Tag: scholarships

  • ನವರಂಗ್ ಫ್ರೆಂಡ್ಸ್ ಸರ್ಕಲ್‍ನಿಂದ ಸೈನಿಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ

    ನವರಂಗ್ ಫ್ರೆಂಡ್ಸ್ ಸರ್ಕಲ್‍ನಿಂದ ಸೈನಿಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ

    ಮಂಗಳೂರು: ನವರಂಗ್ ಫ್ರೆಂಡ್ಸ್ ಸರ್ಕಲ್ ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ ನವರಂಗ್ ಪ್ರೀಮಿಯರ್ ಲೀಗ್-2022 ಕ್ರಿಕೆಟ್ ಪಂದ್ಯಾಟ ಕೃಷ್ಣಾಪುರದ ಚಕ್ರವರ್ತಿ ಮೈದಾನದಲ್ಲಿ ಆರಂಭಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

    ಕಾರ್ಯಕ್ರಮದಲ್ಲಿ ಮಾತಾಡಿದ ಸಂಸ್ಥೆಯ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಆಯ್ದ ಆಟಗಾರರ ಆರು ತಂಡಗಳ ಮಧ್ಯೆ ಪಂದ್ಯಾಟ ಜರುಗಲಿದ್ದು ಪ್ರಥಮ ಸ್ಥಾನದಲ್ಲಿ ವಿಜೇತ ತಂಡಕ್ಕೆ 33,333 ರೂ. ನಗದು, ಎನ್‍ಪಿಎಲ್ ಟ್ರೋಫಿ ಹಾಗೂ ದ್ವಿತೀಯ ತಂಡಕ್ಕೆ 22,222 ರೂ. ನಗದು, ಎನ್‍ಪಿಎಲ್ ಟ್ರೋಫಿ ಬಹುಮಾನವಾಗಿ ನೀಡಲಾಗುವುದು ಎಂದರು. ಇದನ್ನೂ ಓದಿ: ರಾಷ್ಟ್ರಿಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮಾಜಿ ಹೆಸರಿಡಿ: ವಚನಾನಂದ ಸ್ವಾಮೀಜಿ

    ಸಂಸ್ಥೆ ಕಳೆದ 19 ವರ್ಷಗಳಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ. 15 ಲಕ್ಷ ರೂ.ಗೂ ಹೆಚ್ಚಿನ ಮೊತ್ತವನ್ನು ಅನಾರೋಗ್ಯ ಪೀಡಿತರಿಗೆ ನೆರವಾಗಿ ನೀಡಲಾಗಿದೆ. ಈ ಬಾರಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ ಹಾಗೂ ಇಬ್ಬರು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬಂಕರ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒದ್ದು ಅಪಾರ್ಟ್ಮೆಂಟ್‌ಗೆ ಕಳುಹಿಸುತ್ತಿದ್ದಾರೆ: ವಿದ್ಯಾರ್ಥಿ

    ಮನಪಾ ಸದಸ್ಯ ಸಂಶಾದ್ ಅಬೂಬಕರ್, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ಪಮ್ಮಿ ಕೊಡಿಯಾಲ್ ಬೈಲ್, ಯಜ್ನೇಶ್ ಕರ್ಕೇರ, ತಿಲಕ್, ಶಿವಪ್ರಸಾದ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಸೈನಿಕ ಲೀಲಾಧರ್ ಕಡಂಬೋಡಿ ಅವರನ್ನು ಸನ್ಮಾನಿಸಲಾಯಿತು.

