Tag: Save Soil

  • ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್

    ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್

    ಬೆಂಗಳೂರು: ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ `ಮಣ್ಣು ಉಳಿಸಿ ಅಭಿಯಾನ’ದ ಬೃಹತ್ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸದ್ಗುರು ಜಗ್ಗಿ ವಾಸುದೇವ್ ಅವರ ನಡುವಿನ ಬಾಂಧವ್ಯ ನೆರೆದಿದ್ದವರ ಗಮನ ಸೆಳೆಯಿತು.

    ಸಾಂದರ್ಭಿಕ ಚಿತ್ರ

    ಕಾರ್ಯಕ್ರಮದ ವೇದಿಕೆಯಲ್ಲಿ ಜಗ್ಗಿ ವಾಸುದೇವ್ ಅವರ ಕಾಲು ಮುಟ್ಟಿ ಯಡಿಯೂರಪ್ಪ ನಮಸ್ಕರಿಸಿದರು. ನಂತರ ಯಡಿಯೂರಪ್ಪ ಭಾಷಣ ಮಾಡಲು ತೆರಳುವ ವೇಳೆಯೂ ಸದ್ಗುರು ಕಾಲಿಗೆ ನಮಸ್ಕರಿಸಿದರು. ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದೇಕೆ?

    ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಈ ಶತಮಾನದಲ್ಲಿ ನಾವು ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಪ್ರಪಂಚದಾದ್ಯಂತ ಪ್ರವಾಹ, ಅತಿವೃಷ್ಟಿ, ಪರಿಸರ ಅಸಮತೋಲನ ಹೆಚ್ಚಾಗ್ತಿದೆ. ನಾಗರಿಕತೆ ಹೆಚ್ಚಾಗ್ತಿದೆ. ಉಸಿರಾಟಕ್ಕೆ ಶುದ್ಧ ಗಾಳಿ, ನೀರೂ ಸಿಕ್ತಿಲ್ಲ. ಗಾಳಿ, ನೀರಿಗೆ ಪರಿತಪಿಸುವ ಸನ್ನಿವೇಶ ಇದೆ ಎಂದು ವಿಷಾದಿಸಿದರು.

    ಈ ಹಿಂದೆ ರಾಜರು ಸಾಮ್ರಾಜ್ಯಗಳಿಗಾಗಿ ಹೋರಾಡಿದ್ರು. ಈಗ ಪೆಟ್ರೋಲ್, ಡೀಸೆಲ್, ನೀರಿಗಾಗಿ ಹೋರಾಟ ನಡೀತಿದೆ. ಇಂಥ ಸಂದರ್ಭದಲ್ಲಿ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನದ ಅವಶ್ಯಕತೆ ಇದೆ. ಈ ಅಭಿಯಾನ ಸಮಯೋಚಿತವಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಮಣ್ಣು ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

    ಭಾಷಣದ ಮಧ್ಯೆ ಯಡಿಯೂರಪ್ಪಗೆ ಕೆಮ್ಮು ಬಂದಾಗ ಸದ್ಗುರು ನೀರು ತಂದುಕೊಟ್ಟರು. ಇದನ್ನೂ ಓದಿ: `ಅಗ್ನಿಪಥ್’ ಪ್ರತಿಭಟನೆ – ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್ ಮೈಂಡ್ ಅರೆಸ್ಟ್

    ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮಣ್ಣು ಉಳಿಸಿ ಅಭಿಯಾನದ ಬೃಹತ್ ಸಮಾರಂಭ ನಡೆಯಿತು. ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಬಿ.ಸಿ.ನಾಗೇಶ್ ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಭರತನಾಟ್ಯ, ಸಾಂಸ್ಕೃತಿಕ ನೃತ್ಯಗಳ ಮೂಲಕ ಸಿಎಂಗೆ ಸ್ವಾಗತ ಕೋರಲಾಯಿತು.

    Live Tv