Tag: school bus

  • ಬಿಎಂಟಿಸಿಗೆ ಶಾಲಾ ವಾಹನ ಡಿಕ್ಕಿ -ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಕ್ಕಳು ಪಾರು

    ಬಿಎಂಟಿಸಿಗೆ ಶಾಲಾ ವಾಹನ ಡಿಕ್ಕಿ -ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಕ್ಕಳು ಪಾರು

    ಬೆಂಗಳೂರು: ಶಾಲಾ ವಾಹನವೊಂದು ಬಿಎಂಟಿಸಿ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಇಂದು ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ ಕಾಲೇಜು ಬಳಿ ನಡೆದಿದೆ.

    ಆವಲಹಳ್ಳಿಯ ಪ್ರೆಸಿಡೆನ್ಸಿ ಶಾಲೆಯ ಬಸ್, ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿಗೆ ಗುದ್ದಿದೆ. ಘಟನೆಯಿಂದಾಗಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಘಟನೆ ಸಂಭವಿಸಿದೆ ವೇಳೆ ಬಸ್ಸಿನಲ್ಲಿ ಒಂದಿಬ್ಬರು ವಿದ್ಯಾರ್ಥಿಗಳು ಮಾತ್ರ ಇದ್ದು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲೆಂದು ಬಸ್ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಘಟನೆಯಿಂದ ಬಸ್ ಚಾಲಕ ಮಂಜುನಾಥ್ ಕಾಲು ಮುರಿತಕ್ಕೊಳಗಾಗಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳು ಚಾಲಕನನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳಂಬೆಳಗ್ಗೆ ಕುಡಿದು ಶಾಲಾ ವಾಹನ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

    ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

    ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

    ಲಕ್ನೋ: ಮಳೆ ನೀರು ತುಂಬಿದ್ದ ರೈಲ್ವೇ ಸೇತುವೆಯ ಕೆಳ ರಸ್ತೆ (ಅಂಡರ್ ಪಾಸ್)ನಲ್ಲಿ ಶಾಲೆಯೊಂದರ ಬಸ್ ಸಿಲುಕಿ, 21 ವಿದ್ಯಾರ್ಥಿಗಳು ಅದೃಷ್ಟವಶಾತ್ ಬದುಕಿಳಿದ ಘಟನೆ ಉತ್ತರ ಪ್ರದೇಶದ ಖಾರ್ಕೊಡ್‍ನಲ್ಲಿ ನಡೆದಿದೆ.

    ಕಳೆದೆರಡು ದಿನಗಳಿಂದ ಭಾರೀ ಮಳೆಯಿಂದಾಗಿ ಕೇಳ ಸೇತುವೆ ಕೆಸರು ಮಿಶ್ರಿತ ನೀರಿನಿಂದ ತುಂಬಿತ್ತು. ಶುಕ್ರವಾರ ಸಂಜೆ ಮಕ್ಕಳನ್ನು ಮನೆಗೆ ಬಿಡಲು ಶಾಲಾ ಬಸ್ ಹೋಗಿತ್ತು. ಚಾಂದ್‍ಸರ ಸಮೀಪ ಸೇತುವೆಯ ಕೆಳಗೆ ಮಳೆ ನೀರು ತುಂಬಿರುವುದನ್ನು ಅರಿತ ಚಾಲಕ ಬಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಅಷ್ಟೋತ್ತಿಗಾಗಲೇ ಸೈಲೆನ್ಸರ್ ಮತ್ತು ಎಂಜಿನ್‍ಗೆ ನೀರು ನುಗ್ಗಿತ್ತು.

