Tag: Scanning center

  • ಮಂಡ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾ

    ಮಂಡ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾ

    ಮಂಡ್ಯ: ಸಕ್ಕರೆ ನಾಡಿನಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೀಗ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಅಲರ್ಟ್ ಆಗಿದೆ. ಸ್ಕ್ಯಾನಿಂಗ್ ಸೆಂಟರ್‌ಗಳಿಗೆ (Scanning Center) ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ, ಡಿಹೆಚ್‌ಒ ಡಾ. ಮೋಹನ್ ತಂಡ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.

    ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಭ್ರೂಣ ಲಿಂಗ ಪತ್ತೆಯಾಗುತ್ತಿದೆಯಾ? ಅನುಮತಿ ಪಡೆದು ಸ್ಕ್ಯಾನಿಂಗ್ ಸೆಂಟರ್ ನಡೆಸಲಾಗುತ್ತಿದೆಯಾ? ಅಲ್ಲದೇ ಸೆಂಟರ್‌ನಲ್ಲಿ ತಜ್ಞ ವೈದ್ಯರು, ರೇಡಿಯಾಲಿಜಿಸ್ಟ್ ಕರ್ತವ್ಯ ನಿರ್ವಹಿಸುತ್ತಿದ್ದಾರಾ? ಎಂದು ಪರಿಶೀಲನೆ ಮಾಡುತ್ತಿದ್ದು, ನಿಯಮ ಮೀರಿದ ಸ್ಕ್ಯಾನಿಂಗ್ ಸೆಂಟರ್‌ಗೆ ಬೀಗ ಹಾಕುತ್ತಿದ್ದಾರೆ. ಇದನ್ನೂ ಓದಿ: ಮೋರಿಯಲ್ಲಿ ಮಗುವಿನ ಮೃತದೇಹ ಪತ್ತೆ ಪ್ರಕರಣ – ಅಂತ್ಯಸಂಸ್ಕಾರಕ್ಕೆ ದಿಕ್ಕು ತೋಚದೇ ಬಿಟ್ಟುಹೋಗಿದ್ದ ಪೋಷಕರು

    ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದು, ವರ್ಷದಲ್ಲಿ 3 ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಭ್ರೂಣ ಲಿಂಗ ಪತ್ತೆ ಪ್ರಕರಣ ಬೆಳಕಿಗೆ ಬಂದ ಬಳಿಕ ಮಂಡ್ಯ ಜಿಲ್ಲೆಯ 55 ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ನಿಯಮ ಮೀರಿ ಭ್ರೂಣ ಲಿಂಗ ಪತ್ತೆ ಮಾಡಿದರೆ, ಅನುಮತಿ ಇಲ್ಲದೆ, ತಜ್ಞರಿಲ್ಲದೆ ಸ್ಕ್ಯಾನಿಂಗ್ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

    
    
  • ಪತ್ನಿಯನ್ನು ಸ್ಕ್ಯಾನ್ ಮಾಡಲು 15 ನಿಮಿಷ ತೆಗೆದುಕೊಂಡಿದ್ದಕ್ಕೆ ಸಂಶಯಪಟ್ಟು ಹತ್ಯೆಗೆ ಸುಪಾರಿ ಕೊಟ್ಟ ಪತಿ

    ಪತ್ನಿಯನ್ನು ಸ್ಕ್ಯಾನ್ ಮಾಡಲು 15 ನಿಮಿಷ ತೆಗೆದುಕೊಂಡಿದ್ದಕ್ಕೆ ಸಂಶಯಪಟ್ಟು ಹತ್ಯೆಗೆ ಸುಪಾರಿ ಕೊಟ್ಟ ಪತಿ

