Tag: SC ST Reservation

  • ಲಿಂಗಾಯತರಿಗೆ ಶೇ.7, ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿ – SC ಒಳ ಮೀಸಲಾತಿಗೆ ಸಂಪುಟ ಅಸ್ತು

    ಲಿಂಗಾಯತರಿಗೆ ಶೇ.7, ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿ – SC ಒಳ ಮೀಸಲಾತಿಗೆ ಸಂಪುಟ ಅಸ್ತು

    ಬೆಂಗಳೂರು: ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವ ಹೊತ್ತಿನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಕ್ಕಲಿಗರು, ಲಿಂಗಾಯತ ಪಂಚಮಸಾಲಿ, ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿಯ ಗಿಫ್ಟ್‌ ಕೊಟ್ಟಿದ್ದಾರೆ.

    ಸಂಪುಟ ಸಭೆಯ ಬಳಿಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ಈಗ ಅದು ಅನುಷ್ಟಾನದಲ್ಲಿ ಇದೆ. 9 ಶೆಡ್ಯೂಲ್ ಗೆ ಕಳುಹಿಸಿ ಕೊಟ್ಟಿದ್ದೇವೆ. ಒಳ ಮೀಸಲಾತಿಗೆ ಸಾಕಷ್ಟು ಹೋರಾಟ ನಡೆದಿತ್ತು. ಸ್ಪೃಶ್ಯರು, ಅಸ್ಪೃಶ್ಯರು ಸೇರಿ ಒಳಗೊಂಡಂತೆ ಎಸ್ಸಿಗಳಲ್ಲಿ 101 ಪಂಗಡಗಳಿವೆ. ಭೋವಿ, ಲಂಬಾಣಿ, ಕೊರಚ, ಕೊರ್ಮ ಮೂಲ ಪರಿಶಿಷ್ಟ ಜಾತಿಯಲ್ಲಿದ್ದಾರೆ. ಎಸ್ಸಿ ಮೀಸಲಾತಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಆರ್ಟಿಕಲ್ 341/2 ಅನ್ವಯ ನಾಲ್ಕು ಗುಂಪುಗಳಿಗೂ ಎಸ್ಸಿ ಲೆಫ್ಟ್, ರೈಟ್, ಅಸ್ಪೃಶ್ಯರು, ಇತರರು, ಎಡ‌ಕ್ಕೆ ಶೇ.6, ಬಲಕ್ಕೆ ಶೇ.5.5, ಸ್ಪೃಶ್ಯರು ಶೇ.4.5 ಹಾಗೂ ಇತರರಿಗೆ ಶೇ.1 ರಷ್ಟು ಮೀಸಲಾತಿ ನೀಡಲಾಗಿದೆ.  ಇದನ್ನೂ ಓದಿ: ವಿಜಯಪುರ ಲಾಡ್ಜ್‌ನಲ್ಲಿ ಎರಡು ಶವ ಪತ್ತೆ: ಸ್ಥಳಕ್ಕೆ ಎಸ್ಪಿ ಭೇಟಿ

    ರಾಜ್ಯದಲ್ಲಿ ಸ್ವತಂತ್ರ ಬಂದ ನಂತರ ಸಾಮಾಜಿಕವಾಗಿ ಅನೇಕ ನಿರ್ಣಯಗಳನ್ನ ಪ್ರಮುಖವಾಗಿ ತಗೆದುಕೊಳ್ಳಲಾಗಿದೆ. ಎಲ್ಲಾ ಸಮುದಾಯದಲ್ಲೂ ನಿರೀಕ್ಷೆಗಳು ಜಾಸ್ತಿ ಆಗಿದೆ. ನಾವು ವಿದ್ಯಾವಂತರಾಗಬೇಕು, ಉದ್ಯೋಗ ಪಡೆಯಬೇಕು ಎಂಬ ಆಕಾಂಕ್ಷೆ ಹೆಚ್ಚಿದೆ. ಬಹಳಷ್ಟು ಬೇಡಿಕೆಗಳೊಂದಿಗೆ ಹೋರಾಟಗಳು ನಡೆಯುತ್ತಿವೆ. ಎಲ್ಲಾ ಸಮುದಾಯಗಳ ಆಶೋತ್ತರಗಳನ್ನ ಈಡೇರಿಸಲು ಮುಂದಾದರೆ ಜೇನುಗೂಡಿಗೆ ಕೈ ಹಾಕಿದಂತೆ ಎಂಬ ಭಾವನೆ ಇದೆ. ಈಗಾಗಲೇ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈಗ ಅದು ಅನುಷ್ಟಾನದಲ್ಲಿ ಇದೆ. ಇದನ್ನೂ ಓದಿ:  ಬಿಜೆಪಿಯವರು ಅವಹೇಳನಕಾರಿ ಭಾಷಣ ಮಾಡಿಲ್ವಾ: ದಿನೇಶ್ ಗುಂಡೂರಾವ್ ಪ್ರಶ್ನೆ

    3A 3B ನಲ್ಲಿ ಒಕ್ಕಲಿಗ ಅಂಡ್ ಹಾಗೂ ಇತರರು, ಲಿಂಗಾಯತ ಪಂಚಮಸಾಲಿ ಹಾಗೂ ಇತರರಿದ್ದು, ಒಕ್ಕಲಿಗರ ಮೀಸಲಾತಿಯನ್ನು 4 ರಿಂದ ಶೇ.6ಕ್ಕೆ, ಲಿಂಗಾಯತ ಪಂಚಮಸಾಲಿಗೆ ಇದ್ದ ಶೇ.5 ಮೀಸಲಾತಿ ಶೇ.7ಕ್ಕೆ ಹೆಚ್ಚಾಗಲಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕಾಡು ಕುರುಬ, ಗೊಂಡ ಕುರುಬ ಈಗಾಗಲೇ ಹೋಗಿದೆ. ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

    ಗುಂಪು 1 – ರಲ್ಲಿ
    ಎಡಗೈ ಸಮುದಾಯದ ಗುಂಪಿಗೆ ಶೇ 6 ಒಳ ಮೀಸಲಾತಿ
    (ಮಾದಿಗ, ಆದಿದ್ರಾವಿಡ, ಬಂಬಿ ಮತ್ತು ಇತರ ಸಂಬಂಧಿತ ಜಾತಿಗಳು)

    ಗುಂಪು 2-ರಲ್ಲಿ
    ಬಲಗೈ ಸಮುದಾಯದ ಗುಂಪಿಗೆ ಶೇ.5.5 ಒಳ ಮೀಸಲಾತಿ
    (ಹೊಲೆಯ, ಆದಿಕರ್ನಾಟಕ, ಛಲವಾದಿ ಮತ್ತು ಇತರೆ ಸಂಬಂಧಿಸಿದ ಜಾತಿಗಳು)

    ಗುಂಪು 3-ರಲ್ಲಿ
    ಬಂಜಾರ, ಭೋವಿ, ಕೊರಚ, ಕೊರಮ (ಅಸ್ಪಶ್ಯರಲ್ಲದ) ಗುಂಪಿಗೆ ಶೇ.4.5 ಒಳ ಮೀಸಲಾತಿ

    ಗುಂಪು 4-ರಲ್ಲಿ
    ಅಲೆಮಾರಿ, ಅರೆ ಅಲೆಮಾರಿ, ಇತರೆ ಸಮುದಾಯಕ್ಕೆ ಶೇ.1 ಒಳ ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

  • ಸ್ವಂತ ನೀರು ತಂದು ಸ್ನಾನ ಮಾಡ್ಬೇಕು; ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂರಬಾರದು – C.C ಪಾಟೀಲ್

    ಸ್ವಂತ ನೀರು ತಂದು ಸ್ನಾನ ಮಾಡ್ಬೇಕು; ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂರಬಾರದು – C.C ಪಾಟೀಲ್

