Tag: Scheduled Tribes

  • SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    – ನಾಗಮೋಹನ್ ದಾಸ್ ವರದಿ ಜಾರಿಗೆ ಸರ್ಕಾರದ ಅಸ್ತು
    – ಶನಿವಾರ ಸರ್ಕಾರದಿಂದ ಅಧಿಕೃತ ಆದೇಶ

    ಬೆಂಗಳೂರು: ಬಹು ವರ್ಷಗಳ ಪರಿಶಿಷ್ಟ ಜಾತಿ(Scheduled Castes) ಮತ್ತು ಪರಿಶಿಷ್ಟ ಪಂಗಡಗಳ(Scheduled Tribes) ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಇಂದು ಮೀಸಲಾತಿ(Reservation) ಹೆಚ್ಚಳ ಸಂಬಂಧ ಸಿಎಂ ಬೊಮ್ಮಾಯಿ(CM Basavaraj Bommai) ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆಯಿತು. ಸಭೆಯಲ್ಲಿ ಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್ ದಾಸ್(Justice Nagamohan Das) ನೀಡಿರುವ ವರದಿ ಯಥಾವತ್ತಾಗಿ ಜಾರಿಗೆ ಒಮ್ಮತದ ಅಭಿಪ್ರಾಯ ಮೂಡಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದು, ನಾಳೆಯ ಕ್ಯಾಬಿನೆಟ್ ನಲ್ಲಿ ವಿಷಯ ಮಂಡಿಸಿ ಅಧಿಕೃತ ಆದೇಶ ಹೊರಡಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.

    ಸದ್ಯ ಪರಿಶಿಷ್ಟ ಜಾತಿಗೆ 15% ಮತ್ತು ಪರಿಶಿಷ್ಟ ಪಂಗಡಕ್ಕೆ 3% ಮೀಸಲಾತಿ ಇತ್ತು. ನ್ಯಾ.ನಾಗಮೋಹನ್ ದಾಸ್ ಸಮಿತಿ ಜನಸಂಖ್ಯೆ ಆಧಾರದಲ್ಲಿ ಎಸ್‌ಸಿ ಮೀಸಲಾತಿ 15% ನಿಂದ 17%ಗೆ ಹಾಗೂ ಎಸ್‌ಟಿ ಮೀಸಲಾತಿ 3% ನಿಂದ 7%ಗೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇವತ್ತಿನ ಸರ್ವ ಪಕ್ಷಗಳ ಸಭೆಯಲ್ಲಿ ವರದಿ ಜಾರಿಗೆ ಎಲ್ಲಾ ಪಕ್ಷಗಳು ಒಪ್ಪಿಗೆ ನೀಡಿದ್ದು, ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ

    ಸಿದ್ದರಾಮಯ್ಯ(Siddaramaiah) ಮಾತನಾಡಿ, ಸರ್ಕಾರ ಕೂಡಲೇ ಅಧಿವೇಶನ ಕರೆದು ಮೀಸಲಾತಿ ಹೆಚ್ಚಳ ನಿರ್ಣಯ ಅಂಗೀಕಾರ ಮಾಡಬೇಕು. 9ನೇ ಅನುಚ್ಛೇದಕ್ಕೆ ಇದನ್ನ ಸೇರ್ಪಡೆ ಮಾಡಲು ಕೇಂದ್ರದ ಮೇಲೆ ಒತ್ತಾಯ ತರಬೇಕು ಅಂತ ಆಗ್ರಹ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಶೀಘ್ರವೇ ಮೀಸಲಾತಿ ಪ್ರಕ್ರಿಯೆ ಮುಗಿಸಿ ಅಂತ ಒತ್ತಾಯ ಮಾಡಿದರು.

    ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಬಳಿಕ ಒಬಿಸಿ ಮೀಸಲಾತಿ ಕಡಿಮೆ ಆಗುತ್ತದೆ ಎಂಬ ಆತಂಕವನ್ನು ಕೂಡಾ ಸರ್ಕಾರ ನಿವಾರಣೆ ಮಾಡಿದೆ. ಯಾವುದೇ ಕಾರಣಕ್ಕೂ ಈಗ ಇರುವ 50% ಮೀಸಲಾತಿಯಲ್ಲಿ 1% ಕೂಡಾ ಬದಲಾವಣೆ ಮಾಡೋದಿಲ್ಲ ಅಂತ ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿ ಮೀಸಲಾತಿ ಹೆಚ್ಚಳ ಸಂಬಂಧ ಕಾನೂನು ಪ್ರಕ್ರಿಯೆ ನಡೆಸುತ್ತೇವೆ. ಮುಂದಿನ ಅಧಿವೇಶನದಲ್ಲೆ ಕಾನೂನು ತಿದ್ದುಪಡಿ ಮಾಡುತ್ತೇವೆ ಎಂದರು.