    ಯಾದಗಿರಿ: ಹೆಂಡತಿಯನ್ನು (Wife) ಆರೋಗ್ಯ ತಪಾಸಣೆಗಾಗಿ ಸ್ಕ್ಯಾನಿಂಗ್ ಸೆಂಟರ್‌ಗೆ (Scanning Center) ಕರೆದುಕೊಂಡು ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ಮೇಲೆ ಸಂಶಯಪಟ್ಟ ಪತಿ (Husband) ಆತನ ಹತ್ಯೆಗೆ ಸುಪಾರಿ ನೀಡಿದ್ದ. ಆದರೆ ಹತ್ಯೆಗೂ ಮುನ್ನವೇ ಸುಪಾರಿ ಪಡೆದಿದ್ದಾತನೊಂದಿಗೆ ಪತಿಯೂ ಸಹ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಯಾದಗಿರಿ (Yadgiri) ನಗರ ಪೊಲೀಸ್ ಠಾಣೆಯ ಪೊಲೀಸರು ಎಚ್ಚೆತ್ತುಕೊಂಡು ಕೊಲೆಗೆ ಹೊಂಚು ಹಾಕಿ ಕುಳಿತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಇದರಿಂದ ಯಾದಗಿರಿ ನಗರ ಪೊಲೀಸ್ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ನೇತೃತ್ವದ ತಂಡ ಓರ್ವನ ಪ್ರಾಣ ಕಾಪಾಡಿದಂತಾಗಿದೆ.

    ಯಾದಗಿರಿ ತಾಲೂಕಿನ ಮುದ್ನಾಳ್ ತಾಂಡಾ ಗ್ರಾಮದ ನಾನ್ಯಾ ನಾಯಕ್ ಕಳೆದ 8 ತಿಂಗಳ ಹಿಂದೆ ತನ್ನ ಹೆಂಡತಿಯನ್ನು ತಪಾಸಣೆಗಾಗಿ ಯಾದಗಿರಿ ನಗರದ ಶಿವಸಾಯಿ ಸ್ಕ್ಯಾನ್ ಸೆಂಟರ್‌ಗೆ ಕರೆದುಕೊಂಡು ಹೋಗಿದ್ದ. ಸ್ಕ್ಯಾನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ನಾನ್ಯಾ ನಾಯಕನ ಹೆಂಡತಿಯನ್ನು 15 ನಿಮಿಷಗಳ ಕಾಲ ತಪಾಸಣೆ ಮಾಡಿದ್ದಾನೆ. ಇದರಿಂದ ನಾಯಕ್ ತನ್ನ ಹೆಂಡತಿ ಇಷ್ಟು ಸಮಯ ಒಳಗಡೆ ಇರುವುದಕ್ಕೆ ಸುರೇಶ್‌ನ ಮೇಲೆ ಸಂಶಯ ಪಟ್ಟಿದ್ದಾನೆ. ಇದೇ ಕಾರಣಕ್ಕೆ ಸುರೇಶ್‌ನನ್ನು ಕೊಲ್ಲಲು ಕಳೆದ 8 ತಿಂಗಳಿಂದ ಪರಿತಪಿಸುತ್ತಿದ್ದ.

    ನಾನ್ಯಾ ನಾಯಕ್ ಬೆಂಗಳೂರಿನಲ್ಲಿದ್ದ ತನ್ನ ಪರಿಚಯಸ್ಥನಿಗೆ ಸ್ಕ್ಯಾನ್ ಸೆಂಟರ್‌ನಲ್ಲಿ ಕೆಲಸ ಮಾಡುವ ಸುರೇಶ್‌ನ ಹತ್ಯೆಗೆ 50 ಸಾವಿರ ರೂ. ಹಣ ಹಾಗೂ ಬಂಗಾರದ ಉಂಗುರ ನೀಡಿದ್ದ. ಅದರಂತೆ ಸುಪಾರಿ ಪಡೆದಿದ್ದಾತ ಪುಣೆಯಲ್ಲಿ ಕಂಟ್ರಿ ಪಿಸ್ತೂಲ್, ಚಾಕು, ಪಂಚ್ ಖರೀದಿಸಿ ಸುರೇಶ್‌ನನ್ನು ಹತ್ಯೆ ಮಾಡಲು ಏಪ್ರಿಲ್ 20ರಂದು ಯಾದಗಿರಿ ನಗರದ ಲಾಡ್ಜ್ ಒಂದರಲ್ಲಿ ಹೊಂಚು ಹಾಕಿ ಕುಳಿತಿದ್ದ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ಸೀರಿಯಲ್‌ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ

    ಚುನಾವಣೆ ಹಿನ್ನೆಲೆ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಯಾದಗಿರಿ ಗ್ರಾಮೀಣ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ಸಿಬ್ಬಂದಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತ ತೊದಲುತ್ತಿದ್ದುದನ್ನು ಗಮನಿಸಿದ ಪಿಎಸ್‌ಐ ಆತ ಉಳಿದುಕೊಂಡಿದ್ದ ಲಾಡ್ಜ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ.