    ಗದಗ: ಸ್ವಂತ ನೀರು ತಂದು ಸ್ನಾನ (ಜಳಕ) ಮಾಡಬೇಕೇ ಹೊರತು ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂತು ಮಾಡಬಾರದು ಎಂದು ಸಚಿವ ಸಿ.ಸಿ.ಪಾಟೀಲ್ (CC Patil ) ಕಾಂಗ್ರೆಸ್, ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಮೀಸಲಾತಿ (SCST Reservation) ಸಮಾವೇಶ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ `ಮೋದಿ-ಮೋದಿ’, `AAP ನಾಯಕರು ಚೋರ್-ಚೋರ್’ ಘೋಷಣೆ

    ಎಸ್ಸಿ-ಎಸ್ಟಿ ಮೀಸಲಾತಿ ಮಾಡಿದ್ದು ಬಿಜೆಪಿ (BJP), ಮೀಸಲಾತಿ ಮಾಡಿದ್ದು ಬಿಎಸ್‌ವೈ (BS Yediyurappa), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai). ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶ್ರೀರಾಮುಲು ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರು. ಆದರೀಗ ಮೀಸಲಾತಿ ಕೀರ್ತಿಗಾಗಿ ಕಾಂಗ್ರೆಸ್ (Congress), ಜೆಡಿಎಸ್ (JDS) ಗುದ್ದಾಡುತ್ತಿವೆ. ಕೀರ್ತಿ ಬೇಕಾದ್ರೆ ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಆ ನಿರ್ಧಾರ ತೆಗೆದುಕೊಳ್ಳಲಿಲ್ಲ? ನಾವು ನಿರ್ಧಾರ ತೆಗೆದುಕೊಂಡಾಗ ಅದರ ಲಾಭ ಪಡಿಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಎಸ್ಸಿ-ಎಸ್ಟಿ ಸಮುದಾಯದ ಜನ ಮುಗ್ಧರೇ ಇರಬಹುದು. ಆದ್ರೆ ಹುಚ್ಚರು, ಬುದ್ಧಿಗೇಡಿಗಳಲ್ಲ ಎಂಬುದು ಜ್ಞಾಪಕವಿರಲಿ. ಹಿಂದುಳಿದ ಜನರನ್ನು ತಮ್ಮ ಮತ ಬ್ಯಾಂಕ್ ಮಾಡಿಕೊಂಡು ಆಸೆ ಆಮಿಷ ತೋರಿಸುತ್ತಾ ಚುನಾವಣೆಯಲ್ಲಿ ಮತ ಹಾಕಿಸಿಕೊಂಡರು. ಆ ಸಮುದಾಯಕ್ಕೆ ಯಾವೊಂದು ಕೆಲಸವನ್ನೂ ಮಾಡಿಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಇವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ: ಜಗ್ಗೇಶ್

    ಪೂರ್ವಭಾವಿ ಸಭೆಯಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಸೇರಿದಂತೆ ಬಿಜೆಪಿ ಮುಖಂಡ ರಾಜು ಕುರುಡಗಿ, ಎಮ್.ಎಸ್ ಕರಿಗೌಡ್ರ, ನಗರಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಾನು ಛೀ, ಥೂ ಅನ್ನಿಸಿಕೊಂಡು ಅಧಿಕಾರ ಮಾಡಿಲ್ಲ – ಸಿದ್ದರಾಮಯ್ಯ

    ನಾನು ಛೀ, ಥೂ ಅನ್ನಿಸಿಕೊಂಡು ಅಧಿಕಾರ ಮಾಡಿಲ್ಲ – ಸಿದ್ದರಾಮಯ್ಯ

    ಮಂಡ್ಯ: ಈವರೆಗೆ ನಾನು ಯಾರಿಂದಲೂ ಛೀ, ಥೂ ಅನ್ನಿಸಿಕೊಂಡು ಅಧಿಕಾರ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಮಂಡ್ಯ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಹುಲಿಯೂರಮ್ಮ ದೇವಸ್ಥಾನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜನರು ಆಶೀರ್ವಾದ ಮಾಡಿದ್ದರಿಂದ 5 ವರ್ಷ ಸಿಎಂ ಆಗಿದ್ದೆ. ಯಾರಿಂದಲೂ ಛೀ, ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. 158 ಭರವಸೆಗಳನ್ನೂ ಈಡೇರಿಸಿದ್ದೇವೆ. ಅದನ್ನು ಮೀರಿ 30ಕ್ಕೂ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆಣಬಿನ ಬೀಜದ ಎಣ್ಣೆ ಬಗ್ಗೆ ತಿಳಿದಿದ್ದೀರಾ? ಇದರಲ್ಲಿದೆ ತ್ವಚೆ ಸೌಂದರ್ಯದ ಗುಟ್ಟು

    ಎಲ್ಲಾ ಜಾತಿ ಬಡವರಿಗೆ ಕಾರ್ಯಕ್ರಮ ಕೊಟ್ಟಿದ್ದೇನೆ. ಕೆಲವೇ ಜಾತಿಗಳಿಗೆ ಸೀಮಿತವಾಗಿ ನಾನು ಅಧಿಕಾರ ಮಾಡಲಿಲ್ಲ. ಅಕ್ಕಿ, ಹಾಲು, ಶೂ, ಸಮವಸ್ತ್ರ ಎಲ್ಲಾ ಧರ್ಮ, ಜಾತಿವರಿಗೂ ಉಪಯೋಗವಾಗಿದೆ. ಇವತ್ತು ಎಲ್ಲವನ್ನೂ ಹಾಳು ಮಾಡ್ತಿದ್ದಾರೆ. ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ರಾಜ್ಯದಲ್ಲಿ 2 ವರ್ಷದಿಂದ ವಿದ್ಯಾರ್ಥಿ ವೇತನ (Student Scholarship) ಕೊಟ್ಟಿಲ್ಲ. ಈ ಬಗ್ಗೆ ಎಸ್ಸಿ-ಎಸ್ಟಿ ಮಕ್ಕಳು (SC ST Community) ನನ್ನ ಮುಂದೆ ದೂರುತ್ತಿದ್ದಾರೆ. ವಿದ್ಯಾಸಿರಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಹೀಗಿರುವಾಗಿ ಎಸ್ಸಿ-ಎಸ್ಟಿ ಸಮುದಾಯಗಳ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ಪ್ರೀತಿಸಿದ ಮೊದಲ ಹುಡುಗಿ ಸಮಂತಾ: ಟ್ವೀಟ್ ಮಾಡಿದ ವಿಜಯ್ ದೇವರಕೊಂಡ

    ಬಿಜೆಪಿ ಅವರು ಅಧಿಕಾರಕ್ಕೆ ಬಂದಿರೋದೇ ಹಿಂಬಾಗಲಿನಿಂದ. ನಾವು ಮುಂಭಾಗಲಿಂದಲೇ ಓಡಿಸೋಣ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕಾ? ನಾವು ಅಧಿಕಾರಕ್ಕೆ ಬಂದ್ರೆ ಜನೋಪಯೋಗಿ ಕೆಲಸ ಮಾಡ್ತೇವೆ. ಜನರಿಗೆ ಉಪಯೋಗ ಆಗುವ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಬಿಜೆಪಿ ವಿರುದ್ಧ ಸಿದ್ದು ಗುಡುಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಬೇಡ; ವಿಶೇಷ ಅಧಿವೇಶನ ಕರೆಯಿರಿ – ಸಿದ್ದರಾಮಯ್ಯ

    ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಬೇಡ; ವಿಶೇಷ ಅಧಿವೇಶನ ಕರೆಯಿರಿ – ಸಿದ್ದರಾಮಯ್ಯ

    ರಾಯಚೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ (SC ST) ಜಾತಿ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ (Reservation) ಇರಬೇಕು. ಹೀಗಾಗಿ ಮೀಸಲಾತಿ ಹೆಚ್ಚಳ ಆಗಬೇಕು ಅನ್ನೋ ಹೋರಾಟ ಹಳೆಯದು. ಸರ್ಕಾರಕ್ಕೆ ನಿಜವಾಗಿ ಕಾಳಜಿಯಿದ್ದರೆ, ಸುಗ್ರೀವಾಜ್ಞೆ ಹೊರಡಿಸುವ ಬದಲು ವಿಶೇಷ ಅಧಿವೇಶನ ಕರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಒತ್ತಾಯಿಸಿದ್ದಾರೆ.

