Tag: Scarf

  • ಕಾಫಿನಾಡಲ್ಲಿ ಸ್ಕಾರ್ಫ್, ಕೇಸರಿ ಶಲ್ಯ ವಿವಾದ – ಪೋಷಕರ ಸಭೆಯಲ್ಲಿ ಇತ್ಯರ್ಥ

    ಕಾಫಿನಾಡಲ್ಲಿ ಸ್ಕಾರ್ಫ್, ಕೇಸರಿ ಶಲ್ಯ ವಿವಾದ – ಪೋಷಕರ ಸಭೆಯಲ್ಲಿ ಇತ್ಯರ್ಥ

    ಚಿಕ್ಕಮಗಳೂರು: ಕಳೆದ ಎಂಟತ್ತು ದಿನಗಳಿಂದ ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಲೆದೂರಿದ್ದ ಕೇಸರಿ ಶಲ್ಯ ಹಾಗೂ ಸ್ಕಾರ್ಫ್ ವಿವಾದಕ್ಕೆ ಶಾಂತಿಯುತ ತೆರೆಬಿದ್ದಿದೆ.

    ಕಾಲೇಜಿನ ಪ್ರಾಂಶುಪಾಲರು ಸೋಮವಾರ ಕಾಲೇಜಿನಲ್ಲಿ ಪೋಷಕರ ಸಭೆ ಕರೆದಿದ್ದರು. ಪೋಷಕರ ಸಭೆಯಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ತರಗತಿಯ ಒಳಗೆ ಸ್ಕಾರ್ಫ್ ಧರಿಸುವಂತಿಲ್ಲ, ತಲೆಯ ಮೇಲೆ ವೇಲ್ ಹಾಕಿಕೊಳ್ಳಲು ಅಷ್ಟೇ ಅವಕಾಶ. ವೇಲ್‌ನ್ನು ಪಿನ್‌ಗಳಿಂದ ಸುತ್ತಿ ಕಟ್ಟುವಂತಿಲ್ಲ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.

    ಪೋಷಕರ ಸಭೆಯಲ್ಲಿ ಪ್ರಾಂಶುಪಾಲ ಅನಂತ್ ಮಾತನಾಡಿ, 2018ರಲ್ಲೂ ಇದೇ ವಿವಾದ ತಲೆದೂರಿತ್ತು. ಆಗ ಅಂದಿನ ಸಭೆಯಲ್ಲಿ ತಲೆಯ ಮೇಲೆ ವೇಲ್ ಮಾತ್ರ ಹಾಕಿಕೊಳ್ಳಲು ಅವಕಾಶವಿದೆ ಎಂದು ಅಂದಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಬಾರಿಯೂ ಮತ್ತದೆ ಸಮಸ್ಯೆ ಎದುರಾಗಿದೆ. ಹಾಗಾಗಿ, ಈ ಸಲ ತಮ್ಮೆಲ್ಲರ ಅಭಿಪ್ರಾಯ ಪಡೆದು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.

    ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು ಕ್ರಮ ಉಲ್ಲಂಘಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು. ಯಾವ ವಿದ್ಯಾರ್ಥಿಯಾದರು ಇಂದಿನ ತೀರ್ಮಾನಗಳಿಗೆ ತದ್ವಿರುದ್ಧವಾಗಿ ನಡೆದುಕೊಂಡರೇ ಪೋಷಕರನ್ನು ಕರೆಸಿ ವರ್ಗಾವಣೆ ಪತ್ರ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ:  ಸ್ಕಾರ್ಫ್ ವಿವಾದ, ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ವಿದ್ಯಾರ್ಥಿಗಳು

    ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ರಾಜೇಗೌಡ, ವಿದ್ಯಾರ್ಥಿಗಳು ಕಲಿಕೆಗೆ ಅಷ್ಟೇ ಆದ್ಯತೆ ನೀಡಬೇಕು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು. ಕಾಲೇಜಿನಲ್ಲಿ ಭಾವನೆಗಳನ್ನ ಕೆರಳಿಸುವ ಕೆಲಸ ಆಗಬಾರದು ಎಂದರು. ಇದನ್ನೂ ಓದಿ:  ಕಾಫಿನಾಡಿನ ಎರಡು ವಸತಿ ಶಾಲೆಯ 55 ಮಕ್ಕಳಿಗೆ ಕೊರೊನಾ

    ಅನ್ಯ ಕೋಮಿನ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರುವುದರಿಂದ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಕೇಸರಿ ಶಲ್ಯ ಹಾಕಿಕೊಂಡು ಬರುತ್ತಿದ್ದರು. ಕಳೆದೊಂದು ವಾರದ ಹಿಂದೆ ಸ್ಕಾರ್ಫ್ ವಿರುದ್ಧ ವಿದ್ಯಾರ್ಥಿಗಳು ಸ್ಕಾರ್ಫ್ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದರು. ಇಂದು ಕಾಲೇಜಿನ ಪ್ರಾಚಾರ್ಯರು ಪೋಷಕರು ಸಭೆ ಕರೆದು ಈ ನಿರ್ಧಾರಕ್ಕೆ ಬಂದಿದ್ದಾರೆ.

  • ಸ್ಕಾರ್ಫ್ ವಿವಾದ, ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ವಿದ್ಯಾರ್ಥಿಗಳು

    ಸ್ಕಾರ್ಫ್ ವಿವಾದ, ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ವಿದ್ಯಾರ್ಥಿಗಳು

    ಚಿಕ್ಕಮಗಳೂರು: ಅನ್ಯ ಕೋಮಿನ ವಿದ್ಯಾರ್ಥಿಗಳು ಕಾಲೇಜಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ವಿರೋಧಿಸಿದ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

    ಈ ಕಾಲೇಜಿನಲ್ಲಿ ಈ ರೀತಿ ಶಲ್ಯ-ಸ್ಕಾರ್ಫ್ ವಿವಾದ ಇದೇ ಮೊದಲಲ್ಲ. ಕಳೆದ ಮೂರು ವರ್ಷಗಳ ಹಿಂದೆಯೂ ಬಾಳಗಡಿ ಕಾಲೇಜಿನಲ್ಲಿ ಸ್ಕಾರ್ಫ್ ವರ್ಸಸ್ ಕೇಸರಿ ಶಲ್ಯ ವಿವಾದ ತಲೆದೂರಿತ್ತು. ಆಗ ಪೋಷಕರು ಹಾಗೂ ಪ್ರಾಂಶುಪಾಲರು ಸಭೆ ನಡೆಸಿ ವಿವಾದವನ್ನು ತಿಳಿಗೊಳಿಸಿದ್ದರು. ಆದರೆ, ಈಗ ಮತ್ತೆ ಕಾಲೇಜಿನಲ್ಲಿ ಸ್ಕಾರ್ಫ್ ವಿರುದ್ಧ ಕೇಸರಿ ಶಲ್ಯದ ಅಭಿಯಾನ ಆರಂಭವಾಗಿದೆ. ಈ ವಿವಾದ ಮತ್ತೆ ಇನ್ನೆಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಇದನ್ನೂ ಓದಿ: ಹಿಜಬ್ ಹೋರಾಟ ನಿಲ್ಲಿಸಿ – ಕೇಸರಿ ರುಮಾಲು, ಸ್ಲೀವ್ ಲೆಸ್, ಜೀನ್ಸ್ ಬಂದ್ರೆ ನಾವು ಜವಾಬ್ದಾರರಲ್ಲ: ರಘುಪತಿ ಭಟ್

