Tag: saudi arabia

  • ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

    ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

    ರಿಯಾದ್: ಕಳೆದ 10 ದಿನಗಳಲ್ಲಿ ಮಾದಕವಸ್ತು ಸಂಬಂಧಿತ ಅಪರಾಧಗಳಿಗಾಗಿ ಸೌದಿ ಅರೇಬಿಯಾ (Saudi Arabia) 12 ಜನರನ್ನು ಗಲ್ಲಿಗೇರಿಸಿದೆ. ಇವುಗಳಲ್ಲಿ ಕೆಲವು ಅಪರಾಧಿಗಳನ್ನು ಕತ್ತಿಯಿಂದ ಶಿರಚ್ಛೇದ (Beheading) ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.

    ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಜೈಲಿನಲ್ಲಿದ್ದ 12 ಜನರಿಗೆ ಮರಣದಂಡನೆ (Death Penalty) ವಿಧಿಸಲಾಗಿದೆ. ಅದರಲ್ಲಿ ಮೂವರು ಪಾಕಿಸ್ತಾನಿಗಳು, 4 ಸಿರಿಯನ್ನರು, ಇಬ್ಬರು ಜೋರ್ಡಾನ್ ಮೂಲದವರು ಹಾಗೂ ಮೂವರು ಸೌದಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.

    ಈ ವರ್ಷ ಮಾರ್ಚ್‌ನಲ್ಲಿ ಸೌದಿ ಅರೇಬಿಯಾದ ಆಧುನಿಕ ಇತಿಹಾಸದಲ್ಲೇ ಅತಿ ದೊಡ್ಡ ಸಾಮೂಹಿಕ ಮರಣದಂಡನೆ ನೀಡಲಾಗಿತ್ತು. ಹತ್ಯೆ, ಉಗ್ರಗಾಮಿ ಗುಂಪು ಸೇರಿದಂತೆ ವಿವಿಧ ಅಪರಾಧಗಳಿಂದ ಶಿಕ್ಷೆಗೊಳಗಾದ 81 ಜನರನ್ನು ಗಲ್ಲಿಗೇರಿಸಲಾಗಿತ್ತು. ಇದನ್ನೂ ಓದಿ: ಪಂಪ್‌ವೆಲ್‌ ಫ್ಲೈ ಓವರ್‌ ಬಳಿ ಬಾಂಬ್‌ ಸ್ಟೋಟಿಸಲು ಮುಂದಾಗಿದ್ದ ಶಾರೀಕ್‌

    ಕಳೆದ 2 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮರಣದಂಡನೆಗಳಂತಹ ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಅಲ್ಲಿನ ಆಡಳಿತ ಪ್ರತಿಜ್ಞೆ ಮಾಡಿತ್ತು. 2018ರಲ್ಲಿ ಟರ್ಕಿಯಲ್ಲಿ ಅಮೆರಿಕದ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯ ಬಳಿಕ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹೊಸ ಆದೇಶವನ್ನು ನೀಡಿದ್ದರು.

    2018ರ ಬಳಿಕ ಸೌದಿ ಆಡಳಿತ ಮರಣದಂಡನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದು, ಕೊಲೆ ಅಥವಾ ನರಹತ್ಯೆಯ ತಪ್ಪಿತಸ್ಥರನ್ನು ಮಾತ್ರವೇ ಮರಣದಂಡನೆಗೆ ಒಳಪಡಿಸಲು ಪ್ರಾರಂಭಿಸಿತು. ಇದೀಗ ಮತ್ತೆ ಮರಣದಂಡನೆ ಶಿಕ್ಷೆಗಳನ್ನು ಹೆಚ್ಚಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇಂಡೋನೇಷ್ಯಾ ಬಳಿಕ ಸೊಲೊಮನ್ ದ್ವೀಪದಲ್ಲಿ ಭಾರೀ ಭೂಕಂಪ – ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

    Live Tv
    [brid partner=56869869 player=32851 video=960834 autoplay=true]

  • ಸೌದಿ ವೀಸಾಗಾಗಿ ಭಾರತೀಯರಿಗೆ ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಬೇಕಾಗಿಲ್ಲ

    ಸೌದಿ ವೀಸಾಗಾಗಿ ಭಾರತೀಯರಿಗೆ ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಬೇಕಾಗಿಲ್ಲ

    ನವದೆಹಲಿ: ಸೌದಿ ವೀಸಾಗಾಗಿ (Saudi Visa) ಅರ್ಜಿ ಸಲ್ಲಿಸಲು ಭಾರತೀಯರು (Indians) ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರವನ್ನು ನೀಡುವ ಅಗತ್ಯವಿಲ್ಲ.

    ಸೌದಿ ಅರೇಬಿಯಾ (Saudi Arabia) ಮತ್ತು ಭಾರತ ಗಣರಾಜ್ಯದ ನಡುವಿನ ಸಂಬಂಧ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ದೃಷ್ಟಿಯಿಂದ ಭಾರತೀಯರಿಗೆ ವೀಸಾಗಾಗಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರದ ಅಗತ್ಯವನ್ನು ತೆಗೆದುಹಾಕಲಾಗಿದೆ ಎಂದು ಭಾರತದಲ್ಲಿನ ಸೌದಿ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಶೀಘ್ರವೇ ಭಾರತದ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಏಕರೂಪದ ಚಾರ್ಜರ್

    ವೀಸಾಕ್ಕಾಗಿ ಪೋಲೀಸ್ ಕ್ಲಿಯರೆನ್ಸ್ ಅಗತ್ಯತೆ ನಿಯಮ ತೆಗೆದಿರುವುದು ತ್ವರಿತ ಅರ್ಜಿ ಪ್ರಕ್ರಿಯೆ, ಪ್ರವಾಸ ಸಂಸ್ಥೆಗಳಿಂದ ಸುಲಭ ನಿರ್ವಹಣೆ ಮತ್ತು ಪ್ರವಾಸಿಗರು ದಾಖಲೆ ಒದಗಿಸುವುದಕ್ಕಾಗಿ ಪಡುವ ಪ್ರಯಾಸ ತಪ್ಪುವುದಲ್ಲದೇ ಅನೇಕ ಪ್ರಯೋಜನವಾಗಲಿದೆ.

