Tag: saudi arabia

  • ಫ್ರಾಡ್ ಫಾರಿನ್ ಕಂಪನಿಗಳ ಹೆಸರಿನಲ್ಲಿ ದೋಖಾ – ಕೆಲಸಕ್ಕೆಂದು ಸೌದಿಗೆ ತೆರಳಿದ್ದ ವ್ಯಕ್ತಿಗೆ 10 ತಿಂಗಳು ಗೃಹ ಬಂಧನ

    ಫ್ರಾಡ್ ಫಾರಿನ್ ಕಂಪನಿಗಳ ಹೆಸರಿನಲ್ಲಿ ದೋಖಾ – ಕೆಲಸಕ್ಕೆಂದು ಸೌದಿಗೆ ತೆರಳಿದ್ದ ವ್ಯಕ್ತಿಗೆ 10 ತಿಂಗಳು ಗೃಹ ಬಂಧನ

    – ಕಾಂಬೋಡಿಯಾ, ವಿಯೆಟ್ನಾಂ ಕಂಪನಿಗಳಿಂದ ವಂಚನೆ
    – ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಟಾರ್ಚರ್

    ರಾಮನಗರ: ವಿದೇಶಕ್ಕೆ ಹೋಗಿ ಒಳ್ಳೆಯ ಕೆಲಸ ಪಡೆದು ಕೈತುಂಬ ಸಂಬಳ ತೆಗೆದುಕೊಳ್ಳಬೇಕು ಎಂದು ಹೋಗಿದ್ದ ರಾಮನಗರದ ಯುವಕನೊಬ್ಬ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಫ್ರಾಡ್ ಫಾರೀನ್ ಕಂಪನಿಗಳು ಯುವಜನತೆಯನ್ನು ವಂಚಿಸುತ್ತಿವೆ.

    ರಾಮನಗರದ ಮೊಹ್ಮದ್ ಅಶ್ಪಾಕ್ ವಂಚನೆಗೆ ಒಳಗಾದ ಯುವಕ. ಒಳ್ಳೆಯ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಏಜೆಂಟ್‌ಗೆ 2 ಲಕ್ಷ ರೂ. ಹಣ ಕೊಟ್ಟು ಸೌದಿ ಅರೇಬಿಯಾಗೆ ತೆರಳಿದ್ದ.

    ಏಜೆಂಟ್‌ನಿಂದ ಮೋಸ ಹೋಗಿ ಮೊಹ್ಮದ್ 10 ತಿಂಗಳು ಸೌದಿಯಲ್ಲಿ ಗೃಹ ಬಂಧನದಲ್ಲಿದ್ದ. 10 ತಿಂಗಳ ಸಂಬಳ ಸಿಗದೇ ನರಕಯಾತನೆ ಅನುಭವಿಸಿದ್ದಾರೆ. ಕೊನೆಗೆ ಅನಿವಾಸಿ ಭಾರತೀಯರ ಸಂಘದ ಸಹಾಯದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ.

    ಕೊರೊನಾಕ್ಕಿಂತ ಮೊದಲು ಗಲ್ಫ್ ದೇಶಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಕೊರೋನಾ ನಂತರ ಕಾಂಬೋಡಿಯಾ ಹಾಗೂ ವಿಯ್ನೆಟಾಂಗೆ ಏಜೆಂಟ್‌ಗಳ ಮೂಲಕ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಎರಡು ದೇಶಗಳ ಫ್ರಾಡ್ ಕಂಪನಿಗಳ ಹೆಸರಿನಲ್ಲಿ ನಮ್ಮ ರಾಜ್ಯದಿಂದ ಹೋಗಿ ವಂಚನೆಗೆ ಒಳಗಾಗಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅನಿವಾಸಿ ಭಾರತೀಯ ಸಂಘ ಕಳವಳ ವ್ಯಕ್ತಪಡಿಸಿದೆ.

    ಏಜೆಂಟ್‌ಗಳ ಮಾತು ನಂಬಿ ಹೋದ ಕೆಲವರಿಗೆ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಟಾರ್ಚರ್ ಕೊಡ್ತಾರೆ ಎಂಬ ಕರೆಗಳು ಅನಿವಾಸಿ ಭಾರತೀಯ ಸಂಘಕ್ಕೆ ಬರುತ್ತಿವೆ. ಕರೆ ಮಾಡಿದ ಕೆಲವರನ್ನು ಅನಿವಾಸಿ ಭಾರತೀಯ ಸಂಘ ಸುರಕ್ಷಿತವಾಗಿದೆ ಭಾರತ ತಲುಪಿಸಿದೆ ಎನ್ನುತ್ತಾರೆ ಸಂಘದ ಉಪಾಧ್ಯಕ್ಷೆ ಆರತಿಕೃಷ್ಣ.

  • ಹಣಕ್ಕಾಗಿ ಪತ್ನಿಯ ರೇಪ್ – ಗೆಳೆಯರಿಗೆ ಚಾನ್ಸ್ ಕೊಟ್ಟ ಭೂಪ ಪತಿರಾಯ

    ಹಣಕ್ಕಾಗಿ ಪತ್ನಿಯ ರೇಪ್ – ಗೆಳೆಯರಿಗೆ ಚಾನ್ಸ್ ಕೊಟ್ಟ ಭೂಪ ಪತಿರಾಯ

    – ಸೌದಿಯಲ್ಲಿ ಕುಳಿತು ವೀಡಿಯೋ ನೋಡಿದ ಪತಿ

    ಲಕ್ನೋ: ಹಣದ ಆಸೆಗಾಗಿ ತನ್ನ ಹೆಂಡತಿಯನ್ನು ಅತ್ಯಾಚಾರ ಮಾಡಲು ಸ್ನೇಹಿತರಿಗೆ ಅನುಮತಿಸಿದ ಘಟನೆಯೊಂದು ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್‌ನಲ್ಲಿ ನಡೆದಿದೆ.

    ಸಂತ್ರಸ್ತೆಯನ್ನು ಉತ್ತರ ಪ್ರದೇಶ ಮೂಲದ 35 ವರ್ಷದ ಮಹಿಳೆ ಗುರುತಿಸಲಾಗಿದೆ.ಇದನ್ನೂ ಓದಿ:

    2010ರಲ್ಲಿ ಬುಲಂದ್‌ಶಹರ್ ಮೂಲದ ವ್ಯಕ್ತಿಯ ಜೊತೆ ಮಹಿಳೆಯ ವಿವಾಹವಾಗಿದ್ದು, ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಮಹಿಳೆ ಗರ್ಭಿಣಿಯಾಗಿದ್ದು, ಪತಿ ಸೌದಿ ಅರೇಬಿಯಾದಲ್ಲಿ (Saudi Arabia) ಆಟೋಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಭಾರತಕ್ಕೆ ಬರುತ್ತಾರೆ ಎಂದು ತಿಳಿಸಿದ್ದರು.

    ತನ್ನ ಮೇಲಾದ ದೌರ್ಜನ್ಯದ ವಿರುದ್ಧ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ನನ್ನ ಪತಿಯ ಸ್ನೇಹಿತರಿಬ್ಬರು ಆತ್ಯಾಚಾರ ಎಸಗಿದ್ದಾರೆ. ಹಣದ ಆಸೆಗಾಗಿ ನನ್ನ ಪತಿ ಇಬ್ಬರು ಸ್ನೇಹಿತರಿಗೆ ಆತ್ಯಾಚಾರ ಮಾಡುವಂತೆ ಅನುಮತಿ ನೀಡಿದ್ದ. ಜೊತೆಗೆ ಆ ಇಬ್ಬರು ಕೃತ್ಯದ ವಿಡಿಯೋಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ. ನನ್ನ ಪತಿ ಸೌದಿ ಅರೇಬಿಯಾದಲ್ಲಿ ಕುಳಿತು ವಿಡಿಯೋಗಳನ್ನು ನೋಡುತ್ತಿದ್ದ ಎಂದು ಆರೋಪಿಸಿದ್ದಾರೆ.

