Tag: saudi arabia

  • IPLಗೆ ಸೆಡ್ಡು ಹೊಡೆಯಲು ಸೌದಿ ಮಾಸ್ಟರ್ ಪ್ಲ್ಯಾನ್ – BCCI ಹೇಳಿದ್ದೇನು?

    IPLಗೆ ಸೆಡ್ಡು ಹೊಡೆಯಲು ಸೌದಿ ಮಾಸ್ಟರ್ ಪ್ಲ್ಯಾನ್ – BCCI ಹೇಳಿದ್ದೇನು?

    ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ (World’s Richest T20 League) ಆರಂಭಿಸಲು ಸೌದಿ ಅರೇಬಿಯಾ (Saudi Arabia) ಮುಂದಾಗಿದ್ದು ಐಪಿಎಲ್ ಮಾಲೀಕರನ್ನು ಸಂಪರ್ಕಿಸಿದೆ.

    2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ವಿಶ್ವದ ದುಬಾರಿ ಕ್ರೀಡೆ ಎಂದೇ ಖ್ಯಾತಿ ಪಡೆದುಕೊಂಡಿದೆ. ದೇಶ-ವಿದೇಶದ ಆಟಗಾರರು ಐಪಿಎಲ್‌ನಲ್ಲಿ ಆಡಬೇಕೆಂದು ಬಯಸುತ್ತಾರೆ. ಈ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಮಟ್ಟದಲ್ಲಿ ದಾಖಲೆಗಳನ್ನೂ ಮಾಡುತ್ತಾರೆ. ಆದರೀಗ ಪ್ರತಿಷ್ಠಿತ ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಅರೇಬಿಯಾ ಮಾಸ್ಟರ್ ಪ್ಲ್ಯಾನ್ ಮಾಡಿದೆ.

    ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ, ಐಪಿಎಲ್‌ಗಿಂತಲೂ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸೌದಿ ಒಂದು ವರ್ಷದ ಹಿಂದೆಯೇ ಈ ಬಗ್ಗೆ ಕೆಲಸ ಆರಂಭಿಸಿದ್ದು ಐಪಿಎಲ್ ಮಾಲೀಕರನ್ನು ಸಂಪರ್ಕಿಸಿದೆ. ಇದನ್ನೂ ಓದಿ: IPL 2023: ಡೆಲ್ಲಿಗೆ ಸತತ 5ನೇ ಸೋಲು – ತವರಿನಲ್ಲಿ RCBಗೆ 23 ರನ್‌ಗಳ ಭರ್ಜರಿ ಜಯ

    ಈಗಾಗಲೇ ಫುಟ್ಬಾಲ್ ನಂತಹ ಕ್ರೀಡೆಗಳಿಗೆ ಸೌದಿ ಅರೇಬಿಯಾ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಇನ್ಮುಂದೆ ಕ್ರಿಕೆಟ್‌ನಲ್ಲೂ ಹೂಡಿಕೆ ಮಾಡುವ ಮೂಲಕ ಗಮನ ಸೆಳೆಯಲು ಮುಂದಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ವರ್ಷದಿಂದ ಸೌದಿಯಲ್ಲಿ ದುಬಾರಿ ಟಿ20 ಲೀಗ್ ಆರಂಭವಾಗುವ ಸಾಧ್ಯತೆ ಇದೆ.

    ಈ ವಿಚಾರಕ್ಕೆ ಮಾಧ್ಯಮಕ್ಕೆ ಬಿಸಿಸಿಐ (BCCI) ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದು, ಭಾರತೀಯ ಆಟಗಾರರು ಯಾವುದೇ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಐಪಿಎಲ್ ತಂಡಗಳು ಭಾಗವಹಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖೂಷ್ಬೂ ಸುಂದರ್ ಅತ್ತೆಯನ್ನು ಭೇಟಿಯಾದ ಧೋನಿ

    ಲವು ದೇಶಗಳಲ್ಲಿ ಟಿ20 ಲೀಗ್ ನಡೆಯುತ್ತಿದ್ದರೂ ಇಲ್ಲಿಯವರೆಗೂ ಭಾರತದ ತಂಡದ ಹಾಲಿ ಆಟಗಾರರಿಗೆ ಆ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿಯನ್ನು ಬಿಸಿಸಿಐ ನೀಡಿಲ್ಲ.

  • ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಲಂಡನ್‌/ನವದೆಹಲಿ: ಸೌದಿ ಅರೇಬಿಯಾ ಸೇರಿದಂತೆ ತೈಲ ಉತ್ಪಾದನೆ ಮಾಡುವ ಒಪೆಕ್‌(OPEC) ದೇಶಗಳು ಕಚ್ಚಾ ತೈಲ (Crude Oil) ಉತ್ಪಾದನೆಯನ್ನು ಕಡಿಮೆ ಮಾಡುವ ಶಾಕಿಂಗ್‌ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ದರ ಭಾರೀ ಏರಿಕೆಯಾಗಿದೆ.

    ಸೋಮವಾರ ಒಂದು ಬ್ಯಾರೆಲ್‌ ಕಚ್ಚಾ ಬ್ರೆಂಟ್‌ ಕಚ್ಚಾ ತೈಲ ದರ ಶೇ.5 ರಷ್ಟು ಏರಿಕೆಯಾಗಿದ್ದು ಈಗ 84 ಡಾಲರ್‌ಗೆ (ಅಂದಾಜು 6,900 ರೂ.) ಏರಿಕೆಯಾಗಿದೆ. 2023ರ ಕೊನೆಗೆ ಇದು 90-95 ಡಾಲರ್‌ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಭಾನುವಾರ ಒಪೆಕ್‌ ದೇಶಗಳು 1.16 ದಶಲಕ್ಷ ಬ್ಯಾರೆಲ್‌ ಪರ್‌ ಡೇ(bpd) ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವು ಶಾಕಿಂಗ್‌ ನಿರ್ಧಾರವನ್ನು ಪ್ರಕಟಿಸಿದ್ದವು.

    ಕೋವಿಡ್‌ ಆರಂಭದಲ್ಲಿ ಭಾರೀ ಇಳಿಕೆ ಕಂಡಿದ್ದ ಕಚ್ಚಾ ತೈಲದ ಬೆಲೆಗಳು ರಷ್ಯಾ-ಉಕ್ರೇನ್‌ (Russia-Ukraine) ಯುದ್ಧ ಆರಂಭದಲ್ಲಿ ಸಮಯದಲ್ಲಿ  ಪ್ರತಿ ಬ್ಯಾರೆಲ್‌ ದರ 130 ಡಾಲರ್‌ಗೆ ಏರಿಕೆಯಾಗಿತ್ತು. ನಂತರ ಸ್ವಲ್ಪ ಇಳಿಕೆಯಾಗಿತ್ತು. ಕಳೆದ ತಿಂಗಳು ಪ್ರತಿ ಬ್ಯಾರೆಲ್‌ ಕಚ್ಚಾ ತೈದ ದರ 70 ಡಾಲರ್‌ಗೆ ಇಳಿಕೆಯಾದ ಬೆನ್ನಲ್ಲೇ ಮಾರುಕಟ್ಟೆಯ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ.  ಇದನ್ನೂ ಓದಿ: ಕ್ರಿಕೆಟ್‌ ಪಂದ್ಯದಲ್ಲಿ ʼನೋಬಾಲ್‌ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ

    ಕಡಿತ ಯಾವಾಗದಿಂದ?
    ಮೇ ತಿಂಗಳಿನಿಂದ ಆರಂಭವಾಗಿ ಈ ವರ್ಷದ ಕೊನೆಯವರೆಗೂ ಕಡಿತ ಮುಂದುವರಿಯಲಿದೆ. ಸೌದಿ ಅರೇಬಿಯಾ 5 ಲಕ್ಷ ಬಿಪಿಡಿ, ಇರಾಕ್‌ 2 ಲಕ್ಷ ಬಿಪಿಡಿ ಕಚ್ಚಾ ತೈಲ ಉತ್ಪಾದನೆ ಕಡಿತ ಮಾಡಲಿದೆ. ರಷ್ಯಾ ಈಗಾಗಲೇ 5 ಲಕ್ಷ ಬಿಪಿಡಿ ತೈಲ ಉತ್ಪಾದನೆ ಕಡಿತ ಮಾಡುವುದಾಗಿ ತಿಳಿಸಿದೆ.

    ಭಾರತದ ಮೇಲೆ ಪರಿಣಾಮ ಏನು?
    ಭಾರತ ಶೇ.85 ರಷ್ಟು ತೈಲವನ್ನು ಆಮದು ಮಾಡುತ್ತಿದೆ. ಹಣದುಬ್ಬರವನ್ನು (Inflation) ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಭಾರತದ ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ಇತ್ಯಾದಿಗಳ ಬೆಲೆಯನ್ನು ಏರಿಕೆ ಮಾಡದ ಪರಿಣಾಮ ತೈಲ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿದೆ. ದರವನ್ನು ಪರಿಷ್ಕರಣೆ ಮಾಡದೇ ಇದ್ದರೆ ಕಂಪನಿಗಳ ನಷ್ಟ ಮತ್ತಷ್ಟು ಹೆಚ್ಚಾಗಲಿದೆ. ತೈಲ ದರ ಏರಿಕೆ ಮಾಡಿದರೆ ಇತ್ತ ಜನ ಸಾಮಾನ್ಯರ ಮೇಲೆ ಹೊರೆ ಬೀಳಲಿದೆ.  ಇದನ್ನೂ ಓದಿ: ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ

  • ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ – 20 ಹಜ್ ಯಾತ್ರಾರ್ಥಿಗಳ ಸಾವು

    ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ – 20 ಹಜ್ ಯಾತ್ರಾರ್ಥಿಗಳ ಸಾವು

    ರಿಯಾದ್: ಮುಸ್ಲಿಮರ ಪವಿತ್ರ ನಗರ ಮೆಕ್ಕಾಗೆ (Mecca) ಯಾತ್ರಾರ್ಥಿಗಳನ್ನು (Pilgrims) ಕರೆದೊಯ್ಯುತ್ತಿದ್ದ ಬಸ್ ಒಂದು ಸೇತುವೆಯೊಂದರಲ್ಲಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌ನಲ್ಲಿದ್ದ 20 ಜನರು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಬಸ್‌ನಲ್ಲಿದ್ದ ಇನ್ನೂ ಹಲವರಿಗೆ ಗಾಯಗಳಾಗಿವೆ ಎಂದು ಸೌದಿ (Saudi Arabia) ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

    ಘಟನೆ ದಕ್ಷಿಣ ಪ್ರಾಂತ್ಯದ ಅಸಿರ್‌ನಲ್ಲಿ ನಡೆದಿದೆ. ಯಾತ್ರಾರ್ಥಿಗಳನ್ನು ಮೆಕ್ಕಾ ಹಾಗೂ ಮದೀನಾಗೆ ಕರೆದುಕೊಂಡು ಹೋಗುವ ಸಂದರ್ಭ ನಿರಂತರವಾಗಿ ಸವಾಲು ಎದುರಿಸಲಾಗುತ್ತಿದೆ ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತಿದೆ. ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಒಡೆಯಲು ಸುಮಲತಾ ರಣತಂತ್ರ

    ಇದು ರಂಜಾನ್‌ನ ಮೊದಲ ವಾರವಾಗಿರುವುದರಿಂದ ಲಕ್ಷಾಂತರ ಮುಸ್ಲಿಮರು ಹಜ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಇದೀಗ ಸಂಭವಿಸಿರುವ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. 30 ಜನರು ಗಾಯಗೊಂಡಿದ್ದಾರೆ. ಸಾವನ್ನಪ್ಪಿರುವವರಲ್ಲಿ ಹಲವರು ಬೇರೆ ಬೇರೆ ದೇಶಗಳಿಂದ ಬಂದಿರುವವರು ಎಂಬುದು ತಿಳಿದುಬಂದಿದೆ. ಆದರೆ ಅವರ ಗುರುತುಗಳನ್ನು ಇನ್ನೂ ತಿಳಿಸಲಾಗಿಲ್ಲ.

