Tag: Sayyeshaa Saigal

  • ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ

    ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ

    ಮಿಳು ಚಿತ್ರರಂಗದ(Tamil Films) ಸ್ಟಾರ್ ಜೋಡಿ ನಟ ಆರ್ಯ (Arya)ಮತ್ತು ಸಯೇಶಾ (Sayyesha) ಸಿನಿಮಾ ಜೊತೆ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪತಿಯ ಹುಟ್ಟುಹಬ್ಬದಂದು ಮುದ್ದು ಮಗಳನ್ನು ನಟಿ ಸಯೇಶಾ ಪರಿಚಯಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಆರ್ಯ ಮತ್ತು ಸಯೇಶಾ ಕಾಲಿವುಡ್‌ನ ಬೆಸ್ಟ್ ಜೋಡಿಯಾಗಿದ್ದಾರೆ. ಬೆಳ್ಳಿಪರದೆಯಲ್ಲೂ ಜೊತೆಯಾಗಿ ಮಿಂಚಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಪ್ರೀತಿಸಿ, 2019ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನೂ ಮುದ್ದು ಮಗಳ ಆಗಮನವಾಗಿ ಒಂದೂವರೆ ವರ್ಷದ ನಂತರ ಈಗ ಮಗಳ ಫೋಟೋವನ್ನು ಯುವರತ್ನ (Yuvaratna) ನಟಿ ಸಯೇಶಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿಧನ

    ಸಯೇಶಾ ಕಳೆದ ವರ್ಷ 2021ರ ಜುಲೈನಲ್ಲಿ ಹೆಣ್ಣು ಮಗುವಿಗೆ ತಾಯಿಯಾಗಿದ್ದರು. ಆದರೆ ಎಲ್ಲಿಯೂ ಕೂಡ ಮಗಳ ಮುಖ ಪರಿಚಯ ಮಾಡಿಸಿರಲಿಲ್ಲ. ಇದೀಗ ಪತಿ ಆರ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಗಳ ಫೋಟೋ ರಿವೀಲ್ ಮಾಡಿದ್ದಾರೆ.

     

    View this post on Instagram

     

    A post shared by Sayyeshaa (@sayyeshaa)

    ಮುದ್ದು ಮಗಳಿಗೆ ಅರಿಯಾನಾ(Ariyana) ಎಂದು ಹೆಸರಿಟ್ಟಿದ್ದಾರೆ. ಇದೀಗ ಈ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಯುವರತ್ನ’ ನಾಯಕಿಯನ್ನ ವರಿಸಿದ ನಟ ಆರ್ಯ

    ‘ಯುವರತ್ನ’ ನಾಯಕಿಯನ್ನ ವರಿಸಿದ ನಟ ಆರ್ಯ

    ಹೈದರಾಬಾದ್: ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಾಯಕತ್ವದ ‘ಯುವರತ್ನ’ ಸಿನಿಮಾದ ನಾಯಕಿ ಸಯ್ಯೇಶಾ ಸೈಗಲ್ ಅವರನ್ನು ತಮಿಳು ನಟ ಆರ್ಯ ಅವರು ಮದುವೆಯಾಗಿದ್ದಾರೆ.

    ಮಾರ್ಚ್ 09 ಮತ್ತು 10 ಅಂದರೆ ಶನಿವಾರ ಹಾಗೂ ಭಾನುವಾರ ಈ ಜೋಡಿಯ ವಿವಾಹ ಕಾರ್ಯಕ್ರಮ ನೆರವೇರಿದೆ. ಶನಿವಾರವೇ ಈ ಜೋಡಿಯ ಪ್ರೀ-ವೆಡ್ಡಿಂಗ್ ಕಾರ್ಯಕ್ರಮ ಆರಂಭವಾಗಿದ್ದು, ವಿವಿಧ ರೀತಿಯಲ್ಲಿ ಇಬ್ಬರು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇವರ ವೆಡ್ಡಿಂಗ್ ಫೋಟೋಗಳನ್ನು ವಧು ಸಯ್ಯೇಶಾ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಇಬ್ಬರು ಪ್ಯಾಲೇಸ್‍ನಲ್ಲಿ ರಾಜ-ರಾಣಿ ರೀತಿಯ ಉಡುಪನ್ನು ಧರಿಸಿ ಮಿಂಚಿದ್ದಾರೆ.

    ಹೈದರಾಬಾದ್‍ನ ತಾಜ್ ಫುಕ್ನಮ್ ಪ್ಯಾಲೇಸ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದೆ. ಇವರ ಮದುವೆಯಲ್ಲಿ ಬಾಲಿವುಡ್ ಮತ್ತು ಕಾಲಿವುಡ್‍ನ ಖ್ಯಾತ ನಟ ನಟಿಯರು ಪಾಲ್ಗೊಂಡಿದ್ದು, ನವ ಜೋಡಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ಈ ಹಿಂದೆ ನಟ ಆರ್ಯ ಅವರು ಪ್ರೇಮಿಗಳ ದಿನಾಚರಣೆಯ ದಿನವೇ ತಮ್ಮ ಮದುವೆಯಾಗುವ ಹುಡುಗಿ ಹಾಗೂ ವಿವಾಹದ ಬಗ್ಗೆ ತಿಳಿಸಿದ್ದರು. 2018 ರ `ಘಜಿನಿಕಾಂತ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಯ್ಯೇಷಾ ಅವರು ನಟ ಆರ್ಯರನ್ನು ಭೇಟಿಯಾಗಿದ್ದು, ಅಂದಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸಯ್ಯೇಷಾ ಅವರು ನಟ-ನಿರ್ಮಾಪಕ ಸುಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಮಗಳಾಗಿದ್ದು, ಶಹೀನ್ ಅವರು `ಮಹಾ-ಸಂಗ್ರಮ್’ ಮತ್ತು’ ಆಯಿ ಮಿಲಾನ್ ಕಿ ರಾತ್’ ನಂತಹ ಸಿನಿಮಾದಲ್ಲಿ ಹೆಸರುವಾಸಿಯಾಗಿದ್ದಾರೆ. ನಟಿ ಸಯ್ಯೇಶಾ ಸೈಗಲ್ ಅವರು ‘ಯುವರತ್ನ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಡುತ್ತಿದ್ದಾರೆ. ಆದರೆ ಈಗಾಗಲೇ ಸೌತ್ ಇಂಡಿಯಾದ ಹಲವು ಸಿನಿಮಾಗಳಲ್ಲಿ ನಟಿ ಸಯ್ಯೇಶಾ ಕಾಣಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ ಎಂದಿದ್ದ ನಟನಿಗೆ ಕೊನೆಗೂ ಮ್ಯಾರೇಜ್ ಫಿಕ್ಸ್

    ನನ್ನ ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ ಎಂದಿದ್ದ ನಟನಿಗೆ ಕೊನೆಗೂ ಮ್ಯಾರೇಜ್ ಫಿಕ್ಸ್

    ಹೈದರಾಬಾದ್: ನನ್ನನ್ನು ಮದುವೆಯಾಗಲು ಯಾವುದೇ ಷರತ್ತುಗಳಿಲ್ಲ, ಈ ನಂಬರಿಗೆ ಕರೆ ಮಾಡಿ ಎಂದು ವಿಡಿಯೋ ಕಾಲ್ ಮೂಲಕ ಹೇಳಿಕೊಂಡಿದ್ದ ತಮಿಳು ನಟ ಆರ್ಯನಿಗೆ ಕೊನೆಗೂ ಮದುವೆ ಫಿಕ್ಸ್ ಆಗಿದೆ.

