Tag: sbi

  • ನ್ಯಾಮತಿ ಎಸ್‍ಬಿಐ ಗ್ರಾಹಕರಿಗೆ ಗುಡ್‌ನ್ಯೂಸ್‌ – ಕಳ್ಳತನವಾಗಿದ್ದ 17 ಕೆಜಿ ಚಿನ್ನ ಬ್ಯಾಂಕ್‌ಗೆ ವಾಪಸ್‌

    ನ್ಯಾಮತಿ ಎಸ್‍ಬಿಐ ಗ್ರಾಹಕರಿಗೆ ಗುಡ್‌ನ್ಯೂಸ್‌ – ಕಳ್ಳತನವಾಗಿದ್ದ 17 ಕೆಜಿ ಚಿನ್ನ ಬ್ಯಾಂಕ್‌ಗೆ ವಾಪಸ್‌

    ದಾವಣಗೆರೆ: ಕಳೆದ ವರ್ಷದ ದೀಪಾವಳಿ ಮುನ್ನಾ ದಿನ ನ್ಯಾಮತಿಯ (Nyamathi) ಎಸ್‍ಬಿಐನಲ್ಲಿ (SBI) ನಡೆದಿದ್ದ 17 ಕೆಜಿ ಚಿನ್ನ (Gold) ಕಳ್ಳತನ ಪ್ರಕರಣ ಸುಖಾಂತ್ಯ ಕಂಡಿದೆ. ಗ್ರಾಹಕರ ಬಂಗಾರವನ್ನು ಪೊಲೀಸರು ಬ್ಯಾಂಕ್‍ಗೆ ಹಸ್ತಾಂತರಿಸಿದ್ದಾರೆ.

    ಅಕ್ಟೋಬರ್ 2024ರ 28ರಂದು ಕಳ್ಳತನ ನಡೆದಿತ್ತು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿತ್ತು. ಅಲ್ಲಿ ಪಕ್ಕಾ ಹಾಲಿವುಡ್ ಸಿನೆಮಾ ಮೀರಿಸುವಂತೆ ಸಂಚು ಮಾಡಿ ಕಳ್ಳತನ ಮಾಡಲಾಗಿತ್ತು. ಆ ಬ್ಯಾಂಕಿನಿಂದ 12.95 ಕೋಟಿ ರೂ. ಮೌಲ್ಯದ 509 ಜನ ಗ್ರಾಹಕರ, 17 ಕೆಜಿಗೂ ಅಧಿಕ ಚಿನ್ನಾಭರಣ ಕದ್ದು ಕಳ್ಳರು ಕಾಲ್ಕಿತ್ತಿದ್ದರು. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ – ತಮಿಳುನಾಡಿನ ಪಾಳು ಬಾವಿಯಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ಯಾಂಗ್!

    ಹೊರಡುವ ಮುನ್ನ ಖತರ್ನಾಕ್ ಕಳ್ಳರು ಬ್ಯಾಂಕ್‍ನಲ್ಲಿ ಪ್ರಮುಖ ಸಾಕ್ಷಿಯಾಗಬಲ್ಲ ಸಿಸಿ ಟಿವಿ ಕ್ಯಾಮೆರಾ ಡಿವಿಆರ್ ತೆಗೆದುಕೊಂಡು, ಇಡಿ ಬ್ಯಾಂಕ್ ತುಂಬೆಲ್ಲಾ ಕಾರದ ಪುಡಿ ಎಸೆದಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್‍ನಲ್ಲಿ ಬಂಗಾರ ಅಡವಿಟ್ಟಿದ್ದ ಗ್ರಾಹಕರು ಅಕ್ಷರಶಃ ಕಂಗಾಲಾಗಿದ್ದರು.

    ದಾವಣಗೆರೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಸಂಪೂರ್ಣ ಬಂಗಾರ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕ್ರಿಯೆ ಮುಗಿದ ಹಿನ್ನಲೆ ಪೊಲೀಸರು ಗ್ರಾಹಕರ ಸಮ್ಮುಖದಲ್ಲಿ ಎಲ್ಲ ಬಂಗಾರವನ್ನು ಬ್ಯಾಂಕ್‍ಗೆ ಹಸ್ತಾಂತರ ಮಾಡಿದ್ದಾರೆ.

    ಪೊಲೀಸರು ಹಸ್ತಾಂತರ ಮಾಡುತ್ತಿದ್ದಂತೆ ಸೇರಿದ್ದ ಎಸ್‍ಬಿಐ ಗ್ರಾಹಕರು, ಕಳ್ಳತನ ನಡೆದ ದಿನ ತಮ್ಮ ಕುಟುಂಬದ ಪರಿಸ್ಥಿತಿ ನೆನೆದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಎಸ್‌ಬಿಐ ಬ್ಯಾಂಕ್ ದರೋಡೆ ಕೇಸ್ – 12.96 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದ 5 ಆರೋಪಿಗಳು ಅರೆಸ್ಟ್

  • ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    – ಸಿಬ್ಬಂದಿಯನ್ನು ಕಟ್ಟಿ ಹಾಕಿ ದೋಚಿದ ಕಳ್ಳರು

    ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬ್ಯಾಂಕ್‌ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ನಲ್ಲಿ (SBI Bank) ದರೋಡೆ (Robbery) ನಡೆದಿದೆ.

    ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ತೋರಿಸಿ ಕಟ್ಟಿಹಾಕಿ ಕಳ್ಳರು ಕಳ್ಳತನ ಮಾಡಿದ್ದಾರೆ. ಬ್ಯಾಂಕ್ ವಹಿವಾಟು ಸಮಯ ಮುಗಿದ ಮೇಲೆ ಬ್ಯಾಂಕ್‌‌ಗೆ 5ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ಕೃತ್ಯ ಎಸಗಿದ್ದಾರೆ.

     

    ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್‌‌ನಲ್ಲಿ ಎಷ್ಟು ಹಣ ಕಳ್ಳತನದ ಆಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 8 ಕೋಟಿ ರೂ. ನಗದು ಹಣ ಹಾಗೂ ಸುಮಾರು 50 ಕೆಜಿಗೂ ಆಧಿಕ ಚಿನ್ನಾಭರಣ ದರೋಡೆಯಾಗಿರೋ ಶಂಕೆ ವ್ಯಕ್ತವಾಗಿದೆ.

    ಪೊಲೀಸರು ಬ್ಯಾಂಕಿನ ಸಿಸಿ ಕ್ಯಾಮೆರಾ ಮತ್ತು ಹಾರ್ಡ್‌ ಡಿಸ್ಕ್‌ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೇ ರಸ್ತೆಗಳಿಗೂ ಪೊಲೀಸರು ನಾಕಾ ಬಂದಿ ಹಾಕಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಲ್ಲಿ ಆತಂಕ ಎದುರಾಗಿದ್ದು ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಜಮಾವಣೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಜನರನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ.

  • ಕೋಲಾರದಲ್ಲಿ ಎಟಿಎಂ ದರೋಡೆ – 27 ಲಕ್ಷ ದೋಚಿದ ಕಳ್ಳರು

    ಕೋಲಾರದಲ್ಲಿ ಎಟಿಎಂ ದರೋಡೆ – 27 ಲಕ್ಷ ದೋಚಿದ ಕಳ್ಳರು

    ಕೋಲಾರ: ಇಲ್ಲಿನ (Kolar) ಸಹಕಾರ ನಗರದ ಎಸ್‍ಬಿಐ (SBI) ಬ್ಯಾಂಕ್‍ನ ಎಟಿಎಂನಲ್ಲಿದ್ದ (ATM) ಸುಮಾರು 27 ಲಕ್ಷ ರೂ. ಹಣವನ್ನು (Money) ಕಳ್ಳರು ದೋಚಿದ್ದಾರೆ.

    ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಯ ಸಮೀಪ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಸುಮಾರು 27 ಲಕ್ಷ ರೂ. ಹಣ ಇತ್ತು. ಕಳ್ಳರು ಎಲ್ಲಾ ಹಣವನ್ನು ದೋಚಿದ್ದಾರೆ. ಇದನ್ನೂ ಓದಿ: ರ‍್ಯಾಪಿಡೊ ಚಾಲಕನಿಂದ ಹಲ್ಲೆ – ಒಂದೇ ಏಟಿಗೆ ಕೆಳಗೆ ಬಿದ್ದ ಯುವತಿ, ಸ್ಥಳೀಯರಿಂದ ರಕ್ಷಣೆ

    ಸ್ಥಳಕ್ಕೆ ಕೋಲಾರ ಎಸ್‍ಪಿ ನಿಖಿಲ್ ಸೇರಿದಂತೆ ಬೆರಳಚ್ವು ತಜ್ಞರು, ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದ ಇಂದ್ರಯಾಣಿ ನದಿ ಸೇತುವೆ ಕುಸಿತ – ಕರ್ನಾಟಕದ ಟೆಕ್ಕಿ ಸಾವು

  • ಕನ್ನಡ ಮಾತಾಡಿ ಅಂದಿದ್ದಕ್ಕೆ SBI ಬ್ಯಾಂಕ್ ಮ್ಯಾನೇಜರ್ ಕಿರಿಕ್ – ಯಾವತ್ತೂ ಕನ್ನಡ ಮಾತಾಡಲ್ಲ ಅಂತ ದರ್ಪ!

    ಕನ್ನಡ ಮಾತಾಡಿ ಅಂದಿದ್ದಕ್ಕೆ SBI ಬ್ಯಾಂಕ್ ಮ್ಯಾನೇಜರ್ ಕಿರಿಕ್ – ಯಾವತ್ತೂ ಕನ್ನಡ ಮಾತಾಡಲ್ಲ ಅಂತ ದರ್ಪ!