    ವಿದ್ಯಾರ್ಥಿಗಳ ಈ ನಡೆ ದೊಡ್ಡದಾಗುವ ಮುನ್ನ ಬಗೆಹರಿಸಬೇಕಾದ ಜವಾಬ್ದಾರಿ ಕಾಲೇಜು ಆಡಳಿತ ವರ್ಗದ್ದಾಗಿದೆ. ಆದರೆ, ಕಾಲೇಜು ಆಡಳಿತ ಮಂಡಳಿ ಏನು ಮಾಡುತ್ತೋ ಕಾದು ನೋಡಬೇಕು. ಆದರೆ, ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಯಸ್ಸಲ್ಲಿ ವಿದ್ಯಾರ್ಥಿಗಳ ನಡೆ ಸರಿಯಲ್ಲ ಎಂಬ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಈ ಮಧ್ಯೆ ಶಾಲಾ-ಕಾಲೇಜುಗಲು ಜ್ಞಾನದ ದೇಗುಲ. ಇಲ್ಲಿ ಜಾತಿ-ಧರ್ಮ ಇರುವುದಿಲ್ಲ. ಎಲ್ಲರೂ ಒಂದೇ ಎಂಬ ಮಾತುಗಳು ಕೇಳಿ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ

  • ಸ್ಕಾರ್ಫ್ ಹಾಕಿದ್ರೆ ಪ್ರವೇಶ ಇಲ್ಲ – ಮಂಗ್ಳೂರು ಕಾಲೇಜಿನಲ್ಲಿ ಮತ್ತೆ ವಿವಾದ

    ಸ್ಕಾರ್ಫ್ ಹಾಕಿದ್ರೆ ಪ್ರವೇಶ ಇಲ್ಲ – ಮಂಗ್ಳೂರು ಕಾಲೇಜಿನಲ್ಲಿ ಮತ್ತೆ ವಿವಾದ

    ಮಂಗಳೂರು: ದಕ್ಷಿಣ ಜಿಲ್ಲೆಯಲ್ಲಿ ಮತ್ತೆ ಸ್ಕಾರ್ಫ್ ವಿವಾದ ಕೇಳಿ ಬಂದಿದೆ. ಮಂಗಳೂರು ನಗರದ ಸಂತ ಆಗ್ನೆಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಮುಖಕ್ಕೆ ಸ್ಕಾರ್ಫ್ ಹಾಕುತ್ತಾಳೆಂದು ದ್ವಿತೀಯ ಪಿಯುಸಿಗೆ ಪ್ರವೇಶ ನಿರಾಕರಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

    ಕಾಲೇಜಿನ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿನಿ ಫಾತಿಮಾ ಫಾಜಿಲಾ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಫಾತಿಮಾ ಕಳೆದ ಒಂದು ವರ್ಷದಿಂದ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ದ್ವಿತೀಯ ಪಿಯುಸಿಗೆ ಅಡ್ಮಿಶನ್ ಮಾಡುವಾಗ ಪ್ರಿನ್ಸಿಪಾಲರು ಪ್ರವೇಶ ನಿರಾಕರಿಸಿದ್ದಾರೆ.

    ಕಾಲೇಜಿನಲ್ಲಿ ಯೂನಿಫಾರ್ಮ್ ಇದ್ದು, ಮುಖಕ್ಕೆ ಸ್ಕಾರ್ಫ್ ಹಾಕಿ ತರಗತಿಗೆ ಬರುವಂತಿಲ್ಲ ಎಂಬ ನಿಯಮ ಇದೆ. ಈ ವಿಚಾರ ಕಳೆದ ವರ್ಷವೂ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ನಿಯಮ ಪಾಲನೆ ಮಾಡಿದ್ದರು.

    ವಿದ್ಯಾರ್ಥಿನಿಯರು ನಿಯಮ ಪಾಲನೆ ಮಾಡಿದ್ದರೂ ಫಾತಿಮಾ ಮಾತ್ರ ಮುಖ ಹೊರತುಪಡಿಸಿ ಸ್ಕಾರ್ಫ್ ಹಾಕಿಯೇ ತರಗತಿಗೆ ಬಂದಿದ್ದಳು. ಇದೀಗ ತನ್ನ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯೆಂದು ಫಾತಿಮಾ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾಳೆ.