Tag: Savdatti

  • ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ `ಮಾಸ್ಟರ್ ಪ್ಲ್ಯಾನ್’ – ಕಾಮಗಾರಿಗೆ ಸರ್ಕಾರದಿಂದ 215 ಕೋಟಿ ಅನುಮೋದನೆ

    ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ `ಮಾಸ್ಟರ್ ಪ್ಲ್ಯಾನ್’ – ಕಾಮಗಾರಿಗೆ ಸರ್ಕಾರದಿಂದ 215 ಕೋಟಿ ಅನುಮೋದನೆ

    ಬೆಂಗಳೂರು/ಬೆಳಗಾವಿ: ಸವದತ್ತಿ ರೇಣುಕಾ ಯಲ್ಲಮ್ಮನ (Savadatti Renuka Yellamma) ಗುಡ್ಡಕ್ಕೆ ಹೊಸ ಕಳೆ ನೀಡುವ ನಿಟ್ಟಿನಲ್ಲಿ ಅದರ ಕಾಮಗಾರಿಗಾಗಿ ಸರ್ಕಾರ 215 ಕೋಟಿ ರೂ. ಅನುಮೋದನೆ ನೀಡಿದೆ.

    ಉತ್ತರ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿ ವರ್ಷ ಒಂದು ಕೋಟಿಗೂ ಅಧಿಕ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆ ಗುರುವಾರ ರೇಣುಕಾ ಯಲ್ಲಮ್ಮನ ಭಕ್ತಾದಿಗಳಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.ಇದನ್ನೂ ಓದಿ: ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ತುಂಬಿ ಹರಿಯುತ್ತಿರುವ ನದಿ ದಾಟಿದ ವಿದ್ಯಾರ್ಥಿನಿ

    ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ದೇವಾಲಯದ ಅಭಿವೃದ್ಧಿಗೆ ಸಿದ್ಧಪಡಿಸಿದ `ಮಾಸ್ಟರ್ ಪ್ಲ್ಯಾನ್’ಗೆ ಅನುಮೋದಿನೆ ನೀಡಿದೆ. ಜೊತೆಗೆ ಅದರ ಕಾಮಗಾರಿಗಾಗಿ 215.25 ಕೋಟಿ ರೂ. ಅನುಮೋದನೆ ನೀಡಿದೆ. ಹೀಗಾಗಿ ಮುಂದಿನ ಎರಡು ವರ್ಷಗಳಲ್ಲಿ ರೇಣುಕಾ ಯಲ್ಲಮ್ಮ ದೇವಾಲಯದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ.

    ಈ ಕುರಿತು ಮುಜರಾಯಿ ಸಚಿವ (Muzrai) ರಾಮಲಿಂಗಾರೆಡ್ಡಿ ಮಾತನಾಡಿ, ರೇಣುಕಾ ಯಲ್ಲಮ್ಮ ಪ್ರಾಧಿಕಾರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ದೇವಾಲಯದ ಅಭಿವೃದ್ಧಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ವೈವಿಧ್ಯಮಯ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ತಿರುಪತಿ ಮಾದರಿಯಲ್ಲಿ 14 ಕಾಮಗಾರಿಗಳು ನಡೆಯಲಿವೆ. ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಟೆಂಡರ್ ಕಾರ್ಯ ಪೂರ್ಣಗೊಳ್ಳುವುದು. ಅನ್ನ ದಾಸೋಹ ಭವನ ಸೇರಿದಂತೆ ಒಟ್ಟು 14 ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಧಾರವಾಡ | ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಕಳ್ಳರಿಬ್ಬರ ಕಾಲಿಗೆ ಗುಂಡೇಟು

  • Belagavi | ಕೃಷಿ ಹೊಂಡದಲ್ಲಿ ಮುಳುಗಿ ತಂದೆ-ಮಗ ಸಾವು

    Belagavi | ಕೃಷಿ ಹೊಂಡದಲ್ಲಿ ಮುಳುಗಿ ತಂದೆ-ಮಗ ಸಾವು

    ಬೆಳಗಾವಿ: ಕೃಷಿ ಹೊಂಡದಲ್ಲಿ (Agricultural Pit) ಮುಳುಗಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ (Savadatti) ತಾಲೂಕಿನ ಮಳಗಲಿ ಗ್ರಾಮದಲ್ಲಿ ನಡೆದಿದೆ.

    ತಂದೆ ಬಸವರಾಜ್ ಕೆಂಗೇರಿ (40), ಮಗ ಧರೆಪ್ಪ ಕೆಂಗೇರಿ (14) ಮೃತ ದುರ್ದೈವಿಗಳು. ಬಸವರಾಜ್ ಕೆಂಗೇರಿ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿಯಾಗಿದ್ದು, ಹೆಂಡತಿ ಊರಲ್ಲಿರುವ ಜಮೀನಿಗೆ ಕೀಟನಾಶಕ ಹೊಡೆಯಲು ಹೋಗಿದ್ದ. ಈ ವೇಳೆ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ಕಾಲು ಜಾರಿ ಬಿದ್ದ ಮಗ ಧರೆಪ್ಪ ಮತ್ತೋರ್ವ ಬಾಲಕ ಬಾಗಪ್ಪ ಸಣ್ಣಕ್ಕಿಯನ್ನು ರಕ್ಷಣೆ ಮಾಡಲು ಬಸವರಾಜ್ ಧಾವಿಸಿದ್ದ. ಈ ವೇಳೆ ಕೃಷಿ ಹೊಂಡದಲ್ಲಿ ಮುಳುಗಿ ಬಸವರಾಜ್ ಮತ್ತು ಧರೆಪ್ಪ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬಾಗಪ್ಪನ ರಕ್ಷಣೆ ಮಾಡಿದ್ದಾರೆ. ಸದ್ಯ ಗಂಭೀರ ಸ್ಥಿತಿಯಲ್ಲಿರುವ ಬಾಲಕ ಬಾಗಪ್ಪಗೆ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