Tag: SC Survey

  • ಕಾಟಾಚಾರದ ಸರ್ವೇಗೆ 3.6 ಕೋಟಿ ವೆಚ್ಚ – ಬೇಕರಿ, ಅಂಗಡಿಗಳಿಗೂ ಜಾತಿ ಸಮೀಕ್ಷೆ ಸ್ಟಿಕ್ಕರ್!

    ಕಾಟಾಚಾರದ ಸರ್ವೇಗೆ 3.6 ಕೋಟಿ ವೆಚ್ಚ – ಬೇಕರಿ, ಅಂಗಡಿಗಳಿಗೂ ಜಾತಿ ಸಮೀಕ್ಷೆ ಸ್ಟಿಕ್ಕರ್!

    ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸರ್ಕಾರ 3.6 ಕೋಟಿ ರೂ. ಖರ್ಚು ಮಾಡುತ್ತಿದೆ. ಬಿಬಿಎಂಪಿ (BBMP) ಸಿಬ್ಬಂದಿ ಮಾತ್ರ ಸಮೀಕ್ಷೆ ಮಾಡದೇ, ಕಾಟಾಚಾರಕ್ಕೆ ಸ್ಟಿಕ್ಕರ್ ಅಂಟಿಸುತ್ತಿರುವುದು ಬಯಲಾಗಿದೆ.

    ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ (SC Comprehensive Survey) 3.6 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ ಒಂದು ಸ್ಟಿಕ್ಕರ್‌ನ ಬೆಲೆ 2.47 ಪೈಸೆ, ಸ್ಟಿಕ್ಕರ್ ಅಂಟಿಸಲು ಸಿಬ್ಬಂದಿಗೆ 5 ರೂ., ಒಂದು ಸ್ಟಿಕ್ಕರ್ ಪ್ರಿಂಟ್‌ಗೆ 7.47ರೂ., ಭಿತ್ರಿಪತ್ರಕ್ಕೆ 6 ರೂ., ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲು ಎರಡು ಕಿರು ಚಿತ್ರಗಳಿಗೆ ಪ್ರತಿ ಸೆಕೆಂಡಿಗೆ 35 ಸಾವಿರ ರೂ., ಸಂಪೂರ್ಣ ನಿರ್ಮಾಣಕ್ಕೆ 49.5 ಲಕ್ಷ ರೂ., 5 ಲಕ್ಷ ರೂ. ಮೌಲ್ಯದ 2 ಕ್ಯಾಮೆರಾಗಳು, ನಿರ್ದೇಶಕ, ಸಹಾಯಕ ನಿರ್ದೇಶಕ, ಕ್ಯಾಮೆರಾ ಮ್ಯಾನ್ ಸೇರಿ ಚಿತ್ರಿಕರಣದ ಸಾಧನಕ್ಕೆ 4 ಲಕ್ಷ ರೂ., ಕಲಾವಿದರಿಗೆ 2.98 ಲಕ್ಷ ರೂ., ಎಸ್‌ಎಸ್‌ಡಿ ಕಾರ್ಡ್ & ಡಿವಿಡಿ ಪೆನ್‌ಡ್ರೈವ್‌ಗೆ 1,500 ರೂ. ಖರ್ಚು ಮಾಡಲಾಗಿದೆ.ಇದನ್ನೂ ಓದಿ: ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

    ಇದಲ್ಲದೇ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಪ್ರಚಾರಕ್ಕೆ 28 ಲಕ್ಷ ರೂ., ಜನರಿಗೆ ಜಾಗೃತಿ ಮೂಡಿಸಲು 49.5 ಲಕ್ಷ ರೂ., ಒಂದು ವಾರದಲ್ಲಿ 14 ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ 28 ವಿಧಾನಸಭಾ ಕ್ಷೇತ್ರದಲ್ಲಿ ಜಾಗೃತಿ ಅಭಿಯಾನ ನಡೆಸಲು ಆಟೋ ಬಾಡಿಗೆ 11 ಲಕ್ಷ ರೂ., ಜಾಗೃತಿಗೆ 6 ಲಕ್ಷ ರೂ. 3.70 ಭಿತ್ತಿ ಪತ್ರಕ್ಕೆ 22.2 ಲಕ್ಷ ರೂ. ವೆಚ್ಚವಾಗಿದೆ.

    ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಇಷ್ಟೆಲ್ಲಾ ಖರ್ಚು ಮಾಡಲಾಗಿದೆ. ಈವರೆಗೂ ಬೆಂಗಳೂರು ನಗರದಲ್ಲಿ 60%ರಷ್ಟು ಕೂಡ ಸರ್ವೇ ನಡೆದಿಲ್ಲ. ಇನ್ನೂ ಕೆಲವೆಡೆ ಸಮೀಕ್ಷೆ ಮಾಡದೇ ಸ್ಟಿಕ್ಕರ್ ಅಂಟಿಸಿದ್ದಾರೆ. ಜೊತೆಗೆ ಥಣಿಸಂದ್ರ ಭಾಗದಲ್ಲಿ ಬೇಕರಿ, ಕಾಂಡಿಮೆಟ್ಸ್ ಅಂಗಡಿಗಳಿಗೂ ಸಮೀಕ್ಷೆ ಪೂರ್ಣ ಎಂಬ ಸ್ಟಿಕ್ಕರ್ ಅಂಟಿಸಿದ್ದಾರೆ. ಈ ರೀತಿ ಅಂಗಡಿಗಳ ಮೇಲೆಯೂ ಸ್ಟಿಕ್ಕರ್ ಅಂಟಿಸಿರುವ ಬಿಬಿಎಂಪಿ ಸಿಬ್ಬಂದಿಯ ಅವಸ್ಥೆಯನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಎಎಸ್‌ಪಿಗೆ ಅಪಮಾನ – ಬಿಜೆಪಿಯಿಂದ ರಾಜಕೀಯಕ್ಕೆ ಭರಮನಿ ಎಂಟ್ರಿ?

  • ಕೆಲವರು ಅಪಾರ್ಟ್ಮೆಂಟ್ ಒಳಗೂ ಬಿಟ್ಟುಕೊಳ್ಳದೇ ಜಾತಿ ಹೇಳಲು ಹಿಂದೇಟು: ಹೆಚ್.ಆಂಜನೇಯ

    ಕೆಲವರು ಅಪಾರ್ಟ್ಮೆಂಟ್ ಒಳಗೂ ಬಿಟ್ಟುಕೊಳ್ಳದೇ ಜಾತಿ ಹೇಳಲು ಹಿಂದೇಟು: ಹೆಚ್.ಆಂಜನೇಯ

    – ಸರ್ವೆ ದಿನಾಂಕ ವಿಸ್ತರಿಸದಂತೆ ಸಿಎಂಗೆ ಆಗ್ರಹ

    ಬೆಂಗಳೂರು: ಕೆಲವರು ಜಾತಿ ಹೆಸರು ಹೇಳಲು ಹಿಂದೇಟು ಹಾಕ್ತಿದ್ದಾರೆ. ಅಪಾರ್ಟ್ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸ ಮಾಡೋರು ಒಳಗೆ ಬಿಟ್ಟುಕೊಳ್ಳಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ (H Anjaneya) ಹೇಳಿದ್ದಾರೆ.

    ಸರ್ವೆ ಮಾಡದೇ ಸ್ಟಿಕ್ಕರ್ ಅಂಟಿಸೋದು ಸರಿ ಅಲ್ಲ. ಸರ್ವೆ ಮಾಡಿದ್ಮೇಲೆ ಸ್ಟಿಕ್ಕರ್ ಹಾಕಬೇಕಿತ್ತು. ಸಾಮೂಹಿಕವಾಗಿ ಸ್ಟಿಕ್ಕರ್ ಹಾಕಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಳ ಮೀಸಲಾತಿ ಸರ್ವೆ ಗೊಂದಲದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಸರ್ವೆ ದಿನಾಂಕ ವಿಸ್ತರಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

    ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸಿಬ್ಬಂದಿ ಇಲ್ಲ ಅಂತೇಳಿ ಎಲ್ಲರ ಹತ್ರ ಸರ್ವೆ ಮಾಡಿಸ್ತಿದ್ದಾರೆ. ಬೆಂಗಳೂರಲ್ಲಿ 100% ಸರ್ವೆ ಸಾಧ್ಯವಿಲ್ಲ. ಬೆಂಗಳೂರಲ್ಲಿ 110 ಬಡಾವಣೆಗಳಲ್ಲಿ ಹೆಚ್ಚು ಎಸ್‌ಸಿ ಸಮುದಾಯವರು ಇದ್ದಾರೆ. ಅಲ್ಲಿ ಚೆನ್ನಾಗಿ ಸರ್ವೆ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮ್ಮ, ಸೋದರನಿಗೆ ಡ್ರಗ್ಸ್ ಚಟ | ಬಾಲಕನಿಗೆ ನಾಯಿಗಳೇ ಆಸರೆ – ಬೊಗಳುವ ಮೂಲಕ ಮಾತ್ರ ಸಂವಹನ!

