Tag: school boy

  • ಸರಿಯಾದ ಸಮಯಕ್ಕೆ ಬಾರದ ಬಸ್; ನಿತ್ಯ ಕುದುರೆ ಏರಿ ಶಾಲೆಗೆ ಹೋಗ್ತಿದ್ದಾನೆ ಬಾಲಕ

    ಸರಿಯಾದ ಸಮಯಕ್ಕೆ ಬಾರದ ಬಸ್; ನಿತ್ಯ ಕುದುರೆ ಏರಿ ಶಾಲೆಗೆ ಹೋಗ್ತಿದ್ದಾನೆ ಬಾಲಕ

    ಚಿಕ್ಕೋಡಿ: ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಬಾಲಕನೊಬ್ಬ ಕುದುರೆ ಏರಿ ನಿತ್ಯ ಶಾಲೆಗೆ ತೆರಳುವ ಮೂಲಕ ಎಲ್ಲರ ಗಮನ ಸೆಳೆದಿರುವ ಘಟನೆ ಸೊಲ್ಹಾಪುರ (Solapura) ನಡೆದಿದೆ.

    ಮಹಾರಾಷ್ಟ್ರದ (Maharashtra) ಸೊಲ್ಹಾಪುರ ಜಿಲ್ಲೆ ಬಾರ್ಶಿ ತಾಲೂಕಿನ ವ್ಯರಾಗ್ ಪಟ್ಟಣದ ಹೊರವಲಯದ ಗ್ರಾಮೀಣ ಭಾಗದ 9 ವರ್ಷದ ಆದರ್ಶ ಸಾಳುಂಕ ಎಂಬ ಬಾಲಕ ಸರಿಯಾದ ಸಮಯಕ್ಕೆ ಬಾರದ ಬಸ್‌ಗೆ ಗೋಲಿ ಮಾರೋ ಎಂದು ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದಾನೆ. ಇದನ್ನೂ ಓದಿ: ಅಕ್ರಮ ಮುಸ್ಲಿಂ ವಲಸಿಗರು ಭಯೋತ್ಪಾದನೆ, ಜನೋತ್ಪಾದನೆಯಲ್ಲಿ ತೊಡಗಿದ್ದಾರೆ: ಪ್ರತಾಪ್‌ ಸಿಂಹ


    ಬಾಲಕನ ಅಜ್ಜನ ಬಳಿ ಇರುವ 7 ಕುದುರೆಗಳ ಪೈಕಿ 1 ಕುದುರೆಯನ್ನು ಓಡಿಸಿಕೊಂಡು ಹೋಗಿ ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದಾನೆ.

  • ಮೂರು ಪೂರಿ ಒಟ್ಟಿಗೆ ತಿನ್ನಲು ಹೋಗಿ ಗಂಟಲಿಗೆ ಸಿಕ್ಕಿಕೊಂಡು 11ರ ಬಾಲಕ ಸಾವು

    ಮೂರು ಪೂರಿ ಒಟ್ಟಿಗೆ ತಿನ್ನಲು ಹೋಗಿ ಗಂಟಲಿಗೆ ಸಿಕ್ಕಿಕೊಂಡು 11ರ ಬಾಲಕ ಸಾವು

    ಹೈದರಾಬಾದ್: 11 ವರ್ಷದ ಬಾಲಕ ಪೂರಿ ತಿಂದು ಸಾವನ್ನಪ್ಪಿರುವ ಘಟನೆ ತೆಲಂಗಾಣದ (Telangana) ಸಿಕಂದರಾಬಾದ್‌ನ (Secunderabad) ಶಾಲೆಯೊಂದರಲ್ಲಿ ನಡೆದಿದೆ.

    ಮೃತ ಬಾಲಕನನ್ನು 6ನೇ ತರಗತಿಯ ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.