    ಬೆಂಗಳೂರು: ಇಲ್ಲಿನ ಸರ್ಜಾಪುರದ ಎಸ್‌ಬಿಐ ಬ್ಯಾಂಕ್‌ಗೆ (SBI Bank) ಹೋಗಿದ್ದ ಗ್ರಾಹಕರೊಬ್ಬರ ಜೊತೆ ಭಾಷಾ ವಿಷಯಕ್ಕೆ ಬ್ಯಾಂಕ್ ಮ್ಯಾನೇಜರ್ ಉದ್ಧಟತನದಲ್ಲಿ ವರ್ತಿಸಿದ್ದಾರೆ. ಕನ್ನಡ ಮಾತನಾಡಿ ಅಂದಿದ್ದಕ್ಕೆ ನಾನು ಯಾವತ್ತೂ ಕನ್ನಡ ಮಾತಾಡಲ್ಲ ಅಂತ ದರ್ಪ ಮೆರೆಯುವ ಮೂಲಕ ಕನ್ನಡಿಗರನ್ನ (Kannadigas) ಕೆಣಕುವ ಕೆಲಸ ಮಾಡಿದ್ದಾರೆ.

    ಸರ್ಜಾಪುರದ ಎಸ್‌ಬಿಐ ಬ್ಯಾಂಕ್‌ಗೆ ಕೆಲಸದ ನಿಮಿತ್ತ ಗ್ರಾಹಕ ಹೋದಾಗ ಕನ್ನಡ ಮಾತನಾಡುವಂತೆ ಕೇಳಿದ್ದಾರೆ. ಆದರೆ ಕನ್ನಡ ಮಾತನಾಡಲು ಒಪ್ಪದ ಮಹಿಳಾ ಮ್ಯಾನೇಜರ್ ಗ್ರಾಹಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಅವಾಜ್‌ ಹಾಕಿದ್ದು, ಇದು ಭಾರತ ಬರೀ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡವನ್ನೇ ಮಾತಾಡಲ್ಲ. ಏನೇ ಆದರೂ ಅಂತ ಹೇಳುವ ಮ‌ೂಲಕ ಕರ್ನಾಟಕದಲ್ಲಿ ಮತ್ತೆ ಕನ್ನಡಿಗರನ್ನ ಕೆರಳಿಸುವಂತ ಹೇಳಿಕೆ ಕೊಟ್ಟು, ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ರಣಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್

    ಕಳೆದ ಕೆಲ ದಿನದ ಹಿಂದಷ್ಟೇ ಗಾಯಕ ಸೋನು ನಿಗಮ್ ಕೂಡ ಇಂತಹದ್ದೇ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಘಟನೆ ಮಾಸುವ ಮುನ್ನವೆ ಉತ್ತರ ಭಾರತ ಮೂಲದ ಬ್ಯಾಂಕ್‌ ಮ್ಯಾನೇಜರ್ ಈ ರೀತಿ ವರ್ತನೆ ತೋರಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ ಬಗ್ಗೆ ಮೋದಿಗೆ ಗೊತ್ತಿತ್ತು, ಅದಕ್ಕೆ ಕಾಶ್ಮೀರ ಭೇಟಿ ಕ್ಯಾನ್ಸಲ್‌ ಮಾಡಿಸಿದ್ರು – ಮಲ್ಲಿಕಾರ್ಜುನ ಖರ್ಗೆ

  • ಗದಗ | ಮಾದಕ ವ್ಯಸನ ಮುಕ್ತ, ಫಿಟ್ನೆಸ್‌ಗಾಗಿ ಜನಜಾಗೃತಿ ಮ್ಯಾರಥಾನ್

    ಗದಗ | ಮಾದಕ ವ್ಯಸನ ಮುಕ್ತ, ಫಿಟ್ನೆಸ್‌ಗಾಗಿ ಜನಜಾಗೃತಿ ಮ್ಯಾರಥಾನ್

    ಗದಗ: ಕರ್ನಾಟಕ ರಾಜ್ಯ ಹಾಗೂ ಗದಗ (Gadag) ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ಪೊಲೀಸ್ ಇಲಾಖೆ ಹಾಗೂ ಎಸ್‌ಬಿಐ (SBI) ನೇತೃತ್ವದಲ್ಲಿ ಜನಜಾಗೃತಿ ಮ್ಯಾರಥಾನ್ ನಡೆಯಿತು.

    ನಗರದ ಕೆ.ಹೆಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಸೀನಿಯರ್ ಹಾಗೂ ಜೂನಿಯರ್ 2 ತಂಡ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ 5 ಕಿ.ಮೀ ಹಾಗೂ 10 ಕಿ.ಮೀ ಮ್ಯಾರಥಾನ್ ನಡೆಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – ಇಬ್ಬರು ಸಜೀವ ದಹನ

    ನಗರದ ಕೆ.ಸಿ ರಾಣಿ ರೋಡ್, ಮಹಾತ್ಮ ಗಾಂಧಿ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಬನ್ನಿ ಕಟ್ಟಿ, ಕಾರ್ಯಪ್ಪ ಸರ್ಕಲ್, ಎಪಿಎಂಸಿ ಮಾರ್ಗವಾಗಿ ಸ್ಟೇಡಿಯಂ ತಲುಪಿದರು. ಕರ್ನಾಟಕ ಮಾದಕ ವ್ಯಸನ ಮುಕ್ತವಾಗಬೇಕು. ಎಲ್ಲರೂ ಫಿಟ್ ಆಗಿರಬೇಕು ಎಂಬ ಜನಜಾಗೃತಿ ಮೂಡಿಸುವುದು ಮ್ಯಾರಥಾನ್ ಉದ್ದೇಶವಾಗಿತ್ತು. ಇದನ್ನೂ ಓದಿ: ಕನ್ನಡಕ್ಕೆ ಬಾಲಿವುಡ್‌ ಡೈರೆಕ್ಟರ್- ಸುಜಯ್ ಶಾಸ್ತ್ರಿ ನಿರ್ದೇಶನದ ‘8’ ಸಿನಿಮಾದಲ್ಲಿ ಅನುರಾಗ್ ಕಶ್ಯಪ್

    ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕ್ರೀಡಾ ಇಲಾಖೆ, ಎನ್‌ಎಸ್‌ಎಸ್, ಎನ್.ಸಿ.ಸಿ, ಆರ್.ಡಿ.ಪಿ.ಆರ್. ಯೂನಿವರ್ಸಿಟಿ, ಮೆಡಿಕಲ್, ಇಂಜನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: Ramanagara| ಊರಹಬ್ಬದ ದಿನವೇ ಗ್ರಾಮಕ್ಕೆ 4 ಕಾಡಾನೆಗಳ ಎಂಟ್ರಿ – ದಿಕ್ಕಾಪಾಲಾಗಿ ಓಡಿದ ಜನ

  • ಮಹಿಳೆಯರಿಗೆ ಹಣ| ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತೆ: ಎಸ್‌ಬಿಐ ಎಚ್ಚರಿಕೆ

    ಮಹಿಳೆಯರಿಗೆ ಹಣ| ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತೆ: ಎಸ್‌ಬಿಐ ಎಚ್ಚರಿಕೆ

    – ಆಯ್ದ ರಾಜ್ಯಗಳ ಹಣಕಾಸು ಸ್ಥಿತಿ ಏರುಪೇರಾಗಬಹುದು

    ನವದೆಹಲಿ: ವಿವಿಧ ರಾಜ್ಯಗಳು ಘೋಷಿಸಿರುವ ಮಹಿಳಾ ಕೇಂದ್ರಿತ ನೇರ ಲಾಭ (DBT) ವರ್ಗಾವಣೆ ಯೋಜನೆಗಳು ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವರದಿಯೊಂದು ಎಚ್ಚರಿಸಿದೆ.

    ಮಹಿಳೆಯರಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಗುರಿಯನ್ನು ಹೊಂದಿರುವ ಈ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ಚುನಾವಣೆ (Election) ಸಂದರ್ಭದಲ್ಲಿ ಘೋಷಣೆಯಾಗುತ್ತಿವೆ. ಅಂತಹ ಉಪಕ್ರಮಗಳು ರಾಜ್ಯ ಹಣಕಾಸಿನ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು ಎಂದು ವರದಿ ತಿಳಿಸಿದೆ.

    ಎಂಟು ರಾಜ್ಯಗಳಲ್ಲಿ ಈ ಯೋಜನೆಗಳ ಒಟ್ಟು ವೆಚ್ಚವು ಈಗ 1.5 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಇದು ಈ ರಾಜ್ಯಗಳ ಆದಾಯದ 3-11 ಪ್ರತಿಶತದಷ್ಟಿದೆ ಎಂದು ವರದಿಯು ಹೈಲೈಟ್ ಮಾಡಿದೆ.

    ಒಡಿಶಾದಂತಹ ಕೆಲವು ರಾಜ್ಯಗಳು ಹೆಚ್ಚಿನ ತೆರಿಗೆಯೇತರ ಆದಾಯ ಮತ್ತು ಸಾಲದ ಅವಶ್ಯಕತೆಗಳಿಂದಾಗಿ ಈ ವೆಚ್ಚಗಳನ್ನು ಭರಿಸಲು ಉತ್ತಮ ಸ್ಥಿತಿಯಲ್ಲಿದ್ದರೂ ಇನ್ನೂ ಅನೇಕ ರಾಜ್ಯಗಳು ಹಣಕಾಸಿನ ಸವಾಲುಗಳನ್ನು ಎದುರಿಸಬಹುದು ಎಂದು ವರದಿ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ

    ಯಾವ ರಾಜ್ಯದಲ್ಲಿ ಎಷ್ಟು ಹಣ ನಿಗದಿ?
    ಕುಟುಂಬದ ಓರ್ವ ಮಹಿಳೆಗೆ ತಿಂಗಳಿಗೆ 2,000 ರೂ. ಒದಗಿಸುವ ಕರ್ನಾಟಕದ (Karnataka) ಗೃಹ ಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು ರಾಜ್ಯದ ಆದಾಯದ 11% ರಷ್ಟಿದೆ.

    ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗೆ 1,000 ರೂ. ಅನುದಾನವನ್ನು ನೀಡುವ ಪಶ್ಚಿಮ ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಗೆ 14,400 ಕೋಟಿ ರೂ. ಮೀಸಲಿಡಲಾಗಿದೆ. ಇದು ರಾಜ್ಯದ ಆದಾಯದ 6% ರಷ್ಟಿದೆ.