    ಮೂರು ವರ್ಷಗಳ ಹಿಂದೆ ಆಕೆಯ ಪತಿ ಮನೆಗೆ ಬಂದಿದ್ದು, ಆ ಸಮಯದಲ್ಲಿಯೂ ತನ್ನ ಇಬ್ಬರು ಸ್ನೇಹಿತರಿಗೆ ಅತ್ಯಾಚಾರ ಮಾಡಲು ಅವಕಾಶ ನೀಡಿದ್ದ. ಆತ ಸೌದಿಯಲ್ಲಿದ್ದಾಗಲೂ, ಭಾರತಕ್ಕೆ ಬಂದರೂ ಕೂಡ ಅತ್ಯಾಚಾರ ಮುಂದುವರೆದಿತ್ತು. ಈ ಬಗ್ಗೆ ಕೇಳಿದಾಗ ತನಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ನನ್ನ ಮಕ್ಕಳ ಸಲುವಾಗಿ ನಾನು ಮೌನವಾಗಿದ್ದೆ ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.

    ಈ ಕುರಿತು ಮಹಿಳೆಯ ಸಹೋದರ ಮಾತನಾಡಿದ್ದು, ಇತ್ತೀಚೆಗೆ ತನ್ನ ಸಹೋದರಿಯ ಪತಿ ಮನೆಗೆ ಬಂದಾಗ ಆಕೆಯ ಸಂಬಂಧದ ಬಗ್ಗೆ ತಿಳಿದುಬಂದಿದೆ ಎಂದಿದ್ದಾರೆ.

    ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮಹಿಳೆಯ ಪತಿ ಹಾಗೂ ಆತನ ಸ್ನೇಹಿತರನ್ನು ಬಂಧಿಸಬೇಕಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.ಇದನ್ನೂ ಓದಿ:

    :

  • ಬುರ್ಜ್‌ ಖಲೀಫಾಗೆ ಸೆಡ್ಡು – ಸೌದಿ ಅರೇಬಿಯಾದಲ್ಲಿ ವಿಶ್ವದ ಅತಿದೊಡ್ಡ ಕಟ್ಟಡ ‘ಮುಕಾಬ್ ‘ ನಿರ್ಮಾಣ ಆರಂಭ; ವಿಶೇಷತೆ ಏನು?

    ಬುರ್ಜ್‌ ಖಲೀಫಾಗೆ ಸೆಡ್ಡು – ಸೌದಿ ಅರೇಬಿಯಾದಲ್ಲಿ ವಿಶ್ವದ ಅತಿದೊಡ್ಡ ಕಟ್ಟಡ ‘ಮುಕಾಬ್ ‘ ನಿರ್ಮಾಣ ಆರಂಭ; ವಿಶೇಷತೆ ಏನು?

    ತೈಲ ಸಂಪತ್ತಿನ ಮೇಲೆಯೇ ಅವಲಂಬಿತವಾಗಿರುವ ತನ್ನ ಆರ್ಥಿಕತೆಯನ್ನು ನವೀನ ಮೂಲಸೌಕರ್ಯ ಯೋಜನೆಗಳತ್ತ ವಿಸ್ತರಿಸಲು ಮುಂದಾಗಿರುವ ಸೌದಿ ಅರೇಬಿಯಾ (Saudi Arabia), ವಿಶ್ವದ ಅತಿದೊಡ್ಡ ಕಟ್ಟಡ ಯೋಜನೆ ‘ಮುಕಾಬ್’ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ (Riyadh) ಸದ್ಯದಲ್ಲಿಯೇ ತಲೆ ಎತ್ತಲಿರುವ ಅತ್ಯಂತ ದೊಡ್ಡ ಕಟ್ಟಡದಲ್ಲಿ ಸುಮಾರು 20 ನ್ಯೂಯಾರ್ಕ್​ನಂತಹ ನಗರಗಳನ್ನು ಕೂರಿಸಬಹುದು ಎಂದೇ ಹೇಳಲಾಗುತ್ತಿದೆ. ಹಾಗಿದ್ರೆ ಈ ಕಟ್ಟಡದ ವಿಶೇಷತೆ ಏನು? ಹೇಗಿರಲಿದೆ ಈ ಕಟ್ಟಡ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಹೇಗಿರಲಿದೆ ಮುಕಾಬ್?
    ಮುಕಾಬ್ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಘೋಷಿಸಿದ ಹೊಸ ಅಭಿವೃದ್ಧಿ ಯೋಜನೆಯಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಯು ದೇಶದ ರಾಜಧಾನಿ ರಿಯಾದ್‌ನಲ್ಲಿ ‘ದಿ ಮುಕಾಬ್’ (The Mukab) ಎಂಬ ಹೆಸರಿನ ವಿಶ್ವದ ಅತಿದೊಡ್ಡ ಒಳ-ನಗರದ ಕಟ್ಟಡವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದು ಸೌದಿ ವಿಷನ್ 2030 ಗೆ ಅನುಗುಣವಾಗಿ ರಿಯಾದ್‌ನಲ್ಲಿ ವಿಶ್ವದ ಅತಿದೊಡ್ಡ ಆಧುನಿಕ ಡೌನ್‌ಟೌನ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

    ಚೌಕಾಕಾರದಲ್ಲಿರುವ ಈ ಕಟ್ಟಡ 400 ಮೀಟರ್ ಎತ್ತರವಿರಲಿದೆ. ಕಾಮಗಾರಿ ಮುಗಿದ ಬಳಿಕ, ಇದು ಜಗತ್ತಿನ ಅತಿದೊಡ್ಡ ಕಟ್ಟಡ ಎನಿಸಿಕೊಳ್ಳಲಿದೆ. ರಾಜಧಾನಿ ರಿಯಾದ್ ಬಳಿ ಇರುವ ಈ 3 ಕಟ್ಟಡದಲ್ಲಿ 20 ಲಕ್ಷ ಚದರ ಮೀಟರ್‌ ಸ್ಥಳಾವಕಾಶ ಸಿಗಲಿದೆ. ವಿಸ್ತೀರ್ಣದಲ್ಲಿ ಇದು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಹೆಗ್ಗುರುತಿನ ಕಟ್ಟಡ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ಗಿಂತ 20 ಪಟ್ಟು ದೊಡ್ಡದಾಗಿರಲಿದೆ.

    ‘ನ್ಯೂ ಮುರಾಬ್ಬ’ ಎಂಬ ಹೊಸ ನಗರ ಜಿಲ್ಲೆಯೊಂದನ್ನು ಸೌದಿ ಅರೇಬಿಯಾ ಸೃಷ್ಟಿಸುತ್ತಿದ್ದು, ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಸೌದಿ ಅರೇಬಿಯಾ ಹೊಂದಿದೆ. ಮುರಾಬ್ಬ ನಗರ ಜಿಲ್ಲೆಗೆ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಮುಕಾಬ್ ಇರಲಿದೆ ಎಂದು ವರದಿಗಳು ತಿಳಿಸಿವೆ. ಮುಕಾಬ್‌ನಲ್ಲಿ ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣ, ಸಾಂಸ್ಕೃತಿಕ ಪ್ರದೇಶಗಳನ್ನು ಒಳಗೊಂಡಿರಲಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಈ ಕಟ್ಟಡ ಹೇಗಿರಲಿದೆ ಎಂಬ ವೀಡಿಯೋವನ್ನು ಸೌದಿ ಬಿಡುಗಡೆಗೊಳಿಸಿತ್ತು.