    ಸಿಕಂದರಾಬಾದ್‌ನ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ ವಿಕಾಸ್ ಜೈನ್ 6ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಿಂದ ತಂದ ಪೂರಿಯನ್ನು ಮಧ್ಯಾಹ್ನ ಊಟದ ಸಮಯದಲ್ಲಿ ತಿನ್ನುವಾಗ ಈ ಘಟನೆ ಸಂಭವಿಸಿದೆ.ಇದನ್ನೂ ಓದಿ: ಡಾ ಹಗರಣದ ಲೋಕಾಯುಕ್ತ ವರದಿ ಇಂದು ಹೈಕೋರ್ಟ್‌ಗೆ ಸಲ್ಲಿಕೆ – ಸಿಬಿಐ ಅಂಗಳಕ್ಕೆ ತನಿಖೆ ಶಿಫ್ಟ್?

    ಸೋಮವಾರ (ನ.25) ಶಾಲೆಯಲ್ಲಿ ಮಧ್ಯಾಹ್ನ ಊಟದ ವೇಳೆ ಮೂರು ಪೂರಿ ಒಟ್ಟಿಗೆ ತಿಂದ ಪರಿಣಾಮ ಬಾಲಕನಿಗೆ ಉಸಿರುಗಟ್ಟಿ ನೆಲಕ್ಕೆ ಕುಸಿದಿದ್ದಾನೆ. ಎಷ್ಟೇ ಎಚ್ಚರಗೊಳಿಸಿದರೂ ಪ್ರಜ್ಞೆ ಬರದ ಕಾರಣ ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯರು ತಪಾಸಣೆ ಮಾಡಿ ಸಾವನ್ನಪ್ಪಿರುವುದಾಗಿ ಧೃಡಪಡಿಸಿದ್ದಾರೆ.

    ಶಾಲಾ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗ ಊಟದ ಸಮಯದಲ್ಲಿ ಒಟ್ಟಿಗೆ ಮೂರು ಪೂರಿ ತಿಂದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇಲ್ಲಿಯವರೆಗೂ ಆಂಧ್ರಪ್ರದೇಶದಲ್ಲಿ (Andhrapradesh) ಈ ರೀತಿಯ ಮೂರು ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದೋಸೆ ತಿಂದು ಉಸಿರುಗಟ್ಟಿಸಿ ಸಾವನ್ನಪ್ಪಿದ್ದ. ವೆಂಕಟಯ್ಯ (43) ಅವರು ಸ್ಥಳೀಯ ಉಪಾಹಾರ ಗೃಹದಲ್ಲಿ ದೋಸೆ ತಿನ್ನುತ್ತಿದ್ದಾಗ ಅವರ ಗಂಟಲಿಗೆ ಆಹಾರ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

    ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ (Hyderabad) 37 ವರ್ಷದ ವ್ಯಕ್ತಿಯೊಬ್ಬರು ಕೋಳಿಯ ಮೂಳೆಯ ತುಂಡು ಗಂಟಲಿಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಜನವರಿಯಲ್ಲಿ ಮಹಬೂಬ್‌ನಗರ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಊಟ ಮಾಡುವಾಗ ಕೋಳಿಯ ಮೂಳೆಯ ತುಂಡು ಗಂಟಲಿಗೆ ಸಿಲುಕಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದ.ಇದನ್ನೂ ಓದಿ: ಜೋಡಿ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಕಾಯಿಲೆ ಹುಷಾರಾಗ್ಲಿ ಅಂತ ಅಜ್ಜಿ ಮೇಲೆ ಮೊಮ್ಮಗನಿಂದಲೇ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ!

  • ಶಾಲೆಯಿಂದ ಹೊರಹಾಕಿದ್ದಕ್ಕೆ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲ್ಲಲು ಯತ್ನಿಸಿದ ಬಾಲಕ!

    ಶಾಲೆಯಿಂದ ಹೊರಹಾಕಿದ್ದಕ್ಕೆ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲ್ಲಲು ಯತ್ನಿಸಿದ ಬಾಲಕ!

    ಜೈಪುರ್: ಶಾಲೆಯಿಂದ ಹೊರ ಹಾಕಿದ್ದಕ್ಕೆ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲ್ಲಲು ಯತ್ನಿಸಿದ 15 ವರ್ಷ ವಯಸ್ಸಿನ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಜಸ್ಥಾನ್‌ನಲ್ಲಿ ನಡೆದಿದೆ.