    ವರದಿಗಳ ಪ್ರಕಾರ ಬಸ್ ಸೇತುವೆಯಲ್ಲಿ ಹೋಗುತ್ತಿದ್ದಾಗ ಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಈ ವೇಳೆ ಭಾರೀ ಬೆಂಕಿ ಸಂಭವಿಸಿದ್ದು, ಜನರ ಸಾವಿಗೆ ಕಾರಣವಾಗಿದೆ. 2019ರ ಅಕ್ಟೋಬರ್‌ನಲ್ಲೂ ಇಂತಹುದೇ ಇನ್ನೊಂದು ಭೀಕರ ಅಪಘಾತ ಸಂಭವಿಸಿತ್ತು. ಮದೀನಾ ಬಳಿ ದೊಡ್ಡ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು, ಸುಮಾರು 35 ವಿದೇಶಿಗರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿ – ಮೂವರು ಮಕ್ಕಳು ಸೇರಿ 6 ಜನ ಸಾವು

  • ಒಂಟೆಗೆ ಕಾರು ಡಿಕ್ಕಿ – ಮಂಗಳೂರಿನ ಮೂವರು ಸೇರಿ ನಾಲ್ವರು ಸೌದಿಯಲ್ಲಿ ದುರ್ಮರಣ

    ಒಂಟೆಗೆ ಕಾರು ಡಿಕ್ಕಿ – ಮಂಗಳೂರಿನ ಮೂವರು ಸೇರಿ ನಾಲ್ವರು ಸೌದಿಯಲ್ಲಿ ದುರ್ಮರಣ

    ಮಂಗಳೂರು: ಸೌದಿ ಅರೇಬಿಯಾದಲ್ಲಿ (Saudi Arabia) ನಿನ್ನೆ (ಶುಕ್ರವಾರ) ತಡರಾತ್ರಿ ನಡೆದ ಭೀಕರ ಕಾರು ಅಪಘಾತದಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

    ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಈ ಅಪಘಾತ (Accident) ಸಂಭವಿಸಿದೆ. ಅಖಿಲ್, ನಾಸಿರ್, ರಿಝ್ವಾನ್, ಶಿಹಾಬ್ ಮೃತಪಟ್ಟವರು ದುರ್ದೈವಿಗಳು. ಇದರಲ್ಲಿ ಮೂವರು ಮಂಗಳೂರಿನವರಾಗಿದ್ದು (Mangaluru), ಓರ್ವ ಬಾಂಗ್ಲಾ ದೇಶದವರು (Bangladesh). ಇದನ್ನೂ ಓದಿ: ಎರಡು ದಿನದಲ್ಲಿ 14 ಕೋಟಿ ಟ್ರಾಫಿಕ್ ದಂಡ ಸಂಗ್ರಹ

    ನಾಲ್ವರು ಕಾರಿನಲ್ಲಿ (Car) ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ರಸ್ತೆ ದಾಟುತ್ತಿದ್ದ ಒಂಟೆಗೆ ಡಿಕ್ಕಿಯಾಗಿ ಈ ಅಪಘಾತ ನಡೆದಿದೆ. ಕಾರಿನಲ್ಲಿದ್ದವರು ಸಾಕ್ಯುಕೋ ಎಂಬ ಕಂಪನಿಯಲ್ಲಿ ನೌಕರರಾಗಿದ್ದರು. ಮೃತದೇಹಗಳನ್ನು ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಅಬಯಾ ಬ್ಯಾನ್

    ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಅಬಯಾ ಬ್ಯಾನ್

    ರಿಯಾದ್: ಮುಸ್ಲಿಂ ಮಹಿಳೆಯರು (Muslim Women) ಧರಿಸುವ ಧಾರ್ಮಿಕ ಉಡುಗೆ ಅಬಯಾವನ್ನು (Abaya) ಸೌದಿ ಅರೇಬಿಯಾದ (Saudi Arabia) ಪರೀಕ್ಷಾ ಕೇಂದ್ರಗಳಲ್ಲಿ (Exam Halls) ನಿಷೇಧಿಸಲಾಗಿದೆ.

    ಸೌದಿ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗ (ETEC) ಶಿಕ್ಷಣ ಸಚಿವಾಲಯದ ಜೊತೆ ಶೈಕ್ಷಣಿಕ ಹಾಗೂ ತರಬೇತಿ ವ್ಯವಸ್ಥೆಗೆ ಮಾನ್ಯತೆ ನೀಡುವ ಸಲುವಾಗಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಬಯಾ ಧರಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಘೋಷಿಸಿದೆ.

    ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಬೇಕು. ಎಲ್ಲಾ ಉಡುಪುಗಳೂ ಸಾರ್ವಜನಿಕ ಸಭ್ಯತೆಯ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಇಟಿಇಸಿ ಹೇಳಿದೆ. ಆದರೆ ಇಲ್ಲಿ ಹಿಜಬ್ (Hijab) ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಕೇವಲ ಅಬಯಾವನ್ನು (Abaya) ಮಾತ್ರವೇ ನಿಷೇಧಿಸಲಾಗಿದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

    ಅಬಯಾ ಎಂಬುದು ಕತ್ತಿನಿಂದ ಕಾಲಿನ ವರೆಗೆ ದೇಹವನ್ನು ಮುಚ್ಚುವ ವಸ್ತ್ರವಾಗಿದೆ. ಇದು ಬುರ್ಖಾವನ್ನೇ ಹೋಲುತ್ತದೆ ಆದರೆ ಇದು ತಲೆಗೆ ಅನ್ವಯಿಸುವುದಿಲ್ಲ. ಹಿಜಬ್ ಎಂಬುವುದು ತಲೆಯನ್ನು ಮುಚ್ಚುವ ವಸ್ತ್ರವಾಗಿದೆ. ಸಾಂಪ್ರದಾಯಿಕವಾಗಿ ಅಬಯಾಗಳು ಕಪ್ಪು ಬಣ್ಣದ್ದಾಗಿದ್ದು, ತಿಳಿ ನೀಲಿ ಮತ್ತು ಗುಲಾಬಿ ಬಣ್ಣಗಳಲ್ಲಿಯೂ ಹೆಚ್ಚಿನ ಮಹಿಳೆಯರು ಗಲ್ಫ್ನಾದ್ಯಂತ ಧರಿಸುತ್ತಾರೆ.

    2018 ರಲ್ಲಿಯೇ ಸೌದಿಯಲ್ಲಿ ಅಬಯಾವನ್ನು ಇನ್ನು ಮುಂದೆ ಕಾನೂನುಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಘೋಷಿಸಲಾಗಿತ್ತು. ಆದರೂ ಹೆಚ್ಚಿನ ಮಹಿಳೆಯರು ಅಬಯಾ ಧರಿಸುವುದನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

     

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಗೆ ಸೌದಿ ಅರೇಬಿಯಾ ಗೌರವ

    ಖ್ಯಾತ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಗೆ ಸೌದಿ ಅರೇಬಿಯಾ ಗೌರವ

    ಶ್ರೀರಸ್ತು ಶುಭಮಸ್ತು’, ‘ರಾಧಾ ರಮಣ’ ಧಾರಾವಾಹಿ ಖ್ಯಾತಿಯ ನಟಿ ಶ್ವೇತಾ ಪ್ರಸಾದ್. ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಮೂಲಕ ಬೆಳ್ಳಿ ಪರದೆಯಲ್ಲೂ ಮಿಂಚಿದ್ದಾರೆ. ‘ರಾಧಾ ರಮಣ’ ಧಾರಾವಾಹಿ ಶ್ವೇತಾ ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿದೆ. ರಾಧಾ ಮಿಸ್ ಎಂದೇ ಚಿರಪರಿಚಿತರಾಗಿರುವ ಶ್ವೇತಾ ಪ್ರಸಾದ್ ಅವರನ್ನು ಇತ್ತೀಚೆಗೆ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಆಹ್ವಾನಿಸಿ ಆತಿಥ್ಯ ನೀಡಿದೆ.

    ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಪ್ರವಾಸೋಧ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಬೇರೆ ಬೇರೆ ದೇಶದ ಸೆಲೆಬ್ರಿಟಿಗಳನ್ನು ತನ್ನ ದೇಶಕ್ಕೆ ಆಹ್ವಾನಿಸುತ್ತಿದೆ. ಆರು ದಿನಗಳ ಕಾಲ ಸಕಲ ಸೌಕರ್ಯದ ಜೊತೆಗೆ ಸೌದಿ ಅರೇಬಿಯಾದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ನಟಿ ಶ್ವೇತಾ ಪ್ರಸಾದ್ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದ ಆಹ್ವಾನಕ್ಕೆ ಪಾತ್ರರಾಗಿದ್ದು, ಆರು ದಿನಗಳ ಸೌದಿ ಅರೇಬಿಯಾ ಪ್ರವಾಸ ಮುಗಿಸಿ ವಾಪಾಸ್ಸಾಗಿದ್ದಾರೆ. ಕರ್ನಾಟಕದಿಂದ ಈ ಆಹ್ವಾನಕ್ಕೆ ಪಾತ್ರರಾದವರಲ್ಲಿ ಶ್ವೇತಾ ಪ್ರಸಾದ್ ಮೊದಲಿಗರಾಗಿದ್ದಾರೆ. ಇದನ್ನೂ ಓದಿ: `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್

    ಈ ಬಗ್ಗೆ ಸಂತಸ ಹಂಚಿಕೊಂಡಿರುವ ಶ್ವೇತಾ ಪ್ರಸಾದ್ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನಿಸಲ್ಪಟ್ಟಿದ್ದು ಬಹಳ ಖುಷಿ ನೀಡಿದೆ. ಕರ್ನಾಟಕದಿಂದ ಈ ಆಹ್ವಾನಕ್ಕೆ ಪಾತ್ರಳಾದವರಲ್ಲಿ ಮೊದಲಿಗಳು ನಾನು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅಲ್ಲಿನ ಪ್ರವಾಸೋಧ್ಯಮ ಪ್ರಾಧಿಕಾರ ಈ ಕೆಲಸ ಮಾಡುತ್ತಿದೆ. ಆರು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದ ದಿನಗಳು ಮರೆಯಲಾಗದು. ಒಂದು ಹೊಸ ಅನುಭವವನ್ನು ಈ ಪ್ರವಾಸ ನೀಡಿದೆ. ಅಲ್ಲಿನ ರಿಯಾದ್, ಅಲುಲಾ, ಜೆಡಾ ಮೂರು ಹೆಸರಾಂತ ನಗರಗಳಿಗೆ ಭೇಟಿ ನೀಡಲಾಯಿತು. ರಿಯಾದ್ ನಲ್ಲಿ ಸೌದಿ ಅರೇಬಿಯಾದ ಅತಿ ಎತ್ತರದ ಕಟ್ಟಡ ಕಿಂಗ್ ಡಂ ಟವರ್  ಗೆ ಭೇಟಿ ನೀಡಲಾಯಿತು. ಇದಲ್ಲದೇ ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡವನ್ನು ಅವರು ನಿರ್ಮಿಸುತ್ತಿದ್ದಾರೆ. ಇದೆಲ್ಲವನ್ನು ಕಳೆದ ಮೂರು ವರ್ಷದಿಂದ ಅವರು ಮಾಡುತ್ತಿದ್ದಾರೆ. ಅವರ ಆಹಾರ, ಆತಿಥ್ಯ ಎಲ್ಲವೂ ತುಂಬಾ ಚೆನ್ನಾಗಿತ್ತು. ಟ್ರಾಫಿಕ್ ನಿಯಂತ್ರಣಕ್ಕೆ ದಿ ಲೈನ್ ಎಂಬ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ಹೆಣ್ಣು ಮಕ್ಕಳು ಬುರ್ಖಾ ಧರಿಸುತ್ತಾರೆ, ಹೊರಗಡೆ ಓಡಾಡುವುದಿಲ್ಲ ಎಂದುಕೊಂಡಿದ್ದೆ ಆದ್ರೆ ಅಲ್ಲಿ ಬುರ್ಖಾವನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳು ಆರಾಮಾಗಿ ಓಡಾಡಿಕೊಂಡು ಇದ್ದಾರೆ. ಜೊತೆಗೆ ಭಾರತೀಯರ ಮೇಲೆ ಅಲ್ಲಿನವರು ವಿಶೇಷವಾದ ಪ್ರೀತಿಯನ್ನು ಹೊಂದಿದ್ದಾರೆ ಎಂದು ಪ್ರವಾಸ ಸಂತಸದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಧಾರಾವಾಹಿಯಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ಶ್ವೇತಾ ಪ್ರಸಾದ್ ಸದ್ಯ ‘ಅರಿಹ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜೆಂಟೀನಾಗೆ ಮಾಡು ಇಲ್ಲವೇ ಮಡಿ ಪಂದ್ಯ – ಕತಾರ್ ಕಥೆ ಮುಗಿಯಿತು

    ಅರ್ಜೆಂಟೀನಾಗೆ ಮಾಡು ಇಲ್ಲವೇ ಮಡಿ ಪಂದ್ಯ – ಕತಾರ್ ಕಥೆ ಮುಗಿಯಿತು

    ಕತಾರ್: ಅರಬ್ಬರ ನಾಡಲ್ಲಿ ಫಿಫಾ ವಿಶ್ವಕಪ್ (FIFA World Cup) ಆರಂಭಕ್ಕೂ ಮುನ್ನ ಲಿಯೋನೆಲ್ ಮೆಸ್ಸಿ (Lionel Messi) ಸಾರಥ್ಯದ ಅರ್ಜೆಂಟೀನಾ (Argentina) ತಂಡದ ಪರ ನಿರೀಕ್ಷೆ ಹೆಚ್ಚಿತ್ತು. ಆದರೆ ಇದೀಗ ಅರ್ಜೆಂಟೀನಾ ಮಾಡು ಇಲ್ಲವೇ ಮಡಿ ಹಂತಕ್ಕೆ ತಲುಪಿದೆ.

    ಫುಟ್‍ಬಾಲ್‍ನ ದಿಗ್ಗಜ ಆಟಗಾರ ಮೆಸ್ಸಿ ಮುಂದಾಳತ್ವದಲ್ಲಿ ಫಿಫಾ ವಿಶ್ವಕಪ್ ಆಡಲು ಕತಾರ್‌ಗೆ ಬಂದಿಳಿಯುತ್ತಿದ್ದಂತೆ ಅರ್ಜೆಂಟೀನಾ ಫುಟ್‍ಬಾಲ್ ಪ್ರಿಯರ ಅಚ್ಚುಮೆಚ್ಚಿನ ತಂಡವಾಗಿತ್ತು. ಆದರೆ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ (Saudi Arabia) ವಿರುದ್ಧ ಅಚ್ಚರಿ ಎಂಬಂತೆ ಅರ್ಜೆಂಟೀನಾ ಸೋತು ತನ್ನ ನಾಕೌಟ್ ಹಾದಿಯನ್ನು ದುರ್ಬಲಗೊಳಿಸಿಕೊಂಡಿದೆ. ಇದೀಗ ಎರಡನೇ ಪಂದ್ಯವಾಡಲು ಸಜ್ಜಾಗಿದ್ದು, ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಗೆಲುವು – ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್ ಘೋಷಿಸಿದ ಸರ್ಕಾರ

    ಸೌದಿ ಅರೇಬಿಯಾ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾದ ಅರ್ಜೆಂಟೀನಾ, ವಿಶ್ವಕಪ್‍ನ ನಾಕೌಟ್ ರೇಸ್‍ನಲ್ಲಿ ಉಳಿಯಬೇಕಿದ್ದರೆ ಮೆಕ್ಸಿಕೋ ವಿರುದ್ಧದ ಎರಡನೇ ಪಂದ್ಯ ಗೆಲ್ಲಲೇಬೇಕಿದೆ. ಹಾಗಾಗಿ ಮೆಸ್ಸಿ ಚಿತ್ತ ಗೆಲುವಿನತ್ತ ನೆಟ್ಟಿದೆ.

    ಆದರೆ ಅರ್ಜೆಂಟೀನಾಗೆ ಪ್ರಬಲ ಪೈಪೋಟಿ ನೀಡಲು ಮೆಕ್ಸಿಕೋ (Mexico) ಸಿದ್ಧವಾಗಿದೆ. ಇದಕ್ಕಾಗಿ ರಣತಂತ್ರವನ್ನು ಹೆಣೆದಿದ್ದು, 2014-16ರ ವರೆಗೆ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದ ಗೆರಾರ್ಡೊ ಮಾರ್ಟಿನೋ ಈಗ ಮೆಕ್ಸಿಕೋ ಕೋಚ್ ಆಗಿದ್ದಾರೆ. ಎದುರಾಳಿಯ ತಂತ್ರಗಾರಿಕೆಯನ್ನು ಸರಿಯಾಗಿ ಅರಿತಿದ್ದಾರೆ. ಹೀಗಾಗಿ ಅರ್ಜೆಂಟೀನಾ ಹೊಸ ಹಾಗೂ ವಿಭಿನ್ನ ರಣತಂತ್ರಗಳೊಂದಿಗೆ ಮೈದಾನಕ್ಕಿಳಿಯಬೇಕಿದೆ. ವಿಶ್ವಕಪ್‍ನಲ್ಲಿ ಅರ್ಜೆಂಟೀನಾ ವಿರುದ್ಧ ಮೆಕ್ಸಿಕೋ 3 ಬಾರಿ ಸೆಣಸಾಡಿದ್ದು ಒಮ್ಮೆಯೂ ಗೆದ್ದಿಲ್ಲ. ಇದನ್ನೂ ಓದಿ: ಬ್ರೆಜಿಲ್‌ಗೆ ಆಘಾತ – ಮುಂದಿನ ಪಂದ್ಯಗಳಲ್ಲಿ ಆಡಲ್ಲ ನೇಮರ್