    ಭಾರತ್ ಜೋಡೋ ಪಾದಯಾತ್ರೆ (Bharat Jodo Yatra) ವೇಳೆ ರಾಯಚೂರಿನ (Raichuru) ಗಿಲ್ಲೆಸುಗೂರಿನಲ್ಲಿ ಮಾತನಾಡಿದ ಅವರು, ಡಿಸೆಂಬರ್‌ವರೆಗೆ ಅಸೆಂಬ್ಲಿಗೆ ಯಾಕೆ ಕಾಯಬೇಕು. ಒಂದು ವಾರದ ಒಳಗೆ ಕರೆಯಿರಿ. ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಅಧಿವೇಶನದಲ್ಲಿ ಕಾಯ್ದೆ ಪಾಸ್ ಆದ ಮೇಲೆ ದೆಹಲಿಯಲ್ಲಿ ಕುಳಿತು 9 ಶೆಡ್ಯೂಲ್ ಮಾಡಿ. ಅಡ್ಡ ದಾರಿ ಹಿಡಿಯಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ: ಸಿಎಂ ಘೋಷಣೆ

    ನಮ್ಮ ಸರ್ಕಾರ, ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರಿಯಾಂಕ್ ಖರ್ಗೆ ಸಚಿವರಿದ್ದಾಗ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಸಮಿತಿ ವರದಿ ಬಂದಾಗ ನಮ್ಮ ಸರ್ಕಾರ ಇರಲಿಲ್ಲ. ವರದಿ ಕೊಟ್ಟು ಎರಡು ವರ್ಷದ ಮೂರು ತಿಂಗಳಿಗೂ ಜಾಸ್ತಿಯಾಗಿದೆ. ವರದಿ ಬಂದಾಗಿನಿಂದಾಗಲೂ ಎಸ್‌ಸಿ, ಎಸ್‌ಟಿ ಶಾಸಕರು‌ ಧ್ವನಿ ಎತ್ತಿದ್ದರು. ಕೊನೆ ಅಧಿವೇಶನದಲ್ಲಿ ಶಾಸಕರು ಬಾವಿಗಿಳಿದು ಹೋರಾಟ ಮಾಡಿದಾಗ ಸಿಎಂ ಸರ್ವಪಕ್ಷ ಶಾಸಕರ ಸಭೆ ಕರೆಯುತ್ತೇನೆ ಅಂತ ಹೇಳಿದರು. ಎಸ್‌ಟಿಗೆ 3 ರಿಂದ 7 % ಹೆಚ್ಚು ಮಾಡಬೇಕು. ಎಸ್‌ಸಿಗೆ 15 ರಿಂದ 17% ಆಗಬೇಕು. ಒಟ್ಟು 24 % ಆಗಬೇಕು ಅಂತ ವರದಿಯಲ್ಲಿದೆ. ಮೀಸಲಾತಿ ಸಾಮಾನ್ಯವಾಗಿ 50% ಗಿಂತ ಹೆಚ್ಚಾಗಬಾರದು ಅನ್ನೋ ಜಡ್ಜ್‌ಮೆಂಟ್ ಉಲ್ಲಂಘನೆಯಾಗುತ್ತದೆ. ಮೀಸಲಾತಿ ಪ್ರಮಾಣ ಹೆಚ್ಚಾಗಿರುವುದರಿಂದ ಇದಕ್ಕೆ ಸಂವಿಧಾನ ತಿದ್ದುಪಡಿ ಆಗಬೇಕು. ಒಂದು ವಾರ ದೆಹಲಿಯಲ್ಲಿ ಕೂತು 9 ಶೆಡ್ಯೂಲ್‌ನಲ್ಲಿ ಸೇರಿಸಿ, ಸುಗ್ರೀವಾಜ್ಞೆ ಬೇಡ ಎಂದಿದ್ದಾರೆ.

