Tag: Saurav Ganguly

  • ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಸಂಬಂಧ ಕಡಿದುಕೊಳ್ಳಬೇಕು: ಸೌರವ್ ಗಂಗೂಲಿ ಒತ್ತಾಯ

    ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಸಂಬಂಧ ಕಡಿದುಕೊಳ್ಳಬೇಕು: ಸೌರವ್ ಗಂಗೂಲಿ ಒತ್ತಾಯ

    ನವದೆಹಲಿ: ಪಾಕಿಸ್ತಾನದ (Pakistan) ಜೊತೆಗೆ ಭಾರತ ಕ್ರಿಕೆಟ್ (Cricket) ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಒತ್ತಾಯಿಸಿದ್ದಾರೆ.

    ಪಹಲ್ಗಾಮ್ ಉಗ್ರರ ದಾಳಿಯನ್ನು (Pahalgam Terror Attack) ಖಂಡಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದೊಂದಿಗೆ ಭಾರತ ಎಲ್ಲಾ ರೀತಿಯ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬೇಕು. ಐಸಿಸಿ ಮತ್ತು ಏಷ್ಯನ್ ಟೂರ್ನಿಗಳಲ್ಲಿಯೂ ಆಡಬಾರದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗುಜರಾತ್‌ನಲ್ಲಿ ನೆಲೆಸಿದ್ದ 1,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಬಂಧನ

    ಪ್ರತಿ ವರ್ಷವೂ ಭಾರತದ ನೆಲದಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿದ್ದು, ಅದನ್ನು ಇನ್ನು ಮುಂದೆ ಸಹಿಸಬಾರದು. ಖಂಡಿತವಾಗಿಯೂ ಭಾರತ ಪಾಕಿಸ್ತಾನದ ಜೊತೆಗಿನ ಎಲ್ಲಾ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬೇಕು. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುತ್ತಿರುವುದು ತಮಾಷೆಯಾಗಿ ಮಾರ್ಪಟ್ಟಿದೆ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: Uttar Pradesh| ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಮೂವರು ಕಾರ್ಮಿಕರು ದುರ್ಮರಣ

  • ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಸೌರವ್ ಗಂಗೂಲಿ ಬಯೋಪಿಕ್

    ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಸೌರವ್ ಗಂಗೂಲಿ ಬಯೋಪಿಕ್

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಕ್ರಿಕೆಟ್ ಕುರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕ್ರಿಕೆಟ್ ಜಗತ್ತಿನ ಮಹಾನ್ ಕ್ರಿಕೆಟಿಗ ಸೌರವ್ ಗಂಗೂಲಿ ಬಯೋಪಿಕ್ ತೆರೆಗೆ ತರಲು ತಯಾರಿ ನಡೆಸುತ್ತಿದ್ದಾರೆ.

    ಸ್ಟಾರ್ ನಟ ಧನುಷ್ ಜೊತೆ ಡಿವೋರ್ಸ್ ಪಡೆದ ಮೇಲೆ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತಷ್ಟು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಐಶ್ವರ್ಯ ರಜನೀಕಾಂತ್ ಸೈ ಎನಿಸಿಕೊಂಡಿದ್ದಾರೆ. ಈಗ ಕ್ರಿಕೆಟ್‌ನತ್ತ ಒಲವು ತೋರಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ, ಕ್ರಿಕೆಟ್ ಜಗತ್ತಿನ ದಂತಕಥೆ ಸೌರವ್ ಗಂಗೂಲಿ ಇಂಚಿಂಚೂ ಕಥೆಯನ್ನ ಬೆಳ್ಳಿಪರದೆಯಲ್ಲಿ ತೋರಿಸಲು ನಿರ್ದೇಶಕಿ ಐಶ್ವರ್ಯ ಸಜ್ಜಾಗಿದ್ದಾರೆ. ಇದನ್ನೂ ಓದಿ: ಪತ್ನಿ ರಮ್ಯಾ ಜೊತೆ `ನಾಗಿಣಿ 2′ ಖ್ಯಾತಿಯ ನಿನಾದ್ ದಾಂಪತ್ಯಗೀತೆ

    ನಿರ್ದೇಶಕ ಲವ್ ರಂಜನ್ ಒಡೆತನದ ಲವ್ ಫಿಲ್ಮ್ಸ್‌ ನಿರ್ಮಾಣದ ಅಡಿಯಲ್ಲಿ ಸೌರವ್ ಗಂಗೂಲಿ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸೌರವ್ ಅವರ ಜೊತೆ ಈ ಕುರಿತು ಮಾತುಕತೆ ನಡೆದಿದ್ದು, ಬಯೋಪಿಕ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಕುರಿತು ಮಾಜಿ ಕ್ರಿಕೆಟಿಗ ಸೌರವ್ ಕೂಡ ಈ ಹಿಂದೆಯೇ ಅಧಿಕೃತವಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದರು.

    ಸೌರವ್ ಗಂಗೂಲಿ ಅವರ ಬಯೋಪಿಕ್‌ನಲ್ಲಿ ಸೌರವ್ ಪಾತ್ರಕ್ಕೆ ಯಾರು ಜೀವ ತುಂಬಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹುಟ್ಟು ಹಾಕಿದೆ. ಇದರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ನೀಡಲಿದೆ ಚಿತ್ರತಂಡ. ಒಟ್ನಲ್ಲಿ ಐಶ್ವರ್ಯ ರಜನೀಕಾಂತ್ ನಿರ್ದೇಶನದಲ್ಲಿ ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಆಸ್ಪತ್ರೆಯಿಂದ ದಾದಾ ಡಿಸ್ಚಾರ್ಜ್- ವೈದ್ಯರಿಗೆ ಧನ್ಯವಾದ ಅರ್ಪಿಸಿದ ಗಂಗೂಲಿ

    ಆಸ್ಪತ್ರೆಯಿಂದ ದಾದಾ ಡಿಸ್ಚಾರ್ಜ್- ವೈದ್ಯರಿಗೆ ಧನ್ಯವಾದ ಅರ್ಪಿಸಿದ ಗಂಗೂಲಿ

    ಕೋಲ್ಕತ್ತಾ: ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.

    ವುಡ್ ಲ್ಯಾಂಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ದಾದಾ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸಿದರು. ಅಲ್ಲದೆ ಈವಾಗ ನಾನು ಆರಾಮಾಗಿದ್ದೇನೆ ಎಂದು ಹೇಳಿದರು.

    ಮನೆಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ದಾದ ತಲೆ ತಿರುಗಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೂಡಲೇ ಅವರ ಹೃದಯದ ರಕ್ತನಾಳದಲ್ಲಿರುವ ಬ್ಲಾಕ್‍ಗಳನ್ನು ತೆರವುಗೊಳಿಸಲಾಗಿತ್ತು. ಒಂದು ಸ್ಟೆಂಟ್ ಕೂಡ ಅಳವಡಿಸಲಾಗಿತ್ತು.

    ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಗಣ್ಯರು, ಅಭಿಮಾನಿಗಳು ಶೀಘ್ರ ಚೇತರಿಸಿಕೊಂಡು ವಾಪಸ್ ಬರುವಂತೆ ಹಾರೈಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಗಂಗೂಲಿ ಪತ್ನಿ ಜೊತೆ ಮಾತಾನಾಡಿದ ಮೋದಿ ಬಳಿ ಗಂಗೂಲಿ ಜೊತೆ ಮಾತಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಶೀಘ್ರವೇ ಗುಣಮುಖರಾಗುವಂತೆ ಸೂಚಿಸಿದ್ದರು.

  • ಸೌರವ್ ಗಂಗೂಲಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    ಸೌರವ್ ಗಂಗೂಲಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    ಕೋಲ್ಕತಾ: ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಗಂಗೂಲಿ ಅನಾರೋಗ್ಯದ ಸಮಸ್ಯೆಯಿಂದಾಗಿ ಕೋಲ್ಕತ್ತಾದ ವುಡ್‍ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಸಲಹೆಯಂತೆ ಆಂಜಿಯೋಪ್ಲ್ಯಾಸ್ಟಿ ಟೆಸ್ಟ್ ಮಾಡಿ ಆರೋಗ್ಯ ಸ್ಥಿತಿಯನ್ನು ಗಮನಿಸಲಾಗುತ್ತಿದೆ.

    48 ವರ್ಷದ ಗಂಗೂಲಿ ಅವರ ಹೃದಯದ ರಕ್ತನಾಳದಲ್ಲಿರುವ ಬ್ಲಾಕ್‍ಗಳನ್ನು ಶನಿವಾರ ತೆರವುಗೊಳಿಸಲಾಗಿದೆ. ಒಂದು ಸ್ಟೆಂಟ್ ಕೂಡ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿದ್ದ ಸಂದರ್ಭ ಕರೆ ಮಾಡಿದ ಮೋದಿ, ಗಂಗೂಲಿ ಪತ್ನಿ ಜೊತೆ ಮಾತಾನಾಡಿ ನಂತರ ಗಂಗೂಲಿ ಜೊತೆ ಮಾತಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಶೀಘ್ರವೇ ಗುಣಮುಖರಾಗುವಂತೆ ಸೂಚಿಸಿದ್ದಾರೆ.

    ಮನೆಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ದಾದ ತಲೆ ತಿರುಗಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೋವಿಡ್ ಮಧ್ಯದಲ್ಲೇ ಗಂಗೂಲಿ ಕ್ರಿಕೆಟ್ ಪುನರಾರಂಭದ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ನಡೆದ ಬಿಸಿಸಿಐನ 89ನೇ ವಾರ್ಷಿಕ ಸಾಮಾನ್ಯ ಸಭೆಯ ನೇತೃತ್ವ ವಹಿಸಿದ್ದರು. ಅಲ್ಲದೆ 2022ರ ಐಪಿಎಲ್ ಸೀಸನ್ ಗೆ 2 ಹೆಚ್ಚುವರಿ ಪ್ರಾಂಚೈಸಿಗಳನ್ನು ಸಹ ಘೋಷಣೆ ಮಾಡಿದ್ದಾರೆ.