    ನೀರಿನ ಮಟ್ಟ ಹೆಚ್ಚಾಗುತ್ತಿದಂತೆ ಬಸ್ಸಿನಲ್ಲಿದ್ದ ಮಕ್ಕಳು ಅಳಲು ಪ್ರಾರಂಭಿಸಿದರು. ತಕ್ಷಣವೇ ಜಾಗೃತರಾದ ಚಾಲಕ ಮತ್ತು ನಿರ್ವಾಹಕ ಮಕ್ಕಳನ್ನು ವಾಹನದಿಂದ ಹೊರಗಡೆ ತರಲು ಯತ್ನಿಸಿದರು. ಕೇವಲ ಇಬ್ಬರಿಂದ 21 ಮಕ್ಕಳನ್ನು ಸುರಕ್ಷಿತ ಜಾಗಕ್ಕೆ ಸಾಗಿಸುವುದು ಕಷ್ಟವಾಗಿತ್ತು.

    ಮಕ್ಕಳು ಅಳುತ್ತಿರುವ ಹಾಗೂ ಚೀರುತ್ತಿರುವುದನ್ನು ಕೇಳಿದ ಚಾಂದ್‍ಸರ ಗ್ರಾಮಸ್ಥರು ಸ್ಥಳಕ್ಕೆ ಬಂದು, ವಾಹನ ಮುಳುಗುತ್ತಿರುವುದನ್ನು ನೋಡಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಜೊತೆ ಸೇರಿ ಬಸ್ ಕಿಟಕಿ, ಗಾಜು ಒಡೆದು ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೊನೆಗೆ ಬಸ್ ಸಂಪೂರ್ಣವಾಗಿ ಮುಳುಗಲು ಆರಂಭಿಸಿತ್ತು. ಆದರೆ ಬಸ್ಸಿನಲ್ಲಿ ಇನ್ನೂ ಒಂದು ಮಗು ಇದ್ದಿದ್ದನ್ನು ಅರಿತ ವ್ಯಕ್ತಿಯೊಬ್ಬರು ಧೈರ್ಯದಿಂದ ನೀರಿನಲ್ಲಿ ನುಗ್ಗಿ, ಕಿಟಕಿಯ ಮೂಲಕ ಮಗುವನ್ನು ಹೊರತರುವ ಮೂಲಕ ಎಲ್ಲ ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

  • ಸ್ಕೂಲ್ ಬಸ್ ಹರಿದು ವಿದ್ಯಾರ್ಥಿನಿ ಸಾವು!

    ಸ್ಕೂಲ್ ಬಸ್ ಹರಿದು ವಿದ್ಯಾರ್ಥಿನಿ ಸಾವು!

    ತುಮಕೂರು: ಸ್ಕೂಲ್ ಬಸ್ ಹರಿದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ತುಮಕೂರಿನ ಶಿರಾದಲ್ಲಿ ಪಟ್ಟಣದಲ್ಲಿ ನಡೆದಿದೆ.

    ಜಾಹ್ನವಿ(4) ಮೃತ ವಿದ್ಯಾರ್ಥಿನಿ. ಜಾಹ್ನವಿ ಕದಂಬ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿ. ಇದೇ ಶಾಲೆಯ ಬಸ್ ಹಿಂಬದಿಯಿಂದ ಬಂದು ಜಾಹ್ನವಿ ಮೇಲೆ ಹರಿದಿದೆ.

    ಜಾಹ್ನವಿ ತರಗತಿ ಮುಗಿಸಿ ವಾಪಸ್ ಹೋಗುತಿದ್ದಾಗ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಮೃತ ಬಾಲಕಿ ಜಾಹ್ನವಿ ಶಿರಾ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೇದೆ ಭಕ್ತಕುಮಾರ್ ಅವರ ಪುತ್ರಿ ಎನ್ನಲಾಗಿದೆ.

    ಸದ್ಯ ಈ ಬಗ್ಗೆ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಂತಿದ್ದ ಶಾಲಾ ಬಸ್‍ಗೆ ಖಾಸಗಿ ಬಸ್ ಗುದ್ದಿ ವಿದ್ಯಾರ್ಥಿಗಳು ಸೇರಿದಂತೆ 7 ಮಂದಿ ಸಾವು!

    ನಿಂತಿದ್ದ ಶಾಲಾ ಬಸ್‍ಗೆ ಖಾಸಗಿ ಬಸ್ ಗುದ್ದಿ ವಿದ್ಯಾರ್ಥಿಗಳು ಸೇರಿದಂತೆ 7 ಮಂದಿ ಸಾವು!