    ಮುಕಾಬ್ ಕಟ್ಟಡ ಕ್ಯೂಬ್ ಆಕಾರದಲ್ಲಿದ್ದರೂ, ಒಳಗಡೆ ತ್ರಿಕೋನದ ರೀತಿಯ ವಿನ್ಯಾಸವಿರಲಿದೆ. ಮುಕಾಬ್, ಹೊಸ ಮುರಬ್ಬಾ ಯೋಜನೆಯು 1,04,000 ವಸತಿ ಘಟಕಗಳು, 9000 ಹೋಟೆಲ್ ಕೊಠಡಿಗಳು, 9,80,000 ಚದರ ಮೀಟರ್ ಕಮರ್ಷಿಯಲ್ ಪ್ಲೇಸ್ ಮತ್ತು 1.4 ಮಿಲಿಯನ್ ಚದರ ಮೀಟರ್ ಕಚೇರಿ ಸ್ಥಳವನ್ನು ಒಳಗೊಂಡಿರುತ್ತದೆ . ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಇದು ಹಸಿರು ಪ್ರದೇಶ ಮತ್ತು ವಾಕಿಂಗ್ ಟ್ರ್ಯಾಕ್ ಗಳನ್ನು ಸಹ ಒಳಗೊಂಡಿರುತ್ತದೆ. 50 ಶತಕೋಟಿ ಯುಎಸ್‌ ಡಾಲರ್ ಸುಮಾರು (42,03,95,75,00,000) ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.

    ಇಲ್ಲಿಯವರೆಗೂ ದುಬೈನಲ್ಲಿ ನಿರ್ಮಾಣವಾಗಿರುವ ಬುರ್ಜ್ ಖಲೀಫಾವೇ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿಯನ್ನು ಪಡೆದಿತ್ತು. ವಿಶ್ವದಲ್ಲಿ ಅತ್ಯಂತ ಎತ್ತರವಾದ ಬುರ್ಜ್​ ಖಲೀಫಾ ಕಟ್ಟಡದ ಎತ್ತರ 2,722 ಫೀಟ್ ಇದೆ. ಅದನ್ನು ಹಿಂದೆ ಹಾಕುವ ನಿಟ್ಟಿನಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. ಇದು ರಿಯಾದ್‌ ಸಿಟಿಯಲ್ಲಿ 11 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ.

    ನ್ಯೂ ಮುರಬ್ಬಾ ಹೇಗಿರಲಿದೆ?
    66 ಲಕ್ಷ ಕೋಟಿ ರೂ. ವೆಚ್ಚದಲ್ಲಿ 19 ಚದರ ಕಿ.ಮೀ. ವಿಸ್ತಾರದಲ್ಲಿ ‘ನ್ಯೂ ಮುರಬ್ಬಾ’ ಸಿಟಿ ಎದ್ದು ನಿಲ್ಲಲಿದೆ. ಮುಂದಿನ ಪೀಳಿಗೆ ಸಂಪೂರ್ಣವಾಗಿ ವರ್ಚುವಲ್‌ ಜಗತ್ತನ್ನೇ ಅವಲಂಬಿಸುವ ಕಾರಣ, ಅವರ ಬೇಡಿಕೆ ಪೂರೈಸಲು ಎಲ್ಲ ರೀತಿಯ ಡಿಜಿಟಲ್‌ ಸೌಲಭ್ಯ ಹೊಂದಿರಲಿದೆ. ನ್ಯೂ ಮುರಬ್ಬಾ ಡೆವಲಪ್‌ಮೆಂಟ್‌ ಕಂಪನಿ ನಗರ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದು, 2030ರ ವೇಳೆಗೆ ನಗರ ನಿರ್ಮಾಣ ಪೂರ್ಣಗೊಳ್ಳಲಿದೆ. 7 ವರ್ಷದ ಈ ಕಾಮಗಾರಿ ಸಮಯದಲ್ಲಿ ಬರೋಬ್ಬರಿ 3,34,000 ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಲಭಿಸಲಿದೆ. ಅಲ್ಲದೆ ಇದರಿಂದ ಸೌದಿ ಅರೇಬಿಯಾದ ಜಿಡಿಪಿಗೆ 4 ಲಕ್ಷ ಕೋಟಿ ರೂ. ಸಂದಾಯವಾಗಲಿದೆ. ವಸ್ತುಸಂಗ್ರಹಾಲಯ, ತಾಂತ್ರಿಕ ಮತ್ತು ವಾಸ್ತುಶಿಲ್ಪ ವಿವಿಗಳಿರಲಿವೆ. ರಂಗಭೂಮಿ ಮತ್ತು ಇತರ ಮನರಂಜನಾ ತಾಣಗಳು, ಹಸಿರೀಕರಣಕ್ಕೆ ಆದ್ಯತೆ ಇರುತ್ತದೆ.

    ಅಂಬಾನಿ ಮನೆಗಿಂತ ದುಪ್ಪಟ್ಟು ಎತ್ತರದ ‘ಮುಕಾಬ್’:
    ನಗರದ ಮಧ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಾದಿತ ‘ಮುಕಾಬ್ಲ’ ಸೌಧವು, ಮುಕೇಶ್‌ ಅಂಬಾನಿ ಅವರ ಆಂಟಿಲಿಯಾ ಕಟ್ಟಡಕ್ಕಿಂತ 2 ಪಟ್ಟು ಹೆಚ್ಚು, ಅಂದರೆ 400 ಮೀಟರ್‌ ಎತ್ತರದಲ್ಲಿದೆ. ಆಂಟಿಲಿಯಾ ಎತ್ತರ ‘ಕೇವಲ’ 173 ಮೀಟರ್‌. ಅಲ್ಲದೆ, ಸೌದಿಯ ಈ ಕಟ್ಟಡವು ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ಎಂಪೈರ್‌ ಸ್ಟೇಟ್‌ಗಿಂತ 20 ಮೀಟರ್‌ ಹೆಚ್ಚಿನ ಎತ್ತರ ಹೊಂದಿರಲಿದೆ. ಅಲ್-ಸೌದ್‌ ರಾಜವಂಶದ ‘ನಜ್ದಿ ವಾಸ್ತುಶಿಲ್ಪ’ ಶೈಲಿಯಲ್ಲಿ ನಿರ್ಮಾಣಗೊಳ್ಳಲಿದೆ. ಇದರ ಮಧ್ಯದಲ್ಲಿ ಬೃಹತ್‌ ಸುರುಳಿಯಾಕಾರದ ಗೋಪುರವಿರಲಿದೆ. ಇದು ಕೂಡ ಕಾಬಾದ ರಚನೆಗೆ ಹೋಲುತ್ತಿರುವುದರಿಂದ ವಿವಾದಕ್ಕೆ ಗುರಿಯಾಗಿದೆ.