    ಹೌದು. ಪ್ರೇಮಿಗಳ ದಿನದಂದೇ ನಟ ತಮ್ಮ ಮದುವೆ ಹಾಗೂ ತಾನೂ ವಿವಾಹವಾಗುತ್ತಿರುವ ಹುಡುಗಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ತಾವು ಮದುವೆಯಾಗುತ್ತಿರುವ ಹುಡುಗಿ ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಷರತ್ತಿಲ್ಲ, ನನ್ನನ್ನು ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ: ನಟ ಆರ್ಯ

    ಟ್ವೀಟ್ ನಲ್ಲೇನಿದೆ..?
    ನಟ ಆರ್ಯ ಅವರು ಸಯ್ಯೇಷಾ ಸೈಗಲ್ ಜೊತೆ ಮಾರ್ಚ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿರುವ ಕುರಿತು ಟ್ವಿಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. “ಹ್ಯಾಪಿ ವ್ಯಾಲೆಂಟೈನ್ಸ್ ಡೇ ಮತ್ತು ಆಶೀರ್ವಾದಿಸಿ” ಎಂದು ಬರೆದು ತಾವು ಮದುವೆಯಾಗುತ್ತಿರುವ ಹುಡುಗಿ ಜೊತೆಗಿರುವ ಫೋಟೋ ಹಾಕಿದ್ದಾರೆ.

    “ನಮ್ಮ ಪೋಷಕರು ಮತ್ತು ಕುಟುಂಬದ ಆಶೀರ್ವಾದದಿಂದ, ನಿಮ್ಮೊಂದಿಗೆ ನಮ್ಮ ಬಾಳಿನ ಅತ್ಯಂತ ಸುಂದರವಾದ ದಿನವನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ. ನಾವು ಮುಂದಿನ ತಿಂಗಳು ಮಾರ್ಚ್ ನಲ್ಲಿ ಮದುವೆಯಾಗುತ್ತಿದ್ದೇವೆ. ನಮ್ಮ ಹೊಸ ಜೀವನ ಪ್ರಯಾಣಕ್ಕೆ ನಿಮ್ಮ ಪ್ರೀತಿಯ ಆಶೀರ್ವಾದ ಬೇಕೆಂದು” ದಂಪತಿ ಮನವಿ ಮಾಡಿಕೊಂಡಿದ್ದಾರೆ.

    ಆರ್ಯ ಮತ್ತು ಸಯ್ಯೇಷಾ ಮದುವೆಯಾಗುತ್ತಿರುವ ಬಗ್ಗೆ ತಿಳಿಸಿದ್ದು, ಆದರೆ ತಮ್ಮ ಮದುವೆಯ ದಿನಾಂಕವನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಕಳೆದ ತಿಂಗಳಿನಿಂದ ಆರ್ಯ ಮತ್ತು ಸಯ್ಯೇಷಾ ಮದುವೆಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈಗ ಸ್ವತಃ ಆರ್ಯ ಅವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಮಾರ್ಚ್ 9 ರಂದು ಆರ್ಯ ಹಾಗೂ ಸಯ್ಯೇಷಾ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿದುಬಂದಿದೆ.

    ಸಯ್ಯೇಷಾ ಸೈಗಲ್ ಯಾರು?
    ಸಯ್ಯೇಷಾ ಅವರು ನಟ-ನಿರ್ಮಾಪಕ ಸುಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಮಗಳಾಗಿದ್ದು, ಶಹೀನ್ ಅವರು ‘ಮಹಾ-ಸಂಗ್ರಮ್’ ಮತ್ತು’ ಆಯಿ ಮಿಲಾನ್ ಕಿ ರಾತ್’ ನಂತಹ ಸಿನಿಮಾಗಲ್ಲಿ ಹೆಸರುವಾಸಿಯಾಗಿದ್ದಾರೆ. 2018 ರ ‘ಘಜಿನಿಕಾಂತ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಯ್ಯೇಷಾ ಅವರು ನಟ ಆರ್ಯರನ್ನು ಭೇಟಿಯಾಗಿದ್ದರು.

    ಸದ್ಯಕ್ಕೆ ಈ ಜೋಡಿಯು ಮೋಹನ್ ಲಾಲ್ ಮತ್ತು ಸೂರ್ಯ ಅಭಿನಯಿಸಿರುವ ‘ಕಾಪ್ಪಾನ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಪ್ಪಾನ್’ ಅಕ್ಟೋಬರ್ 2019 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv