Tag: Savu

  • ನಟಿ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್

    ನಟಿ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್

    ರೋಬ್ಬರಿ ಐದು ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ (Sridevi) ಅವರ ಸಾವಿನ ರಹಸ್ಯ ಬಯಲಾಗಿದೆ. ಭಾರತೀಯ ಸಿನಿಮಾ ರಂಗ ಕಂಡ ಲೇಡಿ ಸೂಪರ್ ಸ್ಟಾರ್ ದುಬೈನಲ್ಲಿ (Dubai) 2018ರಂದು ಹಠಾತ್‍ ಸಾವನ್ನಪ್ಪಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್ ನ ಬಾತ್ ಟಬ್‍ ನಲ್ಲಿ ಶ್ರೀದೇವಿ ಅವರ ಮೃತದೇಹ ಪತ್ತೆಯಾಗಿತ್ತು.

    ಆರೋಗ್ಯವಾಗಿದ್ದ ಶ್ರೀದೇವಿ ಹಠಾತ್ ನಿಧನರಾದ ಸುದ್ದಿಯನ್ನು ಸಹಜ ಸಾವು ಎಂದು ಯಾರೂ ನಂಬಲು ತಯಾರಿರಲಿಲ್ಲ. ಹಾಗಾಗಿ ಆ ಸಾವಿಗೆ ರೆಕ್ಕಪುಕ್ಕಗಳು ಹುಟ್ಟುಕೊಂಡವು. ಅತಿಯಾದ ಮದ್ಯ ಸೇವನೆಯಿಂದ ಶ್ರೀದೇವಿ ನಿಧನರಾಗಿದ್ದಾರೆ ಎಂದು ಕೆಲವರು ಪುಕಾರು ಹಬ್ಬಿಸಿದರೆ, ಇನ್ನೂ ಕೆಲವರು ಬಾತ್ ಟಬ್‍ ನಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದೂ ಮಾತನಾಡಿಕೊಂಡರು. ಹಾಗಾಗಿ ಅವರ ಸಾವು ನಿಗೂಢವಾಗಿ ಉಳಿದಿತ್ತು.

    ಇದೇ ಮೊದಲ ಬಾರಿಗೆ ಪತ್ನಿಯ ಸಾವಿನ ಬಗ್ಗೆ ಬೋನಿ ಕಪೂರ್ (Boney Kapoor)  ಮಾತನಾಡಿದ್ದಾರೆ. ಶ್ರೀದೇವಿ ಅವರ ಸಾವಿಗೆ ವಿಪರೀತವಾಗಿ ಅವರು ಪಥ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಸದಾ ತಾನು ಸುಂದರವಾಗಿಯೇ ಇರಬೇಕು ಎಂದು ಶ್ರೀದೇವಿ ಪಥ್ಯ ಮಾಡುತ್ತಿದ್ದರು. ಹಲವಾರು ಬಾರಿ ಉಪವಾಸ ಇರುತ್ತದೆ. ಕಡಿಮೆ ರಕ್ತದೊತ್ತಡವಿದೆ ಎಂದು ವೈದ್ಯರು ತಿಳಿಸಿದ್ದರು ಅದನ್ನು ಶ್ರೀದೇವಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.

    ಶ್ರೀದೇವಿ ಅವರ ನಿಧನರಾದಾಗ ತಮ್ಮನ್ನು ದುಬೈ ಪೊಲೀಸರು ಹಲವು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ್ದರು ಎನ್ನುವ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಸುಳ್ಳು ಪತ್ತೆ ಸೇರಿದಂತೆ ಹಲವಾರು ರೀತಿಯ ತನಿಖೆಗಳನ್ನೂ ಪೊಲೀಸರು ಮಾಡಿದ್ದಾರೆ ಎನ್ನವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ಬೋನಿ ಕಪೂರ್.

     

    ಶ್ರೀದೇವಿ ಅವರು ಹಾಗೆ ಕುಸಿದು ಬೀಳುವುದು ಅದೇ ಮೊದಲೇನೂ ಆಗಿರಲಿಲ್ಲ ಎನ್ನುವ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಹಲವಾರು ಬಾರಿ ಶೂಟಿಂಗ್ ಸಂದರ್ಭದಲ್ಲಿ ಹಾಗೆ ಕುಸಿದು ಬಿದ್ದಿದ್ದರು ಎಂದು ಹೇಳಿಕೊಂಡಿದ್ದಾರೆ. ನಿರ್ಮಾಪಕ ನಾಗಾರ್ಜುನ ಕೂಡ ತಮ್ಮದೇ ಸಿನಿಮಾದ ಶೂಟಿಂಗ್ ನಲ್ಲಿ ಶ್ರೀದೇವಿ ನಿಶ್ಯಕ್ತಿಯಿಂದ ಬಿದ್ದಿದ್ದ ಸಂಗತಿಯನ್ನೂ ತಮಗೆ ತಿಳಿಸಿದ್ದರು ಎಂದು ಬೋನಿ ಕಪೂರ್ ಮಾತನಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    ನ್ನಡದ ಫೇಮಸ್ ಧಾರಾವಾಹಿಯ (Serial) ಬಹುಮುಖ್ಯ ಪಾತ್ರವನ್ನು ದಿಢೀರ್ ಅಂತ ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೆಂಡಸಂಪಿಗೆ (Kendasampige) ಧಾರಾವಾಹಿ ನೋಡಿದವರಿಗೆ ರಾಜೇಶ್ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಕಥಾ ನಾಯಕಿಯ ತಮ್ಮನಾಗಿ ರಾಜೇಶ್ (Rajesh) ಫೇಮಸ್. ಈ ಪಾತ್ರದ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಧಾರಾವಾಹಿ ದಿಢೀರ್ ಅಂತ ರಾಜೇಶ್ ನನ್ನು ಬೀಳ್ಕೊಟ್ಟಿದೆ.

    ಕೆಂಡಸಂಪಿಗೆ ಕಥಾ ನಾಯಕಿಯ ಜೊತೆ ಸದಾ ಇರುತ್ತಿದ್ದ ರಾಜೇಶ್ ಪಾತ್ರವನ್ನು ಅಚ್ಚರಿ ಎನ್ನುವಂತೆ ಸಾಯಿಸಲಾಗಿದ್ದು, ಇದಕ್ಕೆ ಕಾರಣ ಆ ಹುಡುಗನನ್ನು ಬಿಗ್ ಬಾಸ್ (Bigg Boss Season 9) ಮನೆಗೆ ಕಳುಹಿಸುವ ಪ್ಲ್ಯಾನ್ ಮಾಡಲಾಗಿದೆಯಂತೆ. ಹಾಗಾಗಿ ಬೇಗನೆ ಪಾತ್ರವನ್ನು ಸಾಯಿಸಿ, ತರಾತುರಿಯಲ್ಲಿ ಈ ಪಾತ್ರವನ್ನು ಮಾಡುತ್ತಿದ್ದ ಸುನೀಲ್ (Sunil) ನನ್ನು ಬಿಗ್ ಬಾಸ್ ಸೀಸನ್ 9 ಕ್ಕೆ ಕಳುಹಿಸಿ ಕೊಡಲಾಗಿದೆ ಎನ್ನುವ ಮಾಹಿತಿ ಇದೆ. ಅದು ನಾಳೆ ಅಧಿಕೃತಗೊಳ್ಳಲಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಶನಿ (Shani) ಧಾರಾವಾಹಿಯ ಮೂಲಕ ಫೇಮಸ್ ಆದವರು ಸುನೀಲ್. ಈ ಧಾರಾವಾಹಿಯ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸುನೀಲ್, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಇದೀಗ ಅವರು ನಿರ್ವಹಿಸುತ್ತಿದ್ದ ರಾಜೇಶ್ ಪಾತ್ರವನ್ನು ಸಾಯಿಸಿದ್ದಕ್ಕಾಗಿ ಸುದ್ದಿ ಮಹತ್ವ ಪಡೆದುಕೊಂಡಿದೆ. ನಾಳೆಯಿಂದ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆ ಮನೆಯಲ್ಲಿ ಸುನೀಲ್ ಇರುತ್ತಾರಾ ಕಾದು ನೋಡಬೇಕು.

    ಬಿಗ್ ಬಾಸ್ ಸೀಸನ್ 9 ನಾಳೆಯಿಂದ ಶುರುವಾಗುತ್ತಿದ್ದು, ಈಗಾಗಲೇ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿವೆ. ನಟಿ ಪ್ರೇಮಾ (Prema), ನವೀನ್ ಕೃಷ್ಣ ಸೇರಿದಂತೆ ಹಲವಾರು ನಟ ನಟಿಯರ ಹೆಸರು ಈ ಪಟ್ಟಿಯಲ್ಲಿವೆ. ಅಲ್ಲದೇ, ಬಿಗ್ ಬಾಸ್ ಓಟಿಟಿಯ ನಾಲ್ಕು ಸ್ಪರ್ಧಿಗಳು ಕೂಡ ಹೊಸ ಬಿಗ್ ಬಾಸ್ ಮನೆಯನ್ನು ಸೇರಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]