    ವಯಸ್ಕ ಮಹಿಳೆಯರಿಗೆ ತಿಂಗಳಿಗೆ ರೂ. 1,000 ರೂ. ಭರವಸೆ ನೀಡುವ ದೆಹಲಿಯ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಗೆ 2,000 ಕೋಟಿ ರೂ. ಅಗತ್ಯವಿದೆ. ಇದು ರಾಜ್ಯದ ಆದಾಯದ 3% ರಷ್ಟಿದೆ.

    ಮಹಿಳೆಯರಿಗೆ ಹಣ ನೀಡುವ ಭರವಸೆಯ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳಲು ಒತ್ತಡಕ್ಕೊಳಗಾಗಬಹುದು ಎಂದು ಎಸ್‌ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ಮಹಿಳೆಯರ ಸಬಲೀಕರಣ ಮತ್ತು ಚುನಾವಣಾ ಬೆಂಬಲ ಪಡೆಯಲು ಘೋಷಣೆಯಾಗುವ ಯೋಜನೆಗಳನ್ನು ಜಾರಿಗೆ ತರುವ ಮೊದಲು ರಾಜ್ಯಗಳು ತನ್ನ ಹಣಕಾಸಿನ ಸ್ಥಿತಿಗತಿ, ಸಾಲದ ಪ್ರಮಾಣ ಎಷ್ಟಿದೆ ಎಂದು ನೋಡಿಕೊಳ್ಳಬೇಕೆಂದು ವರದಿ ಒತ್ತಾಯಿಸಿದೆ.

     

  • ಬೀದರ್‌ನಲ್ಲಿ ATM ಹಣ ದರೋಡೆ – ಮೃತ ಸಿಬ್ಬಂದಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ

    ಬೀದರ್‌ನಲ್ಲಿ ATM ಹಣ ದರೋಡೆ – ಮೃತ ಸಿಬ್ಬಂದಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ

    – ಸಮಾಜ ಕಲ್ಯಾಣ ಇಲಾಖೆಯಿಂದ 8 ಲಕ್ಷ ರೂ. ಪರಿಹಾರ
    – ಮೃತನ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಭರವಸೆ

    ಬೀದರ್: ಹಾಡಹಗಲೇ ಬೀದರ್‌ನಲ್ಲಿ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 83 ಲಕ್ಷ ರೂ. ಹಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸಿಬ್ಬಂದಿಯ ಕುಟುಂಬಕ್ಕೆ ಸರ್ಕಾರ ವಿಶೇಷ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಬೆನ್ನಲ್ಲೇ ಸಮಾಜಕಲ್ಯಾಣ ಇಲಾಖೆಯು ಪ್ರತ್ಯೇಕವಾಗಿ 8 ಲಕ್ಷ ರೂ. ಪರಿಹಾರ ಘೋಷಿಸಿದೆ.

    ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಶ್ವರ್ ಖಂಡ್ರೆಗೆ ಎಡಿಜಿಪಿ ಹರಿಶೇಖರನ್, ಸಚಿವ ರಹೀಂ ಖಾನ್ ಸೇರಿದಂತೆ ಡಿಐಜಿ ಸಾಥ್ ನೀಡಿದರು. ಬಳಿಕ ಗುಂಡೇಟಿಗೆ ಬಲಿಯಾದ ಸಿಬ್ಬಂದಿ ಗಿರಿ ವೆಂಕಟೇಶ್ ಮನೆಗೆ ಭೇಟಿ ನೀಡಿದ ಅವರು, ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಕುಟುಂಬಸ್ಥರು ಈಶ್ವರ್ ಖಂಡ್ರೆ ಮುಂದೆ ನ್ಯಾಯಕ್ಕಾಗಿ ಕಣ್ಣೀರು ಹಾಕಿದರು. ಖಂಡ್ರೆ ಮುಂದೆ ಮಗನನ್ನು ನೆನೆದು ತಾಯಿ ಭಾವುಕರಾದರು. ಇದನ್ನೂ ಓದಿ: ವಿಜಯಪುರದಲ್ಲಿ ಮುಸುಕುಧಾರಿ ಗ್ಯಾಂಗ್‌ ಅಟ್ಟಹಾಸ – ದರೋಡೆಕೋರರ ಬೆನ್ನತ್ತಿ ಗುಂಡಿಟ್ಟ ಖಾಕಿ ಪಡೆ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖಂಡ್ರೆ, ಬೀದರ್‌ನಲ್ಲಿ ನಡೆದ ಘಟನೆ ಅತ್ಯಂತ ಆತಂಕಕಾರಿ ಪ್ರಕರಣ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮಾಹಿತಿ ಸಿಕ್ಕ ತಕ್ಷಣ, ಡಿಐಜಿ, ಎಡಿಜಿಪಿ, ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಗಾಯಾಳು ಶಿವಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇವೆ. ಸರ್ಕಾರ ಚಿಕಿತ್ಸೆಯ ಖರ್ಚು ವೆಚ್ಚ ಭರಿಸುತ್ತದೆ. ಯುವ ಜೀವ ಕಳೆದುಕೊಂಡಿದ್ದು ನೋವು ತಂದಿದೆ. ಖದೀಮರು 83 ಲಕ್ಷ ರೂ. ದೋಚಿದ್ದಾರೆ. ಪೊಲೀಸರ ತಂಡ ಹೈದರಾಬಾದ್ ಸೇರಿ ಬೇರೆಬೇರೆ ರಾಜ್ಯಕ್ಕೆ ತೆರಳಿದ್ದಾರೆ. ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರೋದನ್ನ ಸಾಕ್ಷೀಕರಿಸುತ್ತಿದೆ: ವಿಜಯೇಂದ್ರ ಕಿಡಿ