    ಇಂದು ಲುಸೈಲ್ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 12:30ಕ್ಕೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮೆಸ್ಸಿ ಮ್ಯಾಜಿಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    ಕತಾರ್ ಕಥೆ ಮುಗಿಯಿತು:
    ಆತಿಥೇಯ ಕತಾರ್ ಹಾಗೂ ಸೆನೆಗಲ್ ನಡುವಿನ ಪಂದ್ಯದಲ್ಲಿ 1-3 ಗೋಲುಗಳಲ್ಲಿ ಕತಾರ್ ಸೋಲುಂಡಿತು. 41ನೇ ನಿಮಿಷದಲ್ಲಿ ಬೌಲಾಯೆ ಡಿಯಾ, 48ನೇ ನಿಮಿಷದಲ್ಲಿ ಫಮಾರಾ ಡೈಡಿಯೊ, 84ನೇ ನಿಮಿಷದಲ್ಲಿ ಬಂಬಾ ಡಿಯೆಂಗ್ ಸೆನೆಗಲ್ ಪರ ಗೋಲು ಬಾರಿಸಿದರೆ, ಕತಾರ್ ಪರ 78ನೇ ನಿಮಿಷದಲ್ಲಿ ಮೊಹಮದ್ ಮುಂಟಾರಿ ಏಕೈಕ ಗೋಲು ದಾಖಲಿಸಿದರು. ಹೀಗಾಗಿ ಕತಾರ್‌ ಸೋಲು ಕಾಣಬೇಕಾಯಿತು. ಈ ಮೂಲಕ ಕತಾರ್ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜೆಂಟೀನಾ ವಿರುದ್ಧ ಗೆಲುವು – ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್ ಘೋಷಿಸಿದ ಸರ್ಕಾರ

    ಅರ್ಜೆಂಟೀನಾ ವಿರುದ್ಧ ಗೆಲುವು – ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್ ಘೋಷಿಸಿದ ಸರ್ಕಾರ

    ಕತಾರ್: ಫಿಫಾ ಫುಟ್‍ಬಾಲ್ ವಿಶ್ವಕಪ್‍ನಲ್ಲಿ (FIFA World Cup 2022) ಬಲಿಷ್ಠ ಅರ್ಜೆಂಟೀನಾ (Argentina) ವಿರುದ್ಧ ಗೆದ್ದಿದ್ದ ಸೌದಿ ಅರೇಬಿಯಾ (Saudi Arabia) ಆಟಗಾರರಿಗೆ ಲಕ್ ಬದಲಾಗಿದೆ. ಸೌದಿ ಅರೇಬಿಯಾ ಸರ್ಕಾರ ತಂಡದಲ್ಲಿದ್ದ ಫುಟ್‍ಬಾಲ್ ಆಟಗಾರರಿಗೆ ದುಬಾರಿ ಉಡುಗೊರೆ ಘೋಷಿಸಿದೆ.

    ಲಿಯೋನೆಲ್ ಮೆಸ್ಸಿ (Lionel Messi) ಸಾರಥ್ಯದ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳ ಅಂತರದಿಂದ ಸೌದಿ ಅರೇಬಿಯಾ ಗೆದ್ದ ಬೆನ್ನಲ್ಲೇ ಸೌದಿ ಅರೇಬಿಯಾ ಖುಷಿಯಲ್ಲಿ ತೇಲಾಡುತ್ತಿದೆ. ಗೆಲುವಿನ ಸಂಭ್ರಮದಿಂದ ಹೊರಬರಲಾಗದೇ ಸಂಭ್ರಮಿಸುತ್ತಿರುವ ಸೌದಿ ಅರೇಬಿಯಾ ಈ ಗೆಲುವಿಗೆ ಕಾರಣರಾದ ಆಟಗಾರರಿಗೆ ಉಡುಗೊರೆ ಘೋಷಿಸಿದೆ. ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿರುವ ಸೌದಿ ಅರೇಬಿಯಾ ತಂಡದಲ್ಲಿರುವ ಆಟಗಾರರಿಗೆ ದುಬಾರಿ ರೋಲ್ಸ್ ರಾಯ್ಸ್ (Rolls-Royce) ಫ್ಯಾಂಟಮ್ ಕಾರ್ ಉಡುಗೊರೆಯಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಲ್ಯಾಥಮ್‌ ಭರ್ಜರಿ ಶತಕ – ಕೀವಿಸ್‌ ಗೆ 7 ವಿಕೆಟ್‌ಗಳ ಜಯ

    ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನ.22 ರಂದು ನಡೆದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ತಂಡ ಗೆಲುವಿನ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಇತ್ತ ಅದ್ಭುತ ಪ್ರದರ್ಶನದ ಮೂಲಕ ಸೌದಿ ಅರೇಬಿಯಾ ಫುಟ್‍ಬಾಲ್ ಅಭಿಮಾನಿಗಳ ಮನಗೆದ್ದಿದೆ. ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಗೋಲಿನೊಂದಿಗೆ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟಿದ್ದರು. ಬಳಿಕ ನಡೆದದ್ದು ಸೌದಿ ಅರೇಬಿಯಾದ ಕಾಲ್ಚೆಂಡು ಕರಾಮತ್ತು. ಬಲಿಷ್ಠ ಅರ್ಜೆಂಟೀನಾಗೆ ಸೆಡ್ಡು ಹೊಡೆಯುವ ಮಟ್ಟಿಗೆ ಸೌದಿ ಅರೇಬಿಯಾ ತಂಡ ಪುಟಿದೆದ್ದಿತು. 48ನೇ ನಿಮಿಷದಲ್ಲಿ ಸಲೇಹ್ ಅಲ್-ಶೆಹ್ರಿ ಸಿಡಿಸಿದ ಗೋಲಿನಿಂದ ಎರಡೂ ತಂಡಗಳು 1-1ರಲ್ಲಿ ಸಮಬಲದ ಹೋರಾಟ ನಡೆಸಿದವು. ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಗೆಲುವು – ಸಂಭ್ರಮಾಚರಣೆಗಾಗಿ ಬುಧವಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ ಸೌದಿ ಅರೇಬಿಯಾ

    ನಂತರ ಸೌದಿ ಅರೇಬಿಯಾ ಮತ್ತೆ ತಮ್ಮ ಸೂಪರ್ ಡೂಪರ್ ಪ್ರದರ್ಶನ ಮುಂದುವರಿಸಿ 53ನೇ ನಿಮಿಷದಲ್ಲಿ ಸೇಲಂ ಅಲ್ದಾವ್ಸರಿ ಸಿಡಿಸಿದ ಗೋಲಿನಿಂದ 2-1 ಮುನ್ನಡೆ ಪಡೆದುಕೊಂಡಿತು. ಈ ಮುನ್ನಡೆಯನ್ನು ಪಂದ್ಯದ ಅತ್ಯಂದ ವರೆಗೆ ಕಾಯ್ದುಕೊಂಡು ಕೂಟದ ಬಲಿಷ್ಠ ತಂಡವನ್ನು ಸೋಲಿಸಿ ಸೌದಿ ಅರೇಬಿಯಾ ಗೆಲುವಿನ ಸಂಭ್ರಮ ಆಚರಿಸಿತ್ತು.

    ಅರ್ಜೆಂಟೀನಾ ವಿರುದ್ಧ ಗೆದ್ದ ಬಳಿಕ ಸಂಭ್ರಮಾಚರಣೆಗಾಗಿ ಸೌದಿ ಅರೇಬಿಯಾ ಸರ್ಕಾರ ನ.23 ರಂದು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿತ್ತು. ಇದೀಗ ಆಟಗಾರರಿಗೆ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್ ಘೋಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜೆಂಟೀನಾ ವಿರುದ್ಧ ಗೆಲುವು – ಸಂಭ್ರಮಾಚರಣೆಗಾಗಿ ಬುಧವಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ ಸೌದಿ ಅರೇಬಿಯಾ

    ಅರ್ಜೆಂಟೀನಾ ವಿರುದ್ಧ ಗೆಲುವು – ಸಂಭ್ರಮಾಚರಣೆಗಾಗಿ ಬುಧವಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ ಸೌದಿ ಅರೇಬಿಯಾ

    ಕತಾರ್: ಅರಬ್ಬರ ನಾಡಿನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಟೂರ್ನಿಯಲ್ಲಿ ಕೂಟದ ಬಲಿಷ್ಠ ತಂಡ ಲಿಯೋನೆಲ್ ಮೆಸ್ಸಿ (Lionel Messi)  ಸಾರಥ್ಯದ ಅರ್ಜೆಂಟೀನಾ (Argentina) ವಿರುದ್ಧ ಸೌದಿ ಅರೇಬಿಯಾ (Saudi Arabia) 2-1 ಗೋಲುಗಳ ಅಂತರದ ಜಯ ಸಾಧಿಸಿ ಮೆರೆದಾಡಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ನಾಳೆ ರಾಷ್ಟ್ರೀಯ ರಜೆ (National Holiday) ಘೋಷಿಸಿ ಸಂಭ್ರಮಿಸಲು ಮುಂದಾಗಿದೆ.

    ಯಶಸ್ವಿ ತಂಡ 2 ಬಾರಿ ವಿಶ್ವಕಪ್ ಎತ್ತಿಹಿಡಿದಿದ್ದ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2-1 ಅಂತರದ ಗೋಲುಗಳಿಂದ ಗೆಲುವು ಸಾಧಿಸಿ ಮಿಂಚಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅರ್ಜೆಂಟೀನಾ ವಿರುದ್ಧದ ವಿಜಯವನ್ನು ಆಚರಿಸಲು ಬುಧವಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಸೌದಿ ಅರೇಬಿಯಾ ರಾಕ್ ಅರ್ಜೆಂಟೀನಾಗೆ ಶಾಕ್ – ಮೆಸ್ಸಿ ತಂಡಕ್ಕೆ ಸೋಲಿನ ಆರಂಭ

    ಕತಾರ್‌ನ (Qatar) ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ತಂಡ ಗೆಲುವಿನ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಇತ್ತ ಅದ್ಭುತ ಪ್ರದರ್ಶನದ ಮೂಲಕ ಸೌದಿ ಅರೇಬಿಯಾ ಫುಟ್‍ಬಾಲ್ ಅಭಿಮಾನಿಗಳ ಮನಗೆದ್ದಿದೆ. ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಗೋಲಿನೊಂದಿಗೆ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಅಭಿಮಾನಿಗಳು ಫುಟ್‍ಬಾಲ್ ದಿಗ್ಗಜನ ಆಟಕ್ಕೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಇದನ್ನೂ ಓದಿ: ಪದೇ ಪದೇ ಸ್ಯಾಮ್ಸನ್ ಕಡೆಗಣನೆ – ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಗರಂ

    ಬಳಿಕ ನಡೆದದ್ದು ಸೌದಿ ಅರೇಬಿಯಾದ ಕಾಲ್ಚೆಂಡು ಕರಾಮತ್ತು. ಬಲಿಷ್ಠ ಅರ್ಜೆಂಟೀನಾಗೆ ಸೆಡ್ಡು ಹೊಡೆಯುವ ಮಟ್ಟಿಗೆ ಸೌದಿ ಅರೇಬಿಯಾ ತಂಡ ಪುಟಿದೆದ್ದಿತು. 48ನೇ ನಿಮಿಷದಲ್ಲಿ ಸಲೇಹ್ ಅಲ್-ಶೆಹ್ರಿ ಸಿಡಿಸಿದ ಗೋಲಿನಿಂದ ಎರಡೂ ತಂಡಗಳು 1-1ರಲ್ಲಿ ಸಮಬಲದ ಹೋರಾಟ ನಡೆಸಿದವು. ಇದನ್ನೂ ಓದಿ: ಟೈನಲ್ಲಿ ಅಂತ್ಯಕಂಡ ಫೈನಲ್ ಮ್ಯಾಚ್ – ಭಾರತಕ್ಕೆ T20 ಸರಣಿ

    ನಂತರ ಸೌದಿ ಅರೇಬಿಯಾ ಮತ್ತೆ ತಮ್ಮ ಸೂಪರ್ ಡೂಪರ್ ಪ್ರದರ್ಶನ ಮುಂದುವರಿಸಿ 53ನೇ ನಿಮಿಷದಲ್ಲಿ ಸೇಲಂ ಅಲ್ದಾವ್ಸರಿ ಸಿಡಿಸಿದ ಗೋಲಿನಿಂದ 2-1 ಮುನ್ನಡೆ ಪಡೆದುಕೊಂಡಿತು. ಈ ಮುನ್ನಡೆಯನ್ನು ಪಂದ್ಯದ ಅತ್ಯಂದ ವರೆಗೆ ಕಾಯ್ದುಕೊಂಡು ಕೂಟದ ಬಲಿಷ್ಠ ತಂಡವನ್ನು ಸೋಲಿಸಿ ಸೌದಿ ಅರೇಬಿಯಾ ಗೆಲುವಿನ ಆರಂಭ ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಸೌದಿ ಅರೇಬಿಯಾ ರಾಕ್ ಅರ್ಜೆಂಟೀನಾಗೆ ಶಾಕ್ – ಮೆಸ್ಸಿ ತಂಡಕ್ಕೆ ಸೋಲಿನ ಆರಂಭ

    ಸೌದಿ ಅರೇಬಿಯಾ ರಾಕ್ ಅರ್ಜೆಂಟೀನಾಗೆ ಶಾಕ್ – ಮೆಸ್ಸಿ ತಂಡಕ್ಕೆ ಸೋಲಿನ ಆರಂಭ

    ಕತಾರ್: ಫಿಫಾ ವಿಶ್ವಕಪ್ (FIFA World Cup) ಟೂರ್ನಿಯ ಯಶಸ್ವಿ ತಂಡ 2 ಬಾರಿ ವಿಶ್ವಕಪ್ ಎತ್ತಿಹಿಡಿದಿದ್ದ ಲಿಯೋನೆಲ್‌ ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟೀನಾ (Argentina) ವಿರುದ್ಧ ಸೌದಿ ಅರೇಬಿಯಾ (Saudi Arabia) 2-1 ಅಂತರದ ಗೋಲುಗಳಿಂದ ಗೆಲುವು ಸಾಧಿಸಿ ಮಿಂಚಿದೆ.

    ಕತಾರ್‌ನ (Qatar) ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ತಂಡ ಗೆಲುವಿನ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಇತ್ತ ಅದ್ಭುತ ಪ್ರದರ್ಶನದ ಮೂಲಕ ಸೌದಿ ಅರೇಬಿಯಾ ಫುಟ್‍ಬಾಲ್ ಅಭಿಮಾನಿಗಳ ಮನಗೆದ್ದಿದೆ. ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಗೋಲಿನೊಂದಿಗೆ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಅಭಿಮಾನಿಗಳು ಫುಟ್‍ಬಾಲ್ ದಿಗ್ಗಜನ ಆಟಕ್ಕೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಇದನ್ನೂ ಓದಿ: ಪದೇ ಪದೇ ಸ್ಯಾಮ್ಸನ್ ಕಡೆಗಣನೆ – ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಗರಂ

    ಬಳಿಕ ನಡೆದದ್ದು ಸೌದಿ ಅರೇಬಿಯಾದ ಕಾಲ್ಚೆಂಡು ಕರಾಮತ್ತು. ಬಲಿಷ್ಠ ಅರ್ಜೆಂಟೀನಾಗೆ ಸೆಡ್ಡು ಹೊಡೆಯುವ ಮಟ್ಟಿಗೆ ಸೌದಿ ಅರೇಬಿಯಾ ತಂಡ ಪುಟಿದೆದ್ದಿತು. 48ನೇ ನಿಮಿಷದಲ್ಲಿ ಸಲೇಹ್ ಅಲ್-ಶೆಹ್ರಿ ಸಿಡಿಸಿದ ಗೋಲಿನಿಂದ ಎರಡೂ ತಂಡಗಳು 1-1ರಲ್ಲಿ ಸಮಬಲದ ಹೋರಾಟ ನಡೆಸಿದವು. ಇದನ್ನೂ ಓದಿ: ಟೈನಲ್ಲಿ ಅಂತ್ಯಕಂಡ ಫೈನಲ್ ಮ್ಯಾಚ್ – ಭಾರತಕ್ಕೆ T20 ಸರಣಿ

    ನಂತರ ಸೌದಿ ಅರೇಬಿಯಾ ಮತ್ತೆ ತಮ್ಮ ಸೂಪರ್ ಡೂಪರ್ ಪ್ರದರ್ಶನ ಮುಂದುವರಿಸಿ 53ನೇ ನಿಮಿಷದಲ್ಲಿ ಸೇಲಂ ಅಲ್ದಾವ್ಸರಿ ಸಿಡಿಸಿದ ಗೋಲಿನಿಂದ 2-1 ಮುನ್ನಡೆ ಪಡೆದುಕೊಂಡಿತು. ಈ ಮುನ್ನಡೆಯನ್ನು ಪಂದ್ಯದ ಅತ್ಯಂದ ವರೆಗೆ ಕಾಯ್ದುಕೊಂಡು ಕೂಟದ ಬಲಿಷ್ಠ ತಂಡವನ್ನು ಸೋಲಿಸಿ ಸೌದಿ ಅರೇಬಿಯಾ ಗೆಲುವಿನ ಆರಂಭ ಪಡೆದಿದೆ.

    Live Tv
    [brid partner=56869869 player=32851 video=960834 autoplay=true]