  • ಆಯುರ್ವೇದ ವಿದ್ಯಾರ್ಥಿಗಳ 24 ಲಕ್ಷ ರೂ. ವಿದ್ಯಾರ್ಥಿ ವೇತನ ನಕಲಿ ಖಾತೆಗೆ ಜಮೆ

    ಆಯುರ್ವೇದ ವಿದ್ಯಾರ್ಥಿಗಳ 24 ಲಕ್ಷ ರೂ. ವಿದ್ಯಾರ್ಥಿ ವೇತನ ನಕಲಿ ಖಾತೆಗೆ ಜಮೆ

    ಹುಬ್ಬಳ್ಳಿ: ಹೆಗ್ಗೇರಿ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದ ಹಿಂದುಳಿದ ವರ್ಗ ಇಲಾಖೆಯ ಸಿಬ್ಬಂದಿಯೊಬ್ಬ ಬರೋಬ್ಬರಿ 24 ಲಕ್ಷ ರೂ. ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನವನ್ನು ಆ ಖಾತೆಗೆ ಜಮಾ ಮಾಡಿಸಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಎ.ಎಸ್.ಅವರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನಕಲಿ ಖಾತೆ ತೆರೆದು ಸಿಎಂ ವಿರುದ್ಧ ಪೋಸ್ಟ್ ಹಾಕಿದ್ದ ಮಂಡ್ಯದ ಟೆಕ್ಕಿಯ ಬಂಧನ

    ದೂರಿನಲ್ಲಿ ಏನಿದೆ?
    ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನವನ್ನು ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮೆ ಮಾಡುತ್ತಾರೆ. ಹೀಗಿರುವಾಗ ಇಲಾಖೆಯ ಸಿಬ್ಬಂದಿ ಹುಬ್ಬಳ್ಳಿ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್‍ನಲ್ಲಿ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ಖಾತೆ ತೆರೆದ್ದಿದ್ದಾನೆ. ಖಾತೆಗೆ 2017ರ ಏ.1ರಿಂದ 2018ರ ಮಾ. 31ರವರೆಗಿನ ಅವಧಿಯಲ್ಲಿ 24,04,090 ರೂ. ವಿದ್ಯಾರ್ಥಿ ವೇತನವನ್ನು ಪ್ರಾಚಾರ್ಯರ ಖಾತೆ ಬದಲಾಗಿ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡು ಕಾಲೇಜು, ವಿದ್ಯಾರ್ಥಿಗಳಿಗೆ ವಂಚಿಸಿ ಸ್ವಂತಕ್ಕೆ ಬಳಸಲಾಗಿದೆ ಎಂದು ದೂರು ದಾಖಲಾಗಿದೆ.

    ಬೆಳಕಿಗೆ ಬಂದಿದ್ದು ಹೇಗೆ?
    ಕಳೆದ ಆಡಿಟ್ ವೇಳೆ ವಂಚನೆ ಆಗಿರುವುದು ಪತ್ತೆಯಾಗಿದೆ. ಹಿಂದುಳಿದ ವರ್ಗ ಇಲಾಖೆಯಿಂದ ಕಾಲೇಜಿನ ಖಾತೆಗೆ ಆಗಬೇಕಿದ್ದ ಹಣ ಎಲ್ಲಿ ಜಮಾ ಆಗಿದೆ ಎಂದು ಪತ್ತೆಗೆ ಮುಂದಾದಾಗ ವಿಷಯ ಬೆಳಕಿಗೆ ಬಂದಿದೆ. ಸುಮಾರು 100 ವಿದ್ಯಾರ್ಥಿಗಳಿಗೆ ಬರಬೇಕಾದ ವಿದ್ಯಾರ್ಥಿವೇತನ ಇದು. ಯಾವ ಸಿಬ್ಬಂದಿ ವಂಚನೆ ಎಸಗಿದ್ದಾನೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಪ್ರಾಚಾರ್ಯ ಪ್ರಶಾಂತ್ ಎ.ಎಸ್. ತಿಳಿಸಿದ್ದಾರೆ.

  • ಕೊರೊನಾದಿಂದ ಅನಾಥರಾದ ವಿದ್ಯಾರ್ಥಿಗಳಿಗೆ ಸತ್ಯಸಾಯಿಯಿಂದ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ

    ಕೊರೊನಾದಿಂದ ಅನಾಥರಾದ ವಿದ್ಯಾರ್ಥಿಗಳಿಗೆ ಸತ್ಯಸಾಯಿಯಿಂದ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ

    ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನಿಂದ ತಂದೆ ಅಥವಾ ತಾಯಿ ಕಳೆದುಕೊಂಡು ಅನಾಥರಾಗಿರುವ ಕರ್ನಾಟಕ ರಾಜ್ಯದ ಮಕ್ಕಳಿಗೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲ ಶೈಕ್ಷಣಿಕ ಸಂಸ್ಥೆಗಳ ವತಿಯಿಂದ ಉಚಿತ ಶಿಕ್ಷಣ ನೀಡಲಾಗುವುದಾಗಿ ಪ್ರಕಟಣೆ ಹೊರಡಿಸಿದೆ.