    ಇಂತಹ ಘಟನೆ ಬಿಹಾರದಲ್ಲೇ ಆದ್ರೂ, ಬೀದರ್‌ನಲ್ಲೇ ಆದ್ರೂ ಖಂಡಿಸುತ್ತೇನೆ. ಐಜಿ ಇಲ್ಲಿಯೇ ಇದ್ದಾರೆ, ಅವರೊಂದಿಗೆ ಚರ್ಚಿಸಿದ್ದೇನೆ. ತನಿಖೆಯಲ್ಲಿ ಯಾರ ವೈಫಲ್ಯ ಇದೆ ಎಂಬುವುದು ಗೊತ್ತಾಗುತ್ತದೆ. ದುಷ್ಕರ್ಮಿಗಳು ಪ್ರೊಫೆಷನಲ್ ದರೋಡೆಕೋರರು ಅಂತಾ ಅನಿಸುತ್ತೆ. ಸೆಕ್ಯೂರಿಟಿ ಗಾರ್ಡ್ ಇರಬೇಕಿತ್ತು. ಬ್ಯಾಂಕಿನವರದ್ದೂ ತಪ್ಪಿದೆ. ಸೆಕ್ಯೂರಿಟಿ ಗಾರ್ಡ್ಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದಾರೆ. ಕಣ್ಣಿಗೆ ನಿದ್ರೆ ಮಾಡದೇ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಮೃತನ ಕುಟುಂಬದವರ ಜೊತೆಗೆ ನಾನು, ಸರ್ಕಾರ ಇದೆ. ಮುಖ್ಯಮಂತ್ರಿಗಳ ಜೊತೆಗೂ ವಿಶೇಷ ಪರಿಹಾರದ ಕುರಿತು ಮಾತನಾಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆಯಿಂದಲೂ ಪರಿಹಾರ ಕೊಡಲು ಸೂಚಿಸಿದ್ದೇನೆ. ಮೃತನ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: Budget 2025 | ಜ.31 ರಿಂದ ಬಜೆಟ್‌ ಅಧಿವೇಶನ

    ಬ್ಯಾಂಕ್ ದರೋಡೆ ವೇಳೆ ಗಿರಿ ವೆಂಕಟೇಶ್ ಸಾವು ದುರಾದೃಷ್ಟಕರ. ಸರ್ಕಾರದಿಂದ, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಕೊಡುತ್ತೇವೆ. ಪ್ರಕರಣದ ಕುರಿತು ಮುಖ್ಯಮಂತ್ರಿ ಅವರಿಗೆ ತಿಳಿಸಿದಾಗ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಸಮಾಜ ಕಲ್ಯಾಣದಿಂದ 8 ಲಕ್ಷ ರೂ. ಪರಿಹಾರ ನೀಡುತ್ತೇವೆ. ಪರಿವಾರದ ಜೊತೆ ನಾವು ಇರುತ್ತೇವೆ. ಸರ್ಕಾರದ ಹಣ ರಕ್ಷಿಸಲು ಹೋಗಿ ಗಿರಿ ಪ್ರಾಣ ಕಳೆದುಕೊಂಡಿದ್ದಾರೆ. ಗಿರಿ ಬಗ್ಗೆ ಅಭಿಮಾನ ಮೂಡಿಸುವಂತ ಕೆಲಸ ಅವರು ಮಾಡಿದ್ದಾರೆ. ದುಷ್ಕರ್ಮಿಗಳನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇವೆ. ಆರೋಪಿಗಳಿಗೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ನೀಡಲಾಗುವುದು. ಗಾಯಗೊಂಡ ಶಿವ ಅವರ ಚಿಕಿತ್ಸೆಯ ಸಂಪೂರ್ಣ ಹಣ ಸರ್ಕಾರ ಭರಿಸುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸೈಫ್ ಅಲಿ ಖಾನ್ ಮೇಲಿನ ಹಲ್ಲೆಯಿಂದ ಶಾಕ್ ಆಗಿದೆ – ರಾಯಚೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿಕೆ

  • ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಪ್ರಕರಣ – ಇಬ್ಬರು ದರೋಡೆಕೋರರು ಹೈದರಾಬಾದ್‌ನಲ್ಲಿ ಅಂದರ್‌?

    ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಪ್ರಕರಣ – ಇಬ್ಬರು ದರೋಡೆಕೋರರು ಹೈದರಾಬಾದ್‌ನಲ್ಲಿ ಅಂದರ್‌?

