Tag: scam

  • ನಾನು ಭಾರತಕ್ಕೆ ಬರಲ್ಲ – ವಂಚಕ ನೀರವ್ ಮೋದಿ

    ನಾನು ಭಾರತಕ್ಕೆ ಬರಲ್ಲ – ವಂಚಕ ನೀರವ್ ಮೋದಿ

    ನವದೆಹಲಿ: ಭಾರತಕ್ಕೆ ಬಂದರೆ ನನ್ನ ಕಕ್ಷಿದಾರರ ಜೀವಕ್ಕೆ ಅಪಾಯವಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ವಕೀಲರು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.

    ಒಂದು ವೇಳೆ ನಾನು ಭಾರತಕ್ಕೆ ಬಂದರೆ ಜೀವಕ್ಕೆ ಅಪಾಯವಿದೆ. ಕೊಲೆ ಬೆದರಿಕೆ ಕೇಳಿಬಂದಿದೆ. ಇದರಿಂದಾಗಿ ನಾನು ಭಾರತಕ್ಕೆ ಬರುವುದಿಲ್ಲ ಅಂತಾ ನೀರವ್ ಮೋದಿ ತಿಳಿಸಿದ್ದಾರೆ ಎಂದು ವಕೀಲ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ: ನೀರವ್ ಮೋದಿಯ ಹಾಂಗ್​ಕಾಂಗ್​ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ

    ಇಡಿ ಅಧಿಕಾರಿಗಳು ನೀರವ್ ಕಂಪನಿ, ಆಸ್ತಿಯನ್ನು ವಶಕ್ಕೆ ಪಡೆದಿದ್ದರಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ನೀರವ್ ಬಾಡಿಗೆ ಪಡೆದಿದ್ದ ಜಾಗದ ಮಾಲೀಕರಿಗೆ ಹಣ ಪಾವತಿಸಿಲ್ಲ, ವಜ್ರಾಭರಣಕ್ಕಾಗಿ ಮುಂಗಡ ಹಣ ನೀಡಿದ್ದವರು ತಮ್ಮ ಹಣವನ್ನು ಮರಳಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಪ್ರಾಣ ಬೆದರಿಕೆ ಇರುವ ಕಾರಣ ನೀರವ್ ಮೋದಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿದ್ದಾರೆ. ಇದನ್ನು ಓದಿ: ನೀರವ್ ಮೋದಿಗೆ ಇಡಿ ಶಾಕ್- 637 ಕೋಟಿ ರೂ. ಆಸ್ತಿ ಮುಟ್ಟುಗೋಲು

    ಏನಿದು ಪ್ರಕರಣ?:
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪರಾರಿಯಾಗಿದ್ದಾರೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು. ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ವಶಕ್ಕೆ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೆಪಿಎಸ್‍ಸಿ ನೇಮಕಾತಿಯಲ್ಲಿ ಮತ್ತೊಂದು ಹಗರಣ ಬಯಲು- ಕಲಬುರಗಿಯಲ್ಲಿ ಇಬ್ಬರ ಬಂಧನ

    ಕೆಪಿಎಸ್‍ಸಿ ನೇಮಕಾತಿಯಲ್ಲಿ ಮತ್ತೊಂದು ಹಗರಣ ಬಯಲು- ಕಲಬುರಗಿಯಲ್ಲಿ ಇಬ್ಬರ ಬಂಧನ

    ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗ ನಡೆಸ್ತಿರೋ ನೇಮಕಾತಿಯಲ್ಲಿ ಬೃಹತ್ ಹಗರಣ ಬಯಲಾಗಿದ್ದು, ಕಲಬುರಗಿ ಪೊಲೀಸರು ಬೇಟೆ ಶುರು ಹಚ್ಕೊಂಡಿದ್ದಾರೆ.

    ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಚಂದ್ರಕಾಂತ್ ಮತ್ತು ಭೀಮರಾಯ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಅವರ ದೂರವಾಣಿ ಕರೆ ಸೇರಿದಂತೆ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸ್ತಿದ್ದಾರೆ. ಕಲಬುರಗಿ ಮಾತ್ರವಲ್ಲದೇ ವಿಜಯಪುರ, ಶಿವಮೊಗ್ಗ, ಬೆಂಗಳೂರಲ್ಲೂ ಜಾಲ ಹಬ್ಬಿರುವ ಬಗ್ಗೆ ಪೊಲಿಸರಿಗೆ ಮಾಹಿತಿ ದೊರೆತಿದೆ.

    ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಪಡೆದು ಕೆಪಿಎಸ್‍ಸಿ ಪರೀಕ್ಷೆ ಪಾಸ್ ಮಾಡೋ ಜಾಲ ಇದಾಗಿದೆ. ಈ ಸಂಬಂಧ ಡಿಸಿಐಬಿ ಮತ್ತು ಅಶೋಕ ನಗರ ಠಾಣೆ ಪೊಲೀಸರು ಈಗಾಗಲೇ ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ.

    ಫೆಬ್ರವರಿ 26ರಂದು ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ತಂಡವೊಂದನ್ನು ಕಲಬುರಗಿ ಪೊಲೀಸರು ಭೇದಿಸಿದ್ದು, ಪ್ರಕರಣ ಸಂಬಂಧ ಒಟ್ಟು 12 ಜನರನ್ನು ವಶಕ್ಕೆ ಪಡೆದಿದ್ದರು. ಇದರ ಕಿಂಗ್ ಪಿನ್ ಹಾಗು ಸರ್ಕಾರಿ ಶಾಲೆಯ ಶಿಕ್ಷಕ ಮೊಹಮ್ಮದ್ ನದಾಫ್ ಪರಾರಿಯಾಗಿದ್ದಾನೆ. ಇವರು ಪರೀಕ್ಷಾರ್ಥಿಗಳಿಂದ ಒಂದು ಹುದ್ದೆಗೆ 10 ಲಕ್ಷ ರೂಪಾಯಿ ಹಣ ಪಡೆದು, ಅವರಿಗೆ ಮೈಕ್ರೋ ಇಯರ್ ಫೋನ್ ಮುಖಾಂತರ ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಳುತ್ತಿದ್ದರು.

    ಇನ್ನೊಂದೆಡೆ ಕಲಬುರಗಿಯ ನ್ಯಾಷನಲ್ ಕಾಲೇಜು ಮತ್ತು ಗ್ಲೋಬಲ್ ಕಾಲೇಜಿನ ಎರಡು ಕಡೆ ಅದೇ ದಿನ ಪ್ರಶ್ನೆಪತ್ರಿಕೆ ಬಹಿರಂಗವಾಗಿದ್ದು, ಪ್ರಕರಣ ಸಂಬಂಧ ನ್ಯಾಷನಲ್ ಕಾಲೇಜು ಡಾ.ರೆಹೆನಾ ಬೇಗಂ ಮತ್ತು ಗ್ಲೋಬಲ್ ಕಾಲೇಜಿನ ಪ್ರಿನ್ಸಿಪಲ್ ಡಾ.ಉಮೇರಾ ಬೇಗಂರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿರುವುದು ಮಂಗಳವಾರ ವರದಿಯಾಗಿತ್ತು.

  • ಸಿದ್ದರಾಮಯ್ಯ ಸರ್ಕಾರದಲ್ಲಿ ಲ್ಯಾಪ್‍ಟಾಪ್ ಹಗರಣ?- ಗೋಲ್‍ಮಾಲ್ ಬಗ್ಗೆ `ಐಎಎಸ್’ ಪತ್ರ

    ಸಿದ್ದರಾಮಯ್ಯ ಸರ್ಕಾರದಲ್ಲಿ ಲ್ಯಾಪ್‍ಟಾಪ್ ಹಗರಣ?- ಗೋಲ್‍ಮಾಲ್ ಬಗ್ಗೆ `ಐಎಎಸ್’ ಪತ್ರ

    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೊಂದು ಹಗರಣ ನಡೆದಿರುವ ಆರೋಪ ಕೇಳಿಬಂದಿದೆ. ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡ್ತಿವಿ ಎಂದ ಉನ್ನತ ಶಿಕ್ಷಣ ಇಲಾಖೆಯವರು ದುಡ್ಡು ಹೊಡೆಯೋಕೆ ಹೊರಟರಾ ಅನ್ನೋ ಅನುಮಾನ ಶುರುವಾಗಿದೆ.

    ವರ್ಗಾವಣೆಗೂ ಮುನ್ನ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತ ಅಜಯ್ ನಾಗಭೂಷಣ್ ಮುಖ್ಯಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡೋಕೆ ಸರ್ಕಾರ ಹೊರಟಿದೆ. ಆದ್ರೆ ಖರೀದಿಯಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ, ಗೋಲ್‍ಮಾಲ್ ನಡೆದಿರುವ ಸಾಧ್ಯತೆ ಇದೆ ಅಂತ ಹಿಂದಿನ ಆಯುಕ್ತ ಅಜಯ್ ನಾಗಭೂಷನ್ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

    ಕೋಟ್ಯಂತರ ರುಪಾಯಿ ವಹಿವಾಟು ನಡೆಯುವ ಆದೇಶಗಳಿಗೆ ಸರ್ಕಾರದ ಅಧಿಕಾರಿಗಳು ಸಹಿ ಹಾಕೋದು ಬಿಟ್ಟು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರ ಕೆಳಗೆ ಬರುವ ಭೋದಕ ಸಿಬ್ಬಂದಿ ಭಾಗ್ಯವಾನ್ ಮುದಿಗೌಡರ ಅವರಿಂದ ಸಹಿ ಮಾಡಿಸಿ ಆದೇಶ ಹೊರಡಿಸಲಾಗಿದೆ.

    ಒಂದು ಪ್ಯಾಕೇಜ್‍ನಲ್ಲಿ ಖರೀದಿ ಮಾಡೋದು ಬಿಟ್ಟು ನಾಲ್ಕು ಪ್ಯಾಕೇಜ್‍ಗಳಲ್ಲಿ ಖರೀದಿ ಮಾಡೋಕೆ ಹೊರಟ್ಟಿದ್ದಾರೆ. ಇದರಿಂದ ಗುಣಮಟ್ಟ ಹಾಗು ಬೇರೆ ಬೇರೆ ದರಗಳು ನಿಗಧಿಯಾಗೋ ಸಾಧ್ಯತೆ ಇದೆ ಅಂತ ಅಜಯ್ ಪತ್ರ ಬರೆದಿದ್ದಾರೆ. ಆದ್ರೆ ಪತ್ರ ಬರೆದು ಒಂದು ವಾರ ಕಳೆದ್ರು ಮುಖ್ಯಕಾರ್ಯದರ್ಶಿ ಕ್ಯಾರೆ ಅಂತಿಲ್ವಂತೆ.

  • ಕಲಬುರಗಿ: ವಾಮಾಚಾರಕ್ಕೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದ ಗ್ರಾಮಸ್ಥರು

    ಕಲಬುರಗಿ: ವಾಮಾಚಾರಕ್ಕೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದ ಗ್ರಾಮಸ್ಥರು

    ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಗ್ರಾಮಸ್ಥರು ವಾಮಾಚಾರಕ್ಕೆ ಹೆದರಿ ಇದೀಗ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.

    ಆಂದೋಲ ಗ್ರಾಮ ಪಂಚಾಯತಿಯಲ್ಲಿ 80 ಲಕ್ಷಕ್ಕೂ ಅಧಿಕ ಅವ್ಯವಹಾರವಾಗಿತ್ತು. ಅವ್ಯವಹಾರದ ತನಿಖೆಗೆ ಆಗ್ರಹಿಸಿ ಇಂದು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಆದ್ರೆ ಗ್ರಾಮಸ್ಥರ ಪ್ರತಿಭಟನೆ ಹತ್ತಿಕ್ಕಲು ಭಾನುವಾರ ರಾತ್ರಿ ಪಂಚಾಯತ್ ಮುಂಭಾಗದಲ್ಲಿ ನಿಂಬೆಹಣ್ಣು, ಅರಶಿನ, ಕುಂಕಮ, ತೆಂಗಿನಕಾಯಿ ಬಳಸಿ ವಾಮಾಚಾರ ಮಾಡಿದ್ದಾರೆ. ಈ ಮೂಲಕ ಧರಣಿ ನಡೆಸುವವರಿಗೆ ಭಯ ಹುಟ್ಟಿಸಲು ಗ್ರಾಮ ಪಂಚಾಯ್ತಿಗೆ ಭಾನಾಮತಿ ಮಾಡಿಸಿರುವ ಶಂಕೆಯಿದೆ.

    ಇದರಿಂದ ಹೆದರಿದ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ದುಷ್ಕರ್ಮಿಗಳ ಈ ಕೃತ್ಯದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಹೊರಗೆ ಬರಲು ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.