    ಅಪಾರ್ಟ್ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸ ಮಾಡೋರು ಒಳಗೆ ಬಿಟ್ಟುಕೊಳ್ಳಲ್ಲ. ಕೆಲವರು ಜಾತಿ ಹೆಸರು ಹೇಳಲು ಹಿಂದೇಟು ಹಾಕ್ತಿದ್ದಾರೆ. ನೀವು ಹಿಂದೇಟು ಹಾಕಬೇಡಿ, ಆನ್‌ಲೈನ್‌ನಲ್ಲಿ ಮಾಡ್ರಪ್ಪ. ಜುಲೈ 6ಕ್ಕೆ ಒಳಮೀಸಲಾತಿ ಸರ್ವೆ ಮುಕ್ತಾಯ ಆಗಬೇಕು. ಈ ತಿಂಗಳ ಒಳಗೆ ಒಳಮೀಸಲಾತಿ ಜಾರಿ ಆಗಬೇಕು ಅಂತಾ ಆಗ್ರಹಿಸಿದ್ದಾರೆ.

  • ಬೇಕಾಬಿಟ್ಟಿ ಜನಗಣತಿ – ಪೌರ ಕಾರ್ಮಿಕರಿಂದ ಮನೆಗೆ ಸ್ಟಿಕ್ಕರ್‌!

    ಬೇಕಾಬಿಟ್ಟಿ ಜನಗಣತಿ – ಪೌರ ಕಾರ್ಮಿಕರಿಂದ ಮನೆಗೆ ಸ್ಟಿಕ್ಕರ್‌!

    – ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಟಾಬಯಲು

    ಬೆಂಗಳೂರು: ಕರ್ನಾಟಕ ಸರ್ಕಾರ (Karnataka Government) ಬಿಬಿಎಂಪಿ ಸಹಯೋಗದೊಂದಿಗೆ, ಬೆಂಗಳೂರು (Bengaluru) ನಗರದಾದ್ಯಂತ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯನ್ನು (SC Survey) ನಡೆಸುತ್ತಿದೆ. ಆದರೆ ನಗರದ ಅನೇಕ ಕಡೆ ಇದು ಕಾಟಚಾರಕ್ಕೆ ಮಾಡುತ್ತಿರುವ ಸಮೀಕ್ಷೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಪಬ್ಲಿಕ್ ಟಿವಿ ಕೂಡ ರಿಯಾಲಿಟಿ ಚೆಕ್ ಮಾಡಿದಾಗ ಸಮೀಕ್ಷೆಯ ಕಳ್ಳಾಟ ಬಯಲಾಗಿದೆ.

    ನಗರದ ಹಲವು ಕಡೆ ಸಮೀಕ್ಷೆ ಹೋದವರು, ಮನೆಗಳಿಗೆ ಕೇವಲ ಚೀಟಿ ಅಂಟಿಸಿ ಹೋಗುತ್ತಿದ್ದು, ನಿವಾಸಿಗಳ ಬಳಿ ಯಾವುದೇ ದಾಖಲೆ, ಮಾಹಿತಿ ಕೇಳುತ್ತಿಲ್ಲ. ಇನ್ನು ಕೆಲವು ಕಡೆ ಪೌರ ಕಾರ್ಮಿಕರು ಮನೆಯ ಗೋಡೆಗಳಿಗೆ ಚೀಟಿ ಅಂಟಿಸಿ ಹೋಗುತ್ತಿದ್ದಾರೆ. ಈ ಸಂಬಂಧ ನಗರದ ಹಲವು ಕಡೆ ನಿಮ್ಮ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮೂಲಕ ಸತ್ಯ ಸತ್ಯತೆಯನ್ನ ಹೊರಗೆಳೆದಿದೆ. ಇದನ್ನೂ ಓದಿ: ಶೌಚಾಲಯದಲ್ಲಿ ಮಹಿಳಾ ಸಹೋದ್ಯೋಗಿ ವೀಡಿಯೋ ರೆಕಾರ್ಡ್ ಟೆಕ್ಕಿ ಅರೆಸ್ಟ್

     