    ಲಕ್ನೋ: ಹೆದ್ದಾರಿಯಲ್ಲಿ ನಿಂತಿದ್ದ ಶಾಲಾ ವಾಹನಕ್ಕೆ ಖಾಸಗಿ ಬಸ್ ಗುದ್ದಿದ ಪರಿಣಾಮ ಸ್ಥಳದಲ್ಲೇ 6 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ತಿರ್ವಾ ಗ್ರಾಮದಲ್ಲಿ ಸಂಭವಿಸಿದೆ.

    ಕನ್ನೌಜ್ ಜಿಲ್ಲೆಯ ತಿರ್ವಾ ಗ್ರಾಮದ ಲಕ್ನೋ-ಆಗ್ರಾ ಹೆದ್ದಾರಿಯ ಬಳಿ ಇಂದು ಬೆಳಗಿನ ಜಾವ 4 ಗಂಟೆಗೆ ಸಂಭವಿಸಿದ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಕಬೀರನಗರ ಜಿಲ್ಲೆಯ ಪ್ರಭಾ ದೇವಿ ವಿದ್ಯಾಲಯಕ್ಕೆ ಸೇರಿದವರೆಂದು ತಿಳಿದು ಬಂದಿದ್ದು. ಇವರು ಕಬೀರನಗರದಿಂದ ಹರಿದ್ವಾರಕ್ಕೆ 2 ಪ್ರತ್ಯೇಕ ಬಸ್‍ಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

    ಶಾಲಾ ಬಸ್‍ನ ಡೀಸೆಲ್ ಖಾಲಿಯಾಗಿದ್ದರಿಂದ ಇನ್ನೊಂದು ಬಸ್‍ನ ಮೂಲಕ ಡೀಸೆಲ್ ತುಂಬಿಸಿಕೊಳ್ಳುತ್ತಿದ್ದರು. ಅದೇ ಸಮಯ ವೇಗವಾಗಿ ಬಂದ ಇನ್ನೊಂದು ಖಾಸಗಿ ಬಸ್ ನಿಂತಿದ್ದ ಶಾಲಾ ಬಸ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಾಲಾ ಬಸ್‍ನಲ್ಲಿದ್ದ 7 ಮಂದಿ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತರಲ್ಲಿ 6 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕ ಕೂಡ ಸೇರಿದ್ದಾರೆ. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಉತ್ರರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡಿದ್ದಾರೆ. ಘಟನೆ ಕುರಿತು ದೂರು ದಾಖಲಿಸಿಕೊಂಡು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

  • ಶಾಲಾ ಬಸ್, ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಾಗಿ ಜಖಂಗೊಂಡ್ರು ಪ್ರಯಾಣಿಕರೆಲ್ಲರೂ ಪಾರು!

    ಶಾಲಾ ಬಸ್, ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಾಗಿ ಜಖಂಗೊಂಡ್ರು ಪ್ರಯಾಣಿಕರೆಲ್ಲರೂ ಪಾರು!

    ಬೆಂಗಳೂರು: ಶಾಲಾ ಬಸ್ ಮತ್ತು ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದ್ದಂತಾಗಿದೆ.

    ಈ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ರಸ್ತೆಯ ವಿ ಕಲ್ಲಹಳ್ಳಿ ಬಳಿ ಇಂದು ಬೆಳಗ್ಗೆ ನಡೆದಿದೆ. ಶಾಲಾ ಬಸ್ ನಲ್ಲಿ ಸುಮಾರು ಹತ್ತು ಜನ ವಿದ್ಯಾರ್ಥಿಗಳು ಇದ್ದರು. ಟಾಟಾ ಸುಮೋದಲ್ಲಿ ನಾಲ್ವರು ಇದ್ದರು ಎನ್ನಲಾಗಿದೆ.