    ಇಸ್ಲಾಮಿಕ್‌ ಸಂಘಟನೆಗಳ ಆಕ್ಷೇಪವೇಕೆ?
    ಪವಿತ್ರ ನಗರವಾದ ಮೆಕ್ಕಾವನ್ನು ಇಸ್ಲಾಂ ಧರ್ಮದ ಅತ್ಯಂತ ಶುದ್ಧ ನಗರ ಎಂದೇ ಬಣ್ಣಿಸಲಾಗುತ್ತದೆ. ಅಂಥದ್ದೇ ಪರಿಶುದ್ಧ ನಗರ ನ್ಯೂ ಮುರಬ್ಬಾ ಆಗಲಿದೆ. ಅಲ್ಲದೆ, ಮೆಕ್ಕಾದಲ್ಲಿರುವಂತೆ ಕಪ್ಪುಶಿಲೆಗಳ ಕಾಬಾದ ಪ್ರತಿರೂಪವನ್ನು ನ್ಯೂ ಮುರಬ್ಬಾದಲ್ಲಿ ಸ್ಥಾಪಿಸುತ್ತಿರುವುದನ್ನು ಕೆಲವು ಇಸ್ಲಾಮಿಕ್‌ ಸಂಘಟನೆಗಳು ವಿರೋಧಿಸಿವೆ. ಇದರಿಂದ ಮೆಕ್ಕಾದ ಧಾರ್ಮಿಕ ಮಹತ್ವ ತಗ್ಗಬಹುದು ಎಂಬುದು ಆಕ್ಷೇಪ.

    ಜಗತ್ತಿನ ಮೊದಲ ವರ್ಚುವಲ್‌ ಸಿಟಿ:
    ನ್ಯೂ ಮುರಬ್ಬಾದಲ್ಲಿ ಕಟ್ಟಲಾಗುವ ಮನೆಗಳಿಗೆ ಡಿಜಿಟಲ್- ವರ್ಚುವಲ್‌ ವಿನ್ಯಾಸ ನೀಡಲಾಗುತ್ತದೆ. ಈ ಮನೆಗಳಲ್ಲಿ ಎಲ್ಲೇ ನಿಂತರೂ, ಬಯಸಿದ ಕೂಡಲೇ ಕಣ್ಣೆದುರು ಜಲಪಾತ, ನದಿ, ಆಕಾಶದಲ್ಲಿನ ನಕ್ಷತ್ರರಾಶಿ, ಹಿಮಪರ್ವತ, ಸಮುದ್ರದ ದೃಶ್ಯಗಳು ಪ್ರತ್ಯಕ್ಷಗೊಳ್ಳುವಂತೆ ಕೃತ ಪ್ರಾಕೃತಿಕ ಅದ್ಭುತಗಳ ವರ್ಚುವಲ್‌ ಪ್ರಪಂಚ ಸೃಷ್ಟಿಯಾಗುವ ವ್ಯವಸ್ಥೆ ಇರಲಿದೆ. ಮನೆಗಳ ಒಳಗೇ ಸಮುದ್ರ ಇರುವಂತೆ, ಅನ್ಯಗ್ರಹದ ಅನುಭವ ಹುಟ್ಟುವಂಥ ಯೋಜನೆಗಳು ಇರಲಿವೆ ಎಂದು ಅರಬ್‌ ಮಾಧ್ಯಮಗಳು ವರ್ಣಿಸಿವೆ.

    ದುಬಾರಿ ಸಿಟಿ ಸೌದಿಗೆ ಅಗತ್ಯವೇಕೆ?
    ಸೌದಿ ಅರೇಬಿಯಾವು ತೈಲ ಉತ್ಪಾದನಾ ದೇಶದಲ್ಲಿ ಜಗತ್ತಿನಲ್ಲೇ 2ನೇ ಸ್ಥಾನದಲ್ಲಿದೆ. ಸೌದಿಯ ಶೇ 80 ಆದಾಯ ತೈಲ ಇಂಧನದಿಂದ ಬರುತ್ತದೆ. ಬ್ರೂಕಿಂಗ್‌ ಇನ್‌ಸ್ಟಿಟ್ಯೂಟ್‌ನ ವರದಿ ಪ್ರಕಾರ, ಮುಂದಿನ 60 ವರ್ಷಗಳಲ್ಲಿ ಸೌದಿ ಒಡಲಿನ ತೈಲ ಬರಿದಾಗಲಿದೆ. ಪೆಟ್ರೋಲ್‌- ಡೀಸೆಲ್‌ ಉತ್ಪಾದನೆ ನಿಂತರೆ ಸೌದಿಗೆ ಉಳಿಯುವುದು ಬರೀ ಮರಳುಗಾಡು ಮಾತ್ರ. ಈ ಕಾರಣದಿಂದ ಭವಿಷ್ಯದ ಆದಾಯಕ್ಕಾಗಿ ಸೌದಿ ರಾಜಕುಮಾರ ನಿಯೋಮ್‌ (NEOM) ಪ್ರಾಜೆಕ್ಟ್ ಆರಂಭಿಸಿದ್ದಾರೆ. ದೇಶದ ಆರ್ಥಿಕತೆಗೆ ಮರುವಿನ್ಯಾಸ ನೀಡಬಲ್ಲಂಥ ಈ ನಿಯೋಮ್‌ನ ಒಂದು ಭಾಗವೇ ನ್ಯೂ ಮುರಬ್ಬಾ ಸಿಟಿ ನಿರ್ಮಾಣ. ಅಲ್ಲದೆ, ಅತ್ಯಂತ ಕಠಿಣ ಷರಿಯಾ ಕಾನೂನುಗಳಿಗೆ ಹೆಸರಾದಂಥ ಸೌದಿ ಇತ್ತೀಚೆಗೆ ಹಲವು ನಿಯಮಗಳನ್ನು ಕೈಬಿಡುತ್ತಿದೆ. ವೀಸಾ ನೀತಿಯನ್ನು ಸಡಿಲಗೊಳಿಸಿ, ಟೂರಿಸಂಗೆ ಒತ್ತುಕೊಡುತ್ತಿರುವ ಸೌದಿಯು ಹೆಚ್ಚೆಚ್ಚು ವಿದೇಶಿಗರನ್ನು ಸ್ವಾಗತಿಸುತ್ತಿರುವುದೂ ಇದೇ ಕಾರಣಕ್ಕೆ.

  • ಮತ್ತೊಮ್ಮೆ ಭಾರತದಿಂದಾಚೆ ಐಪಿಎಲ್‌ ಮೆಗಾ ಹರಾಜು – ಎಲ್ಲಿ, ಯಾವಾಗ? ಇಲ್ಲಿದೆ ವಿವರ

    ಮತ್ತೊಮ್ಮೆ ಭಾರತದಿಂದಾಚೆ ಐಪಿಎಲ್‌ ಮೆಗಾ ಹರಾಜು – ಎಲ್ಲಿ, ಯಾವಾಗ? ಇಲ್ಲಿದೆ ವಿವರ

    ಮುಂಬೈ: ಈಗಾಗಲೇ ಭಾರಿ ಕುತೂಲ ಹೆಚ್ಚಿಸಿರುವ 2025ರ ಐಪಿಎಲ್‌ ಮೆಗಾ ಹರಾಜು (IPL Mega Auction) ಪ್ರಕ್ರಿಯೆಯನ್ನು ಭಾರತದಿಂದ ಆಚೆ ನಡೆಸಲು ಬಿಸಿಸಿಐ (BCCI) ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

    ವರದಿಗಳ ಪ್ರಕಾರ, 2025ರ ಐಪಿಎಲ್‌ಗೆ (IPL 2025) ನಡೆಯಲಿರುವ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್‌ನಲ್ಲಿ (Saudi Arabia’s Riyadh) ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಬಿಸಿಸಿಐ ಪಟ್ಟಿಯಲ್ಲಿ ದುಬೈ, ಸಿಂಗಾಪುರ, ಲಂಡನ್ ಮತ್ತು ವಿಯೆನ್ನಾದಂತಹ ಹಲವು ನಗರಗಳು ಆಯ್ಕೆಯಲ್ಲಿದ್ದವು. ವ್ಯಾಪಕ ಹುಡುಕಾಟದ ನಂತರ ಎರಡು ದಿನಗಳ ಮೆಗಾ ಹರಾಜನ್ನು ಸೌದಿ ಅರೇಬಿಯಾ ರಿಯಾದ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ನವೆಂಬರ್‌ ನವೆಂಬರ್ 24 ಮತ್ತು 25 ರಂದು ರಿಯಾದ್‌ನಲ್ಲಿ ಮೆಗಾ ಹರಾಜು ನಡೆಯಲಿದೆ.

    ಈಗಾಗಲೇ 2025-2027ರ ಆವೃತ್ತಿಗಳಿಗೆ ಹೊಸ ನಿಯಮ ಜಾರಿಗೊಳಿಸಿರುವ ಬಿಸಿಸಿಐ, ಇದೇ ಅಕ್ಟೋಬರ್‌ 31ರ ಸಂಜೆ 5 ಗಂಟೆಯ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿಯನ್ನು ಸಲ್ಲಿಕೆ ಮಾಡುವಂತೆ ಸೂಚಿಸಿದೆ. ಇದನ್ನೂ ಓದಿ: ಚಾಂಪಿಯನ್‌ ಕಿವೀಸ್‌ ಮಹಿಳಾ ತಂಡಕ್ಕೆ 19.6 ಕೋಟಿ ಬಹುಮಾನ – ಟೀಂ ಇಂಡಿಯಾಕ್ಕೆ ಸಿಕ್ಕಿದ್ದೆಷ್ಟು?

    ಐಪಿಎಲ್‌ ಹರಾಜು ಯಾವಾಗ?
    ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ ಎಂಬ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಸಹ ನಿಗದಿಯಾಗಿದೆ. ನವೆಂಬರ್ 22ರಿಂದ 26ರ ವರೆಗೆ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಹೀಗಾಗಿ ಮಿಲಿಯನ್‌ ಡಾಲರ್‌ ಟೂರ್ನಿಯ ಮೆಗಾ ಹರಾಜು ಮತ್ತು ಪರ್ತ್ ಟೆಸ್ಟ್ ನಡುವೆ ಯಾವುದೇ ರೀತಿಯ ಸಂಭಾವ್ಯ ಘರ್ಷಣೆ ನಡೆಯದಂತೆ ಖಚಿತಪಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: ICC Women’s T20 World Cup | ನ್ಯೂಜಿಲೆಂಡ್‌ಗೆ ಚೊಚ್ಚಲ ಚಾಂಪಿಯನ್‌ ಕಿರೀಟ

    ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಭಾರತದಲ್ಲಿಯೇ ಹರಾಜು ಪ್ರಕ್ರಿಯೆ ಆಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದವು.‌ ಆದರೆ ಬಿಸಿಸಿಐ ಈ ಆಯ್ಕೆಯನ್ನು ತಳ್ಳಿಹಾಕಿತು. ಹೀಗಾಗಿ ಸೂಕ್ತ ಪ್ರಯಾಣದ ವ್ಯವಸ್ಥೆ ಮಾಡಲು ಮೆಗಾ ಹರಾಜಿನ ಸ್ಥಳ ಮತ್ತು ದಿನಾಂಕಗಳ ಕುರಿತು ಕ್ರಿಕೆಟ್‌ ಮಂಡಳಿಯ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ಇದನ್ನೂ ಓದಿ: ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಆಫರ್‌ – ಹಿಟ್‌ಮ್ಯಾನ್‌ಗೆ ಆಫರ್‌ ಕೊಟ್ಟಿದ್ಯಾರು?

  • ಹಜ್‌ ಯಾತ್ರೆಯ ನೆಪದಲ್ಲಿ ಭಿಕ್ಷಕರನ್ನು ಕಳುಹಿಸಬೇಡಿ – ಪಾಕ್‌ಗೆ ಸೌದಿ ಎಚ್ಚರಿಕೆ

    ಹಜ್‌ ಯಾತ್ರೆಯ ನೆಪದಲ್ಲಿ ಭಿಕ್ಷಕರನ್ನು ಕಳುಹಿಸಬೇಡಿ – ಪಾಕ್‌ಗೆ ಸೌದಿ ಎಚ್ಚರಿಕೆ

    ರಿಯಾದ್‌: ಹಜ್‌ ಯಾತ್ರೆಯ (Hajj) ನೆಪದಲ್ಲಿ ಪಾಕಿಸ್ತಾನದಿಂದ (Pakistan) ಗಲ್ಫ್‌ ರಾಷ್ಟ್ರಗಳಿಗೆ ಬರುತ್ತಿರುವ ಭಿಕ್ಷುಕರ ಸಂಖ್ಯೆ ಕಂಡು ಸೌದಿ ಅರೇಬಿಯಾ (Saudi Arabia) ಹೌಹಾರಿದೆ.

    ಧಾರ್ಮಿಕ ಯಾತ್ರೆಗೆ ನೀಡಲಾಗುವ ಉಮ್ರಾ ವೀಸಾದಡಿ (Umrah Visa) ಸೌದಿ ಪ್ರವೇಶ ಮಾಡುತ್ತಿರುವ ಭಿಕ್ಷುಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

    ಈ ಬೆನ್ನಲ್ಲೇ ಉಮ್ರಾ ಕಾಯ್ದೆ ಜಾರಿಗೆ ಪಾಕ್ ಮುಂದಾಗಿದೆ. ಯಾತ್ರೆ ಆಯೋಜಿಸುವ ಏಜೆಂಟರನ್ನು ನಿರ್ಬಂಧಿಸಲು ಸಿದ್ಧತೆ ನಡೆಸಿದೆ. ಪಾಕ್ ವಿದೇಶಾಂಗ ಇಲಾಖೆ ಪ್ರಕಾರ, ವಿದೇಶಗಳಲ್ಲಿರುವ ಭಿಕ್ಷುಕರಲ್ಲಿ 90% ಮಂದಿ ಪಾಕಿಸ್ತಾನದವರೇ ಆಗಿದ್ದಾರೆ. ಇದನ್ನೂ ಓದಿ: ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಸಿಗುತ್ತಾ ಬೂಸ್ಟರ್‌ ಡೋಸ್‌!

    ಸೌದಿ ರಾಯಭಾರಿ ನವಾಫ್ ಬಿನ್ ಸೈದ್ ಅಹ್ಮದ್ ಅಲ್-ಮಲ್ಕಿ ಅವರನ್ನು ಭೇಟಿಯಾಗಿದ್ದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಸೌದಿ ಅರೇಬಿಯಾಕ್ಕೆ ಭಿಕ್ಷುಕರನ್ನು ಕಳುಹಿಸುವ ಮಾಫಿಯಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಇದನ್ನೂ ಓದಿ: ಭಯೋತ್ಪಾದನೆ ನಿಂತರೆ ಮಾತ್ರ ಪಾಕಿಸ್ತಾನದೊಂದಿಗೆ ಶಾಂತಿ: ರಾಜನಾಥ್‌ ಸಿಂಗ್‌

    ಪಾಕಿಸ್ತಾನಿ ಭಿಕ್ಷುಕರು ಜಿಯಾರತ್ (ತೀರ್ಥಯಾತ್ರೆ) ನೆಪದಲ್ಲಿ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುತ್ತಾರೆ. ಹೆಚ್ಚಿನ ಜನರು ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಾರೆ ಮತ್ತು ನಂತರ ಭಿಕ್ಷಾಟನೆ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಜೀಶಾನ್ ಖಂಜಾದಾ ಕಳೆದ ವರ್ಷ ಹೇಳಿದ್ದರು.

