Tag: scam

  • ವಾಲ್ಮೀಕಿ ನಿಗಮದಲ್ಲಿ ಹಗರಣ – ಹೈದರಾಬಾದ್‌ ಸಹಕಾರಿ ಬ್ಯಾಂಕ್‌ನಲ್ಲಿದ್ದ 45 ಕೋಟಿ ಹಣ ಸೀಝ್‌

    ವಾಲ್ಮೀಕಿ ನಿಗಮದಲ್ಲಿ ಹಗರಣ – ಹೈದರಾಬಾದ್‌ ಸಹಕಾರಿ ಬ್ಯಾಂಕ್‌ನಲ್ಲಿದ್ದ 45 ಕೋಟಿ ಹಣ ಸೀಝ್‌

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ (Karnataka Maharshi Valmiki Scheduled Tribe Development Corporation Ltd) ಅಕ್ರಮವಾಗಿ ಸಹಕಾರಿ ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದ 45 ಕೋಟಿ ರೂ. ಹಣವನ್ನು ವಿಶೇಷ ತನಿಖಾ ತಂಡ (SIT) ಸೀಝ್‌ ಮಾಡಿದೆ.

    ನಿಗಮದಿಂದ ಹೈದರಾಬಾದ್‌ನಲ್ಲಿರುವ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕಿಗೆ ಒಟ್ಟು 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ಈಗಾಗಲೇ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ ಮಾಲೀಕ ಸತ್ಯನಾರಾಯಣ್‌ ಅವರನ್ನು ಬಂಧಿಸಲಾಗಿದೆ.  ಇದನ್ನೂ ಓದಿ: ಅಣ್ಣಾಮಲೈ ಫೋಟೋ ಹಾಕಿ ನಡು ರಸ್ತೆಯಲ್ಲಿ ಮೇಕೆ ತಲೆ ಕತ್ತರಿಸಿ ಸಂಭ್ರಮಿಸಿದ ಡಿಎಂಕೆ ಕಾರ್ಯಕರ್ತರು

     

    ಸಹಕಾರಿ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ 94.73 ಕೋಟಿ ರೂ ಪೈಕಿ ಬಹುಪಾಲು ಹಣ ಡ್ರಾ ಮಾಡಲಾಗಿದೆ. ಉಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್‌ಐಟಿ ತನಿಖೆ ಮುಂದುವರಿಸಿದೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪದ್ಮನಾಭ, ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಸತ್ಯನಾರಾಯಣ ಬಂಧನ ಮಾಡಿದ ಎಸ್‌ಐಟಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

     

  • ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ – ಸಿಬಿಐನಿಂದ ಎಫ್‌ಐಆರ್‌ ದಾಖಲು

    ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ – ಸಿಬಿಐನಿಂದ ಎಫ್‌ಐಆರ್‌ ದಾಖಲು

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಕೋಟ್ಯಂತರ ರೂಪಾಯಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ಎಫ್‌ಐಆರ್‌ ದಾಖಲಿಸಿದೆ.

    ಯೂನಿಯನ್ ಬ್ಯಾಂಕ್‌ ಹಿರಿಯ ಅಧಿಕಾರಿಗಳ ಪತ್ರದ ಅನ್ವಯ ಬ್ಯಾಂಕಿನ ಮೂವರು ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ.

     

    ಬೆಂಗಳೂರು ಪೂರ್ವ ವಲಯದ ಡಿಜಿಎಂ ಜೆ. ಮಹೇಶ್ ಎಂಬುವವರು ಸರ್ಕಾರಿ ಅಧಿಕಾರಿಗಳು,‌ ಜನಪ್ರತಿನಿಧಿಗಳು, ಖಾಸಗಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ

    ಸದ್ಯ ವಿಶೇಷ ತನಿಖಾ ತಂಡ (SIT) ಈ ಕೇಸ್ ಸಿಬಿಐಗೆ ವರ್ಗಾವಣೆ ಆಗುವ‌ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರಾಜ್ಯ ಸರ್ಕಾರ ತನಿಖೆಯನ್ನು ಎಸ್ಐಟಿ ವರ್ಗಾವಣೆ ಮಾಡಲು ನಿರಾಕರಿಸಿದ್ದೆ ಆದಲ್ಲಿ ಸಿಬಿಐ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.

  • ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಹಗರಣ – ಅಕ್ರಮದ ತನಿಖೆಗೆ ಇಳಿಯುತ್ತಾ ಸಿಬಿಐ?

    ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಹಗರಣ – ಅಕ್ರಮದ ತನಿಖೆಗೆ ಇಳಿಯುತ್ತಾ ಸಿಬಿಐ?

    – ತನಿಖೆ ನಡೆಸುವಂತೆ ಸಿಬಿಐಗೆ ದೂರು ನೀಡಿದ ಯೂನಿಯನ್‌ ಬ್ಯಾಂಕ್‌
    – ಸಿಐಡಿ ತನಿಖೆಗೆ ಆದೇಶಿಸಿದ್ದ ಕರ್ನಾಟಕ ಸರ್ಕಾರ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಖಾತೆಯಲ್ಲಿ ನಡೆದ ಅವ್ಯವಹಾರ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗುವ ಸಾಧ್ಯತೆ ಹೆಚ್ಚಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್‌ (Union Bank) ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಸಿಬಿಐಗೆ (CBI) ದೂರು ನೀಡಿದೆ. ಇತ್ತ ಕರ್ನಾಟಕ ಸರ್ಕಾರ ಈ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ (CID) ಆದೇಶಿಸಿದೆ. ಇದನ್ನೂ ಓದಿ: 94 ಕೋಟಿ ಹಗರಣ – ಸಿಬಿಐಗೆ ದೂರು ನೀಡಿ ಮೂವರನ್ನು ಅಮಾನತುಗೊಳಿಸಿದ ಯೂನಿಯನ್‌ ಬ್ಯಾಂಕ್‌