    ಈ ವೇಳೆ ಆತನ ರೂಮ್‌ನಲ್ಲಿ ಕಂಟ್ರಿ ಪಿಸ್ತೂಲ್, 3 ಜೀವಂತ ಗುಂಡುಗಳು, ಬಟನ್ ಚಾಕು, ಪಂಚ್ ಪತ್ತೆಯಾಗಿವೆ. ಇದನ್ನು ವಶಪಡಿಸಿಕೊಂಡು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಸುಪಾರಿ ನೀಡಿದ ನಾನ್ಯಾ ನಾಯಕ್‌ನನ್ನು ಹಾಗೂ ಹತ್ಯೆಗೆ ಸುಪಾರಿ ಪಡೆದವನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: 2 ಲಾರಿಗಳ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ಯಾದಗಿರಿ ವಿಭಾಗದ ಡಿವೈಎಸ್‌ಪಿ ಬಸವೇಶ್ವರ, ನಗರ ಠಾಣೆ ಸಿಪಿಐ ಸುನೀಲ್ ಮೂಲಿಮನಿ, ಪಿಎಸ್‌ಐ ದೇವಿಂದ್ರ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡದಕ್ಕೆ ಯಾದಗಿರಿ ಎಸ್‌ಪಿ ಡಾ. ಸಿಬಿ ವೇದಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

  • ಅ.28 ರಂದು ಧಾರವಾಡ ಜಿಲ್ಲಾದ್ಯಂತ  ಸ್ಕ್ಯಾನಿಂಗ್‌, ಝೆರಾಕ್ಸ್‌ ಸೆಂಟರ್‌ ಬಂದ್‌

    ಅ.28 ರಂದು ಧಾರವಾಡ ಜಿಲ್ಲಾದ್ಯಂತ ಸ್ಕ್ಯಾನಿಂಗ್‌, ಝೆರಾಕ್ಸ್‌ ಸೆಂಟರ್‌ ಬಂದ್‌

    ಧಾರವಾಡ: ಅ. 27ರ ಸಂಜೆ 5 ಗಂಟೆಯಿಂದ ಅ. 28ರ ಸಂಜೆ 5 ಗಂಟೆಯವರೆಗೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸ್ಕ್ಯಾನಿಂಗ್, ಝೆರಾಕ್ಸ್ ಹಾಗೂ ಕಂಪ್ಯೂಟರ್ ಕೇಂದ್ರಗಳು ಬಂದ್‌ ಆಗಲಿವೆ.

    ಅ.28 ರಂದು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆ ನಡೆಸುವ ಉದ್ದೇಶದಿಂದ ಅ. 27ರ ಸಂಜೆ 5 ಗಂಟೆಯಿಂದ ಅ. 28ರ ಸಂಜೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ಸ್ಕ್ಯಾನಿಂಗ್, ಝೆರಾಕ್ಸ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳು ಚುನಾವಣಾ ಅವಧಿಯಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ.

    ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಅನ್ವಯ ಈ ಆದೇಶ ಹೊರಡಿಸಲಾಗಿದೆ. ಆದೇಶ ಉಲ್ಲಂಘಿಸುವ ಇಂತಹ ಕೇಂದ್ರಗಳ ಮಾಲೀಕರು ಯಾವುದೇ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

    ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಸಿದ್ದಲಿಂಗಪ್ಪ ವಿ.ಸಂಕನೂರ, ಕಾಂಗ್ರೆಸ್‌ನಿಂದ ಆರ್. ಎಂ.ಕುಬೇರಪ್ಪ, ಜೆಡಿಎಸ್‌ನಿಂದ ಶಿವಶಂಕರ ಚನ್ನಪ್ಪ ಕಲ್ಲೂರ ಕಣದಲ್ಲಿದ್ದಾರೆ.