    ಹೈದರಾಬಾದ್‌ (ಬೀದರ್)‌: ಬೀದರ್‌ನಲ್ಲಿ (Bidar) ಬ್ಯಾಂಕ್‌ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಎಟಿಎಂ ಹಣ ಕದ್ದೊಯ್ದಿದ್ದ ದುಷ್ಕರ್ಮಿಗಳು ಹೈದರಾಬಾದ್‌ನಲ್ಲಿ  (Hyderabad) ಲಾಕ್‌ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಅರೆಸ್ಟ್‌ ಆಗಿರುವ ಇಬ್ಬರೂ ಹೈದರಾಬಾದ್‌ನಲ್ಲಿ ದರೋಡೆ ಮಾಡಿದವರೇನಾ ಅಥವಾ ಬೇರೆ ಪ್ರಕರಣದಲ್ಲಿ ಸಿಲುಕಿದ ಆರೋಪಿಗಳಾ ಅನ್ನೋದನ್ನ ಪೊಲೀಸರು ಖಚಿತಪಡಿಸಬೇಕಿದೆ.

    ಎಟಿಎಂ ಹಣ ಕದ್ದ ದರೋಡೆಕೋರರು ಹೈದರಾಬಾದ್‌ನತ್ತ ಎಸ್ಕೇಪ್ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆನ್ನುಹತ್ತಿದ್ದ ಬೀದರ್ ಪೊಲೀಸರು ದರೋಡೆಕೋರರನ್ನ ಪತ್ತೆಮಾಡಿದ್ದರು. ಇನ್ನೇನು ಬಂಧಿಸಬೇಕು ಅನ್ನುವಾಗಲೇ ಗುಂಡು ಹಾರಿಸಿ ಎಸ್ಕೇಪ್‌ ಆದರು. ಆದ್ರೆ ಬಲ್ಲ ಮೂಲಗಳು ದರೋಡೆಕೋರರನ್ನ ಬಂಧಿಸಿದ್ದಾರೆ ಎನ್ನುತ್ತಿವೆ. ಇಂದು (ಜ.16) ರಾತ್ರಿ 10 ಗಂಟೆ ಸುಮಾರಿಗೆ ಬಂಧಿಸಿರುವ ಪೊಲೀಸರು, ಶುಕ್ರವಾರ (ಜ.17) ಬೀದರ್‌ಗೆ ಕರೆತರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಪೊಲೀಸರು ಮಾತ್ರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಚಿತ್ರವಿಚಿತ್ರ ಸನ್ನಿವೇಶ – 9 ವರ್ಷದಿಂದ ಸಾಧು ತಲೆಯ ಮೇಲೆ ಕುಳಿತ ಪಾರಿವಾಳ!

    ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದು ಹೇಗೆ? 
    ಬೀದರ್‌ನಲ್ಲಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದ ದರೋಡೆಕೋರರು ಹೈದರಾಬಾದ್‌ನ ರೋಷನ್ ಟ್ರಾವೆಲ್ಸ್‌ನಲ್ಲಿ ಬಸ್ ಬುಕ್ ಮಾಡಿದ್ದರು. ಹೈದರಾಬಾದ್‌ನಿಂದ ಛತ್ತಿಸ್‌ಘಡಕ್ಕೆ ಬಸ್ ಬುಕ್ ಮಾಡಿದ್ದರು. ಬಸ್ ಹತ್ತುವ ವೇಳೆ ಟ್ರಾವೆಲ್ಸ್ ಮ್ಯಾನೇಜರ್ ಅನುಮಾನಗೊಂಡು ಬ್ಯಾಗ್ ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ದರೋಡೆಕೋರು ನಾವು ಬಸ್‌ನಲ್ಲಿ ಹೋಗ್ಬೇಕು ಇದನ್ನು ತಗೊಳ್ಳಿ ಅಂತ ಒಂದು ಕಂತೆ ಹಣವನ್ನ ಟ್ರಾವೆಲ್ಸ್ ಮ್ಯಾನೇಜರ್‌ಗೆ ನೀಡಲು ಮುಂದಾಗಿದ್ದಾರೆ. ಇದರಿಂದ ಟ್ರಾವೆಲ್ಸ್ ಮ್ಯಾಜೇನರ್ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ನನಗೆ ಹಣ ಬೇಡ, ಮೊದಲು ಕೆಳಗಿಳಿಯಿರಿ ಬ್ಯಾಗ್ ಚೆಕ್ ಮಾಡಬೇಕು ಅಂತ ಹೇಳಿದ್ದಾರೆ. ಬ್ಯಾಗ್ ಚೆಕ್ ಮಾಡಲು ಬಿಟ್ಟುಕೊಡದ ದರೋಡೆಕೋರರು ಟ್ರಾವೆಲ್ಸ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿದ್ದಾರೆ.

