Tag: saudi arabia

  • ರಾಜ್ಯದಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವು

    ರಾಜ್ಯದಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವು

    ಕಲಬುರಗಿ: ಕೊರೊನಾ ವೈರಸ್ ಶಂಕಿತ ಕಲಬುರಗಿಯ 76 ವರ್ಷದ ಮೊಹ್ಮದ್ ಹುಸೇನ್ ಸಿದ್ದಿಕಿ ಸಾವನ್ನಪ್ಪಿದ್ದಾರೆ.

    ಫೆಬ್ರವರಿ 29ರಂದು ಸೌದಿಯಿಂದ ವೃದ್ಧ ಮೊಹ್ಮದ್ ಹುಸೇನ್ ಸಿದ್ದಿಕಿ ಕಲಬುರಗಿ ನಗರಕ್ಕೆ ಬಂದಿದ್ದರು. ಮಾರ್ಚ್ 5ರಂದು ಸಿದ್ಧಿಕಿ ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.

    ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಸಿದ್ದಿಕಿಯವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಸಿದ್ದಿಕಿ ಸಾವನ್ನಪ್ಪಿರುವ ಬೆನ್ನಲ್ಲೇ ಅಧಿಕಾರಿಗಳು ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

    ಕೊರೊನಾ ವೈರಸ್ ನಿಂದ ಸಿದ್ದಿಕಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮುಗಿಯುವವರೆಗೂ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ ಹಾಗೂ ಅವರ ತಂಡ ಉಸ್ತುವಾರಿ ವಹಿಸಿಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿ ಕಲಬುರಗಿ ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 61ಕ್ಕೆ ಹೆಚ್ಚಳವಾಗಿದೆ. ಈಗಾಗಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ನಲ್ಲಿ ಮೃತಪಟ್ಟಿದ್ದಾರೆ. ಇತ್ತ ಪುಣೆಯಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ 12 ಜನಕ್ಕೆ ತಗುಲಿದ್ದ ಕೊರೊನಾ ಒಂದೇ ದಿನದಲ್ಲಿ 19ಕ್ಕೆ ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, 7ನೇ ತರಗತಿವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದರು. ಅಲ್ಲದೆ ಮಾ.31ರ ವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ಕೂಡ ಸರ್ಕಾರ ನಿರ್ಧಾರ ಕೈಗೊಂಡಿದೆ.

  • ಕಲಬುರಗಿಯಲ್ಲಿ ವೃದ್ಧನಿಗೆ ಕೊರೊನಾ ವೈರಸ್ ಶಂಕೆ

    ಕಲಬುರಗಿಯಲ್ಲಿ ವೃದ್ಧನಿಗೆ ಕೊರೊನಾ ವೈರಸ್ ಶಂಕೆ

    ಕಲಬುರಗಿ: ನಗರದಲ್ಲಿ ವೃದ್ಧರೊಬ್ಬರಿಗೆ ಕೊರೊನಾ ವೈರಸ್ ಇರುವ ಶಂಕೆ ವ್ಯಕ್ತವಾಗಿದೆ.

    ಸೌದಿ ಅರೇಬಿಯಾದಿಂದ ಬಂದಿದ್ದ 75 ವರ್ಷದ ವೃದ್ಧನಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಅವರನ್ನು ಜೀಮ್ಸ್ ಆಸ್ಪತ್ರೆಯಿಂದ ಹೈದರಬಾದ್‍ಗೆ ಶಿಫ್ಟ್ ಮಾಡಲಾಗಿದೆ. ವೃದ್ಧನ ಕುಟುಂಬಸ್ಥರು ಹೈದರಾಬಾದ್‍ಗೆ ಕರೆದೊಯ್ದಿದ್ದಾರೆ. ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಅವರನ್ನು ಹೈದರಾಬಾದ್‍ಗೆ ಶಿಫ್ಟ್ ಮಾಡಿದ್ದಾರೆ.

    ವೃದ್ಧ ಫೆಬ್ರವರಿ 29 ರಂದು ಸೌದಿ ಅರೇಬಿಯಾದಿಂದ ಬಂದಿದ್ದರು. ಮಾರ್ಚ್ 5 ರಂದು ಜ್ವರ, ಕೆಮ್ಮು ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿತ್ತು. ಈಗಾಗಲೇ ಕುಟುಂಬಸ್ಥರನ್ನು ಕೂಡ ತಪಾಸಣೆ ಮಾಡಿರುವ ವೈದ್ಯರು, ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

    ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 61ಕ್ಕೆ ಹೆಚ್ಚಳವಾಗಿದೆ. ಈಗಾಗಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ನಲ್ಲಿ ಮೃತಪಟ್ಟಿದ್ದಾರೆ. ಇತ್ತ ಪುಣೆಯಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ 12 ಜನಕ್ಕೆ ತಗುಲಿದ್ದ ಕೊರೊನಾ ಒಂದೇ ದಿನದಲ್ಲಿ 19ಕ್ಕೆ ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, 7ನೇ ತರಗತಿವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದರು. ಅಲ್ಲದೆ ಮಾ.31ರವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ಕೂಡ ಸರ್ಕಾರ ನಿರ್ಧಾರ ಕೈಗೊಂಡಿದೆ.