    ಸಿಐಡಿ ತನಿಖೆ ನಡೆಸಿದರೂ ಇದು ಆರ್ಥಿಕ ಅಪರಾಧವಾಗಿರುವ ಕಾರಣ ಈ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗಲಿದೆ. ಬ್ಯಾಂಕ್‌ನಲ್ಲಿ 10 ಕೋಟಿ ರೂ.ಗೂ ಅಧಿಕ ಅಕ್ರಮ ಪ್ರಕರಣ ದಾಖಲಾದರೆ ಅದರ ತನಿಖೆ ಸಿಬಿಐ ನಡೆಸಬೇಕು ಎಂದು ಆರ್‌ಬಿಐ (RBI) ನಿಯಮ ಹೇಳುತ್ತದೆ. ಈ ಪ್ರಕರಣದಲ್ಲಿ 94 ಕೋಟಿ ರೂ. ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಿಬಿಐ ಕೇಸ್‌ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆ ಹೆಚ್ಚಿದ್ದು ಹೊಸ ಸರ್ಕಾರ ಬಂದ ನಂತರ ಈ ವಿಚಾರ ಸ್ಪಷ್ಟವಾಗಲಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ಯಾವೆಲ್ಲ ತನಿಖೆಯನ್ನು ಸಿಬಿಐ ಮಾಡುತ್ತೆ?
    ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರ, ಗಂಭೀರ ವಂಚನೆ, ಸಾಮಾಜಿಕ ಅಪರಾಧ ಮತ್ತು ಲಾಭಕೋರತನಕ್ಕೆ ಸಂಬಂಧಿಸಿದ ಗಂಭೀರ ಅಪರಾಧಗಳು, ಹತ್ಯೆಗಳು, ಅಪಹರಣಗಳು ಮುಂತಾದ ಸಾಂಪ್ರದಾಯಿಕ ಅಪರಾಧಗಳ ತನಿಖೆಯನ್ನು ಸಿಬಿಐ ಮಾಡುತ್ತದೆ.

     

    ನಕಲಿ ಭಾರತೀಯ ಕರೆನ್ಸಿ ನೋಟುಗಳಿಗೆ ಸಂಬಂಧಿಸಿದ ಅಪರಾಧ, ಬ್ಯಾಂಕ್ ವಂಚನೆಗಳು ಮತ್ತು ಸೈಬರ್ ಅಪರಾಧ, ಮಾದಕವಸ್ತುಗಳು, ಪ್ರಾಚೀನ ವಸ್ತುಗಳು ಸಾಂಸ್ಕೃತಿಕ ಆಸ್ತಿಗಳ ದೊಡ್ಡ ಪ್ರಮಾಣದ ಕಳ್ಳಸಾಗಣೆ ಸೇರಿದಂತೆ ಪ್ರಮುಖ ಹಣಕಾಸು ಹಗರಣಗಳ ತನಿಖೆಯನ್ನು ಸಿಬಿಐ ಮಾಡುತ್ತದೆ. ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    ಒಂದು ವೇಳೆ ಪ್ರಕರಣದ ತನಿಖೆ ನಡೆಸುವಾಗ ವಿದೇಶದಲ್ಲಿ ಅಕ್ರಮ ಹಣ ವರ್ಗಾವಣೆ, ವಿದೇಶದಿಂದ ಅಕ್ರಮ ದೇಣಿಗೆ ಸ್ವೀಕರಿಸಿದ್ದಕ್ಕೆ ದಾಖಲೆಗಳು ಸಿಕ್ಕಿದರೆ ಆಗ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಪ್ರವೇಶ ಮಾಡುತ್ತದೆ.

  • 94 ಕೋಟಿ ಹಗರಣ – ಸಿಬಿಐಗೆ ದೂರು ನೀಡಿ ಮೂವರನ್ನು ಅಮಾನತುಗೊಳಿಸಿದ ಯೂನಿಯನ್‌ ಬ್ಯಾಂಕ್‌

    94 ಕೋಟಿ ಹಗರಣ – ಸಿಬಿಐಗೆ ದೂರು ನೀಡಿ ಮೂವರನ್ನು ಅಮಾನತುಗೊಳಿಸಿದ ಯೂನಿಯನ್‌ ಬ್ಯಾಂಕ್‌

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಖಾತೆಯಲ್ಲಿ ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್‌ ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

    ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಬ್ಯಾಂಕ್‌, ಖಾತೆಗಳಲ್ಲಿನ ವಂಚನೆಯ ವಹಿವಾಟಿನ ಬಗ್ಗೆ ಬ್ಯಾಂಕ್ ಅರಿವು ಹೊಂದಿದೆ. ಅಕ್ರಮಗಳು ಬೆಳಕಿಗೆ ಬಂದಾಗ ಬ್ಯಾಂಕ್ ತಕ್ಷಣವೇ ಪ್ರಶ್ನಾರ್ಹ ವಹಿವಾಟುಗಳನ್ನು ವಂಚನೆ ಎಂದು ಘೋಷಿಸಿದೆ. ಸಂಪೂರ್ಣ ತನಿಖೆ ಮತ್ತು ಅಪರಾಧಿಗಳ ಪತ್ತೆಗಾಗಿ ಮೇ 30 ರಂದು ಕೇಂದ್ರೀಯ ತನಿಖಾ ದಳಕ್ಕೆ (CBI) ದೂರು ನೀಡಿದ್ದೇವೆ. ಮುಂದಿನ ವಿಚಾರಣೆಗಾಗಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ಈ ಸಮಸ್ಯೆಯನ್ನು ನ್ಯಾಯಯುತವಾಗಿ ಮತ್ತು ತ್ವರಿತವಾಗಿ ಪರಿಹರಿಸಲು ನಾವು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಮತ್ತು ಅಂತಹ ಘಟನೆಗಳನ್ನು ತಡೆಯಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ.  ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    ಏನಿದು ಪ್ರಕರಣ?
    ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಮೂವರ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ. ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

     

  • ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    – ಹೈದರಾಬಾದ್‌ನ ಒಂದು ಬ್ಯಾಂಕ್ ಅಥವಾ ಕಂಪನಿಗೆ ಹಣ ಹೋಗಿದೆ
    – ಹಾಲಿ ನ್ಯಾಯಾಧೀಶರರಿಂದ ಪ್ರಕರಣದ ತನಿಖೆ ನಡೆಸಬೇಕು
    – ಡಿಕೆಶಿ, ರಾಮಲಿಂಗಾ ರೆಡ್ಡಿ ಜೊತೆ ನಾಗರಾಜ್‌ ಇರುವ ಫೋಟೋ ರಿಲೀಸ್‌

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಧಿಕಾರಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿಯಿಂದ ಎನ್.ನಾಗರಾಜ್ (N Nagaraj) ಸಂಬಂಧದ ಅಸ್ತ್ರ ಪ್ರಯೋಗವಾಗಿದೆ. ಡೆತ್‌ನೋಟ್‌ನಲ್ಲಿರುವ ಎನ್.ನಾಗರಾಜ್ ಜಾಡು ಹಿಡಿದು ಹೊರಟ ಬಿಜೆಪಿ ಸಚಿವ ನಾಗೇಂದ್ರ (Nagendra) ಜೊತೆ ನಾಗರಾಜುಗೆ ವ್ಯವಹಾರಿಕ ಸಂಬಂಧ ಎಂದು ಗಂಭೀರ ಆರೋಪ ಮಾಡಿದೆ.

    ನಾಗೇಂದ್ರ ಜೊತೆ ನಾಗರಾಜ್ ಇರುವ ಫೋಟೋ ರಿಲೀಸ್ ಮಾಡಿ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಅಲ್ಲದೆ ಸಿಎಂ ಜೊತೆ, ಡಿಸಿಎಂ ಜೊತೆ, ರಾಮಲಿಂಗರೆಡ್ಡಿ ಜೊತೆ ಇರುವ ಫೋಟೋ ರಿಲೀಸ್ ಮಾಡಿ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯ ಇಲ್ಲ: ಮಹದೇವಪ್ಪ

    ಸಿ.ಟಿ.ರವಿ (CT Ravi) ಮಾತನಾಡಿ, ಡೆತ್‌ನೋಟ್‌ನಲ್ಲಿ ಎನ್.ನಾಗರಾಜ್ ಹೆಸರು ಇದೆ. ಆ ಎನ್.ನಾಗರಾಜ್ ನಾಗೇಂದ್ರ ಪರಮಾಪ್ತನಾಗಿದ್ದು ಬ್ಯುಸಿನೆಸ್‌ ಪಾರ್ಟ್‌ನರ್‌ ಆಗಿದ್ದಾನೆ. ಎನ್.ನಾಗರಾಜು ಜೊತೆ ನಾಗೇಂದ್ರಗೆ ವ್ಯವಹಾರ ಇದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಜೊತೆ ಎನ್.ನಾಗರಾಜ್ ಇರುವ ಫೋಟೋಗಳು ಇವೆ. ಹೀಗಾಗಿ ಈ ಪ್ರಕರಣದಲ್ಲಿ ಎಲ್ಲರ ಪಾತ್ರವಿದೆ ಎಂದು ಆರೋಪಿಸಿದರು.

    ಅಂಗೈ ಹುಣ್ಣಿಗೆ ಸಾಕ್ಷಿ ಬೇಕಾ? ಸಚಿವರ ಮೌಖಿಕ ಆದೇಶ ಇಲ್ಲದೇ ಹಣ ವರ್ಗಾವಣೆ ಹೇಗೆ ಆಗುತ್ತೆ? ಎನ್.ನಾಗರಾಜ್ ಗೂ ನಾಗೇಂದ್ರಗೂ ಏನ್ ಸಂಬಂಧ? ಎನ್.ನಾಗರಾಜ್‌ಗೂ ಸಿಎಂಗೂ, ಎನ್. ನಾಗರಾಜ್‌ಗೂ ಡಿಸಿಎಂಗೆ ಏನು ಸಂಬಂಧ ಎಂದು ಸಿ.ಟಿ.ರವಿ ಖಾರವಾಗಿ ಪ್ರಶ್ನಿಸಿದರು.  ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ಹೈದರಾಬಾದ್‌ನ ಒಂದು ಬ್ಯಾಂಕ್ ಅಥವಾ ಕಂಪನಿಗೆ ಹಣ ಹೋಗಿದೆ ಎಂಬ ಮಾಹಿತಿ ಇದೆ. ಇದೆಲ್ಲದರ ಬಗ್ಗೆ ತನಿಖೆ ನಡೆಯಬೇಕು. ಅದಕ್ಕಾಗಿ ಹಾಲಿ ನ್ಯಾಯಾಧೀಶರರಿಂದ ತನಿಖೆ ನಡೆಸಬೇಕು. ಇದೊಂದು ಹಗಲು ದರೋಡೆಯಾಗಿದೆ. ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಜೊತೆ ಹೋಗಿದ್ದಾರೆ. ಡೆತ್ ನೋಟ್‌ನಲ್ಲಿ ನಾಗರಾಜ್ ಹೆಸರು ಉಲ್ಲೇಖವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ರು.

    ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಇದೊಂದು ಕೊಲೆ ಅಂತಾ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿದ್ದರು. ವರ್ಕ್ ಆರ್ಡರ್ ಮಾಡದೇ ಇದ್ದರೂ ಈಶ್ವರಪ್ಪ ರಾಜೀನಾಮೆ ನೀಡಿದರು. ಅವರ ರಾಜಕೀಯ ಭವಿಷ್ಯವ‌ನ್ನೇ ಮುಗಿಸುವ ಕೆಲಸ ಮಾಡಿದರು. ಈಗ ಬಿ.ನಾಗೇಂದ್ರ ರಾಜೀನಾಮೆ ಪಡೆಯುತ್ತಿಲ್ಲ ಯಾಕೆ? ಬಿ.ನಾಗೇಂದ್ರ ರಾಜೀನಾಮೆ ಕೊಡಲೇಬೇಕು. ಸರ್ಕಾರಕ್ಕೆ ಮಾನ‌ ಮರ್ಯಾದೆ ಇದೆಯೇ ಎಂದು ಸಿಟಿ ರವಿ ಕಿಡಿಕಾರಿದರು.

     

  • ಬಂಧನ ತಪ್ಪಿಸಿಕೊಳ್ಳಲು ವೇಷ ಬದಲಿಸಿಕೊಂಡಿದ್ದ ನಟ ಸಾಹಿಲ್

    ಬಂಧನ ತಪ್ಪಿಸಿಕೊಳ್ಳಲು ವೇಷ ಬದಲಿಸಿಕೊಂಡಿದ್ದ ನಟ ಸಾಹಿಲ್

    ಬೆಟ್ಟಿಂಗ್ ಹಗರಣಕ್ಕೆ (Scam) ಸಂಬಂಧಿಸಿದಂತೆ ನಿನ್ನೆ ಅರೆಸ್ಟ್ ಆಗಿರುವ ಬಾಲಿವುಡ್ ನಟ ಕಂ ಮಾಡೆಲ್ ಸಾಹಿಲ್ ಖಾನ್, ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವೇಷ ಬದಲಿಸಿಕೊಂಡು ನಾಲ್ಕು ದಿನಗಳ ಕಾಲ ಪ್ರಯಾಣ ಮಾಡಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ. ನಿರೀಕ್ಷಣಾ ಜಾಮೀನು ವಜಾ ಆಗುತ್ತಿದ್ದಂತೆಯೇ ಗುರುತು ಸಿಗದಂತೆ ವೇಷ ಬದಲಿಸಿಕೊಂಡು 1800 ಕಿಲೋ ಮೀಟರ್ ಪ್ರಯಾಣ ಮಾಡಿದ್ದರಂತೆ.

    ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾನಾ ಕಡೆ ಪ್ರಯಾಣವನ್ನೂ ಅವರು ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಇದ್ದಾರೆ ಎಂದು ಪೊಲೀಸರು ಪತ್ತೆ ಮಾಡುತ್ತಿದ್ದಂತೆಯೇ ಛತ್ತೀಸ್ ಗಢಕ್ಕೆ ಹಾರಿದ್ದರು. ಕೊನೆಗೂ ಛತ್ತೀಸ್ ಗಢದ ಜಗದಲ್ ಪುರದ ಹೋಟೆಲ್ ವೊಂದರಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

    ನಿನ್ನೆಯಷ್ಟೇ ಸಾಹಿಲ್ ಖಾನ್ (Sahil Khan) ಬಂಧನವಾಗಿದೆ. ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ನಟನನ್ನು ಬಂಧಿಸಿರುವುದಾಗಿ (Arrest) ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿಸಿ, ತೀವ್ರ ವಿಚಾರಣೆಗೂ ಒಳಪಡಿಸಿದ್ದಾರೆ. ಈ ಹಿಂದೆ ಮಹಾದೇವ್ ಬೆಟ್ಟಿಂಗ್ (Mahadev Betting) ಆಪ್ ಅ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್ (Summons) ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದರು.

    ಬೆಟ್ಟಿಂಗ್ ಆಪ್ ನಲ್ಲಿ 15 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದ್ದು, ಆಪ್ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಭೋಪಾಲ್, ಮುಂಬೈ, ಕೋಲ್ಕತ್ತಾ ನಗರಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ಸಮಯದಲ್ಲಿ ಹವಾಲಾ ನಡೆದಿರುವುದು ಪತ್ತೆ ಆಗಿದೆ ಎನ್ನಲಾಗಿತ್ತು.

     

    ರವಿ ಉಪ್ಪಾಲ್ ಮತ್ತು ಸೌರಭ್ ಚಂದ್ರಕಾರ್ ಎನ್ನುವವರು ಈ ಆಪ್ ಅನ್ನು ದುಬೈನಿಂದ ನಡೆಸುತ್ತಿದ್ದರು. ಬೇನಾಮಿ ಖಾತೆಗಳಿಂದ ಅಕ್ರ ಹಣ ವರ್ಗಾವಣೆ ಆಗುತ್ತಿದೆ ಎಂದು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಶೋಧ ನಡೆಸಿದ್ದರು. ಈ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಇನ್ನೂ ಅನೇಕ ಸಿಲೆಬ್ರಿಟಿಗಳು ನೋಟಿಸ್ ಜಾರಿ ಆಗಿದೆ.