    ಈ ವೇಳೆ ಬೀದರ್ ಪೊಲೀಸರೂ ಸಹ ಬಸ್‌ನಲ್ಲಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಖಾಸಗಿ ಬಸ್ ಕ್ಲೀನರ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಕೇಸ್‌ – 1 ಕೋಟಿಗೆ ಬೇಡಿಕೆಯಿಟ್ಟಿದ್ದ ಹಂತಕನ ಫೋಟೋ ಬಹಿರಂಗ

     

  • ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಕೇಸ್‌ – ಹೈದರಾಬಾದ್‌ನಲ್ಲೂ ಫೈರಿಂಗ್‌, ದರೋಡೆಕೋರರು ಎಸ್ಕೇಪ್‌

    ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಕೇಸ್‌ – ಹೈದರಾಬಾದ್‌ನಲ್ಲೂ ಫೈರಿಂಗ್‌, ದರೋಡೆಕೋರರು ಎಸ್ಕೇಪ್‌

    – ಟ್ರಾವೆಲ್ಸ್‌ ಮ್ಯಾನೇಜರ್‌ಗೆ ಕಂತೆ ಹಣ ನೀಡಲು ಬಂದಾಗ ಶುರುವಾಯ್ತು ಅನುಮಾನ

    ಬೀದರ್: ಬ್ಯಾಂಕ್‌ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಎಟಿಎಂ ಹಣ ಕದ್ದೊಯ್ದ ದುಷ್ಕರ್ಮಿಗಳು (ATM Robbery And Murder) ಹೈದರಾಬಾದ್​ನಲ್ಲಿ ಪತ್ತೆಯಾಗಿದ್ದಾರೆ. ಇನ್ನೇನು ಸೆರೆಸಿಕ್ಕರು ಅನ್ನುವಷ್ಟರಲ್ಲೇ ಅಲ್ಲೂ ಫೈರಿಂಗ್‌ ಮಾಡಿ ಎಸ್ಕೇಪ್‌ ಆಗಿದ್ದಾರೆ.

    ದರೋಡೆಕೋರರು ಹೈದರಾಬಾದ್​ನತ್ತ (Hyderabad) ಎಸ್ಕೇಪ್ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆನ್ನುಹತ್ತಿದ್ದ ಬೀದರ್ ಪೊಲೀಸರು ದರೋಡೆಕೋರರನ್ನ ಪತ್ತೆಮಾಡಿದ್ದರು. ಆದ್ರೆ ಸೆರೆ ಸಿಗದೇ ಎಸ್ಕೇಪ್‌ ಆಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೀದರ್‌ನಲ್ಲಿ ಫಿಲ್ಮಿ ಸ್ಟೈಲ್‌ ಎಟಿಎಂ ಹಣ ದರೋಡೆ – ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದ ಸಿಬ್ಬಂದಿ

    ಬೀದರ್‌ನಲ್ಲಿ ದರೋಡೆ ಮಾಡಿ ಎಸ್ಕೇಪ್‌ ಆಗಿದ್ದ ದರೋಡೆಕೋರರು ಹೈದರಾಬಾದ್‌ನ ರೋಷನ್‌ ಟ್ರಾವೆಲ್ಸ್‌ನಲ್ಲಿ ಬಸ್‌ ಬುಕ್‌ ಮಾಡಿದ್ದರು. ಹೈದರಾಬಾದ್‌ನಿಂದ ರಾಯ್ಪುರಕ್ಕೆ ಬಸ್‌ ಬುಕ್‌ ಮಾಡಿದ್ದರು. ಬಸ್‌ ಹತ್ತುವ ವೇಳೆ ಟ್ರಾವೆಲ್ಸ್‌ ಮ್ಯಾನೇಜರ್‌ ಅನುಮಾನಗೊಂಡು ಬ್ಯಾಗ್‌ ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ದರೋಡೆಕೋರು ನಾವು ಬಸ್‌ನಲ್ಲಿ ಹೋಗ್ಬೇಕು ಇದನ್ನು ತಗೊಳ್ಳಿ ಅಂತ ಒಂದು ಕಂತೆ ಹಣವನ್ನ ಟ್ರಾವೆಲ್ಸ್‌‌ ಮ್ಯಾನೇಜರ್‌ಗೆ ನೀಡಲು ಮುಂದಾಗಿದ್ದಾರೆ. ಇದರಿಂದ ಟ್ರಾವೆಲ್ಸ್‌ ಮ್ಯಾಜೇನರ್‌ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ನನಗೆ ಹಣ ಬೇಡ, ಮೊದಲು ಕೆಳಗಿಳಿಯಿರಿ ಬ್ಯಾಗ್‌ ಚೆಕ್‌ ಮಾಡಬೇಕು ಅಂತ ಹೇಳಿದ್ದಾರೆ. ಬ್ಯಾಗ್‌ ಚೆಕ್‌ ಮಾಡಲು ಬಿಟ್ಟುಕೊಡದ ದರೋಡೆಕೋರರು ಟ್ರಾವೆಲ್ಸ್‌ ಮ್ಯಾನೇಜರ್‌ ಮೇಲೆ ಗುಂಡು ಹಾರಿಸಿ ಎಸ್ಕೇಪ್‌ ಆಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಸದ್ಯ ಘಟನೆಯಲ್ಲಿ ಬಸ್‌ ಚಾಲಕ, ಟ್ರಾವೆಲ್ಸ್‌ ಮ್ಯಾಜೇನರ್‌ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ದರೋಡೆಕೋರರಿಗಾಗಿ ಬೀದರ್ ಮತ್ತು ಹೈದರಾಬಾದ್ ಪೊಲೀಸರು ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆಯೇ ಗುಂಡು – 93 ಲಕ್ಷದೊಂದಿಗೆ ದುಷ್ಕರ್ಮಿಗಳು ಪರಾರಿ

    ತನಿಖೆ ಪ್ರಗತಿಯಲ್ಲಿದೆ.