    1 ನೇ ತರಗತಿಯಿಂದ 12 ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಹಾಗೂ ತಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗದಿದ್ದಲ್ಲಿ ಇತರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಅನಾಥ ವಿದ್ಯಾರ್ಥಿಗಳಿಗೆ ವಾರ್ಷಿಕ 20 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುವುದು.

    ಅನಾಥರಾದ ಮಕ್ಕಳು ಸತ್ಯಸಾಯಿ ಗುರುಕುಲದಲ್ಲಿ ಸೇರಲು ಬಯಸುವ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ನೊಂದಾಯಿಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳಿಗೆ ಇಂಟರ್ ವ್ಯೂ ಮಾಡಿ ತದನಂತರ ದಾಖಲಾತಿ ಮಾಡಿಕೊಳ್ಳಲಾಗುವುದು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಮತ್ತು ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲ ಶೈಕ್ಷಣಿಕ ಸಂಸ್ಥೆಗಳ ಸಮೂಹದ ಯಾವುದಾದರೊಂದು ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗೆ ಊಟ ವಸತಿ ಸಹಿತ ಉಚಿತ ಶಿಕ್ಷಣವನ್ನು ಒದಗಿಸಲಾಗುವುದು. ಇದನ್ನು ಓದಿ: ಸೊಂಕಿತರೊಂದಿಗೆ ವೈದ್ಯೆ ಡ್ಯಾನ್ಸ್ – ಐಡಿಯಾಗೆ ಜನರಿಂದ ಮೆಚ್ಚುಗೆ

    ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲ ಶೈಕ್ಷಣಿಕ ಸಂಸ್ಥೆಗಳ ಸಮೂಹದ ಶಾಲೆಗಳು ಕರ್ನಾಟಕ ರಾಜ್ಯಾದ್ಯಂತ ಅನೇಕ ಶಾಖೆಗಳನ್ನು ಹೊಂದಿವೆ. ಈ ಪೈಕಿ ಯಾವುದಾದರೊಂದು ಶಾಲೆಯಲ್ಲಿ ರಾಷ್ಟ್ರೀಯ ಮುಕ್ತ ಶಿಕ್ಷಣ ಯೋಜನೆಯಡಿಯಲ್ಲಿ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಸತ್ಯಸಾಯಿ ಲೋಕಸೇವಾ ಗುರುಕುಲ ಶೈಕ್ಷಣಿಕ ಸಂಸ್ಥೆಗಳು ತಿಳಿಸಿದ್ದು, ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲ ಶೈಕ್ಷಣಿಕ ಸಂಸ್ಥೆಗಳ ಸಮೂಹದ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಹರಲ್ಲದ ಮತ್ತು ಸದರಿ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆಯಲಿಚ್ಚಿಸದ ವಿದ್ಯಾರ್ಥಿಗಳಿಗೂ ಸಹ ಅವರುಗಳು ಇತರ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗವನ್ನು ಮುಂದುವರೆಸಲು ವಾರ್ಷಿಕ ರೂ 20,000 ವಿದ್ಯಾರ್ಥಿ ವೇತನವನ್ನು ಪ್ರಶಾಂತಿ ಬಾಲಮಂದಿರ ಟ್ರಸ್ಟ್ ವತಿಯಿಂದ ನೀಡಲಾಗುವುದು.