    ಒಂದು ವರ್ಷದ ಹಿಂದೆ ಆರೋಪಿ ಬಾಲಕ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ನಂತರ ಈತನನ್ನು ಶಾಲೆಯಿಂದ ಹೊರ ಹಾಕಲಾಗಿತ್ತು. ಅದಾದ ಬಳಿಕ ಈ ಬಾಲಕ ನಿತ್ಯ ಶಾಲೆಯಿಂದ ತನ್ನ ಸಂಬಂಧಿ ಹುಡುಗನನ್ನು ಕರೆದುಕೊಂಡು ಹೋಗಲು ಬರುತ್ತಿದ್ದ. ಈ ವೇಳೆ ಪ್ರಾಂಶುಪಾಲ ಭಗವಾನ್‌ ತ್ಯಾಗಿ ಅವರ ಕೊಠಡಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಮಗನನ್ನು ಹತ್ಯೆಗೈದು ತಾಯಿ ಆತ್ಮಹತ್ಯೆ

    ಒಮ್ಮೆ ಪ್ರಾಂಶುಪಾಲರ ಕೊಠಡಿಗೆ ಹೋಗಿ ಗನ್‌ನಿಂದ ಶೂಟ್‌ ಮಾಡಿ ಅವರನ್ನು ಕೊಲ್ಲಲು ಯತ್ನಿಸಿದ್ದಾನೆ. ಆದರೆ ಗನ್‌ನಿಂದ ಗುಂಡು ಹಾರಿಲ್ಲ. ಈ ವೇಳೆ ಶಾಲಾ ಸಿಬ್ಬಂದಿ ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    POLICE JEEP

    ಬಾಲ ನ್ಯಾಯ ಕಾಯ್ದೆಯಡಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಫೋನ್‍ನಲ್ಲಿ ಆಧಾರ್ ಕಾರ್ಡ್ ಡೌನ್‍ಲೋಡ್ ಮಾಡುವುದು ಹೇಗೆ?

  • ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

    ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

    ಮಡಿಕೇರಿ: ಇಲ್ಲಿನ ಮೈತ್ರಿ ಕೇಂದ್ರದಲ್ಲಿ ಗುಡ್ಡ ಕುಸಿತ ಹಾಗೂ ಪ್ರವಾಹದ ಪರಿಸ್ಥಿತಿಯನ್ನು ಶಾಲಾ ಬಾಲಕನೋರ್ವ ಚಿತ್ರ ಬಿಡಿಸಿದ್ದು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಿಸಿದ ರೀತಿ ಮನಕಲಕುವಂತಿತ್ತು.

    ಬಾಲಕ ನವನೀಶ್ ತಾನು ಬಿಡಿಸಿದ ಪ್ರವಾಹ ಚಿತ್ರವನ್ನು ಸಚಿವೆ ಹಾಗೂ ಪಬ್ಲಿಕ್ ಟಿವಿಗೂ ವಿವರಿಸಿದ್ದಾನೆ. ಸದ್ಯ ಬಾಲಕ ವಿವರಣೆ ಅಲ್ಲಿದ್ದವರನ್ನು ಕಣ್ಣೀರು ತರುಸುವಂತಿದ್ದು, ಮನಕಲಕುವಂತಿದೆ.