    ಶಾಲಾ ಬಸ್ ಮತ್ತು ಟಾಟಾ ಸುಮೋ ಸರ್ಜಾಪುರ ರಸ್ತೆಯ ವಿ ಕಲ್ಲಹಳ್ಳಿ ಬಳಿ ಬರುತ್ತಿದ್ದಂತೆಯೇ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ. ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯವಿಲ್ಲ ಸಂಭವಿಸಿಲ್ಲ. ಎಲ್ಲರೂ ಭಾರೀ ಅನಾಹುತದಿಂದ ಪಾರಾಗಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಅಪಘಾತದ ರಭಸಕ್ಕೆ ಶಾಲಾ ಬಸ್ ಮತ್ತು ಟಾಟಾ ಸುಮೋ ಎರಡು ವಾಹನಗಳ ಮುಂಭಾಗ ಜಖಂ ಆಗಿವೆ.

  • ಇಯರ್ ಫೋನ್ ಹಾಕಿ ಡ್ರೈವಿಂಗ್: 13 ಶಾಲಾ ಮಕ್ಕಳ ಬಲಿ ಪಡೆದ ಡ್ರೈವರ್

    ಇಯರ್ ಫೋನ್ ಹಾಕಿ ಡ್ರೈವಿಂಗ್: 13 ಶಾಲಾ ಮಕ್ಕಳ ಬಲಿ ಪಡೆದ ಡ್ರೈವರ್

    ಲಕ್ನೋ: ಉತ್ತರ ಪ್ರದೇಶದ ಖುಷಿ ನಗರದಲ್ಲಿ ನಡೆದ ಶಾಲಾ ಬಸ್ ಹಾಗೂ ರೈಲಿನ ನಡುವಿನ ಅಪಘಾತಕ್ಕೆ ಶಾಲಾ ಬಸ್ ಚಾಲಕ ಇಯರ್ ಫೋನ್ ಧರಿಸಿದ್ದೆ ಕಾರಣ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಅಪಘಾತದಲ್ಲಿ ಇದುವರೆಗೂ 13 ಜನ ಶಾಲಾ ಮಕ್ಕಳು ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ಶಾಲಾ ವಾಹನಕ್ಕೆ ಥವೆ ಕಪ್ತಗಂಜ್ ನಡುವಿನ ಪ್ಯಾಸೆಂಜರ್ ರೈಲು (55075) ಡಿಕ್ಕಿ ಹೊಡೆದಿದ್ದು, ಮಾನವ ರಹಿತ ರೈಲ್ವೇ ಹಳಿ ಕ್ರಾಸಿಂಗ್ ವೇಳೆ ದುರ್ಘಟನೆ ಸಂಭವಿಸಿದೆ.

    ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಘಟನೆಯಲ್ಲಿ ಗಾಯಗೊಂಡ ಅವರನ್ನು ಮಕ್ಕಳ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯ ನೀಡುವಂತೆ ಆದೇಶಿಸಿದರು. ಅಲ್ಲದೇ ಸರ್ಕಾರದ ವತಿಯಿಂದ ಘಟನೆಯಲ್ಲಿ ಮೃತಪಟ್ಟ ಶಾಲಾ ಮಕ್ಕಳ ಕುಟುಂಬಗಳಿಗೆ ಸಾಂತ್ವನ ಹೇಳಿ 2 ಲಕ್ಷ ರೂ. ಪರಿಹಾರ ಘೋಷಿಸಿದರು. ಅಲ್ಲದೇ ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೇ ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

    ಘಟನೆ ಕುರಿತು ಸಂಪೂರ್ಣ ತನಿಖೆಯನ್ನು ನಡೆಸಲಾಗುವುದು ಅಲ್ಲದೇ ಶಾಲಾ ಬಸ್ ಚಾಲಕನ ವಯಸ್ಸಿನ ಕುರಿತು ಸಹ ಖಚಿತ ಮಾಹಿತಿ ಇಲ್ಲ. ಘಟನೆಗೆ ಕಾರಣರಾದ ಎಲ್ಲರನ್ನು ಕಠಿಣ ಶಿಕ್ಷೆ ಒಳಪಡಿಸಲಾಗುವುದು. ಈ ಮೂಲಕ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

    ಘಟನೆ ನಡೆದ ವೇಳೆ ಶಾಲಾ ವಾಹನದಲ್ಲಿ 25 ಮಂದಿ ಮಕ್ಕಳು ಇದ್ದು, ಎಲ್ಲರು 10 ವರ್ಷಕ್ಕಿಂತ ಕೆಳಗಿನವರು. ಈ ವೇಳೆ 7 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಬಿಆರ್ ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ರೈಲ್ವೇ ವಕ್ತಾರ ತಿಳಿಸಿದ್ದಾರೆ.

  • ರೈಲಿಗೆ ಡಿಕ್ಕಿ ಹೊಡೆದ ಶಾಲಾ ಬಸ್-11 ಮಕ್ಕಳು ದುರ್ಮರಣ

    ರೈಲಿಗೆ ಡಿಕ್ಕಿ ಹೊಡೆದ ಶಾಲಾ ಬಸ್-11 ಮಕ್ಕಳು ದುರ್ಮರಣ

    ಲಕ್ನೋ: ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ರೈಲ್ವೇ ಕ್ರಾಸಿಂಗ್‍ನಲ್ಲಿ ರೈಲಿಗೆ ಡಿಕ್ಕಿಯಾಗಿದ್ದು, 11 ಮಕ್ಕಳು ಸಾವನ್ನಪ್ಪಿದ್ದಾರೆ.

    ಉತ್ತರ ಪ್ರದೇಶ ರಾಜ್ಯದ ಖುಷಿನಗರದಲ್ಲಿ ಈ ಅಪಘಾತ ನಡೆದಿದ್ದು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗ್ತಿದ್ದ ಸಮಯದಲ್ಲಿ ಬಸ್ ಅಪಘಾತಕ್ಕೆ ಒಳಗಾಗಿದೆ. ಸಾವನ್ನಪ್ಪಿದ ಮಕ್ಕಳು ನಗರದ ಡಿವೈನ್ ಪಬ್ಲಿಕ್ ಶಾಲೆಯವರು ಅಂತಾ ಗುರುತಿಸಲಾಗಿದೆ. ಡಿಕ್ಕಿಯಾದ ರಭಸಕ್ಕೆ ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಅಪಘಾತದಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಅಂತಾ ಹೇಳಲಾಗ್ತಿದೆ.

    ಇದೇ ತಿಂಗಳು ಏಪ್ರಿಲ್ 10ರಂದು ಕಾಂಗ್ರಾ ಎಂಬಲ್ಲಿ ಶಾಲಾ ಬಸ್ 100 ಅಡಿ ಆಳದ ಕಂದಕಕ್ಕೆ ಬಿದ್ದು 27 ಮಕ್ಕಳು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ.

     

  • ಕಂದಕಕ್ಕೆ ಉರುಳಿದ ಶಾಲಾ ಬಸ್ – 24 ಮಕ್ಕಳ ದಾರುಣ ಸಾವು

    ಕಂದಕಕ್ಕೆ ಉರುಳಿದ ಶಾಲಾ ಬಸ್ – 24 ಮಕ್ಕಳ ದಾರುಣ ಸಾವು

    ಶಿಮ್ಲಾ: ಶಾಲಾ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 24 ಶಾಲಾ ಮಕ್ಕಳು ಸೇರಿ 27 ಮಂದಿ ಮೃತಪಟ್ಟಿರುವ ದಾರುಣ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ.

    ಶಾಲೆ ಮುಗಿದ ಬಳಿಕ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೃತ ಪಟ್ಟ ಮಕ್ಕಳಲ್ಲಿ ಹೆಚ್ಚಿನವರು ಸ್ಥಳೀಯ ರಾಮ್ ಸಿಂಗ್ ಪಥಾನಿ ಮೆಮೋರಿಯಲ್ ಪಬ್ಲಿಕ್ ಶಾಲೆಯ 5ನೇ ತರಗತಿಗಿಂತ ಕೆಳಗಿನ ತರಗತಿಯವರು ಎಂದು ತಿಳಿದು ಬಂದಿದೆ.