    ಕೋವಿಡ್ ಪಿಡುಗಿನಿಂದ ಪೋಷಕರನ್ನು ಕಳೆದುಕೊಂಡು ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಸಹ ಶಿಷ್ಯ ವೇತನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು. ಸಂಸ್ಥೆಯ ಅಧಿಕೃತ ವೆಬ್ ಸೈಟ್‍ನಲ್ಲಿ <<Student Sahay Link >> ಮೂಲಕ ವಿದ್ಯಾರ್ಥಿಗಳು ನೊಂದಾಯಿಸಿಕೊಳ್ಳಬಹುದು. ಅರ್ಜಿಯನ್ನು ಸಲ್ಲಿಸಿದ ನಂತರ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನ ಪ್ರತಿನಿಧಿಯವರು ಅರ್ಜಿದಾರರನ್ನು ಸಂಪರ್ಕಿಸುವರು. ಇದಲ್ಲದೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಟ್ರಸ್ಟ್ ವತಿಯಿಂದಲೂ ಸಹ ಈ ರೀತಿಯ ನೆರವಿನ ಕಾರ್ಯ ಕೈಗೊಂಡಿದ್ದು, ಅನಾಥ ಮಕ್ಕಳಿಗೆ ಉಚಿತ ಊಟ ವಸತಿ ಶಿಕ್ಷಣ ಸೇರಿದಂತೆ ಸಕಲ ಸೌಲಭ್ಯಗಳನ್ನು ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಒದಗಿಸಲಾಗುತ್ತಿದೆ. ಇದನ್ನು ಓದಿ: ಮಾಸ್ಕ್ ವಿಚಾರಕ್ಕೆ ಕಿರಿಕ್ – ದೊಣ್ಣೆಯಿಂದ ಮಹಿಳೆಗೆ ಬಡಿದ ಯುವತಿ

    ಈ ರೀತಿಯ ನೆರವಿಗೆ ಜಿಲ್ಲಾಡಳಿತವನ್ನು ಅಥವಾ ಆದಿಚುಂಚನಗಿರಿ ಮಠದ ಶಾಖೆಯನ್ನು ಖುದ್ದಾಗಿ ದೂರವಾಣಿ ಸಂಪರ್ಕ ಮುಖಾಂತರ ಸಂಪರ್ಕಿಸಿ ಸೌಲಭ್ಯಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಅಂತ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ. ಸಂಸ್ಥೆಗಳ ಸಾಮಾಜಿಕ ಕಳಿಕಳಿಗೆ ಜಿಲ್ಲಾಧಿಕಾರಿಗಳು ಅಭಿನಂದನೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಹೊಂಗಿರಣದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

    ಹೊಂಗಿರಣದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

    ಬೆಂಗಳೂರು: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೊಂಗಿರಣ ಚಾರಿಟಬಲ್ ಟ್ರಸ್ಟ್ ಅರ್ಹ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿದ್ದು, ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

    ಕಳೆದೆರಡು ವರ್ಷಗಳಿಂದ ಸಂಸ್ಥೆ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳನ್ನು ನಡೆಸುತ್ತಿದೆ. ಹತ್ತನೇ ತರಗತಿಯಿಂದ ಪಿಯುಸಿಯವರೆಗಿನ ಮಕ್ಕಳಿಗಾಗಿ ಚಿಗುರು, ನರ್ಸಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ವೇತನವನ್ನು ಹೊಂಗಿರಣ ಸಂಸ್ಥೆ ನೀಡುತ್ತಿದೆ.

    *ಹೊಂಗಿರಣ ವಿದ್ಯಾರ್ಥಿ ವೇತನ*
    ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೊಂಗಿರಣ ಚಾರಿಟಬಲ್‌ ಟ್ರಸ್ಟ್‌ ಅರ್ಹ…

    Posted by Hongirana Charitable Trust on Monday, November 2, 2020

    ಇತ್ತೀಚೆಗಷ್ಟೇ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತಮ ಅಂಕ ಗಳಿಸಿದ, ಹಣಕಾಸಿನ ತೊಂದರೆಯಿಂದ ಮೆಡಿಕಲ್ ಸೀಟ್ ತೆಗೆದುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿದ್ಯಾರ್ಥಿ ವೇತನಕ್ಕಾಗಿ ಮೈಸೂರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಲ್ಲಿ ವಾಸವಿರುವ ವಿದ್ಯಾರ್ಥಿಗಳು ಹೊಂಗಿರಣ ವೆಬ್ ಪುಟದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

    ಹೆಚ್ಚಿನ ಮಾಹಿತಿಗೆ ಡಾ.ವಿನಯ್.ಬಿ.ಎಸ್(7204123667), ಡಾ.ಶಿವಪ್ರಕಾಶ್(97400 10544) ಅವರನ್ನು ಸಂಪರ್ಕಿಸಬಹುದು. ಇಲ್ಲವೆ  www.hongirana.org ವೆಬ್‍ಸೈಟ್‍ಗೆ ಭೇಟಿ ನೀಡಬಹುದಗಿದೆ.

  • ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ ಕೊರೊನಾ ವಾರಿಯರ್ಸ್

    ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ ಕೊರೊನಾ ವಾರಿಯರ್ಸ್

    ದಾವಣಗೆರೆ: ಹೆಮ್ಮಾರಿ ಕೊರೊನಾ ವೈರಸ್ ತಡೆಗಟ್ಟಲು ವೈದ್ಯರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದು, ಅವರ ಜೊತೆ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತಹ ಕೊರೊನಾ ವಾರಿಯರ್ಸ್ ಗಳ ಸರ್ಕಾರ ನಿರ್ಲಕ್ಷ್ಯವಹಿಸಿದೆ.

    15 ತಿಂಗಳ ಶಿಷ್ಯವೇತನಕ್ಕೆ ಒತ್ತಾಯಿಸಿ ದಾವಣಗೆರೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಕೋವಿಡ್ ವಾರ್ಡ್‍ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದೆರಡು ದಿನದ ಹಿಂದಷ್ಟೇ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಸ್ಪತ್ರೆಯ ಮುಂಭಾಗ ಕ್ಯಾಂಡಲ್ ಲೈಟ್ ಹಿಡಿದು ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಇಂದು ಕಪ್ಪು ಪಟ್ಟಿ ಧರಿಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

    ಮೆರಿಟ್ ಸೀಟ್ ಪಡೆದ ವಿದ್ಯಾರ್ಥಿಗಳ ಶಿಷ್ಯವೇತನವು 2019ರ ಫೆಬ್ರವರಿಯಿಂದ ಪಾವತಿಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಾಲೇಜು, ಹಾಸ್ಟಲ್ ಶುಲ್ಕ ಪಾವತಿಸಲು ಪರದಾಡುವ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಈ ಕೂಡಲೇ ಶಿಷ್ಯ ವೇತನ ನೀಡಿದರೆ ನಮ್ಮ ಕಷ್ಟ ನಿವಾರಣೆಯಾಗಲಿದೆ ಎಂದು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ. ನಮ್ಮ ಹೋರಾಟ ನಮ್ಮ ಹಕ್ಕಿಗಾಗಿ, ರೋಗಿಗಳ ವಿರುದ್ಧವಲ್ಲ ಎಂಬ ಘೋಷಣೆಯೊಂದಿಗೆ ಕಪ್ಪು ಪಟ್ಟಿ ಧರಿಸಿ ಸೇವೆಗೆ ಹಾಜರಾಗಿದ್ದಾರೆ.

    ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದೇವೆ. ನಾವು ಮೆರಿಟ್‍ನಲ್ಲಿ ಸೀಟ್ ಪಡೆದು ವ್ಯಾಸಂಗ ಮಾಡುತ್ತಿದ್ದೇವೆ. ನಮ್ಮ ಮೆರಿಟ್ ಆಧರಿಸಿ ನಮಗೆ ಶಿಷ್ಯವೇತನ ನೀಡಲಾಗುತ್ತದೆ. ಆದರೆ ಕಳೆದ ಫೆಬ್ರವರಿ ತಿಂಗಳಿನಿಂದ ಶಿಷ್ಯವೇತನವಿಲ್ಲದೇ ನಮ್ಮ ಖರ್ಚು, ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕೆಂದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