    ಸೌದಿ ಅರೇಬಿಯಾದಲ್ಲಿ ಶಾಂತಿಯುತವಾಗಿ ವಾಸಿಸುತ್ತಿರುವ ಎರಡು ಮಿಲಿಯನ್ ಭಾರತೀಯ ನಾಗರಿಕರ ಬಗ್ಗೆ ರಾಯಭಾರ ಕಚೇರಿ ಪ್ರಶಂಸೆ ಕೂಡ ವ್ಯಕ್ತಪಡಿಸಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪಿ ದನುಷ್ಕಗೆ ಜಾಮೀನು – 1 ಕೋಟಿ ರೂ. ಠೇವಣಿ ಇಟ್ಟು ಸಿಡ್ನಿ ಜೈಲಿನಿಂದ ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

  • ಮನಃ ಶಾಂತಿಗಾಗಿ 43 ವರ್ಷಗಳಲ್ಲಿ 53 ಮಹಿಳೆಯರನ್ನು ವಿವಾಹವಾದ ಭೂಪ

    ಮನಃ ಶಾಂತಿಗಾಗಿ 43 ವರ್ಷಗಳಲ್ಲಿ 53 ಮಹಿಳೆಯರನ್ನು ವಿವಾಹವಾದ ಭೂಪ

    ರಿಯಾದ್: ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ(Saudi man) ತನ್ನ ವೈಯಕ್ತಿಕ ಸಂತೋಷಕ್ಕಾಗಿ ಅಲ್ಲ. ಬದಲಾಗಿ ಸ್ಥಿರತೆ ಮತ್ತು ಮನಸ್ಸಿಗೆ ಶಾಂತಿ (Peace of Mind) ಕಂಡುಕೊಳ್ಳುವ ಸಲುವಾಗಿ 43 ವರ್ಷಗಳಲ್ಲಿ 53 ಬಾರಿ ವಿವಾಹವಾಗಿದ್ದಾನೆ.

    ಹೌದು, 63 ವರ್ಷದ ಅಬು ಅಬ್ದುಲ್ಲಾ (Abu Abdullah) ಎಂಬ ವ್ಯಕ್ತಿಗೆ “ಶತಮಾನದ ಬಹುಪತ್ನಿತ್ವವಾದಿ” (Polygamist of the Century) ಎಂಬ ಅಡ್ಡ ಹೆಸರು ಇಡಲಾಗಿದೆ. ನಾನು 53 ಮಹಿಳೆಯರನ್ನು ವಿವಾಹವಾಗಿದ್ದೇನೆ. ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಮೊದಲ ಬಾರಿಗೆ ನನಗಿಂತ ಆರು ವರ್ಷ ದೊಡ್ಡವಳನ್ನು ಮದುವೆಯಾದೆ(Marrige). ನಾನು ಮೊದಲ ಬಾರಿಗೆ ಮದುವೆಯಾದಾಗ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಬೇಕು ಎಂಬ ಯೋಚನೆಯನ್ನು ಹೊಂದಿರಲಿಲ್ಲ. ಏಕೆಂದರೆ ನಾನು ಆರಾಮದಾಯಕವಾಗಿ ಇದ್ದೆ ಮತ್ತು ಮಕ್ಕಳನ್ನು ಹೊಂದಿದ್ದೆ. ಆದರೆ ಕೆಲವು ವರ್ಷಗಳ ನಂತರ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾದವು. ಹೀಗಾಗಿ 23 ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಲು ನಿರ್ಧರಿಸಿದೆ. ಈ ಬಗ್ಗೆ ತನ್ನ ಮೊದಲ ಹೆಂಡತಿಗೆ(Wife) ತಿಳಿಸಿರುವುದಾಗಿ ಅಬ್ದುಲ್ಲಾ ಹೇಳಿದ್ದಾನೆ.

    ದಿನ ಕಳೆದಂತೆ ತನ್ನ ಮೊದಲ ಮತ್ತು ಎರಡನೇಯ ಪತ್ನಿ ಇಬ್ಬರೊಂದಿಗೂ ಸಮಸ್ಯೆ ಹೊಂದಿದಾಗ, ಅಬ್ದುಲ್ಲಾ ಮೂರನೇ ಮತ್ತು ನಾಲ್ಕನೇ ಬಾರಿಗೆ ಮದುವೆಯಾಗಲು ನಿರ್ಧರಿಸಿದನು. ಬಳಿಕ ತನ್ನ ಮೊದಲ ಹಾಗೂ ಎರಡನೇಯ ಹೆಂಡತಿಯರಿಬ್ಬರಿಗೂ ವಿಚ್ಛೇದನ (Divorce) ನೀಡಿದನು. ಇದನ್ನೂ ಓದಿ: ಬೇರೆ ಯುವಕನೊಂದಿಗೆ ಮದುವೆಯಾದ ಪ್ರೇಯಸಿಯನ್ನ ಇರಿದು ಕೊಂದ ಭಗ್ನಪ್ರೇಮಿ