    ಬಾಲಕ ಹೇಳಿದ್ದು ಹೀಗೆ:
    ಬೆಟ್ಟದಿಂದ ನೀರು ಕೆಳಗೆ ಬರುತ್ತಿದೆ. ಇದು ನಮ್ಮ ಮನೆ. ನೀರು ರಭಸವಾಗಿ ಬಂದು ನಮ್ಮ ಮನೆಯನ್ನು ಕೊಚ್ಚಿಕೊಂಡು ಹೋಗಿದೆ. ಈಗ ಅಲ್ಲಿ ಯಾರೂ ಕೂಡ ಇಲ್ಲ. ನಮ್ಮ ಮನೆ ಮತ್ತು ಬೇರೆ ಮನೆ ಮಾತ್ರ ಅಲ್ಲಿ ಇರೋದು. ಅಂದು ನಮ್ಮ ಅಜ್ಜಿಯನ್ನು ನೀರು ಕೊಚ್ಚಿಕೊಂಡು ಹೋಯಿತು. ಅದನ್ನು ಪೇಪರಿಗೆ ಹಾಕಿಬಿಟ್ಟಿದ್ದಾರೆ. ಘಟನೆಯ ಬಳಿಕ ನಾವು ಅಲ್ಲಿಂದ ಪರಿಹಾರ ಕೇಂದ್ರಕ್ಕೆ ಓಡಿಕೊಂಡು ಬಂದ್ವಿ. ಅಪ್ಪ-ಅಮ್ಮ ರೋಡಿಗೆ ಹೋಗಿದ್ರು. ನೀರು ಮೇಲೆ ಹೋಗ್ಬಿಟ್ಟು ಕೆಳಗಡೆ ಬಂತು. ನೀರು ಬಂದಾಗ ಅಪ್ಪ- ಅಮ್ಮ ಓಡಿ ಬಂದ್ರು. ಆಗ ಅಮ್ಮ ಎಲ್ಲಾ ಪ್ಯಾಕ್ ಮಾಡು, ಬಿಟ್ಟು ಓಡಿ ಹೋಗುವ ಅಂತ ಹೇಳಿದ್ರು. ಆಗ ನಾವು ಕುಶಾಲನಗರದಲ್ಲಿರುವ ನೆಂಟರ ಮನೆಗೆ ಹೋಗ್ಬಿಟ್ವಿ. ಅಲ್ಲಿ ಟಿವಿಯಲ್ಲಿ ನೋಡಿ ಭಯ ಆಯ್ತು. ನಂತರ ನಾವು ಪರಿಹಾರ ಕೇಂದ್ರಕ್ಕೆ ಬಂದೆವು ಅಂತ ಬಾಲಕ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಕಣ್ಣಾರೆ ಕಂಡ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ.

    ನಮ್ಮ ಮನೆಯ ಮೇಲೆ ಒಂದು ಮನೆ ಇತ್ತು. ಆ ಮನೆ ಒಡೆದು ಹೋಗಿದೆ. ಅದನ್ನು ನಾನು ನನ್ನ ಅಪ್ಪನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದೇನೆ. ಆವಾಗ ಅಲ್ಲೇ ಇದ್ದ ಅಜ್ಜಿ ನನ್ನನ್ನು ಬಾ ಬಾ ಅಂತ ಕರೆದ್ರು. ನಾನು ಬರುವಷ್ಟರಲ್ಲಿ ನೀರು ಅಲ್ಲಿದ್ದ ಅಜ್ಜಿಯನ್ನು ಕೊಚ್ಚಿಕೊಂಡು ಹೋಯಿತು. ಮೊನ್ನೆ ಅವರು ಮನೆಯವರಿಗೆ ಸಿಕ್ಕಿದ್ರು ಅಂತ ಬಾಲಕ ನೈಜತೆಯನ್ನು ತಿಳಿಸಿದ್ದು, ಬಾಲಕನ ವಿವರಣೆ ಕರುಳುಕಿತ್ತು ಬರುವಂತಿತ್ತು.

    ಹೆಬ್ಬಟ್ಟಗೇರಿ ಗ್ರಾಮದ ಜನಾರ್ದನ ಹಾಗೂ ಶಾರದಾ ದಂಪತಿ ಪುತ್ರ 7 ವರ್ಷದ ನವಿನಾಶ್ ಸ್ಥಳೀಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದು, ಮುಂದೆ ಎಂಜಿನಿಯರ್ ಆಗೋ ಕನಸು ಹೊಂದಿದ್ದಾನೆ. ಕೊಡಗಿನ ಪ್ರವಾಹ ಪೀಡಿ ಪ್ರದೇಶಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನಿಡಿದ್ದರು. ಈ ವೇಳೆ ಮೈತ್ರಿಯಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಪುಟ್ಟ ಬಾಲಕ ಪ್ರವಾಹ ಬಂದ ದಿನದಂದು ಕಣ್ಣಾರೆ ಕಂಡ ಘಟನೆಯನ್ನು ಚಿತ್ರೀಕರಿಸಿದ್ದಾನೆ. ಅಲ್ಲದೇ ಸಚಿವೆಗೆ ವಿವರಿಸಿದ್ದು, ಅಲ್ಲಿದ್ದವರಲ್ಲಿ ಕಣ್ಣೀರು ತರಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೂ ಲೇಸ್‍ನಿಂದ ಬಾಲಕನ ಕುತ್ತಿಗೆ ಬಿಗಿದು ಕೊಲೆ