  • ಅಂಗಡಿ ಮಾಲೀಕರೇ ಹುಷಾರಾಗಿರಿ –  ಯುಪಿಐ ಸ್ಕ್ಯಾನರ್‌ ಅಪ್‌ಡೇಟ್‌ ಹೆಸರಿನಲ್ಲಿ 48 ಸಾವಿರ ವಂಚನೆ!

    ಅಂಗಡಿ ಮಾಲೀಕರೇ ಹುಷಾರಾಗಿರಿ – ಯುಪಿಐ ಸ್ಕ್ಯಾನರ್‌ ಅಪ್‌ಡೇಟ್‌ ಹೆಸರಿನಲ್ಲಿ 48 ಸಾವಿರ ವಂಚನೆ!

    ಬೆಂಗಳೂರು: ಯುಪಿಐ (UPI) ಕ್ಯೂ ಆರ್‌ ಕೋಡ್‌ ಸ್ಕ್ಯಾನರ್ (QR Code) ಮುಖಾಂತರ ಹಣ ಪಡೆಯುವ ಅಂಗಡಿ ಮಾಲೀಕರೇ ಹುಷಾರಾಗಿರಿ. ಯುಪಿಐ ಸ್ಕ್ಯಾನರ್ ಅಪ್‌ಡೇಟ್‌ ಹೆಸರಿನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಗ್ಯಾಂಗ್‌ ಒಂದು ವಂಚನೆಗೆ ಇಳಿದಿದೆ.

    ಕಲ್ಯಾಣ ನಗರದ ಮಂಜುನಾಥ ಟಿಫನ್ ಸೆಂಟರ್ ಮಾಲೀಕ ಭಾಸ್ಕರ್ ಅವವರ ವಂಚನೆಗೆ ಒಳಗಾಗಿ 48 ಸಾವಿರ ರೂ. ಕಳೆದುಕೊಂಡಿದ್ದಾರೆ. ಈಗ ಇವರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ (Chandra Layout Police Station) ದೂರು ನೀಡಿದ ಬಳಿಕ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮುಷರಫ್‌ ಖಾನ್‌, ಮೊಹಮ್ಮದ್‌ ಸಿರಾಜ್‌  ಹೆಸರಿನ ಖಾತೆಯಿಂದ ವಂಚನೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: ಇತರರೊಂದಿಗೆ ಸೇರಿ ಕೇಜ್ರಿವಾಲ್‌ ಪಿತೂರಿ – ಜಾಮೀನು ಅರ್ಜಿ ವಜಾ

    ಏ.4 ರ ಮಧ್ಯಾಹ್ನ 12 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ಭಾಸ್ಕರ್‌ ಅವರ ಅಂಗಡಿಗೆ ಬಂದು ನಿಮ್ಮ ಪೇಟಿಎಂ ಸ್ಕ್ಯಾನರ್‌ ಅಪ್‌ಡೇಟ್‌ ಆಗಿಲ್ಲ ಎಂದು ಹೇಳಿದ್ದಾನೆ. ನಂತರ ಆತ ನಾನು ಅಪ್‌ಡೇಟ್‌ ಮಾಡಿಕೊಡುತ್ತೇನೆ ಎಂದು ಹೇಳಿ ಮೊಬೈಲ್‌ ತೆಗೆದುಕೊಂಡಿದ್ದಾನೆ. ಮೊಬೈಲ್‌ ತೆಗೆದುಕೊಂಡ ಬಳಿಕ ಏನೋ ಮಾಡಿ ಯುಪಿಐ ಮೂಲಕ ಒಂದು ರೂ. ಕಳುಹಿಸಿ ಮಧ್ಯಾಹ್ನ 12:30 ಸ್ಕ್ಯಾನರ್‌ ಅಪ್‌ಡೇಟ್‌ ಆಗಿದೆ ಎಂದು ಹೇಳಿ ತೆರಳಿದ್ದಾನೆ. ಆತ ಹೋದ ನಂತರ 18,000 ರೂ., 30,000 ರೂ. ಕಡಿತಗೊಂಡ ಮೆಸೇಜ್‌ ಇವರ ಮೊಬೈಲ್‌ ಬಂದಾಗ ತಾನು ಮೋಸ ಹೋದ ವಿಚಾರ ಬೆಳಕಿಗೆ ಬಂದಿದೆ.  ಇದನ್ನೂ ಓದಿ: ಒಪ್ಪಂದ ಕೊನೆಗೊಳಿಸಲು ಮುಂದಾದ ಸಿಟ್ಟಲ್ಲಿ ಕಂಪನಿಗೆ ಬ್ಯಾಂಡೇಜ್‌, ಕಾಂಡೋಮ್‌ ತುಂಬಿ ಸಮೋಸಾ ಪೂರೈಕೆ!

    ಯುಪಿಐ ಗೊತ್ತಿಲ್ಲದವರೇ ಟಾರ್ಗೆಟ್‌:
    ಯುಪಿಐ ಬಗ್ಗೆ ಗೊತ್ತಿಲ್ಲದವರನ್ನೇ ಟಾರ್ಗೆಟ್‌ ಮಾಡಿ ಹಣವನ್ನು ಕದಿಯಲಾಗುತ್ತಾರೆ. ಯಾವ ಯುಪಿಐ ಇರುತ್ತೋ ನಾವು ಅದರ ಏಜೆಂಟ್‌ಗಳು ಎಂದು ಆರಂಭದಲ್ಲಿ ಹೇಳಿ ನಿಮ್ಮ ಯುಪಿಐ ಸ್ಕ್ಯಾನರ್ ಅಪ್ಡೇಟ್ ಆಗಿಲ್ಲ ಎಂದು ನಂಬಿಸುತ್ತಾರೆ. ನೀವು ಈಗಲೇ ಅಪ್‌ಡೇಟ್‌ ಮಾಡದೇ ಇದ್ದರೆ ಹಣ ಸೆಂಡ್‌ ಆಗುವುದಿಲ್ಲ ಎಂದು ನಂಬಿಸುತ್ತಾರೆ. ಈ ವಿಚಾರ ತಿಳಿಯದ ವ್ಯಾಪಾರಿಗಳು ಮೊಬೈಲನ್ನು ಅವರ ಕೈಗೆ ಕೊಡುತ್ತಾರೆ. ಈ ಮೂಲಕ ವಂಚಕರು ಹಣವನ್ನು ಎಗರಿಸುತ್ತಾರೆ.

     

    ಮಾಲೀಕರು ಏನು ಮಾಡಬೇಕು?
    ಇದ್ದಕ್ಕಿದ್ದಂತೆ ಯಾರಾದ್ರೂ ಬಂದಾಗ ಕ್ಯೂಆರ್‌ ಕೋಡ್‌ ಅಪ್‌ಡೇಟ್‌ ಅಂದಾಗ ಮೊಬೈಲ್‌ ಮಸೇಜ್‌ ಚೆಕ್‌ ಮಾಡಿ. ಮೊಬೈಲ್‌ನಲ್ಲಿ ಈ ಹಿಂದೆ ಗ್ರಾಹಕರು ಕಳುಹಿಸಿರುವ ಹಣ ಬಂದಿದೆಯೋ ಇಲ್ಲವೋ ಎಂಬ ಮಸೇಜ್‌ ಬಂದಿರುತ್ತದೆ. ಒಂದು ವೇಳೆ ಯುಪಿಐ ನಂಬರ್‌ ಲಿಂಕ್‌ ಆಗಿರುವ ಬ್ಯಾಂಕ್‌ನಲ್ಲಿ ಸಮಸ್ಯೆ ಆಗಿದ್ದರೆ ಹಣ ವರ್ಗಾವಣೆಯೇ ಆಗಿರುವುದಿಲ್ಲ. ಮೊಬೈಲ್‌ನಲ್ಲಿ ಹಣ ವರ್ಗಾವಣೆಯಾಗಿರುವ ಮಸೇಜ್‌ ಬಂದಿದ್ದಲ್ಲಿ ಕ್ಯೂಆರ್‌ ಕೋಡ್‌ನಲ್ಲಿ ಸಮಸ್ಯೆ ಇಲ್ಲ ಎಂದು ಅರ್ಥ.

     

  • ಶಿಕ್ಷಣ ವ್ಯವಸ್ಥೆಯ ‘ಸ್ಕ್ಯಾಮ್’ ಬಗ್ಗೆ ತಿಳಿಸಲಿದೆ ರಂಜನ್ ನಟನೆಯ ಚಿತ್ರ

    ಶಿಕ್ಷಣ ವ್ಯವಸ್ಥೆಯ ‘ಸ್ಕ್ಯಾಮ್’ ಬಗ್ಗೆ ತಿಳಿಸಲಿದೆ ರಂಜನ್ ನಟನೆಯ ಚಿತ್ರ

    ನುಷ್ಯನಿಗೆ ಎಲ್ಲಕ್ಕಿಂತ ಹೆಚ್ಚು ಉತ್ತಮ ಶಿಕ್ಷಣ. ಆ ಶಿಕ್ಷಣದಲ್ಲೇ ಈಗ ಸಾಕಷ್ಟು scam ಗಳು ನಡೆಯುತ್ತಿದೆ. ಅಂತಹ scamಗಳನ್ನು ಎತ್ತಿ ಹಿಡಿಯುವ ಕಥಾಹಂದರ ಹೊಂದಿರುವ ‘scam 1770’ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಪ್ರತಿದಿನ ಬೆಳಗ್ಗೆ ಎಲ್ಲರ ಮನೆಗೂ ಪೇಪರ್ ಹಾಕಿ, ವಿದ್ಯಾಭ್ಯಾಸ ಮಾಡುತ್ತಿರುವ ಆದರ್ಶ್ ಅವರಿಂದ ಈ ಚಿತ್ರದ ಟ್ರೈಲರ್  (Trailer)ಬಿಡುಗಡೆಯಾಯಿತು.

    ಡಿ ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಖ್ಯಾತಿಯ ರಂಜನ್ (Ranjan) ನಟಿಸಿದ್ದಾರೆ.  ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದು ಹೀಗೆ.

    ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತಾದ ಚಿತ್ರ ‘SCAM 1770’. ಶಿಕ್ಷಣ ಇಂದು ವ್ಯವಹಾರ ಆಗಿಹೋಗಿದೆ‌. ಆ ರೀತಿ ಆಗಬಾರದು.  ಯಾವ ಅಭ್ಯಾಸ ತಪ್ಪಿದರೂ ಬದುಕಬಹುದು. ಆದರೆ ವಿದ್ಯಾಭ್ಯಾಸ ತಪ್ಪಿದ್ದರೆ ಬದುಕುವುದು ಕಷ್ಟ. ಆದರೆ ಅಂತಹ ವಿದ್ಯಾಭ್ಯಾಸ ಇಂದು ಬಡವರಿಗೆ ಹಾಗೂ ಮಧ್ಯಮವರ್ಗದ ಜನರಿಗೆ ದುಬಾರಿಯಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನು ತೋರಿಸುವ ಪ್ರಯತ್ನವನ್ನು ನಮ್ಮ ಚಿತ್ರದಲ್ಲಿ ಮಾಡಿದ್ದೇವೆ. ವಿದ್ಯಾರ್ಥಿಗಳು ಹಾಗೂ ಪೋಷಕರು ತಪ್ಪದೇ ನೋಡಬೇಕಾದ ಸಿನಿಮಾವಿದು. ಮೊದಲಿನಿಂದಲೂ ಉತ್ತಮ ಸದಭಿರುಚಿಯ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ನಿರ್ಮಾಪಕ ದೇವರಾಜ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ದೇಶಕ ವಿಕಾಸ್ ಪುಷ್ಪಗಿರಿ.

    ನಾನು ಕಾಂತಾರ ಸಿನಿಮಾ ಸಂದರ್ಭದಲ್ಲಿ ನಿರ್ದೇಶನದ ತಂಡದಲ್ಲಿ ಕೆಲಸ ಮಾಡುತ್ತಿದ್ದೆ. ಫೋನ್ ಬಳಸುವ ಹಾಗಿರಲಿಲ್ಲ. ಆಗ ಈ ಚಿತ್ರತಂಡದವರು ನನ್ನನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿರುವ ವಿಷಯ ಸ್ನೇಹಿತನಿಂದ ತಿಳಿಯಿತು. ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದಲ್ಲಿ ದಡ್ಡ ಪ್ರವೀಣನ ಪಾತ್ರ ಮಾಡಿದ್ದೆ. ಇದರಲ್ಲಿ ಜಾಣನ ಪಾತ್ರ ಕೊಟ್ಟಿದ್ದಾರೆ. ಶಿಕ್ಷಣದ ಕುರಿತಾದ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದರು ನಾಯಕ ರಂಜನ್.

    ನಾಯಕಿ ನಿಶ್ಚಿತ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಚಿತ್ರದಲ್ಲಿ ಅಭಿನಯಿಸಿರುವ ಹರಿಣಿ, ನಾರಾಯಣಸ್ವಾಮಿ, ನಟನ ಪ್ರಶಾಂತ್, ರಾಘು ಶಿವಮೊಗ್ಗ, ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಹಾಗೂ ನಿರ್ದೇಶಕರೊಂದಿಗೆ ಚಿತ್ರಕಥೆ ಬರೆದಿರುವ ಶಂಕರ್ ರಾಮನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

  • Chandrababu Naidu Arrested – ಏನಿದು 371 ಕೋಟಿ ಹಗರಣ ಕೇಸ್‌?

    Chandrababu Naidu Arrested – ಏನಿದು 371 ಕೋಟಿ ಹಗರಣ ಕೇಸ್‌?

    ಹೈದರಾಬಾದ್‌: ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ (Andhra Pradesh) ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಮೇಲೆ 371 ಕೋಟಿ ರೂ. ಹಗರಣ (Scam) ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ.

    ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ (Skill Development Corporation) ಅಕ್ರಮ ಎಸಗಿದ ಆರೋಪ ಇರುವ ಹಿನ್ನೆಲೆಯಲ್ಲಿ ಹೈದರಾಬಾದಿನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ನಂದ್ಯಾಲ್‌ನಲ್ಲಿ ಇಂದು ಮುಂಜಾನೆ ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.  ಇದನ್ನೂ ಓದಿ: ಸೆ.11ಕ್ಕೆ ಬೆಂಗಳೂರು ಬಂದ್ – ಏನಿದೆ? ಏನಿರಲ್ಲ?

    ನಾಯ್ಡು ಮೇಲಿರುವ ಆರೋಪ ಏನು?
    ಯುವಕರಿಗೆ ಉದ್ಯೋಗ ತರಬೇತಿ ನೀಡಲು ಅಂದಿನ ಮುಖ್ಯಮಂತ್ರಿ ನಾಯ್ಡು ಅವರ ನೇತೃತ್ವದಲ್ಲಿ ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ.

    ಈ ಸಂಬಂಧ ಟಿಡಿಪಿ ಸರ್ಕಾರವು ಜರ್ಮನ್ ಎಂಜಿನಿಯರಿಂಗ್ ದೈತ್ಯ ಸೀಮೆನ್ಸ್‌ (Siemens) ಕಂಪನಿಯೊಂದಿಗೆ ತಿಳುವಳಿಕೆ ಒಪ್ಪಂದವನ್ನು (MoU) ಮಾಡಿಕೊಂಡಿತ್ತು. ಸೀಮೆನ್ಸ್, ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಲಿಮಿಟೆಡ್ ಮತ್ತು ಡಿಸೈನ್ ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ರಾಜ್ಯ ಕೌಶಲ್ಯ ಅಭಿವೃದ್ಧಿ ಸಂಸ್ಥೆಯು ಈ ಯೋಜನೆಯನ್ನು ಕಾರ್ಯಗತಗೊಳಿಸುವ ಉದ್ದೇಶವನ್ನು ಹೊಂದಿತ್ತು.