    ಈ ರೀತಿ ಬಹು ವಿವಾಹವಾಗಲೂ ಕಾರಣವೆಂದರೆ ತನ್ನನ್ನು ಸಂತೋಷಪಡಿಸುವ ಮಹಿಳೆಗಾಗಿ (Women) ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ತನ್ನ ಎಲ್ಲಾ ಹೆಂಡತಿಯರೊಂದಿಗೆ ನ್ಯಾಯಯುತವಾಗಿರಲು ಪ್ರಯತ್ನಿಸಿದ್ದಾನೆ. ಆದರೆ ಮದುವೆಯಾದ ಒಂದು ರಾತ್ರಿ ಮಾತ್ರ ಹಾಗೇ ಇರಲು ಸಾಧ್ಯವಾಯಿತು ಎಂದಿದ್ದಾನೆ.

    ವ್ಯಕ್ತಿ ಸೌದಿ ಮಹಿಳೆಯರನ್ನು (Saudi Womens) ಹೆಚ್ಚಾಗಿ ಮದುವೆಯಾಗಿದ್ದಾನೆ. ಅಲ್ಲದೇ ತಮ್ಮ ಸಾಗರೋತ್ತರ ವ್ಯಾಪಾರ ಪ್ರವಾಸಗಳಲ್ಲಿ ವಿದೇಶಿ ಮಹಿಳೆಯರನ್ನು ವಿವಾಹವಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬಿಜೆಪಿ ಬೆದರಿಕೆ ಪತ್ರಕ್ಕೆ ಡಿಕೆಶಿ ಆಗ್ಲಿ, ಕಾಂಗ್ರೆಸ್ ಆಗ್ಲಿ ಹೆದರೋ ಪ್ರಶ್ನೆಯೇ ಇಲ್ಲ : ಡಿ.ಕೆ ಸುರೇಶ್

    ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಒಬ್ಬ ಮಹಿಳೆಯನ್ನು ಹೊಂದಲು ಮತ್ತು ಅವಳೊಂದಿಗೆ ಶಾಶ್ವತವಾಗಿ ಇರಲು ಬಯಸುತ್ತಾನೆ. ಈ ಸ್ಥಿರತೆಯು ಯುವತಿಯೊಂದಿಗೆ ಅಲ್ಲ, ಆದರೆ ವಯಸ್ಸಾದವಳೊಂದಿಗೆ ಎಂದು ಹೇಳಿದ್ದಾನೆ. ಈಗ ಓರ್ವ ಮಹಿಳೆಯೊಂದಿಗೆ ಮದುವೆಯಾಗಿದ್ದು, ಮರುಮದುವೆಯಾಗುವುದರ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ ಎಂದು ಹೇಳಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಸೌದಿ ಮಹಿಳೆಗೆ 45 ವರ್ಷ ಜೈಲು ಶಿಕ್ಷೆ

    ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಸೌದಿ ಮಹಿಳೆಗೆ 45 ವರ್ಷ ಜೈಲು ಶಿಕ್ಷೆ

    ರಿಯಾದ್: ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೂಲಕ ದೇಶಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಸೌದಿ ಅರೇಬಿಯಾದ ನ್ಯಾಯಾಲಯವು ಮಹಿಳೆಯೊಬ್ಬರಿಗೆ 45 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈ ತಿಂಗಳಲ್ಲಿ ನಡೆದ ಎರಡನೇ ಪ್ರಕರಣವಾಗಿದೆ.

    ಸೌದಿ ಅರೇಬಿಯಾದ ಅತಿದೊಡ್ಡ ಬುಡಕಟ್ಟು ಜನಾಂಗದವರಾದ ನೌರಾ ಬಿಂಟ್ ಸಯೀದ್ ಅಲ್-ಕಹ್ತಾನಿ ಅವರು ಸಮಾಜದ ಒಗ್ಗಟ್ಟನ್ನು ಅಡ್ಡಿಪಡಿಸುತ್ತಿದ್ದಾರೆ ಎಂದು ನ್ಯಾಯಾಧೀಶರು ಆರೋಪಿಸಿದ ನಂತರ ಸುಮಾರು ಅರ್ಧ ಶತಮಾನದವರೆಗೆ ಜೈಲು ಶಿಕ್ಷೆ ವಿಧಿಸಲಾಯಿತು. ಇದನ್ನೂ ಓದಿ: ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ

    jail

    ಅಲ್-ಕಹ್ತಾನಿ ಮಾಹಿತಿ ಜಾಲದ ಮೂಲಕ ಸಾರ್ವಜನಿಕ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

    ಅಲ್-ಕಹ್ತಾನಿ ಆನ್‌ಲೈನ್‌ನಲ್ಲಿ ಏನನ್ನು ಪೋಸ್ಟ್ ಮಾಡಿದ್ದಾರೆ. ಅವರ ವಿಚಾರಣೆಯನ್ನು ಎಲ್ಲಿ ನಡೆಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ʻಇದು ವಿಶೇಷ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಧಿಸಲಾದ ಹೊಸ ಶಿಕ್ಷೆಯಂತೆ ತೋರುತ್ತದೆʼ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸಂಶೋಧನಾ ನಿರ್ದೇಶಕ ಅಬ್ದುಲ್ಲಾ ಅಲಾವುದ್ ತಿಳಿಸಿದ್ದಾರೆ. ಇದನ್ನೂ ಓದಿ: ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಮೊದಲ ಹಿಂದೂ ದೇವಾಲಯ – ಜೈಶಂಕರ್‌ ಭೇಟಿ