    ಶೂ ಲೇಸ್‍ನಿಂದ ಬಾಲಕನ ಕುತ್ತಿಗೆ ಬಿಗಿದು ಕೊಲೆ

    ಭೋಪಾಲ್: ಬಾಲಕನೊಬ್ಬನನ್ನು ಶಾಲೆಯಿಂದ ಕಿಡ್ನಾಪ್ ಮಾಡಿ, ಶೂ ಲೇಸ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಎರಡನೇ ತರಗತಿಯಲ್ಲಿ ಓದುತ್ತಿದ್ದ ಭರತ್ ಮೃತ ಬಾಲಕ. ಶಾಲೆಯಿಂದ ಸುಮಾರು 13 ಕಿ.ಮೀ ದೂರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶಿಕ್ಷಕ ವಿಶಾಲ್ ರೂಪಾನಿ (ಬಿಟ್ಟೂ)ನನ್ನು ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ.

    ಸೋಮವಾರ ಮಧ್ಯಾಹ್ನ ಶಾಲೆ ಮುಗಿದು ಎಷ್ಟು ಹೊತ್ತಾದ್ರೂ ಮಗ ಮನೆಗೆ ಬರದ ಹಿನ್ನೆಲೆಯಲ್ಲಿ ಭರತ್ ತಂದೆ ಪರಶುರಾಮ್ ಎಲ್ಲಾ ಕಡೆ ಹುಡುಕಾಡಿ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಮಗ ಸುರಕ್ಷಿತವಾಗಿ ಮನೆಗೆ ವಾಪಸ್ ಬರುತ್ತಾನೆ ಎಂದುಕೊಂಡಿದ್ದ ತಂದೆಗೆ, ಭರತ್ ಹೆಣ ಗೋಣಿಚೀಲದಲ್ಲಿ ಸಿಕ್ಕಿದೆ ಎಂದು ಗೊತ್ತಾಗಿ ಶಾಕ್ ಆಗಿತ್ತು. ಬಾಲಕನನ್ನು ಆತನ ಶೂ ಲೇಸ್‍ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು. ಆತನ ಬ್ಯಾಗ್ ಮತ್ತು ಶೂ ಕೂಡ ಗೋಣಿಚೀಲದಲ್ಲೇ ತುಂಬಲಾಗಿತ್ತು. ಪೊಲೀಸರು ಗೋಣಿಚೀಲದಿಂದ ಶವವನ್ನು ಹೊರತೆಗೆದಾಗ ಶೂ ಲೇಸ್ ಬಾಲಕನ ಕುತ್ತಿಗೆಯಲ್ಲಿತ್ತು. ಪೊಲೀಸರು ಕೂಡ ಶೂ ಲೇಸನ್ನು ತೆಗೆಯಲು ಸಾಧ್ಯವಾಗದಂತೆ ತುಂಬಾ ಬಿಗಿಯಾಗಿ ಕಟ್ಟಲಾಗಿತ್ತು. ಕೊಲೆ ಮಾಡಿದ ನಂತರ ಆರೋಪಿ ಮೃತದೇಹವನ್ನು ಗೋಣಿಚೀಲದೊಳಗೆ ತುಂಬಿ ಹೊಲಿಗೆ ಹಾಕಿದ್ದ.

    ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬ ಗೋಣಿ ಚೀಲ ಎಸೆದು ಹೋಗಿದ್ದನ್ನು ನೋಡಿದೆ. ಆದ್ರೆ ಹೆಚ್ಚೇನೂ ತಲೆಕೆಡಿಸಿಕೊಳ್ಳಲಿಲ್ಲ. ಅನಂತರ ನಾನು ಮನೆಗೆ ಹೋದೆ. ಸಂಜೆ ಸುಮಾರು 6.30ರ ಹೊತ್ತಿಗೆ ಇಬ್ಬರು ಹುಡುಗರು ಬ್ಯಾಗ್ ತೆರೆದು ನೋಡಿ ಕಿರುಚಿಕೊಂಡ್ರು. ನಾನು ಏನಾಗಿದೆ ಎಂದು ನೋಡಲು ಅಲ್ಲಿಗೆ ಹೋದಾಗ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಶವ ನೋಡಿದೆ ಎಂದು ಇಲ್ಲಿನ ನಿವಾಸಿ ಭೈರೋನ್ ಕುಶ್ವಾಹ್ ಹೇಳಿದ್ದಾರೆ.

