ರಿಯಾದ್: 2034 ರ ಪುರುಷರ ಫಿಫಾ ವಿಶ್ವಕಪ್ (FIFA World Cup 2034) ಅನ್ನು ಆಯೋಜಿಸಲು ಸೌದಿ ಅರೇಬಿಯಾ (Saudi Arabia) ಸಿದ್ಧವಾಗಿದೆ. ಈ ಕ್ರಮವು ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಛಾಪು ಮೂಡಿಸಲು ಸೌದಿ ಅರೇಬಿಯಾವನ್ನು ಮುಂದಿರಿಸಿದೆ.
2034 ರ FIFA ವಿಶ್ವಕಪ್‌ಗೆ ಸಂಭಾವ್ಯ ಆತಿಥೇಯ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಆಸ್ಟ್ರೇಲಿಯಾ ಹಠಾತ್ ಮತ್ತು ಅನಿರೀಕ್ಷಿತ ಘೋಷಣೆಯನ್ನು ಮಾಡಿದೆ. ಫುಟ್ಬಾಲ್ ಆಸ್ಟ್ರೇಲಿಯಾ ಒಕ್ಕೂಟವು ಆತಿಥ್ಯ ವಹಿಸಲು ಹಿಂದೇಟು ಹಾಕಿದೆ. 2034 ರ ಸ್ಪರ್ಧೆಗೆ ಬಿಡ್ ಮಾಡದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಬದಲಾಗಿ, ಆಸ್ಟ್ರೇಲಿಯಾವು 2026 ರಲ್ಲಿ ಮಹಿಳಾ ಏಷ್ಯನ್ ಕಪ್ ಮತ್ತು 2029 ರಲ್ಲಿ FIFA ಕ್ಲಬ್ ವಿಶ್ವಕಪ್‌ಗಾಗಿ ಹರಾಜಿಗೆ ಗಮನ ಕೇಂದ್ರೀಕರಿಸಿದೆ. ಇದನ್ನೂ ಓದಿ: ಕಿಂಗ್ ಕೊಹ್ಲಿ, ರೋಹಿತ್ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಶಾಹಿದ್ ಕಪೂರ್?
ಆಸ್ಟ್ರೇಲಿಯಾದ ಹಿಂದೆ ಸರಿದ ಬಳಿಕ, ಸೌದಿ ಅರೇಬಿಯಾ 2034 ರ FIFA ವಿಶ್ವಕಪ್‌ಗೆ ದೃಢಪಡಿಸಿದ ಬಿಡ್ಡರ್ ಆಗಿದೆ. FIFA, ಸೌದಿ ಅರೇಬಿಯಾದ ಸ್ಥಾನಮಾನವನ್ನು 2034 ಪಂದ್ಯಾವಳಿಗೆ ಏಕೈಕ ಬಿಡ್ಡರ್ ಎಂದು ದೃಢಪಡಿಸಿತು.
ಸ್ಪೇನ್, ಪೋರ್ಚುಗಲ್ ಮತ್ತು ಮೊರಾಕೊ ಈಗಾಗಲೇ 2030 ರ ಪಂದ್ಯಾವಳಿಯನ್ನು ಸಹ-ಆತಿಥ್ಯ ವಹಿಸಲು ನಿರ್ಧರಿಸಲಾಗಿದೆ. ಆದರೆ ಉರುಗ್ವೆ, ಪರಾಗ್ವೆ ಮತ್ತು ಅರ್ಜೆಂಟೀನಾ ಆರಂಭಿಕ ಪಂದ್ಯಗಳನ್ನು ನಡೆಸುವ ಮೂಲಕ ಮೊದಲ ವಿಶ್ವಕಪ್‌ನ 100 ನೇ ವಾರ್ಷಿಕೋತ್ಸವವನ್ನು ನೆನಪಿಸಿಕೊಳ್ಳುತ್ತವೆ. ಇದನ್ನೂ ಓದಿ: ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್
ಇತ್ತೀಚಿನ ವರ್ಷಗಳಲ್ಲಿ ಸೌದಿ ಅರೇಬಿಯಾ ಪ್ರಮುಖ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿದೆ. ಫಾರ್ಮುಲಾ ಒನ್ ಮತ್ತು ಬಾಕ್ಸಿಂಗ್‌ನಲ್ಲಿ ದೇಶವು ತನ್ನದೇ ಆದ ಛಾಪು ಮೂಡಿಸಿದೆ. ಇದಲ್ಲದೆ, LIV ಗಾಲ್ಫ್ ಟೂರ್ ಮತ್ತು ಸೌದಿ ಪ್ರೊ ಲೀಗ್‌ನಲ್ಲಿನ ಅವರ ಹೂಡಿಕೆಯು ಪ್ರಮುಖ ಸಾಕರ್ ತಾರೆಗಳನ್ನು ಸೌದಿ ಅರೇಬಿಯನ್ ಕ್ಲಬ್‌ಗಳಿಗೆ ಸ್ಥಳಾಂತರಿಸಲು ಆಕರ್ಷಿಸಿತು.
ಲಂಡನ್/ ನವದೆಹಲಿ: ಕಚ್ಚಾ ತೈಲದ (Crude Oil) ಉತ್ಪಾದನೆ ಹಾಗೂ ರಫ್ತು ಕಡಿತವನ್ನು ಈ ವರ್ಷದ ಅಂತ್ಯದವರೆಗೆ ಮುಂದುವರಿಸಲು ರಷ್ಯಾ (Russia) ಮತ್ತು ಸೌದಿ ಅರೇಬಿಯಾ (Saudi Arabia) ತೀರ್ಮಾನಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿದೆ.
ಭಾರತಕ್ಕೆ (India) ಪೂರೈಕೆ ಆಗುತ್ತಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ 1.05% ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ಈಗ 97.56 ಡಾಲರ್ (ಅಂದಾಜು 8,110 ರೂ.) ತಲುಪಿದೆ.
ಎಷ್ಟು ಕಡಿತ?
ಒಪೆಕ್+ ಒಕ್ಕೂಟದಲ್ಲಿ ಅತಿ ಹೆಚ್ಚು ತೈಲ ಉತ್ಪಾದನೆ ಮಾಡುವ ಸೌದಿ ಅರೇಬಿಯಾ ಈ ವರ್ಷದ ಅಂತ್ಯದ ವರೆಗೆ 1 ದಶಲಕ್ಷ ಬಿಪಿಡಿ (ಬ್ಯಾರೆಲ್ ಪರ್ ಡೇ) ತೈಲವನ್ನು ಕಡಿತ ಮಾಡುವುದಾಗಿ ಹೇಳಿದೆ. ಈ ನಿರ್ಧಾರದಿಂದ ಸೌದಿ ಈಗ ಪ್ರತಿ ದಿನ 9 ದಶಲಕ್ಷ ಬಿಪಿಡಿ ತೈಲವನ್ನು ಉತ್ಪಾದನೆ ಮಾಡುತ್ತಿದೆ. ರಷ್ಯಾವೂ ಈ ವರ್ಷದ ಅಂತ್ಯದವರೆಗೆ 3 ಲಕ್ಷ ಬಿಪಿಡಿ ತೈಲವನ್ನು ಕಡಿತ ಮಾಡುವುದಾಗಿ ಘೋಷಿಸಿದೆ.
ಭಾರತಕ್ಕೆ ಪೂರೈಕೆಯಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಆಗಸ್ಟ್‌ನಲ್ಲಿ ಸರಾಸರಿ 86.43 ಡಾಲರ್ ಇದ್ದರೆ ಈಗ ಇದು 97 ಡಾಲರ್ ಗಡಿಯನ್ನು ದಾಟಿದೆ. ಮೇ ಮತ್ತು ಜೂನ್‌ನಲ್ಲಿ ಸರಾಸರಿ ಬೆಲೆಯು 73ರಿಂದ 75 ಡಾಲರ್ ನಡುವೆ ಇತ್ತು.
ರಿಯಾದ್: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಸೌದಿ ಅರೇಬಿಯಾದ ಅಲ್-ನಾಸ್ರ್ ಕ್ಲಬ್ ಸೇರಿದ ಬಳಿಕ ಚೊಚ್ಚಲ ಚಾಂಪಿಯನ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ.
Extremely proud to helped the team winning this important trophy for the 1st time!
Thank you to everyone in the club that was involved in this great achievement and to my familly and friends for always being by my side!
Fantastic support by our fans!This also belongs to you!???????? pic.twitter.com/MGDxXc7AD3
ಅರಬ್ ಕ್ಲಬ್ ಚಾಂಪಿಯನ್‌ಶಿಪ್ ಕಪ್-2023 ನಲ್ಲಿ (Arab Club Championship Cup 2023) ಅಲ್-ನಾಸ್ರ್ ಮತ್ತು ಅಲ್-ಹಿಲಾಲ್ ನಡುವಿನ ಫೈನಲ್ ಪಂದ್ಯದಲ್ಲಿ ಭರ್ಜರಿ ಎರಡು ಗೋಲು ಸಿಡಿಸುವ ಮೂಲಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಲ್-ನಾಸ್ರ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. ಅಲ್ಲದೇ ರೊನಾಲ್ಡೊ ಸೌದಿ ಅರೇಬಿಯಾದ (Saudi Arabia) ಕ್ಲಬ್ ಸೇರಿದ ಬಳಿಕ ಗೆದ್ದ ಮೊದಲ ಟ್ರೋಫಿಯೂ ಇದಾಗಿದೆ. ಕಳೆದ ವರ್ಷ ರೊನಾಲ್ಡೋ ಸೌದಿ ಅರೇಬಿಯಾ ತಂಡ ಸೇರಿಕೊಂಡರು.
ಫೈನಲ್ ಪಂದ್ಯದಲ್ಲಿ ಗೆಲುವಿನ ಪ್ರಮುಖ ರೂವಾರಿಯಾಗಿದ್ದ ಜರ್ಮನಿ ಮತ್ತು ಬೇಯರ್ನ್ ಮ್ಯೂನಿಚ್ ದಂತಕಥೆ ಗೆರ್ಡ್ ಮುಲ್ಲರ್ ಅವರನ್ನ ಹಿಂದಿಕ್ಕಿ ಅತಿಹೆಚ್ಚು ಹೆಡ್ ಗೋಲ್‌ಗಳನ್ನು (145) ಗಳಿಸಿದ ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ. ಸೋಲು ಖಚಿತವಾಗಿತ್ತು ಎನ್ನುವ ಪಂದ್ಯದಲ್ಲಿ ಗೆದ್ದಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ಸಂತಸ ತಂದಿದೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ
ಫ್ರಾನ್ಸ್ ಖ್ಯಾತ ಫುಟ್‌ಬಾಲ್ ಆಟಗಾರ ಕಿಲಿಯಾನ್ ಎಂಬಾಪೆಗೆ (Kylian Mbappe) ಇತ್ತೀಚೆಗೆ ಸೌದಿ ಅರೇಬಿಯಾದ (Saudi Arabia) ಫುಟ್‌ಬಾಲ್ ಕ್ಲಬ್ ಒಂದು 332 ಮಿಲಿಯನ್ ಡಾಲರ್ ಅಂದರೆ ಅಂದಾಜು 2,720 ಕೋಟಿ ರೂ. ಸಂಭಾವನೆ ನೀಡಲು ಮುಂದಾಗಿತ್ತು. ಇಷ್ಟೊಂದು ಮೊತ್ತ ಮೂರು, ನಾಲ್ಕು ವರ್ಷಕ್ಕೆ ಅಲ್ಲ. ಕೇವಲ ಒಂದು ಸೀಸನ್‌ಗೆ ಮಾತ್ರ. ಈ ದಾಖಲೆಯ ಡೀಲ್ ವಿಷಯ ವಿಶ್ವಾದ್ಯಂತ ಸುದ್ದಿಯಾಯಿತು. ಆದರೆ ಎಂಬಾಪೆ ಇಲ್ಲಿಯವರೆಗೆ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಮುಂದೆ ಸಹಿ ಹಾಕುತ್ತಾರೋ ಗೊತ್ತಿಲ್ಲ. ಡೀಲ್‌ಗಿಂತಲೂ ಮುಖ್ಯವಾಗಿ ಸೌದಿ ಇಷ್ಟೊಂದು ಹಣವನ್ನು ಎಂಬಾಪೆಗೆ ನೀಡಲು ಮುಂದಾಗಿದ್ದು ಯಾಕೆ ಎಂದು ಓದುಗರಾದ ನೀವು ಕೇಳಬಹುದು. ಈ ಪ್ರಶ್ನೆಗೆ ಉತ್ತರ ಸೇರಿದಂತೆ ಕ್ರೀಡೆಗೆ ಇಷ್ಟೊಂದು ಹಣವನ್ನು ಸೌದಿ ಹೂಡಿಕೆ ಮಾಡುತ್ತಿರುವುದು ಯಾಕೆ? ಯಾವ ರೀತಿ ಹೂಡಿಕೆ ಮಾಡುತ್ತಿದೆ? ಹೂಡಿಕೆ ಮಾಡಿದ್ದರಿಂದ ಸೌದಿಗೆ ಏನು ಲಾಭವಾಗಿದೆ? ಮತ್ತು ಭಾರತಕ್ಕೆ ಏನು ಸಂದೇಶ ಈ ವಿಷಯಗಳ ಬಗ್ಗೆ ಕಿರು ವಿವರ ಇಲ್ಲಿದೆ.
ಸೌದಿ ಶ್ರೀಮಂತ ದೇಶವಾಗಿದ್ದು ಹೇಗೆ?
ಕಚ್ಚಾ ತೈಲ ಉತ್ಪಾದನೆಯೇ ಸೌದಿಯ ಆರ್ಥಿಕ ಶಕ್ತಿ. ವಿಶ್ವದಲ್ಲೇ ಅತಿ ಹೆಚ್ಚು ತೈಲ (Crude Oil) ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ವಿಶ್ವದ ತೈಲ ನಿಕ್ಷೇಪಗಳು ಪೈಕಿ ವೆನೆಜುವೆಲಾ ಮೊದಲ ಸ್ಥಾನದಲ್ಲಿ ಇದ್ದರೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ಒಪೆಕ್ ರಾಷ್ಟ್ರಗಳು ಅಂದರೆ ತೈಲ ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿಯೇ ಲೀಡರ್. ಯಾಕೆಂದರೆ ಸೌದಿ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಉತ್ಪಾದನೆ ಮಾಡುತ್ತಿದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನ ಅಂದರೆ ಜಿಡಿಪಿಯಲ್ಲಿ ಕಚ್ಚಾ ತೈಲದ ಪಾಲು 39%.