    ಅಲ್-ಕಹ್ತಾನಿ ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ಜೈಲಿಗೆ ಹಾಕಲಾಯಿತು ಎಂದು ಅಲೌದ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

    ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

    ಇಸ್ಲಾಮಾಬಾದ್: ರಾಜಕೀಯ ಏರಿಳಿತದೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ಬೆಂಬಲಕ್ಕೆ ಇಸ್ಲಾಮಿಕ್ ರಾಷ್ಟ್ರವಾದ ಸೌದಿ ಅರೇಬಿಯಾ ನಿಂತಿದೆ. ಪಾಕಿಸ್ತಾನದಲ್ಲಿ 100 ಕೋಟಿ ಅಮೆರಿಕನ್ ಡಾಲರ್ (ಸುಮಾರು 8 ಸಾವಿರ ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ.

    Shehbaz Sharif

    ಈ ಕುರಿತಂತೆ ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಬಿನ್ ಅಬ್ದುಲ್ಲಾ ಹಾಗೂ ಅವರ ಪಾಕಿಸ್ತಾನಿ ಸಹವರ್ತಿ ಬಿಲಾವಲ್ ಭುಟ್ಟೋ ಜರ್ದಾರಿ ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದಿದೆ. ಇದೇ ವೇಳೆ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾದ ಅಂತಾರಾಷ್ಟ್ರೀಯ ಸಂಬಂಧಗಳನ್ನೂ ಗಟ್ಟಿಗೊಳಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಇದನ್ನೂ ಓದಿ: ಭಾರತದೊಂದಿಗಿನ ಶಾಶ್ವತ ಶಾಂತಿಗೆ ಯುದ್ಧವೊಂದೇ ಆಯ್ಕೆಯಾಗಿಲ್ಲ: ಪಾಕ್ ಪ್ರಧಾನಿ

    ಪಾಕಿಸ್ತಾನದ ಆರ್ಥಿಕತೆ ಅಭಿವೃದ್ಧಿಪಡಿಸುವ ಜೊತೆಗೆ ತಮ್ಮ ಬೆಂಬಲ ದೃಢೀಕರಿಸುವ ಸಲುವಾಗಿ ಪಾಕಿಸ್ತಾನದಲ್ಲಿ 1 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿದೆ. ಸೌದಿ ಅರೇಬಿಯಾದ ಈ ನಿರ್ಧಾರವನ್ನೂ ವಿದೇಶಾಂಗ ಸಚಿವರು ಸ್ವಾಗತಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ಮಿತ್ರ ರಾಷ್ಟ್ರಗಳು 4 ಶತಕೋಟಿ ಡಾಲರ್‌ಗಳಷ್ಟು ಹಣಕಾಸಿನ ನೆರವನ್ನು ಸ್ವೀಕರಿಸಿದ ನಂತರ ಸೌದಿ ಅರೇಬಿಯಾದ ಹೂಡಿಕೆಯ ಕುರಿತು ಪ್ರಕಟಣೆಯಲ್ಲಿ ತಿಳಿಸಿದೆ.

    ಪಾಕಿಸ್ತಾನವು ಮುಂದೂಡಲ್ಪಟ್ಟ ತೈಲ ಸೌಲಭ್ಯದ ಅಡಿಯಲ್ಲಿ ಕತಾರ್‌ನಿಂದ 2 ಶತಕೋಟಿ ಯುಎಸ್ ಡಾಲರ್, ಸೌದಿ ಅರೇಬಿಯಾದಿಂದ 1 ಶತಕೋಟಿ ಯುಎಸ್ ಡಾಲರ್‌ನಷ್ಟು ಹಾಗೂ ವಿವಿಧ ಕ್ಷೇತ್ರಗಳಲ್ಲಿ 1 ಕೋಟಿ ಯುಎಸ್ ಡಾಲರ್ ಹೂಡಿಕೆಗಳನ್ನು ಪಡೆಯಲಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ.

    ಪಾಕಿಸ್ತಾನವು ಮತ್ತೆ ಆರ್ಥಿಕ ಕುಸಿತದ ಅಂಚಿನಲ್ಲಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ದೇಶದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರು ಸೌದಿಗೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಸೌದಿಯು 100 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಮಾಡಲು ಒಪ್ಪಿಕೊಂಡಿದೆ. ಇದು ಪಾಕಿಸ್ತಾನದ ಆರ್ಥಿಕ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಟ್ವೀಟ್ ಮಾಡಿದ್ದಕ್ಕೆ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ

    ಟ್ವೀಟ್ ಮಾಡಿದ್ದಕ್ಕೆ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ

    ರಿಯಾದ್: ಭಿನ್ನಮತೀಯ ಖಾತೆಗಳನ್ನು ಫಾಲೋ ಮಾಡಿ ರೀಟ್ವೀಟ್ ಮಾಡಿದ್ದಕ್ಕೆ ಸೌದಿ ಮೂಲದ ಮಹಿಳೆಗೆ ಬರೋಬ್ಬರಿ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ಹೌದು, ಸೌದಿ ಅರೇಬಿಯಾ ಮೂಲದ ಸಲ್ಮಾ ಅಲ್ ಶೆಹಾಬ್ ಅಮೆರಿಕದ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಆ್ಯಕ್ಟಿವ್ ಆಗಿದ್ದ ಭಿನ್ನಮತೀಯರ ಖಾತೆಗಳನ್ನು ಫಾಲೋ ಹಾಗೂ ರೀಟ್ವೀಟ್ ಮಾಡುತ್ತಿದ್ದರು. ಈ ಕಾರಣಕ್ಕೆ ಸೌದಿ ಸರ್ಕಾರ ಸಲ್ಮಾಗೆ 34 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