  • ಬಲಗಾಲು, ಬಲಗೈ ಸ್ವಾದೀನ ಇಲ್ಲ, ಮಾತನಾಡಲು ಕಷ್ಟ ಆದರೂ ಓದಬೇಕೆಂಬ ಹಂಬಲ

    ಬಲಗಾಲು, ಬಲಗೈ ಸ್ವಾದೀನ ಇಲ್ಲ, ಮಾತನಾಡಲು ಕಷ್ಟ ಆದರೂ ಓದಬೇಕೆಂಬ ಹಂಬಲ

    ಚಿತ್ರದುರ್ಗ: ಹುಟ್ಟುವಾಗಲೇ ಶಾಪಗ್ರಸ್ಥರಾಗಿ ಬಲಗಾಲು, ಬಲಗೈ ಸ್ವಾದೀನ ಕಳೆದುಕೊಂಡಿದ್ದು, ಮಾತನಾಡಲು ಆಗದೇ ಕಷ್ಟ ಅನುಭವಿಸುತ್ತಿರುವ ಶಿವಕುಮಾರ್‍ಗೆ ಓದಬೇಕೆಂಬ ಹಂಬಲ ಇದೆ. ಆದ್ದರಿಂದ ಸಹಾಯ ಕೇಳಿಕೊಂಡು ನಮ್ಮ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಜಿಲ್ಲೆಯ ಹುಲ್ಲೂರು ನಾಯಕರಹಟ್ಟಿ ಗ್ರಾಮದ ಸಾವಿತ್ರಮ್ಮನ ಅವರ ಪುತ್ರ ಶಿವಕುಮಾರ್. ಇವರು ಹುಟ್ಟುವಾಗಲೇ ವಿಕಲಚೇತನರಾಗಿ ಜನಿಸಿದ್ದಾರೆ. ಶಿವಕುಮಾರ್ ತಮ್ಮ ಬಲಗಾಲು, ಬಲಗೈ ಸ್ವಾದೀನವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಾತನಾಡಲು ಆಗದೇ ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಶಿವಕುಮಾರ್ ಓದಬೇಕೆಂಬ ಹಂಬಲ ಹಾಗೂ ದುಡಿಯಬೇಕೆಂಬ ಛಲವನ್ನು ಇಟ್ಟುಕೊಂಡಿದ್ದಾರೆ.

    ತಂದೆ ತಾಯಿಗೆ ಹೊರೆಯಾಗಿರಲು ಇಷ್ಟಪಡದೇ ಪ್ರಥಮ ಬಿಎ ಪದವಿಯನ್ನು ಓದುತ್ತಿರುವ ಶಿವಕುಮಾರ್ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಕಲಚೇತನರಿಗೆ ನೀಡುವ ವಾಹನಕ್ಕಾಗಿ ಪರದಾಡಿದ್ದಾರೆ. ಕಾಲೇಜು ಮುಗಿಸಿ ನಂತರ ಗ್ರಾಮದಲ್ಲಿ ವ್ಯಾಪಾರ ಮಾಡಲು ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ಅಂಗವಿಕಲರಿಗೆ ನೀಡುವ ನೇರ ಸಾಲಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಲ್ಲಿಸಿದ ಅರ್ಜಿಗಳಿಗೆ ಮಾತ್ರ ಯಾವ ಇಲಾಖೆಯು ಪ್ರತಿಕ್ರಿಯಿಸುತ್ತಿಲ್ಲ. ಆದ್ದರಿಂದ ಪ್ರತಿದಿನ ತಾಯಿಯೊಂದಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುತ್ತಾರೆ.

    ವಿಪರ್ಯಾಸ ಎಂದರೆ ಚಿತ್ರದುರ್ಗದ ಉಸ್ತುವಾರಿ ಹೊತ್ತಿರುವ ಸಚಿವರಾದ ಹೆಚ್ ಆಂಜನೇಯನವರ ತವರೂರು ಜಿಲ್ಲೆಯಲ್ಲೇ ಸೌಲಭ್ಯ ವಂಚಿತರನ್ನಾಗಿಸುತ್ತಿರುವುದು ನಾಚಿಕೆಯ ಸಂಗತಿಯಾಗಿದೆ.

    ಚಿಕ್ಕ ವಯಸ್ಸಿನಿಂದಲೂ ವಿಕಲಚೇತನ ಮಗನಿಗೆ ಊರುಗೋಲಾಗಿರುವ ತಾಯಿ ಸಾವಿತ್ರಮ್ಮ. ಮಗನಿಗಾಗಿ ಸರ್ಕಾರ ವಿದ್ಯಾರ್ಥಿ ವೇತನ ಕೊಟ್ಟು, ಪದವಿ ಪೂರ್ಣಗೊಳಿಸಲು ಸಹಕರಿಸಬೇಕು. ಸಬ್ಸಿಡಿ ಸಾಲ ಕೊಟ್ಟು ಸ್ವಾವಲಂಬಿಯಾಗಿ ಬದುಕಲು ನೆರವಾಗಬೇಕೆಂದು ಅಂಗಲಾಚುತ್ತಾ ಕಣ್ಣೀರಿಡುತ್ತಾ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=Gml-BsIW4z4