬೆದರಿಕೆ ಹಾಕಿ ಮನೆಯಲ್ಲಿ ಕಳ್ಳತನ ಮಾಡಿಸ್ತಾರೆ.


    ಯಾವ ರೀತಿ ಮಕ್ಕಳನ್ನು ಬಳಸಿಕೊಳ್ಳುತ್ತಾರೆ..?
    ಮೊದಲ ಶಾಲಾ ಮಕ್ಕಳ ಜೊತೆ ಸ್ನೇಹ ಬೆಳೆಸುತ್ತಾರೆ. ನಂತರ ಮನೆಯಲ್ಲಿ ಕದಿಯಲು ಹೇಳುತ್ತಾರೆ. ಕದಿಯಲು ಒಪ್ಪದಿದ್ರೆ ನೀನು ಗಾಂಜಾ ಸೇದುತ್ತಿಯಾ ಅಂತ ಮನೆಯಲ್ಲಿ ಹೇಳುತ್ತೇನೆ ಎಂದು ಬೆದರಿಕೆ ಹಾಕಲಾಗುತ್ತದೆ. ಅಲ್ಲದೇ ಚಾಕು ತೋರಿಸಿ ಕೊಲೆ ಮಾಡುವುದಾಗಿ ಭಯ ಹುಟ್ಟಿಸುತ್ತಾರೆ. ಮಕ್ಕಳು ಹಣ ಇದೆ ಎಂದು ಮನೆ ಬಳಿ ವಿಷಲ್ ಹಾಕ್ತಾರೆ. ನಂತರ ಮನೆಯ ಬಳಿ ಗ್ಯಾಂಗ್ ಬಂದು ಹಣ ಪಡೆದು ಹೋಗುತ್ತಾರೆ.

    ಬಳ್ಳಾರಿಯ ಖಾಸಗಿ ಶಾಲೆಯ 30ಕ್ಕೂ ಹೆಚ್ಚು ಮಕ್ಕಳು ಈ ಗ್ಯಾಂಗ್ ಸೆಳೆತಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದ್ದಾರೆ. ಲಡ್ಡುಬಾ ಅಲಿಯಾಸ್ ಮುನ್ನಾಭಾಯಿ ಹಾಗೂ ಮಾಲ್ ಗಡಿ ಎನ್ನುವ ರೌಡಿಗಳೇ ಈ ಗ್ಯಾಂಗ್‍ನ ಪ್ರಮುಖರು. ಇವರೇ ಮಕ್ಕಳ ಜೊತೆ ಸ್ನೇಹ ಬೆಳಸಿ, ಬೆದರಿಸಿ ಹಣ ವಸೂಲಿ ಮಾಡುತ್ತಾರೆ. ಈ ಡೇಂಜರ್ ಗ್ಯಾಂಗನ ದುಷ್ಕೃತ್ಯಕ್ಕೆ ಬೆದರಿರೋ ಪೋಷಕರು ಇದೀಗ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಇದೂವರೆಗೂ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಮಕ್ಕಳ ಕಳ್ಳತನದ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದ ಪೋಷಕರು, ಇದೀಗ ತಮ್ಮ ಮಕ್ಕಳೇ ಕಳ್ಳತನ ಮಾಡ್ತಾ ಇರೋದನ್ನ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಡೇಂಜರ್ ಗ್ಯಾಂಗ್‍ನ ಲಡ್ಡುಬಾ ಅಲಿಯಾಸ್ ಮುನ್ನಾಭಾಯಿ ಹಾಗೂ ಮಾಲ್ ಗಡಿ ಎನ್ನುವ ರೌಡಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವ ಬಳ್ಳಾರಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆದ್ರೆ ಈ ರೌಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡರೇ ಮಾತ್ರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಆ ನಿಟ್ಟಿನಲ್ಲಿ ಬಳ್ಳಾರಿ ಪೊಲೀಸರು ಕಾರ್ಯನಿರ್ವಹಿಸಲಿ ಅನ್ನೋದೇ ನೊಂದ ಪೋಷಕರ ಮನವಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಬೆಳಕು ಇಂಪ್ಯಾಕ್ಟ್: ಜೀವಭಯದಲ್ಲಿ ನಡೆದಾಡ್ತಿದ್ದ ಗ್ರಾಮಸ್ಥರಿಗೆ ಸಿಕ್ಕಿದೆ ಸುಭದ್ರ ಕಾಂಕ್ರೀಟ್ ಸೇತುವೆ

    ಬೆಳಕು ಇಂಪ್ಯಾಕ್ಟ್: ಜೀವಭಯದಲ್ಲಿ ನಡೆದಾಡ್ತಿದ್ದ ಗ್ರಾಮಸ್ಥರಿಗೆ ಸಿಕ್ಕಿದೆ ಸುಭದ್ರ ಕಾಂಕ್ರೀಟ್ ಸೇತುವೆ

    ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮರಡಿಹಳ್ಳಿಯ ಜನರು ಶಾಲಾ ಮಕ್ಕಳು, ಪ್ರಾಣ ಪಾಣಕ್ಕಿಟ್ಟು, ಸುಸಜ್ಜಿತ ಅಲ್ಲ- ಸುರಕ್ಷಿತವೂ ಅಲ್ಲದ ಜೀವ ಭಯದಲ್ಲೇ ಮೇಲೆ ನಡೆಯುತ್ತಿದ್ದರು. ಸ್ಥಳೀಯರು ತಮ್ಮದೇ ಆದ ಕೌಶಲ್ಯ ಸಾಮಾಗ್ರಿಗಳನ್ನು ಬಳಸಿ ಸೇತುವೆ ನಿರ್ಮಿಸಿಕೊಂಡಿದ್ದಾರೆ.

    ಹೊದಲ-ಹರಳಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಮರಡಿಹಳ್ಳದ ಈ ಸೇತುವೆ ಕೂಲಿ ಕೆಲಸ ಮಾಡೋರು, ಪಕ್ಕದ ಊರಿಗೆ, ಶಾಲೆಗೆ ಹೋಗುವುದು ಇದೇ ಸೇತುವೆ ಮೇಲೆಯೇ ಅಂಗೈಯಲ್ಲಿ ಜೀವವನ್ನ ಹಿಡಿದುಕೊಂಡು ಭಯದಿಂದಲೇ ದಾಟುತ್ತಿದ್ದರು.

    ಇಲ್ಲಿಗೆ ಸುಭದ್ರ ಸಂಕ ಅಥವಾ ಪುಟ್ಟ ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಬೆಳಕು ಕಾರ್ಯಕ್ರಮದಲ್ಲಿ ತಮ್ಮ ಆಳಲನ್ನು ತೊಡಿಕೊಂಡಿದ್ದರು. ಈ ವೇಳೆ ಪಬ್ಲಿಕ್ ಟಿವಿ ಕೂಡ ಸಮಸ್ಯೆ ಬಗೆಹರಿಸುವುದಾಗಿ ಹೇಳಿ 2016ರ ಜುಲೈ 23ರಂದು ಕಾರ್ಯಕ್ರಮ ಪ್ರಸಾರವಾಗಿತ್ತು.

    ಸೇತುವೆಯ ಪರಿಸ್ಥಿತಿ ಹಾಗೂ ಮಕ್ಕಳು, ಗ್ರಾಮಸ್ಥರು ಹರಸಾಹಸ ಪಟ್ಟು, ಜೀವಭಯದಲ್ಲಿ ಅಪಾಯಕಾರಿ ಕಾಲು ಸಂಕ ದಾಟುತ್ತಿರುವ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ತಕ್ಷಣವೇ ಇಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ಯಾವುದೇ ಅಡೆತಡೆ ಇಲ್ಲದೆ ಅನುದಾನ ದೊರಕಿ ಈಗ ಸುಸಜ್ಜಿತ ಸೇತುವೆ ನಿರ್ಮಾಣವಾಗಿದೆ ಅಂತ ಗ್ರಾಪಂ ಸದಸ್ಯ ವಿಶ್ವನಾಥ್ ಪ್ರಭು ತಿಳಿಸಿದ್ದಾರೆ.

    ಇಲ್ಲಿನ ಶಾಲಾ ಮಕ್ಕಳು ಗ್ರಾಮಸ್ಥರು ಕೃಷಿ ಕಾರ್ಮಿಕರು ನಿರ್ಭಯವಾಗಿ ಸೇತುವೆ ದಾಟುತ್ತಿದ್ದಾರೆ. ಈ ಹಿಂದೆ ಪ್ರಾಣದ ಆತಂಕ ನಿವಾರಣೆಯಾಗಿದ್ದು, ಸೇತುವೆ ಸಂಕಟದ ಬಗ್ಗೆ ಎರಡು ವರ್ಷಗಳ ಹಿಂದೆಯೇ ಬೆಳಕು ಚೆಲ್ಲಿದ್ದು ಈಗ ಸಾರ್ವಜನಿಕ ಮುಕ್ತವಾಗಿರೋದಕ್ಕೆ ಇಲ್ಲಿನ ಗ್ರಾಮಸ್ಥರು ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

    ಹಲವು ವರ್ಷಗಳಿಂದ ಪ್ರಾಣ ಪಣಕ್ಕಿಟ್ಟು ಸೇತುವೆ ದಾಟುತ್ತಿದ್ದ ಗ್ರಾಮಸ್ಥರಿಗೆ, ಸುಭದ್ರ ಕಾಂಕ್ರೀಟ್ ಸೇತುವೆ ನಿರ್ಮಾಣಗೊಂಡಿರೋದು ನಿಜಕ್ಕೂ ಸಂತಸದ ಬೆಳಕು ಮೂಡಿದೆ ಎಂಬುದು ಶ್ಲಾಘನೀಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=LJ79rtexx6k