Tag: Scheduled Castes

  • ಸಮೀಕ್ಷೆ ಮಾಡದೇ ಜಾತಿಗಣತಿ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಕೇಸ್ – ಮೂವರು BBMP ನೌಕರರು ಅಮಾನತು

    ಸಮೀಕ್ಷೆ ಮಾಡದೇ ಜಾತಿಗಣತಿ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಕೇಸ್ – ಮೂವರು BBMP ನೌಕರರು ಅಮಾನತು

    ಬೆಂಗಳೂರು: ಸಮೀಕ್ಷೆಯನ್ನೇ ಮಾಡದೇ ಜಾತಿಗಣತಿ ಪೂರ್ಣ ಎಂಬ ಸ್ಟಿಕ್ಕರ್ ಅಂಟಿಸಿದ್ದನ್ನು ಮನೆ ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಬಿಬಿಎಂಪಿ (BBMP) ನೌಕರರನ್ನು ಅಮಾನತುಗೊಳಿಸಲಾಗಿದೆ.

    ಈ ಕುರಿತು ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. 2025ರ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಮೂರು ಜನ ಬಿಬಿಎಂಪಿ ನೌಕರರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸಮೀಕ್ಷೆಯನ್ನೇ ಮಾಡದೇ ಜಾತಿಗಣತಿ ಪೂರ್ಣ ಸ್ಟಿಕ್ಕರ್‌ ಅಂಟಿಸಿದ ಬಿಬಿಎಂಪಿ ಸಿಬ್ಬಂದಿ – ಪ್ರಶ್ನಿಸಿದ ಮನೆ ಮಾಲೀಕನ ಮೇಲೆ ಹಲ್ಲೆ

    ಹೆಚ್.ಬಿ.ಆರ್ ಲೇಔಟ್ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕರಾದ ರಮೇಶ್, ಕಂದಾಯ ವಸೂಲಿಗಾರರಾದ ಪೆದ್ದುರಾಜು ಹಾಗೂ ಕೆಂಗೇರಿ ಉಪವಿಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ವಸೂಲಿಗಾರರಾದ ಸಿ.ಸಂದಿಲ್ ಕುಮಾರ್‌ರವರನ್ನು ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

    ಏನಿದು ಘಟನೆ?
    ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರದ 7ನೇ ಕ್ರಾಸ್‌ನಲ್ಲಿರುವ ನಂದೀಶ್ ಎಂಬುವವರ ಮನೆಗೆ ಬಿಬಿಎಂಪಿ ಸಿಬ್ಬಂದಿ ಜಾತಿಗಣತಿ ಪೂರ್ಣಗೊಂಡಿದೆ ಎಂಬ ಸ್ಟಿಕ್ಕರ್ ಅಂಟಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮನೆ ಮಾಲೀಕ ಆರೋಪಿಸಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕನ ಮಗ ಶಶಾಂಕ್, ನಾವು ಎಲ್ಲರೂ ಮನೆ ಒಳಗಡೆ ಇದ್ದೆವು. ಆಗ ಪೌರಕಾರ್ಮಿಕರು ಮನೆಗೆ ಸ್ಟಿಕ್ಕರ್ ಅಂಟಿಸಿದ್ದಾರೆ. ಇದನ್ನು ನಮ್ಮ ತಂದೆ ಪ್ರಶ್ನಿಸಿದ್ದಾರೆ. ಸರ್ವೇ ಮಾಡಿಲ್ಲ, ದಾಖಲೆ ಎಲ್ಲಿ ಅಂತ ಕೇಳಿದೆವು. ಇದಕ್ಕೆ ಸಿಬ್ಬಂದಿ, ಇದು ನನಗೆ ಕೊಟ್ಟಿರೋ ಟಾಸ್ಕ್ ಎಂದಿದ್ದಾರೆ. 1 ಗಂಟೆ ಬಳಿಕ ಮೇಲ್ವಿಚಾರಕರ ಜೊತೆ ಬಂದು, ಅಪ್ಪನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ ಕಾಲಿನಿಂದ ಒದ್ದು, ಕೆನ್ನೆಗೆ ಹೊಡೆದಿದ್ದಾರೆ. ಐಡಿ ಕಾರ್ಡ್ ಸಹ ಅವರು ತಂದಿರಲಿಲ್ಲ ಎಂದು ಆರೋಪಿಸಿದ್ದರು. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಸ್ಟೇಷನ್‌ಗೆ ಅಮ್ಮ, ನಾನು, ತಂದೆ ದೂರು ಕೊಡಲು ಹೋಗಿದ್ದೆವು. ಈ ವೇಳೆ, ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಇದರಿಂದ ದೂರು ಕೊಡದೇ ವಾಪಸ್ ಆಗಿದ್ದೆವು ಎಂದು ತಿಳಿಸಿದ್ದರು.