    ರಜೆಯ ಹಿನ್ನೆಲೆ ತಾಯ್ನಾಡಿಗೆ ಆಗಮಿಸಿದ್ದ ಸಲ್ಮಾರನ್ನು ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡುವ ಹಾಗೂ ನಾಗರಿಕ ಮತ್ತು ರಾಷ್ಟ್ರೀಯ ಭದ್ರತೆಯನ್ನು ಅಸ್ಥಿರಗೊಳಿಸುವ ವೆಬ್‌ಸೈಟ್‌ಗಳನ್ನು ಬಳಸಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಸಲ್ಮಾಗೆ ಆರಂಭದಲ್ಲಿ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಬಳಿಕ ಅದನ್ನು 34 ವರ್ಷಗಳಿಗೆ ಹೆಚ್ಚಿಸಲಾಯಿತು. ಬಳಿಕ ಆಕೆಗೆ 34 ವರ್ಷಗಳ ಪ್ರಯಾಣ ನಿಷೇಧವನ್ನೂ ವಿಧಿಸಲಾಗಿದೆ. ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ – 20 ಕಡೆಗಳಲ್ಲಿ ಶೋಧ

    ಸಲ್ಮಾ ತನ್ನ ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳ ಬಯೋ ವಿಭಾಗದಲ್ಲಿ ತಾನೊಬ್ಬ ದಂತ ಆರೋಗ್ಯ ಶಾಸ್ತ್ರಜ್ಞೆ, ವೈದ್ಯಕೀಯ ಶಿಕ್ಷಣ ತಜ್ಞೆ, ಲೀಡ್ಸ್ ವಿಶ್ವವಿದ್ಯಾಲಯದ ಪಿಹೆಚ್‌ಡಿ ವಿದ್ಯಾರ್ಥಿನಿ, ಪ್ರಿನ್ಸೆಸ್ ನೌರಾ ಬಿಂಟ್ ಅಬ್ದುಲ್ರಹ್ಮಾನ್ ವಿಶ್ವವಿದ್ಯಾಲಯದ ಉಪನ್ಯಾಸಕಿ ಹಾಗೂ ತಾನು ವಿವಾಹಿತೆ ಮತ್ತು ಒಂದು ಮಗುವಿನ ತಾಯಿ ಎಂದು ಬರೆದುಕೊಂಡಿದ್ದಾರೆ.

    ಸಲ್ಮಾಗೆ ಆಗಿರುವ ಅನ್ಯಾಯಕ್ಕೆ ಸೌದಿಯ ಪ್ರಮುಖ ಸ್ತ್ರೀವಾದಿ ಕಾರ್ಯಕರ್ತೆ ಲೌಜೈನ್ ಅಲ್ ಹತ್ಲೌಲ್ ಖಂಡಿಸಿದ್ದಾರೆ. ಜೈಲಿನಲ್ಲಿ ಸಲ್ಮಾ ಮೇಲೆ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆಕೆಗಾಗಿರುವ ದೌರ್ಜನ್ಯದ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಲು ಅವಕಾಶವನ್ನೂ ನೀಡಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರೀತಿಸಿದವಳ ಕೊಂದು ದೇಹವನ್ನು ಪೀಸ್, ಪೀಸ್ ಮಾಡ್ದ – ಪತ್ರಕರ್ತ ಅರೆಸ್ಟ್

    ಟ್ವಿಟ್ಟರ್ ಕಂಪನಿಯಲ್ಲಿ ಸೌದಿ ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್ ಶೇ.5 ರಷ್ಟು ಷೇರುಗಳನ್ನು ಹೊಂದಿದೆ. ಈಗ ಈ ವಿಚಾರದಿಂದಾಗಿ ಮತ್ತೆ ಟ್ವಿಟ್ಟರ್ ಸುದ್ದಿಯಲ್ಲಿದೆ. ಸೌದಿ ಸರ್ಕಾರ, ಅಲ್ಲಿನ ದೊರೆಗಳ ಬಗ್ಗೆ ಯಾರು ವಿರೋಧ ವ್ಯಕ್ತಪಡಿಸುವಂತಿಲ್ಲ. ಟೀಕೆ ವ್ಯಕ್ತಪಡಿಸಿದರೆ ಅವರನ್ನು ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ತೈಲ ಬೆಲೆ ಏರಿಕೆಯಿಂದ ಸೌದಿ ಅರಾಮ್ಕೋಗೆ ಭಾರೀ ಲಾಭ

    ತೈಲ ಬೆಲೆ ಏರಿಕೆಯಿಂದ ಸೌದಿ ಅರಾಮ್ಕೋಗೆ ಭಾರೀ ಲಾಭ

    ರಿಯಾದ್‌: ಉಕ್ರೇನ್‌ ರಷ್ಯಾ ಯುದ್ಧದಿಂದಾಗಿ ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋಗೆ ಭರ್ಜರಿ ಲಾಭವಾಗಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಅರಾಮ್ಕೋ ಕಂಪನಿಯ ನಿವ್ವಳ ಆದಾಯ 48.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಂಪನಿ ನಿವ್ವಳ ಆದಾಯ ಶೇ.25.5 ಶತಕೋಟಿ ಡಾಲರ್‌ ಇತ್ತು. ಈ ಬಾರಿ ಶೇ.90 ರಷ್ಟು ಏರಿಕೆಯಾಗಿ ಇತಿಹಾಸ ಸೃಷ್ಟಿಸಿದೆ.

    ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಮಾಡಿದ ಕಂಪನಿಗಳ ಪೈಕಿ ತ್ರೈಮಾಸಿಕದಲ್ಲಿ ಸೌದಿ ಅರಾಮ್ಕೋ ಅತಿ ಹೆಚ್ಚು ಲಾಭ ಮಾಡಿದ ಕಂಪನಿ ಎಂದು ಬ್ಲೂಮ್‌ಬರ್ಗ್‌ ಹೇಳಿದೆ. ಇದನ್ನೂ ಓದಿ: ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣದಿಂದ ಲಾಭ ಇಲ್ಲ: ಮೋದಿ

    ಇಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದವು. ಆದರೆ ಉಕ್ರೇನ್‌ ಮೇಲಿನ ದಾಳಿಯಿಂದಾಗಿ ಈಗ ಸೌದಿಯಿಂದ ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಲು ಆರಂಭಿಸಿದೆ. ಕೋವಿಡ್‌ ಕಡಿಮೆಯಾದ ಬಳಿಕ ತೈಲ ಬೆಲೆ ನಿಧಾನವಾಗಿ ಏರಲು ಆರಂಭವಾಗಿತ್ತು. ಈ ಮಧ್ಯೆ ಯುದ್ಧದಿಂದಾಗಿ ಬೇಡಿಕೆ ಜಾಸ್ತಿಯಾಗಿ ತೈಲ ಬೆಲೆ ಗಗನಕ್ಕೆ ಏರಿತ್ತು.

    ಒಪೆಕ್‌ ದೇಶಗಳ ಪೈಕಿ ಸೌದಿ ಅರೆಬಿಯಾ ಅತಿ ದೊಡ್ಡ ತೈಲ ಉತ್ಪಾದನಾ ದೇಶವಾಗಿದೆ. ವಿಶ್ವದ ಹಲವು ದೇಶಗಳು ಮನವಿಯ ಹಿನ್ನೆಲೆಯಲ್ಲಿ ಕಳೆದ ವಾರ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿವೆ.

    ಸೌದಿ ಅರಾಮ್ಕೋ ಅಲ್ಲದೇ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಗಳಾದ ಎಕ್ಸನ್‌ಮೊಬಿಲ್‌, ಶೆವ್ರಾನ್‌ ಮತ್ತು ಬಿಪಿ ಕಂಪನಿಗಳು ಕಚ್ಚಾ ತೈಲ ಬೆಲೆ ಏರಿಕೆಯಿಂದ ಲಾಭ ಮಾಡಿಕೊಂಡಿವೆ.

    ಸರ್ಕಾರಿ ಸಿಬ್ಬಂದಿ ವೇತನ, ಸಬ್ಸಿಡಿ, ಇತರ ಅಭಿವೃದ್ಧಿ ಕೆಲಸಗಳಿಗೆ ತೈಲ ಮತ್ತು ಅನಿಲ ಮಾರಾಟದ ಮೇಲೆ ಸೌದಿ ಅರೇಬಿಯಾ ಹೆಚ್ಚು ಅವಲಂಬಿತವಾಗಿದೆ. ರಷ್ಯಾ ಈಗ ಕಡಿಮೆ ಬೆಲೆಯಲ್ಲಿ ತೈಲ ನೀಡುವ ಆಫರ್‌ ನೀಡಿದ್ದರೂ ಪ್ರಸ್ತುತ 1 ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲ 100 ಡಾಲರ್‌ ಬೆಲೆಯಲ್ಲಿ ಮಾರಾಟವಾಗುತ್ತಿದೆ.

    ಪ್ರಸ್ತುತ ಈಗ ಸೌದಿ ಅರೇಬಿಯಾ ಪ್ರತಿ ದಿನ 10 ದಶಲಕ್ಷ ಬ್ಯಾರೆಲ್‌ ತೈಲವನ್ನು ಉತ್ಪಾದಿಸುತ್ತಿದೆ. ಪ್ರತಿ ದಿನ 13 ದಶಲಕ್ಷ ಬ್ಯಾರೆಲ್‌ ತೈಲ ಉತ್ಪಾದನೆ ಮಾಡುವ ಸಾಮರ್ಥ್ಯ ನಮಗಿದೆ. ಮುಂದಿನ ದಿನಗಳಲ್ಲಿ ಈ ಗರಿಷ್ಠ ಪ್ರಮಾಣವನ್ನು ನಾವು ತಲುಪಲಿದ್ದೇವೆ ಎಂದು ಸೌದಿ ಕಿಂಗ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಈ ಹಿಂದೆ ಪ್ರಕಟಿಸಿದ್ದರು.

    ಮೂರು ವರ್ಷದ ಹಿಂದೆ ಸೌದಿ ಅರಾಮ್ಕೋ ಐಪಿಒ ಬಿಡುಗಡೆ ಮಾಡಿದ್ದು, ಭಾರೀ ಪ್ರಮಾಣದಲ್ಲಿ ಲಾಭ ಬಂದ ಹಿನ್ನೆಲೆಯಲ್ಲಿ ಷೇರುದಾರರಿಗೆ 18.8 ಶತಕೋಟಿ ಡಾಲರ್‌ ಡಿವಿಡೆಂಡ್‌ ನೀಡಲಾಗುವುದು ಎಂದು ಕಂಪನಿ ಪ್ರಕಟಿಸಿದೆ. ಸೌದಿ ಅರಾಮ್ಕೋ ಕಂಪನಿಯಲ್ಲಿ ಸರ್ಕಾರವೇ ಶೇ.98 ರಷ್ಟು ಷೇರನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್

    ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೂನ್ ತಿಂಗಳ ಅಂತ್ಯದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸೌದಿ ಅರೇಬಿಯಾ ತೈಲ ಉತ್ಪಾದನೆಯ ಹೆಚ್ಚಳಕ್ಕೆ ಸಮ್ಮತಿ ನೀಡಿ ಹಾಗೂ ಯುದ್ಧ ಪೀಡಿತ ಯೆಮನ್‌ನಲ್ಲಿ ತನ್ನ ಒಪ್ಪಂದವನ್ನು ವಿಸ್ತರಿಸಲು ಸಹಾಯ ಮಾಡುವುದಾಗಿ ಹೇಳಿದ ಬೆನ್ನಲ್ಲೇ ಬೈಡನ್ ಸೌದಿ ಅರೇಬಿಯಾ ಪ್ರವಾಸ ಕೈಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್‌ ಭಾಗವತ್‌

    joe biden

    ಬೈಡನ್ ಮಧ್ಯಪ್ರಾಚ್ಯ ದೇಶದ ನಾಯಕರೊಡನೆ ಮಾತುಕತೆ ನಡೆಸಲು ಮುಂದಾಗುತ್ತಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಹೇಳಿಕೆ ನೀಡಿದ್ದಾರೆ. ಅವರು ಈ ತಿಂಗಳು ನ್ಯಾಟೋ ಶೃಂಗಸಭೆ, ಹಾಗೂ ಜರ್ಮನಿಯಲ್ಲಿ ಗ್ರೂಪ್ ಆಫ್ ಸೆವೆನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಯೋಜಿಸಿದ್ದಾರೆ. ಈ ವೇಳೆ ಇಸ್ರೇಲ್‌ಗೆ ಪ್ರಯಾಣಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಇದನ್ನೂ ಓದಿ: 2 ವರ್ಷದಿಂದ ಬಗೆಹರಿಯದ ಮಂಡ್ಯ ವ್ಯಕ್ತಿಯ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ ಕೊಟ್ಟ ಮೋದಿ

    ಸೌದಿ ಅರೇಬಿಯಾ ನೇತೃತ್ವದ ಪ್ರಮುಖ ತೈಲ ಉತ್ಪಾದಕ ದೇಶಗಳು ಗುರುವಾರ ನಿರೀಕ್ಷಿತ ಉತ್ಪಾದನೆಗಿಂತ ಹೆಚ್ಚಿನ ಉತ್ಪಾದನೆಗೆ ಒಪ್ಪಿಕೊಂಡಿವೆ. ಉಕ್ರೇನ್-ರಷ್ಯಾ ಆಕ್ರಮಣದಿಂದಾಗಿ ಗಗನಕ್ಕೇರುತ್ತಿರುವ ಅನಿಲ ಬೆಲೆಗೆ ಸೌದಿ ಅರೇಬಿಯಾ ನಿರ್ಧಾರ ಪರಿಹಾರವಾಗುವ ಸಾಧ್ಯತೆ ಇದೆ.

  • ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

    ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

    ರಿಯಾದ್: ಕೋವಿಡ್-19 ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೌದಿ ಅರೇಬಿಯಾ ತನ್ನ ನಾಗರಿಕರನ್ನು ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣೀಸುವುದನ್ನು ನಿಷೇಧಿಸಿದೆ.

    ಭಾರತ, ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್ ಮತ್ತು ವೆನೆಜುವೆಲಾ ದೇಶಗಳಿಗೆ ಪ್ರಯಾಣಿಸದಂತೆ ಸೌದಿ ಅರೇಬಿಯಾ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಶಾಂತನಾದ ವರುಣ, ತಗ್ಗಿದ ಪ್ರವಾಹ – ಚಿಕ್ಕಬಳ್ಳಾಪುರದ ಡ್ಯಾಮ್‍ನಲ್ಲಿ ಯುವಕನ ಕೋತಿಯಾಟ

    ಕೆಲವು ದಿನಗಳಿಂದ ಹಲವಾರು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈ ನಡುವೆ ಕೆಲವು ದೇಶಗಳಲ್ಲಿ ಮಂಕಿ ಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಗೆ ಇತರ ದೇಶಗಳಿಗೆ ಪ್ರಯಾಣಿಸದಂತೆ ಆರೋಗ್ಯ ಸಚಿವಾಲಯ ಶನಿವಾರ ಸೂಚಿಸಿದೆ.

    ಮೇಲೆ ನೀಡಿರುವ ಈ ದೇಶಗಳಿಗೆ ಪ್ರಯಾಣಿಸಲು ಇಚ್ಚಿಸುವವರಿಗೆ ಈ ನಿಷೇಧವು ಅನ್ವಯಿಸುತ್ತದೆ. ಆದರೆ ಭಾರತೀಯರನ್ನು ಸೌದಿ ಅರೇಬಿಯಾಗೆ ಪ್ರವೇಶಿಸುವುದನ್ನು ನಿರ್ಬಂಧಿಸಿಲಾಗಿದೆಯೇ ಎಂಬುವುದರ ಕುರಿತಂತೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಇದನ್ನೂ ಓದಿ: ವಾರಣಾಸಿ ಜಿಲ್ಲಾ ಕೋರ್ಟ್‍ನಲ್ಲಿ ಕಾಶಿ ಮಸೀದಿ ವಿಚಾರಣೆ – ಜ್ಞಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ?