    ಸರ್ಕಾರಕ್ಕೆ ಪರಿಶಿಷ್ಟ ಜಾತಿ, ಪಂಗಡದವರ ಬಗ್ಗೆ ಕಾಳಜಿಯಿಲ್ಲ. ಕೇವಲ ಮೊಸಳೆ ಕಣ್ಣೀರು ಹಾಕುತ್ತಿದೆ. ರಾಹುಲ್ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪಾದಯಾತ್ರೆಯ ಫಲ ಮುಂದಿನ ಚುನಾವಣೆಯಲ್ಲಿ ಪಡೆಯುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • SC-ST ಮೀಸಲಾತಿ ಹೆಚ್ಚಳ – ಅ.20ರಂದು ಸಿಎಂ ಬೊಮ್ಮಾಯಿ ಸುಗ್ರೀವಾಜ್ಞೆ!

    SC-ST ಮೀಸಲಾತಿ ಹೆಚ್ಚಳ – ಅ.20ರಂದು ಸಿಎಂ ಬೊಮ್ಮಾಯಿ ಸುಗ್ರೀವಾಜ್ಞೆ!

    ಬೆಂಗಳೂರು: ಎಸ್ಸಿ-ಎಸ್ಟಿ ಮೀಸಲಾತಿ (SC ST Reservation) ಹೆಚ್ಚಿಸಲು ರಾಜ್ಯ ಸರ್ಕಾರ (Government Of Karnataka) ಇತ್ತೀಚೆಗಷ್ಟೇ ನಿರ್ಧಾರ ಮಾಡಿತ್ತು. ಇದನ್ನು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ಬೊಮ್ಮಾಯಿ (Basavaraj Bommai) ಸರ್ಕಾರ ಪ್ಲಾನ್ ಮಾಡಿದೆ.

    ಇದೇ 20ರಂದು ಅಂದ್ರೆ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ನಡೆಯೋ ಚಳಿಗಾಲದ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳ ಕುರಿತ ವಿಧೇಯಕ ಮಂಡಿಸಲಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ನಿಲ್ಲದ ರಾಜಕೀಯ ದಂಗಲ್ – ಎಸ್‍ಸಿ, ಎಸ್‍ಟಿ ಅನುದಾನಕ್ಕೆ ಸಿಪಿವೈ ತಡೆ ಆರೋಪ

    ಈ ಮಧ್ಯೆ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿ (Reservation) ಹೆಚ್ಚಿಸಬೇಕೆಂಬ ಬೇಡಿಕೆ ಇಟ್ಟಿದೆ. ಕೋಲಾರದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠದ ಸ್ವಾಮೀಜಿ, ಶೇಕಡಾ 4ರಷ್ಟಿರುವ ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇಕಡಾ 12ಕ್ಕೆ ಹೆಚ್ಚಳ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: AICC ಅಧ್ಯಕ್ಷೀಯ ಚುನಾವಣೆಯಲ್ಲಿ 96ರಷ್ಟು ಮತದಾನ- ಕನ್ನಡಿಗ ಖರ್ಗೆ ಪಟ್ಟಕ್ಕೇರೋದು ಫಿಕ್ಸ್

    ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ (Dk Shivakumar), ಈ ಬೇಡಿಕೆ ತಪ್ಪಲ್ಲ. ಇದರ ಬಗ್ಗೆ ಮುಂದೆ ಮಾತಾಡೋಣ ಎಂದಿದ್ದಾರೆ. ಇನ್ನು ಪಂಚಮಸಾಲಿಗಳ ಮೀಸಲಾತಿ ಬೇಡಿಕೆ ಕುರಿತು ಸಮಾಲೋಚನೆ ಮಾಡ್ತೀವಿ ಅಂತಾ ಬಿಜೆಪಿ (BJP) ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]