    ಘಟನೆ ಕುರಿತು ಮಾಹಿತಿ ಪಡೆದ ರಾಷ್ಟ್ರೀಯ ವಿಪತ್ತು ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಕೈಗೊಂಡಿದೆ. ಇದುವರೆಗೆ 20 ಶವಗಳನ್ನು ಮೇಲಕ್ಕೆತ್ತಲಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

    ಶಾಲಾ ಬಸ್‍ನಲ್ಲಿ 40ಕ್ಕೂ ಹೆಚ್ಚು ಮಕ್ಕಳು ಇದ್ದರು ಎಂದು ಶಾಲಾಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಪ್ರಧಾನಿ ಮೋದಿ, ಹಿಮಾಚಲ ಸಿಎಂ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

  • ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ – ಸುಟ್ಟು ಕರಕಲಾದ ಶಾಲಾ ಬಸ್

    ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ – ಸುಟ್ಟು ಕರಕಲಾದ ಶಾಲಾ ಬಸ್

    ಮಂಗಳೂರು: ಶಾಲಾ ವಾಹನವೊಂದು ಬೆಂಕಿಯಲ್ಲಿ ಹೊತ್ತಿ ಉರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಜ್ಜಾವರದ ಕರ್ಲಪಾಡಿಯಲ್ಲಿ ನಡೆದಿದೆ.

    ಕೆವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯ ವಾಹನ ಶಾರ್ಟ್ ಸೆಕ್ಯೂರ್ಟ್ ನಿಂದ ಸುಟ್ಟು ಕರಕಲಾಗಿದೆ. ಬುಧವಾರ ಚಾಲಕ ಮಕ್ಕಳನ್ನು ಅವರವರ ಮನೆಗೆ ಬಿಟ್ಟು ನಂತರ ಶಾಲಾ ವಾಹನವನ್ನು ತನ್ನ ಮನೆಯ ಮುಂದೆ ನಿಲ್ಲಿಸಿದ್ದರು.

    ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಶಾಲಾ ವಾಹನದಲ್ಲಿ ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಿ ಶಾಲಾ ವಾಹನ ಸುಟ್ಟು ಕರಕಲಾಗಿತ್ತು.

    ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಈ ಬಗ್ಗೆ ಶಾಲಾ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಶಾಲಾ ವಾಹನ ಪಲ್ಟಿ- 3 ಶಿಕ್ಷಕರು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ವಾಹನ ಪಲ್ಟಿ- 3 ಶಿಕ್ಷಕರು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

    ತುಮಕೂರು: ಶಾಲಾ ವಾಹನ ಮಗುಚಿ ಬಿದ್ದ ಪರಿಣಾಮ ಮೂವರು ಶಿಕ್ಷಕರು ಹಾಗೂ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದ ಬಳಿ ನಡೆದಿದೆ.

    ಸತ್ಯಸಾಯಿ ಜಗದಾಂಬಾ ಖಾಸಗಿ ಶಾಲೆಯ ವಾಹನ ಇದಾಗಿದ್ದು, ಬೆಳಗ್ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಾಗ ಈ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯದಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಶಾಲಾವಾಹನದ ಅಪಘಾತ ಸಂಭವಿಸುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯರು ವಾಹನದಲ್ಲಿನ ವಿದ್ಯಾರ್ಥಿಗಳನ್ನು ರಕ್ಷಿಸಿ ತಿರುಮಣಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಚಾಲಕ ಜಯರಾಮ್ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದೆ ವಾಹನ ಪಲ್ಟಿ ಹೊಡೆಯಲು ಕಾರಣ ಎನ್ನಲಾಗಿದೆ. ಅಪಘಾತ ಸಂಭವಿಸಿದ ನಂತರ ಚಾಲಕ ಜಯರಾಮ್ ಪರಾರಿಯಾಗಿದ್ದಾನೆ. ಈ ಘಟನೆ ಸಂಬಂಧ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.