    ಇತ್ತೀಚೆಗೆ 11 ವ್ಯಕ್ತಿಗಳನ್ನು ಕರಾಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಸೌದಿಗೆ ಭಿಕ್ಷೆ ಬೇಡಲು ತೆರಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸೌದಿ ವಿಮಾನದಿಂದಲೇ ಅವರನ್ನು ಹೊರಹಾಕಲಾಗಿತ್ತು.

     

  • ಮೃತ ಹಜ್ ಯಾತ್ರಿಕರ ಸಂಖ್ಯೆ 1,300ಕ್ಕೆ ಏರಿಕೆ – ಘಟನೆಗೆ ಕಾರಣ ತಿಳಿಸಿದ ಸೌದಿ!

    ಮೃತ ಹಜ್ ಯಾತ್ರಿಕರ ಸಂಖ್ಯೆ 1,300ಕ್ಕೆ ಏರಿಕೆ – ಘಟನೆಗೆ ಕಾರಣ ತಿಳಿಸಿದ ಸೌದಿ!

    ಜೆರುಸಲೇಂ: ಮೆಕ್ಕಾದಲ್ಲಿ (Mecca) ಮಿತಿ ಮೀರಿದ ತಾಪಮಾನದಿಂದ ಹಜ್‌ ಯಾತ್ರೆ ಸಂದರ್ಭದಲ್ಲಿ ಮೃತಪಟ್ಟ 1,300ಕ್ಕೂ ಹೆಚ್ಚು ಜನರ ಪೈಕಿ 83% ಜನರು (Hajj Pilgrims) ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರಲಿಲ್ಲ ಎಂದು ಸೌದಿ ಅರೇಬಿಯಾ (Saudi Arabia) ಹೇಳಿದೆ.

    ದುರದೃಷ್ಟಕರ ಈ ಬಾರಿ ಮೃತರ ಸಂಖ್ಯೆ 1,301ಕ್ಕೆ ಏರಿಕೆಯಾಗಿದೆ. ಈ ಪೈಕಿ 83% ಜನರು ಅನಧಿಕೃತವಾಗಿ ಹಜ್‌ ಯಾತ್ರೆಗೆ ಬಂದಿದ್ದರು. ಅವರಿಗೆ ಸೂರು ಹಾಗೂ ಮೂಲ ಸೌಕರ್ಯ ಸಿಗದ ಕಾರಣ ಬಿಸಿಲಿನಲ್ಲಿ ಬಣಗುವಂತಾಗಿದೆ, ಇದರಿಂದ ಮೃತಪಟ್ಟಿರುವುದಾಗಿ ಸೌದಿ ಅಧಿಕೃತ ಹೇಳಿಕೆ ಪ್ರಕಟಿಸಿದೆ. ಇದನ್ನೂ ಓದಿ: 24 ವರ್ಷಗಳ ನಂತರ ಉ.ಕೊರಿಯಾಗೆ ರಷ್ಯಾ ಅಧ್ಯಕ್ಷ ಭೇಟಿ – ನ್ಯಾಟೊ ಒಕ್ಕೂಟ ರಾಷ್ಟ್ರಗಳಲ್ಲಿ ನಡುಕ!

    ಮರಣ ಸಂಖ್ಯೆ ಹೆಚ್ಚಿದ್ದು ಏಕೆ?
    ಪ್ರತಿ ವರ್ಷದಂತೆ ಈ ವರ್ಷವೂ ಅಮೆರಿಕ (USA), ಇಂಡೋನೇಷ್ಯಾ, ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 16 ಲಕ್ಷ ಯಾತ್ರಿಕರು ಬಂದಿದ್ದರು. ಈ ವೇಳೆ ಮಿತಿಮೀರಿದ ತಾಪಮಾನ ಏರಿಕೆಯಿಂದ 1,301 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. ಸುಮಾರು 3000 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರ ಪೈಕಿ ಶೇ.83 ಮಂದಿ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರಲಿಲ್ಲ. ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದವರಿಗಷ್ಟೇ ಕೊಠಡಿ ಹಾಗೂ ಮೂಲ ಸೌಕರ್ಯಗಳ ವ್ಯವಸ್ಥೆ ಸಿಗಲಿದೆ ಎಂದ ಹೇಳಲಾಗಿದೆ. ಈ ನಡುವೆ ಅರಬ್ ರಾಜತಾಂತ್ರಿಕರು ಈಜಿಪ್ಟ್‌ನಿಂದ ಬಂದವರಲ್ಲಿ ಕಳೆದವಾರ 658 ಸಾವನ್ನಪ್ಪಿದ್ದಾರೆ. ಅವರಲ್ಲಿ 630 ನೋಂದಾಯಿಸದ ಯಾತ್ರಿಕರು ಎಂದು ಹೇಳಿದ್ದಾರೆ.

    ಸೌದಿ ಅರೇಬಿಯಾದ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ ಈ ವರ್ಷ ಮೆಕ್ಕಾದಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಡಿಗ್ರಿ ಫ್ಯಾರನ್‌ಹೀಟ್)ಗೆ ಏರಿಕೆಯಾಗಿತ್ತು. ಇದನ್ನೂ ಓದಿ: ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!

    ಹಜ್‌ ಯಾತ್ರೆ ಕೈಗೊಳ್ಳುವುದು ಏಕೆ?
    ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಬಕ್ರೀದ್ ಮುನ್ನಾದಿನ ಅಥವಾ ‘ದುಲ್ ಹಜ್’ ತಿಂಗಳ ಒಂಬತ್ತರಂದು ಹಜ್ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ.

  • 98 ಭಾರತದ ಹಜ್‌ ಯಾತ್ರಿಕರು ಸಾವು – ವಿದೇಶಾಂಗ ಇಲಾಖೆಯಿಂದ ಅಧಿಕೃತ ಮಾಹಿತಿ

    98 ಭಾರತದ ಹಜ್‌ ಯಾತ್ರಿಕರು ಸಾವು – ವಿದೇಶಾಂಗ ಇಲಾಖೆಯಿಂದ ಅಧಿಕೃತ ಮಾಹಿತಿ

    ನವದೆಹಲಿ: ಹಜ್‌ (Hajj) ಯಾತ್ರೆಗಾಗಿ ಸೌದಿ ಅರೇಬಿಯಾಗೆ (Saudi Arabia) ತೆರಳಿದ್ದ 98 ಭಾರತೀಯರು (Indians) ಸಾವನ್ನಪ್ಪಿದ್ದಾರೆ. ಎಲ್ಲ ಸಾವುಗಳಿಗೆ ವಯೋ ಸಹಜ ಖಾಯಿಲೆ, ವೃದ್ಧಾಪ್ಯ ಕಾರಣ ಎಂದು ಕೇಂದ್ರ ವಿದೇಶಾಂಗ ಇಲಾಖೆ (MEA) ಹೇಳಿದೆ.

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಇಲಾಖೆ, ನೈಸರ್ಗಿಕ ಕಾರಣಗಳಿಂದ ಭಾರತೀಯ ಮೂಲದ ಹಜ್‌ ಯಾತ್ರಿಗಳು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.


    ಹಜ್ ಯಾತ್ರೆಯು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಎಲ್ಲಾ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಧಾರ್ಮಿಕ ಬಾಧ್ಯತೆಯನ್ನು ಪೂರೈಸಬೇಕು. ಈ ವರ್ಷ 1,75,000 ಭಾರತೀಯ ಯಾತ್ರಿಕರು ಹಜ್‌ಗಾಗಿ ಸೌದಿಗೆ ಭೇಟಿ ನೀಡಿದ್ದಾರೆ. ಜುಲೈ 9 ರಿಂದ 22 ರವರೆಗೆ ಕೋರ್ ಹಜ್ ಅವಧಿ ಆರಂಭವಾಗಲಿದೆ. ಈ ನಡುವೆ ಇದುವರೆಗೆ 98 ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಆಯುರ್ವೇದ ಮಸಾಜ್‌ಗೆ ಬಂದಾಗ ಬಲವಂತದ ಸೆಕ್ಸ್‌: ದೂರು ಸಲ್ಲಿಸಿದ ವಿದೇಶಿ ಯುವತಿ

    ಈ‌ ನಡುವೆ ಗರಿಷ್ಠ ತಾಪಮಾನ ಸುಡುವ ಬಿಸಿಲಿನ ಕಾರಣದಿಂದಾಗಿ 1000 ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಇಡೀ ಯಾತ್ರೆಯಲ್ಲಿ 180ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಸೌದಿಯ ಅಧ್ಯಯನವೊಂದು ಈ ಪವಿತ್ರ ಕ್ಷೇತ್ರದ ತಾಪಮಾನವು ಪ್ರತಿ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ ಎಂದು ತಿಳಿಸಿದೆ.

     

  • ಫಸ್ಟ್‌ ಟೈಂ ಸೌದಿಯಲ್ಲಿ ನಡೆಯಿತು ಸ್ವಿಮ್‌ ಸೂಟ್‌ ಫ್ಯಾಶನ್‌ ಶೋ!

    ಫಸ್ಟ್‌ ಟೈಂ ಸೌದಿಯಲ್ಲಿ ನಡೆಯಿತು ಸ್ವಿಮ್‌ ಸೂಟ್‌ ಫ್ಯಾಶನ್‌ ಶೋ!

    ರಿಯಾದ್‌: ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ (Saudi Arabia) ಸ್ವಿಮ್‌ ಸೂಟ್‌ ಮಾಡೆಲ್‌ಗಳನ್ನು (Swimsuit Models) ಒಳಗೊಂಡ ಮೊದಲ ಫ್ಯಾಶನ್‌ ಶೋ (Fashion Show) ನಡೆಸಿದೆ.

    ಸೌದಿ ಅರೇಬಿಯಾದ ಪಶ್ಚಿಮ ಕರಾವಳಿಯಲ್ಲಿ ನೆಲೆಗೊಂಡಿರುವ ಸೇಂಟ್ ರೆಗಿಸ್ ರೆಡ್ ಸೀ ರೆಸಾರ್ಟ್‌ನಲ್ಲಿ ಉದ್ಘಾಟನಾ ರೆಡ್ ಸೀ ಫ್ಯಾಶನ್ ವೀಕ್‌ನ ಎರಡನೇ ದಿನ ಸ್ವಿಮ್‌ ಸೂಟ್‌ ಫ್ಯಾಶನ್‌ ಶೋ ನಡೆಯಿತು.

    ಸೌದಿ ಅರೇಬಿಯಾ ವಿಷನ್‌ 2020 ಅಡಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಈ ಯೋಜನೆಯ ಭಾಗವಾಗಿ ವಿಶ್ವದ ಪ್ರವಾಸಿಗರು ಸೌದಿ ಅರೇಬಿಯಾಗೆ ಆಗಮಿಸಲು ರೆಡ್‌ ಸಿ ಗ್ಲೋಬಲ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಮೇಲ್ವಿಚಾರಣೆಯಲ್ಲಿ ಈ ಯೋಜನೆ ತಯಾರುತ್ತಿದೆ.

    2022 ರಲ್ಲಿ ಫ್ಯಾಶನ್ ಉದ್ಯಮವು 12.5 ಶತಕೋಟಿ ಡಾಲರ್‌ ಅಥವಾ ರಾಷ್ಟ್ರೀಯ ಜಿಡಿಪಿಯ 1.4% ಹೊಂದಿದೆ ಮತ್ತು 230,000 ಜನರಿಗೆ ಉದ್ಯೋಗ ನೀಡಿದೆ ಎಂದು ಸೌದಿ ಫ್ಯಾಶನ್ ಆಯೋಗವು ಕಳೆದ ವರ್ಷ ಅಧಿಕೃತ ವರದಿ ಪ್ರಕಟಿಸಿತ್ತು. ಇದನ್ನೂ ಓದಿ: ಕೇಜ್ರಿವಾಲ್‌ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್‌

     

    ಅತಿಯಾದ ಧಾರ್ಮಿಕತೆಯಿಂದ ದೂರ
    ಮಧ್ಯ ಏಷ್ಯಾದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅತಿಯಾದ ಧಾರ್ಮಿಕತೆಯನ್ನು ಅಳವಡಿಸಿಕೊಂಡರೆ ಮುಂದೆ ಉಗ್ರರ ದೇಶವಾಬಹುದು ಎಂಬ ಭಯ ಸೌದಿ ಅರೇಬಿಯಾವನ್ನು ಕಾಡುತ್ತಿದೆ. ಯಾಕೆಂದರೆ ಐಸಿಸ್‌, ತಾಲಿಬಾನ್‌, ಅಲ್‌ ಕೈದಾ, ಹೌತಿ, ಬೊಕೊ ಹರಾಮ್ ಉಗ್ರರು ಏನು ಮಾಡಿದ್ದಾರೆ ಎನ್ನುವುದು ಸೌದಿಗೆ ಗೊತ್ತಿದೆ.

    ದೇವರೇ ದೊಡ್ಡವನು, ರಾಜರು ಹೇಳಿದಂತೆ ಕೇಳಬೇಕಿಲ್ಲ ಎಂದು ಐಸಿಸ್‌ನಂತಹ ಉಗ್ರ ಸಂಘಟನೆಗಳು ಪ್ರಬಲವಾದರೆ ರಾಜರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಈ ಕಾರಣಕ್ಕೆ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ದೇಶಗಳ ಜೊತೆ ಮಾತುಕತೆ ನಡೆಸಲು ಸೌದಿ ಅರೇಬಿಯಾ ಮೊದಲಿನಿಂದಲೂ ಹಿಂದೇಟು ಹಾಕುತ್ತಿದೆ. ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿದರೆ ಪಾಕ್‌ ದಿವಾಳಿಯಾದಂತೆ ನಾವು ದಿವಾಳಿಯಾಬಹುದು ಎಂಬ ಭಯ ಸೌದಿಗಿದೆ.  ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

     

    ಸೌದಿ ಅರೇಬಿಯಾ ಈ ಹಿಂದೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ ಮದ್ಯದ ಅಂಗಡಿಯನ್ನು ತೆರೆಯಲಾಗಿದೆ.ರಿಯಾದ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ವಿದೇಶಿ ಅತಿಥಿಗಳಿಗಾಗಿ ಮದ್ಯದ ಅಂಗಡಿಯನ್ನು ಓಪನ್‌ ಮಾಡುವ ಮೂಲಕ ಇಲ್ಲಿಯವರೆಗಿನ ಧಾರ್ಮಿಕ ಕಟ್ಟುಪಾಡುಗಳಿಗೆ ಬ್ರೇಕ್‌ ಹಾಕಿದೆ. ನಿಧಾನವಾಗಿ ಸೌದಿ ಅರೇಬಿಯಾ ಮಹಿಳೆಯರಿಗೆ ವಿಧಿಸಿದ್ಧ ನಿರ್ಬಂಧವನ್ನು ತೆಗೆಯುತ್ತಿದೆ.

  • ಪಾಕ್‌-ಸೌದಿ ಸಭೆಯಲ್ಲಿ ಕಾಶ್ಮೀರ ಗಡಿ ಸಮಸ್ಯೆ ಪ್ರಸ್ತಾಪ – ಪಾಕ್‌ಗೆ ಭಾರತ ನೀಡಿದ ಎಚ್ಚರಿಕೆ ಏನು?

    ಪಾಕ್‌-ಸೌದಿ ಸಭೆಯಲ್ಲಿ ಕಾಶ್ಮೀರ ಗಡಿ ಸಮಸ್ಯೆ ಪ್ರಸ್ತಾಪ – ಪಾಕ್‌ಗೆ ಭಾರತ ನೀಡಿದ ಎಚ್ಚರಿಕೆ ಏನು?

    ಇಸ್ಲಾಮಾಬಾದ್‌/ರಿಯಾದ್: ಸದ್ಯ ಭಾರತದಲ್ಲಿ ಲೋಕಸಭಾ ಚುನಾವಣೆ (Lok Sabha Elections) ಸಮೀಪಿಸುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಷಯ ಚರ್ಚೆಯಲ್ಲಿದೆ. ಈ ನಡುವೆ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೌದಿ ಆಡಳಿತಗಾರ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ನಡೆಸಿದ ಸಭೆಯಲ್ಲಿ ʻಕಾಶ್ಮೀರʼ ಗಡಿ (Kashmir Border) ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

    ಶೆಹಬಾಜ್ ಷರೀಫ್ ಮತ್ತು ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (Prince Mohammed bin Salman) ಇದೇ ಏಪ್ರಿಲ್‌ 7 ರಂದು ಮೆಕ್ಕಾದ ಅಲ್-ಸಫಾ ಅರಮನೆಯಲ್ಲಿ ಸಭೆ ನಡೆಸಿದ್ದಾರೆ. ಇದಾದ ಒಂದು ದಿನದ ನಂತರ ಸಭೆಯ ಉದ್ದೇಶವನ್ನು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಕಾಶ್ಮೀರ ಗಡಿ ಸಮಸ್ಯೆಯನ್ನು (Kashmir Border Controversy) ಬಗೆಹರಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಕಾರಾತ್ಮಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಅನ್ವೇಷಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗುರುದ್ವಾರದ ಕರಸೇವಾ ಮುಖ್ಯಸ್ಥನ ಹತ್ಯೆ ಪ್ರಕರಣ- ಪ್ರಮುಖ ಆರೋಪಿ ಎನ್‍ಕೌಂಟರ್‌ಗೆ ಬಲಿ

    ಉಭಯ ದೇಶಗಳನ್ನ ನಡುವೆ ಇರುವ ಸಮಸ್ಯೆಗಳನ್ನು ಪರಿಹರಿಸಲು, ಅದರಲ್ಲೂ ಮುಖ್ಯವಾಗಿ ಕಾಶ್ಮೀರ ವಿವಾದ ಪರಿಹರಿಸಿ ಶಾಂತಿ ನೆಲೆಸುವಂತೆ ಮಾಡಬೇಕು. ಈ ಕುರಿತು ಮಾತುಕತೆ ನಡೆಸುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು. ಭಯೋತ್ಪಾದನೆ, ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನ ಭಾರತದೊಂದಿಗೆ ಸಾಮಾನ್ಯ ನೆರೆಯ ಸಬಂಧಗಳನ್ನು ಬಯಸುತ್ತದೆ ಎಂಬುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಶತಮಾನಗಳಲ್ಲೇ ಮೊದಲಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಗೋಚರ – ವಿಶೇಷ ವೀಡಿಯೋ ಹಂಚಿಕೊಂಡ ನಾಸಾ

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ಸರ್ಕಾರ, ಕಾಶ್ಮೀರ ಗಡಿ ಸಮಸ್ಯೆ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಮಸ್ಯೆಯಾಗಿದೆ. ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ಪ್ರಶ್ನೆಯೇ ಇಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ಶಾಶ್ವತವಾಗಿಯೇ ಉಳಿಯುತ್ತದೆ. ಇದನ್ನು ಭಾರತ, ಪಾಕಿಸ್ತಾನಕ್ಕೆ ಪದೇ ಪದೇ ನೆನಪಿಸುತ್ತಿದೆ ಎಂದು ಒತ್ತಿ ಹೇಳಿದೆ. ಇದನ್ನೂ ಓದಿ: ಪಾರಿವಾಳಗಳನ್ನೇ ಬೇಹುಗಾರಿಕೆಗೆ ಬಳಸೋದ್ಯಾಕೆ? 

  • ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ಯುವಕ ತಾಯ್ನಾಡಿಗೆ ವಾಪಸ್

    ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ಯುವಕ ತಾಯ್ನಾಡಿಗೆ ವಾಪಸ್

    ಮಂಗಳೂರು: ತಾನು ಮಾಡದ ತಪ್ಪಿಗೆ ಸೌದಿ ಅರೇಬಿಯಾ (Saudi Arabia) ಜೈಲಿನಲ್ಲಿ 11 ತಿಂಗಳ ಕಾಲ ಸೆರೆವಾಸ ಅನುಭವಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಚಂದ್ರಶೇಖರ್ (Chandrashekhar Kadaba) ಇಂದು ತಾಯ್ನಾಡಿಗೆ ಮರಳಿದ್ದಾರೆ.

    ಕೆಲಸಕ್ಕಾಗಿ ತೆರಳಿ ಸೌದಿಯಲ್ಲಿ ನೆಲೆಸಿರುವ ಚಂದ್ರಶೇಖರ್ ಸಿಮ್ ಖರೀದಿಸಿದ್ದ ವೇಳೆ ಅವರ ಬ್ಯಾಂಕ್ ಖಾತೆ ಹ್ಯಾಕ್ ಆಗಿತ್ತು. ಹ್ಯಾಕ್ ಆಗಿದ್ದ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್ ಹಣ ವರ್ಗಾವಣೆ ಆಗಿತ್ತು. ಈ ವರ್ಗಾವಣೆ ಚಂದ್ರಶೇಖರ್ ಅವರೇ ಮಾಡಿದ್ದರು ಎಂದು ಅವರನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.

    ಬಳಿಕ ಭಾರತೀಯ ವಿದೇಶಾಂಗ ಇಲಾಖೆ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (MP Nalin Kumar Kateel) ಸೇರಿದಂತೆ ಹಲವರ ಪ್ರಯತ್ನದಿಂದ ಇದೀಗ 11 ತಿಂಗಳ ಬಳಿಕ ಚಂದ್ರಶೇಖರ್ ಬಿಡುಗಡೆಗೊಂಡಿದ್ದಾರೆ. ಇಂದು ರಿಯಾದ್ ನಿಂದ ಮುಂಬೈಗೆ ಬಂದು ಅಲ್ಲಿಂಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಹೊರಬರುತ್ತಿದ್ದಂತೆ ಚಂದ್ರಶೇಖರ್ ಭಾವುಕರಾಗಿದ್ದರು. ಈ ವೇಳೆ ಅವರ ತಾಯಿ ಹೇಮಾವತಿ ಮಗನನ್ನು ಅಪ್ಪಿ ಹಿಡಿದು ಆನಂದ ಭಾಷ್ಪ ಹರಿಸಿದರು. ಇದನ್ನೂ ಓದಿ: ಮುಸ್ಲಿಂ ಸ್ಪೀಕರ್ ಬಗೆಗಿನ ಜಮೀರ್ ಹೇಳಿಕೆಗೆ ಖಾದರ್ ಆಕ್ಷೇಪ