  • 24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ

    24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ

    ದುಬೈ: ಇತ್ತೀಚೆಗಷ್ಟೇ ಪೀಠ ಅಲಂಕರಿಸಿದ ಪಾಕಿಸ್ತಾನದ ನೂತನ ಪ್ರಧಾನಿ ಶಹಾಬಾಜ್ ಷರೀಫ್‌ಗೆ ಸೌದಿ ಅರೇಬಿಯಾದಲ್ಲಿ ಅಪಮಾನವಾಗಿದ್ದು, ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಈ ಘಟನೆ ನಡೆದಿದೆ. ಘಟನೆ ವೇಳೆ ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಹಿನ್ನೆಲೆಯಲ್ಲಿ 17 ರಕ್ಷಣಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

    Shehbaz Sharif

    ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಇತ್ತೀಚೆಗೆ ತಮ್ಮ ತಂಡದೊಂದಿಗೆ ಸೌದಿ ಅರೇಬಿಯಾದ ಮೆದಿಯಾನಾದಲ್ಲಿರುವ ಮಸ್ಜಿದ್-ಇ-ನಬಾವಿಗೆ ತೆರಳಿದಾಗ ಅಲ್ಲಿನ ಪಾಕ್ ಮೂಲದ ಜನರು ಅವರಿಗೆ ಅವಮಾನ ಮಾಡಿದ್ದು, ಈ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಪಾಕ್ ಪ್ರಧಾನಿಗೆ ಅಪಮಾನ ಆಗಿದೆ. ಇದನ್ನೂ ಓದಿ; ಚೀನಾದ 6 ಅಂತಸ್ತಿನ ಕಟ್ಟಡ ಕುಸಿತ – 39 ಜನ ನಾಪತ್ತೆ

    ಶಹಾಬಾಜ್ ನಡೆದು ಬರುತ್ತಿದ್ದ ವೇಳೆ, ಜನರು ಅವರಿಗೆ `ಕಳ್ಳ- ಕಳ್ಳ’, ಪಾಕಿಸ್ತಾನಿ ವಿರೋಧಿ, ಶೆಹಾಬಾಜ್ ವಿದೇಶಿಗರ ಮಾತಿನಂತೆ ಸರ್ಕಾರ ನಡೆಸುತ್ತಿರುವ ದೇಶ ದ್ರೋಹಿ ಎಂದು ಅಲ್ಲಗಳೆದಿದ್ದಾರೆ. ಈ ವಿಚಾರವಾಗಿ ಪಾಕ್‌ನ ಈಗಿನ ಮಾಹಿತಿ ಸಚಿವಾಲಯದ ಸಚಿವರಾಗಿರುವ ಮರಿಯುಮ್ ಔರಂಗಜೇಬ್ ಮಾತನಾಡಿದ್ದು, ಹಳೆದ ಸರ್ಕಾರ ಪೂರ್ತಿ ಪಾಕಿಸ್ತಾನವನ್ನು ಹಾಳು ಮಾಡಿದೆ. ಆದರೆ ನಾವು ನಮ್ಮ ದೇಶವನ್ನು ಸರಿ ದಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ – ಬ್ರಿಟನ್ ಶಾಸಕ ರಾಜೀನಾಮೆ

    2ನೇ ಬಾರಿಗೆ ಶಹಾಬಾಜ್ ಷರೀಫ್ ಭಾರೀ ಭದ್ರತೆಯಲ್ಲಿ ಪ್ರವೇಶಿದ್ದು, ಈ ವೇಳೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿತ್ತು. ಆದರೂ ಜನರು ತಾವಿದ್ದಲ್ಲಿಂದಲೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ನನ್ನು ಕೆಳಗಿಳಿಸಿ ಶಹಾಬಾಜ್ ಹೇಗೆ ಪ್ರಧಾನಿಯಾದರು ಎಂಬುದರ ಬಗ್ಗೆ ಬ್ಲಾಗ್‌ವೊಂದರಲ್ಲಿ ಬರೆದು ಅಪಮಾನ ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    IMRANKHAN

    ಇದಕ್ಕೂ ಮುನ್ನ, ಷರೀಫ್ ನೇತೃತ್ವದ ನಿಯೋಗವು ಮದೀನಾದ ಮಸೀದಿ-ಎ-ನಬವಿಯನ್ನು ಪ್ರವೇಶಿಸಿದಾಗಲೂ `ಚೋರ್ ಚೋರ್’ ಎಂಬ ಘೋಷಣೆ ಕೇಳಿಬಂದಿತ್ತು. ಅದೇ ರೀತಿ ಸೌದಿ ಅರೇಬಿಯಾದಲ್ಲಿ ಅಧಿಕಾರಿಗಳು ನಿಯೋಗದ ವಿರುದ್ಧ ಘೋಷಣೆ ಕೂಗುತ್ತಿದ್ದ ಕೆಲವು ಪಾಕಿಸ್ತಾನಿ ಯಾತ್ರಿಕರನ್ನು ಮಸೀದಿಯ ಪಾವಿತ್ರ‍್ಯಕ್ಕೆ ಅಗೌರವ ತೋರಿದ ಕಾರಣ ನೀಡಿ ಬಂಧಿಸಲಾಗಿದೆ ಎಂದು ಸೌದಿ ರಾಯಭಾರಿ ಕಚೇರಿಯ ಮಾಧ್ಯಮ ನಿರ್ದೇಶಕರು ತಿಳಿಸಿದ್ದಾರೆ.