    ಟ್ಯೂಷನ್ ಶಿಕ್ಷಕ ಬಿಟ್ಟೂ ನನ್ನನ್ನು ಇಷ್ಟಪಡುತ್ತಿದ್ದ. ಮಗ ಭರತ್‍ನನ್ನು ಆತನೇ ಕೊಲೆ ಮಾಡಿದ್ದಾನೆಂದು ತಾಯಿ ಸವಿತಾ ಹೇಳಿದ್ದಾರೆ. ನೀನು ನಿನ್ನ ಗಂಡನನ್ನು ಬಿಟ್ಟು ಬಂದು ನನ್ನ ಜೊತೆ ಜೀವನ ನಡೆಸಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೊಲೆಗೆ ಎರಡು ದಿನಗಳ ಮುಂಚೆ ಬಿಟ್ಟೂ ಬೆದರಿಕೆ ಹಾಕಿದ್ದ ಎಂದು ಸವಿತಾ ಹೇಳಿದ್ದಾರೆ.

    ಎರಡು ದಿನಗಳ ಹಿಂದೆ ಟ್ಯೂಷನ್ ಶಿಕ್ಷಕನ ವಿರುದ್ಧ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂದು ಬಾಲಕನ ತಂದೆ ಪರಶುರಾಮ್ ಹೇಳಿದ್ದಾರೆ. ಟ್ಯೂಷನ್ ಶಿಕ್ಷಕನ ಬಗ್ಗೆ ಕೆಲವು ಅನುಮಾನಾಸ್ಪದ ಮಾಹಿತಿ ತಿಳಿದ ನಂತರ ಆತನಿಗೆ ಟ್ಯೂಷನ್ ಮಾಡಲು ಮನೆಗೆ ಬರುವುದು ಬೇಡ ಎಂದು ಹೇಳಿದ್ದೆವು. ಆದ್ರೂ ಆತ ಒಂದು ದಿನ ನಸುಕಿನ ಜಾವ 3 ಗಂಟೆ ವೇಳೆ ಮನೆಗೆ ನುಗ್ಗಿದ್ದ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆಗ ನನ್ನ ಹೆಂಡತಿಯನ್ನ ಕಿಡ್ನಾಪ್ ಮಾಡಿ ಕುಟುಂಬವನ್ನ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ಆಗಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪರಶುರಾಮ್ ಹೇಳಿದ್ದಾರೆ.

    ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • ಮ್ಯಾಕ್ಸಿ ಕ್ಯಾಬ್ ಡಿಕ್ಕಿ- 7 ವರ್ಷದ ಶಾಲಾ ಬಾಲಕ ಸ್ಥಳದಲ್ಲೇ ಸಾವು

    ಮ್ಯಾಕ್ಸಿ ಕ್ಯಾಬ್ ಡಿಕ್ಕಿ- 7 ವರ್ಷದ ಶಾಲಾ ಬಾಲಕ ಸ್ಥಳದಲ್ಲೇ ಸಾವು

    ಹಾಸನ: ಮ್ಯಾಕ್ಸಿ ಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನದ ಆಲೂರು ಪಟ್ಟಣದ ಕೆಇಬಿ ಸರ್ಕಲ್‍ನಲ್ಲಿ ನಡೆದಿದೆ.

    7 ವರ್ಷದ ಸಮರ್ಥ್ ಅಪಘಾತದಲ್ಲಿ ಮೃತಪಟ್ಟ ಬಾಲಕ. ಸಮರ್ಥ್ ಹಾಸನದ ಸಂಗಮೇಶ್ವರ ಬಡಾವಣೆಯ ರೂಪಾ ಎಂಬವರ ಪುತ್ರ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಶಾಲೆಗೆ ತೆರಳಲು ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಸಮರ್ಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಈ ಬಗ್ಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.