ತೈಲದ ಆದಾಯದಿಂದ ಶ್ರೀಮಂತ ದೇಶವಾಗಿ ಹೊರಹೊಮ್ಮಿದರೂ ಸೌದಿ ಅರೇಬಿಯಾ ಈಗ ಸಂಕಷ್ಟದಲ್ಲಿ ಸಿಲುಕಿದೆ. ಸಂಕಷ್ಟಕ್ಕೆ ಸಿಲುಕಲು ಮುಖ್ಯ ಕಾರಣ ಯಾವುದು ಎಂದರೆ ಅದು ತೈಲ ಬೆಲೆ. ಒಪೆಕ್ ರಾಷ್ಟ್ರಗಳು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆಯನ್ನು 80-90 ಡಾಲರ್ ಬೆಲೆಯಲ್ಲೇ ಸ್ಥಿರವಾಗಿಸಲು ಪ್ರಯತ್ನಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಹಿಂದೆ 2008ರಲ್ಲಿ ಆರ್ಥಿಕ ಹಿಂಜರಿತವಾದಾಗ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಕೋವಿಡ್ ಸಮಯದಲ್ಲಿ ಭಾರೀ ಇಳಿಕೆಯಾಗಿತ್ತು. ನಂತರ ರಷ್ಯಾ ಉಕ್ರೇನ್ (Russia-Ukraine) ಯುದ್ಧದ ಸಮಯದಲ್ಲಿ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಆದರೆ ಈಗ ತೈಲ ಬೆಲೆ ಕಡಿಮೆ ಆಗುತ್ತಿದೆ. ತೈಲ ಬೆಲೆ ಕಡಿಮೆಯಾದರೆ ತೈಲ ಆಮದು ಮಾಡುವ ಭಾರತಕ್ಕೆ ಲಾಭ. ಆದರೆ ಸೌದಿಗೆ ಸಮಸ್ಯೆ ಆಗುತ್ತದೆ. ಯಾಕೆಂದರೆ ಅವರ ಜಿಡಿಪಿಯಲ್ಲಿ ತೈಲದ ಪಾಲು 39%. ತೈಲದ ಪಾಲು 39% ಇದ್ದರೂ ಇದು ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಕಡಿಮೆ ಆಗುತ್ತಿದೆ. ಎಷ್ಟು ಕಡಿಮೆ ಆಗುತ್ತಿದೆ ಎಂದರೆ 2011 ರಲ್ಲಿ ಇದು 45.2% ಇದ್ದರೆ 2016ರಲ್ಲಿ ಇದು 43.7% ಇಳಿಕೆಯಾಗಿತ್ತು. 2021 ರಲ್ಲಿ ಇದು 38.8%ಗೆ ಇಳಿಕೆಯಾಗಿದೆ.
ತೈಲದ ಬೇಡಿಕೆ ಕಡಿಮೆ ಯಾಕೆ ಆಗುತ್ತಿದೆ ಎನ್ನುವುದಕ್ಕೂ ಕಾರಣವಿದೆ. ವಿಶ್ವದ ಹಲವು ದೇಶಗಳು ಈಗ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಹಾಕಿಕೊಂಡಿದೆ. ಜರ್ಮನಿ 2045, ದಕ್ಷಿಣ ಕೊರಿಯಾ 2050, ಅಮೆರಿಕ 2050, ಚೀನಾ 2060, ಮುಖ್ಯವಾಗಿ ಭಾರತ 2070ಕ್ಕೆ ಗುರಿಯನ್ನು ಹಾಕಿಕೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡುವ ದೇಶಗಳಾದ ಭಾರತ, ಚೀನಾ, ಅಮೆರಿಕ ಈಗಾಗಲೇ ಈ ಗುರಿಯನ್ನು ತಲುಪಲು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಕೆಲಸ ಆರಂಭಿಸಿದೆ. ಇದು ತೈಲ ಉತ್ಪಾದನೆ ಮಾಡುವ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಈಗ ಸೌದಿ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.
ಇಲ್ಲಿಯವರೆಗೆ ಎಷ್ಟು ಹೂಡಿಕೆ ಮಾಡಿದೆ?
ಕಚ್ಚಾ ತೈಲವನ್ನು ನಂಬಿದರೆ ಭವಿಷ್ಯದಲ್ಲಿ ನಮಗೆ ಭವಿಷ್ಯವಿಲ್ಲ ಎಂಬುದನ್ನು ಈಗಲೇ ಅರಿತ ಸೌದಿ ಕ್ರೀಡೆಗೆ ಈಗ ಭಾರೀ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದೆ. ಮೊದಲಿನಿಂದಲೂ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದ ಸೌದಿ ಈಗ ಯಾರು ನಿರೀಕ್ಷೆ ಮಾಡದ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಅರಲ್ಲೂ 2018 ರಿಂದ ಬಹಳ ಆಕ್ರಮಣಕಾರಿಯಾಗಿ ಹೂಡಿಕೆ ಮಾಡಲು ಆರಂಭಿಸಿದೆ.
ಫೆಬ್ರವರಿ 2020: ಮೊದಲ ಬಾರಿಗೆ ರಿಯಾದ್‌ನಲ್ಲಿ ಸೌದಿ ಕಪ್ ಹೆಸರಿನಲ್ಲಿ ಕುದುರೆ ರೇಸ್ ಆರಂಭವಾಗಿದೆ. ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಬರೋಬ್ಬರಿ 20 ಮಿಲಿಯನ್ ಡಾಲರ್. ಇದು ಸಾರ್ವಕಾಲಿಕ ದಾಖಲೆಯ ಬಹುಮಾನ. ಅತಿ ಹೆಚ್ಚು ಸಂಭಾವನೆ ಪಡೆಯುವ ಕುದುರೆ ರೇಸ್ ಇದಾಗಿದೆ.
ಜನವರಿ 2021 : ಪ್ರವಾಸೋದ್ಯಮವೇ ಸೌದಿಯ ಮುಖ್ಯ ಆದಾಯಗಳಲ್ಲಿ ಒಂದು. ಈ ಕಾರಣಕ್ಕೆ 3 ವರ್ಷಗಳ ಕಾಲ ಸೌದಿ ಪ್ರವಾಸೋದ್ಯಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲು ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಜೊತೆ 25 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಅಕ್ಟೋಬರ್ 2021 : ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ 400 ಮಿಲಿಯನ್ ಡಾಲರ್‌ಗೆ ಇಂಗ್ಲೆಂಡಿನ ಪ್ರಸಿದ್ಧ ನ್ಯೂ ಕಾಸಲ್ ಯುನೈಟೆಡ್ ಫುಟ್‌ಬಾಲ್ ತಂಡವನ್ನು ಖರೀದಿಸಿದೆ.
ಡಿಸೆಂಬರ್ 2021: ಸೌದಿ ಅರೇಬಿಯಾದ ಮೊದಲ ಫಾರ್ಮುಲಾ 1 ಕಾರ್ ರೇಸ್ ಜೆಡ್ಡಾದಲ್ಲಿ ನಡೆಯಿತು. ಸೌದಿ ಅರೇಬಿಯಾದ ರಾಷ್ಟ್ರೀಯ ತೈಲ ಕಂಪನಿ ಸೌದಿ ಅರಾಮ್ಕೋ ಇದರ ಮುಖ್ಯ ಪ್ರಾಯೋಜಕತ್ವ ವಹಿಸಿತ್ತು. ಈಗ ಇದು ಸೌದಿ ಗ್ರಾಂಡ್ ಪ್ರಿಕ್ಸ್ ಎಂದೇ ಪ್ರಸಿದ್ಧಿ ಪಡಿದಿದೆ.
ಜುಲೈ 2022: ಫಾರ್ಮುಲಾ 1 ಆಯೋಜನೆ ಮಾಡುತ್ತಿರುವ ಸೌದಿ ಒಂದು ಫ್ರಾಂಚೈಸಿಯನ್ನೇ ಖರೀದಿಸಿದೆ. ಫಾರ್ಮುಲಾ 1 ಫ್ರಾಂಚೈಸಿಯಾಗಿರುವ ಆಸ್ಟನ್ ಮಾರ್ಟಿನ್ ನಿಂದ 17% ಪಾಲನ್ನು ಸೌದಿಯ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ ಖರೀದಿಸಿದೆ.
ಡಿಸೆಂಬರ್ 2022: ಜಾಗತಿಕ ಫುಟ್‌ಬಾಲ್ ಸೂಪರ್‌ಸ್ಟಾರ್, ಪೋರ್ಚುಗಲ್‌ನ ಕ್ರಿಸ್ಟಿಯನ್ ರೊನಾಲ್ಡೋ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದು ಸೌದಿಯ ಅಲ್-ನಾಸ್ರ್ ತಂಡವನ್ನು ಸೇರಿದ್ದಾರೆ. ಈ ಡೀಲ್ ಎಷ್ಟು ಗೊತ್ತೆ ಬರೋಬ್ಬರಿ 600 ಮಿಲಿಯನ್ ಡಾಲರ್. ರೂಪಾಯಿಯಲ್ಲಿ ಹೇಳುವುದಾದರೆ ಅಂದಾಜು 1,800 ಕೋಟಿ ರೂ. ಇದು ಕ್ರೀಡಾ ಇತಿಹಾಸದಲ್ಲಿ ದಾಖಲೆ ಬರೆದಿದ್ದು ಅತಿ ದೊಡ್ಡ ಡೀಲ್ ಎನಿಸಿಕೊಂಡಿದೆ. ಇದನ್ನೂ ಓದಿ: ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?
ಜೂನ್ 2023: ಅರ್ಜೆಂಟೀನಾ ಖ್ಯಾತ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಬರೋಬ್ಬರಿ 4,100 ಕೋಟಿ ರೂ. ನೀಡಲು ಸೌದಿಯ ಆಲ್-ಹಿಲಾಲ್ ಮುಂದೆ ಬಂದಿತ್ತು. ಆದರೆ ಮೆಸ್ಸಿಯೂ ಈ ಆಫರ್ ತಿರಸ್ಕರಿಸಿದ್ದರು.
ಏಪ್ರಿಲ್, 2023: WWE, ಕುದುರೆ ರೇಸ್, ಫಾರ್ಮುಲಾ 1, ಫುಟ್‌ಬಾಲ್ ಮೇಲೆ ಕೋಟಿಗಟ್ಟಲೇ ಹಣವನ್ನು ಸುರಿದಿರುವ ಸೌದಿ ಕ್ರಿಕೆಟ್ ಮೇಲೂ ಕಣ್ಣು ಹಾಕಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆರಂಭಿಸಲು ಮುಂದಾಗಿತ್ತು. ಈ ಸಂಬಂಧ ಭಾರತದ ಬಿಸಿಸಿಐ ಜೊತೆಯೂ ಮಾತುಕತೆ ನಡೆಸಿತ್ತು. ಭಾರತ ಮತ್ತು ಪಾಕಿಸ್ತಾನ ಆಟಗಾರರನ್ನು ಸೇರಿಸಿ ಲೀಗ್ ಮಾಡಿದರೆ ಸೂಪರ್ ಹಿಟ್ ಆಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿತ್ತು. ಆದರೆ ಬಿಸಿಸಿಐ ಭಾರತದ ಆಟಗಾರರನ್ನು ಈ ಲೀಗ್‌ಗೆ ಕಳುಹಿಸಲು ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಸದ್ಯ ಸೌದಿಯ ಈ ಒಂದು ಕನಸು ಈಗಲೂ ಕನಸಾಗಿಯೇ ಉಳಿದಿದೆ.
ಕ್ರೀಡೆಯ ಮೇಲೆ ಹೂಡಿಕೆ ಹೇಗೆ?
ಸೌದಿಯ ಕ್ಲಬ್‌ಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಭಾರತದಲ್ಲಿ ನಡೆಯುವ ಐಪಿಎಲ್ ಬಗ್ಗೆ ತಿಳಿದುಕೊಳ್ಳೋಣ. ಐಪಿಎಲ್ ಫ್ರಾಂಚೈಸಿಯಲ್ಲಿ ಸರ್ಕಾರದ ಪಾಲು ಇರುವುದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ , ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಎಲ್ಲಾ ತಂಡಗಳ ಮಾಲೀಕತ್ವ ಇರುವುದು ಖಾಸಗಿ ವ್ಯಕ್ತಿಗಳ ಕೈಗಳಲ್ಲಿ. ಆದರೆ ಸೌದಿಯಲ್ಲಿ ಹೀಗಿಲ್ಲ. ಉದಾಹರಣೆಗೆ ಎಂಬಾಪೆಗೆ 2,720 ಕೋಟಿ ರೂ ಡೀಲ್‌ಗೆ ಮುಂದಾಗಿದ್ದ ಅಲ್-ಹಿಲಾಲ್ ಕ್ಲಬ್‌ನಲ್ಲಿ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ 75% ಷೇರನ್ನು ಹೊಂದಿದರೆ ಉಳಿದವರ ಪಾಲು 25% ಅಷ್ಟೇ. ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?
ಈ ಫಂಡ್ ಅನ್ನು ಸ್ಥಾಪಿಸಿದವರು ಯಾರು ಅಂದರೆ ಸೌದಿಯ ಹಿಂದಿನ ರಾಜ ಫೈಸಲ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್. ಸೌದಿ ಅರೇಬಿಯಾ ಸರ್ಕಾರದ ಪರವಾಗಿ ಹಣವನ್ನು ಹೂಡಿಕೆ ಮಾಡುವ ಉದ್ದೇಶದಿಂದ 1971ರಲ್ಲಿ ಈ ಫಂಡ್ ಸ್ಥಾಪಿಸಲಾಗಿದೆ. ರಾಷ್ಟ್ರದ ಆರ್ಥಿಕತೆಗೆ ಪೂರಕವಾಗುವ ಯೋಜನೆಗಳಿಗೆ ಹಣಕಾಸಿನ ಬೆಂಬಲವನ್ನು ಈ ನಿಧಿ ಒದಗಿಸುತ್ತದೆ. ಸದ್ಯ ಒಟ್ಟು 700 ಶತಕೋಟಿ ಡಾಲರ್ ಅಂದಾಜು ಆಸ್ತಿಯನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ಸಾರ್ವಭೌಮ ಸಂಪತ್ತಿನ ನಿಧಿಗಳಲ್ಲಿ ಇದು ಒಂದಾಗಿದೆ. ಈಗ ನಿಧಿಯ ಸಂಪೂರ್ಣ ನಿಯಂತ್ರಣವನ್ನು ಸೌದಿ ರಾಜಮೊಹಮ್ಮದ್ ಬಿನ್ ಸಲ್ಮಾನ್ ಹೊಂದಿದ್ದಾರೆ.
ಸೌದಿಗೆ ಏನು ಲಾಭ?
ಎಲ್ಲರಿಗೂ ಸರ್ಕಾರಿ ಕೆಲಸ ನೀಡುವುದು ಸರ್ಕಾರದ ಕೆಲಸವಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶ ನೀಡುವುದು ಸರ್ಕಾರದ ಕೆಲಸ. ಈ ಕಾರಣಕ್ಕೆ ತೈಲವನ್ನು ಹೊರತು ಪಡಿಸಿ ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಸರ್ಕಾರ ವಿಷನ್ 2030 ರೂಪಿಸಿದ್ದು ಇದರ ಭಾಗವಾಗಿ ಸೌದಿ ಕ್ರೀಡೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದಾಗಿ ದೇಶದಲ್ಲಿ ಉದ್ಯೋಗ, ಪ್ರವಾಸೋದ್ಯಮವನ್ನು ಉತ್ತೇಜನ ಸಿಗುತ್ತದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನಕ್ಕೆ (GDP) ಕ್ರೀಡೆಗಳ ಕೊಡುಗೆಯು 2016 ಮತ್ತು 2019 ರ ನಡುವೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ವರ್ಷಪೂರ್ತಿ ಒಂದೊಂದು ದೊಡ್ಡ ಕ್ರೀಡಾಕೂಟವನ್ನು ಆಯೋಜನೆ ಮಾಡಿದರೆ ಲಕ್ಷಾಂತರ ಮಂದಿ ವಿದೇಶಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಕೇವಲ ಒಂದು ದಿನಕ್ಕೆ ಮಾತ್ರ ವಿದೇಶಿಗರು ಬರುವುದಿಲ್ಲ. ಪ್ರವಾಸ ಮಾಡಲೆಂದೇ ಬರುತ್ತಾರೆ. ಇದರಿಂದಾಗಿ ವಿಮಾನ ಕ್ಷೇತ್ರಕ್ಕೆ ಮಾತ್ರವಲ್ಲದೇ ಟೂರಿಸಂ ಅಭಿವೃದ್ಧಿಯಾಗುತ್ತದೆ. ಹೋಟೆಲ್, ಟ್ಯಾಕ್ಸಿ, ಹೀಗೆ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುತ್ತದೆ. ಹಣದ ವ್ಯವಹಾರ ಹೆಚ್ಚಾದರೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತದೆ.
ಭಾರತಕ್ಕೆ ಏನು ಸಂದೇಶ?
ಸೌದಿಯಂತೆ ಭಾರತವೂ ಕ್ರೀಡೆಯ ಮೇಲೆ ಹೂಡಿಕೆ ಮಾಡಬಹುದು. ಸದ್ಯ ಕ್ರಿಕೆಟ್ ಒಂದೇ ಭಾರತದಲ್ಲಿ ಫೇಮಸ್ ಆಗಿದೆ. ಆದರೆ ಕ್ರಿಕೆಟಿನಷ್ಟೇ ಫುಟ್‌ಬಾಲ್ ಮತ್ತು ಇತರ ಕ್ರೀಡೆಗಳಿಗೆ ಅಭಿಮಾನಿಗಳು ಇದ್ದಾರೆ. ಇತರ ಕ್ರೀಡೆಗಳಿಗೆ ಪ್ರೋತ್ಸಾಹದ ಕೊರತೆ ಕಾಣುತ್ತಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ವಿದೇಶಿ ಆಟಗಾರರು ಭಾರತಕ್ಕೆ ಬರಬಹುದು. ಹೇಗೆ ಸೌದಿ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುವ ಟೂರಿಸಂ ಅಭಿವೃದ್ಧಿ ಮಾಡುತ್ತದೋ ಅದೇ ರೀತಿ ಭಾರತದಲ್ಲೂ ರಾಜ್ಯಗಳು ಉತ್ತೇಜನ ನೀಡಿದರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಯುರೋಪ್ ದೇಶಗಗಳು ಬಿಡಿ ನಮ್ಮ ಸಮೀಪದ ಶ್ರೀಲಂಕಾ, ಥಾಯ್ಲೆಂಡ್‌ಗೆ ಪ್ರವಾಸೋದ್ಯಮವೇ ಅವರ ಆದಾಯದ ಮೂಲ. ಕ್ರೀಡೆಯ ಜೊತೆ ಪ್ರವಾಸಿ ಸ್ಥಳಗಳನ್ನು ನಾವು ಅಭಿವೃದ್ಧೀ ಮಾಡಿದರೆ ಹೋಟೆಲ್, ಟ್ಯಾಕ್ಸಿ, ಮೆಟ್ರೋ, ಅಂಗಡಿಗಳಿಗೆ ಆದಾಯ ಬರುತ್ತದೆ. ಜನರಿಗೆ ಉದ್ಯೋಗ ಸಿಗುತ್ತದೆ. ಎಲ್ಲದರ ಪರಿಣಾಮ ಸರ್ಕಾರದ ಬೊಕ್ಕಸ ತುಂಬುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಷನ್ ಪ್ಲ್ಯಾನ್ ಮಾಡಿ ಕೆಲಸ ಮಾಡಬೇಕಿದೆ.
ಕೋಲಾರ: ಸೌದಿ ಅರೇಬಿಯಾದಲ್ಲಿ (Saudi Arabia) ನಡೆದ ಸ್ನೂಕರ್ ವಿಶ್ವಚಾಂಪಿಯನ್‌ಶಿಪ್ (Snooker Championship 2023) ಟೂರ್ನಿಯಲ್ಲಿ ಕೋಲಾರದ ಕೆಜಿಎಫ್ ಯುವತಿ ಕೀರ್ತನಾ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿಶ್ವಚಾಂಪಿಯನ್ ಟೂರ್ನಿಯಲ್ಲಿ ಕಂಚು, ಬೆಳ್ಳಿ ಗೆದ್ದು ಸಾಧನೆ ಮಾಡಿದ್ದ ಕೀರ್ತನಾ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಹೌದು. ಕೋಲಾರದ (Kolar) ಜಿಲ್ಲೆಯ ಯುವಸಮೂಹಕ್ಕೆ ಸಾಧನೆಯ ಮೆಟ್ಟಿಲು ಕಠಿಣವಾದರೂ ಛಲವಿದೆ ಬಿಡದೇ ಸಾಧಿಸುವ ಮನಸ್ಸಿದೆ ಅನ್ನೋದಕ್ಕೆ ಕೀರ್ತನಾ ಉದಾಹರಣೆಯಾಗಿದ್ದಾರೆ. ಅಂಡರ್ 16 ನಲ್ಲಿ ಬೆಳ್ಳಿ, ಅಂಡರ್ 18 ನಲ್ಲಿ ಕಂಚು ಗೆದ್ದಿದ್ದ ಕೀರ್ತನಾ ಇದೀಗ ಅಂಡರ್ 21 ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ನಿವಾಸಿ ಪಾಂಡಿಯನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿ ಕೀರ್ತನಾ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಕೀರ್ತಿನಾ ಸದ್ದಿಲ್ಲದೇ ಸ್ನೂಕರ್ ಕ್ರೀಡೆಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಸಾಗಿದ್ದಾಳೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್ ವಿವಾದ – ಆಟಗಾರರ ನಡುವೆ ಟಾಕ್ ಫೈಟ್
ಈಕೆಯ ತಂದೆ ಪಾಂಡಿಯನ್ ಕೆಜಿಎಫ್ ನಲ್ಲಿರುವ ಬಿಇಎಂಎಲ್ ಕ್ಲಬ್‌ನಲ್ಲಿ ನಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಜಯಲಕ್ಷ್ಮಿ ಗೃಹಿಣಿಯಾಗಿದ್ದಾರೆ. ತನ್ನ ತಂದೆಯಿಂದಲೇ ಪ್ರೇರಣೆ ಪಡೆದ ಕೀರ್ತನಾ ಸ್ನೂಕರ್‌ನ ಕ್ಯೂ ಕೈಗೆತ್ತಿಕೊಂಡಿದ್ದಳು. ಬಿಡುವಿನ ವೇಳೆಯಲ್ಲಿ ಕೆಜಿಎಫ್ ನಗರದ ಬಿಇಎಂಎಲ್ ಕ್ಲಬ್ ನಲ್ಲಿರುವ ಬಿಲಿಯರ್ಡ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. 13ನೇ ವಯಸ್ಸಿಗೆ ಬಾಲ್ ಹೊಡೆಯಲಾರಂಭಿಸಿದ ಹುಡುಗಿ ಈಗ ಚಿನ್ನಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಪದಕಗಳನ್ನ ಬಾಚಿಕೊಂಡಿದ್ದಾರೆ.