    ಇದೆಲ್ಲದರ ನಡುವೆ ಮನೆಯ ಸದಸ್ಯರನ್ನು ಮಾತನಾಡಿಸದೇ ಕಾಟಾಚಾರಕ್ಕೆ ಕಂಡ ಕಂಡ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಹೋಗ್ತಿದ್ದಾರೆ. ವಿಪರ್ಯಾಸವೆಂದರೆ ಈ ಸಮೀಕ್ಷೆಗೆ ಪೌರಕಾರ್ಮಿಕರು, ಜಲಮಂಡಳಿಯ ಸಿಬ್ಬಂದಿಗಳನ್ನೂ ಬಳಸಿಕೊಳ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.ಇದನ್ನೂ ಓದಿ: ಅಮ್ಮ, ಸೋದರನಿಗೆ ಡ್ರಗ್ಸ್ ಚಟ – ಬಾಲಕನಿಗೆ ಆಸರೆಯಾಗಿದ್ದು ನಾಯಿಗಳು ಮಾತ್ರ – ಬೊಗಳುವ ಮೂಲಕ ಮಾತ್ರ ಸಂವಹನ!

  • ಎಸ್ಸಿ ಒಳಮೀಸಲಾತಿ ಜಾರಿಗೆ ಸರ್ಕಸ್ – ಹೈಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಆಯೋಗ

    ಎಸ್ಸಿ ಒಳಮೀಸಲಾತಿ ಜಾರಿಗೆ ಸರ್ಕಸ್ – ಹೈಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಆಯೋಗ

    – 3 ತಿಂಗಳಲ್ಲಿ ವರದಿ ಕೊಡಲು ಸರ್ಕಾರದ ಸೂಚನೆ

    ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನೇಮಿಸಲು ಸರ್ಕಾರ ಮುಂದಾಗಿದೆ.

    ಈ ಸಮಿತಿ 3 ತಿಂಗಳಲ್ಲಿ ವರದಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಅಂತ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ. ಅಲ್ಲದೇ, ಇಂದಿನಿಂದ ಯಾವುದೇ ನೇಮಕಾತಿ ನೋಟಿಫಿಕೇಷನ್ ಆದರೂ ಆಯೋಗದ ವರದಿ ಆಧರಿಸಿ ಮುಂದಿನ ತೀರ್ಮಾನ ಇರುತ್ತೆ ಅಂದಿದ್ದಾರೆ. ಇದನ್ನೂ ಓದಿ: ಮುಡಾ ಹಗರಣದಲ್ಲಿ ಮುಂದುವರಿದ ಇಡಿ ಬೇಟೆ – ಸಿಎಂ ಆಪ್ತ, ಬಿಲ್ಡರ್, ಮಾಜಿ ಆಯುಕ್ತರಿಗೂ ಶಾಕ್; ದಿನವಿಡೀ ಶೋಧ!

    ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿ, ಸದಾಶಿವ ಆಯೋಗದ ವರದಿಯನ್ನು 2022ರಲ್ಲಿಯೇ ಬಿಜೆಪಿ ತಿರಸ್ಕಾರ ಮಾಡಿತ್ತು. ಚಿತ್ರದುರ್ಗದಲ್ಲಿ ಸಮಾವೇಶದಲ್ಲಿ ಒಳ ಮೀಸಲಾತಿ ಮಾಡ್ತೇವೆ ಅಂತ ಕೊಟ್ಟಿರುವ ಭರವಸೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ದಲಿತ ಪಂಗಡಗಳ ಬಲ-ಎಡ, ಬೋವಿ-ಲಂಬಾಣಿ ಸಮಾಜದ ಎಲ್ಲರೂ ಚರ್ಚೆ ಮಾಡಿದ್ದೇವೆ. ತೆಲಂಗಾಣ ಮಾದರಿ ಅನುಸರಿಸ್ತೇವೆ ಅಂದಿದ್ದಾರೆ. ಈ ಮಧ್ಯೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರೋ ಬಿಜೆಪಿ, ಒಳಮೀಸಲಾತಿ ಜಾರಿ ಮಾಡದಿದ್ದರೆ ಕಾಂಗ್ರೆಸ್ ಸಚಿವರು, ಶಾಸಕರನ್ನು ಜನ ಬೀದಿಯಲ್ಲಿ ಓಡಾಡೋದಿಕ್ಕೆ ಬಿಡಲ್ಲ ಅಂತ ಎಚ್ಚರಿಸಿದ್ರು. ಇದನ್ನೂ ಓದಿ: 12,850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಮೋದಿ ಚಾಲನೆ

  • SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    – ನಾಗಮೋಹನ್ ದಾಸ್ ವರದಿ ಜಾರಿಗೆ ಸರ್ಕಾರದ ಅಸ್ತು
    – ಶನಿವಾರ ಸರ್ಕಾರದಿಂದ ಅಧಿಕೃತ ಆದೇಶ

    ಬೆಂಗಳೂರು: ಬಹು ವರ್ಷಗಳ ಪರಿಶಿಷ್ಟ ಜಾತಿ(Scheduled Castes) ಮತ್ತು ಪರಿಶಿಷ್ಟ ಪಂಗಡಗಳ(Scheduled Tribes) ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಇಂದು ಮೀಸಲಾತಿ(Reservation) ಹೆಚ್ಚಳ ಸಂಬಂಧ ಸಿಎಂ ಬೊಮ್ಮಾಯಿ(CM Basavaraj Bommai) ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆಯಿತು. ಸಭೆಯಲ್ಲಿ ಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್ ದಾಸ್(Justice Nagamohan Das) ನೀಡಿರುವ ವರದಿ ಯಥಾವತ್ತಾಗಿ ಜಾರಿಗೆ ಒಮ್ಮತದ ಅಭಿಪ್ರಾಯ ಮೂಡಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದು, ನಾಳೆಯ ಕ್ಯಾಬಿನೆಟ್ ನಲ್ಲಿ ವಿಷಯ ಮಂಡಿಸಿ ಅಧಿಕೃತ ಆದೇಶ ಹೊರಡಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.

    ಸದ್ಯ ಪರಿಶಿಷ್ಟ ಜಾತಿಗೆ 15% ಮತ್ತು ಪರಿಶಿಷ್ಟ ಪಂಗಡಕ್ಕೆ 3% ಮೀಸಲಾತಿ ಇತ್ತು. ನ್ಯಾ.ನಾಗಮೋಹನ್ ದಾಸ್ ಸಮಿತಿ ಜನಸಂಖ್ಯೆ ಆಧಾರದಲ್ಲಿ ಎಸ್‌ಸಿ ಮೀಸಲಾತಿ 15% ನಿಂದ 17%ಗೆ ಹಾಗೂ ಎಸ್‌ಟಿ ಮೀಸಲಾತಿ 3% ನಿಂದ 7%ಗೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇವತ್ತಿನ ಸರ್ವ ಪಕ್ಷಗಳ ಸಭೆಯಲ್ಲಿ ವರದಿ ಜಾರಿಗೆ ಎಲ್ಲಾ ಪಕ್ಷಗಳು ಒಪ್ಪಿಗೆ ನೀಡಿದ್ದು, ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ

    ಸಿದ್ದರಾಮಯ್ಯ(Siddaramaiah) ಮಾತನಾಡಿ, ಸರ್ಕಾರ ಕೂಡಲೇ ಅಧಿವೇಶನ ಕರೆದು ಮೀಸಲಾತಿ ಹೆಚ್ಚಳ ನಿರ್ಣಯ ಅಂಗೀಕಾರ ಮಾಡಬೇಕು. 9ನೇ ಅನುಚ್ಛೇದಕ್ಕೆ ಇದನ್ನ ಸೇರ್ಪಡೆ ಮಾಡಲು ಕೇಂದ್ರದ ಮೇಲೆ ಒತ್ತಾಯ ತರಬೇಕು ಅಂತ ಆಗ್ರಹ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಶೀಘ್ರವೇ ಮೀಸಲಾತಿ ಪ್ರಕ್ರಿಯೆ ಮುಗಿಸಿ ಅಂತ ಒತ್ತಾಯ ಮಾಡಿದರು.

    ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಬಳಿಕ ಒಬಿಸಿ ಮೀಸಲಾತಿ ಕಡಿಮೆ ಆಗುತ್ತದೆ ಎಂಬ ಆತಂಕವನ್ನು ಕೂಡಾ ಸರ್ಕಾರ ನಿವಾರಣೆ ಮಾಡಿದೆ. ಯಾವುದೇ ಕಾರಣಕ್ಕೂ ಈಗ ಇರುವ 50% ಮೀಸಲಾತಿಯಲ್ಲಿ 1% ಕೂಡಾ ಬದಲಾವಣೆ ಮಾಡೋದಿಲ್ಲ ಅಂತ ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿ ಮೀಸಲಾತಿ ಹೆಚ್ಚಳ ಸಂಬಂಧ ಕಾನೂನು ಪ್ರಕ್ರಿಯೆ ನಡೆಸುತ್ತೇವೆ. ಮುಂದಿನ ಅಧಿವೇಶನದಲ್ಲೆ ಕಾನೂನು ತಿದ್ದುಪಡಿ ಮಾಡುತ್ತೇವೆ ಎಂದರು.

    ಸರ್ವ ಪಕ್ಷಗಳ ಸಭೆಗೂ ಮುನ್ನ ಬಿಜೆಪಿ ಕಾರ್ಯಕಾರಣಿಯಲ್ಲೂ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಮೀಸಲಾತಿ ಹೆಚ್ಚಳ ಸಂಬಂಧ ಬಿಜೆಪಿ ಹೈಕಮಾಂಡ್ ಕೂಡಾ ಸಿಎಂ ಬೊಮ್ಮಾಯಿ ಅವರಿಗೆ ರಾತ್ರಿಯೇ ಸಂದೇಶ ರವಾನೆ ಮಾಡಿ, ಕಾಂಗ್ರೆಸ್ ನ ರಾಜಕೀಯ ತಂತ್ರಕ್ಕೆ ಪ್ರತಿತಂತ್ರದ ಮಾಸ್ಟರ್ ಸ್ಟ್ರೋಕ್ ನೀಡಿತ್ತು.

    ಹಾಲಿ ಮೀಸಲಾತಿ ಎಷ್ಟಿದೆ?
    ಎಸ್‌ಸಿ- 15%
    ಹಿಂದುಳಿದ ವರ್ಗ 2 ಎ- 15%
    ಪ್ರವರ್ಗ 1- 4%
    2ಬಿ – 4%
    3ಎ- 4%
    3ಬಿ- 5%
    ಎಸ್ ಟಿ- 3%
    ಒಟ್ಟು ಮೀಸಲಾತಿ ಪ್ರಮಾಣ: 50%

    ಎಷ್ಟು ಏರಿಕೆ ಆಗುತ್ತೆ?
    ಈಗ ಎಸ್ ಟಿಗೆ 4%, ಎಸ್‌ಸಿ 2% ಮೀಸಲಾತಿ ಹೆಚ್ಚಳ ಮಾಡಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ 56% ಏರಿಕೆಯಾಗಲಿದೆ. ಮೀಸಲಾತಿ ಹೆಚ್ಚಳದಿಂದ ಎಸ್‌ಟಿ ಸಮುದಾಯಕ್ಕೆ 7%, ಎಸ್ ಸಿ ಸಮುದಾಯಕ್ಕೆ 17% ಮೀಸಲಾತಿ ದಕ್ಕಲಿದೆ.

    ಯಾರು ಯಾವುದರಲ್ಲಿ ಬರುತ್ತಾರೆ?
    ಪ್ರವರ್ಗ 1 – 95 ಜಾತಿಗಳು
    OBC (2ಎ)- 102 ಜಾತಿಗಳು
    2b -ಮುಸ್ಲಿಂ ಸಮುದಾಯ
    3ಎ- ಒಕ್ಕಲಿಗ, ಕೊಡವ, ಬಲಿಜ
    3b- ಲಿಂಗಾಯತ, ಮರಾಠ, ಕ್ರಿಶ್ಚಿಯನ್, ಬಂಟ್ಸ್‌

    Live Tv
    [brid partner=56869869 player=32851 video=960834 autoplay=true]