    ಸಮೀಕ್ಷೆ ಹೇಗೆ ಮಾಡಬೇಕು?
    ಪರಿಶಿಷ್ಟ ಪಂಗಡಗಳಿಗೆ ಒಳ ಮೀಸಲಾತಿ ನೀಡಲು ಕೈಗೊಂಡಿರುವ ಸಮೀಕ್ಷೆಯಲ್ಲಿ 101 ಉಪ ಜಾತಿಗಳ ವರ್ಗೀಕರಣಕ್ಕೆ ದತ್ತಾಂಶ ಸಂಗ್ರಹಣೆಗಾಗಿ ಮನೆ ಮನೆ ಹೋಗಿ ಮಾಹಿತಿ ಸಂಗ್ರಹ ಮಾಡಬೇಕು. ಮನೆಯ ಸದಸ್ಯರನ್ನು ಭೇಟಿ ಮಾಡಿ ದಾಖಲೆ ಪರಿಶೀಲನೆ ಮಾಡಿ ಆ ಬಳಿಕ ಸ್ಟಿಕ್ಕರ್‌ ಅಂಟಿಸಿ ಯಾವುದಾದರೂ ಗೊಂದಲ ಇದ್ದಲ್ಲಿ ಮಾತ್ರ ಕರೆ ಮಾಡುವಂತೆ ಮಾಹಿತಿ ನೀಡಬೇಕು. ಆದರೆ ನೇರ ಭೇಟಿ, ದಾಖಲೆ ಪರಿಶೀಲನೆಯನ್ನೂ ಮಾಡದೇ ನಗರದ ಬಹುತೇಕ ಕಡೆ ಸ್ಟಿಕ್ಕರ್‌ ಅಂಟಿಸಿ ಹೋಗುತ್ತಿದ್ದಾರೆ.

    ಕಾಟಚಾರದ ಸಮೀಕ್ಷೆ ಹೇಗಿದೆ ಎನ್ನುವುದಕ್ಕೆ ಸಿಸಿಟಿವಿ ಸಾಕ್ಷ್ಯ ಲಭ್ಯವಾಗಿದೆ. ನಗರದ ಹೆಚ್‌ಬಿಆರ್‌ ಲೇಔಟ್ ನಲ್ಲಿ ಮನೆಯಲ್ಲಿದ್ದ ಯಾರನ್ನೂ ಸಂಪರ್ಕ ಮಾಡದೇ ಮನೆಗೆ ಬಂದವರೇ ಗೋಡೆಗೆ ಸ್ಟಿಕ್ಕರ್‌ ಅಂಟಿಸಿ ಹೋಗಿದ್ದಾರೆ. ಬಿಬಿಎಂಪಿ ಅಧಿಕಾರಿ ಸಿಬ್ಬಂದಿಗಳ ಕಳ್ಳಾಟದ ವಿಡಿಯೋವನ್ನು ಕೂಡ ಬೆಂಗಳೂರಿಗರು ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಕೊಟ್ಟ ಪ್ರೀತಿಸಿದ ಹುಡುಗಿ ಮನನೊಂದು ಯುವಕ ನೇಣಿಗೆ ಶರಣು

     

    ಈ ರೀತಿ ಸಮೀಕ್ಷೆ ಬಗ್ಗೆ ಸಾರ್ವಜನಿಕರು ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಮನೆಗೆ ಅಂಟಿಸಿದ್ದ ಸ್ಟಿಕ್ಕರ್‌ಗಳಲಿದ್ದ ಸಂಖ್ಯೆಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರನ್ನೂ ಕೇಳದೆ ಹೇಗೆ ಸಮೀಕ್ಷೆ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಎಚ್ಚರಿಕೆಗೆ ಕಂಗಾಲಾದ ಸಹಾಯವಾಣಿ ಸಿಬ್ಬಂದಿ ಕೂಡ ತಮ್ಮಿಂದ ಆಗಿರೋ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

    ಸಮೀಕ್ಷೆ ಹಳ್ಳ ಹಿಡಿಯಲು ಸರ್ಕಾರವೇ ಕಾರಣ. ಸಂಬಳ ಆಗದ ಕಾರಣ ಆಶಾ ಕಾರ್ಯಕರ್ತೆಯರು ಸಮೀಕ್ಷೆಯಲ್ಲಿ ಭಾಗಿಯಾಗುತ್ತಿಲ್ಲ. ಸಂಬಳ ಆಗದೇ ಕಾರಣ ನಾವು ಹೋಗುತ್ತಿಲ್ಲ ಎಂದು ಆಶಾ ಕಾರ್ಯಕರ್ತರು ಕೂಡ ಹಠ ಹಿಡಿದಿದ್ದಾರೆ. ಮೂರ್ನಾಲ್ಕು ತಿಂಗಳಿನಿಂದ ಸಂಬಳ ಆಗದ ಕಾರಣವೇ ಸಮೀಕ್ಷೆ ಹಳ್ಳ ಹಿಡಿಯುತ್ತಿದೆ.