2017ರಲ್ಲಿ ಚೀನಾದಲ್ಲಿ ನಡೆದ ಅಂಡರ್ 19 ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2018ರಲ್ಲಿ ರಷ್ಯಾದಲ್ಲಿ ಬೆಳ್ಳಿ ಪದಕ ಹಾಗೂ ಚಿನ್ನದ ಪದಕ, 2022 ರಲ್ಲಿ ರೋಮಾನಿಯಾದಲ್ಲಿ ಕಂಚು ಗೆದ್ದು, ಇದೀಗ ಅಂಡರ್ 21 ನಲ್ಲಿ ಸೌದಿ ಅರೇಬಿಯಾದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮುಂದೆ ಪ್ರೊಫೆಷನಲ್ಸ್ ಕ್ಲಬ್‌ಗಳಲ್ಲಿ ಭಾಗವಹಿಸಬೇಕು, ಇನ್ನಷ್ಟು ಪದಕಗಳನ್ನು ಗೆಲ್ಲಬೇಕು ಎಂಬುದು ಈಕೆಯ ಗುರಿಯಾಗಿದೆ. ಇದನ್ನೂ ಓದಿ: ಇಸ್ಲಾಂ ಧರ್ಮ ಹೇಳಿದಂತೆ ಬದುಕುತ್ತೇನೆ – ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪಾಕ್ ಆಟಗಾರ್ತಿ
ರಿಯಾದ್: ಯುರೋಪ್ ರಾಷ್ಟ್ರಗಳು (European Countries) ಆರ್ಥಿಕ ಹಿಂಜರಿತಕ್ಕೆ ತುತ್ತಾಗಬಹುದು ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆ ಸೌದಿ ಅರೇಬಿಯಾ (Saudi Arabia) ಕಚ್ಚಾ ತೈಲ (Crude Oil) ಉತ್ಪಾದನೆಯನ್ನು ಕಡಿತಗೊಳಿಸಲು ಮುಂದಾಗಿದೆ.
ಜುಲೈನಿಂದ ಪ್ರತಿದಿನ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಈ ಹಿಂದೆ ಒಪೆಕ್ (OPEC) ಸದಸ್ಯ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತ ಮಾಡಿ ಬೆಲೆಯನ್ನು ಹೆಚ್ಚಿಸಲು ಪ್ರಯತ್ತಿದ್ದವು. ಆದರೆ ಬೆಲೆ ಹೆಚ್ಚಳ ಸಾಧ್ಯವಾಗದಿರುವ ಕಾರಣ ಉತ್ಪಾದನೆಯನ್ನು ಮತ್ತಷ್ಟು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಂಡಿದೆ.
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಒಪೆಕ್ ವಿಯೆನ್ನಾದಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ 7 ಗಂಟೆಗಳ ಕಾಲ ಸಭೆ ನಡೆಸಿ ತೈಲ ಬೆಲೆ ಹೆಚ್ಚಿಸುವ ಸಲುವಾಗಿ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದರ ಪ್ರಕಾರ ದಿನಕ್ಕೆ 14 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಯೋಜಿಸಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಭಯೋತ್ಪಾದಕರ ಭೀತಿ- ಭದ್ರತಾ ಪಡೆಗಳೇ ಟಾರ್ಗೆಟ್
ತೈಲ ಉತ್ಪಾದನೆ ಕಡಿತವನ್ನು ಜುಲೈ ನಂತರ ಪ್ರಾರಂಭಿಸಬಹುದು ಎಂದು ಸೌದಿ ತಿಳಿಸಿದೆ. ಆದರೆ ಇದು ರಷ್ಯಾ, ನೈಜೀರಿಯಾ ಹಾಗೂ ಅಂಗೋಲಾದ ಪ್ರಸ್ತುತ ಉತ್ಪಾದನಾ ಮಟ್ಟಕ್ಕೆ ಅನುಗುಣವಾಗಿ ತರಲು ಸಾಧ್ಯವಿಲ್ಲ.
ಒಪೆಕ್ ಪ್ರಪಂಚದಲ್ಲಿ 40% ರಷ್ಟು ಕಚ್ಚಾತೈಲ ಉತ್ಪಾದನೆಯ ಪಾಲನ್ನು ಹೊಂದಿದೆ. ಆದರೆ ಅದು ತೆಗೆದುಕೊಳ್ಳುವ ನೀತಿ ನಿರ್ಧಾರಗಳು ಜಾಗತಿಕವಾಗಿ ತೈಲ ಬೆಲೆಗಳ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿದೆ. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ
ರಿಯಾದ್: ಆಪರೇಷನ್ ಕಾವೇರಿಯಡಿಯಲ್ಲಿ (Operation Kaveri) ಸುಡಾನ್‌ನಿಂದ (Sudan) ಭಾರತೀಯರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, 229 ಭಾರತೀಯರು ಭಾನುವಾರ ಜೆಡ್ಡಾದಿಂದ (Jeddah) ಬೆಂಗಳೂರಿಗೆ (Bengaluru) ತೆರಳುವ ವಿಮಾನದಲ್ಲಿ ಹೊರಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry Of External Affairs) ತಿಳಿಸಿದೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಟ್ವೀಟ್ (Tweet) ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಪರೇಷನ್ ಕಾವೇರಿ ನಾಗರಿಕರನ್ನು ಮರಳಿ ಮನೆಗೆ ಕರೆತರುತ್ತಿದೆ. 229 ಪ್ರಯಾಣಿಕರನ್ನು ಹೊತ್ತ 7ನೇ ವಿಮಾನವು ಇದಾಗಿದ್ದು, ಜೆಡ್ಡಾದಿಂದ ಬೆಂಗಳೂರಿಗೆ ತೆರಳಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರೇಪ್‍ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್ ಪಾಲಕರು
ಸುಡಾನ್‌ನಲ್ಲಿ ಕದನ ವಿರಾಮವನ್ನು ಘೋಷಿಸಿರುವುದರಿಂದ, ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ನಾಗರಿಕರನ್ನು ಸಂಘರ್ಷ-ಪೀಡಿತ ರಾಷ್ಟ್ರದಿಂದ ಸ್ಥಳಾಂತಿರಸಲು ಪ್ರಯತ್ನಿಸುತ್ತಿವೆ. ಇದಕ್ಕೂ ಮೊದಲು, ಭಾರತೀಯ ನೌಕಾಪಡೆಯ ಹಡಗು, ಐಎನ್‌ಎಸ್ ಟೆಗ್ (INS Teg), ಶನಿವಾರ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 288 ಭಾರತೀಯರನ್ನು ಆಪರೇಷನ್ ಕಾವೇರಿ ಮೂಲಕ ಯಶಸ್ವಿಯಾಗಿ ಸ್ಥಳಾಂತರಿಸಿತು. ಸುಡಾನ್ ಸಂಘರ್ಷಣೆಯಲ್ಲಿ ಸಿಲುಕಿಕೊಂಡಿದ್ದ 14ನೇ ತಂಡ ಇದಾಗಿದ್ದು, ಭಾರತಕ್ಕೆ ಮರಳಲು ಜೆಡ್ಡಾಕ್ಕೆ ತೆರಳಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – 5 ಮಕ್ಕಳು ಸೇರಿ 26 ಜನ ಸಾವು
ಈ ಹಿಂದೆ ಪೋರ್ಟ್ ಸುಡಾನ್‌ನಲ್ಲಿ ನೆಲೆಗೊಂಡಿದ್ದ ಐಎನ್‌ಎಸ್ ಸುಮೇಧಾ (INS Sumedha) ಬಿಕ್ಕಟ್ಟಿನಿಂದಾಗಿ 300 ಪ್ರಯಾಣಿಕರೊಂದಿಗೆ ಜೆಡ್ಡಾಕ್ಕೆ ಹೊರಟಿತ್ತು. ಆಪರೇಷನ್ ಕಾವೇರಿಯಡಿಯಲ್ಲಿ ಭಾರತ ಸರ್ಕಾರವು ಸುಮಾರು 3,000 ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ಇದನ್ನೂ ಓದಿ: ಸುಡಾನ್‌ನಲ್ಲಿ ಸಂಘರ್ಷ – ಜೆಡ್ಡಾದಿಂದ 362 ಭಾರತೀಯರು ಬೆಂಗಳೂರು ಕಡೆ ಪ್ರಯಾಣ
ಸೇನಾಪಡೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದಾಗಿ ಸುಡಾನ್ ದೇಶವು ರಕ್ತಪಾತವನ್ನು ಅನುಭವಿಸುತ್ತಿದೆ. ಇಲ್ಲಿಯವರೆಗೆ 2,400ಕ್ಕೂ ಹೆಚ್ಚು ಭಾರತೀಯರನ್ನು ಸುಡಾನ್‌ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಭಾರತೀಯ ವಲಸೆಗಾರರು “ಭಾರತ್ ಮಾತಾ ಕೀ ಜೈ” ಮತ್ತು “ವಂದೇ ಮಾತರಂ” ಘೋಷಣೆಗಳನ್ನು ಕೂಗಿದರು. ಅಲ್ಲದೇ ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ನಿಂದ ರಕ್ಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ (S.Jaishankar) ಅವರನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್
ರಿಯಾದ್: ಕಲಹ ಪೀಡಿತ ಸುಡಾನ್‍ನಿಂದ (Sudan) ಹೊರಟಿದ್ದ ಅಪರೇಷನ್ ಕಾವೇರಿಯ ಐಎಎಫ್ ಸಿ-130ಜೆ (IAF C-130J) ವಿಮಾನವು 135 ಭಾರತೀಯರ (Indians) ಮೂರನೇ ಬ್ಯಾಚ್ ಸೌದಿ ಅರೇಬಿಯಾದ (Saudi Arabia) ಜೆಡ್ಡಾವನ್ನು (Jeddah) ಬುಧವಾರ ತಲುಪಿದೆ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ (V Muraleedharan) ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಸಿ-130ಜೆ ವಿಮಾನದಲ್ಲಿ ಜೆಡ್ಡಾ ವಿಮಾನ ನಿಲ್ದಾಣಕ್ಕೆ ಬಂದಿಳಿದ 148 ಭಾರತೀಯರ ಎರಡನೇ ಬ್ಯಾಚ್‍ನ್ನು ಬುಧವಾರ ಮುಂಜಾನೆ ಅವರು ಬರಮಾಡಿಕೊಂಡಿದ್ದಾರೆ. ಅಲ್ಲದೆ ನೌಕಾಪಡೆಯ ಐಎನ್‍ಎಸ್ ಸುಮೇಧಾ (INS Sumedha) ನೌಕೆಯು 278 ಜನರೊಂದಿಗೆ ಜೆಡ್ಡಾ ಬಂದರನ್ನು ತಲುಪಿದೆ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ
ಆಪರೇಷನ್ ಕಾವೇರಿ (Operation Kaveri) ಹೆಸರಿನಲ್ಲಿ ನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ, ಸುಡಾನ್‍ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ದೇಶಕ್ಕೆ ಕಳಿಸುವ ಮುನ್ನ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸ್ವಲ್ಪ ಸಮಯ ಇರಿಸಲಾಗುತ್ತದೆ. ನಂತರ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ ಎಂದು ಮುರುಳೀಧರನ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
Third batch comprising 135 Indians from Port Sudan arrived in Jeddah by IAF C-130J aircraft.
ಸುಡಾನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ನೌಕಾಪಡೆಯ ಐಎನ್‍ಎಸ್ ಟೆಗ್ ಮಂಗಳವಾರ ಆಪರೇಷನ್ ಕಾವೇರಿಗೆ ಸೇರಿದೆ. ಸುಡಾನ್‍ನಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಹೆಚ್ಚುವರಿ ಅಧಿಕಾರಿಗಳು, ಅಗತ್ಯ ಪರಿಹಾರ ಸಾಮಗ್ರಿಗಳೊಂದಿಗೆ ನೌಕೆಯಲ್ಲಿ ಪೋರ್ಟ್ ಸುಡಾನ್‍ಗೆ ತಲುಪಿದೆ ಎಂದು ಹಿರಿಯ ಎಂಇಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಡಾನ್‍ನ ರಾಜಧಾನಿ ಖಾರ್ತೌಮ್‍ನಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಕಾಳಗ ತೀವ್ರಗೊಂಡಿದೆ. ಕದನ ಪೀಡಿತ ಸುಡಾನ್‍ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ ತಿಳಿಸಿದ್ದರು.
ಸುಡಾನ್‍ನ ಇತ್ತೀಚಿನ ಬೆಳವಣಿಗೆಯಲ್ಲಿ, ವಿವಿಧ ದೇಶಗಳು ತಮ್ಮ ಪ್ರಜೆಗಳನ್ನು ಸುಡಾನ್‍ನಿಂದ ಸ್ಥಳಾಂತರಿಸುತ್ತಿದ್ದಾರೆ. ಈ ವೇಳೆ ಅನಾಹುತಗಳಾಗದಂತೆ ತಡೆಯಲು ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮನವಿಯ ನಂತರ ಹೋರಾಟ ನಡೆಸುತ್ತಿದ್ದ ಎರಡು ಬಣಗಳು ಸೋಮವಾರ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ
ನವದೆಹಲಿ: ಸುಡಾನ್‍ನ (Sudan) ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸುರಕ್ಷಿತ ಭೂ ಮಾರ್ಗಗಳ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದ ಸುಡಾನ್ ರಾಜಧಾನಿ ಸೇರಿದಂತೆ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಇದರಿಂದ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಸುರಕ್ಷಿತ ಭೂ ಮಾರ್ಗಗಳ ಹುಡುಕಾಟ ನಡೆಸಲಾಗುತ್ತಿದೆ. ಘರ್ಷಣೆ ನಡೆಯುತ್ತಿರುವ ಪ್ರದೇಶಗಳಿಂದ ಭಾರತದ ನಾಗರಿಕರನ್ನು ರಕ್ಷಿಸಿ ಕರೆತರಲು ಭಾರತೀಯ ರಾಯಭಾರ ಕಚೇರಿಯ (Indian Embassy) ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: Twitter – 10 ಲಕ್ಷ ಫಾಲೋವರ್ಸ್ ಹೊಂದಿದ್ರೆ ಸಿಗುತ್ತೆ ಬ್ಲೂ ಟಿಕ್?
ಈಗಾಗಲೆ ಬೇರೆ ಬೇರೆ ಭಾಗಗಳ 150 ಕ್ಕೂ ಹೆಚ್ಚು ಜನರು ಸುಡಾನ್‍ನಿಂದ ಸೌದಿ ಅರೇಬಿಯಾವನ್ನು (Saudi Arabia) ತಲುಪಿದ್ದಾರೆ. ಅದರಲ್ಲಿ ಸೌದಿಯ ಪ್ರಜೆಗಳನ್ನು ಹೊರತುಪಡಿಸಿ, ಭಾರತ ಸೇರಿದಂತೆ 12 ಇತರ ದೇಶಗಳ ಪ್ರಜೆಗಳಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಕೊರಿಯಾ (South Korea) ಮತ್ತು ಜಪಾನ್ (Japan) ಹತ್ತಿರದ ದೇಶಗಳಿಗೆ ರಕ್ಷಣಾ ಪಡೆಗಳನ್ನು ನಿಯೋಜಿಸುವುದರೊಂದಿಗೆ ತಮ್ಮ ಸಾವಿರಾರು ಪ್ರಜೆಗಳ ಸ್ಥಳಾಂತರಕ್ಕೆ ತಯಾರಿ ನಡೆಸುತ್ತಿದ್ದಾರೆ.
ಖಾರ್ಟೂಮ್‍ನಲ್ಲಿ (Khartoum), ಸಂಘರ್ಷದಿಂದ ಭಯಭೀತರಾದ ನಾಗರಿಕರು ತಮ್ಮ ಮನೆಗಳಲ್ಲಿ ಆಶ್ರಯಿಸಿದ್ದಾರೆ. ತೀವ್ರ ಬಿಸಿಲಿನ ನಡುವೆ ವಿದ್ಯುತ್ ಸಹ ಸ್ಥಗಿತಗೊಂಡಿದ್ದು, ಹೆಚ್ಚಿನ ಭಾಗಗಳಲ್ಲಿ ಇಂಟರ್ನೆಟ್ ಕಡಿತವಾಗಿದೆ. ಇದುವರೆಗಿನ ಹಿಂಸಾಚಾರದಲ್ಲಿ 420ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 3,700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ನಿಜವಾದ ಸಾವಿನ ಸಂಖ್ಯೆ ಇದಕ್ಕಿಂತ ಹೆಚ್ಚಿದೆ ಎನ್ನಲಾಗಿದೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ
ರಿಯಾದ್/ಖಾರ್ಟೂಮ್: ಸೇನೆ ಹಾಗೂ ಅರೆಸೇನಾಪಡೆಗಳ ಸಂಘರ್ಷಕ್ಕೆ ಗುರಿಯಾಗಿರುವ ಸುಡಾನ್‌ನಲ್ಲಿ (Sudan) ಸಿಲುಕಿಕೊಂಡಿರುವ ವಿದೇಶಿಗರ ರಕ್ಷಣೆ ಪ್ರಾರಂಭಿಸಲಾಗಿದೆ. ಭಾರತ (India) ಸೇರಿದಂತೆ ಇತರ ದೇಶಗಳ ಸುಮಾರು 150ಕ್ಕೂ ಹೆಚ್ಚು ಜನರನ್ನು ಸುಡಾನ್‌ನಿಂದ ಕರೆತರಲಾಗಿದೆ ಎಂದು ಸೌದಿ ಅರೇಬಿಯಾ (Saudi Arabia) ತಿಳಿಸಿದೆ.
ಸೇನೆ ಹಾಗೂ ಅರೆಸೇನೆ ಸಂಘರ್ಷದಲ್ಲಿ ಸುಡಾನ್‌ನಲ್ಲಿರುವ ಜನರು ಭಯಭೀತರಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಜನರು ತಮ್ಮ ದೇಶಗಳಿಗೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಸಂಘರ್ಷ ಪೀಡಿತ ಸುಡಾನ್‌ನಿಂದ ವಿದೇಶಿ ರಾಜತಾಂತ್ರಿಕರು, ಅಧಿಕಾರಿಗಳು ಸೇರಿದಂತೆ 150ಕ್ಕೂ ಅಧಿಕ ಜನರನ್ನು ಸುಡಾನ್‌ನಿಂದ ರಕ್ಷಿಸಲಾಗಿದೆ (Evacuation) ಹಾಗೂ ಎಲ್ಲರನ್ನೂ ಜೆಡ್ಡಾಗೆ ಕರೆತರಲಾಗಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸೈನ್ಯದ ಇತರ ಶಾಖೆಗಳ ಬೆಂಬಲದೊಂದಿಗೆ ಸೌದಿ ಅರೇಬಿಯಾದ ನೌಕಾಪಡೆಗಳು ನಾಗರಿಕರನ್ನು ಸ್ಥಳಾಂತರಗೊಳಿಸುವ ಕಾರ್ಯವನ್ನು ಮಾಡಿದೆ. ಅದರಲ್ಲಿ 91 ಸೌದಿಯ ನಾಗರಿಕರು ಆಗಮಿಸಿದ್ದು, ಭಾರತ ಸೇರಿದಂತೆ 12 ದೇಶಗಳ ಸುಮಾರು 66 ಪ್ರಜೆಗಳನ್ನೂ ಸುರಕ್ಷಿತವಾಗಿ ಕರೆತರಲಾಗಿದೆ. ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟುನೀಶಿಯಾ, ಪಾಕಿಸ್ತಾನ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್, ಕೆನಡಾ ಹಾಗೂ ಬುರ್ಕಿನಾ ಫಾಸೋದ ನಾಗರಿಕರನ್ನು ಕೂಡಾ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಪರಾರಿಯಾಗಿದ್ದ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಸರೆಂಡರ್
ಸುಡಾನ್ ರಾಜಧಾನಿ ಖಾಟೂಮ್ ಸೇರಿದಂತೆ ಹಲವು ನಗರಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಭೀಕರ ಯುದ್ಧವೇ ನಡೆದಿದೆ. ಮೊದಲು ಖಾರ್ಟೂಮ್‌ನಿಂದ ಪ್ರಾರಂಭವಾದ ಕಾದಾಟ ಈಗ ಇಡೀ ದೇಶವನ್ನೇ ವ್ಯಾಪಿಸಿದೆ. ಇದೀಗ ಅಲ್ಲಿ ಆಹಾರ ಹಾಗೂ ವಿದ್ಯುತ್ ಕೊರತೆಯನ್ನು ಅಲ್ಲಿನ ಜನರು ಎದುರಿಸುತ್ತಿದ್ದಾರೆ. ಮಾತ್ರವಲ್ಲದೇ ಅನಿರೀಕ್ಷಿತ ಗುಂಡಿನ ದಾಳಿಯಿಂದಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ 3 ದಿನಗಳ ಕಾಲ ಮಳೆ