  • ಸ್ನೇಹಿತನಿಗಾಗಿ ಟ್ವೀಟ್ ಮೂಲಕ ಮೋದಿಗೆ ಮನವಿ ಮಾಡಿದ ಸಾಗರದ ಯುವಕ

    ಸ್ನೇಹಿತನಿಗಾಗಿ ಟ್ವೀಟ್ ಮೂಲಕ ಮೋದಿಗೆ ಮನವಿ ಮಾಡಿದ ಸಾಗರದ ಯುವಕ

    ಶಿವಮೊಗ್ಗ: ವಿದೇಶದಲ್ಲಿ ಅಪಘಾತಕ್ಕೀಡಾಗಿರುವ ಸ್ನೇಹಿತನಿಗಾಗಿ ಸಾಗರದ ಯುವಕನೋರ್ವ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಸಹಾಯ ಕೇಳಿದ್ದಾನೆ.

    ಸೌದಿ ಅರೇಬಿಯಾದಲ್ಲಿ ಕಳೆದ 6 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಯುವಕ ಅಖ್ತರ್ ಅಹಮ್ಮದ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಈ ಯುವಕನಿಗೆ ಸಹಾಯ ಮಾಡುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಯುವಕ ಶಕೀಲ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾನೆ.

    ಉತ್ತರ ಪ್ರದೇಶ ಲಕ್ನೋ ಮೂಲದ ಅಖ್ತರ್ ಅಹಮ್ಮದ್ ಹಾಗೂ ಸಾಗರದ ಶಕೀಲ್ ಅಹಮ್ಮದ್ ಎಂಬುವರು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ಹೋಟೆಲ್‍ವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಇಬ್ಬರು ಸ್ವದೇಶಕ್ಕೆ ಬಂದು ಮತ್ತೆ ವಾಪಸ್ಸಾಗಿದ್ದರು. ಆದರೆ ಕಳೆದ 6 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಲಕ್ನೋದ ಅಖ್ತರ್ ಅಹಮ್ಮದ್ ತೀವ್ರ ಗಾಯದಿಂದ ನರಳುತ್ತಿದ್ದಾರೆ. ಹೀಗಾಗಿ ಅವರನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳಲು ಪ್ರಧಾನಿಯವರು ನೆರವು ನೀಡಲಿ ಎಂದು ಶಕೀಲ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

  • ಉಡುಪಿಯಲ್ಲಿ ತೈಲ ಸಂಗ್ರಹಿಸಲಿದೆ ಸೌದಿ ಅರಾಮ್ಕೊ

    ಉಡುಪಿಯಲ್ಲಿ ತೈಲ ಸಂಗ್ರಹಿಸಲಿದೆ ಸೌದಿ ಅರಾಮ್ಕೊ

    ನವದೆಹಲಿ: ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾ ಕಂಪನಿ ಸೌದಿ ಅರೇಬಿಯಾದ ಅರಾಮ್ಕೊ ಉಡುಪಿಯ ಪಾದೂರಿನ ತೈಲ ಸಂಗ್ರಹಾಗಾರದಲ್ಲಿ ದಾಸ್ತಾನು ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ.

    ಪೆಟ್ರೋಲಿಯಂ ಸಂಗ್ರಹಣೆ ಮಾಡಲು ಒಂದು ಭಾಗವನ್ನು ಸೌದಿ ಅರಾಮ್ಕೊಗೆ ಗುತ್ತಿಗೆ ನೀಡಲು ಭಾರತ ಮುಂದಾಗಿದ್ದು, ಈ ಮೂಲಕ ಸುಮಾರು 46 ಲಕ್ಷ ಬ್ಯಾರೆಲ್ ತೈಲವನ್ನು ಸಂಗ್ರಹಿಸಲು ಅವಕಾಶ ನೀಡುತ್ತಿದೆ.

    ಈ ಕುರಿತು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಇಂಧನ ಮೂಲಸೌಕರ್ಯವನ್ನು ವೃದ್ಧಿಸಲು ಭಾರತವು ಜಾಗತಿಕ ಹೂಡಿಕೆಗೆ ಅವಕಾಶ ನೀಡುತ್ತಿದೆ. ಜಾಗತಿಕ ತೈಲ ಉತ್ಪಾದಕರು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದು, ಇಂಧನ ಬೇಡಿಕೆ ಹೆಚ್ಚಾದಂತೆಲ್ಲ, ದೇಶದ ಆರ್ಥಿಕತೆ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

    ಭಾರತದ ತೈಲ ಸಂಗ್ರಹಣೆಯ ಸರ್ಕಾರಿ ಕಂಪನಿಯಾದ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ ಈ ಕುರಿತ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಉಡುಪಿ ಜಿಲ್ಲೆಯ ಪಾದೂರಿನ ಘಟಕದ ಒಟ್ಟು 25 ಲಕ್ಷ ಟನ್‍ಗಳಷ್ಟು ಸಂಗ್ರಹಣೆಗೆ ಅವಕಾಶ ಕಲ್ಪಿಸಲಾಗಿದೆ.

    ಕೇವಲ ಒಂದು ಕಂಪಾರ್ಟ್‍ಮೆಂಟ್ ಗೆ ಕುರಿತ ಒಪ್ಪಂದಕ್ಕೆ ಮಾತ್ರ ಅರಾಮ್ಕೊ ಸಹಿ ಹಾಕಿದೆ ಎಂದು ಇಂಡಿಯನ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‍ಪಿಎಸ್ ಅಹುಜಾ ತಿಳಿಸಿದ್ದಾರೆ. ಪಾದೂರು ಶೇಖರಣಾ ಘಟಕ ನಾಲ್ಕು ಕಂಪಾರ್ಟ್‍ಮೆಂಟ್‍ಗಳನ್ನು ಹೊಂದಿದೆ.