    ಸರ್ವ ಪಕ್ಷಗಳ ಸಭೆಗೂ ಮುನ್ನ ಬಿಜೆಪಿ ಕಾರ್ಯಕಾರಣಿಯಲ್ಲೂ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಮೀಸಲಾತಿ ಹೆಚ್ಚಳ ಸಂಬಂಧ ಬಿಜೆಪಿ ಹೈಕಮಾಂಡ್ ಕೂಡಾ ಸಿಎಂ ಬೊಮ್ಮಾಯಿ ಅವರಿಗೆ ರಾತ್ರಿಯೇ ಸಂದೇಶ ರವಾನೆ ಮಾಡಿ, ಕಾಂಗ್ರೆಸ್ ನ ರಾಜಕೀಯ ತಂತ್ರಕ್ಕೆ ಪ್ರತಿತಂತ್ರದ ಮಾಸ್ಟರ್ ಸ್ಟ್ರೋಕ್ ನೀಡಿತ್ತು.

    ಹಾಲಿ ಮೀಸಲಾತಿ ಎಷ್ಟಿದೆ?
    ಎಸ್‌ಸಿ- 15%
    ಹಿಂದುಳಿದ ವರ್ಗ 2 ಎ- 15%
    ಪ್ರವರ್ಗ 1- 4%
    2ಬಿ – 4%
    3ಎ- 4%
    3ಬಿ- 5%
    ಎಸ್ ಟಿ- 3%
    ಒಟ್ಟು ಮೀಸಲಾತಿ ಪ್ರಮಾಣ: 50%

    ಎಷ್ಟು ಏರಿಕೆ ಆಗುತ್ತೆ?
    ಈಗ ಎಸ್ ಟಿಗೆ 4%, ಎಸ್‌ಸಿ 2% ಮೀಸಲಾತಿ ಹೆಚ್ಚಳ ಮಾಡಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ 56% ಏರಿಕೆಯಾಗಲಿದೆ. ಮೀಸಲಾತಿ ಹೆಚ್ಚಳದಿಂದ ಎಸ್‌ಟಿ ಸಮುದಾಯಕ್ಕೆ 7%, ಎಸ್ ಸಿ ಸಮುದಾಯಕ್ಕೆ 17% ಮೀಸಲಾತಿ ದಕ್ಕಲಿದೆ.

    ಯಾರು ಯಾವುದರಲ್ಲಿ ಬರುತ್ತಾರೆ?
    ಪ್ರವರ್ಗ 1 – 95 ಜಾತಿಗಳು
    OBC (2ಎ)- 102 ಜಾತಿಗಳು
    2b -ಮುಸ್ಲಿಂ ಸಮುದಾಯ
    3ಎ- ಒಕ್ಕಲಿಗ, ಕೊಡವ, ಬಲಿಜ
    3b- ಲಿಂಗಾಯತ, ಮರಾಠ, ಕ್ರಿಶ್ಚಿಯನ್, ಬಂಟ್ಸ್‌

    Live Tv
    [brid partner=56869869 player=32851 video=960834 autoplay=true]

  • ಎಸ್‍ಟಿ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ರಮೇಶ್ ಜಾರಕಿಹೊಳಿ ಲಾಬಿ

    ಎಸ್‍ಟಿ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ರಮೇಶ್ ಜಾರಕಿಹೊಳಿ ಲಾಬಿ

    ನವದೆಹಲಿ: ಪರಿಶಿಷ್ಟ ಪಂಗಡ (ಎಸ್‍ಟಿ) ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡುಬೇಕು ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೋಳಿ ಹಾಗೂ ಅವರ ತಂಡವು ಒತ್ತಾಯಿಸಿದ್ದಾರೆ.

    ಸೋಮವಾರ ಸಚಿವ ರಮೇಶ್ ಜಾರಕಿಹೋಳಿ, ಪ್ರತಾಪ್ ಗೌಡ ಪಾಟೀಲ್, ರಹೀಂಖಾನ್, ಮಹೇಶ ಕಮತಗಿ, ಬಿ.ನಾಗೇಂದ್ರ ಸೇರಿ ಒಟ್ಟು ಎಂಟು ಜನ ಶಾಸಕರು ದೆಹಲಿಗೆ ತೆರಳಿದ್ದು, ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಹಿರಿಯ ನಾಯಕ ಅಹ್ಮದ್ ಪಟೇಲ್ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಲೋಕಸಭೆ ಚುನಾವಣೆ ದೃಷ್ಟಿಯಿಂದ ಎಸ್‍ಟಿ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡಬೇಕು. ಅದರಲ್ಲೂ ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದರು.

    ಆಷಾಢದ ಬಳಿಕ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿತ್ತು. ಹೀಗಾಗಿ ಅನೇಕ ಕೈ ನಾಯಕರು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ.