Tag: saudi arebia

  • ಸುಡಾನ್‌ನಲ್ಲಿ ಸಂಘರ್ಷ – ಜೆಡ್ಡಾದಿಂದ 362 ಭಾರತೀಯರು ಬೆಂಗಳೂರು ಕಡೆ ಪ್ರಯಾಣ

    ಸುಡಾನ್‌ನಲ್ಲಿ ಸಂಘರ್ಷ – ಜೆಡ್ಡಾದಿಂದ 362 ಭಾರತೀಯರು ಬೆಂಗಳೂರು ಕಡೆ ಪ್ರಯಾಣ

    ರಿಯಾದ್: ಸೇನಾಪಡೆ ಮತ್ತು ಅರೆಸೇನಾಪಡೆ ನಡುವಿನ ಸಂಘರ್ಷದಿಂದ ನಲುಗಿರುವ ಸುಡಾನ್‌ನಲ್ಲಿ (Sudan) ಸಂಕಷ್ಟಕ್ಕೆ ಸಲುಕಿರುವ ಭಾರತೀಯರನ್ನು ಕರೆತರಲು ‘ಆಪರೇಷನ್‌ ಕಾವೇರಿ’ (Operation Kaveri) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸುಡಾನ್‌ನಿಂದ ಸೌದಿ ಅರೇಬಿಯಾದ ಜೆಡ್ಡಾಗೆ ಸ್ಥಳಾಂತರಿಸಲಾಗಿದ್ದ 362 ಮಂದಿ ಭಾರತೀಯರ ಬ್ಯಾಚ್‌ವೊಂದು ಬೆಂಗಳೂರು ಕಡೆ ಪ್ರಯಾಣ ಬೆಳೆಸಿದೆ.

    ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕಳುಹಿಸುವ ಜವಾಬ್ದಾರಿಯನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ವಹಿಸಿದ್ದಾರೆ. “ಜೆಡ್ಡಾದಿಂದ ಬೆಂಗಳೂರಿಗೆ ಹೊರಟಿರುವ ವಿಮಾನದಲ್ಲಿ ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ 362 ಭಾರತೀಯರನ್ನು ನೋಡಲು ಸಂತೋಷವಾಗಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯವರು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರು” ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಟ್ರಂಪ್ ನನ್ನ ರೇಪ್ ಮಾಡಿದ್ದರು: ಅಮೆರಿಕನ್ ಬರಹಗಾರ್ತಿ ಆರೋಪ

    ಸುಡಾನ್‌ನ ಸೇನಾಪಡೆ ಮತ್ತು ಅರೆಸೇನಾ ಪಡೆಯ ನಡುವಿನ ಹಿಂಸಾಚಾರದ ನಡುವೆ ಕರ್ನಾಟಕದ ಸುಮಾರು 31 ಬುಡಕಟ್ಟು ಜನಾಂಗದವರು (ಹಕ್ಕಿಪಿಕ್ಕಿ) ಆಫ್ರಿಕನ್ ದೇಶದಲ್ಲಿ ಸಿಲುಕಿಕೊಂಡಿದ್ದಾರೆ. 392 ಭಾರತೀಯ ಪ್ರಜೆಗಳನ್ನು ಸುಡಾನ್‌ನಿಂದ ಸ್ಥಳಾಂತರಿಸಿದ ನಂತರ ವಿಮಾನದಲ್ಲಿ ಜೆಡ್ಡಾದಿಂದ ದೆಹಲಿಗೆ ಹಿಂತಿರುಗುತ್ತಿದ್ದಾರೆ.

    135 ಭಾರತೀಯ ಪ್ರಜೆಗಳ ಒಂಭತ್ತನೇ ಬ್ಯಾಚನ್ನು ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಸ್ಥಳಾಂತರಿಸಲಾಯಿತು. ಸುಡಾನ್‌ನಿಂದ 326 ಭಾರತೀಯರ ಹತ್ತನೇ ಬ್ಯಾಚ್ ಜೆಡ್ಡಾವನ್ನು ತಲುಪಿದೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

  • ಅಮೆರಿಕಗೆ ಮತ್ತೆ ಟಕ್ಕರ್ ಕೊಟ್ಟ ಸೌದಿ ಅರೇಬಿಯಾ- ಡಾಲರ್‌ಗೆ ಬಿಗ್‌ ಶಾಕ್‌?

    ಅಮೆರಿಕಗೆ ಮತ್ತೆ ಟಕ್ಕರ್ ಕೊಟ್ಟ ಸೌದಿ ಅರೇಬಿಯಾ- ಡಾಲರ್‌ಗೆ ಬಿಗ್‌ ಶಾಕ್‌?

    ರಿಯಾದ್: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದ ಪ್ರಾಬಲ್ಯ ತಗ್ಗಿಸಲು ಅಮೆರಿಕ ವಿಧಿಸಿ ಅನೇಕ ನಿರ್ಬಂಧಗಳು ಈಗ ತನಗೇ ತಿರುಗು ಬಾಣವಾಗಿ ಪರಿಣಮಿಸಿದೆ. ಸೌದಿ ಅರೇಬಿಯಾ, ಭಾರತ, ಚೀನಾ, ರಷ್ಯಾದಂತಹ ರಾಷ್ಟ್ರಗಳು ತಮ್ಮದೇ ಕರೆನ್ಸಿಗಳಲ್ಲಿ ವ್ಯವಹಾರಕ್ಕೆ ಮುಂದಾಗಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಡಾಲರ್ ಪ್ರಾಬಲ್ಯ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.

    ಚೀನಾಗೆ ತೈಲ ಮಾರಾಟ ಮಾಡಲು ಮುಂದಾಗಿರುವ ಸೌದಿ ಅರೇಬಿಯಾ, ಚೀನಾ ಕರೆನ್ಸಿ ಯುವಾನ್ ಮೂಲಕವೇ ವ್ಯವಹಾರ ಮಾಡುವ ಸಂಬಂಧ ಮಾತುಕತೆ ನಡೆಸುತ್ತಿದೆ. ಈ ಕ್ರಮವು ಜಾಗತಿಕ ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್‌ನ ಪ್ರಾಬಲ್ಯವನ್ನು ತಗ್ಗಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಇದನ್ನೂ ಓದಿ: ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ

    ಯುವಾನ್ ಬೆಲೆಯಲ್ಲೇ ತೈಲ ಒಪ್ಪಂದಗಳ ಕುರಿತು ಚೀನಾದೊಂದಿಗಿನ ಸೌದಿ ಮಾತುಕತೆ ಆರು ವರ್ಷಗಳಿಂದ ಸ್ಥಗಿತಗೊಂಡಿತ್ತು. ಆದರೆ ಈ ವರ್ಷ ಮಾತುಕತೆ ವೇಗ ಪಡೆದುಕೊಂಡಿದೆ. ಸೌದಿಗಳು ತಮ್ಮ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು ಯುಎಸ್ ಭದ್ರತಾ ಬದ್ಧತೆಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ.

    ಯೆಮನ್ ಅಂತರ್ಯುದ್ಧದಲ್ಲಿ ತನ್ನ ಮಧ್ಯಪ್ರವೇಶಕ್ಕೆ ಅಮೆರಿಕ ಬೆಂಬಲ ನೀಡದಿದ್ದಕ್ಕೆ ಸೌದಿಗಳು ಕೋಪಗೊಂಡಿದ್ದಾರೆ. ಕಳೆದ ವರ್ಷ ಅಫ್ಘಾನಿಸ್ತಾನದಿಂದ ಯುಎಸ್ ಹಿಂಪಡೆಯುವಿಕೆಯಿಂದ ಆಘಾತಕ್ಕೊಳಗಾಗಿದ್ದೇವೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದರು. ಈ ಎಲ್ಲಾ ಕಾರಣಗಳಿಗಾಗಿ ಅಮೆರಿಕಗೆ ಟಕ್ಕರ್ ಕೊಡಲು ಸೌದಿ ಅರೇಬಿಯಾ ಮುಂದಾಗಿದೆ. ಇದನ್ನೂ ಓದಿ: ಭಾರತಕ್ಕೆ ಬರಲಿದೆ ರಷ್ಯಾ ತೈಲ – ಅಂತಿಮ ಹಂತದಲ್ಲಿ ಮಾತುಕತೆ

    ರಷ್ಯಾದೊಂದಿಗೆ ಶಸ್ತ್ರಾಸ್ತ್ರ ಹಾಗೂ ಕಚ್ಚಾ ತೈಲ ಸೇರಿದಂತೆ ಅನೇಕ ವಿಚಾರಗಳಿಗಾಗಿ ಭಾರತ ವ್ಯವಹಾರ ನಡೆಸುತ್ತಿದೆ. ರುಪಿ ಮೂಲಕವೇ ವ್ಯವಹಾರ ನಡೆಸಬಹುದು ಎಂದು ರಷ್ಯಾ, ಭಾರತಕ್ಕೆ ತಿಳಿಸಿದೆ.

  • ಪಾಕ್ ಮೆಚ್ಚಿದ ರಾಜಕುಮಾರನಿಗೆ ಪ್ರಧಾನಿ ಅಪ್ಪುಗೆಯ ಸ್ವಾಗತ- ಭಾರತಕ್ಕೆ ಬೆಂಬಲಿಸುತ್ತಾ ಸೌದಿ..?

    ಪಾಕ್ ಮೆಚ್ಚಿದ ರಾಜಕುಮಾರನಿಗೆ ಪ್ರಧಾನಿ ಅಪ್ಪುಗೆಯ ಸ್ವಾಗತ- ಭಾರತಕ್ಕೆ ಬೆಂಬಲಿಸುತ್ತಾ ಸೌದಿ..?

    – ದಾಳಿ ಭಯಾನಕ ಎಂದ ಟ್ರಂಪ್

    ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮ ದಾಳಿ ಹೊತ್ತಲ್ಲಿ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನ ಪ್ರವಾಸದಲ್ಲಿದ್ದ ಸೌದಿ ಆರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಬಂದಿಳಿದ್ದಾರೆ.

    ದೆಹಲಿಯ ಪಾಲಂ ವಾಯುನೆಲೆಗೆ ಆಗಮಿಸಿದ ರಾಜಕುಮಾರನಿಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವ್ರೇ ಅಪ್ಪುಗೆಯ ಮೂಲಕ ಭವ್ಯ ಸ್ವಾಗತ ನೀಡಿದ್ದಾರೆ. ಪುಲ್ವಾಮದಲ್ಲಿ 44 ಸೈನಿಕರ ಹತ್ಯೆಗೆ ಕಾರಣವಾದ ಉಗ್ರ ದಾಳಿಯ ವೇಳೆ ಪಾಕಿಸ್ತಾನದಲ್ಲಿ 2 ಲಕ್ಷದ 79 ಸಾವಿರ ಕೋಟಿ ರೂಪಾಯಿ ಮೊತ್ತದ ಹೂಡಿಕೆಯನ್ನು ಘೋಷಿಸಿದ್ದ ರಾಜಕುಮಾರ, ಶಾಂತಿ ಸ್ಥಾಪನೆಯಲ್ಲಿ ಪಾಕ್ ಪಾತ್ರವನ್ನು ಕೊಂಡಾಡಿದ್ದರು. ಇದನ್ನೂ ಓದಿ: ಸಾಕ್ಷ್ಯ ನೀಡಿದ್ರೆ ಕ್ರಮ, ಯುದ್ಧ ನಡೆದರೆ ಉತ್ತರ ಕೊಡ್ತೀವಿ: ಭಾರತವನ್ನು ಕೆಣಕಿದ ಇಮ್ರಾನ್ ಖಾನ್

    ಮಂಗಳವಾರವಷ್ಟೇ ಯುದ್ಧಕ್ಕೆ ಸಿದ್ಧ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಧಟತನದ ಹೇಳಿಕೆಯನ್ನೂ ನೀಡಿದ್ದರು. ಭಾರತ-ಪಾಕಿಸ್ತಾನ ಜೊತೆಗೆ ಬೇಗುದಿ ಶಮನಕ್ಕೆ ಸಂಧಾನದ ಮಾತನ್ನೂ ಆಡಿದ್ದರು. ಈ ಹಿನ್ನೆಲೆಯಲ್ಲಿ ಸೌದಿ ರಾಜಕುಮಾರನ ಭಾರತ ಭೇಟಿ ಮಹತ್ವ ಪಡೆದಿದೆ. ಹೂಡಿಕೆ, ದ್ವಿಪಕ್ಷೀಯ ಸಹಕಾರ ಕುರಿತ 7 ಒಪ್ಪಂದಗಳಿಗೆ ಸಹಿ ಹಾಕುವುದರ ಜೊತೆಗೆ ಭಯೋತ್ಪಾದನೆ ವಿರುದ್ಧ ಸೌದಿ ಅರೇಬಿಯಾ-ಭಾರತ ಉಗ್ರ ಹೇಳಿಕೆ ಕೊಟ್ಟು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸೋ ಸಾಧ್ಯತೆ ಇದೆ. ಇದನ್ನೂ ಓದಿ: ‘ನಿಮ್ಮಿಂದ ಆಗದಿದ್ರೆ, ನಮಗೆ ಬಿಡಿ’ – ಇಮ್ರಾನ್ ಖಾನ್ ಹೇಳಿಕೆಗೆ ಪಂಜಾಬ್ ಸಿಎಂ ತಿರುಗೇಟು

    ಇತ್ತ ಪುಲ್ವಾಮಾ ದಾಳಿ ಭಯಾನಕ ಅಂತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ನಾನು ಎಲ್ಲವನ್ನೂ ನೋಡುತ್ತಿದ್ದೇನೆ. ಸಾಕಷ್ಟು ವರದಿಗಳು ಬರ್ತಿವೆ. ಶೀಘ್ರವೇ ನಮ್ಮ ಹೇಳಿಕೆಯನ್ನ ಬಿಡುಗಡೆ ಮಾಡ್ತೇವೆ. ಆದ್ರೆ ಭಾರತ ಮತ್ತು ಪಾಕಿಸ್ತಾನ ಜೊತೆಯಾಗಿ ಸಾಗಿದರೆ ಅಚ್ಚರಿಯೇ ಸರಿ ಅಂತ ಟ್ರಂಪ್ ಹೇಳಿದ್ದಾರೆ.

    https://www.youtube.com/watch?v=kbMS2x06Kr0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಲರ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಬ್ಯೂಟಿಷಿಯನ್ ಬಂಧನ

    ಪಾರ್ಲರ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಬ್ಯೂಟಿಷಿಯನ್ ಬಂಧನ

    ಬೆಂಗಳೂರು: ಸೌದಿ ಅರೇಬಿಯಾ ವಿದ್ಯಾರ್ಥಿನಿಯ ಮೇಲೆ ಬ್ಯೂಟಿಷಿಯನೊಬ್ಬ ಲೈಂಗಿಕ ದೌರ್ಜನ್ಯವೆಸಗಿರೋ ಘಟನೆ ಇಂದು ಬೆಳಕಿಗೆ ಬಂದಿದೆ.

    ಜಾವಿದ್ ಹಬೀಬ್ ಬ್ಯೂಟಿ ಪಾರ್ಲರ್ ಬ್ಯೂಟಿಷಿಯನ್ ಲಕ್ಕಿಸಿಂಗ್ ಎಂಬಾತ ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಕಿರುಕುಳ ನೀಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಶನಿವಾರ ಕಾಲೇಜ್ ಫೆಸ್ಟ್ ಇದ್ದ ಕಾರಣ ಸೌದಿ ಮೂಲದ ವಿದ್ಯಾರ್ಥಿನಿ ಬ್ಯೂಟಿ ಪಾರ್ಲರ್ ಗೆ ತೆರಳಿದ್ದಳು. ಈ ವೇಳೆ ಅಲ್ಲಿನ ಬ್ಯೂಟಿಷಿಯನ್ ಲಕ್ಕಿಸಿಂಗ್ ವಿದ್ಯಾರ್ಥಿನಿ ಮೇಲೆ ತನ್ನ ವಿಕೃತಿ ಮೆರೆದಿದ್ದಾನೆ. ಘಟನೆಯ ಬಳಿಕ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಈ ವಿಚಾರವನ್ನು ಹಂಚಿಕೊಂಡಿದ್ದಾಳೆ. ನಂತರ ಸ್ನೇಹಿತೆಯರ ಸಹಾಯದಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರು ದಾಖಲಿಸಿದ ಎರಡೇ ಗಂಟೆಯಲ್ಲಿ ಪೊಲೀಸರು ಆರೋಪಿ ಬ್ಯೂಟಿಷಿಯನ್ ನನ್ನು ಬಂಧಿಸಿದ್ದಾರೆ.

  • ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಕಿರುಕುಳ- ಪತ್ನಿಯ ರಕ್ಷಣೆ ಕೋರಿ ಸಂಸದರ ಮೊರೆ ಹೋದ ಪತಿ

    ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಕಿರುಕುಳ- ಪತ್ನಿಯ ರಕ್ಷಣೆ ಕೋರಿ ಸಂಸದರ ಮೊರೆ ಹೋದ ಪತಿ

    ಕೊಪ್ಪಳ: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ಹೋಗಿರುವ ಕೊಪ್ಪಳದ ಮಹಿಳೆಯೊಬ್ಬರನ್ನ ಅಲ್ಲಿನ ಕೆಲವರು ಗೃಹಬಂಧನದಲ್ಲಿರಿಸಿ ಕಿರುಕುಳ ನೀಡ್ತಿರೋ ಮಾಹಿತಿ ಬಯಲಾಗಿದೆ.

    ಕೊಪ್ಪಳದ ಬಾಬಾ ಜಾನ್ ಎಂಬವರ ಪತ್ನಿ ಚಾಂದ್ ಸುಲ್ತಾನ್ ಎಂಬ ಮಹಿಳೆ ಸೌದಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಮಹಿಳೆಯೇ ತಮ್ಮ ಪತಿಗೆ ಫೋನ್ ಕರೆ ಮಾಡಿ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಇದೀಗ ಕುಟುಂಬ ಕಂಗಾಲಾಗಿದೆ.

    ಶಿಕ್ಷಕಿ ಕೆಲಸಕ್ಕೆಂದು ನಂಬಿಸಿ ಚಾಂದ್ ಸುಲ್ತಾನಾರನ್ನ ಸೌದಿಗೆ ಕರೆದೊಯ್ಯಲಾಗಿತ್ತು. ಆದ್ರೆ ಇದೀಗ ಬೇರೆ ಕೆಲಸ ಮಾಡುವಂತೆ ಹೇಳ್ತಿದ್ದು, ನಿರಾಕರಿಸಿದ್ದಕ್ಕೆ ಕೊಠಡಿಯಲ್ಲಿ ಕೂಡಿ ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂಬುವುದಾಗಿ ತಿಳಿದುಬಂದಿದೆ.

    ಚಾಂದ್ ಸುಲ್ತಾನ್ ಅವರಿಗೆ ದಿನಕ್ಕೊಂದು ಬ್ರೆಡ್ ಮಾತ್ರ ಎಸೆಯುತ್ತಾರಂತೆ. ಇದೀಗ ತಮ್ಮ ಪತ್ನಿಯನ್ನು ರಕ್ಷಿಸಿ ಸ್ವದೇಶಕ್ಕೆ ಕರೆಸಿಕೊಳ್ಳಲು ಸಹಾಯ ಮಾಡಬೇಕೆಂದು ಕೋರಿ ಸಂಸದ ಸಂಗಣ್ಣ ಕರಡಿ ಮೊರೆ ಹೋಗಿದ್ದಾರೆ ಬಾಬಾ ಜಾನ್. ಇದಕ್ಕೆ ಸ್ಪಂದಿಸಿದ ಸಂಸದ ಸಂಗಣ್ಣ, ಸಚಿವೆ ಸುಷ್ಮಾ ಸ್ವರಾಜ್ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.