    ಇಲ್ಲಿಯವರೆಗೆ ಭಾರತದಲ್ಲಿ ತೈಲವನ್ನು ಸಂಗ್ರಹಿಸುತ್ತಿರುವ ವಿದೇಶಿ ಕಂಪನಿಗಳ ಪೈಕಿ ಪಾದೂರಿನಲ್ಲಿ ತೈಲ ಸಂಗ್ರಹಣೆಗೆ ಒಪ್ಪಿರುವ ಏಕೈಕ ಕಂಪನಿ ಅರಾಮ್ಕೊ ಆಗಿದೆ. ಕಳೆದ ವರ್ಷ ಇದೇ ಕಂಪನಿ ಪಾದೂರಿನ ಮೀಸಲು ಸಾಮರ್ಥ್ಯದ ಅರ್ಧದಷ್ಟು ಭಾಗವನ್ನು ಬಳಸುವ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿತ್ತು.

    ಅರಾಮ್ಕೊ ಭಾರತದ ಕಾರ್ಯತಂತ್ರದ ಅಗತ್ಯಗಳಿಗಾಗಿ 46 ಲಕ್ಷ ಬ್ಯಾರೆಲ್‍ಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಉಳಿದ ತೈಲವನ್ನು ಭಾರತೀಯ ರಿಫೈನರಿಗಳಿಗೆ ಮಾರಾಟ ಮಾಡಲಿದೆ ಎಂದು ಅಹುಜಾ ತಿಳಿಸಿದ್ದಾರೆ.

    ಭಾರತ, ಮೂರು ಸ್ಥಳಗಳಲ್ಲಿ ಭೂಗತ ಸಂಗ್ರಹಾಗಾರಗಳನ್ನು ಹೊಂದಿದ್ದು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಒಟ್ಟು 36.87 ದಶಲಕ್ಷ ಬ್ಯಾರೆಲ್ ತೈಲವನ್ನು ಈ ಸಂಗ್ರಹಾಗಾರಗಳಲ್ಲಿ ಸಂಗ್ರಹಿಸಬಹುದಾಗಿದೆ.

  • ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಯ ಮೇಲೆ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

    ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಯ ಮೇಲೆ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

    ದುಬೈ: ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಅರಾಮ್ಕೊ ನಡೆಸುತ್ತಿರುವ ಎರಡು ಪ್ರಮುಖ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ.

    ಇರಾನ್‍ಗೆ ಸೇರಿದ ಹೌತಿ ಗುಂಪಿನ ಬಂಡುಕೋರರು ಅರಾಮ್ಕೊದ ಅತಿದೊಡ್ಡ ತೈಲ ಸಂಸ್ಕರಣಾ ಘಟಕಗಳಾದ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ಗಳ ಮೇಲೆ ದಾಳಿ ನಡೆಸಿದ್ದಾರೆ. ಘಟಕಗಳನ್ನು ಗುರಿಯಾಗಿಸಿಕೊಂಡು 10 ಡ್ರೋನ್‍ಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

    ದಾಳಿ ನಡೆಸಿದ ಹೌತಿ ಗುಂಪಿನ ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ಅಲ್-ಮಸಿರಾ ಟಿವಿಗೆ ಈ ಕುರಿತು ಮಾಹಿತಿ ನೀಡಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾನೆ.

    ಡ್ರೋನ್ ದಾಳಿಯಿಂದಾಗಿ ಅರಾಮ್ಕೋದ ಎರಡು ತೈಲ ಘಟಕಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸೌದಿಯ ಆಂತರಿಕ ಸಚಿವಾಲಯ ಸ್ಪಷ್ಟಪಡಿಸಿದೆ. ಸ್ಟಾಕ್ ಪೆಟ್ಟಿಗೆ ಸಿದ್ಧಪಡಿಸುತ್ತಿದ್ದಂತೆ ಹೌತಿ ಬಂಡುಕೋರರು ದಾಳಿ ನಡೆಸಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸಾವು, ನೋವು ಸಂಭವಿಸಿರುವ ಕುರಿತು ಈವರೆಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

    ಪೂರ್ವ ಸೌದಿ ಅರೇಬಿಯಾದ ಎರಡು ಪ್ರಮುಖ ಅರಾಮ್ಕೋ ಘಟಕಗಳಾದ ಅಬ್ಕೈಕ್ ಮತ್ತು ಖುರೈಸ್‍ಗಳ ಮೇಲೆ ಇಂದು ಬೆಳಗ್ಗೆ ನಡೆದ ದಾಳಿಯ ನಂತರ ಹೊಗೆಯು ಆಕಾಶದ ತುಂಬೆಲ್ಲ ಹಬ್ಬಿದ್ದು, ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸುಧಾರಿತ ಶಸ್ತ್ರಾಸ್ತ್ರಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಹಿಡಿದು ಮಾನವ ರಹಿತ ಡ್ರೋನ್‍ಗಳ ವರೆಗೆ ವಿಸ್ತರಿಸಿದೆ. ಇದರಿಂದ ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತು ಮಾಡುವ ಸೌದಿ ಅರೇಬಿಯಾಗೆ ತೈಲ ಘಟಕಗಳ ಸ್ಥಾಪನೆಗೆ ಭಾರೀ ಆತಂಕ ಎದುರಾಗಿದೆ.

    ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಇತ್ತೀಚೆಗಷ್ಟೇ ಸಮ್ಮತಿ ಸೂಚಿಸಿತ್ತು. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಿದೆ ಎಂದು ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದರು.

    ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿದೆ. ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿತ್ತು.

  • ಅತ್ಯಾಚಾರಿ ಆರೋಪಿಯನ್ನು ಸೌದಿಯಿಂದ ಎಳೆತಂದ ಕೇರಳದ ಲೇಡಿ ಐಪಿಎಸ್

    ಅತ್ಯಾಚಾರಿ ಆರೋಪಿಯನ್ನು ಸೌದಿಯಿಂದ ಎಳೆತಂದ ಕೇರಳದ ಲೇಡಿ ಐಪಿಎಸ್

    ತಿರುವನಂತಪುರಂ: ಕೇರಳದ ಲೇಡಿ ಐಪಿಎಸ್ ಅಧಿಕಾರಿಯೊಬ್ಬರು ಅತ್ಯಾಚಾರ ಆರೋಪಿಯನ್ನು ಸೌದಿ ಅರೇಬಿಯಾದಿಂದ ಭಾರತಕ್ಕೆ ಎಳೆ ತಂದಿದ್ದಾರೆ.

    ಸುನೀಲ್ ಕುಮಾರ್ ಅತ್ಯಾಚಾರವೆಸಗಿದ ಆರೋಪಿ. ಸುನೀಲ್ ಕುಮಾರ್ ಮೂಲತಃ ಕೊಲ್ಲಂ ನಿವಾಸಿಯಾಗಿದ್ದು, ಸೌದಿಯಲ್ಲಿ ಕೆಲಸ ಮಾಡುತ್ತಿದ್ದನು. ಸುನೀಲ್ 2017ರಲ್ಲಿ ರಜೆಗೆಂದು ಕೊಲ್ಲಂಗೆ ಬಂದಿದ್ದನು. ಈ ವೇಳೆ ಆತ ತನ್ನ ಸ್ನೇಹಿತನ 13 ವರ್ಷದ ಮಗಳ ಮೇಲೆ 3 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದ.

    ಅಪ್ರಾಪ್ತೆ ಈ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಳು. ಆಗ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಅಷ್ಟರಲ್ಲಿ ಆರೋಪಿ ಸುನೀಲ್ ಸೌದಿ ಅರೇಬಿಯಾಗೆ ಪರಾರಿ ಆಗಿದ್ದನು. ಇದಾದ ಬಳಿಕ ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಬಳಿಕ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಮೊದಲು ಆರೋಪಿಯನ್ನು ಬಾಲಕಿಯ ಕುಟುಂಬಕ್ಕೆ ಪರಿಚಯಿಸಿದ್ದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದನು.

    2019 ಜೂನ್ ತಿಂಗಳಿನಲ್ಲಿ ಮೇರಿನ್ ಜೋಸೆಫ್ ಕೊಲ್ಲಂನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೇರಿನ್ ಅವರು ಮಕ್ಕಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ್ದ ಬಾಕಿ ಉಳಿದಿದ್ದ ಫೈಲ್ ತರಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ನಾನು ಈ ಪ್ರಕರಣವನ್ನು ನೋಡಿದೆ. ಆಗ ಆರೋಪಿ ಅತ್ಯಾಚಾರವೆಸಗಿ 2 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದಾನೆ ಎಂಬುದು ತಿಳಿಯಿತು. ಬಳಿಕ ಈ ಪ್ರಕರಣ ತನಿಖೆ ನಿಂತು ಹೋಗಿತ್ತು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರು ಎಂದರು.

    2017ರಲ್ಲಿ ಆರೋಪಿ ಸುನೀಲ್‍ಗೆ ಇಂಟರ್ ಪೋಲ್ ನೋಟಿಸ್ ನೀಡಲಾಗಿತ್ತು. ಆದರೆ ಪ್ರಕರಣ ಮುಂದುವರಿಯಲಿಲ್ಲ. ಇಂಟರ್ ಪೋಲ್ ನೋಟಿಸ್ ನೀಡಿದ್ದರೂ ಅನೇಕ ಪ್ರಕರಣ ಮುಂದುವರೆಯಲ್ಲ. ಏಕೆಂದರೆ ಇದಕ್ಕೆ ಆ ದೇಶದಿಂದ ನಿರಂತರ ಸಹಕಾರ ಹಾಗೂ ಫಾಲೋ ಅಪ್ ಬೇಕಾಗುತ್ತದೆ. 2010ರಲ್ಲಿ ಪ್ರಧಾನಿಯಾಗಿದ್ದ ಮನ್‍ಮೋಹನ್ ಸಿಂಗ್ ಅವರು ಸೌದಿಯ ದೊರೆ ಅಬ್ದುಲ ಜೊತೆ ಭಾರತ- ಸೌದಿ ಹಸ್ತಾಂತರ ಒಪ್ಪಂದ ಸಹಿ ಮಾಡಿತ್ತು. ಆ ನಂತರ ಕೇರಳದ ವಾಂಟೆಡ್ ಕ್ರಿಮಿನಲ್‍ಗಳು ಸೌದಿಗೆ ಪರಾರಿಯಾಗಿದ್ದರು. ಆದರೆ ಆ ಆರೋಪಿಗಳ ಹಸ್ತಾಂತರ ಆಗಲಿಲ್ಲ. ಕೆಲವು ದಿನಗಳ ಹಿಂದೆ ಸುನೀಲ್‍ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಸೌದಿ ಪೊಲೀಸರು ತಿಳಿಸಿದ್ದರು. ಮರೀನ್ ಅವರು ಜೂನಿಯರ್ ಅಧಿಕಾರಿಯನ್ನು ಕಳುಹಿಸುವ ಬದಲು ಸ್ವತಃ ತಾವೇ ದುಬೈಗೆ ಹೋಗಿದ್ದರು.

    ಆರೋಪಿಯನ್ನು ಕರೆತಂದ ಬಳಿಕ ಮಾತನಾಡಿದ ಮರೀನ್, ನಾವು ಮೊದಲ ಬಾರಿಗೆ ಇಂತಹ ಹಸ್ತಾಂತರವನ್ನು ಮಾಡುತ್ತಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಲಿಯಲು ನಾನು ಬಯಸಿದ್ದೆ. ಅಲ್ಲದೆ ಇದರ ಬಗ್ಗೆ ನನ್ನ ತಂಡದ ಜೊತೆ ಹಂಚಿಕೊಳ್ಳಬಹುದು ಎಂದು ಎನಿಸಿತ್ತು. ಇದಕ್ಕೆ ಸಾಕಷ್ಟು ಪೇಪರ್ ಕೆಲಸಗಳು ಇದ್ದವು. ಆರೋಪಿಯನ್ನು ಅಲ್ಲಿಂದ ಕರೆ ತರಲು ದಾಖಲೆ ಕೂಡ ಮಾಡಬೇಕಿತ್ತು. ಹಾಗಾಗಿ ನಾನು ಸೌದಿಗೆ ಹೋಗಲು ನಿರ್ಧರಿಸಿದೆ. ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡಿರುವ ಪ್ರಕರಣದ ಬಗ್ಗೆ ಕೆಲಸ ಮಾಡಲು ನನಗೆ ಇಷ್ಟ. ಅಲ್ಲದೆ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಬೇಕು ಎಂದು ನಿರ್ಧರಿಸಿದೆ. ಸುನೀಲ್ ಕುಮಾರ್ ಕೇರಳದಲ್ಲಿ ನಡೆದ ಅಪರಾಧಕ್ಕಾಗಿ ಹಸ್ತಾಂತರಿಸಲ್ಪಟ್ಟ ಮೊದಲ ವ್ಯಕ್ತಿ ಎಂದು ಹೇಳಿದ್ದಾರೆ.

  • ಶಸ್ತ್ರಾಸ್ತ್ರ ಖರೀದಿಯಲ್ಲಿ 2ನೇ ಸ್ಥಾನಕ್ಕೆ ಜಾರಿದ ಭಾರತ: ಯಾವ ದೇಶದ ಪಾಲು ಎಷ್ಟಿದೆ?

    ಶಸ್ತ್ರಾಸ್ತ್ರ ಖರೀದಿಯಲ್ಲಿ 2ನೇ ಸ್ಥಾನಕ್ಕೆ ಜಾರಿದ ಭಾರತ: ಯಾವ ದೇಶದ ಪಾಲು ಎಷ್ಟಿದೆ?

    – ಸೌದಿ ಅರೇಬಿಯಾಗೆ ಸಿಕ್ಕಿತು ಮೊದಲ ಸ್ಥಾನ
    – 155 ದೇಶಗಳನ್ನು ಪರಿಗಣಿಸಿ ಅಧ್ಯಯನ
    – ಮೇಕ್ ಇನ್ ಇಂಡಿಯಾ ಅಡಿ ಭಾರತದಲ್ಲಿ ಶಸ್ತ್ರಾಸ್ತ್ರ ಉತ್ಪಾದನೆ

    ನವದೆಹಲಿ: ಶಸ್ತ್ರಾಸ್ತ್ರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದ ಭಾರತ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಸೌದಿ ಆರೇಬಿಯಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ನೂತನ ಅಧ್ಯಯನ ತಿಳಿಸಿದೆ.

    ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ ಸ್ಟಿಟ್ಯೂಟ್(ಎಸ್‍ಐಪಿಆರ್‍ಐ) ವಿಶ್ವದ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಯಾವ ದೇಶ ಎಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎನ್ನುವ ವರದಿಯನ್ನು ಬಿಡುಗಡೆ ಮಾಡಿದೆ. ಒಟ್ಟು 155 ದೇಶಗಳನ್ನು ಪರಿಗಣಿಸಿ ಈ ಅಧ್ಯಯನ ನಡೆಸಲಾಗಿದೆ.

    2009-13ರ ಜಾಗತಿಕ ಒಟ್ಟು ಶಸ್ತ್ರಾಸ್ತ್ರ ಖರೀದಿಯಲ್ಲಿ ಸೌದಿ ಅರೇಬಿಯಾ ಶೇ.4.3 ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದ್ದರೆ, 2014-2018ರ ಅವಧಿಯಲ್ಲಿ ಶೇ.12 ರಷ್ಟು ಶಶ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. ಭಾರತ 2009-13ರ ಅವಧಿಯಲ್ಲಿ ಶೇ.13 ರಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದ್ದರೆ 2014-18ರ ಅವಧಿಯಲ್ಲಿ ಶೇ.9.5ರಷ್ಟು ಖರೀದಿ ಮಾಡಿತ್ತು. ಈ ಎರಡು ಅವಧಿಗೆ ಹೋಲಿಕೆ ಮಾಡಿದರೆ ಸೌದಿ ಅರೇಬಿಯಾ ಖರೀದಿ ಪ್ರಮಾಣ ಶೇ.192ರಷ್ಟು ಹೆಚ್ಚಳವಾಗಿದ್ದರೆ, ಭಾರತದ ಪ್ರಮಾಣ ಶೇ.24 ರಷ್ಟು ಕಡಿಮೆಯಾಗಿದೆ.

    ಭಾರತ ಈಗ ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಮುಂದಾಗುತ್ತಿದೆ. ಇದರ ಜೊತೆಯಲ್ಲಿ ರಕ್ಷಣಾ ಒಪ್ಪಂದಗಳು ನಡೆದ ಬಳಿಕ ಶಸ್ತ್ರಾಸ್ತಗಳು ಭಾರತ ಸೇರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ.