    3,356 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಸರ್ಕಾರ 10% ಹಣವನ್ನು ಹೂಡಲಿದ್ದರೆ, ಸಿಮೆನ್ಸ್‌ 90% ಹಣವನ್ನು ಹೂಡಲು ಒಪ್ಪಿಕೊಂಡಿತ್ತು. ಸೀಮೆನ್ಸ್ ಈ ಯೋಜನೆಗೆ ಯಾವುದೇ ಹಣವನ್ನು ಹೂಡಿಕೆ ಮಾಡದಿದ್ದರೂ ಮೂರು ತಿಂಗಳ ಒಳಗಡೆ 371 ಕೋಟಿ ರೂ. ಹಣವನ್ನು ಐದು ಕಂತುಗಳಲ್ಲಿ ಪಾವತಿಸಲಾಗಿದೆ.  ಇದನ್ನೂ ಓದಿ: ಭಾರತ, ಅಮೆರಿಕದ ನಡುವೆ ದ್ವಿಪಕ್ಷೀಯ ಮಾತುಕತೆ – ಮೋದಿ, ಬೈಡೆನ್ ಮಧ್ಯೆ ಏನು ಚರ್ಚೆ ನಡೆದಿದೆ?

    ಈ ಯೋಜನೆಗೆ ಸಂಬಂಧಿಸಿದ ಯಾವುದೇ ಕಡತಗಳಿಗೆ ಆಗಿನ ಪ್ರಧಾನ ಹಣಕಾಸು ಕಾರ್ಯದರ್ಶಿ ಮತ್ತು ಆಗಿನ ಮುಖ್ಯ ಕಾರ್ಯದರ್ಶಿ ಸಹಿ ಹಾಕಿರಲಿಲ್ಲ. ಹೀಗಾಗಿ ಸರ್ಕಾರ ಹಣವನ್ನು ಯಾರಿಗೆ ಬಿಡುಗಡೆ ಮಾಡಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

    ಶೆಲ್ ಕಂಪನಿಗಳ ಮೂಲಕ ಖಾಸಗಿ ಸಂಸ್ಥೆಗಳಿಗೆ ಸರ್ಕಾರಿ ಹಣವನ್ನು ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಪಾವತಿಸಲಾಗಿದೆ. ಅಲೈಡ್ ಕಂಪ್ಯೂಟರ್ಸ್, ಸ್ಕಿಲ್ಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನಾಲೆಡ್ಜ್ ಪೋಡಿಯಂ, ಕ್ಯಾಡೆನ್ಸ್ ಪಾರ್ಟ್‌ನರ್ಸ್ ಮತ್ತು ಇಟಿಎ ಗ್ರೀನ್ಸ್ ಸೇರಿದಂತೆ ವಿವಿಧ ಶೆಲ್ ಕಂಪನಿಗಳಿಗೆ ಕೌಶಲ್ಯ ಅಭಿವೃದ್ಧಿಗಾಗಿ 241 ಕೋಟಿ ಪಾವತಿಸಲಾಗಿದೆ. ಟೆಂಡರ್ ಪ್ರಕ್ರಿಯೆಯಿಲ್ಲದೆ 371 ಕೋಟಿ ಬಿಡುಗಡೆ ಮಾಡಲಾಗಿದೆ. ಚಂದ್ರಬಾಬು ನಾಯ್ಡು ನಿರ್ದೇಶನದಂತೆ ಈ ಶೆಲ್‌ ಕಂಪನಿಗಳನ್ನು ಸ್ಥಾಪಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭ್ರಷ್ಟಾಚಾರ ಕೇಸ್‌ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌

    ಭ್ರಷ್ಟಾಚಾರ ಕೇಸ್‌ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌

    ಹೈದರಾಬಾದ್‌: ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ (Andhra Pradesh) ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ಶನಿವಾರ ಮುಂಜಾನೆ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ.

    ನಂದ್ಯಾಲ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (CID) ನೇತೃತ್ವದ ಪೊಲೀಸರ ಆರ್‌ಕೆ ಫಂಕ್ಷನ್ ಹಾಲ್‌ನಲ್ಲಿರುವ ನಾಯ್ಡು ಅವರ ನಿವಾಸಕ್ಕೆ ಮುಂಜಾನೆ 3 ಗಂಟೆಗೆ ಆಗಮಿಸಿದ್ದಾರೆ.

    ಈ ಸಮಯದಲ್ಲಿ ಚಂದ್ರಬಾಬು ನಾಯ್ದು ವಿಶ್ರಾಂತಿ ಪಡೆಯುತ್ತಿದ್ದರು. ಪೊಲೀಸರು ವಶಕ್ಕೆ ಪಡೆಯಲು ಬಂದ ವಿಚಾರ ತಿಳಿದು ಭಾರೀ ಸಂಖ್ಯೆಯಲ್ಲಿ ನಾಯ್ಡು ಮನೆ ಬಳಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳ ಪ್ರತಿಭಟನೆಯಿಂದ ಪೊಲೀಸರಿಗೆ ನಾಯ್ದು ಅವರನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ!

    ನಾಯ್ಡು ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದ ಎಸ್‌ಪಿಜಿ ಪಡೆಗಳು ಸಹ ಪೊಲೀಸರಿಗೆ ಅನುಮತಿ ನೀಡಿರಲಿಲ್ಲ. ಕೊನೆಗೆ 6 ಗಂಟೆಗೆ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ಬಂಧಿಸಿದರು.

    ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣದಲ್ಲಿ (Skill Development Corporation Scam) ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದ್ದು, ಅವರು ಎ1 ಆರೋಪಿ ಎಂದು ಡಿಐಜಿ ರಘುರಾಮಿ ರೆಡ್ಡಿ ತಿಳಿಸಿದರು.

    ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409 ರ ಅಡಿಯಲ್ಲಿ ಬಂಧಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]