    ಭಾರತ ಫ್ರಾನ್ಸ್ ರಫೇಲ್ ಖರೀದಿ ಸಂಬಂಧ ನಡೆಸಿದ 59 ಸಾವಿರ ಕೋಟಿ ರೂ. ಒಪ್ಪಂದ, ರಷ್ಯಾ ಜೊತೆ ಎಸ್-400 ಟ್ರಯಫ್ ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿ ಸಂಬಂಧ ನಡೆಸಿದ 40 ಸಾವಿರ ಕೋಟಿ ರೂ. ಒಪ್ಪಂದಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಿಲ್ಲ. ರಫೇಲ್ ವಿಮಾನಗಳು 2019ರ ನವೆಂಬರ್ ನಲ್ಲಿ ಭಾರತಕ್ಕೆ ಬರಲಿದ್ದರೆ, ಎಸ್40 ಕ್ಷಿಪಣಿ ರಕ್ಷಣಾ ವ್ಯವಸ್ಥೆ 2020 ಅಕ್ಟೋಬರ್ ಮತ್ತು ಏಪ್ರಿಲ್ 2023ರ ಒಳಗಡೆ ಭಾರತಕ್ಕೆ ಬರಲಿದೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

    ಭಾರತಕ್ಕೆ ಆಮದಾಗುವ ಶಸ್ತ್ರಾಸ್ತ್ರಗಳ ಪೈಕಿ ಶೇ.58 ರಷ್ಟು ಪಾಲು ರಷ್ಯಾ, ಶೇ.15 ರಷ್ಟು ಇಸ್ರೇಲ್, ಶೇ.12 ರಷ್ಟು ಅಮೆರಿಕದ ಕಂಪನಿಗಳ ಪಾಲಿದೆ. ಸೌದಿ ಅರೇಬಿಯಾಗೆ ಶೇ.68 ಅಮೆರಿಕ, ಶೇ.16 ಇಂಗ್ಲೆಂಡ್, ಶೇ.4.3 ಫ್ರಾನ್ಸ್ ಕಂಪನಿಗಳಿಂದ ರಫ್ತಾಗುತ್ತಿದೆ.

    ಸೌದಿ ಅರೇಬಿಯಾ, ಭಾರತದ ಬಳಿಕ ಟಾಪ್-10 ಪಟ್ಟಿಯಲ್ಲಿ ಈಜಿಪ್ಟ್(3), ಆಸ್ಟ್ರೇಲಿಯಾ(4), ಅಲ್ಜೀರಿಯಾ(5), ಚೀನಾ(6), ಯುಎಇ(7), ಇರಾಕ್(8), ದಕ್ಷಿಣ ಕೊರಿಯಾ(9), ವಿಯೆಟ್ನಾ(10), ಪಾಕಿಸ್ತಾನ(11) ನಂತರದ ಸ್ಥಾನವನ್ನು ಪಡೆದಿದೆ. ಇದನ್ನೂ ಓದಿ: ಭಾರತ ಅಮೆರಿಕದಿಂದ ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಖರೀದಿ ಮಾಡುತ್ತಿರುವುದು ಯಾಕೆ?

    ಪಾಕಿಸ್ತಾನ 2009-2013ರ ಅವಧಿಯಲ್ಲಿ ಒಟ್ಟು ಶೇ.4.8 ರಷ್ಟು ಖರೀದಿಸಿದ್ದರೆ, 2014-18ರ ಅವಧಿಯಲ್ಲಿ ಒಟ್ಟು ಶೇ.2.7ರಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ. ಪಾಕಿಸ್ತಾನ ಚೀನಾದಿಂದ ಅತಿ ಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಚೀನಾ ಪಾಲು ಶೇ.70 ರಷ್ಟು ಇದ್ದರೆ, ಅಮೆರಿಕ ಶೇ.8.9, ರಷ್ಯಾ ಪಾಲು ಶೇ.6.0ರಷ್ಟಿದೆ.

    ಇಸ್ರೇಲಿನಿಂದ ಅತಿ ಹೆಚ್ಚು ಶೇ.15 ರಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಭಾರತ ಮಾತ್ರ ಖರೀದಿಸುತ್ತಿದೆ. ಶಸ್ತ್ರಾಸ್ತ್ರಗಳನ್ನು ಖರೀದಿಸುವ ಟಾಪ್ 15 ದೇಶಗಳ ಪೈಕಿ ಪಾಕಿಸ್ತಾನ ಒಂದನ್ನು ಹೊರತು ಪಡಿಸಿ ಬೇರೆ ಯಾವುದೇ ದೇಶ ಚೀನಾದಿಂದ ರಕ್ಷಣಾ ಸಾಮಾಗ್ರಿಗಳನ್ನು ಆಮದು ಮಾಡುತ್ತಿಲ್ಲ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಭಾರತದಲ್ಲಿ ತಯಾರಾಗಲಿದೆ ಎಕೆ-203 ರೈಫಲ್? ವಿಶೇಷತೆ ಏನು? ಅಗತ್ಯ ಏನು? – ಇಲ್ಲಿದೆ ಪೂರ್ಣ ಮಾಹಿತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಮಾನ ಏರುವ ಭರದಲ್ಲಿ ಮಗುವನ್ನೇ ಮರೆತ ತಾಯಿ!

    ವಿಮಾನ ಏರುವ ಭರದಲ್ಲಿ ಮಗುವನ್ನೇ ಮರೆತ ತಾಯಿ!

    ರಿಯಾದ್: ಪ್ರಯಾಣ ಮಾಡುವ ವೇಳೆ ಗಡಿಬಿಡಿಯಲ್ಲಿ ಕೆಲವೊಮ್ಮೆ ಪ್ರಯಾಣಿಕರು ಲಗೇಜ್ ಮರೆತು ಹೋಗುತ್ತಾರೆ. ಆದ್ರೆ ಮಹಿಳೆಯೊಬ್ಬರು ವಿಮಾನ ಹತ್ತುವ ಭರದಲ್ಲಿ ತನ್ನ ಮಗುವನ್ನೇ ಏರ್​ಪೋರ್ಟ್ ನಲ್ಲಿ  ಮರೆತು ಹೋದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

    ಹೌದು, ಜೆಡ್ಡಾದ ಕಿಂಗ್ ಅಬ್ದುಲ್ಲ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆ ಜರುಗಿದೆ. ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತನ್ನ ಮಗುವಿನೊಂದಿಗೆ ವಿಮಾನಕ್ಕಾಗಿ ಕಾಯುತ್ತಿದ್ದ ಮಹಿಳೆ, ವಿಮಾನ ಬಂದ ಪ್ರಕಟಣೆ ಕೇಳಿದ ಕೂಡಲೇ ಮಗುವನ್ನು ಅಲ್ಲಿಯೇ ಬಿಟ್ಟು ವಿಮಾನ ಏರಿದ್ದಾಳೆ. ಬಳಿಕ ವಿಮಾನ ಟೇಕಾಫ್ ಆಗಿ ಸ್ವಲ್ಪ ದೂರ ಹೋದ ಬಳಿಕ ಮಹಿಳೆಗೆ ತನ್ನ ಮಗುವಿನ ನೆನಪಾಗಿದೆ. ನಂತರ ಗಾಬರಿಯಿಂದ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿ ವಾಪಸ್ ವಿಮಾನವನ್ನು ಜೆಡ್ಡಾ ವಿಮಾನ ನಿಲ್ದಾಣಕ್ಕೆ ತಿರುಗಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.

    ಕೊನೆಗೆ ಮಹಿಳೆಯ ಮನವಿಗೆ ಮಣಿದ ಸಿಬ್ಬಂದಿ ವಿಮಾನವನ್ನು ವಾಪಸ್ ವಿಮಾನ ನಿಲ್ದಾಣಕ್ಕೆ ತಿರುಗಿಸಿದ್ದು, ಮಹಿಳೆ ಮಗುವನ್ನು ಕರೆದುಕೊಂದು ವಾಪಸ್ ಅದೇ ವಿಮಾನದಲ್ಲಿ ತಾನು ಹೋಗಬೇಕಿದ್ದ ಊರಿಗೆ ಪ್ರಯಾಣಿಸಿದ್ದಾರೆ.

    ಈ ರೀತಿ ಪ್ರಕರಣ ಇದೇ ಮೊದಲ ಬಾರಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಲ್ಲದೆ ಮಗುವೊಂದೇ ನಿಲ್ದಾಣದಲ್ಲಿ ತಾಯಿಗಾಗಿ ಕಾಯುತ್ತಿದ್ದ ಕಾರಣಕ್ಕೆ ವಿಮಾನವನ್ನು ವಾಪಸ್ ತಿರುಗಿಸಲಾಯಿತು ಎಂದು ಪೈಲಟ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿನ್ ಲಾಡೆನ್ ಪುತ್ರನ ಪೌರತ್ವ ರದ್ದುಗೊಳಿಸಿದ ಸೌದಿ ಅರೇಬಿಯಾ!

    ಬಿನ್ ಲಾಡೆನ್ ಪುತ್ರನ ಪೌರತ್ವ ರದ್ದುಗೊಳಿಸಿದ ಸೌದಿ ಅರೇಬಿಯಾ!

    ರಿಯಾದ್: ಅಲ್-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಒಸಾಮ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ವಿರುದ್ಧ ಅಮೆರಿಕ ನಿಂತಿರುವ ಬೆನ್ನೆಲ್ಲೇ ಸೌದಿ ಅರೇಬಿಯಾ ಸರ್ಕಾರ ಕೂಡ ಆತನ ಸೌದಿ ಪೌರತ್ವವನ್ನು ರದ್ದುಗೊಳಿಸಿದೆ.

    ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದೆಡೆ ಅಮೆರಿಕ ಸರ್ಕಾರ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್‍ನನ್ನು ಜೀವಂತವಾಗಿ ಹಿಡಿದುಕೊಟ್ಟವರಿಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿದೆ. ಇನ್ನೊಂದೆಡೆ ಸೌದಿ ಸರ್ಕಾರ ಹಮ್ಜಾ ಬಿನ್ ಲಾಡೆನ್ ಹೊಂದಿದ್ದ ಸೌದಿ ಪೌರತ್ವವನ್ನು ರದ್ದುಗೊಳಿಸುವ ಮೂಲಕ ಭಯೋತ್ಪಾದನೆಯನ್ನು ಹೊಡಿದೊಡಿಸಲು ತೀರ್ಮಾನಿಸಿದೆ.

    ಈ ಹಿಂದೆ, ಅಮೆರಿಕ ಪಾಕ್‍ನಲ್ಲಿ ಕಾರ್ಯಾಚರಣೆ ನಡೆಸಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು ಹೊಸಕಿ ಹಾಕಿತ್ತು. ಇದೀಗ ಅವನ ಪುತ್ರ ಹಮ್ಜಾ ಬಿನ್ ಲಾಡೆನ್ ಮೇಲೆಯೂ ಅಮೆರಿಕ ಕಣ್ಣು ಹಾಕಿದೆ. ಹೌದು ಶತಾಯಗತಾಯ ಲಾಡೆನ್ ಸಂತತಿಯನ್ನು ನಿರ್ನಾಮಗೊಳಿಸಬೇಕು, ಆಗ ಭಯೋತ್ಪಾದನೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅಮೆರಿಕ ಮನಸ್ಸು ಮಾಡಿದ್ದು, ಆತನ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದೆ.

    ಈಗ ಇದೇ ದಾರಿಯಲ್ಲಿ ಸೌದಿ ಕೂಡ ಕಾಲಿಟ್ಟಿದೆ. ಒಸಾಮ ಬಿನ್ ಲಾಡೆನ್ ನಂತರ ಅಲ್- ಖೈದಾ ನಾಯಕನಾಗಿ ಹಮ್ಜಾ ಬೆಳೆಯುತ್ತಿದ್ದಾನೆ. ಅವನಿಂದ ಹಲವು ರಾಷ್ಟ್ರಗಳಿಗೆ ತೊಂದರೆ ಇದೆ. ಆತ ಹಲವು ಉಗ್ರ ದಾಳಿಯಲ್ಲೂ ಕೂಡ ಭಾಗಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಆತನ ಪೌರತ್ವವನ್ನು ರದ್ದುಮಾಡಿದ್ದು, ಆತ ಇನ್ಮುಂದೆ ಸೌದಿಯಲ್ಲಿ ವಾಸಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದಲ್ಲಿ ನೂರು ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಸೌದಿ ಅರೇಬಿಯಾ

    ಭಾರತದಲ್ಲಿ ನೂರು ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಸೌದಿ ಅರೇಬಿಯಾ

    – ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ
    – ಪುಲ್ವಾಮಾ ದಾಳಿ ಬಗ್ಗೆ ಮಾತಿಲ್ಲ

    ನವದೆಹಲಿ: ಉಗ್ರವಾದದ ವಿರುದ್ಧದ ಭಾರತದ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಸೌದಿ ಅರೇಬಿಯಾ ತಿಳಿಸಿದೆ.

    ಪ್ರಧಾನಿ ಮೋದಿ ಮತ್ತು ಸೌದಿ ಯುವರಾಜ ಮೊಹ್ಮದ್ ಬಿನ್ ಸುಲ್ತಾನ್ ಮಾತುಕತೆಯ ಬಳಿಕ ಇಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸೌದಿ ಯುವರಾಜ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತ ಮತ್ತು ನೆರೆ ದೇಶಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಅಲ್ಲೇ ಭಾರತದ ಜೊತೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದಾಗಿ ಘೋಷಣೆ ಮಾಡಿದರು. ಆದರೆ ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿ ಕುರಿತಂತೆ ಮಾತನ್ನು ಆಡಲಿಲ್ಲ. ಆದರೆ ಪಾಕಿಸ್ತಾನದಲ್ಲಿ ಮಾತನಾಡುವ ವೇಳೆ ಉಗ್ರರ ದಮನಕ್ಕೆ ಪಾಕ್ ಸಾಕಷ್ಟು ಕ್ರಮ ಕೈಗೊಂಡಿದೆ ಎಂದಿದ್ದರು.

    ಇತ್ತ ಪಾಕಿಸ್ತಾನದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಸೌದಿ ಭಾರತದಲ್ಲಿ 100 ಬಿಲಿಯನ್ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಪ್ರಮುಖವಾಗಿ ಇಂಧನ, ಸಂಸ್ಕರಣೆ ಮತ್ತು ಮೂಲಭೂತ ಸೌಕರ್ಯದಲ್ಲಿ ಹೂಡಿಕೆ ಮಾಡಲಿದೆ. ಅಲ್ಲದೇ ದ್ವಿಪಕ್ಷೀಯ ಸಹಕಾರ ಕುರಿತ 7 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದೇ ವೇಳೆ 2014 ರಿಂದ ಮೋದಿ ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರಿಸಲು ಕೈಗೊಂಡ ಕ್ರಮಗಳ ಬ್ಗಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ್ದ ಸೌದಿ ಯುವರಾಜರನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವಾಗತಿಸಿದ್ದರು. ಮೋದಿ ಅವರ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕೆ ಮಾಡಿದೆ. ಅಲ್ಲದೇ ಸೌದಿ ಯುವರಾಜ ಪಾಕ್‍ನಲ್ಲಿ ಕೊಟ್ಟಿದ್ದ ಹೇಳಿಕೆಯನ್ನು ಬದಲಿಸುವಂತೆ ಮಾಡಲಿ ಎಂದು ಸವಾಲು ಎಸೆದಿದೆ. ಪಾಕಿಸ್ತಾನಕ್ಕೆ ನೂರಾರು ಕೋಟಿ ನೆರವು ನೀಡಿದ ಕೆಲವೇ ಗಂಟೆಗಳಲ್ಲಿ ಮೋದಿಯವರು ಈ ರೀತಿ ಮಾಡಿದ್ದು ಸರೀನಾ? ಇದು ಹುತಾತ್ಮ ಯೋಧರು ಮತ್ತು ಕೋಟಿ ಕೋಟಿ ಭಾರತೀಯರ ಭಾವನೆಗಳಿಗೆ ಪ್ರಧಾನಿ ಮೋದಿ ಮಾಡುತ್ತಿರುವ ಅವಮಾನ ಎಂದು ಟೀಕಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv